ಎಸ್.ನಿಜಲಿಂಗಪ್ಪ
ಎಸ್.ನಿಜಲಿಂಗಪ್ಪ | |
---|---|
ಕರ್ನಾಟಕದ 4 ನೇ ಮುಖ್ಯಮಂತ್ರಿ
| |
ಅಧಿಕಾರ ಅವಧಿ 1 ನವೆಂಬರ್ 1956 - 16 ಮೇ 1958 – 16 May 1958 | |
ರಾಜ್ಯಪಾಲ | ಜಯಚಾಮರಾಜ_ಒಡೆಯರ್ |
ಪೂರ್ವಾಧಿಕಾರಿ | ಕಡಿದಾಳ್_ಮಂಜಪ್ಪ |
ಉತ್ತರಾಧಿಕಾರಿ | ಬಿ.ಡಿ.ಜತ್ತಿ |
ಅಧಿಕಾರ ಅವಧಿ 21 June 1962 – 29 May 1968 | |
ರಾಜ್ಯಪಾಲ | ಜಯಚಾಮರಾಜ_ಒಡೆಯರ್ ಜನರಲ್ ಶ್ರೀನಾಗೇಶ್ ವಿ ವಿ ಗಿರಿ ಜಿ.ಎಸ್.ಪಾಠಕ್ |
ಪೂರ್ವಾಧಿಕಾರಿ | ಎಸ್_ಆರ್_ಕಂಠಿ |
ಉತ್ತರಾಧಿಕಾರಿ | ವೀರೇಂದ್ರ_ಪಾಟೀಲ್ |
ವೈಯಕ್ತಿಕ ಮಾಹಿತಿ | |
ಜನನ | ಸಿದ್ದವಾದಹಳ್ಳಿ, ಚಿತ್ರದುರ್ಗ | ೧೦ ಡಿಸೆಂಬರ್ ೧೯೦೨
ಮರಣ | 8 August 2000 | (aged 97)
ರಾಜಕೀಯ ಪಕ್ಷ | ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ |
ಧರ್ಮ | ಹಿಂದೂ |
ರಾಷ್ಟ್ರ ನಾಯಕ ಸಿದ್ದವ್ವನಹಳ್ಳಿ ನಿಜಲಿಂಗಪ್ಪ - (ಡಿಸೆಂಬರ್ ೧೦, ೧೯೦೨ )ಬಳ್ಳಾರಿ ಜಿಲ್ಲೆಯ ಹರಪನಹಳ್ಳಿ ತಾಲ್ಲೂಕಿನ ಹಲುವಾಗಲು ಎಂಬ ಚಿಕ್ಕಹಳ್ಳಿಯೊಂದರ ಮಧ್ಯಮವರ್ಗದ ಕುಟುಂಬವೊಂದರಲ್ಲಿ ಜನಿಸಿದ ಎಸ್. ನಿಜಲಿಂಗಪ್ಪನವರು ಶಾಂತ ಸ್ವಭಾವಕ್ಕೆ ಮತ್ತು ಸಜ್ಜನಿಕೆಗೆ ಪ್ರಸಿಧ್ಧರಾದ ದೇಶಪ್ರೇಮಿ ಮತ್ತು ರಾಜಕಾರಣಿ.
