ವಿಷಯಕ್ಕೆ ಹೋಗು

ಭರತ ನಾಟ್ಯಂ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಭರತ ನಾಟ್ಯಂ
ಭರತ ನಾಟ್ಯಂ ನೃತ್ಯಗಾತಿ
Genreಶಾಸ್ತ್ರೀಯ ನೃತ್ಯ
Countryಭಾರತ
ಈ ಭರತ ನಾಟ್ಯಂ ನರ್ತಕಿಯ ಬಲಗೈ ಕಟಕಮುಖ ಹಸ್ತ ಭಂಗಿಯಲ್ಲಿದೆ, ಮೂರು ಸೇರಿದ ಬೆರಳುಗಳು ಪವಿತ್ರ ಅಕ್ಷರ ಓಂ ನ್ನು ಸಂಕೇತಿಸುತ್ತದೆ ಎಡಗೈ ಅಲಪದ್ಮ ಹಸ್ತ ಭಂಗಿಯಾಲ್ಲಿದ್ದು,, ಆಧ್ಯಾತ್ಮಿಕ ಬೆಳಕಿನ ಕಮಲದ ಆಕಾರದಲ್ಲಿದೆ. ಕಣ್ಣುಗಳು ಭಗವಂತನೆಡೆಗ ನೋಡುತ್ತಿದ್ದು,ಭೂಮಿಯಿಂದ ಸ್ವರ್ಗದೆಡೆಗೆ ಅವರೋಹಣ ಗೈಯುವ ಭಂಗಿಯಲ್ಲಿ ಎಡಗಾಲು ಸ್ವಲ್ಪ ಎತ್ತಲ್ಪಟ್ಟಿದೆ.

ಭರತ ನಾಟ್ಯಂ ವು ಒಂದು ಶಾಸ್ತ್ರೀಯ ನೃತ್ಯ ಪ್ರಕಾರವಾಗಿದ್ದು,ದಕ್ಷಿಣ ಭಾರತದಲ್ಲಿ ಹೆಚ್ಚು ಪ್ರಚಲಿತದಲ್ಲಿದೆ. ಇದು ಮುಖ್ಯವಾಗಿ ಮಹಿಳೆಯರಿಂದ ಮಾಡಲ್ಪಡುವ ನೃತ್ಯ ವಾಗಿದೆ. ನೃತ್ಯಕ್ಕೆ ಪೂರಕವಾಗಿ ಶಾಸ್ತ್ರೀಯ ಕರ್ನಾಟಕ ಸಂಗೀತ ಇರುತ್ತದೆ.ಇದರ ಕಾಲಮಾನ ಸುಮಾರು ಕ್ರಿ.ಪೂ.೧೦೦೦ [೧] ಈ ನೃತ್ಯಕ್ಕೆ ಪ್ರಾಚೀನ ಚಿದಂಬರಂ ದೇವಾಲಯದ ಶಿಲ್ಪಗಳು ಸ್ಪೂರ್ತಿ ಯಾಗಿವೆ. ಇದಕ್ಕೆ ಶಾಸ್ತ್ರೀಯ ನೆಲೆಗಟ್ಟನ್ನು ತಂಜಾವುರ್ ಚತುಶ್ಚಯರು ಎಂದು ಹೆಸರಾದ ನಾಲ್ಕು ಜನ ಸಹೋದರರು ಒದಗಿಸಿದರು. ಇವರ ಸಂಗೀತ ಸಂಯೋಜನೆಗಳೇ ಇಂದಿನ ಭರತನಾಟ್ಯ ರಂಗ ಗೀತೆಗಳಾಗಿ ಬಳಕೆಯಲ್ಲಿವೆ.

ಸಂಪ್ರದಾಯವಾದಿ ಬೇರುಗಳು[ಬದಲಾಯಿಸಿ]

ಭರತ ನಾಟ್ಯಂ : ಶಿವ ನಟರಾಜನ ಭಂಗಿ
 • ಪ್ರಾಚೀನ ಕಾಲದಲ್ಲಿ ಭರತ ನಾಟ್ಯಂನ್ನು ದೇವಾಲಯಗಳಲ್ಲಿ (ದೇವಸ್ಥಾನ) ದೇವದಾಸಿಯರ ಮೂಲಕ "ಸಾದಿರ್ ಆಟಂ " (ಆಸ್ಥಾನ ನೃತ್ಯ) ಎಂದು ಮಾಡುತ್ತಿದ್ದರು. ಇ ಕೃಷ್ಣ ಅಯ್ಯರ್ ಮತ್ತು ರುಕ್ಮಿಣಿ ದೇವಿ ಅರುಂಡೆಲ್ ೧೯೩೦ ರಲ್ಲಿ "ಭರತನಾಟ್ಯಂ" ಎಂದು "ಸಾದಿರ್ ಆಟಂ"ನ್ನು ಮರುನಾಮಕರಣ ಮಾಡಿದರು [೨][೩][೪] ದೇವಸ್ಥಾನಗಳಲ್ಲಿ ಪ್ರಾಚೀನ ಶಿಲ್ಪಗಳು ಅನೇಕ ಭರತ ನಾಟ್ಯಂನ ಕರಣಗಳು ಅಥವಾ ನೃತ್ಯ ಭಂಗಿಗಳನ್ನು ಆಧರಿಸಿವೆ.
 • ವಾಸ್ತವವಾಗಿ, ಹಲವು ಗ್ರಂಥಗಳಲ್ಲಿ ಚಿತ್ರಿಸಲಾಗಿರುವ ಅಪ್ಸರೆಯರು ಸ್ವರ್ಗದಲ್ಲಿ ಮಾಡಿರುವ ನೃತ್ಯದ ಭೂಮಿ ಮೇಲಿನ ಆವೃತ್ತಿ ಎಂದು ಭರತ ನಾಟ್ಯಂನ್ನು ಹೇಳಬಹುದು. ಸಂಪ್ರದಾಯದಂತೆ ಗುಡಿಯಲ್ಲಿರುವ ದೇವರು ಅಲ್ಲಿಯ ಮುಖ್ಯ ಅತಿಥಿ ಎಂದು ಪರಿಗಣಿಸಲ್ಪಟ್ಟು,ಅವರಿಗೆ ಅರ್ಪಿಸುವ ಹದಿನಾರು ಉಪಚಾರಗಳಲ್ಲಿ ಸಂಗೀತ ಮತ್ತು ನೃತ್ಯವೂ ಒಳಗೊಂಡಿತ್ತು.
 • ಆದುದರಿಂದ,ಭಾರತೀಯ ಆಡಳಿತಗಾರರು ಮಾಡಿದಂತೆ ಸಾಂಪ್ರದಾಯಿಕವಾಗಿ ನಿರ್ವಹಿಸಲ್ಪಡುವ ಹಲವು ಹಿಂದೂ ದೇವಾಲಯಗಳು, ತರಬೇತಿ ಹೊಂದಿದ ಸಂಗೀತಗಾರರು ಮತ್ತು ನೃತ್ಯಗಾರರನ್ನು ಪೋಷಿಸಿವೆ. ಕಲಿಯುಗದಲ್ಲಿ ಭಾರತದ ಹೆಚ್ಚಿನ ಎಲ್ಲಾ ನೃತ್ಯ ಹಾಗೂ ಸಂಗೀತ ಪ್ರಕಾರಗಳು ಭಕ್ತಿಯನ್ನಾಧರಿಸಿವೆ.
 • ಆದುದರಿಂದ ಭರತನಾಟ್ಯಂ ಮತ್ತು ಕರ್ನಾಟಕ ಸಂಗೀತದ ಬೇರುಗಳು ಭಕ್ತಿ ರಸದಲ್ಲಿ ಆಳವಾಗಿ ಬೇರೂರಿವೆ ಭರತ ನಾಟ್ಯಂನ್ನು ಸಂಗೀತದ ದೃಶ್ಯ ರೂಪಕ,ಭಕ್ತಿಯ ಒಂದು ಅಭಿವ್ಯಕ್ತಿ ಎಂದು ಹೇಳಲಾಗುತ್ತದೆ. ಭರತನಾಟ್ಯಂನಲ್ಲಿ ಸಂಗೀತ ಮತ್ತು ನೃತ್ಯ ಬೇರ್ಪಡಿಸಲಾಗದ ರಚನೆಗಳು ಮತ್ತು ಕೇವಲ ಸಂಗೀತದ ಅನುಭೂತಿಯಿಂದ ಮಾತ್ರ ನೃತ್ಯವನ್ನು ಆಸ್ವಾದಿಸಲು ಸಾದ್ಯ.
 • ಭರತನಾಟ್ಯವು ಮೂರು ಮುಖ್ಯ ಅಂಶಗಳನ್ನು ಒಳಗೊಂಡಿದೆ. ನೃತ್ತ (ಲಯಬದ್ಧ ಚಲನೆ) ನಾಟ್ಯ (ನಾಟಕೀಯತೆ) ಮತ್ತು ನೃತ್ಯ (ನೃತ್ತ ಮತ್ತು ನಾಟ್ಯದ ಸಂಯೋಜನೆ)ತಮಿಳುನಾಡು ವಿಶೇಷವಾಗಿ ತಂಜಾವೂರು, ಯಾವಾಗಲೂ ಕಲಿಕೆ ಮತ್ತು ಸಂಸ್ಕೃತಿಯ ಸ್ಥಾನ ಮತ್ತು ಕೇಂದ್ರವಾಗಿದೆ. ಭರತನಾಟ್ಯವು ೧೭೯೮-೧೮೨೪ ರಲ್ಲಿ ಮರಾಠ ರಾಜ ಸರಬೋಜಿಯ ಆಸ್ಥಾನದಲ್ಲಿದ್ದ ಚಿನ್ನಯ್ಯ ,ಪೊನ್ನಯ್ಯ ,ಸಿವಾನಂದಂ ಮತ್ತು ವಡಿವೇಲು ಎಂಬ ನಾಲ್ವರು ಸಹೋದರರ ಕೊಡುಗೆಯಿಂದ ಈಗಿನ ರೂಪ ಪಡೆದಿದೆ.
 • ಈ ನಾಲ್ವರು ಭರತನಾಟ್ಯದ ಎಲ್ಲ ಅಂಶಗಳನ್ನು ಅಂದರೆ ಅಳರಿಪು, ಜಥಿಸ್ವರಂ, ವರ್ಣಂ, ಶಬ್ದಂ, ಪದಂ ಮತ್ತು ತಿಲ್ಲಾನ ವನ್ನು ರೂಪಿಸಿದರು. ಈ ನಾಲ್ಕು ಸಹೋದರರ ವಂಶಸ್ಥರು ತಂಜಾವೂರಿನಲ್ಲಿ ಭರತ ನಾಟ್ಯಂ ನೃತ್ಯ ಶಿಕ್ಷಕರ ಮೂಲ ಪರಂಪರೆ ಬೆಳೆಸಿದರು. ಮೂಲತಃ, ಅವರು ಸ್ವತಃ ಒಂದು ಸಮುದಾಯವಾಗಿ ರೂಪುಗೊಂಡರು ಮತ್ತು ಅವರಲ್ಲಿ ಹೆಚ್ಚಿನವರು ಶೈವ ಪಂಥವನ್ನು ಅನುಸರಿಸುವ ಅಬ್ರಾಹ್ಮಣರಾಗಿದ್ದರು.

