ಭೂತಾನ್

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
འབྲུག་ཡུལ
ದ್ರುಕ್ ಯುಲ್

ಭೂತಾನ್ ರಾಜ್ಯ
ಭೂತಾನ್ ದೇಶದ ಧ್ವಜ ಭೂತಾನ್ ದೇಶದ ಲಾಂಛನ
ಧ್ವಜ ಲಾಂಛನ
ಧ್ಯೇಯ: ಒಂದು ರಾಷ್ಟ್ರ, ಒಂದು ಜನತೆ
ರಾಷ್ಟ್ರಗೀತೆ: ದ್ರುಕ್ ತ್ಸೆಂಧೆನ್

Location of ಭೂತಾನ್

ರಾಜಧಾನಿ ಥಿಂಪು
27°28′N 89°38′E
ಅತ್ಯಂತ ದೊಡ್ಡ ನಗರ ಥಿಂಪು
ಅಧಿಕೃತ ಭಾಷೆ(ಗಳು) ತ್ಸೊಂಗ್‌ಖಾ, ಇಂಗ್ಲಿಷ್
ಸರಕಾರ ರಾಜ ಪ್ರಭುತ್ವ
 - ದೊರೆ ಜಿಗ್ಮೆ ಕೇಸರ್ ನಾಮ್ಗ್ಯೆಲ್ ವಾಂಗ್ಚುಕ್
 - ಪ್ರಧಾನ ಮಂತ್ರಿ ಲ್ಯೊಂಪೊ ಖಂಡು ವಾಂಗ್‌ಚುಕ್
ರಚನೆ  
 - ವಾಂಗ್‌ಚುಕ್ ರಾಜಮನೆತನ ಡಿಸೆಂಬರ್ ೧೭, ೧೯೦೭ 
ವಿಸ್ತೀರ್ಣ  
 - ಒಟ್ಟು ವಿಸ್ತೀರ್ಣ ೪೭,೦೦೦ ಚದರ ಕಿಮಿ ;  (೧೩೧ನೇ)
  ೧೮,೧೪೭ ಚದರ ಮೈಲಿ 
 - ನೀರು (%) ನಗಣ್ಯ
ಜನಸಂಖ್ಯೆ  
 - ೨೦೦೫ರ ಅಂದಾಜು ೨೨,೩೨,೨೯೧ (ವಿವಾದಿತ)[೧] (೧೪೨ನೇ)
 - ೨೦೦೫ರ ಜನಗಣತಿ ೬,೭೨,೪೨೫
 - ಸಾಂದ್ರತೆ ೪೬ /ಚದರ ಕಿಮಿ ;  (೧೪೯ನೇ)
೧೧೯ /ಚದರ ಮೈಲಿ 
ರಾಷ್ಟ್ರೀಯ ಉತ್ಪನ್ನ (PPP) ೨೦೦೫ರ ಅಂದಾಜು
 - ಒಟ್ಟು $3.007 ಬಿಲಿಯನ್ (೧೬೦ನೇ)
 - ತಲಾ $೩,೯೨೧ (೧೧೭ನೇ)
ಮಾನವ ಅಭಿವೃದ್ಧಿ
ಸೂಚಿಕ
(೨೦೦೩)
0.536 (೧೩೪ನೇ) – medium
ಕರೆನ್ಸಿ ನ್ಗುಲ್ಟ್ರುಮ್ (BTN)
ಸಮಯ ವಲಯ BTT (UTC+6:00)
 - ಬೇಸಿಗೆ (DST) not observed (UTC+6:00)
ಅಂತರ್ಜಾಲ TLD .bt
ದೂರವಾಣಿ ಕೋಡ್ +975
The Tashichho Dzong in Thimphu is the seat of the Bhutanese government since 1952.
Trashigang Dzong, built in 1659.

