ವಿಷಯಕ್ಕೆ ಹೋಗು

ಕುಟುಂಬ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
FliaMores-1968
A mother with her children, Berlin, Germany, 1962
A miner with his children, West Virginia, 1946

ಮಾನವರಲ್ಲಿ ಒಂದು ಕುಟುಂಬವು ರಕ್ತಸಂಬಂಧ, ಹೊಂದಾಣಿಕೆ ಅಥವಾ ಸಹವಾಸದಿಂದ ಒಟ್ಟಾಗಿರುವ ಒಂದು ಗುಂಪು ಎಂದು ಹೇಳಬಹುದು. ಕುಟುಂಬವು ಸಮಾಜದ ಬಹು ಮುಖ್ಯ ಅಂಗವಾಗಿದೆ. ಬಹಳಷ್ಟು ಸಂದರ್ಭಗಳಲ್ಲಿ ಮಕ್ಕಳು ಜನರೊಂದಿಗೆ ಬೆರೆತು ಸಾಮಾಜಿಕವಾಗಿ ಸಮರ್ಥರಾಗಲು ಕುಟುಂಬ ಒಂದು ಅಗತ್ಯ ಸಂಸ್ಥೆಯಾಗಿ ನಿಲ್ಲುತ್ತದೆ. ಭಾರತದ ಇತಿಹಾಸ ಹಾಗೂ ಸಂಸ್ಕೃತಿಯನ್ನು ಅವಲೋಕಿಸಿದಾಗ, ಕುಟುಂಬವನ್ನು ಅವಿಭಕ್ತ ಹಾಗೂ ವಿಭಕ್ತ ಎಂದು ವರ್ಗೀಕರಿಸಬಹುದು. ವಿದೇಶಿ ಸಂಸ್ಕೃತಿಯ ಪ್ರಭಾವದಿಂದಾಗಿ ಇತ್ತೀಚಿಗೆ ಏಕ ಪೋಷಕ ಕುಟುಂಬವೊಂದು ನಿರ್ಮಾಣವಾಗಿದೆ.

ಬೆಳವಣಿಗೆ

[ಬದಲಾಯಿಸಿ]

ಹೀಗಿರುವ ಒಂದು ಕುಟುಂಬದಲ್ಲಿ ಹಲವಾರು [ಗಂಡು]-[ಹೆಣ್ಣು ಒಟ್ಟಿಗೆ ಇರುತ್ತಿದ್ದರು. ಹುಟ್ಟುವ ಮಕ್ಕಳಿಗೆ ತಾಯಿ ಯಾರೆಂದು ತಿಳಿದಿದ್ದರೂ ತಂದೆಯ ಬಗ್ಗೆ ನಿಖರ ಮಾಹಿತಿಯಿರಲಿಲ್ಲ. ಕ್ರಮೇಣ ಈ ಗುಂಪಿನ ಸಂಖ್ಯೆ ಬೆಳೆದ ಹಾಗೆ ಹಲವು ಗಂಡು-ಹಲವು ಹೆಣ್ಣು, ಹಲವು ಗಂಡು-ಒಂದು ಹೆಣ್ಣು, ಒಂದು ಗಂಡು-ಹಲವು ಹೆಣ್ಣು ಮತ್ತು ಒಂದು ಗಂಡು-ಒಂದು ಹೆಣ್ಣು , ಹೀಗೆ ಕುಟುಂಬಗಳು ಸೃಷ್ಟಿಯಾದವು. ಇವುಗಳಲ್ಲಿ ಕೊನೆಯ ಎರಡು ಬಗೆಯವು ಸ್ಥಿರಗೊಂಡವು. ಬಹುಶಃ ಹೆಣ್ಣಿನ ಬಸಿರು-ಬಾಣಂತನದ ಅಸಹಾಯಕತೆ ಈ ರೀತಿಯ ಬೆಳವಣಿಗೆಗೆ ಪೂರಕವಾಗಿರಬಹುದು. ಇತ್ತೀಚಿಗೆ ಬಹುಪತ್ನಿತ್ವವೂ ನಶಿಸಿ ಈಗಿರುವ ಕುಟುಂಬ ಸೃಷ್ಟಿಯಾಗಿದೆ.

