ಭೂತಾರಾಧನೆ
ಭೂತಾರಾಧನೆ ತುಳುನಾಡಿನ ಆರಾಧನೆಗಳಲ್ಲಿ ಪ್ರಮುಖವಾದದ್ದು, ಇದನ್ನು 'ದೈವಾರಾಧನೆ' ಎಂದೂ ಕರೆಯುತ್ತಾರೆ ಎಂದೂ ಕರೆಯುತ್ತಾರೆ. ದಕ್ಷಿಣ ಕನ್ನಡ, ಉಡುಪಿ, ಕೇರಳ ರಾಜ್ಯದ ಉತ್ತರ ಜಿಲ್ಲೆಗಳಲ್ಲಿ ವಿಶೇಷವಾಗಿ ಕಂಡುಬರುವ ಒಂದು ರೀತಿಯ ಆರಾಧಾನೆ.
ಹಿನ್ನಲೆ
[ಬದಲಾಯಿಸಿ]ಸಾಮಾನ್ಯವಾಗಿ ಆರಾಧನೆಗೊಳ್ಳುವ ಭೂತಗಳನ್ನು ಸ್ಥೂಲವಾಗಿ ಮೂರು ರೀತಿಯಲ್ಲಿ ವರ್ಗೀಕರಿಸಬಹುದು. ಪ್ರಾಣಿರೂಪದಲ್ಲಿರುವ ಭೂತ, ಮನುಷ್ಯನ ಮರಣಾನಂತರ ದೈವೀಕೃತವಾದ ಭೂತ, ಪುರಾಣದಿಂದ ಆಯ್ದುಕೊಂಡ ವ್ಯಕ್ತಿಗಳ ಭೂತ.
ಹುಲಿ, ಹಂದಿ, ನಂದಿ, ಕೋಣ ಇತ್ಯಾದಿ(ಪಿಲಿಚಂಡಿ, ಪಂಜುರ್ಲಿ, ಮೈಸಂದಾಯ) ಪ್ರಾಣಿಗಳು ಮೊದಲನೆಯ ವರ್ಗದ ರೂಪದಲ್ಲಿ ಆರಾಧನೆಗೊಳ್ಳುತ್ತವೆ. ಜುಮಾತಿ, ಕಲ್ಕುಡ-ಕಲ್ಕುರ್ಚಿ, ಕೋಟಿ - ಚನ್ನಯ,ಕುಜುಂಬ-ಕಂಜ, ಕಾಂತಾಬಾರೆ-ಬೂದಾ ಬಾರೆ ಮೊದಲಾದ ವ್ಯಕ್ತಿಗಳು ಮಾನವರಾಗಿದ್ದಾಗ ವೀರ ಕೆಲಸ ಮಾಡಿ ಅಕಾಲ ಮರಣಕ್ಕೆ ತುತ್ತಾಗಿ ಅನಂತರ ಭೂತಗಳಾಗಿ ದೈವತ್ವ ಹೊಂದಿ ಆರಾಧನೆಗೊಳ್ಳುತ್ತವೆ. ಇವು ಎರಡನೆಯ ವರ್ಗಕ್ಕೆ ಸೇರುತ್ತವೆ. ಕೊಡಮಣಿತ್ತಾಯ, ಕಿಕ್ಕುಣಂತಾಯ, ಶಿವತ್ತಾಯ, ಅಣ್ಣಪ್ಪ, ಅಡ್ಕತ್ತಾಯ ಮೊದಲಾದ ದೈವಗಳನ್ನೂ ಈ ಗುಂಪಿಗೇ ಸೇರಿಸಬಹುದು. ತುಳುನಾಡಿನಲ್ಲಿ ಬೆರ್ಮೆ ಎಂಬ ದೈವ ಬ್ರಹ್ಮನ ಪ್ರತಿರೂಪವೇ ಆಗಿದೆ. ವೇದಬ್ರಹ್ಮನ ನಿರ್ದೇಶನ ಒಂದು ಕ್ರಮದಲ್ಲಿದ್ದರೆ ಬೆರ್ಮೆ ಎಂಬ ದೈವ ಭೂತಬ್ರಹ್ಮವಾಗಿ ಇನ್ನೊಂದು ರೀತಿಯಲ್ಲಿ ಆರಾಧನೆಗೊಳ್ಳುತ್ತದೆ. ಇವನಿಗೆ ನಾಲ್ಕು ಮುಖ ಮತ್ತು ನಾಲ್ಕು ಕೈಗಳು, ಕೈಗಳಲ್ಲಿ ಖಡ್ಗ, ಡಮರು ಕಪಾಲ ಮತ್ತು ಕಠಾರಿ ಮೊದಲಾದ ಆಯುಧಗಳಿವೆ. ತುಳುವರ ಮೂಲ ದೇವರು "ಬೆಮ್ಮೆರ್"
ಭೂತಸ್ಥಾನ
[ಬದಲಾಯಿಸಿ]ಭೂತನೆಲೆಯ ಸ್ಥಳವನ್ನು ಭೂತಸ್ಥಾನ, ದೈವಸ್ಥಾನ ಎಂದು ಕರೆಯುತ್ತಾರೆ. ಭೂತಸ್ಥಾನಕ್ಕೆ ಅಲೆಡೆ, ಗರಡಿ, ಕಟ್ಟೆ, ತಾನೊ, ಚಾವಡಿ ಎಂಬ ಹೆಸರುಗಳೂ ಇವೆ. ಇವು ಸಾಮಾನ್ಯವಾಗಿ 3.5 ಮೀ ಉದ್ದ, 2.5 ಮೀ ಅಗಲ, 3.5 ಮೀ ಎತ್ತರದ ಸಾಧಾರಣ ಗುಡಿಗಳಾಗಿರುತ್ತವೆ. ಇವಕ್ಕೆ ಕಿಟಕಿಗಳಿರುವುದಿಲ್ಲ. ರಾಜನ್ ದೈವಗಳಿಗೆ ಭೂತಗಳಿಗೆ ಇದಕ್ಕೂ ದೊಡ್ಡದಾದ ಭೂತಸ್ಥಾನಗಳಿರುವುದುಂಟು. ಸ್ಥಾನದ ಒಳಗೆ ಮನುಷ್ಯರಂತೆ, ಪ್ರಾಣಿಗಳಂತೆ ರೂಪವಿರುವ ಹಿತ್ತಾಳೆಯ ಹಲವಾರು ಉರುಗಳಿರುತ್ತವೆ, ಜೊತೆಗೆ ಮಣೆಮಂಚ(ತೂಗುಮಂಚ) ಅಥವಾ ಕಾಲುಳ್ಳ ಮಂಚವಿರುತ್ತದೆ. ಇದನ್ನು ಉಜ್ಜಾಲೆ ಮಣೆಮಂಚ ಎನ್ನುತ್ತಾರೆ. ಇದರ ಮೇಲೆ ಭೂತದ ಖಡ್ಗ ಹಾಗೂ ಗುಂಟೆ ಇರುತ್ತವೆ. ಭೂತಸ್ಥಾನದಲ್ಲಿ ಕಂಡುಬರುವ ಹುಲಿ, ಹಂದಿ, ಕೋಣ, ವಿಗ್ರಹಗಳನ್ನು ಭೂತವಾಹನಗಳಾಗಿ ಉಪಯೋಗಿಸುವುದರ ಜೊತೆಗೆ, ಅವನ್ನೂ ಭೂತಗಳ ಪರಿವಾರವೆಂದು ಕರೆದು ವಿಶೇಷ ಸಂದರ್ಭಗಳಲ್ಲಿ ಪೂಜಿಸುವುದೂ ಉಂಟು. ಹೀಗೆ ಪೂಜಿಸುವಾಗ ಭೂತದ ಬಳಿ ಒಂದು ಕತ್ತಿ, ಕಂಚಿನ ಕಳಸದಲ್ಲಿ ನೀರು ದೀಪ ಇಟ್ಟಿರುತ್ತಾರೆ.