ಭೂತಾನ್ ರಾಜ್ಯ ದಕ್ಷಿಣ ಏಷ್ಯಾದ ದೇಶವಾಗಿದ್ದು ಭಾರತ ಮತ್ತು ಚೀನಿ ಜನರ ಗಣರಾಜ್ಯಟಿಬೆಟ್ ಗಳ ಮಧ್ಯದಲ್ಲಿದೆ. ಇಡೀ ದೇಶ ಪರ್ವತಗಳಿಂದ ಕೂಡಿದ್ದು ೧೩-೧೬ ಕಿ.ಮಿ. ಗಳಷ್ಟಿರುವ ಪ್ರಸ್ಥಭೂಮಿಯನ್ನು ದುವಾರಗಲೆಂದು ಕರೆಯುತ್ತಾರೆ. ಈ ಪರ್ವತಗಳ ಎತ್ತರ ೭,೦೦೦ ಮೀಟರ್. ಥಿಂಫು ದೇಶದ ರಾಜಧಾನಿಯಾಗಿದ್ದು ಅತ್ಯಂತ ದೊಡ್ಡ ನಗರವೂ ಆಗಿದೆ. ಭೂತಾನ್ ಪ್ರಪಂಚದ ಅತಿ ಬೇರ್ಪಟ್ಟ ದೇಶಗಳಲ್ಲೊಂದು. ಸಾಂಪ್ರದಾಯಿಕ ಟಿಬೆಟನ್ ಬೌದ್ಧ ಧರ್ಮ ಹಾಗೂ ಸಂಸ್ಕೃತಿಗಳನ್ನು ಕಾಪಾಡಲು ಸರ್ಕಾರ ವಿದೇಶಿ ಪ್ರಭಾವ ಮತ್ತು ಪ್ರವಾಸಿಗಳನ್ನು ದೂರವಿಟ್ಟಿದೆ. ಅಧಿಕೃತ ಭಾಷೆ ತ್ಸೊಂಗ್‌ಖಾ. ಭೂತಾನ್ ದೇಶವನ್ನು ಸಾಂಪ್ರದಾಯಿಕ ಹಿಮಾಲಯದ ಬೌದ್ಧ ಧರ್ಮ ಉಳಿದ ಕೊನೆ ಸ್ಥಳ ಎಂದು ಪರಿಗಣಿತವಾಗಿದೆ. ಭೂತಾನ್ ದೇಶಕ್ಕೆ ೧೯೦೭ರಿಂದ ರಾಜ ಪ್ರಭುತ್ವವಿದೆ. ಈಗಿನ ದೊರೆ ಜಿಗ್ಮೆ ಸಿಂಗ್ಯೆ ವಾಂಗ್‌ಚುಕ್ ಸಾಂವಿಧಾನಿಕ ಸರಕಾರದ ಕಡೆ ವಾಲುತ್ತಿದ್ದಾರೆ. ಭೂತಾನ್ ಏಷ್ಯಾ ಖಂಡದ ಅತಿ ಚಿಕ್ಕ ಅರಬ್ಬೇತರ ದೇಶವಾಗಿದೆ.

ಹೆಸರು[ಬದಲಾಯಿಸಿ]

ಸಂಸ್ಕೃತದ 'ಭೂ-ಉತ್ಥಾನ' (ಉನ್ನತ ನಾಡು) ಎಂಬ ಪದದಿಂದ ಭೂತಾನಿನ ಹೆಸರು ಬಂದಿರಬಹುದೆಂಬ ಶಂಕೆಯಿದೆ. ಇನ್ನೊಂದು ವಿವರಣೆಯ ಪ್ರಕಾರ 'ಭೊತ್ಸ್-ಅಂತ' ಅಂದರೆ ಟಿಬೆಟ್ಟಿನ ಅಂತ್ಯ ಎಂದೂ ಇದೆ. ಚಾರಿತ್ರಿಕವಾಗಿ ಭೂತಾನನ್ನು ಅನೇಕ ಹೆಸರುಗಳಿಂದ ಕರೆಯಲಾಗುತ್ತದೆ.

  • 'ಲೊಪಾನ್' (ಕರಾಳ ದಕ್ಷಿಣ ನಾಡು),
  • 'ಲ್ಹೊ ತ್ಸೆಂದೆನ್‌ಜೊಂಗ್' (ದಕ್ಷಿಣದ ಗಂಧದ ನಾಡು),
  • 'ಲ್ಹೊಮೆನ್ ಖಾಝಿ' (ನಾಲ್ಕು ದ್ವಾರಗಳಿರುವ ದಕ್ಷಿಣದ ನಾಡು),
  • 'ಲ್ಹೊ ಮೆನ್‌ಜೊಂಗ್' (ವೈದ್ಯಕೀಯ ಗಿಡಮೂಲಿಕೆಗಳ ದಕ್ಷಿಣ ನಾಡು)

ಇದನ್ನೂ ನೋಡಿ[ಬದಲಾಯಿಸಿ]

kumar

"https://kn.wikipedia.org/w/index.php?title=ಭೂತಾನ್&oldid=640125" ಇಂದ ಪಡೆಯಲ್ಪಟ್ಟಿದೆ