ಬೆಂಕಿ ನೃತ್ಯ[ಬದಲಾಯಿಸಿ]

 • ಮಾನವ ದೇಹದಲ್ಲಿರುವ ಬೆಂಕಿಯ ಆಧ್ಯಾತ್ಮಿಕ ಅಂಶದ ಅತೀಂದ್ರಿಯ ಅಭಿವ್ಯಕ್ತಿ ಭರತ ನಾಟ್ಯಂ ಆದುದರಿಂದ ಇದನ್ನು "ಬೆಂಕಿ ನೃತ್ಯ"' ಎಂದು ಪರಿಗಣಿಸಲಾಗುತ್ತದೆ. ಭರತನಾಟ್ಯಂ ಒಡಿಸ್ಸಿ (ನೀರು), ಮೋಹಿನಿಆಟ್ಟಂ (ವಾಯು), ಕೂಚಿಪುಡಿ (ಭೂಮಿಯ) ಮತ್ತು ಕಥಕ್ಕಳಿಯ (ಆಕಾಶ) ಗಳ ಎಲ್ಲ ಅಂಶಗಳನ್ನೂ ಒಳಗೊಂಡಿರುವ ಪ್ರಮುಖ ಶೈಲಿಗಳಲ್ಲಿ ಒಂದಾಗಿದೆ.
 • ಪಾರಂಪರಿಕ ಭರತನಾಟ್ಯಂ ನೃತ್ಯದ ಚಲನೆಗಳು ಜ್ವಾಲೆಯ ಚಲನೆಗಳನ್ನು ಹೋಲುತ್ತವೆ . ಸಮಕಾಲೀನ ಭರತನಾಟ್ಯಂ ಕೆಲವು ಸಾಂಪ್ರದಾಯಿಕ ಶಾಲೆಗಳು ಹೊರತುಪಡಿಸಿ ನಾಟ್ಯ ಯೋಗ, ಎಂದರೆ ಪವಿತ್ರ ಧ್ಯಾನವಾಗಿ ಅನುಸರಿಸಲ್ಪಡುತ್ತಿಲ್ಲ. ಭರತನಾಟ್ಯವು ಚೀನೀ ಸಂಸ್ಕೃತಿಯಲ್ಲಿ ರುವ ಯಿನ್ ಮತ್ತು ಯಂಗ್ ಗೆ ಹೋಲಿಕೆಯಾಗಿ ಎರಡು ಮುಖ್ಯ ಅಂಶಗಳನ್ನು ಹೊಂದಿದೆ. ಒಂದು "ಲಾಸ್ಯ" ಎಂದರೆ ಸ್ತ್ರೀ ಸಹಜ ಚಲನೆ ಮತ್ತು "ತಾಂಡವ"ಎಂದರೆ ಪುರುಷಪ್ರಧಾನ ಚಲನೆ.

ಆಧ್ಯಾತ್ಮಿಕ ಸಂಕೇತ[ಬದಲಾಯಿಸಿ]

