ಹಲಸು

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಹಲಸು
Artocarpus heterophyllus fruits at tree.jpg
ಹಲಸಿನ ಮರ ಮತ್ತು ಕಾಯಿ
ವೈಜ್ಞಾನಿಕ ವರ್ಗೀಕರಣ
Kingdom: plantae
Division: ಹೂ ಬಿಡುವ ಸಸ್ಯ
Class: ಮ್ಯಾಗ್ನೋಲಿಯೊಪ್ಸಿಡ
Order: ರೋಸೆಲ್ಸ್
Family: ಮೊರಾಸಿಯೆ
Genus: ಆರ್ಟೋಕಾರ್ಪಸ್
Species: ಆರ್ಟೋಕಾರ್ಪಸ ಇಂಟೆಗ್ರಿಫೋಲಿಯ
ದ್ವಿಪದ ಹೆಸರು
Artocarpus heterophyllus
Lam.
Jackfruit hanging from the trunk
Jackfruit garden in Bangladesh
Jackfruit flesh
Opened jackfruit
ಹಲಸಿನ ಕಾಯಿ ಹೂವು

ಹಲಸು (ತುಳು:ಪೆಲಕಾಯಿ)ನಿತ್ಯಹರಿದ್ವರ್ಣದ ದೊಡ್ಡ ಪ್ರಮಾಣದ ಮರ.ಇದು ಕರ್ನಾಟಕದ ದಕ್ಷಿಣ ಭಾಗದಲ್ಲಿ ಎಲ್ಲಾ ಕಡೆ,ಮಲೆನಾಡು ಮತ್ತು ಕರಾವಳಿಯ ಕಾಡುಗಳಲ್ಲಿಯೂ ಕೂಡಾ ವ್ಯಾಪಕವಾಗಿ ಬೆಳೆಯುತ್ತದೆ.ಇದು ವರ್ಷಪೂರ್ತಿ ದಟ್ಟನೆಯ ಕಡು ಹಸಿರು ಎಲೆಗಳನ್ನು ಹೊಂದಿದ್ದು,ಎಲೆಗಳು ೧೦ ರಿಂದ ೨೦ ಸೆ.ಮೀ ಉದ್ದವಿರುತ್ತದೆ.

ಹಲಸಿನ ಮರದ ತೊಗಟೆ

ಸಸ್ಯಶಾಸ್ತ್ರೀಯ ವರ್ಗೀಕರಣ[ಬದಲಾಯಿಸಿ]

ಇದು ಮೊರಸಿಯೆಕುಟುಂಬಕ್ಕೆ ಸೇರಿದ್ದು ಆರ್ಟೋಕಾರ್ಪಸ್ ಇಂಟೆಗ್ರಿಫೋಲಿಯ(Artocarpus heterophyllus?)ವರ್ಗಕ್ಕೆ ಸೇರಿದುದಾಗಿದೆ.

ವೈಶಿಷ್ಟ್ಯಗಳು[ಬದಲಾಯಿಸಿ]

ಇದರ ಕಾಯಿ ದೊಡ್ಡದಾಗಿದ್ದು,೫ ಕಿ.ಗ್ರಾಂ.ನಿಂದ ೪೦ ಕಿ.ಗ್ರಾಂ.ಗಿಂತಲೂ ಹೆಚ್ಚು ತೂಗುತ್ತದೆ.ಹಣ್ಣಿನಲ್ಲಿ ಒಂದು ರೀತಿಯ ಮೇಣವಿರುತ್ತದೆ.ಕಾಯಿಯ ಹೊರಭಾಗ ಮುಳ್ಳಿನಿಂದ ಕೂಡಿರುತ್ತದೆ.ಹಣ್ಣಿನ ಒಳಗೆ ತುಂಬಾ ತೊಳೆಗಳಿದ್ದು ಸಿಹಿಯಾಗಿರುತ್ತದೆ. ಹಣ್ಣಿನಲ್ಲಿ ಎರಡು ವಿಧವಿದೆ. ೧. ಬಕ್ಕೆ ೨.ಬೊಳುವ.