ಕರ್ನಾಟಕದ ಏಕೀಕರಣಕ್ಕೆ ಹೋರಾಡಿದ ರಾಜಕಾರಣಿಗಳಲ್ಲಿ ಪ್ರಮುಖರು
[ಬದಲಾಯಿಸಿ]ಇವರು ಏಕೀಕೃತ ಕರ್ನಾಟಕದ ಪ್ರಥಮ ಮುಖ್ಯಮಂತ್ರಿಯೂ ಅಗಿ ಕಾರ್ಯ ನಿರ್ವಹಿಸಿದ್ದಾರೆ. ಕರ್ನಾಟಕದ ಏಕೀಕರಣಕ್ಕೆ ಹೋರಾಡಿದ ನಿಜಲಿಂಗಪ್ಪ ನವರು ಎರಡು ಅವಧಿಗಳಿಗೆ ೪ ಬಾರಿ ಕರ್ನಾಟಕದ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದಾರೆ. ಎಸ್. ನಿಜಲಿಂಗಪ್ಪ ನವರನ್ನು ನವಕರ್ನಾಟಕದ ನಿರ್ಮಾತೃ ಎಂದು ಕರ್ನಾಟಕದ ಜನತೆ ನೆನೆಪಿಸಿಕೊಳ್ಳುತ್ತಾರೆ. ಶರಾವತಿ ಜಲವಿದ್ಯುತ್ ಯೋಜನೆ ಮತ್ತುಕಾಳಿ ವಿದ್ಯುತ್ ಯೋಜನೆಯ ಪ್ರಮುಖ ರೂವಾರಿ ಇವರಾಗಿದ್ದಾರೆ. ಕನಾ ಸನ್ಮಾನ್ಯ ಶ್ರೀ ನಿಜಲಿಂಗಪ್ಪನವರು ಚಿತ್ರದುರ್ಗದಲ್ಲಿ ಹೆಸರಾಂತ ವಕೀಲರೂ, ನಡೆನುಡಿಗಳ ಸಂಗಮರೆಂದು ಪ್ರಖ್ಯಾತರಾಗಿದ್ದ ನನ್ನ ತ್ತತನವರಾದ ಶ್ರೀ ಸಿ.ಚೆನ್ನಕೇಶವಯ್ಯನವರ ಬಳಿ ನೆಚ್ಚಿನ ಶಿಷ್ಯನಾಗಿ ವಕೀಲಿ ವೃತ್ತಿ ಆರಂಭಿಸಿದರು. ಶ್ರೀಯುತ ಚೆನ್ನಕೇಶವಯ್ಯನವರು ತಮ್ಮ ೫೫ನೇ ವಯಸ್ಸಿನಲ್ಲಿ ತಮ್ಮ ವಕೀಲಿ ವೃತ್ತಿಯಿಂದ ಸ್ವಯಂ ನಿವೃತ್ತಿ ಹೊಂದಿದಾಗ ತಮ್ಮ ಬಳಿ ಇದ್ದ ಎಲ್ಲ್ ಕೇಸ್ ಗಳನ್ನೂ ನಿಜಲಿಂಗಪ್ಪನವರೂ ಸೇರಿ ಮಿಕ್ಕ ತಮ್ಮ ಶಿಷ್ಯರಿಗೆ ಹಂಚಿದರಂತೆ. ಇದು ತುಂಬಾ ಅಪರೂಪದ ವಿಶೇಷವಲ್ಲವೇ ? ನಂತರ ಶ್ರೀ ನಿಜಲಿಂಗಪ್ಪನವರು ಕರ್ನಾಟಕದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ದಿನವೇ ತಮ್ಮ ಗುರುಗಳಾದ ನನ್ನ ತಾತನವರಾದ ಚೆನ್ನಕೇಶವಯ್ಯನವರು ಅಷ್ಟುಹೊತ್ತಿಗೆ ಬೆಂಗಳೂರು ಬಸವನಗುಡಿಯಲ್ಲಿ ಇದ್ದ ನಮ್ಮ ಮನೆಗೆ ಅಂದೇ ಮಧ್ಯಾನ್ಹವೇ ಬಂದು ಚೆನ್ನಕೇಶವಯ್ಯನವರಿಗೆ ನಮಸ್ಕರಿಸಿ ವಿನಮ್ರರಾಗಿ ನಿಂತೇ ಹೀಗೆ ಹೇಳಿದರು - " ರಾಯರೇ, ಇಂದು