 • ಭರತ ನಾಟ್ಯಂ ದೇಹ ಸೌಂದರ್ಯದ ಮೂಲಕ ಬ್ರಹ್ಮಾಂಡದ ಸೌಂದರ್ಯವನ್ನು ಅಭಿವ್ಯಕ್ತಿಸುವ ಒಂದು ಪ್ರಾಚೀನ ಕಲೆಯಾಗಿದೆ. ಕೆಲವು ಭರತ ನಾಟ್ಯಂ ತಂತ್ರಗಳನ್ನು ಕೈಶಿಕಿ ಶೈಲಿಯಲ್ಲಿ ಕಂಡುಕೊಳ್ಳಬಹುದು. ಹೊರತಾಗಿ ಕೈಶಿಕಿ ಶೈಲಿಯಿಂದ, ಭರತ ನಾಟ್ಯಂ ಕೆಲವರು ಆದಿ ರೂಪ. ಹಿಂದೂ ತತ್ವಶಾಸ್ತ್ರ ಪ್ರಕಾರ ಇಡೀ ವಿಶ್ವವೇ ಕೆಡುಕು ನಾಶಕ ದೇವರಾದ ನಟರಾಜನ ರಂಗಮಂದಿರವಾಗಿದೆ.
 • ಶಿವನ ನೃತ್ಯ (ನಟರಾಜನ ರೂಪದಲ್ಲಿ) ಸಂಕೇತರೂಪವಾಗಿ "ಆನಂದ ತಾಂಡವ" ಎಂಬ ನಿಲುವು ಪ್ರತಿನಿಧಿಸುತ್ತದೆ. ಉತ್ತರದಲ್ಲಿ ಮುಸ್ಲಿಂ ದಾಳಿ ಅಲ್ಲಿನ ನಾಟ್ಯ ಪರಂಪರೆಯನ್ನು ಸಂಪೂರ್ಣವಾಗಿ ನಾಶ ಮಾಡಿದಂತೆ ದಕ್ಷಿಣದ ಹಿಂದು ಸಾಮ್ರಾಜ್ಯದ ಪತನದ ನಂತರ ಇಲ್ಲಿಯೂ ನಾಟ್ಯದ ಬೆಳವಣಿಗೆಯಲ್ಲಿ ಇಳಿಕೆಯನ್ನು ದಾಖಲಿಸಿದೆ. ಪವಿತ್ರ ನೃತ್ಯ, ಶೋಡಷ ಉಪಚಾರಗಳಲ್ಲಿ ಒಂದಾಗಿದ್ದು ಮುಂದಿನ ದಿನಗಳಲ್ಲಿ ಇದರ ಬದಲು ಅಕ್ಕಿ ಸಮರ್ಪಣೆಯ ಪದ್ಧತಿ ಜಾರಿಗೆ ಬಂದಿತು.

ಪುನರುಜ್ಜೀವನ ಮತ್ತು ಸಮಕಾಲೀನ ರೂಪ[ಬದಲಾಯಿಸಿ]

ಭರತ ನಾಟ್ಯಂ ಬ್ಯಾಲೆ
 • ಇ ಕೃಷ್ಣ ಅಯ್ಯರ್ ರವರು ಭರತ ನಾಟ್ಯಂನ ಸಾಮಾಜಿಕ ಸ್ಥಾನಮಾನ ಬೆಳೆಸಿದ ಮತ್ತು ಅದನ್ನು ಜನಪ್ರಿಯಗೊಳಿಸಿದ ಮಹನೀಯರಲ್ಲಿ ಒಬ್ಬರು..[೫] ರುಕ್ಮಿಣಿ ದೇವಿ ಅರುಂಡೇಲ್ ಇದನ್ನು ಪಾಶ್ಯಾತ್ಯರ ಗಮನಕ್ಕೆ ತರುವಲ್ಲಿ ಮುಖ್ಯ ಪಾತ್ರವಹಿಸಿದವರು.
 • ಮೂರು ವರ್ಷಗಳ ಪಂದನಲ್ಲೂರ್ ಶೈಲಿಯ ಅಧ್ಯಯನ ನಂತರ, ೧೯೩೬ ರಲ್ಲಿ ರುಕ್ಮಿಣಿ ದೇವಿ ಅರುಂಡೇಲ್ ಭರತ ನಾಟ್ಯಂನ್ನು ತನ್ನದೇ ಆದ ಕಲಾಕ್ಷೇತ್ರ ಶೈಲಿಯಲ್ಲಿ ಕಲಿಸಲು ಮತ್ತು ಭಾರತೀಯ ಸಂಗೀತ ಮತ್ತು ಕಲೆಯಲ್ಲಿ ಇತರ ಅಧ್ಯಯನ, ಪ್ರಚಾರಕ್ಕಾಗಿ ಮದ್ರಾಸ್ ನಗರದ ಹೊರಗೆ ಕಲಾಕ್ಷೇತ್ರ ವನ್ನು ಪ್ರಾರಂಭಿಸಿದರು.
 • ಅವರು ಪುರುಷರಿಗೆ ನೃತ್ಯ ಕಲಿಸಿದ ಮೊದಲ ಶಿಕ್ಷಕಿ . ಅವರು ಸಮೂಹ ನೃತ್ಯ ಮತ್ತು ಭರತ ನಾಟ್ಯಂ ಆಧರಿತ ಬ್ಯಾಲೆಯನ್ನುಕೂಡಾ ಪರಿಚಯಿಸಿದರು ಶ್ರೀ ಶಂಕರ ಮೆನನ್ ಪ್ರಕಾರ, ರುಕ್ಮಿಣಿ ದೇವಿ ಭರತನಾಟ್ಯವನ್ನು ಶುದ್ಧ ಗೊಳಿಸುವ ಸಲುವಾಗಿ ಕೆಲವು ಆಕ್ಷೇಪಾರ್ಹ ಅಂಶಗಳನ್ನು ಎಂದರೆ ಶ್ರಿಂಗಾರಕ್ಕೆ ಸಂಬಂಧಿಸಿದ ಕುತ್ತಿಗೆ,ತುಟಿ,ಸೊಂಟದ ಕೆಲವು ಚಲನೆಗಳನ್ನು ತೆಗೆದು ಹಾಕಿದರು.
 • ಈ ಬದಲಾವಣೆಗಳು ಪಂದನಲ್ಲೂರ್ ಶೈಲಿಯ ಬಾಲಸರಸ್ವತಿ ಮುಂತಾದವರಿಂದ ಟೀಕೆಗೆ ಒಳಗಾಯಿತು ಬಾಲಸರಸ್ವತಿಯವರ ಪ್ರಕಾರ ನವೀನ ಕಲ್ಪನೆಗಳ ಮೂಲಕ ಭರತ ನಾಟ್ಯಂ ಶುದ್ಧೀಕರಣಕ್ಕೆ ಪ್ರಯತ್ನವು" ಹೊಳಪುಕೊಟ್ಟ ಚಿನ್ನದ ಮೇಲೆ ಗ್ಲಾಸ್ ಹಾಕುವ ಅಥವಾ ಕಮಲದ ಮೇಲೆ ಚಿತ್ರ ಬಿಡಿಸಿದಂತೆ " ಇ ಕೃಷ್ಣ ಅಯ್ಯರ್ ಅವರು ರುಕ್ಮಿಣಿ ದೇವಿ ಬಗ್ಗೆ ಬರೆಯುತ್ತ "ಅವರು ಈ ಕ್ಷೇತ್ರ ಪ್ರವೇಶಿಸುವ ಮೊದಲು, ಕಲೆ ಸತ್ತು ಹೋಗಿತ್ತು.
 • ಅವರ ನಂತರ ಆದು ಪುನರುಜ್ಜೀವನ ಕಂಡಿತು" ಎಂದಿದ್ದಾರೆ. ಭರತನಾಟ್ಯ ನೃತ್ಯ ಮಾದರಿಯ ಅಭಿವೃದ್ಧಿ ಗತಿಯಲ್ಲಿ ಹಲವಾರು ವಿವಾದಗಳಿದ್ದರೂ ಇತಿಹಾಸಕಾರ ಆಶೀಶ್ ಕೋಕರ್ ಗುರುತಿಸಿದಂತೆ ಹಲವು ಮಹಿಳೆಯರು ದೇವದಾಸಿ ಪದ್ದತಿಯ ಕೆಲವು ಅಚರಣೆಗಳನ್ನು ತಿರಸ್ಕರಿಸಿದರೂ ನೃತ್ಯಕ್ಕೆ ಸಂಬಂಧಿಸಿದಂತೆ ಹಲವು ಆಚರಣೆಗಳನ್ನು ಅಳವಡಿಸಿಕೊಂಡರು.
 • ಆ ಸಮಯದಲ್ಲಿ ಭರತ ನಾಟ್ಯಂ ಬೋಧನೆಯನ್ನು ಪುರುಷರು ಮಾಡುತ್ತಿದ್ದರೂ ನೃತ್ಯವನ್ನು ಮಹಿಳೆಯರಷ್ಟೇ ಮಾಡುತ್ತಿದ್ದರು. ಸಮಕಾಲೀನ ಭರತ ನಾಟ್ಯಂ ನೃತ್ಯಗಾರರು ಗ್ರಂಥಗಳಲ್ಲಿ ಹೇಳಿದ ವೃತ್ತಿಪರ ನರ್ತಕಿ ನಿರ್ಣಾಯಕ ನಿಯಮದೊಂದಿಗೆ ತಮ್ಮನ್ನು ಗುರುತಿಸಿಕೊಳ್ಳಲು ಬಯಸುವುದಿಲ್ಲ. ಪ್ರಸ್ತುತ, ಭರತ ನಾಟ್ಯಂ ಸಾಮಾನ್ಯವಾಗಿ ದೇವಸ್ಥಾನ ದೇವಾಲಯದ ಒಳಗೆ ಪ್ರದರ್ಶನಗೊಳ್ಳದೆ ಅದರ ಹೊರಗೆ ಮತ್ತು ಜಾತ್ರೆಗಳಲ್ಲಿ ಪ್ರದರ್ಶನಗೊಳ್ಳುತ್ತದೆ.
 • ಅತ್ಯಂತ ಸಮಕಾಲೀನ ಪ್ರದರ್ಶನವು ಸಭಾಂಗಣಗಳಲ್ಲಿ ನೇರ ಮೇಳದೊಂದಿಗೆ ವೇದಿಕೆಯ ಮೇಲೆ ನೀಡಲಾಗುತ್ತದೆ. ಜನಪ್ರಿಯ ಸಂಸ್ಕೃತಿಯಲ್ಲಿ," ಅಳವಡಿಸಿಕೊಂಡ", ಅಥವಾ "ಅರೆ ಶಾಸ್ತ್ರೀಯ",ರೂಪಗಳಲ್ಲಿ ಭರತ ನಾಟ್ಯಂ ಜನಪ್ರಿಯ ಸಿನೆಮಾ ಹಾಗೂ ದೂರದರ್ಶನ ಕಾರ್ಯಕ್ರಮಗಳ ಮೂಲಕ ದೊಡ್ಡ ಚಿತ್ರಣಕ್ಕೆ ಒಳಗಾಗಿದೆ.
 • ಭರತ ನಾಟ್ಯಂ ಕಲಿಕೆಗೆ ಸಾಮಾನ್ಯವಾಗಿ ನಟನಾಗಿ ಅಭಿನಯಿಸಿದ ಆರಂಗೇಟ್ರಮ್ (ಪ್ರಥಮ ಪ್ರದರ್ಶನ )ಕ್ಕೆ ಮೊದಲು ಅನೇಕ ವರ್ಷಗಳು ಬೇಕಾಗುತ್ತದೆ. ಅನೇಕ ದೇಶಗಳಲ್ಲಿ ಶೈಕ್ಷಣಿಕ ಮತ್ತು ವಾಣಿಜ್ಯ ನೃತ್ಯ ಸಂಸ್ಥೆಗಳು ಇವೆ. ಅನೇಕ ಜನರು ಭರತ ನಾಟ್ಯಂ ಜೊತೆಗೆ ಕರ್ನಾಟಕ ಸಂಗೀತವನ್ನೂ ಕಲಿಯಲು ಆಯ್ಕೆ ಮಾಡಿಕೊಳ್ಳುತ್ತಾರೆ .

