ಭರತನಾಟ್ಯ

ವಿಕಿಪೀಡಿಯ ಇಂದ
Jump to navigation Jump to search
ಭರತನಾಟ್ಯವು ದಕ್ಷಿಣ ಭಾರತದ ಒಂದು ಪಾರಂಪರಿಕ ನೃತ್ಯ ಕಲೆ. ಭರತಮುನಿಯಿಂದ ರಚಿಸಲ್ಪಟ್ಟ ನಾಟ್ಯ ಶಾಸ್ತ್ರ ಕೃತಿಯಲ್ಲಿ ಇದರ ಮೊದಲ ಉಲ್ಲೇಖವಿರುವುದರಿಂದ ಭರತನಾಟ್ಯ ಎಂದು ಕರೆಯಲ್ಪಟ್ಟಿದೆ. ಭರತ ಮುನಿಯಿಂದ ರಚಿಸಲ್ಪ್ಟಟ್ಟ ನಾಟ್ಯ ಶಾಸ್ತ್ರದ ಕೃತಿಯಲ್ಲಿ ಉಲ್ಲೇಖ ಇರುವುದರಿಂದ ಭರತನಾಟ್ಯ ಎಂದು ಕರೆಯಲ್ಪಡುವುದು ಸರಿಯಾದ ಉತ್ತರ ಅಲ್ಲವೇ ಅಲ್ಲ. ಭರತ ಎನ್ನುವ ಶಬ್ದಕ್ಕೆ ಹಲವಾರು ಅರ್ಥಗಳಿದ್ದರೂ ನಾಟ್ಯ ಎನ್ನುವ ಶಬ್ದದ ಹಿಂದೆ ಸರಿಯಾದ ಅರ್ಥವನ್ನು ಹೇಳಿ ಭರತ ನಾಟ್ಯ ಎನ್ನುವ ಪದಕ್ಕೆ ಸರಿಯಾದ ನಿರೂಪಣೆ ಕೊಡಬೇಕು. ಅದಕ್ಕೆ ಸಂಸ್ಕೃತ ಜ್ಞಾನ, ಗ್ರಾಮ್ಯ ಭಾಷೆಯ ಜ್ಞಾನ ಇರಬೇಕು. ಭರತ ಎನ್ನುವ ಪದಕ್ಕೆ ಯಾವುದೋ ಒಂದು ಅರ್ಥವನ್ನು ಕಲ್ಪಿಸಿಕೊಂಡು ಹೇಳುವುದು ಸರಿಯಲ್ಲ. ಪುರಂದರ ದಾಸವರೇಣ್ಯರು "ಆಡಿದನೋ ರಂಗ " ಎನ್ನುವ ಪದದಲ್ಲಿ ಭರತನಾಟ್ಯದ ವರ್ಣನೆಯನ್ನು ಮಾಡಿದ್ದಾರೆ.ಇತ್ತೀಚಿನ ದಿನಗಳಲ್ಲಿ ಮಾಡುವ ಭರತನಾಟ್ಯವನ್ನು "ಭರತ ಡಿಸ್ಕೋ ನೃತ್ಯ" ವೆಂದೋ, ಮತ್ತೇನೋ ಕರೆಯದಂತೆ ಕಾಳಜಿವಹಿಸಬೇಕು.
nature
ಎಲ್ಲರೂ ಭರತನಾಟ್ಯ ಎಂದರೆ "ಭ" = ಭಾವ, "ರ"=ರಾಗ, "ತ" = ತಾಳ ಎಂದು ಅರ್ಥವನ್ನು ಹೇಳುತ್ತಾ ಬಂದಿದ್ದಾರೆ. ಇದು ಸರಿಯೇ ? ಈಗ ಮಾಡುವ ಭರತನಾಟ್ಯದಲ್ಲಿ ಮಾತ್ರ "ಭಾವ, ರಾಗ, ತಾಳ, ಇರುವುದೇ ? ಬೇರೆ ಯಾವ ನೃತ್ತ್ಯ ಶೈಲಿ, ಸಂಪ್ರದಾಯ (ಅಂದರೆ ಕಥಕ್ಕಳಿ, ಮೋಹಿನಿಯಟ್ಟಂ, ಕೂಚುಪುಡಿ, ಒಡಿಸ್ಸಿ,,ಮಣಿಪುರಿ, ಕಥಕ್ )ಗಳಲ್ಲಿ ಇಲ್ಲವೆಂದ ಹಾಗೆಯಲ್ಲವೇ ?ಬೇರೆ ನೃತ್ತ್ಯಗಳನ್ನು ಭರತನಾಟ್ಯ ಎಂದು ಯಾಕೆ ಕರೆಯುವುದಿಲ್ಲ, ಈಗ ಮಾಡುವ ಭರತ ನೃತ್ತ್ಯವನ್ನು ಮಾತ್ರ ಭರತನಾಟ್ಯ ಎಂದು ಕರೆಯಲು ಕಾರಣ ಏನು? ಭರತನಾಟ್ಯದ ಸ್ವರೂಪ ಹೇಗೆ ಇರಬೇಕು?ಯಾವ ಕಾರಣಕ್ಕಾಗಿ , ಯಾವ ಉದ್ದೇಶಕ್ಕಾಗಿ ಭರತನಾಟ್ಟ್ಯ ಎಂದು ಕರೆಯುತ್ತಾರೆ.ಭರತ ಎನ್ನುವ ಶಬ್ದಕ್ಕೆ ಭಾವ, ರಾಗ, ತಾಳ ಎನ್ನುತ್ತಾ ಅರ್ಥೈಸಿದರೆ ಕಾಲಿಗೆ ಗೆಜ್ಜೆ ಕಟ್ಟಿ , ಮುಖಕ್ಕೆ ಬಣ್ಣ ಹಾಕಿಕೊಂಡು ಕುಣಿಯಬೇಕೆಂದೆನಿಲ್ಲ . ಬರೇ ಹಾಡುಗಾರಿಕೆ ಮಾಡಿದರೆ ಸಾಕಾಗುತ್ತದೆ. ಹಾಡುವುದರಲ್ಲಿ ಭಾವ, ರಾಗ, ತಾಳ (ಸಂಗೀತ) ಇದೆ. ಹಾಡುವುದನ್ನು ಭರತನಾಟ್ಯ ಎಂದು ಯಾಕೆ ಕರೆಯುವುದಿಲ್ಲ.

