ವಿಷಯಕ್ಕೆ ಹೋಗು

ಕಾಡ್ಯನಾಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕಾಡ್ಯನಾಟ
ಕಾಡ್ಯನಾಟ

ಕಾಡ್ಯನಾಟವು ಒಂದು ಆಚರಣೆಯಾಗಿದೆ. ಇದನ್ನು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಾಸವಾಗಿದ್ದ ಮೇರ ಹರಿಜನರು ಕಾಡ್ಯ ದೇವರನ್ನು ಉಪಚರಿಸಲು ಆಚರಿಸುತ್ತಾರೆ.

ಕಾಡ್ಯನಮನೆ

[ಬದಲಾಯಿಸಿ]

ಕಾಡ್ಯನ ಮನೆ ಹಾಗೂ ಕಾಡ್ಯನ ಆರಾಧನ ಕೇಂದ್ರಗಳು ಮೇರು ವಾಸವಾಗಿರುವ ಪ್ರದೇಶಗಳಲ್ಲಿ ಕಂಡುಬರುತ್ತದೆ. ಕಾಡ್ಯನಾಟವನ್ನು ಆಚರಿಸುವ ಸಂದರ್ಭದಲ್ಲಿ ಹಾಡುವ ಹಾಡುಗಳನ್ನು ಕೇಳಿದಾಗ ಹಾಗೂ ಕಾಡ್ಯನ ಮನೆಗಳಲ್ಲಿರುವ ಹುತ್ತ, ಸರ್ಪನ ಸಂಕೇತವಿರುವ ಕಲ್ಲುಗಳನ್ನು ಹಾಗೂ ಮಣ್ಣಿನ ಕಲಶಗಳನ್ನು ನೋಡಿದಾಗ ಕಾಡ್ಯ ಅಂದರೆ ಕಾಳಿಂಗ ಸರ್ಪ ಹಾಗೂ ಕಾಡ್ಯನಾಮವು ಒಂದು ಎನ್ನುವುದು ತಿಳಿದುಬರುತ್ತದೆ. ಕಾಡ್ಯನ ಮನೆಯಲ್ಲಿ ಎರಡು ಬಗೆಯ ಮನೆಗಳಿವೆ ಅವುಗಳೆಂದರೆ ಆಟದ ಕಾಡ್ಯನ ಮನೆ ಹಾಗೂ ಮುಂಡ ಕಾಡ್ಯನ ಮನೆ.[][]

  • ಆಟದ ಕಾಡ್ಯನ ಮನೆ

ಆಟದ ಕಾಡ್ಯನ ಮನೆಯಲ್ಲಿ ಕಾಡ್ಯ ನಾಟ ಮಾತ್ರ ಆಚರಿಸುತ್ತಾರೆ. ಕಾಡ್ಯನ ಮನೆ ಸಾಮಾನ್ಯವಾಗಿ ಜನವಸತಿಯಿಂದ ದೂರವಿರುವ ಕಾಡಿನೊಳಗೆ ಅಥವ ಊರಿನ ಹೊರಗೆ ಇರುತ್ತದೆ. ಇದು ಬರೀ ಗುಡಿಯಲ್ಲಿ ಕಾಡ್ಯ ದೇವರೇ ಪ್ರಧಾನವಾಗಿರುವ ಹಲವು ದೈವಗಳ ಸಂಕೀರ್ಣ. ಇದು ಗೋಡೆಯಿಂದ ರಚಿಸಲ್ಪಡದೆ ಎರಡು ಎತ್ತರದ, ೧೦ - ೧೨ ಉದ್ದಳತೆಯ ವೇದಿಕೆಯ ಮೇಲೆ ನಾಲ್ಕು ಮೂಲೆಯಲ್ಲಿ ನಿಲ್ಲಿಸಲ್ಪಟ್ಟ ಕಂಬದ ಮೇಲೆ ಹಾಸಿರುವ ಹುಲ್ಲಿನ ಛಾವಣಿ ಇರುತ್ತದೆ. ಈ ಮನೆಯು ಮಧ್ಯಭಾಗದಲ್ಲಿ ೧೦ - ೧೨ ಅಡಿ ಎತ್ತರವಿರುವ ಹತ್ತವನ್ನು ಒಳಗೊಂಡಿರುತ್ತದೆ. ಈ ಹುತ್ತದ ಸುತ್ತಲೂ ನೂರಾರು ಸಂಖ್ಯೆಯ ಬೇರೆ ಬೇರೆ ಗಾತ್ರದ ಮಣ್ಣಿನ ಕಲಶ ಹಾಗೂ ನಾಗನ ಕಲ್ಲುಗಳಿರುತ್ತದೆ. ಕಾಡ್ಯನ ಮನೆಯಲ್ಲಿ ಹಲವು ದೈವಗಳು ವಾಸವಾಗಿರುತ್ತದೆ. ಅವುಗಳಂದರೆ ಸ್ಯಾಮಿ, ಬೃಹ್ಮ,ಯಕ್ಷಿ, ಉಮ್ಮಳ್ಳಿ, ಬೊಬ್ಬರು, ಗಾಮ, ಒಟ್ಟಿಗೆ, ಮಂತ್ರಗಳ, ಕಾನ ಪಂಜರ್ಲಿ, ಕಲ್ಕುಡ, ನಿತ್ರ ಹಾಯ್ಗಳು. ಇದರಲ್ಲಿ ಸ್ವಾಮಿ, ಬ್ರಹ್ಮ, ಯಕ್ಕಿ, ಬೊಬ್ಬರ, ಕಾಡ್ಯ, ಮುಂದಿಗೆಯ, ಹಾಯ್ಗಳು ಸಾವಿಕ ಮಾಜಿಯನ್ನು ಪಡೆಯುತ್ತದೆ. ಹಾಗೂ ಉಳಿದವುಗಳಿಗೆ ರಕ್ತಾಹುತಿಯನ್ನು ನೀಡಲಾಗುತ್ತದೆ. ಪ್ರತಿ ದಿನವು ಪೂಜೆ ಮಾಡದೆ,ಸಂಕ್ರಾಂತಿಯ ದಿನದಂದು ಪಾತ್ರಿ ಒಂದು ತೆಂಗಿನಕಾಯಿ ಒಡೆದು ಹಾಲು ಹಣ್ಣಿನ ಪೂಜೆ ಮಾಡಿಹೋಗುತ್ತಾನೆ. ಈ ಕಾಡ್ಯಮನೆಯ ದೈವವನ್ನು ಹೆಣ್ಣುಕಾಡ್ಯವೆಂದು ಕರೆಯುತ್ತಾರೆ. ಕಾಡ್ಯವನ್ನು ಭಕ್ತಾದಿಗಳು ಅಮ್ಮ, ತಾಯಿ, ಕಾಳಿಕಾಂಬ, ವನದುರ್ಗಾ ಎಂದು ಕರೆಯುತ್ತಾರೆ. ಹುತ್ತವನ್ನು ಹರಿಕೆಯ ರೂಪದಲ್ಲಿ ಬರುವ ಕೆಂಪು ಸೀರೆಯಲ್ಲಿ ಸುತ್ತುತ್ತಾರೆ ಹಾಗೂ ಅಮ್ಮನ ಸಾನಿದ್ಯ ಎಂದು ಕರೆಯುತ್ತಾರೆ.