ಕೌಶಲ್ಯ[ಬದಲಾಯಿಸಿ]

ಈ ಕೆಳಗಿನವುಗಳನ್ನು ಒಳಗೊಂಡಿದೆ

 • ಅಭಿನಯ ಅಥವಾ ನಾಟ್ಯ - ಭರತ ನಾಟ್ಯಂನಲ್ಲಿ ಕಥೆ ಹೇಳುವ ನಾಟಕೀಯ ಕಲೆ
 • ನೃತ್ಯ - ಶುದ್ಧ ನೃತ್ಯ ಚಲನೆಗಳು, ಒಂದು ಮಾಧ್ಯಮವಾಗಿ ಲಯ ದೃಶ್ಯ ಚಿತ್ರಣ- ಸುಧಾರಿತ ಆವ್ರತ್ತಿಯಲ್ಲಿ ನ್ರತ್ತವು ಕರಣಗಳಿಂದ ಕೂಡಿದ್ದರೆ ದೇಸಿ ಪದ್ಧತಿಯಲ್ಲಿ ಅಡವುಗಳಿಂದ ಕೂಡಿದೆ.

ಕರಣಗಳು[ಬದಲಾಯಿಸಿ]

ಕರಣಗಳೆಂದರೆ ಭರತ ನಾಟ್ಯಂ ಮತ್ತು ಇತರ ಭಾರತೀಯ ಶಾಸ್ತ್ರೀಯ ನೃತ್ಯಗಳಲ್ಲಿ ಕಂಡು ಬರುವ ೧೦೮ ಪರಿವರ್ತಯ ಚಲನೆಗಳಾಗಿವೆ.

ಹಸ್ತಗಳು[ಬದಲಾಯಿಸಿ]

 • ಕೈ ಸನ್ನೆಗಳ ಬಳಕೆಯು ಭರತನಾಟ್ಯಂ ನ ವಿಶಿಷ್ಟವಾದ ಒಂದು ಸಂವಹನ ಮಾರ್ಗವಾಗಿದೆ. ಹಸ್ತ ಎಂಬ ಶಬ್ದವು ನರ್ತಕಿ ಬಳಸಬಹುದಾದ ಕೈ ಚಿಹ್ನೆಗಳನ್ನು ಸೂಚಿಸುತ್ತದೆ. ಅನೇಕಈ ಕೈ ಸನ್ನೆಗಳು ಚಿರಪರಿಚಿತ. ಉದಾಹರಣೆಗೆ, ಅಂಜಲಿ ಎಂಬ ಚಲನೆಯನ್ನು ಸಾಮಾನ್ಯವಾಗಿ ವ್ಯಕ್ತಿಯು ಇನ್ನೊಬ್ಬ ವ್ಯಕ್ತಿಯನ್ನು ಸ್ವಾಗತಿಸುತ್ತಿರುವಾಗ ವಂದನೆಗಾಗಿ ಬಳಸಲಾಗುತ್ತದೆ.
 • ತಮಿಳು ಪಠ್ಯ ಕೂಥನೂಲ್ ೩೦೦ ಹಸ್ತ ಮತ್ತು ಮುದ್ರಾಗಳ ವಿವರಣೆಗಳನ್ನು ಒಳಗೊಂಡಿದೆ. ಅಸಂಯುಕ್ತ ಮತ್ತು ಸಂಯುಕ್ತ (ಕ್ರಮವಾಗಿ, ಏಕ ಮತ್ತು ಸಂಯೋಜಿತ):ಎಂಬ ಎರಡು ವಿಧದ ಹಸ್ತಗಳಿವೆ. ನೃತ್ಯಗಳಲ್ಲಿ ಬಳಸುವ ಸನ್ನೆಗಳನ್ನು ನೃತ್ಯ ಹಸ್ತಗಳು ಎಂದು ಕರೆಯಲಾಗುತ್ತದೆ, ಮತ್ತು ನಾಟ್ಯ ಶಾಸ್ತ್ರದಲ್ಲಿ ಕರಣಗಳ ಭಾಗವಾಗಿ ವಿವರ ನೀಡಲಾಗುತ್ತದೆ.
 • ಕೆಲವು ಭರತ ನಾಟ್ಯಂ ಶಾಲೆಗಳು ಇವುಗಳನ್ನು ಸಂಪೂರ್ಣವಾಗಿ ಬಳಸಿಕೊಳ್ಳುತ್ತವೆ. ಅನೇಕ ಹಸ್ತಗಳು ಒಂದಕ್ಕಿಂತ ಹೆಚ್ಚು ರೀತಿಯಲ್ಲಿ ಹಾಡಿನ ಭಾವಕ್ಕನುಗುಣವಾಗಿ ಅಥವಾ ನೃತ್ಯಗಾತಿ ಪ್ರೇಕ್ಷಕರಿಗೆ ಯಾವುದನ್ನು ತಿಳಿಸಲು ಪ್ರಯತ್ನಿಸುತ್ತಾರೋ ಅದಕ್ಕನುಗುಣವಾಗಿ ಬೇರೆ ಬೇರೆ ರೀತಿಯಲ್ಲಿ ಬಳಸಲ್ಪಡುತ್ತವೆ.

