ವಿಷಯಕ್ಕೆ ಹೋಗು

ಬಂಗಾರ ಆಚಾರ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಬಂಗಾರ ಆಚಾರ್
[[Image:
|220px| ]]
ಬಂಗಾರ ಆಚಾರ್
ರಾಷ್ಟ್ರೀಯತೆ ಭಾರತೀಯ
ಪುರಸ್ಕಾರಗಳು ೨೦೧೯: ಕರ್ನಾಟಕ ಯಕ್ಷಗಾನ ಅಕಾಡೆಮಿಯ ವತಿಯಿಯಿಂದ, ಜೀವಮಾನ ಸಾಧನೆ ಗುರುತಿಸಿ ಪಾರ್ತಿ ಸುಬ್ಬ ಪ್ರಶಸ್ತಿ []

೨೦೨೦: ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ[]

ಬಂಗಾರ ಅಚಾರ್ ಮೂಡಲಪಾಯ ಯಕ್ಷಗಾನ ಕಲಾವಿದರು. ಪಶ್ಚಿಮ ಘಟ್ಟದ ಪೂರ್ವಕ್ಕೆ ಪ್ರಚಲಿತವಿರುವ ಮೂಡಲಪಾಯ ಬಗೆಯ ಯಕ್ಷಗಾನ ಕಲೆಯಲ್ಲಿ ೧೯೬೦ರ ದಶಕದಿಂದ ಪ್ರದರ್ಶನ ನೀಡುತ್ತಾ ಬಂದಿದ್ದಾರೆ. ಭಾಗವತ, ಮದ್ದಳೆ ಮತ್ತು ಗೊಂಬೆ ಕುಣಿತ, ಈ ಮೂರರಲ್ಲೂ ಪರಿಣತಿ ಪಡೆದಿದ್ದ ಆಚಾರರು, ಅಪರೂಪದ ಕಲಾವಿದ.

ಬದುಕು

[ಬದಲಾಯಿಸಿ]

ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಕಬ್ಬಳ್ಳಿಯ ನಿವಾಸಿಯಾಗಿದ್ದ ಬಂಗಾರ ಆಚಾರ್/ಆಚಾರಿ ಮರಗೆಲಸದ ಕುಟುಓಬದ ಹಿನ್ನೆಲೆಯವರು.ಬಾಲ್ಯದ ಆಸಕ್ತಿಯಿಂದ ಮೂಡಲಪಾಯ ಯಕ್ಷಗಾನ ಕಲಿಯಲು ಆರಂಭಿಸಿ ೧೯೬೦ರ ದಶಕದಿಂದ, ಚಾಮರಾಜನಗರದಂತಹ ಗ್ರಾಮೀಣ ಪ್ರದೇಶದಲ್ಲಿ ಮೂಡಲಪಾಯ ಯಕ್ಷಗಾನ ಕಲೆಯನ್ನು ಪ್ರಚುರ ಪಡಿಸುತ್ತಿದ್ದರು. ಯಕ್ಷಗಾನದಲ್ಲಿ ಭಾಗವತಿಕೆ, ಹಿಮ್ಮೇಳ ಹಾಗೂ ಮಾತುಗಾರಿಕೆ ಇವುಗಳಲ್ಲಿ ಪ್ರಬುಧತೆ ಸಾಧಿಸಿ, ತದ್ನಂತರ ಗೊಂಬೆ ಕುಣಿತವನ್ನು ಕಲಿತು ಅದರಲ್ಲೂ ಪರಿಣತಿ ಸಾಧಿಸಿದರು..

ವೈಶಿಷ್ಠ್ಯ

[ಬದಲಾಯಿಸಿ]

ಬಂಗಾರ ಆಚಾರ್, ತಮ್ಮ ಕುಲಕಸುಬಾದ ಮರಗೆಲಸದ ಜೊತೆಗೆಯೇ, ಮೂಡಲಪಾಯ ಯಕ್ಷಗಾನವನ್ನೂ ವೃತ್ತಿಯಾಗಿ ನಡೆಸುತ್ತಿದ್ದರು.ಚಾಮರಾಜನಗರ ಜಿಲ್ಲೆಯಾದ್ಯಂತ ಅನೇಕರಿಗೆ ಯಕ್ಷಗಾನದಲ್ಲಿ ತರೆಬೇತಿ ನೀಡಿ, ಉತ್ತಮ ಯಕ್ಷಗಾನ ಪಟುವಾಗಲು ಸ್ಫೂರ್ತಿ ನೀಡಿದ್ದರು.

ಬಂಗಾರ ಆಚಾರ್ ೧೯೩೮ರಲ್ಲಿ ಹುಟ್ಟಿದ್ದರು. ಆ ದಿನಗಳಲ್ಲಿ, ಗ್ರಾಮಗಳಲ್ಲಿ ಹುಟ್ಟಿನ ದಿನವನ್ನು ಬರೆದು ಇಡದ ಕಾರಣ, ಅವರ ಜನ್ಮ ದಿನಾಂಕ ದಾಖಲಾಗಿಲ್ಲ. ಬಂಗಾರ ಆಚಾರ್ ೨೯ ಸೆಪ್ಟೆಂಬರ್ ೨೦೨೨ರಂದು ತಮ್ಮ ಸ್ವಗ್ರಾಮ ಕಬ್ಬಳ್ಳಿಯಲ್ಲಿಯೇ ನಿಧನ ಹೊಂದಿದರು.

ಸನ್ಮಾನ

[ಬದಲಾಯಿಸಿ]
  1. ೨೦೧೯: ಕರ್ನಾಟಕ ಯಕ್ಷಗಾನ ಅಕಾಡೆಮಿಯ ವತಿಯಿಯಿಂದ, ಜೀವಮಾನ ಸಾಧನೆ ಗುರುತಿಸಿ ಪಾರ್ತಿ ಸುಬ್ಬ ಪ್ರಶಸ್ತಿ []
  2. ೨೦೨೦: ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ[]


ಉಲ್ಲೇಖಗಳು

[ಬದಲಾಯಿಸಿ]
  1. "ಆರ್ಕೈವ್ ನಕಲು". Archived from the original on 2022-10-02. Retrieved 2022-10-02.
  2. https://www.timesnownews.com/bengaluru/article/rajyotsava-awards-2020-65-people-to-be-awarded-on-nov/674037
  3. "ಆರ್ಕೈವ್ ನಕಲು". Archived from the original on 2022-10-02. Retrieved 2022-10-02.
  4. https://www.timesnownews.com/bengaluru/article/rajyotsava-awards-2020-65-people-to-be-awarded-on-nov/674037