ವಿಷಯಕ್ಕೆ ಹೋಗು

ಹೆಚ್.ಡಿ.ದೇವೇಗೌಡ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ದೇವೇಗೌಡ ಇಂದ ಪುನರ್ನಿರ್ದೇಶಿತ)
ಹೆಚ್. ಡಿ. ದೇವೇಗೌಡ
ಭಾರತದ ೧೧ನೇ ಪ್ರಧಾನಮಂತ್ರಿ[]
In office
೧ ಜೂನ್ ೧೯೯೬ – ೨೧ ಎಪ್ರಿಲ್ ೧೯೯೭
Presidentಶಂಕರ್ ದಯಾಳ್ ಶರ್ಮಾ
Preceded byಅಟಲ್ ಬಿಹಾರಿ ವಾಜಪೇಯಿ
Succeeded byಇಂದ್ರಕುಮಾರ್ ಗುಜ್ರಾಲ್
ರಾಜ್ಯಸಭಾ ಸದಸ್ಯ
Assumed office
೨೬ ಜೂನ್ ೨೦೨೦
Preceded byಡಿ. ಕುಪ್ಪೇಂದ್ರ ರೆಡ್ಡಿ
Constituencyಕರ್ನಾಟಕ
In office
೨೩ ಸೆಪ್ಟೆಂಬರ್ ೧೯೯೬ – ೨ ಮಾರ್ಚ್ ೧೯೯೮
Preceded byಲೀಲಾದೇವಿ ಆರ್. ಪ್ರಸಾದ್
Succeeded byಎ. ಲಕ್ಷ್ಮೀಸಾಗರ್
Constituencyಕರ್ನಾಟಕ
ಗೃಹ ಮಂತ್ರಿ
In office
೧ ಜೂನ್ ೧೯೯೬ – ೨೮ ಜೂನ್ ೧೯೯೬
Preceded byಮುರಳಿ ಮನೋಹರ ಜೋಶಿ
Succeeded byಇಂದ್ರಜಿತ್ ಗುಪ್ತಾ
ಕರ್ನಾಟಕ ರಾಜ್ಯದ ೮ನೇ ಮುಖ್ಯಮಂತ್ರಿ
In office
೧೧ ಡಿಸೆಂಬರ್ ೧೯೯೪ – ೩೧ ಮೇ ೧೯೯೬
Governorಖುರ್ಷಿದ್ ಅಲಮ್ ಖಾನ್
Preceded byವೀರಪ್ಪ ಮೊಯ್ಲಿ
Succeeded byಜೆ. ಹೆಚ್. ಪಟೇಲ್
ಜನತಾ ದಳ (ಜಾತ್ಯಾತೀತ) ಪಕ್ಷದ ಅಧ್ಯಕ್ಷ
Assumed office
ಜುಲೈ ೧೯೯೯
Preceded byಪ್ರಥಮ ಅಧ್ಯಕ್ಷ
ಲೋಕಸಭಾ ಸದಸ್ಯ
In office
೧೭ ಮೇ ೨೦೦೪ – ೨೩ ಮೇ ೨೦೧೯
Preceded byಜಿ. ಪುಟ್ಟಸ್ವಾಮಿ ಗೌಡ
Succeeded byಪ್ರಜ್ವಲ್ ರೇವಣ್ಣ
Constituencyಹಾಸನ
In office
೨ ಫೆಬ್ರವರಿ ೨೦೦೨ – ೧೬ ಮೇ ೨೦೦೪
Preceded byಎಮ್. ವಿ. ಚಂದ್ರಶೇಖರಮೂರ್ತಿ
Succeeded byತೇಜಸ್ವಿನಿ ಶ್ರೀರಮೇಶ್
Constituencyಕನಕಪುರ
In office
೧೦ ಮಾರ್ಚ್ ೧೯೯೮ – ೨೬ ಎಪ್ರಿಲ್ ೧೯೯೯
Preceded byರುದ್ರೇಶ್ ಗೌಡ
Succeeded byಜಿ. ಪುಟ್ಟಸ್ವಾಮಿಗೌಡ
Constituencyಹಾಸನ
In office
೨೦ ಜೂನ್ ೧೯೯೧ – ೧೧ ಡಿಸೆಂಬರ್ ೧೯೯೪
Preceded byಹೆಚ್. ಸಿ. ಶ್ರಿಕಂಠಯ್ಯ
Succeeded byರುದ್ರೇಶ್ ಗೌಡ
Constituencyಹಾಸನ
ಕರ್ನಾಟಕ ವಿಧಾನಸಭಾ ಸದಸ್ಯ
In office
Error: All values must be integers (help) – ೧೯೯೬ (೧೯೯೬)
Preceded byಸಿ. ಎಮ್. ಲಿಂಗಪ್ಪ
Succeeded byಸಿ. ಎಮ್. ಲಿಂಗಪ್ಪ
Constituencyರಾಮನಗರ
In office
Error: All values must be integers (help) – ೧೯೮೯ (೧೯೮೯)
Preceded byವೈ. ವೀರಪ್ಪ
Succeeded byಜಿ. ಪುಟ್ಟಸ್ವಾಮಿಗೌಡ
Constituencyಹೊಳೆನರಸೀಪುರ
Personal details
Bornದೋಷ: Need valid birth date: year, month, day
ಆಗಿನ ಬ್ರಿಟೀಷ್ ಆಡಳಿತದ ಹರದನಹಳ್ಳಿ, ಮೈಸೂರು ರಾಜ್ಯ,
(ಈಗಿನ ಕರ್ನಾಟಕ ರಾಜ್ಯ, ಭಾರತ)
Nationalityಭಾರತೀಯ
Political partyಜಾತ್ಯಾತೀತ ಜನತಾದಳ
(೧೯೯೯ರಿಂದ)
Other political
affiliations
Spouse