  • ಮುಂಡು ಕಾಡ್ಯನ ಮನೆ

ಮುಂಡು ಕಾಡ್ಯ ನ ಮನೆಯ ಸ್ವರೂಪ ಹಾಗೂ ರಚನೆ ಆಟದ ಕಾಡ್ಯನಮನೆಯ ಹಾಗೆ ಇದ್ದು ಸ್ವಲ್ಪ ಬದಲಾವಣಿಗಳನ್ನು ಒಳಗೊಂಡಿದೆ. ಈ ಮನೆಯಲ್ಲಿ ಕಾಡ್ಯ ನಾಟವನ್ನು ಆಚರಿಸುದಿಲ್ಲ ಹಾಗೂ ಇಲ್ಲಿನ ಕೆಲವು ಮನೆಗಳಲ್ಲಿ ನಾಗನ ಕಲ್ಲುಗಳಿರುವುದಿಲ್ಲ. ಅಲ್ಲಿಯ ಜನರು ಚರ್ಮರೋಗ, ಕಣ್ಣುಬೆನೆ, ಸಂತಾನಹೀನತೆ ಮುಂತಾದ ತೊಂದರೆಗಳಿದ್ದಲ್ಲಿ ಕಲಶ ಮಾಡಿ ಹಾಕುದಾಗಿ ಹರಕೆಯನ್ನು ಹೇಳಿಕೊಳತ್ತಾರೆ.ಆ ಹರಕೆಯನ್ನು ಸಂಕ್ರಾಂತಿಯ ದಿನದಂದು ಕಾಡ್ಯನ ಮನೆಗೆ ಕುಶವನ್ನು ಕಳಹಿಸುದರ ಮೂಲಕ ಹರಕೆಯನ್ನು ತೀರಿಸುತ್ತಾರೆ. ಈ ಕಾಡ್ಯದ ಮನೆಯ ದೈವವನ್ನು ಗಂಡು ಕಾಡ್ಯನೆಂದು ಹೇಳುತ್ತಾರೆ.

ಕಾಡ್ಯನ ಪುರಾಣ

[ಬದಲಾಯಿಸಿ]

ಮೇರರ ಹೆಣ್ಣು ಹೊನ್ನಿ, ಆಕೆ ಬೆಳೆದು ಹೆಂಗಸಾದಾಗ ಗಾಳಿ ದೇವರ ಸೋಂಕಿನಿಂದ ಗರ್ಬಿಣಿಯಾಗುತ್ತಾಳೆ. ನವಮಾಸ ತುಂಬಿದ ನಂತರ ಏಳು ಮಕ್ಕಳಿಗೆ ಜನ್ಮವನ್ನು ನೀಡುತ್ತಾಳೆ. ಆಗ ಬರಗಾಲ ಬರುತ್ತದೆ. ಮಕ್ಕಳಿಗೆ ತಿನ್ನಲು ಅನ್ನ ಹಾಗೂ ತೊಡಲು ಬಟ್ಟೆಯಿಲ್ಲದೇ, ಹೊನ್ನಿ ಒಡೆಯರ ಮನೆಗೆ ಹೋಗಿ ತನ್ನ ಕಷ್ಟಗಳನ್ನು ಹೇಳಿಕೊಳ್ಳತ್ತಾಳೆ. ಇದನ್ನು ಕೇಳಿದ ಒಡೆಯರು ಮನೆಯ ಮುಂದಿದ್ದ ಮಲಗದ್ದೆ, ಬಡಗು ದಿಕ್ಕಿನಲ್ಲಿದ್ದ ಬಳಸಾಲಿನ ಅಂಗಡಿ ಪಡುವಣ ದಿಕ್ಕಿನಲ್ಲುವ ಗಾಣಿಗನ ಅಂಗಡಿಯನ್ನು ಉಂಬಳಿಯಾಗಿ ನೀಡುತ್ತಾರೆ. ಹೊನ್ನಿ ಒತ್ತವನ್ನು ತೆಗೆದುಕೊಂಡು ಹೊರಡುವಾಗ ಮಳೆಗಾಳಿ ಬೀಸಿತು.ಎಲ್ಲಿ ನೋಡಿದರು ನೀರೇ ಇರುವ ರಿಂದ ಲಯಕೆ ಮನೆಗೆ ಹೋಗಬೇಕಾದರೆ ಹಳ್ಳ ಹೊಳೆಯಾಗಿ ತುಂಬಿ ಹರಿಯಿತು. ಆಗ ಹೊನ್ನಿ ತಾನು ಒಂದೇ ತಂದೆ ತಾಯಂದಿಯರಿಗೆ ಹುಟ್ಟಿದ್ದರೆ ಮಳೆ ನಿಲ್ಲಬೇಕೆಂದಳು. ಮಳೆ ನಿಂತಿತು. ಹೊನ್ನಿ ಮನೆಗೆ ಹೋಗಿ ಭತ್ತವನ್ನು ಕುಟ್ಟಿ ಅಕ್ಕಿಮಾಡಿ ಅದರಿಂದ ಅಕ್ಕಿ ಬೇಯಿಸಿ ಗಂಜಿ ಮಾಡಿದಳು. ಅಂಗಳದಲ್ಲಿ ಏಳು ಹೊಂಡ ಮಾಡಿ ಗಂಜಿ ಅರೆದಳು. ಅವಳು ಎಳು ಮಕ್ಕಳು ಉಂಡರು. ಆ ನಂತರ ಹೊನ್ನಿ ಏಳು ಗುಂಡಿಯನ್ನು ನೆಕ್ಕಿದಳು, ಆದ್ರೆ ಅವಳ ಹಸಿವು ಇಂಗಲಿಲ್ಲ. ಮತ್ತೆ ಹೊನ್ನಿ ದುಡಿದು ತರಬೇಕೆಂದು,ಕಮ್ಮಾರನ ಮನೆಗೆ ಹೋದಳು. ಒಂದೇ ಹೊಡೆತಕ್ಕೆ ಕಾಸಿಗೆ ಜೋಡು ಅಗೆವ, ಕಡಿವ ಸಲಕರಣೆಗಳ ಮಾಡಿಕೊಡಬೇಕೆಂದಳು.

ವೃತ ಮಾಡಿಕೊಟ್ಟ ನಂತರ ಗೆಣಸನ್ನು ಹುಡುಕಿಕೊಂಡು ಮೂಡಣ ದಿಕ್ಕಿಗೆ ಹೊರಟಳು. ಕಾಡು ಗೆಣಸಿನ ಬಿಳು ಕಂಡು ಬಂದಾಗ ಅವನ್ನು ಹಾರೆಯಲ್ಲಿ ಮೊದಲು ಕಡಿದಾಗ ಚಿನ್ನದ ಕಲಶ, ಎರಡನೇ ಬಾರಿ ಕಡೆದಾಗ ಹೊನ್ನಿನ ಕಲಶ, ಮೂರನೆ ಭಾರಿ ಕಡೆದಾಗಿ ಮಣ್ಣಿನ ಕಲಸ ಬಂತು. ಹೊನ್ನಿಗೆ ಆಶ್ಚರ್ಯವಾಗಿ ಒಡೆಯರಿಗೆ ತಿಳಿಸಿದಾಗ ಒಡೆಯರು ಅಡಿಯರ ಮನೆಗೆ ಹೋಗಿ ತಿಳಿಸುವಂತೆ ಹೇಳಿದರು. ಚಿನ್ನದ ಕಳಸವನ್ನು ಅಡಿಯರು ತೆಗೆದು ಕೊಂಡರು, ಹೊನ್ನಿನ ಕಳಸವನ್ನು ಒಡೆಯರು ಹಾಗೆ ಮಣ್ಣಿನ ಕಳಸವನ್ನು ಹೊನ್ನಿ ಇಟ್ಟು ಕೊಂಡಳು. ಅಡಿಗಳು ಚಿನ್ನದ ಕಳಸದ ನಾಗವನ್ನು ಅಚ್ಚುತ ಕಟ್ಟೆಯಲ್ಲಿಯೂ ಒಡೆಯರು ತಾಮ್ರದ ಕಳಸವನ್ನು ತಮ್ಮ ಮನೆಯ ಮುಂದೆಯೂ ಹೊನ್ನಿ ಮಣ್ಣಿನ ಕಳಸವನ್ನು ಮಲಗದ್ದೆಯಲ್ಲಿಯೂ ಇಟ್ಟಳು. ನಂತರ ನಾಗದೇವನಿಗೆ ಮಂಡಲ, ಸ್ವಾಮಿಜೆ ಪೌಣಾರ ಆಟ, ಕಾಡ್ಯನಿಗೆ ಕಾಡ್ಯನಾಟ ಮಾಡಲಾಯಿತು.ದಕ್ಷಿಣ ಕನ್ನಡ ಪ್ರದೇಶದಲ್ಲಿ ತುಳು ಮಾತನಾಡುವ ಮೇರಾ ಜನರನ್ನು ಮುಗ್ಗೆರಾರೆಂದು ಕರೆಯುತಾರೆ. ಇವರು ತಮ್ಮದೇ ಆದ ಪ್ರತ್ಯೇಕ ಧಾರ್ಮಿಕ ವ್ಯವಸ್ಥೆಯನ್ನು ಹೊಂದಿದ್ದು ನಾಲ್ಕು ಪಾದದ ಹಾಯ್ಗಳಿಯನ್ನು ತಮ್ಮ ಮನೆಯ ದೈವವೆಂದು ಕರೆಯುತ್ತಾರೆ. ಇವರ ಕುಲದೈವ ಕಾಡ್ಯ. ಕಾಡ್ಯ ನೆಲೆಸುವ ಸ್ಥಳವನ್ನು ತಮ್ಮ ಮೂಲ ಸ್ಥಾನವೆಂದು ಮೇರರು ಭಾವಿಸುತ್ತಾರೆ. ಬೇರೆ ಊರಿನಲ್ಲಿದ್ದರು ತಮ್ಮ ತಮ್ಮ ಹರಕೆಯನ್ನು ಕಾಡ್ಯನಿಗೆ ಒಪ್ಪಿಸುತ್ತಾರೆ.