ತಮ್ಮ ಆಶೀರ್ವಾದದಿಂದ ನಾನು ಕರ್ನಾಟಕದ ಮುಖ್ಯಮಂತ್ರಿಯಾಗಿ ಇದೀಗ ಪ್ರಮಾಣವಚನ ಸ್ವೀಕರಿಸಿದೆ. ತಮ್ಮ ಆಶೀರ್ವಾದಕ್ಕಾಗಿ ಬಂದಿದ್ದೇನೆ. ಒಂದು ಬಿನ್ನಹ - ನನ್ನಿಂದ ತಮಗೇನು ಸೇವೆ ಮಾಡಲು ಬೇಕಾದರೂ ನಾನು ಸಿದ್ಧ, ತಾವು ಏನು ಬೇಕಾದರೂ ಅಪ್ಪಣೆಯಾಗಲೀ" ಎಂದರು. ಕೂಡಲೇ ನನ್ನ ತಾತನವರು " ತುಂಬಾ ಸಂತೋಷ, ಮಾರಾಯ ನನಗೆ ದೇವರು ಏನೂ ಕಡಿಮೆ ಮಾಡಿಲ್ಲ, ಆದ್ದರಿಂದ ನನಗೇನೂ ಬೇಡ, ನೀನು ಪ್ರಾಮಾಣಿಕವಾಗಿ ದೇಶಸೇವೆ ಮಾಡು ಅಷ್ಟೇ ನನಗೆ ಸಾಕು " ಎಂದರು. ಆದರೂ ಶ್ರೀ ನಿಜಲಿಂಗಪ್ಪನವರು ತಾತನವರನ್ನು ಒತ್ತಾಯಿಸಿದ್ದರಿಂದ , " ಹಾಗಾದರೆ ಇಲ್ಲೇ ಹತ್ತಿರ ಬಸವನಗುಡಿಯಲ್ಲಿ ಒಂದು ದೊಡ್ಡ ಗಣೇಶ ದೇವಸ್ಥಾನವಿದೆ. ಅಲ್ಲಿ ದೇವರಿಗೆ ಅಭಿಷೇಕ ಮಾಡಲು ಕೊಳಾಯಿ ವ್ಯವಸ್ಠೆ ಇಲ್ಲದ್ದರಿಂದ ತುಂಬಾ ದೂರದಿಂದ ಒಂದೇ ಕೊಡ ತಂದು ಅಭಿಷೇಕ ಮಾಡುತ್ತಿದ್ದಾರೆ. ಆದ್ದರಿಂದ ಒಂದು ಕೊಳಾಯಿ ಹಾಕಿಸು " ಎಂದರು. ಎಲ್ಲಿದೆ ದಯಮಾಡಿ ಈಗಲೇ ತೋರಿಸಿ ಎಂದರು. ನಾನು, ನಮ್ಮ ತಾತ ಶ್ರೀ ನಿಜಲಿಂಗಪ್ಪನವರ ಕಾರ್ ನಲ್ಲೇ ಹೋಗಿ ತೋರಿಸಲಾಯಿತು. ಕೂಡಲೇ ಎರಡೇ ದಿನದಲ್ಲಿ ಬಸವನಗುಡಿಯ ದೊಡ್ಡಗಣೇಶನಿಗೆ ಸಮೃದ್ಧಿ ಜಲಕ ಸ್ನಾನ ಲಭ್ಯವಾಯಿತು. ಇದು ನಡೆದದ್ದು ಸುಮಾರು ೧೯೫೮ ನವೆಂಬರ್ ನಲ್ಲಿ. ಇದು ನನ್ನ ತಾತನವರ ಅನೇಕ ನಿಃಸ್ವಾರ್ಥ ಜೀವನದ ಆದರ್ಶಗಳಲ್ಲಿ ಒಂದು ಆದರ್ಶ. - ನಾನು ಕಂಡಂತೆ ,ಚಿತ್ರದುರ್ಗ ಸಂಜೀವ ಮೂರ್ತಿ -
ಶಿಕ್ಷಣದಲ್ಲಿ ಎತ್ತಿದ ಕೈ