ಭರತನಾಟ್ಯ

 • ಭರತನಾಟ್ಯದಲ್ಲಿ ಹಲವಾರು ನೃತ್ಯ ಸಂಪ್ರದಾಯಗಳು ಇವೆ.
 • ಮೈಸೂರು ಶೈಲಿ,
 • ತಂಜಾವುರು ಶೈಲಿ,
 • ಕಲಾಕ್ಷೇತ್ರ ಶೈಲಿ,
 • ವೇಜೂರ್ ಶೈಲಿ,
 • ಮೆಲ್ತೂರ್ ಶೈಲಿ,
 • ಪಂದನಲ್ಲೂರ್ ಶೈಲಿ,
 • ಕಾಂಚೀಪುರಂ ಶೈಲಿ,

' ಎಂದು ನೃತ್ಯ ಸಂಪ್ರದಾಯಗಳು.

 • ಅದರಲ್ಲಿ ಮೈಸೂರು ಶೈಲಿಯಲ್ಲಿ ಮೂಗೂರು ಸಂಪ್ರದಾಯ' ಒಂದು. ಸಂಗೀತ ವಿದ್ವಾನ್ ಮೂಗೂರು ಸುಬ್ಬಣ್ಣ ,ಸಂಗೀತ ವಿದ್ವಾನ್ ಮೂಗೂರು ಸುಬ್ಬಣ್ಣ ರವರ ಭಾವ-ಮೈದುನ,ಮೂಗೂರು ಅಮೃತಪ್ಪನವರು,ಮೂಗೂರು ಜೇಜಮ್ಮನವರು,ಕೊಡವೂರು ಭಾಗವತ ಮಾಧವ ರಾವ್', ಪ್ರಮುಖರು

ಮೂಗೂರು ಭರತನಾಟ್ಯ ಸಂಪ್ರದಾಯದ ಪಾಠದ ಕ್ರಮ

 • ಅಂಗ ಸಾಧನೆ,
 • ಅಡವುಗಳು,
 • ಒಂದು ಜತಿ,
 • ಅಲರಿಪು,
 • ಜತಿಸ್ವರ,
 • ಶಬ್ದಂ,
 • ವರ್ಣ,
 • ದೇವರನಾಮ,
 • ಜಾವಳಿ,
 • ಶ್ಲೋಕ,
 • ತಿಲ್ಲಾನ.'

ನೋಡಿ[ಬದಲಾಯಿಸಿ]

ಆಧಾರ[ಬದಲಾಯಿಸಿ]

http://www.indianmirror.com/dance/bharatanatyam.html

https://en.wikiquote.org/wiki/Bharatanatyam

http://www.cyberkerala.com/bharatanatyam/