ವಿಷಯಕ್ಕೆ ಹೋಗು

ಜೆ ಹೆಚ್ ಪಟೇಲ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಜೆ.ಹೆಚ್.ಪಟೇಲ್
೯ ನೇ ಕರ್ನಾಟಕದ ಮುಖ್ಯಮಂತ್ರಿ
In office
೩೧ ಮೇ ೧೯೯೬ – ೭ ಅಕ್ಟೋಬರ್ ೧೯೯೯
Preceded byಹೆಚ್.ಡಿ.ದೇವೇಗೌಡ
Succeeded byಎಸ್.ಎಂ.ಕೃಷ್ಣ
೨ನೇ ಕರ್ನಾಟಕದ ಉಪ ಮುಖ್ಯಮಂತ್ರಿ
In office
೧೧ ಡಿಸೆಂಬರ್ ೧೯೯೪ – ೩೧ ಮೇ ೧೯೯೬
ಮುಖ್ಯಮಂತ್ರಿಹೆಚ್.ಡಿ.ದೇವೇಗೌಡ
Preceded byಎಸ್.ಎಂ.ಕೃಷ್ಣ
Succeeded byಸಿದ್ದರಾಮಯ್ಯ
Constituencyಚನ್ನಗಿರಿ
ಸಂಸತ್ ಸದಸ್ಯ, ಲೋಕಸಭೆ
In office
೧೯೬೭–೧೯೭೧
Preceded byಎಸ್.ವಿ.ಕೃಷ್ಣಮೂರ್ತಿ ರಾವ್
Succeeded byಟಿ. ವಿ. ಚಂದ್ರಶೇಖರಪ್ಪ
Constituencyಶಿವಮೊಗ್ಗ
Personal details
Born(೧೯೩೦-೧೦-೦೧)೧ ಅಕ್ಟೋಬರ್ ೧೯೩೦
ಕಾರಿಗನೂರು, ಮೈಸೂರು ಸಾಮ್ರಾಜ್ಯ, ಬ್ರಿಟಿಷ್ ಭಾರತ
Died೧೨ ಡಿಸೆಂಬರ್ ೨೦೦೦ (ವಯಸ್ಸು ೭೦)
ಬೆಂಗಳೂರು, ಕರ್ನಾಟಕ, ಭಾರತ
Political partyಜನತಾ ದಳ,
Other political
affiliations
ಜನತಾ ದಳ (ಯುನೈಟೆಡ್), ಸಂಯುಕ್ತ ಸಮಾಜವಾದಿ ಪಕ್ಷ
Spouseಸರ್ವಮಂಗಳಾ ಪಟೇಲ್

ಜಯದೇವಪ್ಪ ಹಾಲಪ್ಪ ಪಟೇಲ್ (೧ ಅಕ್ಟೋಬರ್ ೧೯೩೦ - ೧೨ ಡಿಸೆಂಬರ್ ೨೦೦೦) ಅವರು ಭಾರತದ ಕರ್ನಾಟಕ ರಾಜ್ಯದ ೯ ನೇ ಮುಖ್ಯಮಂತ್ರಿಯಾಗಿದ್ದರು. ಜೆ ಹೆಚ್ ಪಟೇಲ್ ಅವರು ೩೧ ಮೇ ೧೯೯೬ ರಿಂದ ೭ ಅಕ್ಟೋಬರ್ ೧೯೯೯ ರವರೆಗೆ ಮುಖ್ಯಮಂತ್ರಿಯಾಗಿದ್ದರು.

ಜೀವನಚರಿತ್ರೆ

[ಬದಲಾಯಿಸಿ]

ಜೆ.ಎಚ್. ಪಟೇಲ್ ಅವರು ೧೯೩೦ ರ ಅಕ್ಟೋಬರ್ ೧ ರಂದು ಭಾರತದ ಕರ್ನಾಟಕದ ದಾವಣಗೆರೆ ಜಿಲ್ಲೆಯ ಕಾರಿಗನೂರಿನಲ್ಲಿ ಜನಿಸಿದರು. ಅವರು ಕಾನೂನಿನಲ್ಲಿ ಪದವೀಧರರಾಗಿದ್ದರು. ಜೆ.ಎಚ್. ಪಟೇಲ್ ಅವರು ಸರ್ವಮಂಗಳ ಅವರನ್ನು ವಿವಾಹವಾದರು. ಜೆ.ಎಚ್. ಪಟೇಲ್ ಮತ್ತು ಸರ್ವಮಂಗಳ ಅವರಿಗೆ ತ್ರಿಶೂಲ್, ಸತೀಶ್ ಮತ್ತು ಮಹಿಮಾ ಎಂಬ ಮೂವರು ಪುತ್ರರು ಜನಿಸಿದರು.[][] ಜೆ.ಎಚ್. ಪಟೇಲರು ೧೯೪೨ ರಲ್ಲಿ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿ ಜೈಲು ಸೇರಿದ್ದರು. ಕಟ್ಟಾ ಸಮಾಜವಾದಿ ಮತ್ತು ರಾಮ್ ಮನೋಹರ ಲೋಹಿಯಾ ಅವರ ಕಟ್ಟಾ ಅನುಯಾಯಿಯಾಗಿದ್ದರು. ಇವರು ಕರ್ನಾಟಕ ಸಂಯುಕ್ತ ಜನತಾ ದಳದ ಅಧ್ಯಕ್ಷರಾಗಿದ್ದು, ದೇವೇಗೌಡರ ನಂತರ ಮುಖ್ಯಮಂತ್ರಿ ಸ್ಥಾನವನ್ನು ಪಡೆದರು.