ಬಡವರ ಹಣ್ಣು ಎಂದೇ ಖ್ಯಾತಿ ಪಡೆದಿದ್ದ ಹಲಸಿನ ಹಣ್ಣು ಉತ್ಪಾದನೆಯಲ್ಲಿ ಭಾರತ ದೇಶಕ್ಕೆ ಜಗತ್ತಿನಲ್ಲಿಯೇ ದ್ವಿತೀಯ ಸ್ಥಾನವಿದೆ. ದೇಶದಲ್ಲಿ ಕರ್ನಾಟಕ ಮೊದಲ ಸ್ಥಾನವಿದೆ. ಅಸ್ಸಾಂ ಮತ್ತು ಕೇರಳ ರಾಜ್ಯಗಳಲ್ಲಿ ಕೂಡ ಗಮನಾರ್ಹ ಪ್ರಮಾಣದಲ್ಲಿ ಹಲಸು ಬೆಳೆಯಲಾಗುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 930 ಹೆಕ್ಟೇರ್‌ ವಿಸ್ತೀರ್ಣದಲ್ಲಿ 40260 ಟನ್‌ ಬೆಳೆ ಉತ್ಪಾದಿಸಲಾಗುತ್ತಿದೆ [೧]

ಉಪಯೋಗಗಳು[ಬದಲಾಯಿಸಿ]

ಇದರ ಹಣ್ಣಿನಿಂದ ಹಲವಾರು ಖಾದ್ಯಗಳನ್ನು ತಯಾರಿಸುತ್ತಾರೆ.ಹಣ್ಣನ್ನು ಸಂಸ್ಕರಿಸಿ ವಿದೇಶಗಳಿಗೆ ರಫ್ತು ಕೂಡಾ ಮಾಡುತ್ತಾರೆ.ಇದರ ದಾರು ಹಳದಿ ಬಣ್ಣ ಹೊಂದಿದೆ.ಒಣಗಿದಂತೆ ಕಂದು ಬಣ್ಣಕ್ಕೆ ತಿರುಗುತ್ತದೆ.ಸಾದಾರಣ ಹೊಳಪು ಬರುತ್ತದೆ.ಇದರ ಕಟ್ಟಿಗೆಯನ್ನು ಹೋಮ ಹವನಾದಿಗಳಿಗೆ ಉಪಯೋಗಿಸುತ್ತಾರೆ. 1.ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ - ವಿಟಮಿನ್ ಸಿ ಯನ್ನು ಒಳಗೊಂಡಿರುವ ಹಲಸಿನ ಹಣ್ಣು, ವೈರಲ್ ಮತ್ತು ಬ್ಯಾಕ್ಟೀರಿಯಾ ಸೋಂಕಿನಿಂದ ನಮ್ಮನ್ನು ಸಂರಕ್ಷಿಸುತ್ತದೆ. ಬಿಳಿ ರಕ್ತ ಕೋಶಗಳ ರಚನೆಯನ್ನು ಬೆಂಬಲಿಸುತ್ತಾ ನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ವಿಟಮಿನ್ ಸಿ ಪ್ರಮುಖ ಪಾತ್ರ ವಹಿಸುತ್ತದೆ. ಒಂದು ಕಪ್ ಹಲಸಿನಹಣ್ಣು ಈ ಶಕ್ತಿಯುತ ಉತ್ಕರ್ಷಣ ನಿರೋಧಕವನ್ನು ದೇಹಕ್ಕೆ ಒದಗಿಸುತ್ತದೆ ವಿಟಮಿನ್ ಸಿಯನ್ನು ಒಳಗೊಂಡಂತೆ ಹಲಸಿನ ಹಣ್ಣು, ಲಿಗಾನ್ಸ್, ಐಸೋಫ್ಲೇವನ್ಸ್ ಮತ್ತು ಸಪೋನಿನ್ಸ್‌ನಂತಹ ಫೈಟೋನ್ಯೂಟ್ರಿಯಂಟ್ಸ್ ಅನ್ನು ದೇಹಕ್ಕೆ ಪೂರೈಸುತ್ತದೆ ಇದು ಕ್ಯಾನ್ಸರ್ ವಿರುದ್ದ ಮತ್ತು ಬೇಗನೇ ಮುಪ್ಪಿನ ಲಕ್ಷಣಗಳನ್ನು ವರ್ಧಿಸುವುದರ ವಿರುದ್ದ ಹೋರಾಡುತ್ತದೆ.ಅಲ್ಸರ್ ವಿರುದ್ಧ ಹೋರಾಡುವ ವಿಶಿಷ್ಟ ಗುಣವನ್ನು ಹೊಂದಿರುವ ಹಲಸಿನ ಹಣ್ಣು ಅಲ್ಸರ್ ಮತ್ತು ಜೀರ್ಣಕ್ರಿಯೆ ಸಮಸ್ಯೆಗಳನ್ನು ದೂರಮಾಡುತ್ತದೆ. ಇದರಲ್ಲಿರುವ ಅತ್ಯಧಿಕ ಫೈಬರ್ ಅಂಶವು ಮೃದುವಾದ ಕರುಳಿನ ಚಲನೆಗೆ ಸಹಕಾರಿ[೨]