ಕಾಡ್ಯನಾಟದ ಆಚರಣೆ

[ಬದಲಾಯಿಸಿ]

ಕಾಡ್ಯನಾಟವನ್ನು ಸಾಮಾನ್ಯವಾಗ ಬೇಸಿಗೆ ಕಾಲ ಅಂದರೆ ಮಾರ್ಚ ಎಪ್ರಿಲ್ ತಿಂಗಳಲ್ಲಿ ನಡೆಸುತ್ತಾರೆ.ಕಾಡ್ಯನಾಟವು ಶನಿವಾರ ರಾತ್ರಿಯಿಂದ ಆರಂಭವಾಗಿ ಮಂಗಳವಾರ ಮಧ್ಯರಾತ್ರಿಯವರೆಗೆ ನಡೆಯುತ್ತದೆ. ಕಾಡ್ಯ ನಾಟವನ್ನು ಮಾಡುವ ಕೆಲವು ತಿಂಗಳಳ ಹಿಂದೆ ಕುಟುಂಬದ ಸದಸ್ಯರು, ಬೈದ್ಯ, ಪಾತ್ರಿ, ಸ್ಥಳದ ಯಜಮಾನರು ಸೇರಿ ಕಾಡ್ಯ ನಾಟವನ್ನು ಯಾವಾಗ ಮಾಡುವುದು ಎನ್ನುವುದರ ಬಗ್ಗೆ ನಿರ್ಧಾರ ಕೈಗೊಳ್ಳುತ್ತಾರೆ. ಅದಕ್ಕೆ ಎಂಟು ದಿನದ ಮೊದಲು ನಂಬುಗೆಯುಳ್ಳ ಶಾಸ್ತ್ರವನ್ನು ಮಾಡುತ್ತಾರೆ.ಆ ದಿನ ಹಾಯ್ಗಳಿ ಪಾತ್ರಿಗೆ ದೈವ ಮೈದುಂಬಿ ಬಂದು ಸ್ಥಳದ ಯಜಮಾನ, ಬೈಮರಿಗೆ ಪ್ರಸಾದ ನೀಡಿ ಕಾಡ್ಯನಾಟಕ್ಕೆ ವಿದ್ಯುಕ್ತ ವಿಶ್ವನ್ನು ನಿಗದಿ ಪಡಿಸಲಾಗುತ್ತದೆ. ಇದಕ್ಕೆ ಸಂಬಂಧಪಟ್ಟ ಮನೆಯಲ್ಲಿ ಮಾಂಸಹಾರ ನಿಶೇಧಿಸಲಾಗುತ್ತದೆ ಹಾಗೂ ಎಲ್ಲರೂ ಸ್ನಾನ ಮಾಡಿಯೆ ಆಹಾರವನ್ನು ಸೇವಿಸಬೇಕು.

ಕಾಡ್ಯನಾಟದ ದಿನ ಊರು ಹಾಗೂ ಪರವೂರಿನಿಂದ ಬಂದವರಿಗೆ ಊಟದ ವ್ಯವಸ್ಥೆ ಇರುತ್ತದೆ. ಆ ನಂತರ ಕುಟುಂಬದ ಸದಸ್ಯರು ಕಾಡ್ಯನಿಗೆ ಪೊಜೆ ಕಂಬಗಳನ್ನು ಕಡಿಯವುದು, ಗೂಡು ತರುವ ಮುಂತಾದ ಸೇವಾ ಕಾರ್ಯಗಳನ್ನು ನಡೆಸುತ್ತಾರೆ. ರಾತ್ರಿ ಹೊತ್ತಿಗೆ ಕುಟುಂಬದ ಹಿರಿಯರು ತಮ್ಮ ತಲೆ ಮೇಲೆ ಅಲಂಕರಿಸಿದ ಗೂಡುಗಳನ್ನು ಹೊತ್ತುಕೊಂಡು ಬಂದು ಕಾಡ್ಯನ ಮನೆಯ ಆವರಣದೊಳಗೆ ಪ್ರತ್ಯೇಕ ಚಪ್ಪರದಲ್ಲಿ ಇರಿಸುತ್ತಾರೆ. ಆ ನಂತರ ಬೈದ್ಯ ತನಗೆ ಹಾಗೂ ತನ್ನ ಸಹ ವಂದಿಗರಿಗೆ ರಚಿಸಿಕೊಟ್ಟ ಬೈದ್ಯರ ಹಂದರದೊಳಗೆ ಮಂಡಲ ಬರೆದು ಪೂಜೆ ಮಾಡಿ, ಎಲ್ಲರ ಅನುಮತಿ ಪಡೆದು ಹಸೆಮಣೆಹಿಡಿಯುತ್ತಾನೆ. ಹೀಗೆ ಮಾಡುವುದರಿಂದ ಬೈದ್ಯನನ್ನು ಉಳಿದವರಿ೦ದ ಬೇರ್ಪಡಿಸುತ್ತಾರೆ. ಆಚರಣೆಯುದ್ಧಕ್ಕೂ ಮಹತ್ವದ ಪಾತ್ರವಹಿಸುವ ಎರಡು ಡೋಲುಗಳನ್ನು ಹಿರಿಯರು ವಿಧಿ ಪೂರ್ವಕವಾಗಿ ಬೈದ್ಯನಿಗೆ ಹಸ್ತಾಂತರಿಸುತ್ತಾನೆ. ಅನಂತರ ಕಾಡ್ಯನ ಮನೆಯೊಳಗಡೆ ಪಾಜೆ ನೆರವೇರುತ್ತಿದ್ದಂತೆ ಪಾತ್ರಿಗೆ ಮೈದುಂಬುತ್ತದೆ. ಆತನ ಸೂಚನೆಯಂತೆ ಬೈದ್ಯ ತನ್ನ ಸ್ವಜಾತಿ ಬಾಂಧವರ ಸಹಕಾರದಿಂದ ಒಳಗಿದ್ದ ಹಳೆಯ ಕಳಸಗಳ ನಿಗದಿ ಮಾಡಿದ ಚಿಟ್ಟೆಯ ಮೇಲಿರಿಸುತ್ತಾನೆ. ಹಳೆಯ ಐದು ಕಳಸಗಳನ್ನು ಕುಟುಂಬದ ಗಂಡಸರು ತಲೆ ಮೇಲೆ ಹೊತ್ತುಕೊಂಡು ಹೋಗುತ್ತಾರೆ. ಬೈದ್ಯನು ಇದನ್ನು ಕರೆಯ ನೀರಿನಿಂದ ತೊಳೆದು ಧೂಪ ದೀಪಗಳಿಂದ ಪೂಜೆ ಮಾಡಿದ ಅನಂತರ ಅವರೇ ಹೊತ್ತುಕೊಂಡು ಬಂದು ಅದೇ ಬಟ್ಟೆಯ ಮೇಲಿರು ಸುತ್ತಾರೆ. ಇದನ್ನು ಮೈಲಿಗೆ ತೊಳೆಯುವುದು ಎಂದು ಕರೆಯುತ್ತಾರೆ. ಆದಿನ ರಾತ್ರಿ ವೈದ್ಯ ಗುರುಶಾಸ್ತ್ರದಿಂದ ತೊಡಗಿ ಕಾಡ್ಯನ ಹುಟ್ಟು ಮುಂತಾದ ಹಾಡುಗಳನ್ನು ತನ್ನ ಸಹಾಯಕರೊಂದಿಗೆ ಹಾಡುತ್ತಾನೆ ಕೊನೆಗೆ ಬೈದ್ಯ ಸರ್ವರ ಅಪ್ಪಣೆಯಂತೆ ಅಡುಗೆ ಮನೆಯಲ್ಲಿ ಅಗ್ನಿ ಸ್ಥಾಪನೆ ಮಾಡುತ್ತಾನೆ.


