ಟರ್ಕಿ
ವಿಕಿಪೀಡಿಯ ಇಂದ
| ಧ್ಯೇಯ: Yurtta Sulh, Cihanda Sulh ನಾಡಿನೊಳಗೆ ಶಾಂತಿ ಜಗತ್ತಿನಲ್ಲೂ ಶಾಂತಿ |
|
| ರಾಷ್ಟ್ರಗೀತೆ: İstiklâl Marşı ಸ್ವಾತಂತ್ರ್ಯದ ಗೀತೆ |
|
| ರಾಜಧಾನಿ | ಅಂಕಾರಾ |
| ಅತ್ಯಂತ ದೊಡ್ಡ ನಗರ | ಇಸ್ತಾಂಬುಲ್ |
| ಅಧಿಕೃತ ಭಾಷೆ(ಗಳು) | ಟರ್ಕಿಷ್ |
| ಸರಕಾರ | ಸಾಂಸದಿಕ ಗಣರಾಜ್ಯ |
| - ರಾಷ್ಟ್ರಾಧ್ಯಕ್ಷ | ಅಬ್ದುಲ್ಲಾ ಗುಲ್ |
| - ಸಂಸತ್ತಿನ ಸಭಾಪತಿ | ಕೊಕ್ಸಲ್ ಟೋಪ್ಟನ್ |
| - ಪ್ರಧಾನಿ | ರೆಸೆಪ್ ಟಯ್ಯಿಪ್ ಎರ್ಡೊಗನ್ |
| ಒಟ್ಟೊಮನ್ ಸಾಮ್ರಾಜ್ಯದ ವಿಭಜನೆ | |
| - ಸ್ವಾತಂತ್ರ್ಯ ಸಂಗ್ರಾಮ | ಮೇ 19 1919 |
| - ಸಂಸತ್ತಿನ ರಚನೆ | ಎಪ್ರಿಲ್ 23 1920 |
| - ಗಣರಾಜ್ಯವಾಗಿ ಘೋಷಣೆ | ಅಕ್ಟೋಬರ್ 29 1923 |
| ವಿಸ್ತೀರ್ಣ | |
| - ಒಟ್ಟು ವಿಸ್ತೀರ್ಣ | 783562 ಚದರ ಕಿಮಿ ; (37ನೆಯದು) |
| 302535 ಚದರ ಮೈಲಿ | |
| - ನೀರು (%) | 1.3 |
| ಜನಸಂಖ್ಯೆ | |
| - 2007ರ ಅಂದಾಜು | 71,158,647 (17ನೆಯದು³) |
| - 2000ರ ಜನಗಣತಿ | 67,803,927 |
| - ಸಾಂದ್ರತೆ | 93 /ಚದರ ಕಿಮಿ ; (102nd³) 240 /ಚದರ ಮೈಲಿ |
| ರಾಷ್ಟ್ರೀಯ ಉತ್ಪನ್ನ (PPP) | 2007ರ ಅಂದಾಜು |
| - ಒಟ್ಟು | $708.053 billion (16ನೆಯದು) |
| - ತಲಾ | $9,628 (69ನೆಯದು) |
| ಮಾನವ ಅಭಿವೃದ್ಧಿ ಸೂಚಿಕ (2006) |
|
| ಕರೆನ್ಸಿ | ಟರ್ಕಿಷ್ ಲಿರಾ (TRY) |
| ಕಾಲಮಾನ | EET (UTC+2) |
| - ಬೇಸಿಗೆ (DST) | EEST (UTC+3) |
| ಅಂತರ್ಜಾಲ TLD | .tr |
| ದೂರವಾಣಿ ಕೋಡ್ | +90 |
ಟರ್ಕಿ ( ಅಧಿಕೃತವಾಗಿ ಟರ್ಕಿ ಗಣರಾಜ್ಯ ) ಯುರೋಪ್ ಮತ್ತು ಏಷ್ಯಾ ಖಂಡಗಳ ಸಂಧಿಸ್ಥಾನದಲ್ಲಿರುವ ಒಂದು ರಾಷ್ಟ್ರ. ಆದುದರಿಂದ ಕೆಲವೊಮ್ಮೆ ಇದನ್ನು ಯುರೇಷ್ಯಾದ ದೇಶವೆಂದು ಗುರುತಿಸಲಾಗುತ್ತದೆ. ಪಶ್ಚಿಮ ಏಷ್ಯಾದ ಅನಟೋಲಿಯಾ ಜಂಬೂದ್ವೀಪದಿಂದ ಆಗ್ನೇಯ ಯುರೋಪಿನ ಬಾಲ್ಕನ್ ಪ್ರದೇಶದವರೆಗೆ ಹಬ್ಬಿರುವ ಟರ್ಕಿಗೆ ೮ ರಾಷ್ಟ್ರಗಳು ನೆರೆಹೊರೆಯವು. ವಾಯವ್ಯಕ್ಕೆ ಬಲ್ಗೇರಿಯ; ಪಶ್ಚಿಮಕ್ಕೆ ಗ್ರೀಸ್; ಈಶಾನ್ಯಕ್ಕೆ ಜಾರ್ಜಿಯ; ಪೂರ್ವದಲ್ಲಿ ಇರಾನ್, ಆರ್ಮೇನಿಯ ಮತ್ತು ಅಜರ್ ಬೈಜಾನ್; ಆಗ್ನೇಯಕ್ಕೆ ಇರಾಖ್ ಮತ್ತು ಸಿರಿಯ ರಾಷ್ಟ್ರಗಳಿವೆ. ಟರ್ಕಿಯ ದಕ್ಷಿಣದಲ್ಲಿ ಮೆಡಿಟೆರೇನಿಯನ್ ಸಮುದ್ರ; ಪಶ್ಚಿಮದಲ್ಲಿ ಈಜಿಯನ್ ಸಮುದ್ರ ಮತ್ತು ಈಜಿಯನ್ ದ್ವೀಪಸಮೂಹಗಳು; ಉತ್ತರದಲ್ಲಿ ಕಪ್ಪು ಸಮುದ್ರಗಳು ಸಹ ಇವೆ. ಯುರೋಪ್ ಮತ್ತು ಏಷ್ಯಾಗಳ ಗಡಿಯೆಂದು ಪರಿಗಣಿಸಲ್ಪಡುವ ಮರ್ಮಾರಾ ಸಮುದ್ರ ಮತ್ತು ಬಾಸ್ಪೋರಸ್ ಕೊಲ್ಲಿಗಳು ಟರ್ಕಿಯ ಅನಟೋಲಿಯ ಮತ್ತು ಟ್ರಾಕ್ಯಾಗಳನ್ನು ಬೇರ್ಪಡಿಸುತ್ತವೆ. ಹೀಗಾಗಿ ಟರ್ಕಿಯ ಭೂಪ್ರದೇಶವು ಎರಡೂ ಖಂಡಗಳಲ್ಲಿ ವ್ಯಾಪಿಸಿದೆ.
Gallery[ಬದಲಾಯಿಸಿ]
-
Anitkabir.HB.jpg