ಹಲಸಿನ ಬೆಳೆ[ಬದಲಾಯಿಸಿ]

ಸಮೀಕ್ಷೆಯೊಂದರ ಪ್ರಕಾರ ದೇಶದಲ್ಲಿ 1.20 ಲಕ್ಷ ಹೆಕ್ಟೇರ್ ಹಾಗೂ ಕರ್ನಾಟಕದಲ್ಲಿ 11,500 ಹೆಕ್ಟೇರ್ ವ್ಯಾಪ್ತಿಯಲ್ಲಿ ಹಲಸು ಬೆಳೆಯಿದೆ. ಭಾರತದಲ್ಲಿ ಹಲಸು ಬೆಳೆಯಲ್ಲಿ ಕೇರಳ ಮೊದಲ ಸ್ಥಾನದಲ್ಲಿದ್ದರೆ, ತಮಿಳುನಾಡು ದ್ವಿತೀಯ ಹಾಗೂ ಕರ್ನಾಟಕ ತೃತೀಯ ಸ್ಥಾನದಲ್ಲಿದೆ. (೨೯-೬-೨೦೧೪ ರ ಪ್ರಜಾವಾಣಿ)

ಚಂದ್ರ ಹಲಸು[ಬದಲಾಯಿಸಿ]

ಕೆಂಪು ತೊಳೆಯ ಹಲಸು - ಸುವಾಸನೆಯುಳ್ಳದು -ಹೆಚ್ಚು ರುಚಿಕರ. ಕೇರಳದ ಒಂದು ನರ್ಸರಿ ‘ಥಾಯ್ಲೆಂಡ್ ರೆಡ್’ ಎಂಬ ಹೆಸರಿನಲ್ಲಿ ಕೆಂಪು ಸೊಳೆ (ತೊಳೆ) ಹಲಸಿನ ಗಿಡವನ್ನು ಬಹುಪ್ರಚಾರದೊಂದಿಗೆ ಮಾರುತ್ತಿದೆ. ಇನ್ನೊಂದು ನರ್ಸರಿ ಮಲೇಷಿಯಾದ ಚಂದ್ರ ಹಲಸು ‘ಡೆಂಗ್ ಸುರೈಯಾ’ವನ್ನು ಮಾರುಕಟ್ಟೆಗಿಳಿಸಲು ಸಿದ್ಧವಾಗಿದೆ. ಬಣ್ಣದಲ್ಲೂ ರುಚಿಯಲ್ಲೂ ಬಹುಶಃ ಇವನ್ನು ಸರಿಗಟ್ಟುವ ಅಥವಾ ಇನ್ನೂ ಉತ್ತಮವಾದ ಅದೆಷ್ಟೋ ಹೆಸರೂ ಇಲ್ಲದ ಕೆಂಬಣ್ಣದ ತಳಿಗಳು ಕರ್ನಾಟಕದಲ್ಲಿವೆ. ಆದರಿವಕ್ಕೆ ಪ್ರಚಾರವಿಲ್ಲ