ಮುಹೂರ್ತದ ಕಂಬ

[ಬದಲಾಯಿಸಿ]

ಎರಡೆನೆಯ ದಿನ ವೇದಿಕೆ ಚಿಟ್ಟಿಯ ಮೇಲೆ ಇರಿಸಿದ ಹಳೆಯ ಕಲಶಗಳಿಗೆ ಬೈದ್ಯನಿಂದ ಪೂಜೆ ನಡೆಯುತ್ತದೆ. ಆನಂತರ ಪಾತ್ರಿ, ಬೈದ್ಯ ಡೋಲು ಸಮೇತವಾಗಿ ಸಮುದಾಯದ ಜೊತೆಗೆ ಸಮೀಪದ ಕುಂಬಾರರ ಮನೆಗೆ ಹೋಸ ಕಲಶಗಳನ್ನು ತರುವುದಕ್ಕಾಗಿ ಹೋಗುತ್ತಾರೆ. ಕಾಡ್ಯನಾಟಕ್ಕೆ ಎಂಟು ದಿನ ಹಿಂದೆ ಪ್ರಸಾದ ಹಿಡಿದ ಕುಂಬಾರರು ಈ ಕಲಶಗಳ ನಳ ತಯಾರಿಸುತ್ತಾರೆ. ಇದರೊಳಗೆ ಸ್ವಲ್ಪ ನೀರು ತುಂಬಿ ಅದರ ಬಾಯಿಗೆ ಮಾವಿನ ಬಿಗುರುಗಳನ್ನಿರಿಸಿ ಗಂಧ, ಕುಂಕುಮ ಹಚ್ಚಿ ಪೂಜೆ ನಡೆಸುವಾಗ ಮೇರರ ಹೆಂಗಸರು ಕಲಶದ ಹಾಡುಗಳನ್ನು ಹೇಳುತ್ತಾರೆ. ಆ ಬಳಿಕ ಕುಟುಂಬದ ಹೆಣ್ಣುಗಳು ಕಲಶಗಳ ನಳ ಹೊತ್ತುಕೊಂಡು ಕಾಡ್ಯನ ಮನೆಗೆ ಬರುತ್ತಾರೆ. ಕಲಶಗಳನ್ನು ಹೊತ್ತುಕೊಂಡು ಕಾಡ್ಯನ ಮನೆಗೆ ಬರುತ್ತಾರೆ.ಕಲಶಗಳಿಗೆ ಪೂಜೆ ನಡೆಸುತ್ತಾರೆ. ಆ ದಿನ ಸಂಜೆ ಮುಹೂರ್ತದ ಕಂಬ ಕಡಿಯುವ ವಿಧಿ ನೆರವೇರುತ್ತದೆ. ಮೊದಲು ಬೈದ್ಯ ತನ್ನ ಹಂದರದೊಳಗೆ ಈ ವಿಧಿಯನ್ನು ಕುರಿತು ಹಾಡನ್ನು ಹಾಡಬೇಕು. ಮರ ಕಡಿಯಲು ಕುಟುಂಬದ ಹಿರಿಯ ಸದಸ್ಯರೇ ಆಗಬೇಕು. ಇವನನ್ನು ಕಂಬದ ಮದುಮಗ ಎಂದು ಕರೆಯಲಾಗುತ್ತದೆ. ಪಾತಿ, ಬೈದ್ಯ ಎಲ್ಲರೂ ತ್ರಯ್ಕೆ ಮಾಡಿದ ಮಾವಿನ ಮರದ ಬಳಿ ಹೋಗುತ್ತಾರೆ. ಪಾತ್ರಿ ತೀರ್ಥ ಜಲಪ್ರೋಕ್ಷಿಸಿ ಶುದ್ಧ ಮಾಡಿದ ಮೇಲೆ ಬೈದ್ಯ ಮರಕ್ಕೆ ಗಂಧ ಸವರಿ ಸಿಂಗಾರದ ಎಳೆಯೊಂದನ್ನು ಕಟ್ಟುತ್ತಾನೆ.ನೆರೆದ ಜನರ ಅನುಮತಿ ಮೇರೆಗೆ ಅದನ್ನು ಮದುಮಗನಿಗೆ ಕುಡಿಯಲು ಅನುಮತಿ ನೀಡುತ್ತಾರೆ. ಮೊದಲ ಕೊಡಲಿ ಏಟನ್ನು ಈತನೇ ಹಾಕಬೇಕು. ಆನಂತರ ಉಳಿದವರು ಕುಡಿಯಬಹುದು. ಮರ ಬೀಳದಂತೆ ಕೈಯಲ್ಲಿಯೇ ಹಿಡಿದು ಮರದ ತೊಗಟೆಯನ್ನ ತೆಗೆಯುತ್ತಾರೆ. ಮದುಮಗನನ್ನು ಮುಂದಿರಿಸಿಕೊಂಡು ಮೆರವಣಿಗೆಯಲ್ಲಿ ತಂದು ಬಳಿಕ ಬೈದ್ಯರ ಹಂದರದೊಳಗೆ ಸ್ಥಾಪಿಸಲಾಗುತ್ತದೆ. ಇದು ಆಚರಣೆಯ ಆರಂಭದ ಸಂಕೇತ.