ಭೂತಾರಾಧನೆ-ದೈವಾರಾಧನೆ
[ಬದಲಾಯಿಸಿ]- ತುಳುನಾಡ ಸಾಂಸ್ಕೃತಿಕ ಪದಕೋಶದಲ್ಲಿ ಸಾಮಾಜಿಕ ಬದುಕಿನಲ್ಲಿ ಮುಖ್ಯವಾಗಿ ತಿಳಿಯುವ ಪದ ಭೂತ. ಕನ್ನಡ ಭಾಷೆಯ ಸಾಂಸ್ಕೃತಿಕ ಪದಕೋಶದಲ್ಲಿ ಭೂತ ಪದ ಬಳಕೆಯಲ್ಲಿಲ್ಲ. ಸಂಸ್ಕೃತ ಭಾಷೆಯಲ್ಲೂ ಇಲ್ಲ. ಮಲಯಾಳಿಗಳು ತೆಯ್ಯಂ ಎಂದು ಕರೆಯುವ ತುಳುವರ ಭೂತವು ದೈವ, ದೈವಂಕುಲು ಆಗಿ ಬಳಕೆಯಲ್ಲಿದೆ. ಪಾಶ್ಚಿಮಾತ್ಯದಿಂದ ಬಂದ ವಿದ್ವಾಂಸರು ಡೆವಿಲ್Devil ಬಳಸಿದರು. ಎ.ಸಿ.ಬರ್ನೆಲ್ Devil worship of Tuluvas ಎಂಬ ಕೃತಿಯನ್ನು ಬರೆದ.
- ಆರಾಧನೆಯ ಪರಂಪರೆಯ ತುಳುನಾಡಿನಲ್ಲಿ ದೈವ(ಭೂತ) ಮತ್ತು ದೇವರು ಬೇರೆಬೇರೆ ಎಂದು ನೋಡುವುದಿಲ್ಲ. ದೈವ ಮತ್ತು ದೇವರು ಎರಡನ್ನು ಭಿನ್ನ ನೆಲೆಯಲ್ಲಿ ನಂಬಿ ಬದುಕುತ್ತಿದ್ದಾರೆ.
- ೧೪ನೆಯ ಶತಮಾನದಿಂದ ಈಚೆಗೆ ದೈವೊ ಪದದ ಬಳಕೆ ಆಗುತ್ತಿದೆ.
- ಭೂತ+ಆರಾಧನೆ=ಭೂತಾರಾಧನೆ. ಭೂತವನ್ನು ನಂಬಿದವರಿಗೆ ಜಯ ಕೊಡುತ್ತದೆ, ನಂಬದವನಿಗೆ ಅಪಜಯವಾಗುತ್ತದೆ(ಭೂತೊ ನಂಬಿನಕ್ಲೆಗ್ ಇಂಬು ಕೊರ್ಪುಂಡು ನಂಬಂದ್‍ನಕ್ಲೆಗ್ ಅಂಬು ಕೊರ್ಪುಂಡು) ಎಂಬ ನಂಬಿಕೆಯಿದೆ. ತುಳುವಿನ ಅಂಬು' ಎಂಬ ಪದಕ್ಕೆ ಶಿಕ್ಷೆ ಎಂಬ ಅರ್ಥವಿರುವುದರಿಂದ ಶಿಕ್ಷೆ ಆಗದೆ ರಕ್ಷೆಗಾಗಿ ಭೂತವನ್ನು ನಂಬಿದರೆ ತಮಗೆ ಏನಾದರೂ ಒಳಿತಾಗಬಹುದೆಂದು ತುಳುನಾಡಿನ ಜನರು ನಂಬಿದ್ದಾರೆ. ನಂಬುವವರಿಗೆ ಭೂತ ಮೈಸೇರುತ್ತದೆಂದು ನಂಬಿಕೆಯಿದೆ. ಅಂದರೆ ಭೂತ ನಂಬಿಕೆಯಿರುವವರಿಗೆ ವಶವಾಗುತ್ತದೆ. ಹೀಗೆ ವಶವಾಗುವ ಭೂತ ನಂಬಿದವನಿಗೆ ಒಳ್ಳೆಯ ಮದಿಪು ನೀಡುತ್ತದೆ. ನಂಬುವವರು ದೇವರಿಗೆ ಹರಕೆ ನೀಡುವಂತೆ ಭೂತಕ್ಕೂ ಹರಕೆ ನೀಡುತ್ತಾರೆ. ಕೋಲ ಕೊಡುವ, ನೇಮೊ ಮಾಡುವ, ತಂಬಿಲ, ಅಗೆಲ್ ಬಡಿಸುವ ಕ್ರಮ ಇಂದಿಗೂ ನಡೆದುಕೊಂಡು ಬಂದಿದೆ. ಭೂತಾರಾಧನೆ ಸಮಯದಲ್ಲಿ ಭೂತದ ವೇಷ ಹಾಕುವವನು ಮೈಗೆ ಅಲಂಕಾರಯುಕ್ತವಾದ ವೇಷಭೂಷಣ ತೊಡುತ್ತಾರೆ. ಸ್ತ್ರೀ ಪುರುಷ ಭೂತಗಳಿಗೆ ಪ್ರತ್ಯೇಕವಾದ ವೇಷಭೂಷಣಗಳಿರುತ್ತವೆ. ಅಣಿ ಕಟ್ಟಿಕೊಂಡು ಮುಗೊಕಟ್ಟಿಕೊಂಡು, ಕೈಯಲ್ಲಿ ಸುರಿಯೆ(ಕತ್ತಿ) ಹಿಡಿದುಕೊಂಡು, ಬಿಲ್ಲ್ ಪಗರಿ(ಬಲ್ಲುಬಾಣ) ಹಿಡಿದುಕೊಂಡು,ಕಾಲಿಗೆಗಗ್ಗರ ಕಟ್ಟಿಕೊಂಡು ಕುಣಿಯುವ ಆರಾಧನೆಯನ್ನು ಭೂತಾರಾಧನೆ ಎಂದು ಕರೆಯುತ್ತಾರೆ.
- ಭೂತಾರಾಧನೆ ಎಂಬ ಪದ ಆರಾಧನಾ ಪರಂಪರೆಯಿಂದ ಹುಟ್ಟಿದ ಪದವಲ್ಲ. ಅದು ತೌಳವ ಸಂಸ್ಕೃತಿಯನ್ನು ಒಟ್ಟಾಗಿ ಸೂಚಿಸುವ ಪದ.
- ದೈವ+ಆರಾಧನೆ=ದೈವಾರಾಧನೆ. ಭೂತಾರಾಧನೆಯನ್ನು ದೈವಾರಾಧನೆಯೆಂದು ಕರೆಯುತ್ತಾರೆ. ದೇವೆರ ಆರಾಧನೆಯಂತೆ ಭಯಭಕ್ತಿಯಿಂದ ವರ್ಷಕ್ಕೊಮ್ಮೆ ದೈವಕ್ಕೂ ಆರಾಧನೆ ನಡೆಯುತ್ತದೆ.
