ಕುಟುಂಬ

ವಿಕಿಪೀಡಿಯ ಇಂದ
Jump to navigation Jump to search
FliaMores-1968
A mother with her children, Berlin, Germany, 1962
A miner with his children, West Virginia, 1946

ಮಾನವರಲ್ಲಿ ಒಂದು ಕುಟುಂಬವು ರಕ್ತಸಂಬಂಧ, ಹೊಂದಾಣಿಕೆ ಅಥವಾ ಸಹವಾಸದಿಂದ ಒಟ್ಟಾಗಿರುವ ಒಂದು ಗುಂಪು ಎಂದು ಹೇಳಬಹುದು. ಕುಟುಂಬವು ಸಮಾಜದ ಬಹು ಮುಖ್ಯ ಅಂಗವಾಗಿದೆ. ಬಹಳಷ್ಟು ಸಂದರ್ಭಗಳಲ್ಲಿ ಮಕ್ಕಳು ಜನರೊಂದಿಗೆ ಬೆರೆತು ಸಾಮಾಜಿಕವಾಗಿ ಸಮರ್ಥರಾಗಲು ಕುಟುಂಬ ಒಂದು ಅಗತ್ಯ ಸಂಸ್ಥೆಯಾಗಿ ನಿಲ್ಲುತ್ತದೆ. ಭಾರತದ ಇತಿಹಾಸ ಹಾಗೂ ಸಂಸ್ಕೃತಿಯನ್ನು ಅವಲೋಕಿಸಿದಾಗ, ಕುಟುಂಬವನ್ನು ಅವಿಭಕ್ತ ಹಾಗೂ ವಿಭಕ್ತ ಎಂದು ವರ್ಗೀಕರಿಸಬಹುದು. ವಿದೇಶಿ ಸಂಸ್ಕೃತಿಯ ಪ್ರಭಾವದಿಂದಾಗಿ ಇತ್ತೀಚಿಗೆ ಏಕ ಪೋಷಕ ಕುಟುಂಬವೊಂದು ನಿರ್ಮಾಣವಾಗಿದೆ.

ಕುಟುಂಬದ ಹುಟ್ಟು[ಬದಲಾಯಿಸಿ]

ಮನುಷ್ಯ ಆಹಾರ ಸಂಗ್ರಹಣೆ, ಸಂರಕ್ಷಣೆ ಮತ್ತು ಸಂಸ್ಕರಣೆ ಕಲಿತ ನಂತರ ಕುಟುಂಬ ಪದ್ಧತಿ ಹುಟ್ಟಿಕೊಂಡಿರಬಹುದು ಎಂಬುದು ಒಂದು ವಾದ. ಪೂರ್ವದಲ್ಲಿ ಮನುಷ್ಯ ಆಹಾರ ಬೇಕಾದಾಗ ಮಾತ್ರ ಹುಡುಕಿ ಅಥವಾ ಬೇಟೆಯಾಡಿ ತಿನ್ನುತ್ತಿದ್ದ. ಎಲ್ಲೆಂದರಲ್ಲಿ ಮಲಗುತ್ತಿದ್ದ. ಅತ್ಯಂತ ಸಹಜವಾಗಿ ಲೈಂಗಿಕ ಕ್ರಿಯೆಯಲ್ಲಿ ತೊಡಗುತ್ತಿದ್ದ. ಆಹಾರವನ್ನು ಸಂಗ್ರಹಿಸಿ, ಸಂರಕ್ಷಿಸಲು ಕಲಿತ ಮೇಲೆ ಬಹುಶಃ ಒಂದು ನೆಲೆಯನ್ನು ಕಂಡುಕೊಳ್ಳುವುದು ಅವಶ್ಯಕವಾಯಿತು. ಹೀಗೆ ಒಂದು ಜಾಗವನ್ನು 'ಮನೆ' ಎಂದು ಗುರುತಿಸಿಕೊಂಡಮೇಲೆ, ಲೈಂಗಿಕ ತೃಪ್ತಿಗಾಗಿ ಸಂಗಾತಿಯನ್ನು ಅರಸುವುದರ ಬದಲು, ಸಂಗಾತಿಯೊಡನೆ ಒಪ್ಪಂದ ಮಾಡಿಕೊಂಡ. ಹೀಗೆ ಕುಟುಂಬದ ಮೊದಲ ಕಲ್ಪನೆ ಹುಟ್ಟಿತೆನ್ನಬಹುದು.

ಬೆಳವಣಿಗೆ[ಬದಲಾಯಿಸಿ]