ಕ್ರೀಡೆಗಳು

[ಬದಲಾಯಿಸಿ]

ಮೂರನೆಯ ದಿನ ಆಟವನ್ನು ಆಡಿಸಲಾಗುತ್ತದೆ. ತುಲಾಭಾರ ಸೇವೆ, ಹಿಡ್ಲಾಯಿ ಹಾಕುವುದಾ ಮತ್ತು ಅಂಬೋಡಿ ಆಡುವುದು ಎನ್ನುವ ಕ್ರೀಡೆಗಳು ಜರುಗುತ್ತದೆ. ಕಾಡ್ಯನ ಮನೆಯಿಂದ ನೂರು ಗಜ ದೂರದಲ್ಲ ದರ್ಶನ ಪಾತ್ರಿ ಕೈಯಲ್ಲೊಂದು ತೆಂಗಿನಕಾಯಿ ಹಿಡಿದು ನಿಂತು ಮೇರರ ಯುವಕರನ್ನು ಸಂಸಾರದವರು ಹಾಗೂ ನೆಂಟರು ಎಂಬುದಾಗಿ ವಿಭಾಗಿನೆ, ಆರಂಭದಲ್ಲಿ ಸಂಸಾರದ ಮಕ್ಕಳ ಇದರಲ್ಲಿ ಕಾಯಿಹಾರಿಸುತ್ತಾನೆ. ಇವರಲ್ಲ ಕಾಯಿ ಹಿಡಿಯು ದಿಕ್ಕೆ ಮೇಲಾಟನಡೆಯುತ್ತದೆ. ಇದರಲ್ಲಿ ಯಶಸ್ವಿಯಾದಾತ ಓಡಿ ಹೋಗಿ ಕಾಡ್ಯನ ಮನೆಯ ಸಮೀಪದ ಬೆಣಗಲ್ಲಿಗೆ ಬಡಿಯಬೇಕು. ಎರಡನೆಯ ಬಾರಿ ನೆಂಟರು ಸಂಸಾರದವರ ನಡುವೆ ಇವೆ ಕ್ರಿಯೆ ಜರಗುತ್ತದೆ. ಅನಂತರ ಅಂಬೋಡಿ ಆಡುವ ಕ್ರೀಡೆ ಜರುಗುತ್ತದೆ. ಕಾಡ್ಯನ ಮನ ಯೆದುರು ಸುಮಾರು ೧೫ ಅಡಿ ದೂರಕ್ಕೆ ಎರಡು ತಂಬಗಳನ್ನು ನಿಟ್ಟು ಅವುಗಳನ್ನು ತುದಿಗೆ ದಪ್ಪಗಿನ ಹುರಿಹಗವನ್ನು ಒಂದಕ್ಕೊಂದು ಸಂಧಿ ಸುದ್ದತೆ ಕಟ್ಟಲಾಗುತ್ತದೆ. ಹಗ್ಗದ ಎಡ್ಸಲ ಗಳಲ್ಲಿ ಸುಮಾರು ೧೦ ಅಡ್ವಾರಕ್ಕೆ ಅಭಿಮುಖವಾಗಿ ಕೈಯಲ್ಲಿ ಬರಲು ಗಳನ್ನು ಹಿಡಿದು ಯುವಕರು ನಿಲ್ಲುತ್ತಾರೆ ಪಾತ್ರಿ ಒಂದು ಕಂಬದಿಂದ ಇನ್ನೊಂದು ಕಂಬದೆಡೆಗೆ ಸಮಾನಾಂತರವಾಗಿ ಸಾಗುವಷ್ಟರಲ್ಲಿ, ಎದುರುಬದುರಾಗಿ ನಿಂತ ಯುವಕರು ಒಪ್ಪಿಂದು ಪರಸ್ಪರ ಒಬ್ಬರಿಗೊಬ್ಬರು ಬರಲುಗಳನ್ನು ತಾಗಿಸಿಕೊಳ್ಳುತ್ತಾರೆ ಹೀಗೆ ಮೂರು ಬಾರಿ ಪುನರಾವರ್ತನೆಗೊಳುತ್ತದೆ.


ಕೋಲ ಬಲಿಗಳು

[ಬದಲಾಯಿಸಿ]

