ಬಿ.ಎಸ್. ಯಡಿಯೂರಪ್ಪ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಬಿ.ಎಸ್. ಯಡಿಯೂರಪ್ಪ
Yeddyurappa.jpg
ಬಿ.ಎಸ್. ಯಡಿಯೂರಪ್ಪ

ಅಧಿಕಾರ ಅವಧಿ
ಮೇ ೩೦,೨೦೦೮ – ಜುಲೈ ೩೧, ೨೦೧೧
ಪೂರ್ವಾಧಿಕಾರಿ ರಾಷ್ಟ್ರಪತಿಯವರ ಆಡಳಿತ
ಉತ್ತರಾಧಿಕಾರಿ Incumbent
ಮತಕ್ಷೇತ್ರ ಶಿಕಾರಿಪುರ

ಅಧಿಕಾರ ಅವಧಿ
ನವೆಂಬರ್ ೧೨, ೨೦೦೭ – ನವೆಂಬರ್ ೧೯, ೨೦೦೭
ಪೂರ್ವಾಧಿಕಾರಿ ಎಚ್. ಡಿ. ಕುಮಾರಸ್ವಾಮಿ
ಉತ್ತರಾಧಿಕಾರಿ ರಾಷ್ಟ್ರಪತಿಯವರ ಆಡಳಿತ
ಮತಕ್ಷೇತ್ರ ಶಿಕಾರಿಪುರ
ವೈಯುಕ್ತಿಕ ಮಾಹಿತಿ
ಜನನ ಟೆಂಪ್ಲೇಟು:ಹುಟ್ಟಿದ ತಾ
ಬೂಕನಕೆರೆ, ಮಂಡ್ಯ ಜಿಲ್ಲೆ, ಕರ್ನಾಟಕ
ರಾಜಕೀಯ ಪಕ್ಷ ಬಿಜೆಪಿ
ಸಂಗಾತಿ(ಗಳು) (ದಿ)ಮೈತ್ರಾದೇವಿ
ಮಕ್ಕಳು ೨ ಗಂಡು ಮಕ್ಕಳು:
(ಬಿ.ವೈ.ರಾಘವೇಂದ್ರ
ವಿಜಯೇಂದ್ರ)
೩ ಹೆಣ್ಣು ಮಕ್ಕಳು:
(ಅರುಣಾದೇವಿ
ಪದ್ಮಾವತಿ
ಉಮಾದೇವಿ)
ವಾಸಸ್ಥಾನ ಬೆಂಗಳೂರು
ಧರ್ಮ ಹಿಂದು
ಜಾಲತಾಣ http://yeddyurappa.in
As of ಮೇ ೨೮, ೨೦೦೮
ಮೂಲ: [೧]

