ಯಕ್ಷಗಾನ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಬಡಗು ತಿಟ್ಟು ಯಕ್ಷಗಾನ ವೇಷದ ಒಂದು ಮಾದರಿ
ತೆಂಕು ತಿಟ್ಟು ಯಕ್ಷಗಾನ ವೇಷದ ಒಂದು ಮಾದರಿ
Actors' headwear. Large PagaDe (or Ketaki Mundhale) and Kireeta are worn by male characters while females wear small PagaDe.
The southern (Thenkuthittu) form showcasing an authentic Shiva (left) and Veerabhadra (right) at a performance in Moodabidri, depicting Roudra Rasa
Rakshasa (the demon) as depicted in Yakshagana performances, is called Bannada Vesha

ಯಕ್ಷಗಾನ - ನೃತ್ಯ, ಹಾಡುಗಾರಿಕೆ, ಮಾತುಗಾರಿಕೆ, ವೇಷ-ಭೂಷಣಗಳನ್ನೊಳಗೊಂಡ ಒಂದು ಸ್ವತಂತ್ರವಾದ ಶಾಸ್ತ್ರೀಯ ಕಲೆ. ಕರ್ನಾಟಕದ ಸಾಂಪ್ರದಾಯಿಕ ಕಲಾ ಪ್ರಕಾರಗಳಲ್ಲಿ ಅತ್ಯಂತ ಪ್ರಮುಖವಾದದ್ದು. ಕರ್ನಾಟಕದ ಕರಾವಳಿ ಜಿಲ್ಲೆಗಳು (ಉತ್ತರ ಕನ್ನಡ, ದಕ್ಷಿಣ ಕನ್ನಡ ಮತ್ತು ಉಡುಪಿ), ಶಿವಮೊಗ್ಗ, ಚಿಕ್ಕಮಗಳೂರು ಮತ್ತು ಕಾಸರಗೋಡು ಜಿಲ್ಲೆಗಳಲ್ಲಿ ಯಕ್ಷಗಾನವು ಮನೆ ಮಾತಾಗಿದೆ.

ಯಕ್ಷಗಾನದ ಪ್ರಮುಖ ಅಂಶಗಳು[ಬದಲಾಯಿಸಿ]

ಯಕ್ಷಗಾನದಲ್ಲಿ ಈ ಕೆಳಗಿನ ಪ್ರಮುಖ ಅಂಶಗಳನ್ನು ಕಾಣಬಹುದು.