ಭೂತಾರಾಧನೆಯ ಬಗೆ
[ಬದಲಾಯಿಸಿ]ಭೂತಾರಾಧನೆಯ ಇತಿಹಾಸ
[ಬದಲಾಯಿಸಿ]- ಕ್ರಿ.ಶ, ೧೩೭೯ರಲ್ಲಿ ಕಾರ್ಕಳ ತಾಲೂಕಿನ ಕಾಂತೇಶ್ವರ ದೇವಸ್ಥಾನದಲ್ಲಿ ಸಿಕ್ಕಿರುವ ಶಾಸನ ಆಧಾರ. ಈ ಶಾಸನದಲ್ಲಿ ದೈವಕ್ಕೆ ತಪ್ಪಿದವರು ಎಂಬ ಪದದ ಬಳಕೆಯಿದೆ.'
- ಕಾರ್ಕಳ ತಾಲೂಕಿನ ಉದ್ಯಾವರದಲ್ಲಿ ಕ್ರಿ.ಶ. ೧೫೪೩ರಲ್ಲಿ ದೊರೆತಿರುವ ಶಾಸನದಲ್ಲಿ ನಂದಳಿಕೆ ದೈವೊ ಪದದ ಉಲ್ಲೇಖವಿದೆ.
- ಕ್ರಿ.ಶ.೧೪೯೯ಡ್ ಉಡುಪಿ ತಾಲೂಕಿನ ಕಾಪು ಪ್ರದೇಶದಲ್ಲಿಇ ದೊರೆತ ಶಾಸನದಲ್ಲಿ ನಂದಳಿಕೆ ದೈವದ ಪ್ರಸ್ತಾಪವಿದೆ.
- ಕ್ರಿ.ಶ.೧೪೪೬ರಲ್ಲಿ ದೊರೆತ ಬಸ್ರೂರು ಶಾಸನದಲ್ಲಿ ಮತ್ತು ಕ್ರಿ.ಶ.೧೫೬೬ರಲ್ಲಿ ದೊರೆತ ಬಾರಕೂರು ಶಾಸನದಲ್ಲಿ ಬೊಬ್ಬರ್ಯ ಭೂತದ ಹೆಸರಿದೆ.
- ಕ್ರಿ.ಶ. ೧೪೩೨ರಲ್ಲಿ ದೊರೆತ ಸುಳ್ಯದ ಎಡಮಂಗಿಲ ಶಾಸನದಲ್ಲಿ ಸಿರಾಡಿ ದೈವಕ್ಕೆ ಪ್ರಸಾದ ತುಪ್ಪದೊಳು ಎಂಬ ಪದದ ಬಳಕೆಯಿದೆ.
ಭೂತಾರಾಧನೆ ಮತ್ತು ಪಾಡ್ದನ
[ಬದಲಾಯಿಸಿ]ಪಾಡ್ದನಗಳು ಭೂತಗಳ ಹುಟ್ಟು, ಪ್ರಸರಣ, ಕಾರಣಿಕವನ್ನು ನಿರೂಪಣೆ ಮಾಡುವ ಪದ್ಯರೂಪದ ಕಥನಕವನಗಳು. ಪಾಡ್ದನವನ್ನು ತುಳುವರು ಪಾರ್ತನೊ, ಸಂದ್, ಸಂದಿ, ಹೀಗೆ ಬೇರೆಬೇರೆ ರೂಪದಲ್ಲಿ ಬಳಕೆ ಮಾಡುತ್ತಾರೆ.
ಭೂತಾರಾಧನೆಯ ಕಟ್ಟು ಕಟ್ಟಳೆಗಳು
[ಬದಲಾಯಿಸಿ]ದೇವರಿಗೆ ದೇವಸ್ಥಾನ ಹೇಗೆ ಇದೆಯೋ ? ಹಾಗೆ ತಲುವರ ನಂಬುವ ದೈವಗಳಿಗೆ ದೈವಸಾನ...
ಭೂತ
ಕೋಲ
ಭೂತಾರತುಲುವರ್ಉತ್ಸವ ಲಿ ಸಾಮಾನ್ಯವಾಗಿ ೧೬ ಕಟ್ಟುಕಟ್ಟಲೆಗಳನ್ನು ಕಾಣಬಹುದು. ನೇಮದ ವೇಳೆ ಕಟ್ಟುವ ಭೂತವೇಷಗಳು ಆಯಾ ಭೂತದ ಸ್ವಭಾವ ಸ್ವರೂಪಗಳಿಗೆ ತಕ್ಕುದಾಗಿರುತ್ತವೆ. ಮುಖವರ್ಣಿಕೆ, ಉಡುಪು ತೊಡುಪು, ಅಣಿಗಳಲ್ಲಿ (ಬೆನ್ನುಹಿಂದಕ್ಕೆ ಕಟ್ಟಿ ಕೊಳ್ಳುವ ಅಗಲವಾದ ರಚನೆ) ಸಾಕಷ್ಟು ವೈವಿಧ್ಯವಿರುತ್ತದೆ. ಕುಣಿತದ ವೈಖರಿಯಲ್ಲೂ ಹಾಗೆಯೇ. ನೇಮಕ್ಕೆ ಸಂಬಂಧಪಟ್ಟಂತೆ ವಾಲಸಿರಿ, ಬಂಡಿ ಮೊದಲಾದ ಸಮಾರಂಭಗಳೂ ಜರಗುವುದುಂಟು. ವಾಲ ಸಿರಿ ಭೂತಸ್ಥಾನದ ಆವರಣದ ಹೊರಗೆ ನಡೆಯುತ್ತದೆ. ಎಲ್ಲ ಭೂತಸ್ಥಾನಗಳಲ್ಲಿ ಬಂಡಿ ಇರಬೇಕೆಂದಲ್ಲ. ಬಂಡಿ ಇದ್ದಲ್ಲ ಅದನ್ನು ಸಿಂಗರಿಸಿ ಎಳೆಯುತ್ತಾರೆ. ಬಂಡಿಗಳಲ್ಲಿ ಹುಲಿ, ಹಂದಿ, ಕುದುರೆ ಮುಂತಾದವುಗಳ ಮೇಲೆ ಕುಳಿತಿರುವ ಭೂತಗಳ ವಿಗ್ರಹಗಳಿರುತ್ತವೆ. ವಿಗ್ರಹಗಳಿಲ್ಲದಿದ್ದಲ್ಲಿ ಭೂತವೇಷವನ್ನು ತೊಟ್ಟ ವ್ಯಕ್ತಿಯೇ ಕುಳಿತುಕೊಳ್ಳುತ್ತಾನೆ. ನೇಮದ ಅಂಗವಾಗಿ ತಪ್ಪಂಗಾಯಿ, ಸೊಟೆದಾರೆ ಮೊದಲಾದ ವಿನೋದಗಳೂ ಕೋಳಿ ಅಂಕವೂ ನಡೆಯುವುದುಂಟು. ಭೂತಗಳಲ್ಲಿಯೂ ಸೀಮೆಯ ರಾಜಂದೈವ, ಗ್ರಾಮದ ದೈವ, ಜಾಗದ ದೈವ, ಕುಟುಂಬದ ದೈವ, ಮನೆಯ ದೈವ—ಹೀಗೆ ಪ್ರತ್ಯೇಕವಾದ ವ್ಯವಸ್ಥೆ ಇದೆ. ಕೆಲವೊಮ್ಮೆ ವಿಶಿಷ್ಟ ಕಾರಣಗಳಿಗಾಗಿ ಧರ್ಮನೇಮ ಎಂಬ ವಿಶೇಷೋತ್ಸವವನ್ನು ಜರಗಿಸುವುದುಂಟು. ಅದರ ಅಂಗವಾಗಿ ಅನ್ನಸಂತರ್ಪಣೆಯೂ ನಡೆಯುವುದಿದೆ.
ಕೋಲ ಎಂದರೆ ಅಲಂಕಾರ ಎಂದರ್ಥ. ಭೂತ ವೇಷಧಾರಿಗೆ ತೊಡಿಸುವ ವಿಶೇಷ ವೇಷ ಪರಿಕರಗಳ ಬೆಡಗಿನಿಂದಾಗಿ ಸಂಬಂಧಪಟ್ಟ ಉತ್ಸವಕ್ಕೂ ಅದೇ ಹೆಸರು ಬಂದಿದೆ. ಕೋಲವನ್ನು ವಾಡಿಕೆಯಂತೆ ವರ್ಷಕ್ಕೊಂದು ಬಾರಿ ನಿರ್ದಿಷ್ಟ ಸ್ಥಳದಲ್ಲಿ ನಿಶ್ಚಿತ ದಿನಗಳಲ್ಲಿ ಜರಗಿಸಬಹುದು; ಅಥವಾ ವಿಶೇಷ ಸೇವೆಯಾಗಿ ಬೇರೆಯೇ ಸಂದರ್ಭಗಳಲ್ಲಿಯೂ ನಡೆಯಿಸಬಹುದು. ಕೋಲದ ಚಪ್ಪರಕ್ಕೆ ಪತಾಕೆಯ ರೂಪದಲ್ಲಿ ಮಡಿವಾಳನು ಬಿಳಿ ಅಥವಾ ಕೆಂಪು ಬಟ್ಟೆ ಕಟ್ಟುವುದಿದೆ. ಎಳನೀರು, ಸೌತೆ, ಕುಂಬಳ ಮುಂತಾದವನ್ನು ಚಪ್ಪರದಲ್ಲಿ ತೂಗಿಸುತ್ತಾರೆ. ಕೋಲಕ್ಕೆ ಮೊದಲು ಮಣ್ಣು ಮುಹೂರ್ತ ಎಂಬ ವಿಧಿ ಜರುಗುವುದಿದೆ. ಕೋಲ ಜರಗಬೇಕಾದ ಸ್ಥಳದ ತುಸು ಮಣ್ಣನ್ನು ಆಯಾಸ್ಥಾನದ ಪೂಜಾರಿ ತಂದು, ಗಂಧಿ ಪ್ರಸಾದ ಸ್ವೀಕರಿಸಿ ಒಳಗೆ ಹೊರಗೆ ತುಲಸಿಕಟ್ಟೆ, ಪಾಗಾರ ಮುಂತಾದ ಎಡೆಗಳಲ್ಲಿ ಎಲ್ಲೆಲ್ಲಿ ಬಿರುಕುಗಳಿವೆಯೋ ಅಲ್ಲಿಗೆ ಮಣ್ಣನ್ನು ಮೆತ್ತಿ ಜಾಗವನ್ನು ಪ್ರಶಸ್ತಗೊಳಿಸುವನು. ಕೋಲದ ಚಪ್ಪರದ ನಡುವೆ ಗರಡಿಯ ಒಳಗೆ ನೆಲದಲ್ಲಿ ವಿವಿಧ ರೀತಿಯ ಮಂಡಲಗಳನ್ನು ಬಣ್ಣದ ಪುಡಿಗಳಿಂದ ಬರೆಯುವುದುಂಟು. ಮಂಡಲದ ಮೇಲಕ್ಕೆ ನೇರವಾಗಿ ಒಂದು ತೆಂಗಿನಕಾಯನ್ನು ವಿಧಿಪೂರ್ವಕವಾಗಿ ತೂಗಿಸುತ್ತಾರೆ. ಇದಕ್ಕೆ ಕುಕ್ಯಾಲಿ ಎಂದು ಹೆಸರು.
ಕೆಲವು ಕೋಲಗಳಿಗೆ ಭಂಡಾರ ಹೋಗುವ ಕ್ರಮವಿದೆ, ಭೂತದ ಮೊಗ, ಬೆಳ್ಳಿ ಒಂಗಾರದ ನಗನಾಣ್ಯಗಳೇ ಮುಂತಾದ ವೇಷ ಸಾಮಗ್ರಿಗಳೂಸುರಿಗೆ ಮುಂತಾದ ಆಯುಧಗಳೂ ನಿಶಾನಿ, ಗಣಿ, ದೀವಟಿಗೆ, ಸತ್ತಿಗೆ ಮುಂತಾದ ಬಿರ್ದಿನಿಂದ ಕೊಂಬುವಾಲಗದೊಂದಿಗೆ ಕೋಲದ ಚಪ್ಪರದದೆಡೆಗೆ ಸಾಗುವುವು. ಭೂತದ ವೇಷಕ್ಕೆ ತೆಂಗಿನ ಎಳೆಯಗರಿ, ಕೇಪಳದಹೂ, ಅರದಾಳ, ಮಸಿ, ಇಂಗಳಿಕ, ಕೆಂಪುವಸ್ತ್ರ, ದಗಲೆ, ಗೆಜ್ಜೆ, ಗಗ್ಗರ, ಕೈದಂಡೆ, ನೆತ್ತಿಪಟ್ಟ, ಚಪ್ಪರಕೊಂಬು, ಮಾಲೆಗಳು, ಅಣಿ ಮೊದಲಾದವನ್ನು ಉಪಯೋಗಿಸುತ್ತಾರೆ. ಆಯಾ ಭೂತದ ಸ್ವರೂಪ, ಸ್ವಭಾವಗಳಿಂದ ತಕ್ಕ ಅಣಿಯನ್ನೂ ಮಖವರ್ಣಿಕೆಯನ್ನೂ ಇತರ ಪರಿಕರಗಳನ್ನೂ ಬಳಸುತ್ತಾರೆ.
ಪೂಜೆ ರೀತಿಯಲ್ಲಿ ಆಯಾ ಭೂತದ ರೌದ್ರಭಾವನೆಗೆ ಅನುಗುಣವಾಗಿ ಕುಣಿತದ ಮೂಲಕ ಪೂಜೆಯಾಗುತ್ತದೆ. ಭೂತವನ್ನು ಪ್ರತಿನಿಧಿಸುವ ವ್ಯಕ್ತಿಯನ್ನು ಬೂತ ಕಟ್ಟುನಾಯೆ(ಪಾತ್ರಿ) ಎನ್ನುತ್ತಾರೆ. ಒಂದೊಂದು ಭೂತಕ್ಕೂ ಅದಕ್ಕೊಪ್ಪುವ ಅರದಳವಿರುತ್ತದೆ. ಅಲಂಕಾರ, ವೇಷ, ಮುಖ ವರ್ಣಿಕೆ ಇರುತ್ತವೆ. ಮೈಗೆ ಕೆಂಪುಬಟ್ಟೆ, ನಡುವಿಗೆ ನೆರಿಗೆಯುಳ್ಳ ಲಂಗ, ತಲೆಗೆ ಕಿರೀಟ (ಅಣಿ), ಕಾಲಿಗೆ ಗಗ್ಗರ, ಸೊಂಟಕ್ಕೆ ದಟ್ಟಿ, ತೋಳಿಗೆ ವಂಕಿ, ಕೈಗೆ ಬಳೆ, ಎದೆಗೆ ಕಂಚಿನ ರಕ್ಷೆ, ಕಿವಿಗೆ ಮತ್ತು ಹಣೆಗೆ ಅಲಂಕಾರ ಇರುತ್ತದೆ. ಒಮ್ಮೊಮ್ಮೆ ಆಯಾ ಭೂತದ ಮುಖವಾಡ ಧರಿಸಿ ಕುಣಿಯುವುದೂ ಉಂಟು. ಭೂತಾರಾಧನೆ ಕೆಲವೊಮ್ಮೆ ಸಾರ್ವಜನಿಕವಾಗಿಯೂ ಒಂದೊಂದೆ ಮನೆಯಲ್ಲಿಯೂ ನಡೆಯುತ್ತದೆ. ಬತ್ತ, ಅಕ್ಕಿ, ಬತ್ತದ ಅರಳು, ಎಳನೀರು, ತೆಂಗಿನಕಾಯಿ, ಅಡಿಕೆ, ಹೊಂಬಾಳೆ, ತೆಂಗಿನ ಗರಿ—ಇವು ಭೂತಾರಾಧನೆಯ ಮುಖ್ಯ ವಸ್ತುಗಳು. ಎಲ್ಲ ರೀತಿಯ ಭೂತ ಕಟ್ಟುವಾಗಲೂ ಕೈಯಲ್ಲಿ ದೀವಟಿಗೆಯಿರುತ್ತದೆ.
ಭೂತಾರಾಧನೆಯ ಸಾಂಸ್ಕೃತಿಕ ವಿವರ
[ಬದಲಾಯಿಸಿ]ಕೋರಿ ಗೂಂಟ
[ಬದಲಾಯಿಸಿ]ಉತ್ಸವಕ್ಕೆ ಕೊಡಿ (ಧ್ವಜ) ಏರಿಸುವ ಕ್ರಮವಿದೆ. ನೇಮಕ್ಕೆ ಕೆಲವು ದಿನ ಮುಂಚೆ ಕೋಳಿಕುಂಟ ಎಂಬ ವಿಧಿ ಜರುಗುವುದುಂಟು. ಅಂದು ನೇಮಕ್ಕಾಗಿ ಬಾಳೆಗೊನೆ ಕಡಿಯುವ ಗೊನೆಮುಹೂರ್ತ ಎಂಬ ಕ್ರಮ ಇದೆ (ಕೋಳಿಕುಂಟವಾದ ಮೇಲೆ ಆ ಊರನ್ನು ಬಿಟ್ಟು ಯಾರೂ ದೂರ ಪ್ರಯಾಣ ಕೈಗೊಳ್ಳಬಾರದೆಂಬ ಕಟ್ಟಳೆ ಇದೆ). ಊರ ಜನವರ್ಗದ ಪ್ರತಿನಿಧಿಗಳೂ ದೈವದ ಸೇವೆಗೆ ಸಂಬಂಧಪಟ್ಟ ಪೂಜಾರಿ ಮುಂತಾದ ವ್ಯಕ್ತಿಗಳೂ ಸಕಲ ಬಿರುದಾವಳಿಗಳಿಂದ ಭೂತದ. ಭಂಡಾರವನ್ನು (ಆಯುಧ, ಮೊಗ ಮುಂತಾದ ಪೂಜಾ ಸಾಮಗ್ರಿಗಳನ್ನು) ಭೂತಸ್ಥಾನಕ್ಕೆ ಒಯ್ಯುತ್ತಾರೆ. ಉತ್ಸವದ ಸಂದರ್ಭದಲ್ಲಿ ಆಯಾ ಭೂತದ ಹುಟ್ಟುಕಟ್ಟುಗಳನ್ನು ಭೂತಕ್ಕೆ ಕಟ್ಟುವವರೂ ಅವರ ಸಂಗಡಿಗರೂ ತೆಂಬರೆ ಎಂಬ ವಾದ್ಯದ ಬಡಿತದೊಂದಿಗೆ ರಾಗವಾಗಿ ಹಾಡುತ್ತಾರೆ. ಒಂದೇ ವೇಳೆ ಎರಡು ಅಥವಾ ಮೂರು ಭೂತಗಳು ಕಾಣಿಸಿಕೊಳ್ಳಬಹುದು. ಬೇರೆ ಬೇರೆ ಭೂತಗಳನ್ನು ಒಬ್ಬನೇ ವ್ಯಕ್ತಿ ಒಂದಾದ ಮೇಲೆ ಒಂದರಂತೆ ಆವೇಶ ಬರಿಸಿಕೊಳ್ಳಬಹುದು.
ಭೂತಾರಾಧನೆಯ ವಾದ್ಯಗಳು
[ಬದಲಾಯಿಸಿ]ಭೂತ ಕಟ್ಟುವ ಸಮುದಾಯ
[ಬದಲಾಯಿಸಿ]ದಕ್ಷಿಣ ಕನ್ನಡ ಜಿಲ್ಲೆಯ ತುಳು ಮಾತನಾಡುವ ಪ್ರದೇಶದ ಭೂತಾರಾಧನೆಗೂ ಕನ್ನಡ ಮಾತನಾಡುವ ಪ್ರದೇಶದ ಭೂತಾರಾಧನೆಗೂ ಕೆಲವು ವೈಶಿಷ್ಟ್ಯಗಳೂ ವ್ಯತ್ಯಾಸಗಳೂ ಕಂಡುಬರುತ್ತವೆ. ತುಳು ಮಾತನಾಡುವಲ್ಲಿ ಕೆಲವೇ ನಿಶ್ಚಿತ ಜಾತಿಗೆ ಸೇರಿದ—ಮುಖ್ಯವಾಗಿ ಬೈದ್ಯ, ನಲಿಕೆ, ಪರವ, ಪಂಬರ, ಪಾಣಾರ—ಜನ ಮಾತ್ರ ಭೂತಾರಾಧನೆಯಲ್ಲಿ ಭಾಗವಹಿಸುತ್ತಾರೆ. ಇಲ್ಲಿ ಒಂದು ಭೂತವನ್ನು ಇಂಥವನೇ ಪೂಜಿಸಬೇಕೆಂಬ ನಿಯಮವಿದೆ ಅದಕ್ಕೆ ಅಜಲು ಎನ್ನುವರು. ಒಂದೇ ಗುಡಿಯಲ್ಲಿ ಅನೇಕ ದೈವಗಳ ಉರು, ಮುಗೊಗಳಿರುತ್ತವೆ. ಈ ಭೂತಗಳಿಗೆ ಪಾಡ್ಡನಗಳಿಲ್ಲ; ಸರಿಯಾದ ಕಥೆಯಿಲ್ಲ. ಈ ದೈವಗಳಿಗೆ ವರ್ಷಕ್ಕೊಂದು ಸಲ ಎಥವಾ ವಿಶಿಷ್ಟ ಸಂದರ್ಭಗಳಲ್ಲಿ ಕೋಲ, ನೇಮ, ಬಲಿ, ಅಗಲು, ತಂಬಿಲ. ಬಂಡಿ ಮೊದಲಾದ ವಿವಿಧ ರೀತಿಯ ಉತ್ಸವ ಹಾಗೂ ಸೇವೆ ಜರುಗುತ್ತವೆ. ಕೋಲ ಮತ್ತು ನೇಮ ದೈವದ ನೃತ್ಯಸಹಿತ ಉತ್ಸವದ ರೂಪದಲ್ಲಿ ನಡೆಯುತ್ತವೆ. ನೇಮ ಹೆಚ್ಚಾಗಿ ರಾತ್ರಿ ನಡೆಯತ್ತದೆ. ಅಗಲು ಸಾಮಾನ್ಯವಾಗಿ ಕೋಲದ ಹಿಂದಿನ ರಾತ್ರಿ ನಡೆಯುತ್ತದೆ. ಕೋಲವನ್ನು ಹೆಚ್ಚಾಗಿ ಪಂಬರರು, ಪರವರು, ನಲಿಕೆಯವರು ಕಟ್ಟುತ್ತಾರೆ. 'ಪರ್ವ ಭೂತಗಳಿಗೆ ಇನ್ನೊಂದು ರೀತಿಯಲ್ಲಿ ನಡೆಯುವ ಪೂಜೆ. ನೇಮ, ಊರವರೆಲ್ಲ ಸೇರಿ ನಡೆಸುವ, ಸ್ವಲ್ಪ ಹಿರಿಯ ಪ್ರಮಾಣದ ಉತ್ಸವ. ಎರಡೋ ಮೂರೋ ದಿನ ನಡೆಯಬಹುದು.
ಭೂತಗಳ ಉಗಮ ಮತ್ತು ವರ್ಗೀಕರಣ
[ಬದಲಾಯಿಸಿ]- ಸೀಮೆಯ ಭೂತಗಳು
- ಮಾಗಣೆ ಭೂತಗಳು
- ಗ್ರಾಮ ಭೂತಗಳು
- ಗುತ್ತಿನ ಭೂತಗಳು
- ಕುಟುಂಬದ ಭೂತಗಳು
ತುಳುನಾಡಿನ ಭೂತಗಳು
[ಬದಲಾಯಿಸಿ]- ಅಂಗಾರ
- ಅಂಗಾರ ಬಾಕುಡ
- ಅಂಗಾರ ಕಲ್ಕುಡ
- ಅಂಬೆರ್ಲು
- ಅಕ್ಕಮ್ಮ ದೈಯಾರು
- ಅಕ್ಕೆರಸು ಪೂಂಜೆದಿ
- ಅಕ್ಕೆರ್ಲು
- ಅಜ್ಜೆರ್ನಾಯ
- ಅಡ್ಕತ್ತಾಯ
- ಅಡ್ಕದ ಭಗವತಿ
- ಅಡಿಮಣಿತ್ತಾಯ
- ಅಡಿಮರಾಂಡಿ
- ಅತ್ತಾವರ ದೈಯೊಂಗುಲು
- ಅಬ್ಬಗೆ ದಾರಗೆ
- ಅಬ್ಬೆರ್ಲು
- ಅಯ್ವೆರ್ ಬಂಟರು
- ಅರಸುಭೂತ
- ಅರಸು
- ಆಚಾರಿ ಬೂತ
- ಆಟಿಕಳೆಂಜ
- ಆನೆಕಟ್ನಾಯ
- ಆಲಿಭೂತ
- ಆಲಿಸೆಯಿತ್ತಾಯ
- ಈರಬದ್ರ
- ಈಸರ ಕುಮಾರ
- ಉಮ್ಮಳಾಯ
- ಉಮ್ಮಳಿ
- ಉರಿಮರ್ತಿ
- ಉರಿಯಡಿತ್ತಾಯ
- ಉಳ್ಳಾಕುಲು
- ಉಳ್ಳಾಯ
- ಉಳ್ಳಾಲ್ತಿ
- ಎರುಕನಡ
- ಎರುಬೇಡವ
- ಒಂಜರೆ ಕಜ್ಜದಾಯ
- ಒಕ್ಕುಬಲ್ಲಾಳ
- ಒರ್ಮುಗೊತ್ತಾಯ
- ಓಡಿಲ್ದಾಯ
- ಕಂಟಿರಾಯ
- ಕಂಬೆರ್ಲು
- ಕಂಡತಾಯ
- ಕನಪಡಿತ್ತಾಯ
- ಕನಲ್ಲಾಯ
- ಕನ್ಯಾಕುಮಾರಿ
- ಕಬಿಲ
- ಕರಿಯನಾಯಕ
- ಕರಿಯಮಲ್ಲ
- ಕಲ್ಕುಡ
- ಕಲ್ಲುರ್ಟಿ
- ಕಲ್ಲೂರತ್ತಾಯ
- ಕಲ್ಲೇರಿತ್ತಾಯ
- ಕಲಲ
- ಕಳುವ
- ಕಾಂಜವ
- ಕಾಂತಬಾರ
- ಕಾಂತುನೆಕ್ರಿ
- ಕಾಡೆದಿ
- ಕಾಯರಡಿ ಬಂಟ
- ಕಾರಿ
- ಕಾರ್ಣವರು
- ಕಾಳರ್ಕಾಯಿ
- ಕಾಳಮ್ಮ
- ಕಾಳರಾತ್ರಿ
- ಕಾಳರಾಹು
- ಕಾಳಿ
- ಕಾಳೆ
- ಕಿನ್ನಿದಾರು
- ಕಿನ್ನಿಮಾನಿ
- ಕಿರಿಯಾಯ
- ಕುಂಜೂರಾಯ
- ಕುಂದಯ
- ಕುಕ್ಕಿನಂತಾಯ
- ಕುಕ್ಕಿಲ್ಲಾಯ
- ಕುರ್ಕಲ್ಲಾಯ
- ಕುಂಜಣಿಗ
- ಕುದುಮುಲ್ದಾಯ
- ಕುಮಾರ
- ಕುಮಾರಸ್ವಾಮಿ
- ಕುರವ
- ಕುರಿಯಡಿತ್ತಾಯ
- ಕುಲೆ
- ಕೂಜುಲು
- ಕೆಂಚಿಕೆಲುತ್ತಾಯ
- ಕೆಂಜಲ್ತಾಯ
- ಕೇತುರ್ಲಾಯ
- ಕೆಂಬೆರ್ಲು
- ಕೊಟ್ಯದಾಯ
- ಕೊಡಂಗೆತ್ತಾಯ
- ಕೊಡಮಣಿತ್ತಾಯ
- ಕೋಮರಯ್ಯ
- ಕೊರಗ
- ಕೊರಗತನಿಯ
- ಕೊರತಿ
- ಕೊಲ್ಲೂರಮ್ಮ
- ಕೋಟಿ
- ಕೋಟಿ ಚೆನ್ನಯ
- ಕೋಟಿಪೂಂಜ
- ಕೋಡೊದಜ್ಜ
- ಕೋಡ್ದಬ್ಬು ತನ್ನಿಮಾನಿಗ
- ಗಂಡಗಣ
- ಗಿಂಡೆ
- ಗಿರಾವು
- ಗಿಳಿರಾಮ
- ಗುಮ್ಟೆಮಲ್ಲ
- ಗುರಮ್ಮ
- ಗುರಿಕ್ಕಾರ
- ಗುಳಿಗ
- ಗೆಜ್ಜೆಮಲ್ಲ
- ಗೋವಿಂದ
- ಚಂಡಿ
- ಚವುಂಡಿ
- ಚಾವುಂಡಿ
- ಚಾಮುಂಡಿ
- ಚಾತು
- ಚಿಕ್ಕಸದಾಯಿ
- ಚೆನ್ನಯ
- ಚೌಡಿ
- ಜಂಗಬಂಟೆ
- ಚಂದರ್ಗತ್ತಾಯ
- ಜಟಾಧಾರಿ
- ಜಟ್ಟೊಗೆ
- ಜಡೆಯವರು
- ಜದ್ರಾಯ
- ಜಾರಂದಾಯ
- ಜಾವತೆ
- ಜುಮಾದಿ
- ತಡ್ಯದಜ್ಜ
- ತನ್ನಿಮಾನಿಗ
- ತುಳುಭೂತ
- ತೋಡಕುಕುಕ್ಕಿನಾರ್
- ತೋಮಜ್ಜ
- ದಂಡನಾಯಕ
- ದಂಡೆರಾಜ
- ದರ್ಗಂದಾಯ
- ದುಗ್ಗಮ್ಮದೈಯಾರು
- ದುಗ್ಗಲ್ಲಾಯ
- ದುರ್ಗಂತಾಯ
- ದೂರ್ದುಮ
- ದೇಯಿ
- ದೇವುಪೂಂಜ
- ದೈಯೊಂಕುಲು
- ಧರ್ಮದೈವ
- ನಂದಿ
- ನಾಗ
- ನಾಡುಭೂತ
- ನಾಯಕಬೂತ
- ನಾಯರ್‍ಬೂತ
- ನಾರಂಬಾಡಿ
- ನಾಲ್‍ಕೈತ್ತಾಯ
- ನಾಲ್‍ಕೈಬದ್ರ
- ನೀಚ
- ನೆತ್ತೆರ್ ಮುಗುಳಿ
- ನೆಲ್ಲಿರಾಯ
- ಪಂಜಣತ್ತಾಯ
- ಪಂಜುರ್ಲಿ
- ಅಂಗಣತ್ತಾಯ
- ಅಂಬಾಡಿ ಪಂಜುರ್ಲಿ
- ಅಣ್ಣಪ್ಪ ಪಂಜುರ್ಲಿ
- ಮಲರಾಯ ಪಂಜುರ್ಲಿ
- ಉಡುಪಿದ ಪಂಜುರ್ಲಿ
- ಉರಿಮರ್ಲೆ ಪಂಜುರ್ಲಿ
- ಒಡ್ತೆ ಪಂಜುರ್ಲಿ
- ಒರ್ನರ ಪಂಜುರ್ಲಿ
- ಒರಿಬಂಟೆ ಪಂಜುರ್ಲಿ
- ಕಡಬದ ಪಂಜುರ್ಲಿ
- ಕಡೆಕ್ಕಾರ ಪಂಜುರ್ಲಿ
- ಕಾಡಬೆಟ್ಟು ಪಂಜುರ್ಲಿ
- ಕುಂಟಾಲ ಪಂಜುರ್ಲಿ
- ಕುಡುಮೊದ ಪಂಜುರ್ಲಿ
- ಕುಪ್ಪೆಟ್ಟಿ ಪಂಜುರ್ಲಿ
- ಕುಪ್ಪೆ ಪಂಜುರ್ಲಿ
- ಕೂಳೂರು ಪಂಜುರ್ಲಿ
- ಕೊಟ್ಯದ ಪಂಜುರ್ಲಿ
- ಕೋರೆದಂಡ್ ಪಂಜುರ್ಲಿ
- ಗೂಡುಪಂಜುರ್ಲಿ
- ಗ್ರಾಮೊ ಪಂಜುರ್ಲಿ
- ಚಾವಡಿ ಪಂಜುರ್ಲಿ
- ನಾಡ ಪಂಜುರ್ಲಿ
- ಪಂಜಣತ್ತಾಯೆ
- ಪಟ್ಟೊದ ಪಂಜುರ್ಲಿ
- ಪಾರೆಂಕಿ ಪಂಜುರ್ಲಿ
- ಪೊಟ್ಟ ಪಂಜುರ್ಲಿ
- ಮನಿಪನ ಪಂಜುರ್ಲಿ
- ಮುಗೇರ ಪಂಜರ್ಲಿ
- ರುದ್ರ ಪಂಜುರ್ಲಿ
- ವರ್ಣರೊ ಪಂಜುರ್ಲಿ
- ಸೇಮಕಲ್ಲ್ ಪಂಜುರ್ಲಿ
- ಪಟ್ಟದಭೂತ
- ಪಡುಕಣತ್ತಾಯ
- ಪಡುವಟ್ನಾಯ
- ಪಯ್ಯಬೈದ್ಯ
- ಪರಮೇಶಿ
- ಪರವ
- ಪಾಲಕತ್ತಾಯ
- ಪಿಲಿಭೂತ
- ಪುರಲಾಯ
- ಪುರುಷ
- ಪೆಲಡ್ಕತ್ತಾಯ
- ಪೆರ್ದೊಳ್ಳು
- ಪೊಟ್ಟಭೂತ
- ಪೊಟ್ಟೊರಿತ್ತಾಯ
- ಪೊಟ್ಟೊಳುಭೂತ
- ಪೊಯ್ಯೆತ್ತಾಯ
- ಪೊಸಮಾರಾಯ
- ಪೊಸಭೂತ
- ಪೊಸಲ್ದಾಯ
- ಪೊಸೊಳಿಗೆ ಅಮ್ಮ
- ಬಂಟಜಾವತ
- ಬಂಟಬೂತ
- ಬಂಟಾಂಡಿ
- ಬಂಡಾರಿ
- ಬಚ್ಚನಾಯಕ
- ಬಬ್ಬರ್ಯ
- ಬರಮಲ್ತಾಯ
- ಬಲಾವಂಡಿ
- ಬವನೊ
- ಬಸ್ತಿನಾಯಕ
- ಬಾಕುಡ
- ಬಾಕುಡ್ತಿ
- ಬಾಡುರಾಯ
- ಬಾಮಕುಮಾರ
- ಬಾರಗೆ
- ಬಾಲಕುಮಾರ
- ಬಾವನೊ
- ಬಿಕ್ರಮೇಲಾಂಟ
- ಬಿರ್ಮೆರ್
- ಬಿರ್ಮೆರಜ್ಜ
- ಬಿಲ್ಲರಾಯ
- ಬಿಲ್ಲಾರ್ತಿ
- ಬುದಾಬಾರ
- ಬುದ್ಯಂತಾಯ
- ಬೇಡವ
- ಬೈದ್ಯನಾಥ
- ಬೈರಾಗಿ
- ಬೋಂಟೆಗಾರ
- ಬೊಮ್ಮರ್ತಾಯ
- ಬೊಳ್ತಾಯ್ತೊಲು
- ಬೋಳಂಗಳತ್ತಾಯ
- ಭಸ್ಮಮೂರ್ತಿ
- ಬೂತರಾಜ
- ಭೈರವ
- ಬ್ರಾಣಭೂತ
- ಬ್ರಾಣಮಾನಿ
- ಬ್ರಾಣ್ತಿ
- ಮಂಗಳೆರ್
- ಮಂಗಾರಮಾನಿಗ
- ಮಂಜಟಿನಾಯ
- ಮಂಜಟಿಬೊಮ್ಮ
- ಮಂಜೊಟಿಗೋಣ
- ಮಂತ್ರೊದಾಯ
- ಮಗ್ರಂದಾಯ
- ಮಡಲಾಯ
- ಮದ್ದಡ್ಕತಾಯ
- ಮಡ್ಯೊಳ
- ಮದಿಮಾಳ್
- ಮಯಿಲ
- ಮನ್ಡೆರ್‍ಬೂತ
- ಮಮ್ಮಾಯಿ
- ಮರ್ಮಳ್ತಾಯ
- ಮರತ್ತಬೇಲೆದಾಯ
- ಮಯ್ಯೊಂತಿ
- ಮಲರಾಯಿ
- ಮಲೆಯಾಳಬೂತ
- ಮಲೆರಾಯ
- ಮಾಂಕಾಳಿ
- ಮಾಂದಿ
- ಮಾನಿಬಾಲ
- ಮಾಯಂದಾಲ್
- ಮಾಯಿಲೆರ್‍ಬೂತ
- ಮಾಯೊದ ಬಾಲೆ
- ಮಾರಂದೈವ
- ಮಾರಾವಂಡಿ
- ಮಾರಾಳಮ್ಮ
- ಮಾರಿಯಮ್ಮ
- ಮಿಜಾರು ಕೊಡಮಣಿತ್ತಾಯ
- ಮಿತ್ತಂತಾಯ
- ಮುಂಡತಾಯ
- ಮುಂಡಿಪಾಡಿತ್ತಾಯ
- ಮುಕ್ಕಬ್ಬೆ
- ಮುಗೇರಭೂತ
- ಮುಡದೇರ್
- ಮುಡಿಪ್ಪುನ್ನಾಯ
- ಮುಡಿಲ್ತಾಯ
- ಮುರ್ತುರಾಯ
- ಮೂಡಿಪಡಿತ್ತಾಯ
- ಮೂಡಿಲ್ಲಾಯ
- ಮೂಡೆದಾಯ
- ಮೂಡೊಟ್ನಾಯ
- ಮೂಜುಲ್ನಾಯ
- ಮೂರ್ತಿಲ್ಲಾಯ
- ಮೇರರ ಭೂತ
- ಮೈಸಂದಾಯ
- ಯರ್ಮಣ್ಣಾಯ
- ರಾಜನ್‍ಭೂತ
- ರಾವುತ
- ಲೆಕ್ಕೆಸಿರಿ
- ವಿಷ್ಣುಮೂರ್ತಿ
- ಶಿರಾಡಿಬೂತ
- ಶಿವರಾಯ
- ಸಂಪಿಗೆತ್ತಾಯ
- ಸನ್ಯಾಸಿಹಿರಿಯಾಯ
- ಸಬ್ಬಜ್ಜೆರ್ತೆರ್
- ಸಬ್ಬಮ್ಮ
- ಸಬ್ಬೆಡ್ಕರ್
- ಸರ್ವೆರ್
- ಸಿರಿ
- ಸುಬ್ಬಮ್ಮ
- ಸೂಕತ್ತೆರಿ
- ಸೆಟ್ಟಿಭೂತ
- ಸೊನ್ನೆ
- ಸ್ವಾಮಿ
- ಹನುಮಂತ
ಭೂತಾರಾಧನೆಯ ಸಾಂಸ್ಕೃತಿಕ ವಿವರ
[ಬದಲಾಯಿಸಿ]- ಗೊನೆ ಕಡಿಯುವುದು
- ಕೋಳಿಗೂಟ
- ಕಿರುವಾಳ್ ಇಳಿಯುವುದು
- ಕೂಡು ತಂಬಿಲ
- ಕೊಡಿಯಡಿ
- ಸಿಂಗದನೊ
- ಎಣ್ಣೆಬೂಳ್ಯ
- ಅರ್ದಲ
- ವೇಷಭೂಷಣ
- ಗಗ್ಗರೊದೆಚ್ಚಿ
- ಬೊಂಡು ಬಾರಣೆ
- ಅಣಿಕಟ್ಟುವುದು
- ಮಣಿಕಡ್ತಲೆ ಹಿಡಿಯುವುದು
- ಹೂವು-ಅಕ್ಕಿ ಹಾಕುವುದು
- ಇಂಡಿಸೇವೆ
ಭೂತಾರಾಧನೆಯ ಬಣ್ಣಗಾರಿಕೆ
[ಬದಲಾಯಿಸಿ]- ಪ್ರಾಣಿ ಸೂಚಕ ಭೂತಗಳ ಮುಖವರ್ಣಿಕೆ
- ರಾಜಸ ಸ್ವಭಾವದ ಅರಸು ಭೂತಗಳ ಮುಖವರ್ಣಿಕೆ
- ಹೆಣ್ಣು ಭೂತಗಳ ಮುಖವರ್ಣಿಕೆ
- ನೀಚ ಭೂತಗಳ ಮುಖವರ್ಣಿಕೆ
- ಮನುಷ್ಯ ಸತ್ತು ಭೂತ ಆದ ಭೂತಗಳ ಮುಖವರ್ಣಿಕೆ
ಭೂತದ ಮುಗ
[ಬದಲಾಯಿಸಿ]ಮುಗವನ್ನು ಮುಖವಾಡವೆಂದು ತಿಳಿಯಬಹುದು. ಮುಖವಾಡಗಳನ್ನು ಹಿತ್ತಾಲೆ ಮತ್ತು ತಾಮ್ರ ಮಿಶ್ರಿತ ಕಂಚಿನಿಂದ ತಯಾರಿಸಲಾಗಿರುತ್ತದೆ.
- ಮನುಷ್ಯರನ್ನು ಹೋಲಿಕೆ ಮಾಡಿ ತಯಾರಾದ ಮುಖವಾಡ
- ಪ್ರಾಣಿಗಳನ್ನು ಹೋಲಿಕೆ ಮಾಡಿ ತಯಾರಾದ ಮುಖವಾಡ
ಭೂತಗಳು ಹಿಡಿವ ಆಯುಧ
[ಬದಲಾಯಿಸಿ]- ಅಡ್ಯಾಣೊ ಎಂದರೆ ಗುರಾಣಿಯೆಂದು ತಿಳಿಯಬಹುದು.
- ಕಡ್ತಲೆ ಎಂದರೆ ಬಾಳ್ ಕತ್ತಿ
- ಕತ್ತಿ
- ಕೆಂಡೊ
- ಚವಲೊ
- ಬಾಣ
- ಬಿಲ್ಲು
- ಬೆತ್ತ - ಜೋಡಿ ಬೆತ್ತವನ್ನು ಬೆಳ್ಳಿಕಟ್ಟದಲ್ಲಿ ತಯಾರಿಸಲಾಗುತ್ತದೆ.
- ಸುರಿಯೆ - ಒಂದು ವಿಧದ ಕತ್ತಿ
- ಸೂಟೆ - ತೆಂಗಿನ ಮಡಲಿನಿಂದ ಅಥವಾ ಬಿದಿರಿನಿಂದ ತಯಾರಿಸಲಾದ ಸೂಟೆಯು ಒಂದು ಕೈಯಲ್ಲಿ ಹಿಡಯುವಷ್ಟು ಉದ್ದ ಇರುತ್ತದೆ. ಕೆಲವು ಕಡೆ ರಾತ್ರಿಯಿಡೀ ಉರಿಯುವ ದೊಡ್ಡ ಸೂಟೆ ಕಟ್ಟುತ್ತಾರೆ.
ಉಲ್ಲೇಖಗಳು
[ಬದಲಾಯಿಸಿ]