ಹೀಗಿರುವ ಒಂದು ಕುಟುಂಬದಲ್ಲಿ ಹಲವಾರು [ಗಂಡು]-[ಹೆಣ್ಣು ಒಟ್ಟಿಗೆ ಇರುತ್ತಿದ್ದರು. ಹುಟ್ಟುವ ಮಕ್ಕಳಿಗೆ ತಾಯಿ ಯಾರೆಂದು ತಿಳಿದಿದ್ದರೂ ತಂದೆಯ ಬಗ್ಗೆ ನಿಖರ ಮಾಹಿತಿಯಿರಲಿಲ್ಲ. ಕ್ರಮೇಣ ಈ ಗುಂಪಿನ ಸಂಖ್ಯೆ ಬೆಳೆದ ಹಾಗೆ ಹಲವು ಗಂಡು-ಹಲವು ಹೆಣ್ಣು, ಹಲವು ಗಂಡು-ಒಂದು ಹೆಣ್ಣು, ಒಂದು ಗಂಡು-ಹಲವು ಹೆಣ್ಣು ಮತ್ತು ಒಂದು ಗಂಡು-ಒಂದು ಹೆಣ್ಣು , ಹೀಗೆ ಕುಟುಂಬಗಳು ಸೃಷ್ಟಿಯಾದವು. ಇವುಗಳಲ್ಲಿ ಕೊನೆಯ ಎರಡು ಬಗೆಯವು ಸ್ಥಿರಗೊಂಡವು. ಬಹುಶಃ ಹೆಣ್ಣಿನ ಬಸಿರು-ಬಾಣಂತನದ ಅಸಹಾಯಕತೆ ಈ ರೀತಿಯ ಬೆಳವಣಿಗೆಗೆ ಪೂರಕವಾಗಿರಬಹುದು. ಇತ್ತೀಚಿಗೆ ಬಹುಪತ್ನಿತ್ವವೂ ನಶಿಸಿ ಈಗಿರುವ ಕುಟುಂಬ ಸೃಷ್ಟಿಯಾಗಿದೆ.

ವಿಂಗಡಣೆ[ಬದಲಾಯಿಸಿ]

ಅವಿಭಕ್ತ ಕುಟುಂಬ ಅಥವಾ ಕೂಡು ಕುಟುಂಬ[ಬದಲಾಯಿಸಿ]

ಒಂದೇ ಕಡೆಯಲ್ಲಿ ಅನೇಕ ದಂಪತಿಗಳು ಇರುವಂತಹ ಕುಟುಂಬ. ಸಾಮಾನ್ಯವಾಗಿ ಹಿರಿಯರೊಬ್ಬರು ಇದಕ್ಕೆ ಯಜಮಾನರಾಗಿರುತ್ತಾರೆ.

ವಿಭಕ್ತ ಕುಟುಂಬ[ಬದಲಾಯಿಸಿ]

ಔದ್ಯೋಗಿಕ ಕ್ರಾಂತಿಯಿಂದಾಗಿ ಜನರ ವಲಸೆ ಹೆಚ್ಚಾದಂತೆಲ್ಲ ದೊಡ್ಡ ಕುಟುಂಬಗಳು ಒಡೆಯಲಾರಂಭಿಸಿದವು. ಆಗ ದಂಪತಿ-ಮಕ್ಕಳ ವಿಭಕ್ತ ಕುಟುಂಬ ಹುಟ್ಟಿಕೊಂಡಿತು.

ಏಕ ಪೋಷಕ ಕುಟುಂಬ[ಬದಲಾಯಿಸಿ]

ವಿದೇಶಿ ಸಂಸ್ಕೃತಿಯ ಪ್ರಭಾವ, ಹೆಚ್ಚುತ್ತಿರುವ ವಿವಾಹ ವಿಚ್ಛೇದನಗಳಿಂದಾಗಿ ಏಕಪೋಷಕ ಕುಟುಂಬಗಳು ಹುಟ್ಟಿಕೊಳ್ಳುತ್ತಿವೆ. ಹೆಚ್ಚಿನ ಸಂದರ್ಭಗಳಲ್ಲಿ ತಾಯಿ ಮಗುವಿನ ಕುಟುಂಬವೇ ನಿರ್ಮಾಣವಾಗುತ್ತದೆ.

ಸಂಬಂಧಗಳು[ಬದಲಾಯಿಸಿ]

ಮೊದಲಿಗೆ ತಾಯಿ-ಮಗುವಿನ ಸಂಬಂಧವೊಂದೇ ಮೂಡಿತ್ತು. ಕುಟುಂಬದ ಪರಿಕಲ್ಪನೆ ಬರುವವರೆಗೂ ಬೇರೆ ಯಾವ ಸಂಬಂಧಗಳೂ ಇರಲಿಲ್ಲ. ಲೈಂಗಿಕ ಕ್ರಿಯೆ ಸಹಜವಾಗಿದ್ದರಿಂದ ತಂದೆ ಅಪ್ರಸ್ತುತನಾಗಿದ್ದ. ಕುಟುಂಬದ ನಿರ್ಮಾಣದೊಂದಿಗೆ ಗಂಡ-ಹೆಂಡತಿ ಸಂಬಂಧ ತಂದೆ, ತಾಯಿ, ಮಕ್ಕಳ ಸಂಬಂಧವಾಯಿತು. ಮುಂದೆ ಸಹೋದರ ಸಂಬಂಧ ಬಲವಾಯಿತು. ಈ ತಂದೆ-ತಾಯಿ-ಸಹೋದರ(ರಿ) ಸಂಬಂಧವೇ ಮೂಲ ಸಂಬಂಧ. ಉಳಿದ ಎಲ್ಲಾ ಸಂಬಂಧಗಳು ಈ ಮೂಲ ಸಂಬಂಧಗಳ ಮೇಲೆಯೇ ಟಿಸಿಲೊಡೆದವು. ವಿವಾಹ ಸಂಸ್ಥೆಯ ಉಗಮದೊಂದಿಗೆ ಸಂಬಂಧಗಳು ಸಂಕೀರ್ಣವಾಗತೊಡಗಿದವು..

ಉಲೇಖ< /> https://en.wikipedia.org/wiki/Family

"https://kn.wikipedia.org/w/index.php?title=ಕುಟುಂಬ&oldid=873908" ಇಂದ ಪಡೆಯಲ್ಪಟ್ಟಿದೆ