ರಾಜಕೀಯ ವೃತ್ತಿಜೀವನ

[ಬದಲಾಯಿಸಿ]

ಜೆ.ಎಚ್. ಪಟೇಲ್ ಅವರು ೧೯೬೭ ರಲ್ಲಿ ಶಿವಮೊಗ್ಗ ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆಯಾದರು. ೧೯೬೭ ರಲ್ಲಿ ಲೋಕಸಭೆಯಲ್ಲಿ ಕನ್ನಡದಲ್ಲಿ ತಮ್ಮ ಚರ್ಚೆಗಳನ್ನು ಮಂಡಿಸಿದ ಮೊದಲ ಕನ್ನಡಿಗ.[]

ಜೆ.ಎಚ್. ಪಟೇಲ್ ಅವರು ೧೯೭೮ ರಲ್ಲಿ ಚನ್ನಗಿರಿ ಕ್ಷೇತ್ರದಿಂದ ಕರ್ನಾಟಕ ವಿಧಾನಸಭೆಗೆ ಆಯ್ಕೆಯಾಗಿದರು. ೧೯೮೩ ರಲ್ಲಿ ಎರಡನೇ ಬಾರಿಗೆ ಆಯ್ಕೆಯಾದರು. ರಾಮಕೃಷ್ಣ ಹೆಗಡೆ ಅವರ ನೇತೃತ್ವದ ಜನತಾ ಪಕ್ಷ ಸರ್ಕಾರದಲ್ಲಿ ಕಬಿನೆಟ್ ಮಂತ್ರಿಯಾಗಿ ಸೇವೆ ಸಲ್ಲಿಸಿದರು. ಪಟೇಲ್ ಅವರು ಎಸ್ ಆರ್ ಬೊಮ್ಮಾಯಿ ಅವರ ಸರ್ಕಾರದಲ್ಲಿ ಸಚಿವರಾಗಿ ಸಹ ಸೇವೆ ಸಲ್ಲಿಸಿದರು. ೧೯೯೬ ರಲ್ಲಿ ಎಚ್.ಡಿ.ದೇವೇಗೌಡರ ನೇತೃತ್ವದಲ್ಲಿ ಜನತಾದಳವು ಮತ್ತೆ ಅಧಿಕಾರಕ್ಕೆ ಬಂದಾಗ ಉಪಮುಖ್ಯಮಂತ್ರಿಯಾದರು.

ಪಟೇಲರ ಸರ್ಕಾರದಲ್ಲಿ ರಾಜ್ಯದಲ್ಲಿ ಏಳು ಹೊಸ ಜಿಲ್ಲೆಗಳ ರಚನೆಯಾಗಿದೆ.[]

ಪಟೇಲ್ ೧೨ ಡಿಸೆಂಬರ್ ೨೦೦೦ ರಂದು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ನಿಧನರಾದರು.[] ಅವರ ಸ್ವಗ್ರಾಮವಾದ ಕಾರಿಗನೂರಿನಲ್ಲಿ ಸರ್ಕಾರಿ ಗೌರವಗಳೊಂದಿಗೆ ಸಮಾಧಿ ಮಾಡಲಾಯಿತು.[]

ಉಲ್ಲೇಖಗಳು

[ಬದಲಾಯಿಸಿ]
  1. "J.H Patel, a witty thinker". OurKarnataka.com. 1 ಅಕ್ಟೋಬರ್ 1930. Archived from the original on 5 ಫೆಬ್ರವರಿ 2012. Retrieved 4 ಆಗಸ್ಟ್ 2012.
  2. "The Hindu : Leaders shower praises on J.H. Patel". Hinduonnet.com. 28 ಫೆಬ್ರವರಿ 2001. Archived from the original on 25 ಜನವರಿ 2013. Retrieved 4 ಆಗಸ್ಟ್ 2012.
  3. "J.H.Patel- profile". Veethi.com.
  4. "J.H. Patel: A Socialist who drifted away from its ideals". The Hindu. Archived from the original on 24 ಮೇ 2005.
  5. "J.H. Patel passes away". The Hindu. Archived from the original on 13 ನವೆಂಬರ್ 2002.
  6. "Patel buried with State honours". The Hindu. Archived from the original on 25 ಜನವರಿ 2013.


ಬಾಹ್ಯ ಕೊಂಡಿಗಳು

[ಬದಲಾಯಿಸಿ]
Political offices
Preceded by ಕರ್ನಾಟಕದ ಉಪಮುಖ್ಯಮಂತ್ರಿ
೧೧ ಡಿಸೆಂಬರ್ ೧೯೯೪ – ೩೧ ಮೇ ೧೯೯೬
Succeeded by
Preceded by ಕರ್ನಾಟಕದ ಮುಖ್ಯಮಂತ್ರಿಗಳು
೩೧ ಮೇ ೧೯೯೬ – ೭ ಅಕ್ಟೋಬರ್ ೧೯೯೯
Succeeded by