ಬಿ.ಎಸ್. ಯಡಿಯೂರಪ್ಪ (ಜನನ: ಫೆಬ್ರುವರಿ ೨೭, ೧೯೪೩) ಕರ್ನಾಟಕದ ಮಾಜಿ ಮುಖ್ಯಮಂತ್ರಿ ಹಾಗು ಭಾರತೀಯ ಜನತಾ ಪಕ್ಷದ ಮುಖಂಡ. ಇವರು ಕನಾ೯ಟಕ ವಿಧಾನಸಭೆಯಲ್ಲಿ ಶಿಕಾರಿಪುರ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. ೨೦೦೮ ರ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಕ್ಷೇತ್ರದಲ್ಲಿ, ಎಸ್. ಬಂಗಾರಪ್ಪನವರನ್ನು ಸುಮಾರು ೪೬ ಸಾವಿರ ಮತಗಳ ಅಂತರದಿಂದ ಪರಾಭವಗೊಳಿಸಿ, ವಿಧಾನಸಭೆಯನ್ನು ಪ್ರವೇಶಿಸುವುದರ ಜೊತೆಗೆ ಬಿಜೆಪಿಗೆ ರಾಜ್ಯಾದ್ಯಂತ ಜಯ ತಂದು ಎರಡನೇ ಬಾರಿಗೆ ಮುಖ್ಯಮಂತ್ರಿ ಪದವಿಗೇರುವ ಮೂಲಕ ದಕ್ಷಿಣ ಭಾರತದಲ್ಲಿ ಮೊಟ್ಟ ಮೊದಲ ಬಾರಿಗೆ ಬಿಜೆಪಿಯನ್ನು ಅಧಿಕಾರದ ಗದ್ದುಗೆಗೆ ಏರಿಸಿದ ಕೀತಿ೯ಗೆ ಪಾತ್ರರಾಗಿದ್ದಾರೆ. ಅಕ್ರಮ ಗಣಿಗಾರಿಕೆಗೆ ಸಹಾನುಭೂತಿ ತೋರಿಸುತ್ತಿರುವ, ಭ್ರಷ್ಟಾಚಾರ, ಹಾಗೂ ಹಲವಾರು ವಿವಾದಗಳ ಕೇಂದ್ರವಾಗಿರುವ ಯಡಿಯೂರಪ್ಪನವರನ್ನು ಅವರ ಪಕ್ಷದ ಹಿರಿಯ ನಾಯಕರೇ ಬಲವಾಗಿ ಖಂಡಿಸಬೇಕಾದ ಬಿಕ್ಕಟ್ಟಿನ ಪ್ರಸಂಗ ಬಂದೊದಗಿದ್ದರಿಂದ ೨೦೧೧ ರ ಜುಲೈ, ೨೮ ರಂದು 'ಬಿಜೆಪಿ ಹೈಕಮಾಂಡ್' ತೆಗೆದುಕೊಂಡ ನಿರ್ಧಾರದ ಮೇಲೆ 'ಯಡಿಯೂರಪ್ಪ'ನವರನ್ನು ಕರ್ನಾಟಕದ ಮುಖ್ಯಮಂತ್ರಿಯ ಸ್ಥಾನದಿಂದ ಕೆಳಗಿಳಿಯಲು ಒಪ್ಪಿಸಲಾಯಿತು. ೨೦೧೧ ರ, ಜುಲೈ, ೩೧ ರ ಸಂಜೆ ೪-೨೯ ಕ್ಕೆ ರಾಜ್ಯಪಾಲ ಶ್ರೀ. ಹಂಸರಾಜ್ ಭರದ್ವಾಜ್ ರವರಿಗೆ ಕರ್ನಾಟಕದ ಮುಖ್ಯಮಂತ್ರಿ ಸ್ಥಾನಕ್ಕೆ ತಮ್ಮ ರಾಜೀನಾಮೆ ಪತ್ರವನ್ನು ಸಲ್ಲಿಸಿದರು. ರಾಜ್ಯಪಾಲರ ಆದೇಶದಂತೆ ಹೈಕಮಾಂಡ್ ನಿರ್ಧರಿಸಿದ ಮತ್ತೊಬ್ಬ ಪಕ್ಷದ ರಾಜಕಾರಣಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವವರೆಗೆ ಹಂಗಾಮಿ ಮುಖ್ಯಮಂತ್ರಿಯಾಗಿ ಮುಂದುವರೆಯುತ್ತಾರೆ.

ವೈಯಕ್ತಿಕ ಜೀವನ

ಜನನ : ಬೂಕನಕೆರೆ, ಕೆ.ಆರ್.ಪೇಟೆ ತಾಲೂಕು, ಮಂಡ್ಯ ಜಿಲ್ಲೆ. ತಂದೆ  : ಸಿದ್ಧಲಿಂಗಪ್ಪ. ತಾಯಿ : ಪುಟ್ಟಮ್ಮ. ಪತ್ನಿ  : ಮೈತ್ರಾದೇವಿ. ಪುತ್ರರು ರಾಘವೇಂದ್ರ, ಹಾಗೂ ವಿಜಯೇಂದ್ರ. ಪುತ್ರಿಯರು :, ಅರುಣಾದೇವಿ, ಪದ್ಮಾವತಿದೇವಿ, ಉಮಾದೇವಿ . ವಿದ್ಯಾರ್ಹತೆ: ಬಿ.ಎ. ೨೦೦೭ರಲ್ಲಿ ಯಡಿಯೂರಪ್ಪನವರ ಪತ್ನಿ, 'ಮೈತ್ರಾದೇವಿಯವರು' ಮರಣ ಹೊಂದಿದರು.