ಆರಾಧನ ವಿಧಿಗಳ ಜತೆಗೆ ಕರ್ನಾಟಕದ ಇತರೆಡೆಯ ಹಗರಣಗಳನ್ನು ಹೋಲ್ವು ಕೊರಗರ ಕೋಲ, ದಾಸರ ಕೋಲ, ಹುಲಿಹಂದಿ ಕೊಲ, ಜ್ವರದ ಕೋಲ,ತಗಣೆ ಕೊಲಗಳು ಜರಗುತ್ತವೆ. ಇದನ್ನು ಕೋಲಬಲಿ ಎಂದು ಕರೆಯುತ್ತಾರೆ. ಇಲ್ಲಿ ಸೂಕ್ತ ವ್ಯಕ್ತಿಗಳನ್ನು ಪಾತ್ರಿಯು ನೀರು ಪ್ರೋಕ್ಷಿಸಿ ಆಯ್ಕೆ ಮಾಡುತ್ತಾನೆ, ಕೊರಗರ ಕೋಲಕ್ಕೆ ಕೊರಗ, ಕೊರತೆ ಹಾಗೂ ಡೋಲುವಾದಕ್ಕೆ ಮೂವರು ಮೇರರ ಸಮುದಾಯದಿಂದ ಅಸ್ಪೃಶ್ಯರಾಗುತ್ತಾರೆ. ಈ ಸಂದರ್ಭದಲ್ಲಿ ಅವರು ಡೈವರ ಮನೆಯ ಸಂಕೀರ್ಣದಿಂದ ಹೊರ ನಡೆಯಬೇಕು. ಒಬ್ಬ ತಲೆಗೆ ಕೊಂಬಾಳೆ, ಸೊಂಟಕ್ಕೆ ಮಾರು ಕಾಲ ಗಂಟಿನಿಂದ ಮೇಲೆ ನಿಲ್ಲುವಂತೆ ಕಪ್ಪು ಬಟ್ಟೆ, ಕೈಗೊಂದು ಊರುಗೋಲು ಹಿಡಿದು ಕೊರಗನ ವೇಷ ಹಾಕಿದರೆ ಇನ್ನೂಬ್ಬ ಹರಕಲು ಸೀರೆ ಉಟ್ಟು, ಹೆಣ್ಣು ವೇಷ ತೊಟ್ಟು ತಲೆಯ ಮೇಲೊಂದು ಬುಟ್ಟಿಯಿರಿಸಿಕೊಂಡು ಬೇಡುವ ಅನುಕರಣೆ ಮಾಡುತ್ತಾನೆ. ಮಾರನೆ ಯಾ ಯಾತ ತುಂಡು ಬಟ್ಟೆ ಉಟ್ಟು ಹರಿದ ಕೊಂಬಾಳೆ ಟೊಲೈಗೆ ಇರಿಸಿಕೊಂಡು ಡೋಲ ನರಳು ಕೊರಳಿಗೆ ನೀತು ಹಾಕಿ ಕೊತರಿಗೆ ಹಿಂದೆ ನೀಡುತ್ತಿದ್ದ ನೀಚಾನನಾದ ಅನುಕರಣೆ ಮಾಡುತ್ತಾನೆ. ಕೊರೆತೆಗೆ ಗೆರಸೆಯಲ್ಲಿ ಅನ್ನ ಪದಾರ್ಥಗಳನ್ನು ನೀಡಲಾಗುತ್ತದೆ. ನಂತರ ಕೊರಗ ಕೊರತೆಯರು ನೆರದ ಪ್ರತಿಯೊಬ್ಬರಲ್ಲಿಯಾ ಭಿಕ್ಷೆ ಯಾಚಿಸುತ್ತಾರೆ. ಆನಂತರ ದಾಸರ ಕೋಲ ನೆರವೇರುತ್ತದೆ. ಈತ ತಲೆಗೆ ಮುಂದಾಸು,, ಹಣೆ ಮತ್ತು ಮೈಗೆ ಗಂಧದ ನಾಯ, ಕಚ್ಚೆಪಂಚೆ ಉಟ್ಟು ಶಂಖ ಊರುತ್ತಾ ಗೊಲಿಂದ ಗೋವಿಂದ ಎಂದು ಹೇಳುತ್ತ ಕಾಣಿಕೆ ಸಂಗ್ರಹಿಸುತ್ತಾನೆ. ಬೇಟೆಯಂತಹ ಕ್ರಿಯೆಯನ್ನು ನಾಟಕೀಯವಾಗಿ ಅಬ್ಬಿನಯಿಸಿ ತೋರಿಸುವ ಹುಲಿ ಹಿಂದಿ ಕೋಲ ನೆರವೇರುತ್ತದೆ. ಇಲ್ಲಿ ಮೂರು ಮುಖ್ಯ ಪಾತ್ರಗಳಿರುತ್ತದೆ. ಹುಲಿ, ಬೇಟೆಗಾರ ಹಾಗೂ ಹಂದಿ ಹಂದರದೊಳಗೆ ಗತ್ತೆಂಟು ಬಾಲಕರು ಕೈಕೈ ಹಿಡಿದು ಹುಲಿ ಬಂತು ಹಾಲಿ ಎನ್ನುತ್ತಾ ಸುತ್ತುತ್ತಿರುತ್ತಾರೆ. ಅಷ್ಟರಲ್ಲಿ, ಕಿಕ್ಕಿರಿದು ನೆರೆದಿದ್ದ ಸಮೂಹದಿಂದ ಹಂದಿಯ ಮುಖ ಹಾಕಿಕೊಂಡಿದ್ದವನು ಹಂದಿಯಂತೆ ನಾಲ್ಕು ಕಾಲಿನಲ್ಲಿ ಹರಿದಾಡುತ್ತ ಹಂದರದ ಬಳಿ ಧಾವಿಸಿ ಬರುತ್ತಾನೆ. ಚಕ್ರಕಾರವಾಗಿ ಸುತ್ತುತ್ತಿರುವ ಮಕ್ಕಳ ಕೋಟೆಯಾಳಗೆ ಈ ಹಂದಿಯಾಗುತ್ತದೆ. ಅಷ್ಟರಲ್ಲಿ ಹುಲಿಯ ಮುಖವಾಡ ಹಾಕಿಕೊಂಡವನು ಜನರ ಮದ್ರದಿಂದರೆ ಕಾಣಿಸಿಕೊಂಡು ಹಂದಿಯತ್ತ ನುಗ್ಗುತ್ತಾನೆ. ಹುಲಿಯ ಹಿಂಬದಿಯಲ್ಲಿ ಮುಂದುಗಂಬಳಿ ಹೊದೆದ ಬೇಟೆಗಾರ ಕಾಣಿಸಿಕೊಳ್ಳುತ್ತಾನೆ ಅವನ ಕೈಯಲ್ಲಿ ದೊಡ್ಡ ದೊಣ್ಣೆಯಿರುತ್ತದೆ.ಒ ಹುಲ್ಲಿನಿಂದ ತಯಾರಿಸಿ ಬಣ್ಣ ಕೊಟ್ಟ ಬೇಟೆನಾಯಿಯ ಕೊರಳಿಗೆ ಹುರಿ ಹಗ್ಗ ಬಿಗಿದು ಅದರ ಇನ್ನೊಂದು ತುದಿಯ ಕೈಯಲ್ಲ ಹಿಡಿದು ತನ್ನ ನಾಯಯನ್ನು ಬೆಂಡೆ ಪ್ರಾಣಿಯ ಮೇಲೆ ಛೂ ಬಿಡುತ್ತಾ ಹುಲಿಯನ್ನು ಅಟ್ಟುತ್ತ ಹೋಗುತ ಹೋಗುತ್ತಾನೆ. ದಂದರದೊಳಗೆ ತಲುಐದ್ಯಲಿ ಹಿಂದಿಯನ್ನು ಬೆನ್ನಟ್ಟಾಹಿಡಿಯುವ ನಟನೆ ಮಾಡುತ್ತದೆ. ಅಸ್ಟರಲ್ಲಿ ಬೇಟೆಗಾರ ಈಡುಣಮ್ಮ ಹಡಿಯುತ್ತಾನೆ. ಹುಲಿ ಹಂದಿ ಎರಡೂ ಸಾಯುತ್ತದೆ ಜನಸಮೂಹ ಸಂತೋಷಗೊಂಡು ಕೇಕೆ ಹಾಕುತ್ತದೆ. ನಂತರ ಕೆಮ್ಮನಕೊಲ, ಜಪನ ಕೋಲ,ತಗಣೆ ಕೋಲ ಹಂದಿ ಕೋಲಗಳೆಲ್ಲಗ ಜರಗುತ್ತವೆ. ಭಕ್ತ ಸಮುದಾಯ ತಾವು ದೈನಂದಿನ ಬದುಕಿನಲ್ಲಿ ಬಂದ ಜ್ವರ, ಕೆಮ್ಮು, ಉಬ್ಬಸ ಮುಂತಾದ ಕಾಯಿಲೆಗಳು ಹಾಗೂ ಹಂದಿ, ಹುಲಿ, ತಗಣೆಗಳಿಂದ ಉಂಟಾದ ಉಪಟಳಗಳಿಗೆ ಮುಕ್ತಿಗಾಗಿ ಹರಕೆಯನ್ನು ಹೇಳಿಕೊಂಡ ವ್ಯಕ್ತಿ ನನಗೆ ಇಂತಹ ಕೊಲಲವಾಗಬೇಕು ಎಂದು ಹೇಳುತ್ತಾನೆ ಉದಾರಣೆಗೆ ತಗಣೆ ಕೋಲು ವಾಗ ಬೇಕಿದ್ದಲ್ಲಿ ಕೋಲ ಕಟ್ಟುವ ವ್ಯಕ್ತಿ ತಗಣಿಯ ದೈಹಿಕ ಹಿಂಸೆಯನ್ನು ರಂಗುರಂಗಾಗಿ ಬಣ್ಣಿಸುತ್ತಾನೆ ಹಾಗೂ ತಗಣಿ ಕಡಿದವನಂತೆ ಅಭಿನಯಿಸುತ್ತಾನೆ. ಅದಕ್ಕೆ ಪ್ರೇಕ್ಷಕರ ಪ್ರತಿನಿಧಿ ಉತ್ತರಿಸುತ್ತಾನೆ. ಕಾಡ್ಯನಿಗೆ ಕೋಲ ಕೊಟ್ಟಾಯಿತು ಇನ್ನು ತಗಣಿಯ ಕಡಿದದ ನಂತರ ಅಭಿನಯಿಸುತ್ತಾನೆ. ಅದಕ್ಕೆ ಪ್ರೇಕ್ಷಕರ ಪ್ರತಿನಿಧಿ ಉತ್ತರಿಸುತ್ತಾನೆ.ಕಾಡ್ಯನಿಗೆ ಕೋಲ ಕೊಟ್ಟಾಯಿತು ಇನ್ನು ತಗಣೆಯ ಕಾಟ ಇರಲಾರದು ಹೋಗು ಎ೦ದು ಹರಕೆ ಒಪ್ಪಿಸಿದವನಿಗೆ ಆಶ್ವಾಸನೆ ನೀಡುವಲ್ಲಿಗೆ ಈ ಆಶುನಾಟಕ ಮುಕ್ತಾಯವಾಗುತ್ತದೆ. ಅನಂತರ ಉಳಿದ ಕೋಲಗಳೂ ಇದೇ ರೀತಿಯಲ್ಲಿ ಜರಗುತ್ತವೆ.