ವಿಂಗಡಣೆ

[ಬದಲಾಯಿಸಿ]

ಅವಿಭಕ್ತ ಕುಟುಂಬ ಅಥವಾ ಕೂಡು ಕುಟುಂಬ

[ಬದಲಾಯಿಸಿ]

ಒಂದೇ ಕಡೆಯಲ್ಲಿ ಅನೇಕ ದಂಪತಿಗಳು ಇರುವಂತಹ ಕುಟುಂಬ. ಸಾಮಾನ್ಯವಾಗಿ ಹಿರಿಯರೊಬ್ಬರು ಇದಕ್ಕೆ ಯಜಮಾನರಾಗಿರುತ್ತಾರೆ. ಅವಿಭಕ್ತ ಕುಟುಂಬ ಎಂದರೆ ಒಂದೇ ಮನೆಯಲ್ಲಿ ಎರಡು ಅಥವಾ ಅದಕ್ಕಿಂತ ಹೆಚ್ಚಿನ ತಲೆಮಾರಿನವರು ವಾಸಿಸುವುದನ್ನು ಅವಿಭಕ್ತ ಕುಟುಂಬ ಎನ್ನಲಾಗುತ್ತದೆ.

ಉಪಯೋಗಗಳು

[ಬದಲಾಯಿಸಿ]
  • ಇಲ್ಲಿ ವಿಷಯಗಳ ಹಂಚುವಿಕೆ ಹೆಚ್ಚಾಗಿ ಕಂಡುಬರುತ್ತದೆ.
  • ಇದು ಉತ್ತಮ ಸಂಬಂಧಗಳನ್ನು ಸೃಷ್ಥಿಸುವ ವೇದಿಕೆಯಾಗಿದೆ.
  • ಜೀವನದ ಮೌಲ್ಯವನ್ನು ತಿಳಿಸುತ್ತದೆ.
ಆದರೆ ಈಗಿನ ಕಾಲದಲ್ಲಿ ಅತ್ಯಂತ ಕಡಿಮೆಯಾಗಿ ಕಾಣಸಿಗುತ್ತದೆ.ಏಕೆಂದರೆ ಅವಿಭಕ್ತ ಕುಟುಂಬಗಳು

ಸಂಬಂಧಗಳು

[ಬದಲಾಯಿಸಿ]

ಸಂಕ್ಷಿಪ್ತವಾಗಿ ಹಿನ್ನಲೆ

[ಬದಲಾಯಿಸಿ]

ಮೊದಲಿಗೆ ತಾಯಿ-ಮಗುವಿನ ಸಂಬಂಧವೊಂದೇ ಮೂಡಿತ್ತು. ಕುಟುಂಬದ ಪರಿಕಲ್ಪನೆ ಬರುವವರೆಗೂ ಬೇರೆ ಯಾವ ಸಂಬಂಧಗಳೂ ಇರಲಿಲ್ಲ. ಲೈಂಗಿಕ ಕ್ರಿಯೆ ಸಹಜವಾಗಿದ್ದರಿಂದ ತಂದೆ ಅಪ್ರಸ್ತುತನಾಗಿದ್ದ. ಕುಟುಂಬದ ನಿರ್ಮಾಣದೊಂದಿಗೆ ಗಂಡ-ಹೆಂಡತಿ ಸಂಬಂಧ ತಂದೆ, ತಾಯಿ, ಮಕ್ಕಳ ಸಂಬಂಧವಾಯಿತು. ಮುಂದೆ ಸಹೋದರ ಸಂಬಂಧ ಬಲವಾಯಿತು. ಈ ತಂದೆ-ತಾಯಿ-ಸಹೋದರ(ರಿ) ಸಂಬಂಧವೇ ಮೂಲ ಸಂಬಂಧ. ಉಳಿದ ಎಲ್ಲಾ ಸಂಬಂಧಗಳು ಈ ಮೂಲ ಸಂಬಂಧಗಳ ಮೇಲೆಯೇ ಟಿಸಿಲೊಡೆದವು. ವಿವಾಹ ಸಂಸ್ಥೆಯ ಉಗಮದೊಂದಿಗೆ ಸಂಬಂಧಗಳು ಸಂಕೀರ್ಣವಾಗತೊಡಗಿದವು..