 1. ಪ್ರಸಂಗ: ಯಕ್ಷಗಾನದಲ್ಲಿ ಯಾವುದಾದರೊಂದು ಕಥಾನಕವನ್ನು ಆಯ್ದುಕೊಂಡು ಅದನ್ನು ಜನರಿಗೆ ಹಾಡು, ಅಭಿನಯ, ನೃತ್ಯಗಳೊಂದಿಗೆ ತೋರಿಸಲಾಗುತ್ತದೆ. ಹೀಗೆ ಆಯ್ದುಕೊಂಡ ಕಥಾನಕವನ್ನು ಪ್ರಸಂಗ ಎಂದು ಕರೆಯುತಾರೆ. ಉದಾಹರಣೆಗೆ ಮಹಾಭಾರತದಲ್ಲಿ ಭೀಮ ಮತ್ತು ದುರ್ಯೋಧನರ ನಡುವೆ ನಡೆಯುವ ಗಧಾಯುದ್ಧದ ಕಥೆಯನ್ನು ಆಯ್ದುಕೊಂಡರೆ ಆಗ ಅದನ್ನು "ಗದಾಯುದ್ದ ಪ್ರಸಂಗ" ಎಂಬುದಾಗಿ ಕರೆಯುತ್ತಾರೆ. ಹೆಚ್ಚಾಗಿ ಪೌರಾಣಿಕ ಪ್ರಸಂಗಗಳನ್ನೇ ಆಯ್ದು ಕೊಳ್ಳುವುದು ಯಕ್ಷಗಾನದ ವಾಡಿಕೆಯಾದರೂ ಪ್ರಸಂಗವು ಪೌರಾಣಿಕವೇ ಆಗಬೇಕು ಎಂಬ ನಿಯಮವೇನೂ ಇಲ್ಲ. ಇದು ಐತಿಹಾಸಿಕವೂ, ಸಾಮಾಜಿಕವೂ ಆಗಿರಬಹುದು.
 2. ಪಾತ್ರಧಾರಿಗಳು:ಪ್ರಸಂಗದಲ್ಲಿ ಬರುವ ಕಥೆಯನ್ನು ಅಭಿನಯಿಸುವವರೇ ಪಾತ್ರಧಾರಿಗಳು. ಸ್ತ್ರೀ ಪಾತ್ರ, ಖಳ ನಟನ ಪಾತ್ರ, ಹಾಸ್ಯ ಕಲಾವಿದನ ಪಾತ್ರ, ನಾಯಕನ ಪತ್ರ - ಹೀಗೆ ಪ್ರಸಂಗಕ್ಕೆ ಅನುಗುಣವಾಗಿ ಪಾತ್ರಗಳನ್ನು ಆಯ್ಕೆ ಮಾಡಲಾಗುತ್ತದೆ. ನೃತ್ಯ, ಅಭಿನಯ ಹಾಗೂ ಮಾತುಗಾರಿಕೆಗಳೊಂದಿಗೆ ಕಥೆಯನ್ನು ಪ್ರೇಕ್ಷಕರಿಗೆ ತಲುಪಿಸುವ ಮಹತ್ತರ ಜವಾಬ್ದಾರಿ ಪಾತ್ರಧಾರಿಗಳ ಮೇಲಿರುತ್ತದೆ.
 3. ವೇಷಭೂಷಣ:ಯಕ್ಷಗಾನದ ಪ್ರಮುಖ ಪ್ರಭೇದವಾದ ಬಯಲಾಟಗಳಲ್ಲಿ ವೇಷಭೂಷಣಗಳು ಪ್ರಮುಖವಾದದ್ದು. ಪಾತ್ರಗಳಿಗೆ ತಕ್ಕಂತೆ ವೇಷಭೂಷಣಗಳಿರುತ್ತವೆ. ಉದಾಹರಣೆಗೆ ಪ್ರಮುಖ ಖಳನಟ ಮತ್ತು ರಾಜ (ನಾಯಕ)ನ ಪಾತ್ರಕ್ಕೆ ಬಳಸುವ ಕಿರೀಟವು ಸಾಮಾನ್ಯ ಪಾತ್ರಧಾರಿಗೆ ಬಳಸುವ ಕಿರೀಟಗಳಿಗಿಂತ ವಿಭಿನ್ನ ವಿನ್ಯಾಸ ದ್ದಾಗಿರುತ್ತದೆ. ಹಾಗೆಯೇ ಸ್ತ್ರೀ ಪಾತ್ರಗಳಿಗೆ ಬಳಸುವ ಕಿರೀಟವು ತುಂಬಾ ಚಿಕ್ಕದಾಗಿರುತ್ತದೆ. ಅಲ್ಲದೇ ತೆಂಕತಿಟ್ಟು ಶೈಲಿಯ ಯಕ್ಷಗಾನದಲ್ಲಿ ಉಪಯೋಗಿಸುವ ವೇಷಭೂಷಣ ಗಳು ಬಡಗತಿಟ್ಟಿನಲ್ಲಿ ಉಪಯೋಗಿಸುವ ವೇಷ ಭೂಷಣಗಳಿಗಿಂತ ಭಿನ್ನವಾಗಿರುತ್ತವೆ.
 4. ಭಾಗವಂತಿಕೆ: ಯಕ್ಷಗಾನದ ಜೀವಾಳವೇ ಭಾಗವಂತಿಕೆ ಅಥವಾ ಹಾಡುಗಾರಿಕೆ. ಅವರು ಈ ರಂಗ ಪ್ರಕಾರದ ನಿರ್ದೇಶಕರಿದ್ದಂತೆ. ಇಲ್ಲಿ ಪಾತ್ರಧಾರಿಗಳು ಅಭಿನಯಿಸುವ ಕಥಾನಕವನ್ನು ಕಾವ್ಯ ರೂಪದಲ್ಲಿ ಹಾಡಲಾಗುತ್ತದೆ. ಹೀಗೆ ಹಾಡುವವರನ್ನು ಭಾಗವತರು ಎಂದು ಕರೆಯುತ್ತಾರೆ. ಭಾಗವತರು ಹಾಡುವ ಪದಗಳಿಗೆ ತಕ್ಕಂತೆ ಪಾತ್ರಧಾರಿಗಳು ನೃತ್ಯದ ಮೂಲಕ ಅಭಿನಯಿಸುತ್ತಾರೆ. ನೃತ್ಯದೊಂದಿಗೆ ಹಾಡಿನಲ್ಲಿ ಬರುವ ಕಥಾನಕದ ಸಂದರ್ಭಕ್ಕನುಗುಣವಾಗಿ ಭಾವಾಭಿನಯವೂ ಸಹ ಅತ್ಯಂತ ಅಗತ್ಯವಾದುದು.
 5. ಮಾತುಗಾರಿಕೆ:ಭಾಗವತರು ಹಾಡುವುದನ್ನು ಪೂರ್ಣಗೊಳಿಸಿದ ಕೂಡಲೇ ಆ ಹಾಡಿನ ಸಾರಾಂಶವನ್ನು ಪಾತ್ರಧಾರಿಗಳು ಚರ್ಚಿಸುತ್ತಾರೆ. ಹಾಡಿನಲ್ಲಿ ಕಥಾನಕದ ಯಾವ ಭಾಗವನ್ನು ಪ್ರಸ್ತುತ ಪಡಿಸಲಾಗುತ್ತದೋ ಅದೇ ಭಾಗದ ಅರ್ಥವನ್ನು ಜನ ಸಾಮಾನ್ಯರೆಲ್ಲರಿಗೂ ಸ್ಪಷ್ಟವಾಗುವಂತೆ ಆಡುಮಾತಿನಲ್ಲಿ ಪಾತ್ರಧಾರಿಗಳು ಸಂಭಾಷಿಸು ತ್ತಾರೆ.
 6. ಹಿಮ್ಮೇಳ:ಹಿಮ್ಮೇಳವೆಂದರೆ ಚಂಡೆ, ಮದ್ದಲೆ, ಮೃದಂಗ, ತಾಳ, ಜಾಗಟೆ ಮುಂತಾದ ಸಂಗೀತ ಉಪಕರಣಗಳನ್ನು ಇಲ್ಲಿನ ನೃತ್ಯ, ಭಾಗವತಿಕೆ ಮತ್ತು ಮಾತುಗಾರಿಕೆಯ ವೇಳೆ ಸಂದರ್ಭೋಚಿತವಾಗಿ ಬಳಸುವಿಕೆ. ಒಂದು ಯಕ್ಷಗಾನವು ಪರಿಣಾಮಕಾರಿಯಾಗಿ ಮೂಡಿ ಬರಬೇಕಾದರೆ ಪಾತ್ರಧಾರಿಗಳ ಅಭಿನಯ, ನೃತ್ಯ, ಭಾಗವಂತಿಕೆ ಎಷ್ಟು ಮುಖ್ಯವೋ, ಹಿಮ್ಮೇಳವೂ ಸಹ ಅಷ್ಟೇ ಪ್ರಮುಖವಾದುದು. ಪಾತ್ರಧಾರಿಗಳ ಅಭಿನಯವು ಇನ್ನಷ್ಟು ಛಾಪು ಮೂಡಿಸಲು, ಭಾಗವತರ ಹಾಡು ಇನ್ನಷ್ಟು ಸುಂದರವಾಗಿ ಹೊರಹೊಮ್ಮಲು ಸರಿಯಾದ ಹಿಮ್ಮೇಳ ಬೇಕೇ ಬೇಕು.