ಜಕ್ಕಿಣಿಯರನ್ನು ಕುಣಿಸುವುದು

[ಬದಲಾಯಿಸಿ]

ಎಲ್ಲ ಬಲಿಗಳ ನಂತರ ಜರೈಣಿಯರನ್ನು ಕುಣಿಸುವ ಆಚರಣೆ ಪ್ರಾರಂಭವಾಗುತ್ತದೆ. ಎಂಟರಿಂದ ಹತ್ತು ವಯಸ್ಸಿನ ಒಳಗಿನ ಮಕ್ಕಳು ಇದರಲ್ಲಿ ಭಾಗವಹಿಸುತ್ತಾರೆ. ಪಾತ್ರಿಯೇ ಇವರ ಆಯ್ಕೆಯನ್ನುಮಾಡುತ್ತಾನೆ. ಈ ಮಕ್ಕಳು ಬೆಳಿಗ್ಗೆಯಿಂದ ಉಪವಾಸವಿದ್ದು ತಗಟೆಯ ಸರವನ್ನು ಹಾಕಿಕೊಂಡು ಹೂ ಮುಡಿದುಕೊಂಡು ಹಂದರದೆಡೆಗೆ ಬರುತ್ತಾರೆ. ಬೈದ್ಯ ಮಾಹುರ್ತ ಕಂಬದ ಬಳಿ ಕಾಲು ದೀಪ ಇರಿಸಿ ಮಕ್ಕಳಲ್ಲಿ ಪ್ರದಕ್ಷಿಣೆ ಮಾಡಿ ಬನ್ನಿ ಎಂದು ಹೇಳಿ ಜಕಣಿಯರ ಹಾಡು ಹೇಳುತ್ತಾನೆ. ನಾಲ್ಕಾರು ಮತ್ತು ಬಂದ ನಂತರ ಆ ಆಚರಣೆ ಕೊನೆಗೊಳ್ಳುತ್ತದೆ.ಆ ದಿನ ರಾತ್ರಿ ಬೈದ್ಯರು ಹಂದಿರದೊಳಗೆ ಮಂಡಲವನ್ನು ಬರೆಯುತ್ತಾರೆ. ಬೈದ್ಯನ ಹಾಡನ್ನು ಗಮನಿಸಿದರೆ ಆ ದಿನದ ಎಲ್ಲಾ ದೇವತೆಗಳನ್ನು ಕರೆದು ಮಂಡಲದಿಂದ ಹೊರಟು ತಮ್ಮ ಮೂಲನೆಲೆ ಸೇರುವಂತೆ ಕೋರಿದುದು ಗೊತ್ತಾಗುತ್ತದೆ. ಆ ಇಡೀ ರಾತ್ರಿ ಬೈದ್ಯರು ಯುಗಮ ಗುಡುವ ಹಾಡು ಗೋವೆ ಹರಕೆಯ ಹಾಡು ಮೊದಲಾದ ಹಾಡುಗಳನ್ನು ಹಾಡುತ್ತಾರೆ.

ಕಲಶ ಪೂಜೆ

[ಬದಲಾಯಿಸಿ]

ಕೊನೆಯ ದಿನ ಬೊಬ್ಬರ್ಯನ ರಕ್ಕೆ ಯಲ್ಲಿ, ಬೈದ್ಯನ ಮಾರ್ಗದರ್ಶನದಲ್ಲಿ ಐದು ಕಲಶಗಳನ್ನು ಹೆಂಗಸರು ಹೊತ್ತು ಊರ ಮೇಲೆ ಹೋಗುವ ವಿಧಿ ನಡೆಯುತದೆ. ಗ್ರಾಮದ ಎಲ್ಲ ಜಾತಿಯವರ ಮನೆಯಾಳಗೆ ಹೋಗಿ ಕಲಶಗಳಿಗೆ ಪೂಜೆ ಮಾಡಲಾಗುತ್ತದೆ. ಮುಂಜಾ ಂಜಾನೆ ಹೊರಟ ತಂಡ ಸೂರ್ಯಾಸ್ತದ ನಂತರವೇ ಬರುತಾ ಬರುತ್ತಾರೆ, ಆ ನಂತರ ಮಾಜ್ಯನಿಗೆ ಪೂಜೆ ನಡೆದು ಪಾತ್ರಿಗೆ ದರ್ಶನವಾಗಿ ಕುದುರೆ ಕೋಲ ನೆರವೇರುತ್ತದೆ. ಒಂದು ಬಿಳಿ ಇನ್ನ್ನೊಂದು ಕೆಂಪುಕುದುರೆ ಹಾಗೂ ಇಬ್ಬರು ಕಾಸ್ತಾರರು ಈ ಕೋಲ ನಡೆಸಿಕೊಡುತ್ತಾರೆ. ಆ ನಂತರ ಬೈದ್ಯನ ಮುಂದಾಳತ್ವದಲ್ಲಿ ೫ ಕಲಶಗಳನ್ನು ಮಹಿಳೆಯರು ಹೊತ್ತುಕೊಂಡು ಗಂಗೆಯಲ್ಲಿ ಮೀಯುದಕ್ಕೆ ಹೋಗುತ್ತಾರೆ. ಹತ್ತಿರದಲ್ಲಿರುವ ಕೆಲಶವನ್ನು ತೊಳೆದು ಹೊಸ ನೀರನ್ನು ತುಂಬಿಸುದು ಒಂದು ಆಚರಣೆ. ಸ್ಥಳದ ಯಜಮನರಮನೆಯಲ್ಲಿ ಕುದುರೆ ವೇಷದ ವರ ಕುಣಿತ ನಡೆಯುತ್ತದೆ. ಹಿಂತಿರುಗಿ ಬಂದು ಒಟ್ಟೆಯಲ್ಲಿ ಕಲಶಗಳನ್ನು ಇಳಿಸುವಲ್ಲಿಗೆ ಕುದುರೆ ಕೋಲ ಮುಗಿಯುತ್ತದೆ.

ಪೊಟ್ಲ ಆಡುವುದು

[ಬದಲಾಯಿಸಿ]

ಕಲಶ ಪೂಜೆ ಆದ ನಂತರ ಊರ ಮೇಲೆ ಹೋದ ಸಂದರ್ಭದಲ್ಲಿ ಕಾಣಿಕೆ ರೂಪದಲ್ಲಿ ನೀಡಿದ ಬೆಳ್ಳಿಗೆ ಅಕ್ಕಿಯನ್ನು ಕುಲಾಲರು ಮೊದಲು ದಿನ ಮಾಡಿಕೊಟ್ಟ ಚಿರುವಿನ ಕಲಶದಲ್ಲಿ ಬೇಯಿಸಿ ಚಿಕ್ಕ ಚಿಕ್ಕ ಎಲೆಗಳಲ್ಲಿ ಹಾಡಿ ಭಾಗಳುಗಳಿಗೆ ನೀಡುತ್ತಾರೆ. ಇದನ್ನು ಪೊಟ್ಲ ಆಡುವುದು ಎನ್ನುತ್ತಾರೆ.ನಂತರ ಒಟ್ಟಿಯೊಳಗಿರುವ ಕಲಶಗಳನ್ನೆಲ್ಲಿ ಕಾಡ್ಯನ ಮನೆಗೆ ಸ್ಥಳಾಂತರಿಸುವ ಕಾಯನೆಡೆಯುತ್ತದೆ.ಮಾರಾಧನಾ ವಿಧಿ ಸಾಂಗವಾಗಿ ಜರುಗಿತೆಂಬ ಆಶ್ವಾಸನೆ ಪಾತ್ರಿಯಿಂದಬರುತ್ತದೆ.ತೆಂಗಿನಕಾಯಿ ಒಡೆದ ಮೂಲಕ ಕ್ರಿಯಾವಿಧಿ ಮುಗಿತೆಂಬುದನ್ನು ಸೂಚಿಸಲಾಗುತ್ತದೆ. ಇದರ ಮಧ್ಯ ಬೈದ್ಯ ತನ್ನ ಹಂದರದೊಳಗೆ ಎರಡು ವಿಕಾರ ಆಕೃತಿಗಳನ್ನು ಬರೆದು, ಅದರ ಮೇಲೆ ತೆಂಗಿನ ಕಾಯಿ ಒಡೆದು ಇರಿಸುತ್ತಾನೆ. ಇದನ್ನು ಭೂತಬಲಿ ಎಂದು ಕರೆಯುತ್ತಾರೆ. ಕಳೆದ ಮೂರು ದಿನಗಳಿಂದ ನಡೆಸಿದ ಆಚರಣಿಯನ್ನು ದೇವತೆಗಳನ್ನು ಮತ್ತೊಮ್ಮೆ ಪುನರಾವರ್ತಿಸುವಾಗ ಮನುಷ್ಯರು ನೋಡಬಾರದೆಂಬ ನಂಬಿಕೆಯಿರುವ ರಿಂದ ಎಲ್ಲರೂ ಹೊತ್ತು ಹೊರಟು ಹೋಗುತ್ತಾರೆ. ಕುಟುಂಬದ ಎರಡು ಕವಲುಗಳಿಂದ ಹೊತ್ತು ತಂದೆ ಗೂಡುಗಳನ್ನು ಮತ್ತೆ ಆಯಾ ಮನೆಗೆ ಹೊತ್ತೊಯ್ಯತ್ತಾರೆ. ನಾಲ್ಕು ದಿನದ ನಂತರ ಅಂದರೆ ಮುಂದಿನ ಶನಿವಾರ ಕಾಡ್ಯ ನಾಟದ ಭಗಾಳುಗಳೆಲ್ಲ ಸೇರಿ ಮತ್ತೆ ಕಾಡ್ಯನ ಮನೆಗೆ ಬಂದು ಪಾತ್ರಿಯಂದ ದರ್ಶನವಾಗಿ ಬೈದ್ಯನಿಗೆ ಕಂಬ ಕೇಳಲು ಅನುಮತಿ ನೀಡುತ್ತಾರೆ. ಬೈದ್ಯ ಕಂಬಕ್ಕೆ ಮಾಜಿಯನ್ನು ಮಾಡಿ ಅದನ್ನು ಮತ್ತು ಸ್ಥಳದ ಯಜಮಾನನ ಮನೆಯಲ್ಲಿಡುತ್ತಾನೆ. ಆ ದಿನ ಯಜಮಾನ ತನ್ನ ಮನೆಯಲ್ಲಿ ನೆರದವರಿಗೆಲ್ಲ ಊಟೊeಪಚಾರ ನೀಡುತ್ತಾನೆ.