ಅಡವುಗಳು[ಬದಲಾಯಿಸಿ]

 • ಭರತ ನಾಟ್ಯಂ ನೃತ್ಯ ಸಂಯೋಜನೆ ಮೂಲ ಘಟಕ 'ಅಡವು' ('ಅಡು-ಅಡಿ ಎಂದರೆ ಪಾದ ಎಂದರೆ ಪಾದದ ಚಲನೆ) ಆಗಿದೆ.ಇದು ತಮಿಳು ಭಾಷೆಯಿಂದ ಬಂದ ಪದ.[೬] ಅಡವುಗಳು ಭರತ ನಾಟ್ಯಂನಲ್ಲಿ ತುಲನಾತ್ಮಕವಾಗಿ ಇತ್ತೀಚಿನ ದೇಸಿ ಅಂಶಗಳಾಗಿವೆ.
 • ಈ ಪಾದ ಚಲನೆಗಳನ್ನು ಪ್ರಥಮವಾಗಿ ತಂಜಾವೂರ್ ನಾಲ್ವರು ಅಡವುಗಳೆಂದು ವರ್ಗೀಕರಿಸಿದರು ಅಡವುಗಳು ಶೈಲಿಯಿಂದ ಶೈಲಿಗೆ ಬದಲಾಗುತ್ತವೆ ಕೆಲವು ಶೈಲಿಗಳಲ್ಲಿ 108 ಅಡವುಗಳನ್ನು ಹೊಂದಿದ್ದರೆ,ಇನ್ನು ಕೆಲವು 150 ನ್ನು ಒಳಗೊಂಡಿರುತ್ತವೆ. ಕೆಲವು ವೃತ್ತಿಪರ ನರ್ತಕಿಯರು ೬೦ಕ್ಕಿಂತಲೂ ಹೆಚ್ಚು ಬಳಸಿಕೊಳ್ಳುತ್ತಾರೆ. ಆಡವುಗಳ ಸಂಯೋಜನೆಗಳನ್ನು ಜತಿ ಎಂದು ಕರೆಯುತ್ತಾರೆ ಮತ್ತು ಭರತನಾಟ್ಯಂನ ಪ್ರದರ್ಶನದಲ್ಲಿ ನೃತ್ತದ ಅಂಗವಾಗಿ ಉಪಯೋಗಿಸಲ್ಪಡುತ್ತದೆ. ಕರಣಗಳಿಂದ ಕೂಡಿದ ನೃತ್ಯಕ್ಕಿಂತ ಭಿನ್ನವಾಗಿ ಅಡವುಗಳಿಗೆ ಯಾವುದೇ ರಸಗಳಿಲ್ಲ.

ಮುಖ್ಯ ಅಡವುಗಳು ಹೀಗಿವೆ:

 1. ತಟ್ಟ ಅಡವು
 2. ನಟ್ಟ ಅಡವು
 3. ವಿಷರು ಅಡವು
 4. ತಟ್ಟಿ ಮೆಟ್ಟಿ ಅಡವು
 5. ತೀರ್ಮಾನಮ್ ಆಡವು
 6. ಸರಿಕಲ್ ಅಡವು
 7. ಕುಡಿಟ್ಟ ಮೆಟ್ಟ ಅಡವು
 8. ಸುತ್ರಲ್ (ಮುರ್ಕ)ಅಡವು
 9. ಜತಿ ಅಡವು
 10. ಮಂಡಿ ಅಡವು

ಭೇದಗಳು ಮತ್ತು ಕಣ್ಣಿನ ಚಲನೆಗಳು[ಬದಲಾಯಿಸಿ]

 • ಭರತ ನಾಟ್ಯಂ ಕುತ್ತಿಗೆ ಮತ್ತು ಕಣ್ಣಿನ ಚಲನೆಗಳಂತಹ ಅನೇಕ ಅಂಶಗಳನ್ನು ಒಳಗೊಂಡಿದೆ. ನಾಟ್ಯಶಾಸ್ತ್ರವು ಅತಿ ಹೆಚ್ಚು ಸಂಖ್ಯೆಯ ಮತ್ತು ಅತ್ಯಂತ ವಿಸ್ತೃತ ವಿವರಣೆ ಹೊಂದಿದ್ದರೆ, ಅಭಿನವ ದರ್ಪಣಂ ಕೇವಲ ಒಂಭತ್ತು ತಲೆಯ ಚಲನೆ, ನಾಲ್ಕು ಕುತ್ತಿಗೆಯ ಚಲನೆಯನ್ನು ಮತ್ತು ಎಂಟು ಕಣ್ಣಿನ ಚಲನೆಯನ್ನು ನಾಟ್ಯದಲ್ಲಿ ವ್ಯಾಪಕವಾಗಿ ಉಪಯೋಗವಾಗುವುದನ್ನು ವಿವರಿಸುತ್ತದೆ.
 • ತಲೆಯ ಚಲನೆಗಳು:( ಶಿರೋಭೇದ): ಸಾಮ, ಉದ್ವಾಹಿತ, ಅಧೋಮುಖ, ಅಲೋಲಿತ, ಧೂತಂ, ಕಂಪಿತಂ, ಪರವೃತ್ತಂ, ಉತ್ಕಾಶಿಪಪ್ಟಂ ಮತ್ತು ಪರಿವಾಹಿತಂ.
 • ಕುತ್ತಿಗೆಯ ಚಲನೆಗಳು (ಗ್ರೀವ ಭೇದಗಳು): ಸುಂದರಿ, ತಿರಷ್ಚಿನ, ಪರಿವರ್ತಿತ, ಪ್ರಕಂಪಿತ.
 • ಕಣ್ಣಿನ ಚಲನೆಗಳು (ದೃಷ್ಠಿ ಭೇದಗಳು): ಸಾಮ, ಅಲೋಲಿತ, ಸಚಿ, ಪ್ರಲೋಕಿತ, ನಿಮೀಲಿತ, ಉಲ್ಲೋಖಿತ, ಅನುವೃತ್ತ, ಅವಲೋಕಿತ.

ಅಂಶಗಳು[ಬದಲಾಯಿಸಿ]

ತಟ್ಟುಕುಝಿ ಮತ್ತು ಮನ್ನಾಯ್ ಲಯ ಇರಿಸಿಕೊಳ್ಳಲು ಬಳಸಲಾಗುವ ದಂಡ ಮತ್ತು ಹಲಗೆ

ಒಂದು ಭರತ ನಾಟ್ಯಂ ಪ್ರದರ್ಶನವು ಎರಡು ತಾಸುಗಳಿಗಿಂತಲೂ ಹೆಚ್ಚು ಸಮಯ ಕೆಳಗಿನ ಆರು ಅಥವಾ ಹೆಚ್ಚು ಭಾಗಳನ್ನು ಒಳಗೊಂಡಿದೆ:

 1. ಅಲರಿಪು - ನರ್ತಕಿ ಸರಳ ಅಕ್ಷರಗಳ ಉಚ್ಚಾರದ ಮೂಲಕ ಮಾಡುವ ತಾಳದ ಒಂದು ಪ್ರಸ್ತುತಿ. ಈ ನಿಜವಾಗಿಯೂ ಪ್ರದರ್ಶನಕ್ಕೆ ದೇವರ ಆಶೀರ್ವಾದವನ್ನು ಕೋರುವ ವಿಧಾನವಾಗಿದೆ..
 2. ಕೌತುವಂ - ಪ್ರಾಚೀನ ದೇವಾಲಯ ನೃತ್ಯ ಒಂದು ಪ್ರಸ್ತುತಿ. ಇದರಲ್ಲಿ ಜತಿಗೆ ಲಯಬದ್ಧ ಉಚ್ಚಾರಾಂಶಗಳನ್ನು ಹೊಂದಿರುವ ವಾದನವನ್ನು ಆರಂಭದಲ್ಲಿ ಪ್ರದರ್ಶಿಸುತ್ತಾರೆ.
 3. ಗಣಪತಿ ವಂದನ - ಅಡೆತಡೆಗಳನ್ನು ತೆಗೆದು ಪ್ರದರ್ಶನವನ್ನು ಯಶಸ್ವಿಗೊಳಿಸಲು ಹಿಂದೂ ದೇವರು ಗಣೇಶ, ನಲ್ಲಿ ಒಂದು ಸಾಂಪ್ರದಾಯಿಕ ಆರಂಭಿಕ ಪ್ರಾರ್ಥನೆ.
 4. {0ಜತಿಸ್ವರಂ - ಇದರಲ್ಲಿ ಮೃದಂಗದ ತಾಳಕ್ಕೆ ಸರಿಯಾಗಿ ನರ್ತಕಿಯು ಆಕರ್ಷಕವಾದ ಪದ ಚಲನೆ ಮತ್ತು ದೇಹ ಚಲನೆಗಳಲ್ಲಿ ತನ್ನ ತನ್ನ ಪ್ರತಿಭೆ ತೋರಿಸುತ್ತಾರೆ.
 5. ಶಬ್ದಂ - ಒಂದು ಒಲುಮೆಯ ಅಥವಾ ಭಕ್ತಿಪ್ರದಾನ ಹಾಡಿನೊಂದಿಗೆ ಮಾಡುವ ನೃತ್ಯ.
 6. ವರ್ಣಂ - ಪ್ರದರ್ಶನದ ಮುಖ್ಯ ಭಾಗ. ಇದು ಅತ್ಯಂತ ಸಂಕೀರ್ಣ ಮತ್ತು ಕಷ್ಟ ಚಲನೆಯ ದೀರ್ಘವಾದ ನೃತ್ಯ ವಿಭಾಗವಾಗಿದೆ. ಕೈ ಮತ್ತು ದೇಹದ ಸ್ಥಾನಗಳು ಸಾಮಾನ್ಯವಾಗಿ ಪ್ರೀತಿಯ ಕಥೆಯನ್ನು ಹೇಳುತ್ತವೆ.
 7. ಪದಮ್-ಬಹುಶಃ ಅತ್ಯಂತ ಸಾಹಿತ್ಯದ ಅಂಶಗಳ ಭಾಗ ಇದರಲ್ಲಿ ನರ್ತಕಿ ಪ್ರಿತಿಯ ಹಲವು ಅಂಶಗಳನ್ನು ಅಂದರೆ ಪರಮಾತ್ಮನ ಮೇಲಿನ ಪ್ರೀತಿ, ತಾಯಿಗೆ ಮಗುವಿನ ಮೇಲಿನ ಪ್ರೀತಿ ಅಥವಾ ಪ್ರೇಮಿಗಳ ಬೇರ್ಪಡೆ ಮತ್ತು ಪುನಹ ಒಂದಾಗುವಿಕೆಯ ಅಭಿವ್ಯಕ್ತಿ ಮಾಡುತ್ತಾರೆ.
 8. ಸ್ತುತಿ - ದೇವರ ಕುರಿತು ಮೆಚ್ಚುಗೆಯ ಒಂದು ಪ್ರಸ್ತುತಿ.
 9. ಕೂಥು - ನಾಟಕೀಯ ಅಂಶಗಳು ಬಹಳಷ್ಟು ಹೊಂದಿರುವ ಪ್ರಸ್ತುತಿ.
 10. ಜಾವಳಿ -ಜಾವಳಿಗಳು ತುಲನಾತ್ಮಕವಾಗು ಹೊಸ ಸರಳ ಅಭಿನಯ ಪ್ರಕಾರಗಳ ಸಂಯೋಜನೆಗಳನ್ನು ಒಳಗೊಂಡ ಪ್ರಸ್ತುತಿ.. ಪದಂ ನಂತೆ ಜಾವಳಿಗಳಲ್ಲಿ ಶೃಂಗಾರ ರಸವನ್ನು ನಾಯಕ ನಾಯಕಿ ಭಾವದಲ್ಲಿ ಪ್ರದರ್ಶಿಸಲಾಗುತ್ತದೆ.
 11. ತಿಲ್ಲಾನ - ಈ ಕೊನೆಯ ಭಾಗವು ಶುದ್ಧ ನೃತ್ಯದ ಭಾಗವಾಗಿದೆ. ಸಂಗೀತದ ಕುಶಲತೆಗೆ ಸರಿಯಾದ ನರ್ತಕಿಯು ಸಂಕೀರ್ಣ ಕಾಲ್ಚಳಕಯ ಮೂಲಕ ಅಪೂರ್ವ ಭಾವ ಭಂಗಿಯನ್ನು ಪ್ರದರ್ಶಿಸುತ್ತಾರೆ. ಇದಲ್ಲದೆ ಶ್ಲೋಕಂ, ಸ್ವರಜತಿ, ಕೃತಿ ಮುಂತಾದ ಅಂಶಗಳೂ ಪ್ರದರ್ಶನದಲ್ಲಿ ಇರುವುದುಂಟು. ಆಶೀರ್ವಾದದ ರೂಪದಲ್ಲಿ ಕೆಲವು ಧಾರ್ಮಿಕ ಪದ್ಯಗಳ ಪಠಣದಲ್ಲಿ ಪ್ರದರ್ಶನ ಮುಕ್ತಾಯವಾಗುತ್ತದೆ. ಕೆಲವು ಶೈಲಿಗಳು ಸುದಾರಿತ ತರಂಗ ನೃತ್ಯಂ ಮತ್ತು ಶುದ್ಧ ನೃತ್ಯಂ ನಂತಹ ಅಂಶಗಳನ್ನು ಒಳಗೊಂಡಿರುತ್ತವೆ. ಒಬ್ಭ ನರ್ತಕಿಯು ನೃತ್ಯದ ಎಲ್ಲಾ ಅಂಶಗಳನ್ನು ಕರಗತ ಮಾಡಿಕೊಂಡಾದ ಮೇಲೆ ರಂಗ ಪ್ರದರ್ಶನಕ್ಕಿಂತ ಮೊದಲು ಅರಂಗೇಟ್ರಮ್ ಎಂಬ ಪ್ರಥಮ ಪ್ರದರ್ಶನವನ್ನು ಏರ್ಪಡಿಸುತ್ತಾರೆ.
 12. ಅಂಘಿಕಂ - ಇದು ಶಿವನ ಮೇಲೆ ಭಕ್ತಿಯ ಹಾಡು ಮತ್ತು ನೃತ್ಯಗಳ ಭರತನಾಟ್ಯಂ ನ ಒಂದು ಭಾಗ ಆಗಿದೆ. ಪ್ರಸ್ತುತ, ಭರತನಾಟ್ಯಂ ಒಂಟಿ ಪ್ರದರ್ಶನದಲ್ಲಿ ತಂಜಾವೂರು ನಾಲ್ವರು ಸೂಚಿಸಿದ ಮಾರ್ಗ ಅಥವಾ ದೇವದಾಸಿ ಮಾರ್ಗ ಅನುಸರಿಸುತ್ತಾರೆ. ತಂಜಾವೂರು ನಾಲ್ವರ ಮೊದಲು, ಒಂದು ಸಾಂಪ್ರದಾಯಿಕ ಭರತ ನಾಟ್ಯಂ ಪ್ರದರ್ಶನ ವಿನ್ಯಾಸವನ್ನು ಈ ಕ್ರಮವನ್ನು ಅನುಸರಿಸಿ ಮಾಡಲಾಗಿತ್ತು.
 13. ಜಯಾ ಸ್ತುತಿ
 14. ಶರಣು ಶರಣು
 15. ಅಲರು (ಅಲರಿಪು)
 16. ಸೊಲ್ಲು
 17. ಶಬ್ದಂ
 18. ವರ್ಣಂ
 19. ಪದಮ್
 20. ಸ್ವರಜತಿ
 21. ಅಭಿನಯ ಪದಮ್
 22. ತಿಲ್ಲಾನ
 23. ಅಭಿನಯ ಪದಮ್
 24. ಜಕ್ಕಿಣಿ ಪದಮ್
 25. ಗೀತಂ
 26. ಪ್ರಬಂದಂ
 27. ತ್ರಿಪುಟ
 28. ಶ್ಲೋಕ ವರ್ಣಂ
 29. ಕುವುತುವಂ
 30. ಮಂಗಳ (ಮಂಗಳಂ)