ರಾಜಕೀಯ ಜೀವನ

೧೯೭೫ರಲ್ಲಿ, ಹಣಕಾಸು ಮತ್ತು ಅಬಕಾರಿ ತಾಲ್ಲೂಕು ಸಂಘದ ಅಧ್ಯಕ್ಷರಾಗಿ ರಾಜಕೀಯಕ್ಕೆ ಪ್ರವೇಶ. ೧೯೭೭ರಲ್ಲಿ, ಶಿಕಾರಿಪುರ ಪುರಸಭೆ ಸದಸ್ಯರಾಗಿ ಆಯ್ಕೆ. ೧೯೮೦ರಲ್ಲಿ ಶಿಕಾರಿಪುರ ಪುರಸಭೆ ಅಧ್ಯಕ್ಷ. ೧೯೮೩ರಲ್ಲಿ, ಬಿ.ಜೆ.ಪಿ.ಯ ತಾಲೂಕು ಘಟಕದ ಅಧ್ಯಕ್ಷ. ಮೊದಲ ಬಾರಿ ಶಾಸಕರಾಗಿ ಆಯ್ಕೆ, ೧೯೮೫ರಲ್ಲಿ ಮುಂದೆ ಐದು ಬಾರಿ ಶಿಕಾರಿಪುರ ಕ್ಷೇತ್ರದ ಶಾಸಕ. ೧೯೮೮ರಲ್ಲಿ ಬಿ.ಜೆ.ಪಿ.ಯ ಶಿವಮೊಗ್ಗ ಜಿಲ್ಲಾದ್ಯಕ್ಷ. ೧೯೯೨ರಲ್ಲಿ, ಬಿ.ಜೆ.ಪಿ ರಾಜ್ಯಾಧ್ಯಕ್ಷ. ೧೯೯೪ರಲ್ಲಿ, ಬಿ.ಜೆ.ಪಿ ರಾಷ್ಟ್ರೀಯ ಕಾರ್ಯದರ್ಶಿ.೧೯೯೯ರಲ್ಲಿ ವಿಧಾನಸಭೆ ಪ್ರತಿಪಕ್ಷದ ನಾಯಕ. ೨೦೦೦ದಲ್ಲಿ, ಮತ್ತೆ ರಾಜ್ಯಾಧ್ಯಕ್ಷ. ೨೦೦೪ರಲ್ಲಿ, ವಿಧಾನ ಪರಿಷತ್ ಸದಸ್ಯ. ೨೦೦೬ರಲ್ಲಿ, ಕರ್ನಾಟಕ ವಿರೋಧಪಕ್ಷದ ನಾಯಕ. ವಿಧಾನಸಭೆಯ ಜೆ.ಡಿ.ಎಸ್. ಜತೆ ಮೈತ್ರಿ ಸರಕಾರದಲ್ಲಿ, ಉಪ-ಮುಖ್ಯಮಂತ್ರಿ. ನವೆಂಬರ್ ೨೦೦೭ರಲ್ಲಿ ಕರ್ನಾಟಕದ ಮುಖ್ಯಮಂತ್ರಿ

ಕರ್ನಾಟಕದ ಮುಖ್ಯಮಂತ್ರಿ

'ಯಡಿಯೂರಪ್ಪನವರು, ನವೆಂಬರ್ ೧೨, ೨೦೦೭ ರಂದು, ಕರ್ನಾಟಕ ರಾಜ್ಯದ ಮುಖ್ಯಮಂತ್ರಿಯಾಗಿ ರಾಜ್ಯಪಾಲ ರಾಮೇಶ್ವರ ಠಾಕೂರ್ ಅವರ ಸಮ್ಮುಖದಲ್ಲಿ ಅಧಿಕಾರ ಸ್ವೀಕರಿಸಿದರು. ಈ ಮೂಲಕ ದಕ್ಷಿಣ ಭಾರತ ರಾಜ್ಯಗಳಲ್ಲಿ, ಬಿಜೆಪಿ ಪಕ್ಷದ ಮೊದಲ ಮುಖ್ಯಮಂತ್ರಿಯೆನಿಸಿದರು. ತಮ್ಮ ಅಧಿಕಾರದ ಅವಧಿಯಲ್ಲಿ ಅವರಿಗೆ ಕೆಲವು ಅಡಚಣೆ ತೊಂದರೆಗಳು ಬಂದವು. ಕೆಲವನ್ನು ಅವರು ಆಹ್ವಾನಿಸಿದರು. ಒಟ್ಟಿನಲ್ಲಿ ಶುದ್ಧರಾಜಕೀಯ ಜೀವನ ಮಾರ್ಗವನ್ನು ಅವರು ಅನುಸರಿಸದೆ, ಹಿಂದಿನ ಸರಕಾರದಲ್ಲಿದ್ದ ಪಕ್ಷಗಳು ಮಾಡುತ್ತಿದ್ದ ರಾಜಕೀಯ ಹಗರಣಗಳನ್ನು ಬಯಲಿಗೆಳೆಯಲು ಪಟ್ಟಿಗಳನ್ನು ತಯಾರುಮಾಡುವುದರಲ್ಲೆ ತಮ್ಮ ಅಮೂಲ್ಯ ಸಮಯವನ್ನು ಮೀಸಲಾಗಿಟ್ಟು,ನಿಜವಾದ ರೈತ ನಾಯಕರಾಗಿರುವ ಈವರು. ವಿವಾದಗಳಿಗೆ ಕಾರಣರಾಗುತ್ತಲೇ ತಮ್ಮ ಅಧಿಕಾರಾವಧಿಯಲ್ಲಿ ಮುಂದುವರೆಯುತ್ತಿದ್ದಾರೆ.

ಬಂಧನ

ಮಾಜಿ ಕರ್ನಾಟಕ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅಕ್ರಮವಾಗಿ ಅವನ ಮತ್ತು ಕುಟುಂಬಕ್ಕೆ ಬಹುಮಾನ ರಿಯಲ್ ಎಸ್ಟೇಟ್ ಪಡೆದರು ಆರೋಪದ ಮೇಲೆ ಶನಿವಾರ ಬಂಧಿಸಲಾಯಿತು. ಅವರು ಜಾಮೀನು ನಿರಾಕರಿಸಲಾಯಿತು ಗಂಟೆಗಳ ನಂತರ, 15 ಅಕ್ಟೋಬರ್ 2011 ಸಂಜೆ ಬೆಂಗಳೂರು ಲೂಕಾಯುತ ನ್ಯಾಯಾಲಯ ಮೊದಲು ಶರಣಾದರು ಮತ್ತು ಭ್ರಷ್ಟಾಚಾರದ ಎರಡು ಪ್ರಕರಣಗಳಲ್ಲಿ ಒಂದು ಬಂಧನ ವಾರಂಟ್ ಹೊರಡಿಸಿದರು. ಯಡಿಯೂರಪ್ಪ, ಮೊದಲ ಮಾಜಿ ಸಿಎಮ್ ಕರ್ನಾಟಕದ ಜೈಲು ಕಳುಹಿಸಲಾಗಿದೆ .[೧]

ಹೆಸರು ಬದಲಾವಣೆ

ಅಕ್ಟೋಬರ್ ತಿಂಗಳು, ೨೦೦೭ ರಲ್ಲಿ, ಅವರು ತಮ್ಮ ಹೆಸರನ್ನು, ಇಂಗ್ಲೀಷಿನಲ್ಲಿ B.S. Yeddyurappa ಎಂದು ಬದಲಾಯಿಸಿಕೊಂಡಿದ್ದಾರೆ. ಆದರೆ ಕನ್ನಡದಲ್ಲಿ ಮಾತ್ರ, ಮೊದಲಿನಂತೆಯೆ ಯಡಿಯೂರಪ್ಪ ಅಂತಲೇ ಇದೆ ಎಂದು ಖುದ್ದಾಗಿ ಯಡಿಯೂರಪ್ಪನವರೇ, ಪತ್ರಿಕಾಕರ್ತರಿಗೆ ಸ್ಪಷ್ಟಪಡಿಸಿದ್ದಾರೆ.

ಯಡಿಯೂರಪ್ಪ ಅಲಂಕರಿಸಿದ ಹುದ್ದೆಗಳು

 • ೧೯೭೫ : ಶಿಕಾರಿಪುರ ಪುರಸಭೆ ಸದಸ್ಯರಾಗಿ ಆಯ್ಕೆ, ೧೯೭೭ರಲ್ಲಿ ಅಧ್ಯಕ್ಷ.
 • ೧೯೮೦ : ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ.
 • ೧೯೮೩ : ಮಾಜಿ ಸಚಿವ ವೆಂಕಟಪ್ಪ ಅವರನ್ನು ಸೋಲಿಸಿ ಮೊದಲ ಬಾರಿಗೆವಿಧಾನಸಭೆಪ್ರವೇಶ
 • ೧೯೮೫ :ರಿಂದ ೧೯೮೮ವರೆಗೆ ಬಿಜೆಪಿ ಜಿಲ್ಲಾಧ್ಯಕ್ಷ, ೧೯೮೮ರಲ್ಲಿ ರಾಜ್ಯಾಧ್ಯಕ್ಷ, ೧೯೯೨ ರಲ್ಲಿ ರಾಷ್ಟ್ರೀಯ ಕಾರ್ಯದರ್ಶಿ ಸ್ಥಾನ ನಿರ್ವಹಣೆ|
 • ೧೯೯೪ : ವಿಧಾನಸಭೆ ಪ್ರತಿಪಕ್ಷದ ನಾಯಕ
 • ೧೯೯೯ : ಮತ್ತೆ ರಾಜ್ಯಾಧ್ಯಕ್ಷ, ೨೦೦೦ ರಲ್ಲಿ ಮೇಲ್ಮನೆ ಸದಸ್ಯ
 • ೨೦೦೪ : ಐದನೇ ಬಾರಿಗೆ ವಿಧಾನಸಭೆ ಪ್ರವೇಶ, ಇನ್ನೊಮ್ಮೆ ಪ್ರತಿಪಕ್ಷದ ನಾಯಕ
 • ೨೦೦೬ : ಸಮ್ಮಿಶ್ರ ಸರ್ಕಾರ ರಚನೆ, ಉಪಮುಖ್ಯಮಂತ್ರಿ, ಹಣಕಾಸು ಮತ್ತು ಅಬಕಾರಿ ಖಾತೆಗಳ ನಿರ್ವಹಣೆ
 • ೨೦೦೭ : ನವೆಂಬರ್‌೧೨ರಿಂದ ೧೭ರವರೆಗೆ ೭ ದಿನ ಮಾತ್ರ ಮುಖ್ಯಮಂತ್ರಿಯಾಗಿದ್ದರು.
 • ೨೦೦೮ : ಮೇ ೩೦ರ ಶುಕ್ರವಾರ ಕರ್ನಾಟಕದ ೨೫ ನೇ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರ.
 • ೨೦೧೧ : ಜುಲೈ ೩೧ ರ ಸಾಯಂಕಾಲ, ೪-೨೯ ಕ್ಕೆ ಸರಿಯಾಗಿ ಮುಖ್ಯಮಂತ್ರಿಗಳ ಸ್ಥಾನಕ್ಕೆ ರಾಜೀನಾಮೆ ಪತ್ರ ಸಲ್ಲಿಸಿದರು.
 • ೨೦೧೪ :೨೦೧೪ ರ ಲೋಕಸಭಾಚುನಾವಣೆಯಲ್ಲಿ 363,305 ಮತಗಳ ಅಂತರದಿಂದ ಲೋಕಸಭಾಸದಸ್ಯರಾಗಿ ಆಯ್ಕೆ.
 • ೧.https://en.wikipedia.org/wiki/B._S._Yeddyurappa
 1. http://timesofindia.indiatimes.com/india/Before-surrendering-Yeddyurappa-went-missing-for-4-hours/articleshow/10370684.cms