ಉಗಮ[ಬದಲಾಯಿಸಿ]

ಯಕ್ಷಗಾನದ ಮೊದಲ ಉಲ್ಲೇಖ ಸಾರ್ಣದೇವನ "ಸ೦ಗೀತ ರತ್ನಾಕರ"ದಲ್ಲಿ (೧೨೧೦ ಕ್ರಿಶ) "ಜಕ್ಕ" ಎಂದು ಆಗಿದ್ದು ಮುಂದೆ "ಯಕ್ಕಲಗಾನ" ಎಂದು ಕರೆಯಲ್ಪಟ್ಟಿತ್ತು ಎ೦ಬುದು ಒಂದು ಅಭಿಪ್ರಾಯ. ಗ೦ಧರ್ವ ಗ್ರಾಮ ಎ೦ಬ ಈಗ ನಶಿಸಿ ಹೋಗಿರುವ ಗಾನ ಪದ್ದತಿಯಿ೦ದ ಗಾನ ಮತ್ತು ಸ್ವತ೦ತ್ರ ಜಾನಪದ ಶೈಲಿಗಳಿ೦ದ ನೃತ್ಯ ರೂಪು ಗೊ೦ಡಿತೆ೦ದು ಶಿವರಾಮ ಕಾರ೦ತರ "ಯಕ್ಷಗಾನ ಬಯಲಾಟ" ಎ೦ಬ ಸ೦ಶೋಧನಾ ಪ್ರಬಂದಗಳ ಸಂಕಲನದಲ್ಲಿ ಹೇಳಿದೆ.[೧] ೧೫೦೦ ರಷ್ಟರಲ್ಲಿ ವ್ಯವಸ್ತಿತವಾಗಿ ಯಕ್ಷಗಾನ ರೂಢಿಯಲ್ಲಿತ್ತು ಎ೦ಬುದು ಬಹಳ ವಿದ್ವಾ೦ಸರು ಒಪ್ಪುವ ವಿಚಾರ.

ಯಕ್ಷಗಾನದ ಪ್ರಭೇದಗಳು[ಬದಲಾಯಿಸಿ]

