ವಿಷಯಕ್ಕೆ ಹೋಗು

ಅಲರಿಪು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಅಲರಿಪು ಭರತನಾಟ್ಯ ಮತ್ತು ಇತರ ನೃತ್ಯ ಪ್ರದರ್ಶನಗಳಲ್ಲಿ ದೇವಾಧಿದೇವತೆಗಳಿಗೆ ಪ್ರಾರ್ಥನಾರೂಪವಾಗಿ ಮಾಡುವ ಪ್ರಥಮ ನೃತ್ತ[][].

ಲಕ್ಷಣ

[ಬದಲಾಯಿಸಿ]

ಸಾಂಪ್ರದಾಯಿಕ ಭರತನಾಟ್ಯ ಕಾರ್ಯಕ್ರಮದ ಆರಂಭ ಅಲಾರಿಪುವಿನಿಂದ. ಅಲಾರಿಪುವಿಗೆ 'ಅಲರಿಪು' , 'ಅಲಾರಿಪು' , 'ಅಲರಿಪ್ಪು' ಎಂದು ಕರೆಯುವುದು ರೂಢಿ.ಅಲರಿಪು ಒಂದು ನೃತ್ತಬಂಧವಾಗಿದೆ. ಇದರಲ್ಲಿ ಅಭಿನಯವಿರುವುದಿಲ್ಲ. ಆದರೆ ಈ ನೃತ್ತದ ಪ್ರತೀ ಚಲನೆಗಳಿಗೂ ಕೂಡ ಸಾಕೇತಿಕವಾದ ಅರ್ಥವಿದೆ. ಇನ್ನು ಕೆಲವರು ಅಲರಿಪು ಎಂದರೆ ಅರಳುವಿಕೆ. ಆತ್ಮ ಚಲನೆಯ ಮೂಲಕ ಅರಳಿ ದೈವಕ್ಕೆ ಅರ್ಪಿತವಾಗುವುದು ಎಂದು ಹೇಳುತ್ತಾರೆ. ಮತ್ತೂ ಕೆಲವರು ಅಲರಿಪುವನ್ನು ಗೋಪಿಕಾವಸ್ತ್ರಾ ಪರಣದ ತಿರುಳನ್ನೊಳಗೊಂಡು, ತಾನು, ತನ್ನದು ಎಂಬ ಅಹಂಭಾವವನ್ನು ತ್ಯಜಿಸಿ ದೇವರಿಗೆ ಶರಣಾಗಿ ಪ್ರಾರ್ಥಿಸುವ ನೃತ್ಯ ಎಂದು ಪರಿಗಣಿಸುತ್ತಾರೆ. ಇದನ್ನು ಕರ್ಣಾಟಕ ಸಂಗೀತಪದ್ಧತಿಯ ಚತುರಶ್ರ, ತ್ರಿಶ್ರ, ಮಿಶ್ರ, ಖಂಡ, ಸಂಕೀರ್ಣ, ಎಂಬ ಐದು ಮೂಲಜಾತಿಗಳಲ್ಲಿ ನರ್ತಿಸಬಹುದು. ಆದರೆ ಸಾಮಾನ್ಯವಾಗಿ ನಾವು ತ್ಯಶ್ರ, ಮಿಶ್ರ, ಚತುರಶ್ರ, ಜಾತಿಗಳಲ್ಲಿ ಅಲರಿಪು ಪ್ರದರ್ಶನವನ್ನು ಕಾಣ್ಬಹುದು. ಖಂಡ ಮತ್ತು ಸಂಕೀರ್ಣ ಜಾತಿಯ ಅಲರಿಪುಗಳು ಪ್ರದರ್ಶನಗಳು ಸ್ವಲ್ಪ ಅಪರೂಪ.


ನರ್ತಿಸುವ ವಿಧಾನ

[ಬದಲಾಯಿಸಿ]

ಕೈಗಳನ್ನು ಅಂಜಲಿ ಬದ್ಧವಾಗಿ ಹಿಡಿದು ಕೊಂಡು ಸಮಪಾದಿಂದ ನೃತ್ತದ ಆರಂಭವಾಗುತ್ತದೆ. ಕಣ್ಣು ಮತ್ತು ಹುಬ್ಬುಗಳ ಸೂಕ್ತ ಚಲನೆ ಮುಖ್ಯವಾದ ಅಂಶ. ಕತ್ತನು ಮೊದಲು ಬಲಕ್ಕೆ ನಂತರ ಎಡಕ್ಕೆ ಚಲಿಸಿದರೆ ಸೂರ್ಯ ಚಂದ್ರರಿಗೆ ವಂದಿಸಿದಂತೆ ಎಂದು ಅರ್ಥವಿದೆ. ತ‌‌ಲೆಯಿಂದ ಮೊದಲ್ಗೊಂಡು ಕ್ರಮೇಣ ಕತ್ತು ಭುಜ ತೋಳುಗಳು ಸೊಂಟ ಮತ್ತು ಕಾಲುಗಳವರೆಗೆ ಅನುಕ್ರಮದಲ್ಲಿದ್ದು ದ್ವಿತೀಯ ತೃತೀಯ ಕಾಲಗಳಲ್ಲಿ ತಾಳಲಯಬದ್ಧವಾಗಿ ನರ್ತಿಸತಕ್ಕದ್ದು. ಅಲರಿಪುವಿನಲ್ಲಿ ತಲೆಯ ಮೊದಲ ಚಲನೆಗಳು ತ್ರಿಮೂರ್ತಿಗಳಾದ ಬ್ರಹ್ಮ ವಿಷ್ಣು ಮಹೇಶ್ವರರಿಗೆ ವಂದನೆಗಳು ಎಂದು ಕೆಲವರು ತಜ್ಞರು ಅಭಿಪ್ರಾಯ ಪಡುತ್ತಾರೆ.

ಅಂಜಲಿ ಹಸ್ತವನ್ನು ತಲೆಯ ಮೇಲಿಂದ ಮುಖದ ಮುಂದೆ ನಂತರ ಎದೆಯ ಮುಂದೆ ತಂದು ನಮಸ್ಕರಿಸಿ, ಕೈಗಳನ್ನು ಎಡ ಮತ್ತು ಬಲ ಪಾರ್ಶ್ವಗಳಿಗೆ ಚಾಚಿ ಪತಾಕ ಹಸ್ತವನ್ನು ಹಿಡಿಯುವುದು ರೂಢಿ. ಅಂಜಲಿ ಹಸ್ತವನ್ನು ತಲೆಯ ಮೇಲಿರಿಸಿದರೆ ದೇವರಿಗೂ, ಮುಖದ ಮುಂದಿರಿಸಿದರೆ ಗುರು , ಹಿರಿಯರಿಗೂ ಹಾಗೂ ಎದೆಯ ಮುಂದಿರಿಸಿದರೆ ಮಹಾ ಸಭೆಗೂ ವಂದಿಸಿದಂತೆ ಎಂಬ ಅರ್ಥವಿದೆ.

ಉಲ್ಲೇಖಗಳು

[ಬದಲಾಯಿಸಿ]
  1. Roy, Sujoya (June 15, 2005). For Ganesh, Remover of Obstacles. iUniverse, Inc. p. 219. ISBN 0-595-34556-5.
  2. Faubion Bowers (1953). "The dance in India". Columbia University Press: 48–50. {{cite journal}}: Cite journal requires |journal= (help)
ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ:
"https://kn.wikipedia.org/w/index.php?title=ಅಲರಿಪು&oldid=1050873" ಇಂದ ಪಡೆಯಲ್ಪಟ್ಟಿದೆ