ಚೆನ್ನಮ್ಮ (ವಿವಾಹ:25 May 1954)

Childrenಮಕ್ಕಳು ೬
Educationಸಿವಿಲ್ ಇಂಜಿನಿಯರಿಂಗ್‌ನಲ್ಲಿ ಡಿಪ್ಲೋಮಾ
Alma materಎಲ್. ವಿ. ಪಾಲಿಟೆಕ್ನಿಕ್
Professionರಾಜಕಾರಿಣಿ, ಕೃಷಿಕ, ಅಭಿಯಂತರ
Signature
Websitehddevegowda.in
Nickname(s)ಮಣ್ಣಿನ ಮಗ
ದೊಡ್ ಗೌಡ್ರು

ಎಚ್.ಡಿ. ದೇವೇಗೌಡ (ಹರದನಹಳ್ಳಿ ದೊಡ್ಡೇಗೌಡ ದೇವೇಗೌಡ) ಅವರು ಭಾರತದ ೧೨ ನೆಯ ಪ್ರಧಾನ ಮಂತ್ರಿಗಳು ಮತ್ತು ಕರ್ನಾಟಕ ರಾಜ್ಯದ ಮಾಜಿ ಮುಖ್ಯಮಂತ್ರಿಗಳು.[][][] 'ಮಣ್ಣಿನ ಮಗ' ಎಂದೇ ಖ್ಯಾತರಾಗಿರುವ ದೇವೇಗೌಡರು ರೈತಪರ ಕಾಳಜಿ ಉಳ್ಳವರು.

ದೇವೇಗೌಡರು ಮೇ ೧೮, ೧೯೩೩ ರಂದು ಹಾಸನ ಜಿಲ್ಲೆಯ ಹೊಳೆನರಸಿಪುರ ತಾಲೂಕಿನ ಹರದನಹಳ್ಳಿಯಲ್ಲಿ ಜನಿಸಿದರು. ಸಿವಿಲ್ ಎಂಜಿನಿಯರಿಂಗ್‍ನಲ್ಲಿ ಡಿಪ್ಲೊಮಾ ಪಡೆದ ಬಳಿಕ, ದೇವೇಗೌಡ ಅವರು ಹಾಸನ ತಾಲ್ಲೂಕಿನ ಮುತ್ತಿಗೆ ಹಿರೇಹಳ್ಳಿಯ ಚೆನ್ನಮ್ಮ ಅವರನ್ನು 1954ರಲ್ಲಿ ವಿವಾಹವಾದರು. ಅವರಿಗೆ ಎಚ್.ಡಿ. ಕುಮಾರಸ್ವಾಮಿ ಹಾಗೂ ಎಚ್.ಡಿ. ರೇವಣ್ಣ ಸೇರಿದಂತೆ ನಾಲ್ಕು ಜನ ಗಂಡು ಮಕ್ಕಳೂ, ಇಬ್ಬರು ಹೆಣ್ಣು ಮಕ್ಕಳೂ ಇದ್ದಾರೆ.[][][] ಎಚ್.ಡಿ. ಕುಮಾರಸ್ವಾಮಿ ಅವರು ಕರ್ನಾಟಕದ ಮುಖ್ಯಮಂತ್ರಿಗಳಾಗಿದ್ದರು. ಎಚ್.ಡಿ. ರೇವಣ್ಣ ಅವರು ಕರ್ನಾಟಕ ಸರ್ಕಾರದಲ್ಲಿ ಮಂತ್ರಿಗಳಾಗಿದ್ದರು. ಖ್ಯಾತ ಹೃದ್ರೋಗ ತಜ್ಞ ಡಾ. ಸಿ.ಎನ್. ಮಂಜುನಾಥ್ ಅವರು ದೇವೇಗೌಡರ ಅಳಿಯ. ರಾಜಕೀಯದಲ್ಲಿ ರಾಮಕೃಷ್ಣ ಹೆಗಡೆ ಯವರನ್ನು ಮಿತ್ರರನ್ನಾಗಿಸಿ ಕೊಂಡರು.

