ವಿಷಯಕ್ಕೆ ಹೋಗು

ದುಡಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕರಾವಳಿ ತೀರದ ಜನಪದರಲ್ಲಿ ಬಳಕೆಯಲ್ಲಿರುವ ವಾದ್ಯ ಸುಮಾರು ಒಂದೂಕಾಲು ಅಡಿ ಉದ್ದವಿರುವ ಈ ವಾದ್ಯದ ಬಾಯಿಯ ವ್ಯಾಸ ಮುಕ್ಕಾಲು ಅಡಿ, ದುಡಿಯನ್ನು ಹಲಸು, ಕಾಚಿ ಮರಗಳಿಂದ ತುಗಳನ್ನು ಕೊರೆದು ಮಾಡಿರುತ್ತಾರೆ.[]

ಬೇರೆ ಹೆಸರು

[ಬದಲಾಯಿಸಿ]

ದುಡಿಗೆ ಹೊಳವ 'ಕಳಿಸು' (ಕಳಸ) ಎಂಬ ಹೆಸರಿದೆ.[]

ದುಡಿ

ದುಡಿ ಡಮರುಗದ ರೀತಿಯಲ್ಲಿಯೇ ಇದ್ದರೂ ಹೆಚ್ಚು ನೀಳವಾಗಿರುತ್ತದೆ. ದುಡಿಗೆ ಬಾಯಿ ಹೆಚ್ಚು ಅಗಲವಿರುವುದಿಲ್ಲ. ಇದು ದುಡಿಗಿಂತಲೂ ಅಗಲವಾದ ಮುಚ್ಚಿಕೆಯ ವಾದ್ಯ, ದುಡಿಯ ಬಲಭಾಗಕ್ಕೆ ದನದ ಚರ್ಮವನ್ನು ಎಡಭಾಗಕ್ಕೆ ಆಡಿನ ಚರ್ಮವನ್ನು ಸೇರಿಸುತ್ತಾರೆ. ಚರ್ಮವನ್ನು ಸುತ್ತಲು ಹೆಬ್ಬೆರಳು ಗಾತ್ರದ ಮರದ ಬೇರನ್ನು ಬಳೆಯಂತೆ ಸುತ್ತಿ ಅದಕ್ಕೆ ಚರ್ಮವನ್ನು ಸುತ್ತಿ ದಾರದಿಂದ ಹೊಲಿದಿರುತ್ತಾರೆ. ಈ ಮುಚ್ಚಿಕೆಗಳನ್ನು ದುಡಿಗೆ ಸೇರಿಸಿ ಕಟ್ಟಲು ಚರ್ಮವೂ ಸೇರಿದಂತೆ ಮರದ ಬಳೆಯನ್ನೇ ಸುಟ್ಟು, ರಂಧ್ರಮಾಡಿ ನಾರಿನ ಹುರಿ ಕಟ್ಟುತ್ತಾರೆ. ಹುರಿ ಕಟ್ಟಲು ಎರಡೂ ಮುಚ್ಚಿಕೆಗೂ ಸುಮಾರು ಆರರಿಂದ ಎಂಟು ರಂಧ್ರಮಾಡಿರುತ್ತಾರೆ. ನಡುವಿನ ಭಾಗದಲ್ಲಿ ಅಮುಕಿ ಎಲ್ಲಾ ದಾರಗಳನ್ನು ಸೇರಿಸಿ ದಾರ ಸುತ್ತಿರುತ್ತಾರೆ. ದಾರ ಸುತ್ತಿದ ಭಾಗವನ್ನು ಅಮುಕುತ್ತಾ ದನದ ಅಥವಾ ಎಮ್ಮೆಯ ಮೂಳೆಯನ್ನು ಗುಣಿಯಾಗಿಸಿಕೊಂಡು ಬಲಭಾಗದಲ್ಲಿ ಬಡಿಯುತ್ತಾರೆ. ದುಡಿ ವಾದ್ಯ ಕೊಡಗಿನ ಎರವರಲ್ಲಿಯೂ ಬಳಕೆಯಲ್ಲಿದೆ. ಎರವರು ದುಡಿಗೆ ಮಂಗನ ಚರ್ಮವನ್ನು ಬಳಸುತ್ತಾರೆ. ಕುತ್ತಿಗೆಗೆ ತೂಗಿಹಾಕಿಕೊಂಡು ಮಧ್ಯಭಾಗದಲ್ಲಿ ದಾರಗಳನ್ನು ಅಮುಕುತ್ತಾ ಕಡ್ಡಿಯಿಂದ ಬಡಿಯುತ್ತಾರೆ.

ಉಪಯೋಗ

[ಬದಲಾಯಿಸಿ]
  • ಮುಖ್ಯವಾಗಿ ಭೂತಕೋಲದ ಸಮಯದಲ್ಲಿ ನುಡಿಸುತ್ತಾರೆ

ಈ ವಾದ್ಯ ಬುಡಕಟ್ಟು ಸಮುದಾಯಗಳಲ್ಲಿ ತಮಟೆಯಂತೆ ಬಹೂಪಯೋಗಿ ವಾದ್ಯವಾಗಿದೆ. ಅವರಲ್ಲಿ ಈ ವಾದ್ಯವಿಲ್ಲದೆ ಯಾವ ಸಮಾರಂಭ, ಉತ್ಸವ ಮುಂತಾದವು.

ಉಲ್ಲೇಖಗಳು

[ಬದಲಾಯಿಸಿ]
  1. ಕರ್ನಾಟಕ ಜಾನಪದ ವಿಶ್ವಕೋಶ, ಸಂಪುಟ ೦೧, ಪ್ರೊ. ಅಂಬಳಿಕೆ ಹಿರಿಯಣ್ಣ ಪ್ರಧಾನ ಸಂಪಾದಕರು
  2. https://shabdkosh.com/kn/translate/%E0%B2%A6%E0%B3%81%E0%B2%A1%E0%B2%BF/%E0%B2%A6%E0%B3%81%E0%B2%A1%E0%B2%BF-meaning-in-English-Kannada. {{cite web}}: Missing or empty |title= (help)


"https://kn.wikipedia.org/w/index.php?title=ದುಡಿ&oldid=1159811" ಇಂದ ಪಡೆಯಲ್ಪಟ್ಟಿದೆ