ಕಾಡ್ಯ ನಾಟದಲ್ಲಿ ಹಗರಣಗಳು

[ಬದಲಾಯಿಸಿ]

ಕಾಡ್ಯ ನಾಟವು ನಾಲ್ಕು ರಾತ್ರಿ, ಮೂರು ಹಗಲುಗಳನ್ನು ಸುದೀರ್ಘ ಕಾಲ ಕಾಡಿನ ಪ್ರದೇಶದಲ್ಲಿ ಜರಗುವ ಒಂದು ಅದ್ಭುತವಾದವ ಆಚರಣೆ. ದೀರ್ಘ ಕಾಲಾವಧಿಯ ಏರತಾನತೆ ಹಾಗೂ ಮನೆ ಮಾರು ಬಿಟ್ಟು ಒಂದು ದರಿಂದ ಉಂಟಾದ ಪರದೆಯೇ ಅಲ್ಲವನ್ನು ಮುರಿದು, ಎಲರಲ್ಲೂ ಒಂದು ರೀತಿಯ ಲವಲವಿಕೆ ಹಾಗೂ ಉತ್ಸಾಹ ಮೂಡಿಸುವ ಉದ್ದೇಶದಂದ ಈ ರೀತಿಯ ಹಗರಣಗಳನ್ನು ಹೋಲುವ ವೃಚರಣೆಗಳನ್ನು ನಡೆಸುತಿರುತ್ತಾರೆ. ಇದನ್ನು ಕೋಲಬಲಿ ಎಂಬುದಾಗಿ ಕರೆಯುತ್ತಾರೆ..ಇಲ್ಲಿ ಜನಪದ ರಂಗಭೂಮಿಯ ಸ್ವರೂಪವನ್ನು ಗುರುತಿಸಬಹುದು.

ಮಂಡಲ ಚಿತ್ತಾರ

[ಬದಲಾಯಿಸಿ]

ಕಾಡ್ಯನಾಟದ ಸಂದಭ೯ದಲ್ಲಿ ಹಾಕಲಾದ ಬೈದ್ಯರ ಹಿಂದರದೊಳಗೆ ಸುಮಾರು ೧೦ ಅಡಿ ವ್ಯಾಸದ ವೃತ್ತಾಕಾರದ ಮಂಡಲವನ್ನು ಪಂಚವರ್ಣದ ಹುಡಿಯಿಂದ ಬರೆಯಲಾಗುತದೆ.ಈಮಂಡಲ ರಚನೆ ಬೈದ್ಯನ ನಿತೃತ್ವದಲ್ಲಿ ಒಂದು ಸಾಮೂಹಿಕ ಪ್ರಯತ್ನದ ರೂಪದಲ್ಲಿ ರೂಪುಗೊಳ್ಳುತ್ತದೆ. ಕಾಡ್ಯನಾಟದ ಆಚರಣೆಯ ಎರಡನೆಯ ಹಾಗೂ ಮೂರನೆಯ ರಾತ್ರಿ ಈ ಮಂಡಲವನ್ನು ಬರೆಯುತ್ತಾರೆ. ಮೊದಲ ದಿನ ಚಿತ್ತಾರಗಳೆಲ್ಲವೂ ಕೇಂದ್ರ ಕಂಬದ ಕಡೆಗೆ ಮುಖ ಮಾಡಿದ್ದರೆ, ಎರಡನೆಯ ದಿನ ಎಲ್ಲವೂ ಮಂಡಲದ ಪರಧಿಗೆ ಅಭಿಮುಖವಾಗಿರುತ್ತದೆ. ಮಂಡಲಕ್ಕೆ ಹಳದಿ, ಕೆಂಪು, ಕಪ್ಪು, ಹಸುರು ಹಾಗೂ ಬಿಳಿ ಬಣ್ಣದ ಹಿಡಿಗಳನ್ನು ಅವರೇ ತಯಾರಿಸುತ್ತಾರೆ. ಕಾವ್ಯನಾಟದ ಮ೦ಡಲದೊಳಗೆ ಅವರು ತಮ್ಮ ಬರುವನ್ನು ಪ್ರಭವಿಸಿದ ಸೂಯರ, ಚಂದಾ, ನಕ್ಷತ್ರ, ಕಮಲದ ಹೂ ಹೊನ್ನರಳಿ ಮರ, ಹಾಗೆ, ಗೋವರಿಕ, ನವಿಲು, ಒನಕೆ, ಒರಳ, ಗೆರಸೆ, ಚೆನ್ನೆ ಮಜಿ, ದೋಣಿ, ನಾಗ, ಕಾಡ್ಯ, ಡೋಲು ಇತ್ಯಾದಿಗಳ ಚಿತ್ರಬರೆಯುತ್ತಾರೆ. ಕಾಡ್ಯ ನಾಟದ ಮಂಡಲದ ರಚನೆ,ಆಚರಣೆಯ ಸಂದರ್ಭದಲ್ಲಿ ಕಲಶಗಳನ್ನು ಸ್ಥಾಪನೆ ಮಾಡುವ ಬಟ್ಟೆ ಅಲ್ಲೆ ಇರುತ್ತದೆ. ಮಂಡಲದಲ್ಲಿ ಪಕೃತಿ ದೇವತೆಗಳ ಜೊತೆಗೆ ಕೃಷಿ ಸಂಬಂಧಿ ವಸ್ತುಗಳ ಚಿತ್ರವನ್ನು ಬಿಡಿಸಲಾಗುತ್ತದೆ.

ಚಿತ್ರಣಗಳು

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]
  1. ಗೊ.ರು.ಚನ್ನಬಸಪ್ಪ ಕರ್ನಾಟಕ ಜನಪದ ಕಲೆಗಳು,ಕನ್ನಡ ಸಾಹಿತ್ಯ ಪರಿಷತ್ತು,೧೯೭೭.
  2. ಹಿ.ಚಿ.ಬೋರಲಿಂಗಯ್ಯ,ಕರ್ನಾಟಕ ಜನಪದ ಕೋಶ,ಪ್ರಸಾರಾಂಗ,ಕನ್ನಡ ವಿಶ್ವವಿದ್ಯಾಲಯ ಹಂಪಿ,೧೯೯೬.