ಸಾರ್ವಜನಿಕ ಜೀವನ

[ಬದಲಾಯಿಸಿ]

೧೯೫೩ರಲ್ಲಿ ಕಾಂಗ್ರೆಸ್ ಪಕ್ಷದ ಸದಸ್ಯರಾದರು. ೧೯೬೨ ರವರೆಗೆ ಕಾಂಗ್ರೆಸ್ ಪಕ್ಷದಲ್ಲಿದ್ದು ನಂತರ, ಸ್ವತಂತ್ರ ಅಭ್ಯರ್ಥಿಯಾಗಿ ಚುನಾವಣೆಗೆ ನಿಂತು ವಿಧಾನ ಸಭೆಗೆ ಚುನಾಯಿತರಾದರು.[]

ಮುಂದಿನ ಮೂರು ಚುನಾವಣೆಗಳಲ್ಲಿ ಸತತವಾಗಿ ಹೊಳೆನರಸೀಪುರ ಕ್ಷೇತ್ರದಿಂದ ವಿಧಾನಸಭೆಗೆ ಚುನಾಯಿತರಾದರು. ೧೯೭೨ ರಿಂದ ೧೯೭೬ ರವರೆಗೆ ಮತ್ತು ನವೆಂಬರ್ ೧೯೭೬ ರಿಂದ ೧೯೭೭ ರ ವರೆಗೆ ವಿಧಾನಸಭೆಯಲ್ಲಿ ವಿರೋಧಪಕ್ಷದ ನಾಯಕರಾಗಿದ್ದರು. ೧೯೭೫-೭೬ತುರ್ತು ಪರಿಸ್ಥಿತಿಯಲ್ಲಿ ಬಂಧನಕ್ಕೊಳಗಾಗಿದ್ದ ದೇವೇಗೌಡರು ನಂತರ ಕರ್ನಾಟಕ ಸರ್ಕಾರದಲ್ಲಿ ಲೋಕೋಪಯೋಗಿ ಮತ್ತು ನೀರಾವರಿ ಖಾತೆಗಳ ಸಚಿವರಾದರು. ೧೯೮೭ರಲ್ಲಿ ನೀರಾವರಿ ಖಾತೆಗೆ ಸಾಕಷ್ಟು ಹಣ ಮಂಜೂರು ಮಾಡದೆ ಇದ್ದುದರ ಹಿನ್ನೆಲೆಯಲ್ಲಿ ಸಚಿವ ಸ್ಥಾನಕ್ಕೆ ರಾಜೀನಾಮೆಯನ್ನು ನೀಡಿದರು. ೧೯೯೧ರಲ್ಲಿ ಹಾಸನ ಲೋಕಸಭಾ ಕ್ಷೇತ್ರದಿಂದ ಲೋಕಸಭೆಗೆ ಚುನಾಯಿತರಾದರು.

ಮುಖ್ಯಮಂತ್ರಿ

[ಬದಲಾಯಿಸಿ]

ಇದರ ನಂತರ ಜನತಾ ದಳಕ್ಕೆ ರಾಜ್ಯಾಧ್ಯಕ್ಷರಾದ ದೇವೇಗೌಡರು ೧೯೯೪ ರಲ್ಲಿ ಕರ್ನಾಟಕ ರಾಜ್ಯದ ೧೪ ನೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು.[೧೦][೧೧][೧೨]

ಪ್ರಧಾನಮಂತ್ರಿ

[ಬದಲಾಯಿಸಿ]