 • ಯಕ್ಷಗಾನದಲ್ಲಿ ಅನೇಕ ರೀತಿಯ ಪ್ರಭೇದಗಳಿದ್ದು ಅವುಗಳಲ್ಲಿ ಯಕ್ಷಗಾನ ಬಯಲಾಟವು ಅತ್ಯಂತ ಜನಪ್ರಿಯವಾದುದು. ಬಯಲಾಟವೆಂದರೆ ವೇಷಭೂಷಣಗಳೊಂದಿಗೆ ರಂಗಭೂಮಿಯಲ್ಲಿ ಆಡುವ ಯಕ್ಷಗಾನ ಪ್ರಭೇದ. ಕುಣಿತ ಎಂಬ ಹೆಸರು ಇದಕ್ಕಿದೆ. ಮೊದ ಮೊದಲು ಹಬ್ಬ ಹರಿದಿನಗಳಂದು ಊರಿನ ಬಯಲಿನಲ್ಲಿ ರಾತ್ರಿಯಿಡೀ ಈ ಬಯಲಾಟ ಹೆಚ್ಚಾಗಿ ನಡೆಯುತ್ತಿದ್ದ ಕಾರಣ "ಬಯಲಾಟ" ಎಂಬ ಹೆಸರು ರೂಢಿಯಲ್ಲಿದೆ. ಜನರು ಇದನ್ನು ಸರಳವಾಗಿ "ಆಟ" ಎಂದೂ ಕರೆಯುತ್ತಾರೆ.
 • ಆದರೆ ಈಗೀಗ ರಾತ್ರಿಯಿಡೀ ನಡೆಯುವ ಬಯಲಾಟದೊಂದಿಗೆ ೨-೩ ಘಂಟೆಗಳ ಕಾಲ ನಡೆಯುವ ಯಕ್ಷಗಾನವೂ ಬಳಕೆಯಲ್ಲಿದೆ. ಬಯಲಾಟದಲ್ಲಿ ವೇಷಭೂಷಣ, ರಂಗಸ್ಥಳ, ಭಾಗವಂತಿಕೆ (ಹಾಡುಗಾರಿಕೆ), ಅಭಿನಯ, ಮಾತುಗಾರಿಕೆ, ನೃತ್ಯ - ಹೀಗೆ ಸಾಂಪ್ರದಾಯಿಕ ಯಕ್ಷಗಾನದ ಎಲ್ಲ ಮಜಲುಗಳನ್ನೂ ಕಾಣಬಹುದು. ಯಕ್ಷಗಾನದಲ್ಲಿ ಮೂಡಲಪಾಯ ಮತ್ತು ಪಡುವಲಪಾಯ ಎಂಬ ಎರಡು ಮ್ರಮುಖ ಪ್ರಭೇದಗಳಿವೆ. ಪಶ್ಚಿಮ ಘಟ್ಟದ ಪೂರ್ವಕ್ಕೆ ಪ್ರಚಲಿತವಿರುವದು ಮೂಡಲಪಾಯ.
 • ಉತ್ತರ ಕರ್ನಾಟಕದಲ್ಲಿ ಬಹು ಜನಪ್ರಿಯವಾಗಿರುವ ಶ್ರೀಕೃಷ್ಣ ಪಾರಿಜಾತ ಮೂಡಲ ಪಾಯದಲ್ಲಿ ಗಮನಾರ್ಹ. ಮಲೆನಾಡು ಮತ್ತು ಕರಾವಳಿಯಲ್ಲಿ ಪ್ರಚಲಿತವಿರುವುದು ಪಡುವಲಪಾಯ. ಪಡುವಲಪಾಯದಲ್ಲಿ ೩ ವಿಭಾಗಗಳಿವೆ.ಅವು ತೆಂಕುತಿಟ್ಟು,ಬಡಗುತಿಟ್ಟು ಮತ್ತು ಉತ್ತರದ ತಿಟ್ಟು (ಬಡಾಬಡಗು).
 • ಉತ್ತರ ಕನ್ನಡ, ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿ ಉತ್ತರದ ತಿಟ್ಟು ಶೈಲಿಯ ಬಯಲಾಟಗಳು ಕಂಡು ಬಂದರೆ ಉಡುಪಿಯಲ್ಲಿ ಬಡಗುತಿಟ್ಟು ದಕ್ಷಿಣ ಕನ್ನಡ ಹಾಗೂ ಕಾಸರಗೋಡು ಜಿಲ್ಲೆಗಳಲ್ಲಿ ತೆಂಕುತಿಟ್ಟು ಶೈಲಿಯ ಯಕ್ಷಗಾನವನ್ನು ಕಾಣಬಹುದು. ವೇಷಭೂಷಣಗಳ ವಿನ್ಯಾಸ, ನೃತ್ಯದ ಶೈಲಿ, ಭಾಗವತಿಕೆ ಮತ್ತು ಹಿಮ್ಮೇಳಗಳಲ್ಲಿ ಕಂಡುಬರುವ ಕೆಲವು ವ್ಯತ್ಯಾಸಗಳ ಆಧಾರದ ಮೇಲೆ ಈ ವಿಂಗಡಣೆಯನ್ನು ಮಾಡಲಾಗಿದೆಯೇ ಹೊರತು ಯಕ್ಷಗಾನದ ಮೂಲ ತತ್ವ, ಆಶಯಗಳು ೩ ಶೈಲಿಗಳಲ್ಲಿಯೂ ಒಂದೇ ಆಗಿರುತ್ತದೆ.

ತಾಳ ಮದ್ದಲೆ[ಬದಲಾಯಿಸಿ]

 • ಯಕ್ಷಗಾನದ ಇನ್ನೊಂದು ಪ್ರಮುಖ ವಿಭಾಗವೆಂದರೆ "ತಾಳ ಮದ್ದಲೆ". ಬಯಲಾಟಗಳಿಗಿಂತ ಇವು ವಿಭಿನ್ನವಾದವುಗಳು. ಇಲ್ಲಿ ವೇಷಭೂಷಣ, ನೃತ್ಯ ಮತ್ತು ಭಾವಾಭಿನಯಗಳು ಕಂಡು ಬರುವುದಿಲ್ಲ. ಭಾಗವತಿಕೆ, ಹಿಮ್ಮೇಳ ಹಾಗೂ ಮಾತುಗಾರಿಕೆಗಳು ಮಾತ್ರ ಇಲ್ಲಿರುತ್ತವೆ. ಬಯಲಾಟದಂತೆ ಇಲ್ಲಿಯೂ ಒಂದು ಪ್ರಸಂಗವನ್ನು ಆಯ್ದುಕೊಳ್ಳಲಾಗುತ್ತದೆ.
 • ಭಾಗವತರು ಹಾಡುಗಾರಿಕೆಯ ಮೂಲಕ ಕಥಾನಕವನ್ನು ಹೇಳುತ್ತಾ ಹೋಗುತ್ತಾರೆ. ಇಲ್ಲಿ ಪಾತ್ರಧಾರಿಗಳ ಬದಲು ಅರ್ಥಧಾರಿಗಳಿರುತ್ತಾರೆ. ಅರ್ಥಧಾರಿಗಳು ಹಾಡುಗಾರಿಕೆಯಲ್ಲಿ ಹೇಳಲ್ಪಟ್ಟ ಕಥೆಯ ಭಾಗವನ್ನು ಮಾತುಗಾರಿಕೆಯ ಮೂಲಕ ಚರ್ಚಿಸುತ್ತಾರೆ. ಬಯಲಾಟಕ್ಕೂ ತಾಳ ಮದ್ದಲೆಗೂ ಪ್ರಮುಖ ವ್ಯತ್ಯಾಸವಿರುವುದೇ ಈ ಮಾತುಗಾರಿಕೆಯಲ್ಲಿ.
 • ಬಯಲಾಟಗಳಲ್ಲಿ ನೃತ್ಯ ಮತ್ತು ಅಭಿನಯಗಳೇ ಪ್ರಧಾನ. ಮಾತುಗಾರಿಕೆ ಇದ್ದರೂ ಅದು ಕೇವಲ ಹಾಡುಗಾರಿಕೆಯಲ್ಲಿ ಹೇಳಲ್ಪಟ್ಟ ಕಥಾನಕದ ಸಾರಾಂಶವಷ್ಟೇ ಆಗಿರುತ್ತದೆ ಯೇ ವಿನಃ ವಾದ ಮಂಡನೆಗೆ ಹೆಚ್ಚು ಅವಕಾಶವಿರುವುದಿಲ್ಲ. ಅದೂ ಅಲ್ಲದೇ ಬಯಲಾಟದಲ್ಲಿ ಬರುವ ಸಂಭಾಷಣೆ ಗಳನ್ನು ಸಾಮಾನ್ಯವಾಗಿ ಮೊದಲೇ ಸಿಧ್ಧಪಡಿಸಿರುತ್ತಾರೆ. ಹಾಗಾಗಿ ಈ ಮಾತುಗಾರಿಕೆಯು ಭಾಗವತಿಕೆಯಲ್ಲಿ ಹೇಳಲ್ಪಟ್ಟ ಕಥೆಯ ಚೌಕಟ್ಟನ್ನು ದಾಟಿ ಆಚೆ ಹೋಗುವುದಿಲ್ಲ. ಆದರೆ ತಾಳ ಮದ್ದಲೆಗಳು ಹಾಗಲ್ಲ. ತಾಳ ಮದ್ದಲೆಯಲ್ಲಿ ವಾದವೇ ಪ್ರಮುಖವಾದದ್ದು.
 • ಇಲ್ಲಿ ಈ ಭಾಗವತರು ಹೇಳುವ ಒಂದು ಹಾಡಿಗೆ ಇಂತಿಷ್ಟೇ ಸಂಭಾಷಣೆಗಳನ್ನು ಹೇಳಬೇಕು ಎಂದು ಪೂರ್ವ ನಿರ್ಧಾರವಾಗಿರುವುದಿಲ್ಲ. ಭಾಗವತರು ಹಾಡುಗಾರಿಕೆಯ ಮೂಲಕ ವಾದಕ್ಕೆ ಒಂದು ಪೀಠಿಕೆ ಹಾಕಿ ಕೊಡುತ್ತಾರೆ. ಆಮೇಲೆ ಆ ಕಥಾನಕದ ಭಾಗದ ಮೇಲೆ ಅರ್ಥಧಾರಿಗಳಿಂದ ವಾದ ಆರಂಭವಾಗು ತ್ತದೆ. ಈ ವಾದ ಸಂಧರ್ಭಕ್ಕನುಗುಣವಾಗಿ ಪ್ರಸಂಗದಿಂದ ಪ್ರಸಂಗಕ್ಕೆ ಬದಲಾಗುತ್ತಲೂ ಹೋಗಬಹುದು. ವಾದವೇ ತಾಳ ಮದ್ದಲೆಗಳ ಜೀವಾಳವಾಗಿರುತ್ತದೆ.

ಯಕ್ಷಗಾನದ ಪ್ರಮುಖರು[ಬದಲಾಯಿಸಿ]

ಪಾತ್ರಧಾರಿಗಳು[ಬದಲಾಯಿಸಿ]

ದಿ. ಕೆರೆಮನೆ ಶಿವರಾಮ ಹೆಗಡೆ, ದಿ. ಕೆರೆಮನೆ ಮಹಾಬಲ ಹೆಗಡೆ, ದಿ. ಕೆರೆಮನೆ ಶಂಭು ಹೆಗಡೆ, ದಿ. ಆಕ್ಟರ್ ಜೋಷಿ ಗೋಕರ್ಣ. ಚಿಟ್ಟಾಣಿ ರಾಮಚಂದ್ರ ಹೆಗಡೆ, ಕೊಂಡದಕುಳಿ ರಾಮಚಂದ್ರ ಹೆಗಡೆ, ಐರೋಡಿ ರಾಮ ಗಾಣಿಗ, ಮಂಟಪ ಪ್ರಭಾಕರ ಉಪಾಧ್ಯಾಯ, ಗೋಡೆ ನಾರಾಯಣ ಹೆಗಡೆ, ಬಳ್ಕೂರು ಕೃಷ್ಣಯಾಜಿ, ಕೆರೆಮನೆ ಶಿವಾನ೦ದ ಹೆಗಡೆ, ಹಡಿನಬಾಳ ಶ್ರೀಪಾದ ಹೆಗಡೆ, ಜಲವಳ್ಳಿ, ಕಣ್ಣಿಮನೆ ಗಣಪತಿ ಹೆಗಡೆ, ಸುಬ್ರಹ್ಮಣ್ಯ ಹೆಗಡೆ ಚಿಟ್ಟಾಣಿ, ,ತೀರ್ಥಹಳ್ಳಿ ಗೋಪಾಲಚಾರಿ, ಮಂಕಿ ಈಶ್ವರ ನಾಯ್ಕ್, ನೀಲ್ಕೋಡ್ ಶಂಕರ ಹೆಗಡೆ, ಸುಬ್ರಮಣ್ಯ ಯಲಗುಪ್ಪ, ವಿಶ್ವನಾಥ ಆಚಾರ್ಯ ತೊಂಬತ್ತು ಭಾಸ್ಕರ ಜೋಶಿ ಮುಂತಾದವರು. ತೆಂಕುತಿಟ್ಟು ಪ್ರಮುಖರಾದ ದಿ.ಕುರಿಯ ವಿಠಲ ಶಾಸ್ತ್ರಿ ,ದಿ. ಕಟೀಲು ಪುರುಷೋತ್ತಮ ಭಟ್, ದಿ.ಶೇಣಿ ಗೋಪಾಲಕೃಷ್ಣ ಭಟ್, ದಿ.ಕದ್ರಿ ವಿಷ್ಣು, ದಿ.ಗುಡ್ದಪ್ಪ ಗೌಡ, ದಿ.ಕಿಶಾನ್ ಬಾಬು , ದಿ.ಅಳಕೆ ರಾಮಯ್ಯ ರೈ, ದಿ.ಎಂಪೆಕಟ್ಟೆ ರಾಮಯ್ಯ ರೈ, ದಿ.ಗುಬ್ಬೆ ರಾಮಯ್ಯ ರೈ, ದಿ.ಗುಂಪೆ ರಾಮಯ್ಯ ಶೆಟ್ಟಿ, ದಿ.ಪುತ್ತೂರು ಕೃಷ್ಣ ಭಟ್, ದಿ. ಪುತ್ತೂರುನಾರಾಯಣ ಹೆಗ್ದೆ, ದಿ.ಬೋಳಾರ ನಾರಾಯಣ ಶೆಟ್ಟಿ, ದಿ.ದೊಡ್ಡ ಅಂಬು, ದಿ.ಚಿಕ್ಕ ಅಂಬು, ಶಿವರಾಮ ಜೋಗಿ, ಪುಷ್ಪರಾಜ ಜೋಗಿ, ಪುತ್ತೂರು ಶೀನ ಪ್ಪ ಭಂಡಾರಿ, ಪುತ್ತೂರು ಶ್ರೀಧರ ಭಂಡಾರಿ , ದಿ.ಪಡ್ರೆ ಚಂದ್ರು, ಪಡ್ರೆ ಕುಮಾರ, ಕುಂಬ್ಳೆ ಸುಂದರ ರಾವ್, ವಾಸುದೇವ ಸಾಮಗ, ಸಿದ್ಧಕಟ್ಟೆ ಚೆನ್ನಪ್ಪ ಶೆಟ್ಟಿ, ಕೆ. ಗೋವಿಂದ ಭಟ್, ಪಾತಾಳ ವೆಂಕಟರಮಣ ಭಟ್, ಕೋಳ್ಯೂರು ರಾಮಚಂದ್ರ ರಾವ್. ಪುಂಡರೀಕಾಕ್ಷ ಉಪಾಧ್ಯಾಯ, ಭೀಮ ಭಟ್, ಎಕ್ಕಾರು ಉಮೇಶ ಶೆಟ್ಟಿ, ತೊಡಿಕಾನ ವಿಶ್ವನಾಥ ಗೌಡ, ಬಾಯಾರು ರಮೇಶ ಭಟ್, ಎಂ.ಕೆ.ರಮೇಶ ಆಚಾರ್ಯ, ರೆಂಜಾಳ ರಾಮಕೃಷ್ಣ ರಾವ್, ಸುಣ್ಣಂಬಳ ವಿಶ್ವೇಶ್ವರ ಭಟ್, ಪನೆಯಾಲ ರವಿರಾಜ, ಕಾಸರಗೋಡು ಸುಬ್ರಾಯ ಹೊಳ್ಳ , ಪೆರುವಾಯಿ ನಾರಾಯಣ ಶೆಟ್ಟಿ, ಬೆಳ್ಳಾರೆ ವಿಶ್ವನಾಥ ರೈ, ಬೆಳ್ಳಾರೆ ಮಂಜುನಾಥ ಭಟ್, ಪೆರಾರ ಲಕ್ಷ್ಮಣ ಕೋಟ್ಯಾನ್, ಕಾವಳಕಟ್ಟೆ ದಿನೇಶ ಶೆಟ್ಟಿ, ಕೈರಂಗಳ ಕೃಷ್ಣ ಮೂಲ್ಯ, ವಿಟ್ಲ ವಿಷ್ಣು ಶರ್ಮ, ದಿ.ಬಣ್ಣದ ಕುಟ್ಯಪ್ಪು, ದಿ.ಬಣ್ಣದ ಅರ್ಬಿ ಅಣ್ಣಪ್ಪ ಚೌಟ, ದಿ.ಬಣ್ಣದ ಚಂದ್ರಗಿರಿ ಅಂಬು, ದಿ.ಬಣ್ಣದ ಮಹಾಲಿಂಗ, ದಿ.ಸಂಜೀವ ಚೌಟ, ದಿ. ಬಣ್ಣದ ಗೇರುಕಟ್ಟೆ ಗಂಗಯ್ಯ ಶೆಟ್ಟಿ, ಅಲ್ಲದೆ ಬಣ್ಣದ ಡಿ. ಗೋಪಾಲ ಭಟ್, ಬಣ್ಹದ ಕುಪ್ಪೆಪದವು ಸುರೇಶ ಶೆಟ್ಟಿ, ಬಣ್ಣದ ಕೊಯಿಕುಡೆ ಮೂಡುಮನೆ ಶಶಿಧರ ಶೆಟ್ಟಿ, ಬಣ್ಣದ ಸುಬ್ರಾಯ ಪಾಟಾಳಿ, ಬಣ್ಣದ ಎಡನೀರು ಹರಿನಾರಾಯಣ ಭಟ್, ಬಣ್ಣದ ಶಿವಪ್ರಸಾದ್ ಭಟ್, ಬಣ್ಣದ ರಾಮ ಕುಲಾಲ್, ಬಣ್ಣದ ಐತಪ್ಪ ಗೌಡ, ಬಣ್ಣದ ನಗ್ರಿ ಮಹಾಬಲ ರೈ, ಚಂದ್ರಶೇಖರ ಶೆಟ್ಟಿ ಧರ್ಮಸ್ಥಳ, ಉಬರಡ್ಕ ಉಮೇಶ ಶೆಟ್ಟಿ, ಸಂಜಯ ಕುಮಾರ್ ಗೋಣಿಬೀಡು, ನಿಡ್ಲೆ ಗೋವಿಂದ ಭಟ್, ಕುಂಬ್ಳೆ ಶ್ರೀಧರ್ ರಾವ್, ಕಾಯರ್ತಡ್ಕ ವಸಂತ ಗೌಡ, ದಿ.ನಯನ ಕುಮಾರ್, ಮಹೇಶ ಮಣಿಯಾಣಿ, ಮನೀಷ್ ಪಾಟಾಳಿ ಎಢನೀರು ಮುಂತಾದವರು.

ಭಾಗವತಿಕೆ[ಬದಲಾಯಿಸಿ]

 •  :ರಾಘವೇ೦ದ್ರ ಮಯ್ಯ್ಯ
 • ನೆಬ್ಬೂರು ನಾರಾಯಣ,
 • ದಿ. ನಾರಣಪ್ಪ ಉಪ್ಪೂರ ಮಾರ್ವಿ,
 • ದಿ. ಕಡತೋಕ ಮಂಜುನಾಥ ಭಾಗವತ,
 • ಕೊಳಗಿ ಕೇಶವ ಹೆಗಡೆ,
 • ದಿ. ಗುಂಡ್ಮಿ ಕಾಳಿಂಗ ನಾವಡ,
 • ಸುಬ್ರಹ್ಮಣ್ಯ ಧಾರೇಶ್ವರ,
 • ರಾಘವೇಂದ್ರ ಆಚಾರ್ಯ, ಜನ್ಸಾಲೆ
 • ಕೆ.ಪಿ. ಹೆಗಡೆ,
 • ಉಮೇಶ ಭಟ್ಟ ಬಾಡಾ,
 • ನಾರಾಯಣ ಶಬರಾಯ,
 • ಸುರೇಶ್ ಶೆಟ್ಟಿ
 • ಬಲಿಪ ನಾರಾಯಣ ಭಾಗವತರು,
 • ಹೊಸ್ತೋಟ ಮಂಜುನಾಥ ಭಾಗವತ,
 • ದಾಮೋದರ ಮಂಡೆಚ್ಚ,
 • ಪೋಳ್ಯ ಲಕ್ಷ್ಮೀನಾರಾಯಣ ಶೆಟ್ಟಿ,
 • ಲೀಲಾವತಿ ಬೈಪಾಡಿತ್ತಾಯ (ಏಕೈಕ ವೃತ್ತಿಪರ ಮಹಿಳಾ ಭಾಗವತರು),
 • ಪದ್ಯಾಣ ಗಣಪತಿ ಭಟ್,
 • ದಿನೇಶ ಅಮ್ಮಣ್ಣಾಯ, ಪುತ್ತಿಗೆ ರಘುರಾಮ ಹೊಳ್ಳ.
 • ಮರವಂತೆ ನರಸಿಂಹ ದಾಸ್ ಭಾಗವತರು,
 • ಮರವಂತೆ ಶ್ರೀನಿವಾಸ ದಾಸ್ ಭಾಗವತರು,
 • ಮರವಂತೆ ಕೃಷ್ಣ ದಾಸ್, ಮರವಂತೆ ದೇವರಾಜ್ ದಾಸ್,
 • ಹೆರಂಜಾಲು ಗೋಪಾಲ ಗಾಣಿಗ,
 • ಬಲಿಪ ಪ್ರಸಾದ ಭಾಗವತರು,
 • ಬಲಿಪ ಗೋಪಾಲಕೃಷ್ಣ ಭಾಗವತರು,
 • ಕುಬಣೂರು ಶ್ರೀಧರ ರಾವ್,
 • ಅಂಡಾಲ ದೇವಿಪ್ರಸಾದ ಶೆಟ್ಟಿ,
 • ಬೊಟ್ಟಿಕೆರೆ ಪುರುಷೊತ್ತಮ ಪೂಂಜ,
 • ರಾಮಕೃಶ್ಣ ಹೆಗಡೆ,
 • ವಿದ್ವನ್ ಗಣಪತಿ ಭಟ್,
 • ಶಂಕರ ಭಟ್ ಬ್ರಮ್ಮರು,
 • ಕುರಿಯ ಗಣಪತಿ ಶಾಸ್ತ್ರಿ,
 • ರಾಮಕೃಷ್ಣ ಮಯ್ಯ
 • ಕರುಣಾಕರ ಶೆಟ್ಟಿಗಾರು ಕಾಶಿಪಟ್
 • ಸತೀಶ್ ಪಟ್ಲ
 • ವಿಷ್ಣು ಮರಾಠೆ

