ಕೋಟಿ ಚೆನ್ನಯ

ವಿಕಿಪೀಡಿಯ ಇಂದ
Jump to navigation Jump to search
Koti & Chennaya (Circa 1556 A.D to 1591 A.D.) Twin Heroes of Tulu Nadu (Karnataka, India)

ಕೋಟಿ ಚೆನ್ನಯ ತುಳುನಾಡಿನಲ್ಲಿ ತುಂಬ ಹೆಸರಾದ ಯೋಧರಾಗಿದ್ದು ಅವರನ್ನು ತುಂಬ ಮಂದಿ ದೈವ ಎಂದು ಆರಾಧಿಸುತ್ತಾರೆ.ಇವರ ಕಾಲ ಕ್ರಿ.ಶ.1556 A.D ರಿಂದ 1591[೧] ತುಳುನಾಡಿನಲ್ಲಿ ಪ್ರಚಲಿತವಿರುವ ಭೂತಾರಾಧನೆಯಲ್ಲಿ ಕೋಟಿ-ಚೆನ್ನಯ ಖ್ಯಾತ ಹೆಸರು. ಕೋಟಿ ಮತ್ತು ಚೆನ್ನಯ ಎಂಬ ಸೋದರರು ಯೋಧರಾಗಿದ್ದು ಹೋರಾಡಿ ಮಡಿದ ಕಥೆ ಮುಂದೆ ಅದುವೇ ಭೂತಾರಾಧನೆಯಾಯಿತು.

ಬಾಲ್ಯ ಮತ್ತು ಜೀವನ[ಬದಲಾಯಿಸಿ]

ಇವರು ಪುತ್ತೂರು ತಾಲೂಕಿನ ಪಡುಮಲೆ ಎಂಬಲ್ಲಿ ಜನಿಸಿದರು.[೨] ತುಳುನಾಡಿನ ಬಿಲ್ಲವ ಜನಾಂಗಕ್ಕೆ ಸೇರಿದ ದೇಯಿ ಬೈದೆತಿ ಎಂಬ ಮಕ್ಕಳಾಗಿ ಜನಿಸಿದರು.ಇವರು ವೀರರಾಗಿದ್ದು ಹಲವಾರು ಕಾಳಗಗಳಲ್ಲಿ ಪರಾಕ್ರಮಶಾಲಿಗಳಾಗಿ ಹೋರಾಡಿದ್ದರು. ಅಂತೆಯೇ ಹಲವಾರು ಜನೋಪಯೋಗಿ ಕಾರ್ಯಗಳನ್ನು ಮಾಡಿದುದರಿಂದ ತುಳುನಾಡಿನಲ್ಲಿ ಇವರನ್ನು ದೈವತ್ವಕ್ಕೇರಿಸಿದ ಪೂಜಿಸಲಾಗುತ್ತಿದೆ.ಇವರ ಕಥೆಗಳನ್ನು ಪಾಡ್ದನಗಳಲ್ಲಿ ಹಾಡಿ ಹೊಗಳಲಾಗುತ್ತಿದೆ. ಇವರ ಹೆಸರಿನಲ್ಲಿ ಹಲವಾರು ಗರೋಡಿ(ವ್ಯಾಯಮ ಶಾಲೆ) ಸ್ಥಾಪನೆಯಾಗಿದೆ[೩][better source needed]</ref>. ಇವರು ಎಣ್ಮೂರಿನಲ್ಲಿ ನಡೆದ ಕದನದಲ್ಲಿ ಮಡಿದರು.

ಉಲ್ಲೇಖಗಳು[ಬದಲಾಯಿಸಿ]

  1. "Shree Brahma Baidarkala Garodi Kshethra". kankanadygarodi.in.
  2. "Birthplace of Koti, Chennaya may be the next tourist hub of Tulu Nadu". The Hindu (in ಇಂಗ್ಲಿಷ್). ISSN 0971-751X.
  3. name="garadi">"Gardi - The Billawa Temple". Online webpage of Billava Balaga. Billava Balaga, Dubai. Archived from the original on |archive-url= requires |archive-date= (help).