ವಿಷಯಕ್ಕೆ ಹೋಗು

ತಾಂಡವ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಶಿವನ ನಾಟ್ಯ

ತಾಂಡವ (ತಾಂಡವ ನಾಟ್ಯ ಎಂದೂ ಪರಿಚಿತವಾಗಿದೆ) ಹಿಂದೂ ದೇವತೆ ಶಿವನು ಪ್ರಸ್ತುತಪಡಿಸಿದ ದೈವಿಕ ನಾಟ್ಯ. ಶಿವನ ತಾಂಡವವು ಸೃಷ್ಟಿ, ಸ್ಥಿತಿ ಮತ್ತು ಲಯದ ಚಕ್ರದ ಮೂಲವಾದ ಹುರುಪಿನ ನಾಟ್ಯ ಎಂದು ವರ್ಣಿಸಲಾಗಿದೆ. ರುದ್ರ ತಾಂಡವವು ಅವನ ಉಗ್ರ ಸ್ವರೂಪವನ್ನು ಚಿತ್ರಿಸುತ್ತದೆ, ಮೊದಲು ಬ್ರಹ್ಮಾಂಡದ ಸೃಷ್ಟಿಕರ್ತನಾಗಿ ಮತ್ತು ನಂತರ ಅದರ ವಿನಾಶಕನಾಗಿ, ಸ್ವತಃ ಮರಣದ ವಿನಾಶಕನಾಗಿ ಕೂಡ, ಮತ್ತು ಆನಂದ ತಾಂಡವವು ಅವನನ್ನು ಸಂತೋಷಭರಿತನನ್ನಾಗಿ ಚಿತ್ರಿಸುತ್ತದೆ. ಶೈವ ಸಿದ್ಧಾಂತ ಸಂಪ್ರದಾಯದಲ್ಲಿ, ನಟರಾಜನಾಗಿ ಶಿವನನ್ನು ನಾಟ್ಯದ ಪರಮೇಶ್ವರನೆಂದು ಪರಿಗಣಿಸಲಾಗುತ್ತದೆ.[]

ತಾಂಡವ ಶಬ್ದವು ತನ್ನ ಹೆಸರನ್ನು ಶಿವನ ಸೇವಕನಾದ ತಂಡುವಿನಿಂದ ತೆಗೆದುಕೊಳ್ಳುತ್ತದೆ. ಇವನು ಶಿವನ ಆದೇಶದಂತೆ ತಾಂಡವದ ಅಂಗಹಾರಗಳು ಮತ್ತು ಕರಣಗಳ ಬಳಕೆ ಬಗ್ಗೆ ಭರತಮುನಿಗೆ (ನಾಟ್ಯ ಶಾಸ್ತ್ರದ ಲೇಖಕ) ಕಲಿಸಿಕೊಟ್ಟನು. ಸ್ವತಃ ತಂಡುವೇ ನಾಟಕೀಯ ಕಲೆಗಳ ಮೇಲಿನ ಮುಂಚಿನ ಕೃತಿಯ ಲೇಖಕನಾಗಿರಬೇಕು ಎಂದು ಕೆಲವು ವಿದ್ವಾಂಸರು ಭಾವಿಸುತ್ತಾರೆ, ಮತ್ತು ಇದನ್ನು ನಾಟ್ಯ ಶಾಸ್ತ್ರದಲ್ಲಿ ಸೇರಿಸಲಾಯಿತು.

ಉಲ್ಲೇಖಗಳು

[ಬದಲಾಯಿಸಿ]



ಬಾಹ್ಯ ಸಂಪರ್ಕಗಳು

[ಬದಲಾಯಿಸಿ]
"https://kn.wikipedia.org/w/index.php?title=ತಾಂಡವ&oldid=1250829" ಇಂದ ಪಡೆಯಲ್ಪಟ್ಟಿದೆ