ಮುಖ್ಯ ವಿಧಗಳು   

[ಬದಲಾಯಿಸಿ]
  • ವೈಯಕ್ತಿಕ ಸಂಬಂಧಗಳು
  • ವೃತ್ತಿಪರ ಸಂಬಂಧಗಳು
  • ಸಾಮಾಜಿಕ ಅಥವಾ ಇತರ ಸಂಬಂಧಗಳು

ಸಂಬಂಧಗಳ ನಿರ್ವಹಣೆ

[ಬದಲಾಯಿಸಿ]

ಸಂಬಂಧಗಳ ಯಾವುದೋ ಮೂಲೆಯಲ್ಲಿ ಸಮಸ್ಯೆಗಳು ಹುಟ್ಟಿಕೊಂಡರೆ, ಅವುಗಳು ಅಷ್ಟಕ್ಕೇ ನಿಲ್ಲುತ್ತವೆಯೇ! ಇಲ್ಲ. ಅವು ಸಾಂಕ್ರಾಮಿಕ ರೋಗದಂತೆ ಹರಡಲು ಪ್ರಾರಂಭಿಸುತ್ತವೆ.

ಹಾಗಾದರೆ ಅವೆಲ್ಲವನ್ನೂ ಹೇಗೆ ನಿಭಾಯಿಸುವುದು?

ಅದಕ್ಕಾಗಿ ಈ 3 ಮುಖ್ಯ ಹಂತಗಳು ಸಹಾಯಕ.  

1. ಸಂಬಂಧಗಳ ಪಾತ್ರವನ್ನು ಗುರುತಿಸುವುದು

[ಬದಲಾಯಿಸಿ]

ಪಾತ್ರವನ್ನು ಗುರುತಿಸುವುದು ಸಂಬಂಧಗಳಿಗೆ ಸ್ಪಷ್ಟತೆಯನ್ನು ತರಲು ಸಹಾಯ ಮಾಡುತ್ತದೆ. ದೈನಂದಿನ ಜೀವನದಲ್ಲಿ ಸಂಬಂಧಗಳಿಗೆ ಸರಿಯಾದ ಸ್ಥಾನವನ್ನು ಒದಗಿಸುವ ಪ್ರಕ್ರಿಯೆ ಎಂದೂ ನೀವು ಇದನ್ನು ಕರೆಯಬಹುದು.

2. “ಸರಿಯಾದ ಸಂಬಂಧಗಳ” ವ್ಯಾಖ್ಯಾನಗಳನ್ನು ಪ್ರಶ್ನಿಸುವುದು

[ಬದಲಾಯಿಸಿ]

ಪರಿಪೂರ್ಣ ಸಂಬಂಧಗಳ ವ್ಯಾಖ್ಯಾನವು ಕೇವಲ ಕಾಲ್ಪನಿಕವಾಗಿದ್ದರೆ ಅಥವಾ ಪರಿಪೂರ್ಣ ಸಂಬಂಧವು ಎಂಬುದೇ ಇಲ್ಲ ಎಂದು ಭಾವಿಸಿದರೆ, ಆ ಎರಡೂ ಆಲೋಚನಾ ಕ್ರಮಗಳು ಉತ್ತಮ ಸಂಬಂಧ ನಿರ್ವಹಣೆಗೆ ಅಡ್ಡಿಯಾಗುತ್ತವೆ. ಏಕೆಂದರೆ ನಮ್ಮ ಕ್ರಿಯೆಗಳು ನಾವು ಯೋಚಿಸುವುದನ್ನು ಅಥವಾ ನಂಬುವುದನ್ನು ಅನುಸರಿಸುತ್ತವೆ.

3. ಪ್ರಾಮುಖ್ಯತೆಯ ಆಧಾರದಲ್ಲಿ ಸಂಬಂಧಗಳಿಗೆ ಆದ್ಯತೆ ನೀಡುವುದು

[ಬದಲಾಯಿಸಿ]

ಆದ್ಯತೆಯ ಸ್ಪಷ್ಟತೆ ಹೊಂದಿರುವ ಸಂಬಂಧಗಳನ್ನು ನಿರ್ವಹಿಸಲು ತುಲನಾತ್ಮಕವಾಗಿ ಸುಲಭ ಎನ್ನಲಾಗುತ್ತದೆ. ವೈಯಕ್ತಿಕ ಮತ್ತು ವೃತ್ತಿಪರ ಸಂಬಂಧಗಳನ್ನು ಸಮತೋಲನದಿಂದ ನಿರ್ವಹಿಸುವುದೂ ಒಂದು ಸವಾಲಿನ ಕೆಲಸವಾಗಿದೆ. ಇದು ