ಬಸ್ರೂರು
Basrur
ಬಸ್ರೂರು | |
---|---|
ಹಳ್ಳಿ | |
Coordinates: 13°37′53″N 74°44′20″E / 13.6313°N 74.7388°E | |
ದೇಶ | ಭಾರತ |
ರಾಜ್ಯ | ಕರ್ನಾಟಕ |
ಜಿಲ್ಲೆ | ಉಡುಪಿ ಜಿಲ್ಲೆ |
ಭಾಷೆಗಳು | |
• ಅಧಿಕೃತ | ಕನ್ನಡ |
Time zone | UTC+5:30 (IST) |
PIN | 576 211 |
Vehicle registration | KA-20 |
ಬಸ್ರೂರು ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನಲ್ಲಿರುವ ಒಂದು ಸ್ಥಳ.ಐತಿಹಾಸಿಕವಾಗಿ ಇದು ಒಂದು ಬಂದರು ನಗರವಾಗಿತ್ತು.ಇದನ್ನು 'ವಸುಪುರ'.ಬಾರ್ಸೆಲೋರ್,ಬಾರ್ಕೊಲೊರ್,ಬಸ್ನೂರ್,ಬಾರ್ಸ್,ಅಬು-ಸರೂರ್ ಮತ್ತು ಬಾರ್ಸೆಲ್ಲೋರ್ ಎಂದೂ ವಿವಿಧ ಕಾಲಘಟ್ಟದಲ್ಲಿ ಉಲ್ಲೇಖಿಸಲಾಗಿತ್ತು.
ಇತಿಹಾಸ
[ಬದಲಾಯಿಸಿ]ಐತಿಹಾಸಿಕವಾಗಿ ಬಸ್ರೂರು ಒಂದು ಮುಖ್ಯ ಬಂದರು ನಗರವಾಗಿ ಗುರುತಿಸಲ್ಪಟ್ಟಿತ್ತು.ಪುರಾಣದ ಪ್ರಕಾರ ಇದು ವಸು ಚಕ್ರವರ್ತಿಯ ರಾಜಧಾನಿಯಾಗಿದ್ದು, ಅವನು ಹಲವಾರು ದೇಗುಲಗಳನ್ನು, ಕೆರೆಗಳನ್ನು ಕಟ್ಟಿಸಿದ.೧೭ ಮತ್ತು ೧೮ ನೆಯ ಶತಮಾನದ ಶಾಸನಗಳಲ್ಲಿ ಇದನ್ನು ವಸುಪುರ ಎಂದೇ ಉಲ್ಲೇಖಿಸಲಾಗಿದೆ [೧] ಮೊರೊಕ್ಕೋದ ಯಾತ್ರಿ ಇಬಿನ್ ಬಟೂಟ ಉಲ್ಲೇಖಿಸಿದ ಅಬು-ಸರೂರ್ ಮತ್ತು ಟಾಲೆಮಿಯ ಭೂಪಟದಲ್ಲಿರುವ ಬಾರ್ಸೆಲೋರ್ ಎಂಬ ಸ್ಥಳವೂ ಇದೇ ಬಸ್ರೂರು ಆಗಿತ್ತು ಎಂದು ವಿದ್ವಾಂಸರ ಅಭಿಪ್ರಾಯವಾಗಿದೆ.೧೫೧೪ರಲ್ಲಿ ಬಾರ್ಬೋಸ ಉಲ್ಲೇಖಿಸಿದಂತ ಇಲ್ಲಿಗೆ ಮಲಬಾರ್, ಏಡೆನ್,ಒರ್ಮುಜ್ ಮುಂತಾದ ಸ್ಥಳಗಳಿಂದ ಹಲವಾರು ಹಡಗುಗಳು ಬರುತ್ತಿದ್ದು, ಇದೊಂದು ಮುಖ್ಯ ವ್ಯಾಪಾರ ಕೇಂದ್ರವಾಗಿತ್ತು.[೧]೧೬ನೆಯ ಶತಮಾನದಲ್ಲಿ ಇದು ಪೋರ್ಚುಗೀಸರ ವಶದಲ್ಲಿತ್ತು.
ಉಲ್ಲೇಖಗಳು
[ಬದಲಾಯಿಸಿ]- ↑ ೧.೦ ೧.೧ "ಕರ್ನಾಟಕ ಗೆಝೆಟಿಯರ್" (PDF). Retrieved 30 ಜುಲೈ 2014.