ವರ್ಣಂ ಬಗ್ಗೆ[ಬದಲಾಯಿಸಿ]

 • ವರ್ಣಂ ಎಂದರೆ ಅಕ್ಷರಶಃ ಬಣ್ಣ ಎಂದು ಅರ್ಥ. ಉದಾಹರಣೆಗೆ ಪ್ರಕೃತಿಯಲ್ಲಿ ವಿವಿಧ ಬಣ್ಣಗಳು ಎಂದರೆ: ಗುಲಾಬಿ, ಕಿತ್ತಳೆ, ನೀಲಿ, ಕೆಂಪು ಇತ್ಯಾದಿ ಇರುವಂತೆಯೇ ವರ್ಣಂ ನಲ್ಲಿ ನಾಯಿಕೆಯ ವಿವಿಧ ಭಾವಗಳನ್ನು ಎಂದರೆ ಕೋಪ,ಮಂದಹಾಸ,ದು:ಖ ಇತ್ಯಾದಿಗಳ ಅಭಿವ್ಯಕ್ತಿ ಇರುತ್ತದೆ. ಭರತನಾಟ್ಯದಲ್ಲಿ ವರ್ಣಂ ಎಂಬುದು ಪ್ರದರ್ಶನದ ಕೇಂದ್ರ ಭಾಗವಾಗಿರುತ್ತದೆ.
 • ಇದು ಒಂದು ಸುದೀರ್ಘ ರಚನೆಯನ್ನು ಒಳಗೊಂಡು ಸುಮಾರು ಒಂದು ಗಂಟೆ 30 ನಿಮಿಷಗಳವರೆಗೆ ನಡೆಯಬಹುದು. ವರ್ಣಂನಲ್ಲಿ ಎರಡು ವಿಧವಿದ್ದು, ಒಂದು ತಾನ ವರ್ಣಂ ಮತ್ತು ಇನ್ನೊಂದು ಪದ ವರ್ಣಂ ಎಂದು ಹೆಸರು. ತಾನ ವರ್ಣಂ ಹೆಚ್ಚಾಗಿ ಸಂಗೀತ ಅಥವಾ ಹಾಡಿ ಪ್ರಾಮುಖ್ಯತೆ ನೀಡುತ್ತದೆ. ಪದ ವರ್ಣಂ ತಾಳಕ್ಕೆ ಪ್ರಾಮುಖ್ಯತೆ ನೀಡುತ್ತದೆ.

ಭರತನಾಟ್ಯದಲ್ಲಿ ನವರಸಗಳು[ಬದಲಾಯಿಸಿ]

ಭರತನಾಟ್ಯವು ವಿಶ್ವದಲ್ಲಿ ಹೆಮ್ಮೆಯ ವಿಶಿಷ್ಟವಾದ ಜಾಗವನ್ನು ಹೊಂದಿದೆ. ಭರತನಾಟ್ಯ-ನೃತ್ಯ ಕಲೆ ನಮಗೆ ಬಹಳಷ್ಟು ವಿಷಯಗಳನ್ನು ಕಲಿಸುತ್ತದೆ ಮತ್ತು ಭಾವನೆಗಳನ್ನು ತುಂಬಾ ನಾಜೂಕಾಗಿ ಅಭಿನಯಗಳೆಂದು ಬಣ್ಣಿಸಲಾಗಿದೆ. ನವರಸಗಳ ಬಗ್ಗೆ ವಿವರಣೆ ಕೆಳಗೆ ನೀಡಲಾಗಿದೆ:

 1. ಶೃಂಗಾರ
 2. ರೌದ್ರ
 3. ವೀರ
 4. ಹಾಸ್ಯ
 5. ಕರುಣಾ
 6. ಭೀಭತ್ಸ
 7. ಅದ್ಬುತ
 8. ಭಯಾನಕ
 9. ಶಾಂತ

ಇತರೆ ಅಂಶಗಳು[ಬದಲಾಯಿಸಿ]

ಆಭರಣ[ಬದಲಾಯಿಸಿ]

ಭರತ ನಾಟ್ಯಂ ನರ್ತಕಿಯರು ಪ್ರದರ್ಶನದ ಸಮಯದಲ್ಲಿ "ದೇವಸ್ಥಾನ ಆಭರಣ" ಎಂಬ ಎಶಿಷ್ಟ ಆಭರಣಗಳನ್ನು ಧರಿಸುತ್ತಾರೆ

ವೇಷಭೂಷಣ[ಬದಲಾಯಿಸಿ]

ಪ್ರಾಚೀನ ಗ್ರಂಥಗಳು ಮತ್ತು ಶಿಲ್ಪಕಲೆಗಳಿಂದ ತಿಳಿದು ಬರುವುದೇನೆಂದರೆ ಮೂಲ ಉಡುಪು ನರ್ತಕಿಯರ ದೇಹವನ್ನು ಪೂರ್ಣವಾಗಿ ಮುಚ್ಚುವುದಿಲ್ಲ ಎಂಬುದು. ಮಧ್ಯಕಾಲದಲ್ಲಿ ಎಂದರೆ ನಾಟ್ಯದ ಶುದ್ಧೀಕರಣ ಸಮಯದಲ್ಲಿ ದೇವದಾಸಿಯರು ಪೂರ್ತಿ ಮೈ ಮುಚ್ಚುವಂತಹ ವಿಶೇಷ ಭಾರವಾದ ಸೀರೆ ಉಡುತ್ತಿದ್ದರು. ಇದು ನೃತ್ಯದ ಚಲನೆಗಳಿಗೆ ಆಡಚಣೆ ಉಂಟು ಮಾಡುತ್ತಿತ್ತು. ಭರತನಾಟ್ಯಂ ವೇಷಭೂಷಣಗಳಲ್ಲಿ ಹಲವಾರು ವಿಧಗಳಿದ್ದು ಕೆಲವು ನರ್ತಕಿಯ ಚಲನವಲನಗಳಿಗೆ ಅಡಚಣೆ ಉಂಟುಮಾಡುವುದಿಲ್ಲ. ಆಧುನಿಕ ವೇಷಭೂಷಣಗಳು ನರ್ತಕಿಯ ಕುಸುಮ ಶರೀರದ ಸೌಂದರ್ಯವನ್ನು ಹೆಚ್ಚಿಸುವ ರೀತಿಯಲ್ಲಿ ಇದೆ.

ಗೆಜ್ಜೆ ಅಥವಾ ಸಲಂಗೈ[ಬದಲಾಯಿಸಿ]

ಇದನ್ನು ಹಿಂದಿಯಲ್ಲಿ ಗುಂಗ್ರೂ ಎನ್ನುತ್ತಾರೆ.