ಸಸ್ಯಾಭಿವೃದ್ಧಿ ಆರಂಭ[ಬದಲಾಯಿಸಿ]

ಹಾಡೋಣಹಳ್ಳಿ ಕೃಷಿ ವಿಜ್ಞಾನ ಕೇಂದ್ರ ಆರು ಕೆಂಪಿನ ತಳಿಗಳ ಕಸಿಗಿಡ ತಯಾರಿಸುತ್ತಿದೆ. ರೈತರಿಂದ ಬೇಕಾದಷ್ಟು ಕಸಿಕುಡಿ ಸಿಗದ ಕಾರಣ ಹೆಚ್ಚು ಗಿಡ ಮಾಡಲಾಗುತ್ತಿಲ್ಲ ಎಂದು ಬೇಸರಿಸುತ್ತಾರೆ ಕೇಂದ್ರದ ಕಾರ್ಯಕ್ರಮ ಸಂಯೋಜಕ ಡಾ. ಕೆ.ಎನ್. ಶ್ರೀನಿವಾಸಪ್ಪ. ಈ ತಳಿಗಳ ‘ಕಸಿಕುಡಿ ಬ್ಯಾಂಕ್’ ಅಭಿವೃದ್ಧಿಪಡಿಸುವುದು ಇದಕ್ಕೊಂದು ಪರಿಹಾರವಾಗಬಲ್ಲುದು.

ಈಗ ಕೆಂಪು ತಳಿಯ ಗಿಡಗಳಿಗೆ ಇರುವ ಬೇಡಿಕೆಯಷ್ಟು ಉತ್ಪಾದನೆ ಆಗುತ್ತಿಲ್ಲ. ಬೈರಚಂದ್ರ ಮಾತ್ರವಲ್ಲದೇ ಕೆಲವೊಂದು ಕೆಂಪು ಹಲಸಿನ ಕಸಿಗಿಡಗಳು ರಾಜ್ಯದ ಆಯ್ದ ಖಾಸಗಿ ನರ್ಸರಿಯವರಲ್ಲಿ ಮಾತ್ರ ಸಿಗುತ್ತಿವೆ. ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ಜಿಕೆವಿಕೆ ನಾಲ್ಕು ಕೆಂಪು ತಳಿಗಳ ಕಸಿಗಿಡ ತಯಾರಿಗೆ ಹೊರಟಿದೆ. ಇವುಗಳೆಂದರೆ: ಕೆ.ನರಸಿಂಹಯ್ಯ: ಗುಲಾಬಿ ಬಣ್ಣದ ಉದ್ದ ಸೊಳೆ ಹೊಂದಿರುವ 15–20 ಕಿಲೋದ ಹಣ್ಣುಗಳು ಇವು. ಇಪ್ಪತ್ತನೇ ವರ್ಷಕ್ಕೆ ಕನಿಷ್ಠ 200–300 ಹಣ್ಣುಗಳನ್ನು ನೀಡಬಲ್ಲದು.

ಬೈರಚಂದ್ರ: ಡಾ. ಎಸ್.ವಿ. ಹಿತ್ತಲಮನಿಯವರ ಆಯ್ಕೆಯ ತಳಿ ಇದು. ಮಧ್ಯಮ ಗಾತ್ರದ ಹಣ್ಣುಗಳು ಇದಾಗಿದ್ದು, 8 ರಿಂದ 10 ಕಿಲೋ ತೂಗುತ್ತವೆ. ವರ್ಷಕ್ಕೆರಡು ಬಾರಿ ಬೆಳೆ, ಬಹುತೇಕ ವರ್ಷವಿಡೀ ಫಸಲು ನೀಡುತ್ತದೆ. ಕಾಚಹಳ್ಳಿ ಕೆಂಪು ಸಿದ್ದಪ್ಪ: ಉತ್ಕೃಷ್ಟ ತಳಿ ಇದಾಗಿದ್ದು, 10–11 ಸೆಂ.ಮೀ ಉದ್ದದ ಕಡು ಕಿತ್ತಳೆ ಬಣ್ಣದ ಸೊಳೆ ಹೊಂದಿರುತ್ತವೆ. ಒಂದೊಂದು ಹಣ್ಣು 10 ರಿಂದ 15 ಕೆ.ಜಿ. ತೂಗುತ್ತವೆ. ದಾಸಪ್ಪ: ನಸು ಕಿತ್ತಳೆಯ 8 ರಿಂದ 10 ಸೆಂ.ಮೀಟರಿನ ಉದ್ದ ಸೊಳೆ ಇದರಲ್ಲಿದೆ. ಹಣ್ಣು ಉರುಟಾಗಿದ್ದು, ಸರಾಸರಿ 10–15 ಕಿಲೋ ತೂಕ ತೂಗುತ್ತದೆ. ಇದರ ಸರಾಸರಿ ಇಳುವರಿ 80 ರಿಂದ 100.

ದೂರದೃಷ್ಟಿಯ ರೈತ[ಬದಲಾಯಿಸಿ]

ಮೂವತ್ತು ಎಕರೆ ಹಲಸಿನ ತೋಟದಲ್ಲಿ ಸಿಂಹಪಾಲೂ ಕೆಂಪು ಸೊಳೆಯದನ್ನು ನೆಟ್ಟವರು ಹಾಸನದ ಸಿ. ಚೆನ್ನೇಗೌಡ. ಇವರು ನಮ್ಮ ಸಂಶೋಧನಾ ಸಂಸ್ಥೆಗಳು ಮತ್ತು ವಿಜ್ಞಾನಿಗಳಿಗಿಂತ ಎಷ್ಟೋ ಮೊದಲೇ ಕೆಂಪು ಹಲಸಿನ ಪ್ರಾಮುಖ್ಯ ಮನಗಂಡ ವ್ಯಕ್ತಿ. ನೆಟ್ಟ ಎಂಟು ಕೆಂಪು ತಳಿಗಳಲ್ಲೇ ಇವರಿಗೆ ಅಚ್ಚುಮೆಚ್ಚು ಭೈರಚಂದ್ರ. ವರ್ಷಕ್ಕೆ ಎರಡು ಬಾರಿ ಬೆಳೆ ಕೊಡುತ್ತದೆ, ರುಚಿಕರ ದಪ್ಪ ಸೊಳೆ. ಹೆಚ್ಚಿನ ಸೊಳೆಗಳದೂ ಸಮಾನಗಾತ್ರ ಇರುವುದು ಅನುಕೂಲಕರ.(೧೩-೧-೨೦೧೫/ಪ್ರಜಾವಾಣಿ)

ಆಧಾರ[ಬದಲಾಯಿಸಿ]

೧.ವನಸಿರಿ:ಅಜ್ಜಂಪುರ ಕೃಷ್ಣಮೂರ್ತಿ ಇದರಿಂದ ಮನೆಯ ಉಪಯೋಗದ ಫರ್ನಿಚರ್ ಮಾಡಲು ಬಳಸುತ್ತರೆ.

ಉಲ್ಲೇಕಗಳು[ಬದಲಾಯಿಸಿ]

"https://kn.wikipedia.org/w/index.php?title=ಹಲಸು&oldid=677821" ಇಂದ ಪಡೆಯಲ್ಪಟ್ಟಿದೆ