[ಬದಲಾಯಿಸಿ]ಚಿಕ್ಕಂದಿನಲ್ಲಿ ತಮ್ಮ ಹಳ್ಳಿಯ "ವೀರಪ್ಪ ಮಾಸ್ತರ" ರಿಂದ ಸಾಂಪ್ರದಾಯಿಕ ವಾಗಿ ಅಕ್ಷರಾಭ್ಯಾಸ ಮಾಡಿದ ನಿಜಲಿಂಗಪ್ಪನವರು, ಬೆಂಗಳೂರಿನ ಸೆಂಟ್ರಲ್ ಕಾಲೇಜಿನಿಂದ ೧೯೨೪ರಲ್ಲಿ ಪದವೀಧರರಾಗಿ ಉತ್ತೀರ್ಣರಾದರು.೧೯೨೧-೧೯೨೪ ರ ಅವಧಿಯಲ್ಲಿ ರಾವ್ ಬಹದ್ದೂರ್ ಧರ್ಮಪ್ರವರ್ತ ಗುಬ್ಬಿ ತೋಟದಪ್ಪ ವಿಧ್ಯಾರ್ಥಿ ನಿಲಯದ ವಿಧ್ಯಾರ್ಥಿಗಳಾಗಿದ್ದರು. ಶ್ರೀ ಬಸವೇಶ್ವರ ಮತ್ತು ಶಿವಶರಣರ ನೀತಿ-ಸಾಧನೆಗಳನ್ನು ಅಭ್ಯಾಸಮಾಡಿ ತಮ್ಮ ಜೀವನದಲ್ಲಿ ಅಳವಡಿಸಿಕೊಂಡ ನಿಜಲಿಂಗಪ್ಪನವರು, ಗಾಂಧೀಜಿಯವರ ವಿಚಾರಧಾರೆಯಿಂದಲೂ ಪ್ರಭಾವಿತರಾದರು. ಚಿತ್ರದುರ್ಗವನ್ನು ತಮ್ಮ ಕರ್ಮಭೂಮಿಯಾಗಿ ಸ್ವೀಕರಿಸಿದ ನಿಜಲಿಂಗಪ್ಪನವರು; ಅಂದಿನ ಚಿತ್ರದುರ್ಗ ಜಿಲ್ಲೆಯ ಏಳಿಗೆಗಾಗಿ ಶ್ರಮವಹಿಸಿದ್ದಾರೆ.
'ಕಾಂಗ್ರೆಸ್-ಓ,' ಪಕ್ಷದ ರೂವಾರಿ
[ಬದಲಾಯಿಸಿ]೧೯೩೬ರಲ್ಲಿ ತಮ್ಮ ರಾಜಕೀಯ ಜೀವನವನ್ನು ತಡವಾಗಿಯೇ ಪ್ರಾರಂಭಿಸಿದ ನಿಜಲಿಂಗಪ್ಪನವರು, ಎನ್.ಎಸ್. ಹರ್ಡೀಕರರ ಸಹಾಯದಿಂದ ಕಾಂಗ್ರೆಸ್ ಸೇರಿದರು.
ಇಂಡಿಯನ್ ಆಯಿಲ್ ಸಂಸ್ಥೆಯ ಅಧ್ಯಕ್ಷರಾಗಿ ೧೯೫೯ರಿಂದ ೧೯೬೨ರ ವರೆಗೆ ದುಡಿದರು.[೧]
ಪ್ರಾರಂಭದಲ್ಲಿ ಸಾಮಾನ್ಯ ಸದಸ್ಯನಾಗಿ ಸೇರಿ ನಂತರ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರಾಗಿ ಕೊನೆಗೆ ೧೯೬೮ರಲ್ಲಿ ಅಖಿಲ ಭಾರತ ಕಾಂಗ್ರೆಸ್ ಪಾರ್ಟಿಯ ಅಧ್ಯಕ್ಷರಾದರು. ಇಂದಿರಾ ಗಾಂಧಿಯವರ ಜೊತೆ ರಾಜಕೀಯ ಭಿನ್ನಾಭಿಪ್ರಾಯ ಹೊಂದಿದ ಕೆಲವು ಹಿರಿಯ ಕಾಂಗ್ರೆಸ್ ನಾಯಕರೊಡನೆ ಸೇರಿ ಕಾಂಗ್ರೆಸ (ಓ) ಪಕ್ಷದ ಸ್ಥಾಪನೆಗೆ ಕಾರಣವಾದರು.
ಪ್ರಶಸ್ತಿ ಗೌರವಗಳು
[ಬದಲಾಯಿಸಿ]ನಿಜಲಿಂಗಪ್ಪನವರಿಗೆ ಕರ್ನಾಟಕ ಸರ್ಕಾರ ನೀಡುವ ಪ್ರತಿಷ್ಠಿತ ಕರ್ನಾಟಕ ರತ್ನ ಪ್ರಶಸ್ತಿಯ ಗೌರವ ದೊರಕಿದೆ.
References
[ಬದಲಾಯಿಸಿ]- ↑ url=https://www.iocl.com/AboutUs/PastLeaders.aspx Archived 2014-04-02 ವೇಬ್ಯಾಕ್ ಮೆಷಿನ್ ನಲ್ಲಿ.