ಕರ್ನಾಟಕ ರತ್ನ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಕರ್ನಾಟಕ ರತ್ನ
ಪ್ರಶಸ್ತಿಯ ವಿವರ
ಮಾದರಿ ನಾಗರಿಕ
ವರ್ಗ ಸಾರ್ವಜನಿಕ
ಪ್ರಾರಂಭವಾದದ್ದು ೧೯೯೧
ಮೊದಲ ಪ್ರಶಸ್ತಿ ೧೯೯೨
ಕಡೆಯ ಪ್ರಶಸ್ತಿ ೨೦೦೯
ಒಟ್ಟು ಪ್ರಶಸ್ತಿಗಳು
ಪ್ರಶಸ್ತಿ ನೀಡುವವರು ಕರ್ನಾಟಕ ಸರ್ಕಾರ
ವಿವರ ಕರ್ನಾಟಕ ದ ಅತ್ಯುನ್ನತ ನಾಗರಿಕ ಪ್ರಶಸ್ತಿ
ಮೊದಲ ಪ್ರಶಸ್ತಿ ಪುರಸ್ಕೃತರು ಕುವೆಂಪು
ಕೊನೆಯ ಪ್ರಶಸ್ತಿ ಪುರಸ್ಕೃತರು ಡಾ. ವೀರೇಂದ್ರ ಹೆಗ್ಗಡೆ
ಪ್ರಶಸ್ತಿಯ ಶ್ರೇಣಿ
none ← ಕರ್ನಾಟಕ ರತ್ನರಾಜ್ಯೋತ್ಸವ ಪ್ರಶಸ್ತಿ

ಕರ್ನಾಟಕ ರತ್ನ ಕರ್ನಾಟಕ ರಾಜ್ಯದ ಅತ್ಯುನ್ನತ ನಾಗರಿಕ ಪ್ರಶಸ್ತಿ. ಈ ಪ್ರಶಸ್ತಿಯನ್ನು ಯಾವುದೇ ಕ್ಷೇತ್ರದಲ್ಲಿ ಅಸಾಧಾರಣ ಕೊಡುಗೆಯನ್ನು ನೀಡಿದ ವ್ಯಕ್ತಿಗಳಿಗೆ ನೀಡಲಾಗುತ್ತದೆ. ಈ ಪ್ರಶಸ್ತಿಯನ್ನು ೧೯೯೨ರಲ್ಲಿ ಪ್ರಾರಂಭಿಸಲಾಯಿತು.[೧] . ಒಟ್ಟಾರೆ ಇದುವರೆಗೆ ೯ ವ್ಯಕ್ತಿಗಳಿಗೆ ಈ ಪ್ರಶಸ್ತಿಯನ್ನು ನೀಡಲಾಗಿದೆ.

ಪ್ರಶಸ್ತಿ[ಬದಲಾಯಿಸಿ]

ಈ ಪ್ರಶಸ್ತಿಯು ೫೦ ಗ್ರಾಂ ತೂಕದ ಚಿನ್ನದ ಪದಕ, ಸನ್ಮಾನ ಪತ್ರ, ನೆನಪಿನ ಕಾಣಿಕೆ ಮತ್ತು ಒಂದು ಶಾಲನ್ನು ಒಳಗೊಂಡಿರುತ್ತದೆ.

ಪ್ರಶಸ್ತಿ ಪುರಸ್ಕೃತರು[ಬದಲಾಯಿಸಿ]

ಕ್ರ.ಸಂ ಹೆಸರು ಜನನ / ಮರಣ ಗೌರವಿಸಿದ್ದು ಟಿಪ್ಪಣಿ
೧. ಕುವೆಂಪು ೧೯೦೪–೧೯೯೪ ೧೯೯೨ ಸಾಹಿತ್ಯ.
೨. ಡಾ. ರಾಜ್‌ಕುಮಾರ್ ೧೯೨೯–೨೦೦೬ ೧೯೯೨ ಸಿನೆಮಾ
೩. ಎಸ್. ನಿಜಲಿಂಗಪ್ಪ [೨] ೧೯೦೨–೨೦೦೦ ೧೯೯೯ ರಾಜಕೀಯ
೪. ಸಿ ಎನ್ ಆರ್ ರಾವ್ [೩] b. ೧೯೩೪ ೨೦೦೦ ವಿಜ್ಞಾನ
೫. ದೇವಿ ಪ್ರಸಾದ್ ಶೆಟ್ಟಿ b. ೧೯೫೩ ೨೦೦೧ ವೈದ್ಯಕೀಯ
೬. ಭೀಮಸೇನ ಜೋಷಿ ೧೯೨೨–೨೦೧೧ [೪] ೨೦೦೫ ಸಂಗೀತ
೭. ಶ್ರೀ ಶಿವಕುಮಾರ ಸ್ವಾಮಿಗಳು [೫] b. ೧೯೦೭ ೨೦೦೭ ಸಾಮಾಜಿಕ ಸೇವೆ
೮. ಡಾ. ಡಿ. ಜವರೇಗೌಡ [೧] b. ೧೯೧೮ ೨೦೦೮ ಶಿಕ್ಷಣ, ಸಾಹಿತ್ಯ
೯. ಡಾ. ವೀರೇಂದ್ರ ಹೆಗ್ಗಡೆ [೧] b. ೧೯೪೮ ೨೦೦೯ ಸಾಮಾಜಿಕ ಸೇವೆ, ಲೋಕೋಪಕಾರಿ ಕೆಲಸ

ಉಲ್ಲೇಖಗಳು[ಬದಲಾಯಿಸಿ]

  1. ೧.೦ ೧.೧ ೧.೨ ಕರ್ನಾಟಕ ಸರ್ಕಾರ ದಿಂದ ಜವರೆ ಗೌಡ ಅವರಿಗೆ ಕರ್ನಾಟಕ ರತ್ನ, ವೀರೇಂದ್ರ ಹೆಗ್ಗಡೆ
  2. A home of mementoes
  3. ಸಿ.ಎನ್.‌ಆರ್ ರಾವ್ ರವರಿಗೆ ಕರ್ನಾಟಕ ರತ್ನ
  4. Karnataka declares day’s mourning to condole Joshi's death
  5. Siddaganga seer receives Karnataka ratna