೧೯೯೬ ರಲ್ಲಿ ಯಾವ ಒಂದು ರಾಜಕೀಯ ಪಕ್ಷಕ್ಕೂ ಲೋಕಸಭೆಯಲ್ಲಿ ಸ್ಪಷ್ಟ ಬಹುಮತವಿರಲಿಲ್ಲ. ಆಗ ಯುನೈಟೆಡ್ ಫ್ರಂಟ್ (ಕಾಂಗ್ರೆಸ್ ಹೊರತು ಮತ್ತು ಬಿಜೆಪಿ ಹೊರತುಪಡಿಸಿದ ಪ್ರಾದೇಶಿಕ ಪಕ್ಷಗಳ ಒಂದು ಸಂಘ) ಕಾಂಗ್ರೆಸ್ ಬೆಂಬಲದೊಂದಿಗೆ ಕೇಂದ್ರದಲ್ಲಿ ಸರ್ಕಾರ ರಚಿಸಲು ನಿರ್ಧರಿಸಿದರು. ಅನಿರೀಕ್ಷಿತವಾಗಿ, ದೇವೇಗೌಡರು ಸರ್ಕಾರದ ಮುಖ್ಯಸ್ಥರಾಗಿ ಆಯ್ಕೆಯಾದರು ಮತ್ತು ಭಾರತದ 11 ನೇ ಪ್ರಧಾನಿಯಾದರು. ಅವರು 1 ಜೂನ್ 1996 ರಂದು ಭಾರತದ ಪ್ರಧಾನ ಮಂತ್ರಿಯಾಗಿ ಅಧಿಕಾರ ವಹಿಸಿಕೊಂಡರು ಮತ್ತು 1997 ರ ಏಪ್ರಿಲ್ 21 ರವರೆಗೆ ಅಧಿಕಾರದಲ್ಲಿ ಮುಂದುವರೆದರು. ಅಲ್ಲದೆ, ಅವರು ಯುನೈಟೆಡ್ ಫ್ರಂಟ್‌ನ ಸ್ಟೀರಿಂಗ್ ಕಮಿಟಿಯ ಅಧ್ಯಕ್ಷರಾಗಿದ್ದರು.[೧೩] ದೆಹಲಿ ಮೆಟ್ರೋ ಯೋಜನೆಯ ಕೀರ್ತಿ ಅವರು ಸಲ್ಲುತ್ತದೆ.[೧೪] ನಂತರದ ವರ್ಷಗಳಲ್ಲಿ ಜಾತ್ಯತೀತ ಜನತಾ ದಳದ ರಾಷ್ಟ್ರಾಧ್ಯಕ್ಷರಾಗಿದ್ದಾರೆ.

ಉಲ್ಲೇಖಗಳು

[ಬದಲಾಯಿಸಿ]
  1. Depar of Justice; Ministry of Law & Justice; Government of India. "H. D. Deve Gowda". doj.gov.in. Retrieved 13 December 2021. [H. D.] Deve Gowda [...] served as the 11th Prime Minister of India from June 1996 to April 1997.
  2. "Leaders of the Opposition of Karnataka Legislative Assembly since 1962". kla.kar.nic.in. Retrieved 2021-08-09.
  3. "Shri H. D. Deve Gowda". pmindia.gov.in.
  4. "Britannica article".
  5. "JDS Leader: H. D. Deve Gowda Profile". janata.in. {{cite web}}: |archive-url= requires |archive-date= (help)
  6. "Asiaweek article".
  7. "New Indian Express article". Archived from the original on 2014-03-29. Retrieved 2017-06-11.
  8. "Deve Gowda goes down memory lane". The Hindu.
  9. Maitra, Susan; Maitra, Ramtanu. "The 'leftist' United Front takes the helm" (PDF). Executive Intelligence Review. larouchepub.com. p. 45.
  10. "Janata Dal (Secular)". Janatadalsecular.org.in. Archived from the original on 2012-08-04. Retrieved 2017-06-11. {{cite web}}: More than one of |archivedate= and |archive-date= specified (help); More than one of |archiveurl= and |archive-url= specified (help)
  11. "Janata Dal Secular". Janata.in. Archived from the original on 2011-10-07. Retrieved 2017-06-11.
  12. "Janata Dal (Secular)". Janatadalsecular.org.in. Archived from the original on 2012-08-04. Retrieved 2017-06-11. {{cite web}}: More than one of |archivedate= and |archive-date= specified (help); More than one of |archiveurl= and |archive-url= specified (help)
  13. https://web.archive.org/web/20100925020517/http://www.janata.in/index.php?option=com_content&view=article&id=55&Itemid=62
  14. https://timesofindia.indiatimes.com/india/the-derailment-of-e-sreedharan/articleshow/81295358.cms