ಮರ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಪ್ರಪಂಚದ ಅತ್ಯಂತ ಎತ್ತರಕ್ಕೆ ಬೆಳೆಯುವ ಮರದ ಪ್ರಜಾತಿಯಾದ ಸೆಕೋಯ

ಮರ ಎಂದರೆ ಅತ್ಯಂತ ದೊಡ್ಡ ಸಸ್ಯ. ಕೆಲವು ಮರಗಳು ೩೦೦ ಆಡಿಗಳಿಗಿಂತಲೂ ಎತ್ತರಕ್ಕೆ ಬೆಳೆಯುತ್ತವೆ.ಸಾವಿರ ವರ್ಷಗಳಿಗಿಂತಲೂ ಹೆಚ್ಚು ಕಾಲ ಬಾಳಿದ ಮರಗಳೂ ಇರುವುದು ಕಂಡು ಬಂದಿದೆ.ಅತ್ಯಂತ ದೀರ್ಘಕಾಲ ಬದುಕಿರುವ ಜೀವಿಗಳಲ್ಲಿ ಮರಗಳಿಗೆ ಅಗ್ರ ಸ್ಥಾನ. ಮರಗಳು ೩೭೦ ದಶಲಕ್ಷ ವರ್ಷಗಳಿಂದ ಅಸ್ತಿತ್ವದಲ್ಲಿದೆ ಎನ್ನಲಾಗಿದೆ. ವಿಶ್ವದಲ್ಲಿ ಸುಮಾರು ೩ ಟ್ರಿಲಿಯನ್ ಬೆಳೆದ ಮರಗಳು ಇವೆ ಎನ್ನುತ್ತಾರೆ. ಎತ್ತರದ ಮರ ಎಂದರೆ, ಹೈಪರಿಯನ್ ಎಂಬ ಕರಾವಳಿಯ ಮಂಜತ್ತಿಮರವು ೧೧೫೬ ಮೀ (೩೭೯ ಅಡಿ) ಎತ್ತರವಿದೆ.

ವೈಶಿಷ್ಟ್ಯಗಳು[ಬದಲಾಯಿಸಿ]

ಮರಗಳನ್ನು ಇತರ ಸಸ್ಯಗಳಿಂದ ಹಲವಾರು ರೀತಿಯಿಂದ ಬೇರ್ಪಡಿಸಬಹುದು.ಮೊದಲನೆಯದಾಗಿ ಮರಗಳು ನೆಟ್ಟಗೆ ತಮ್ಮ ಬಲದಿಂದಲೇ ನೆಲದಿಂದ ನಿಲ್ಲುತ್ತವೆ.ಮರಗಳಿಗೆ ಕಾಂಡ ಇದೆ.ಕಾಂಡಗಳು ಕಡಿಮೆ ಎಂದರೆ ೧೦ ಸೆ.ಮೀ.ದಪ್ಪ ಬೆಳೆಯುತ್ತವೆ. ಮರಗಳು ಕಡಿಮೆ ಎಂದರೆ ೪ ಮೀಟರ್ ನಷ್ಟು ಬೆಳೆಯುತ್ತವೆ. ಮರ ಎಂದರೆ ಸಂಪೂರ್ಣವಾಗಿ ಬೆಳೆದ ಸಸ್ಯದ ನಂತರದ ಬೆಳೆದ ಭಾಗ.

"https://kn.wikipedia.org/w/index.php?title=ಮರ&oldid=719384" ಇಂದ ಪಡೆಯಲ್ಪಟ್ಟಿದೆ