ಹಿಮ್ಮೇಳ ಕಲಾವಿದರು[ಬದಲಾಯಿಸಿ]

 • ದಿ.ಚಿಪ್ಪಾರು ಕೃಷ್ಣಯ್ಯ ಬಲ್ಲಾಳರು.
 • ದಿ. ನೆಡ್ಲೆ ನರಸಿಂಹ ಭಟ್,
 • ಕೆ.ಹರಿನಾರಾಯಣ ಬೈಪಾಡಿತ್ತಾಯ,
 • ಕುದ್ರೆಕೂಡ್ಲು ರಾಂ ಭಟ್,
 • ಕೇಶವ ಬೈಪಾಡಿತ್ತಾಯ,
 • ಮೋಹನ ಬೈಪಾಡಿತ್ತಾಯ,
 • ಪದ್ಯಾಣ ಶಂಕರನಾರಾಯಣ ಭಟ್,
 • ಅಡೂರು ಗಣೇಶ್ ರಾವ್.
 • ಹಿರಿಯಡ್ಕ ಗೋಪಾಲ ರಾವ್,
 • ಮರವಂತೆ ರಾಮಚಂದ್ರ ದಾಸ್,
 • ದಿ. ಹುಂಚದ ಕಟ್ಟೆ ಶ್ರೀನಿವಾಸ ಆಚಾರ್,
 • ದಿ. ದುರ್ಗಪ್ಪ ಗುಡಿಗಾರ್,
 • ಶಂಕರ ಭಾಗವತ್ ಯಲ್ಲಾಪುರ,
 • ಕವ್ವಾಳೆ ಗಣಪತಿ ಭಟ್,
 • ರಾಮಕೃಷ್ಣ ಮಂದಾರ್ತಿ,

ತಾಳ ಮದ್ದಲೆ[ಬದಲಾಯಿಸಿ]

ಪ್ರಮುಖ ಯಕ್ಷಗಾನ ಮೇಳಗಳು[ಬದಲಾಯಿಸಿ]

 • ಶ್ರೀ ಅನ್ನಪೂಣೇಶ್ವರಿ ಯಕ್ಷಗಾನ ಮಂಡಳಿ ಸುಂಕದಕಟ್ಟೆ ಮೇಳ
 • ಶ್ರೀ ದುರ್ಗಾಪರಮೆಶ್ವರೀ ದಶಾವತಾರ ಯಕ್ಷಗಾನ ಮಂಡಳಿ, ಮಂದಾರ್ತಿ
 • ಶ್ರೀ ಇಡಗುಂಜಿ ಮಹಾಗನಪತಿ ಯಕ್ಷಗಾನ ಮಂಡಳಿ ಕೆರೆಮನೆ keremane mela,
 • ಶ್ರೀ ಗುರುನರಸಿಂಹ ಕೃಪಾಪೋಷಿತ ಯಕ್ಷಗಾನ ಮಂಡಳಿ, ಸಾಲಿಗ್ರಾಮ
 • ಶ್ರೀ ಆನಂತಪದ್ಮನಾಭ ಕೃಪಾಪೋಷಿತ ಯಕ್ಷಗಾನ ಮಂಡಳಿ, ಪೆರ್ಡೂರು
 • ಶ್ರೀ ಚೌಡಮ್ಮ ದೇವಿ ಕೃಪಾ ಪೋಷಿತ ಯಕ್ಷಗಾನ ಮಂಡಳಿ ಶ್ರೀ ಕ್ಷೇತ್ರ ಸಿಂಗದೂರು
 • ಕೊಂಡದಕುಳಿ ಮೇಳ,
 • ಶ್ರೀ ಮಂಜುನಾಥೇಶ್ವರ ಕೃಪಾಪೋಷಿತ ಯಕ್ಷಗಾನ ಮಂಡಳಿ, ಧರ್ಮಸ್ಥಳ
 • ಶ್ರೀ ದುರ್ಗಾಪರಮೆಶ್ವರೀ ದಶಾವತಾರ ಯಕ್ಷಗಾನ ಮಂಡಳಿ, ಕಟೀಲು
 • ಶ್ರೀ ದುರ್ಗಾಪರಮೆಶ್ವರೀ ಕೃಪಾಪೋಷಿತ ಯಕ್ಷಗಾನ ಮಂಡಳಿ, ಕಮಲಶಿಲೆ
 • ಶ್ರೀ ಅಮೃತೇಶ್ವರಿ ಯಕ್ಷಗಾನ ಮಂಡಳಿ
 • ಶ್ರೀ ಬ್ರಹ್ಮಲಿಂಗೇಶ್ವರ ಕೃಪಾಪೋಷಿತ ಯಕ್ಷಗಾನ ಮಂಡಳಿ, ಮಾರಣಕಟ್ಟೆ
 • ಶ್ರೀ ರಾಮಚಂದ್ರ ಕೃಪಾಪೋಷಿತ ಯಕ್ಷಗಾನ ಮಂಡಳಿ, ಹೊಸನಗರ
 • ಬಗ್ವಾಡಿ ಮೇಳ
 • ಸೌಕೂರು ಮೇಳ

ಚಿತ್ರಶಾಲೆ[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]

 1. ಶಿವರಾಮ ಕಾರಂತ : ಯಕ್ಷಗಾನ ಬಯಲಾಟ
"https://kn.wikipedia.org/w/index.php?title=ಯಕ್ಷಗಾನ&oldid=755420" ಇಂದ ಪಡೆಯಲ್ಪಟ್ಟಿದೆ