ತಟ್ಟು ಕಝಿ ಮತ್ತು ಮನ್ನಾಯ್[ಬದಲಾಯಿಸಿ]

ಲಯ ಇರಿಸಿಕೊಳ್ಳಲು ಶಿಕ್ಷಕ ಬಳಸುವ ಮರದ ಕೋಲು.

ಸಂಗೀತ[ಬದಲಾಯಿಸಿ]

ನೃತ್ಯದ ಜತೆಗೂಡಿದ ಸಂಗೀತ ದಕ್ಷಿಣ ಭಾರತದ ಕರ್ನಾಟಕ ಶೈಲಿಯಲ್ಲಿದೆ.

ಮೇಳ[ಬದಲಾಯಿಸಿ]

ಹೆಚ್ಚಾಗಿ, ದಕ್ಷಿಣ ಭಾರತೀಯ ಸಂಗೀತ ಪರಿಕರ ಮೃದಂಗ,ನಾದಸ್ವರ,ಕೊಳಲು.ಪಿಟೀಲು,ವೀಣೆ ಮುಂತಾದವುಗಳನ್ನು ಬಳಸಲಾಗುತ್ತದೆ.

ಭಾಷೆಗಳು[ಬದಲಾಯಿಸಿ]

ತಮಿಳು, ತೆಲುಗು ಮತ್ತು ಕನ್ನಡ ಸಾಂಪ್ರದಾಯಿಕವಾಗಿ ಭರತ ನಾಟ್ಯಂ ಬಳಸಲಾಗುತ್ತದೆ.

ನೃತ್ಯಗಾರರ ಆದರ್ಶ ಗುಣಗಳು[ಬದಲಾಯಿಸಿ]

೨೦೧೦ ರಲ್ಲಿ ಸರ್ರೆ, ಯುನೈಟೆಡ್ ಕಿಂಗ್ಡಮ್ ರಲ್ಲಿ ಭರತನಾಟ್ಯಂ ನೃತ್ಯ ಪ್ರದರ್ಶನ.
 • ವೃತ್ತಿಪರ ಭರತ ನಾಟ್ಯಂ ನರ್ತಕಿ ಹಲವಾರು ಗುಣಗಳನ್ನು ಪ್ರದರ್ಶಿಸಬೇಕು. ಸಂಗೀತರತ್ನಾಕರದಲ್ಲಿ ಹೇಳಿದಂತೆ ನಿಜವಾದ ನೃತ್ಯ ದೇಹದ ಸೌಂದರ್ಯದೊಂದಿಗೆ ಸಂಪರ್ಕ ಸಾಧಿಸಬೇಕು ,ಇದಲ್ಲದ ಯಾವುದೇ ಇನ್ನೊಂದು ನೃತ್ಯ ಕೇವಲ ಒಂದು ವಿಡಂಬನೆ (VII.1246) ಯಾಗಿದೆ. ಅಭಿನವ ದರ್ಪಣವು ನರ್ತಕಿಯಲ್ಲಿ ಇರಬೇಕಾದ ಹತ್ತು ಗುಣಗಳನ್ನು ಪಟ್ಟಿ ಮಾಡಿದೆ.
 1. ಜವ (ಚುರುಕುತನ),
 2. ಸ್ಥಿರಾತ್ಮಮ್ (ದೃಢತೆ),
 3. ರೇಖಾ (ಆಕರ್ಷಕವಾದ ರೇಖೆಗಳು),
 4. ಭ್ರಮರಿ (ಭ್ರಮಣ ಸಮಸ್ಥಿತಿಯನ್ನು),
 5. ದೃಷ್ಟಿ (ಕುಡಿನೋಟ),
 6. ಶ್ರಮಹ,
 7. ಮೇಧಾ (ಬುದ್ಧಿಶಕ್ತಿ),
 8. ಶ್ರದ್ಧಾ (ಅರ್ಪಣೆ),
 9. ವಾಚೋ (ಒಳ್ಳೆಯ ಮಾತುಗಾರಿಕೆ), ಮತ್ತು
 10. ಗೀತಂ (ಹಾಡುವ ಸಾಮರ್ಥ್ಯ).

ಅಭಿನಯ ದರ್ಪಣಂ (ಭರತ ನಾಟ್ಯಂ ರಂದು ಎರಡು ಅಧಿಕೃತ ಗ್ರಂಥಗಳ ಒಂದು) ಪ್ರಕಾರ ವೃತ್ತಿಪರ ನರ್ತಕಿ (ಪತ್ರಾ),, ಕೆಳಗಿನ ಗುಣಗಳನ್ನು ಹೊಂದಿರುವುದು ಅಗತ್ಯ. ಅವಳು ಯುವತಿಯಾಗಿ,ತೆಳ್ಳಗಾಗಿ,ತಾರುಣ್ಯಪೂರ್ಣಳಾಗಿ,ದೊಡ್ಡ ಕಣ್ಣುಳ್ಳವಳಾಗಿ, ಆತ್ಮವಿಶ್ವಾಸಿಯಾಗಿ, ಹಾಸ್ಯಪ್ರ ವೃತ್ತಿ ಹೊಂದಿ, ಸಮಯ ಪ್ರಜ್ನೆ ಹೊಂದಿದವಳಾಗಿ, ತಾಳಕ್ಕೆ ಸರಿಯಾಗಿ ನರ್ತಿಸಲು ಸಾಮರ್ಥ್ಯ ಹೊಂದಿರಬೇಕು. ಉತ್ತಮ ಉಡುಪುಗಳೊಂದಿಗೆ ಮಂದಸ್ಮಿತೆಯಾಗಿರಬೇಕು.

ಶಾಸ್ತ್ರೀಯ ನೃತ್ಯಗಳಲ್ಲಿ ಸಮಾನತೆಗಳು[ಬದಲಾಯಿಸಿ]

ಕೆಳಗಿನ ಭಾರತೀಯ ಶಾಸ್ತ್ರೀಯ ನೃತ್ಯ ಪ್ರಕಾರಗಳು ಭರತ ನಾಟ್ಯಂ ನ ಜತೆ ಸಾಮಾನ್ಯ ಅಂಶಗಳನ್ನು ಹಂಚಿಕೊಳ್ಳುತ್ತವೆ.

 1. ಕೂಚಿಪುಡಿ - ತೆಲುಗು ಶಾಸ್ತ್ರೀಯ ನೃತ್ಯ
 2. ಮೋಹಿನಿಯಾಟ್ಟಂ - ಕೇರಳದ ಶಾಸ್ತ್ರೀಯ ನೃತ್ಯ
 3. ಒಡಿಸ್ಸಿ - ಒಡಿಶಾದ ಶಾಸ್ತ್ರೀಯ ನೃತ್ಯ- ಇತರ ಅನೇಕ ಪೂರ್ವ ಏಷ್ಯಾದ ನೃತ್ಯಗಳು ಭರತ ನಾಟ್ಯಂನ ಜತೆ ಸಮಾನತೆಯನ್ನು ಹೊಂದಿವೆ.

ಉಲ್ಲೇಖಗಳು‌‌[ಬದಲಾಯಿಸಿ]

 1. "A Dance Recital of Bharatanatya". SPICMACAY chapter, Cornell university.
 2. "Touching tribute". The Hindu. India. 6 March 2004. Archived from the original on 26 ಜನವರಿ 2005.
 3. "In step with tradition". The Sunday Tribune. India. 2 April 2006.
 4. "Talibanisation of the performing arts". The Hindu. India. 18 December 2001. Archived from the original on 5 ಡಿಸೆಂಬರ್ 2010.
 5. O'Shea 2007, pp. 35
 6. Devi 1990, pp. 50

ಬಾಹ್ಯ ಕೊಂಡಿಗಳು‌‌[ಬದಲಾಯಿಸಿ]

ಟೆಂಪ್ಲೇಟು:Indian classical dance