ಎಮ್ಮೆ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
BUFFALO159.JPG

ಎಮ್ಮೆ (ಬ್ಯೂಬ್ಯಾಲಸ್ ಬ್ಯೂಬ್ಯಾಲಿಸ್) ದಕ್ಷಿಣ ಏಷ್ಯಾ, ಮತ್ತು ದಕ್ಷಿಣ ಅಮೇರಿಕಾ, ದಕ್ಷಿಣ ಯೂರೋಪ್, ಉತ್ತರ ಆಫ಼್ರಿಕಾ, ಮತ್ತು ಇತರೆಡೆ ಜಾನುವಾರಾಗಿ ವ್ಯಾಪಕವಾಗಿ ಬಳಸಲಾಗುವ ದನದ ಜಾತಿಗೆ ಸೇರಿದ ಒಂದು ದೊಡ್ಡ ಪ್ರಾಣಿ. ೨೦೦೦ರಲ್ಲಿ, ವಿಶ್ವಸಂಸ್ಥೆಆಹಾರ ಮತ್ತು ಕೃಷಿ ಸಂಘಟನೆ ವಿಶ್ವದಲ್ಲಿ ಸುಮಾರು ೧೫೮ ಮಿಲಿಯ ಎಮ್ಮೆಗಳಿದ್ದವೆಂದು, ಮತ್ತು ಇವುಗಳಲ್ಲಿ ಶೇಕಡ ೯೭ರಷ್ಟು (ಸುಮಾರು ೧೫೩ ಮಿಲಿಯ ಪ್ರಾಣಿಗಳು) ಏಷ್ಯಾದಲ್ಲಿದ್ದವೆಂದು ಅಂದಾಜಿಸಿತು. ಉತ್ತರ ಆಸ್ಟ್ರೇಲಿಯಾದಲ್ಲಿ ಪ್ರಮಾಣೀಕರಿಸಲಾದ ಪಳಗಿಲ್ಲದ ಪ್ರಾಣಿಗಳಿವೆ, ಆದರೆ ನಶಿಸುತ್ತಿರುವ ನೈಜ ಕಾಡು ಎಮ್ಮೆಗಳು ಭಾರತ, ಬಾಂಗ್ಲಾದೇಶ, ಪಾಕಿಸ್ತಾನ, ನೇಪಾಳ, ಭೂತಾನ್, ಮತ್ತು ಥೈಲೆಂಡ್‌ನಲ್ಲಿ ಉಳಿದುಕೊಂಡಿವೆಯೆಂದು ನಂಬಲಾಗಿದೆ.


"https://kn.wikipedia.org/w/index.php?title=ಎಮ್ಮೆ&oldid=322334" ಇಂದ ಪಡೆಯಲ್ಪಟ್ಟಿದೆ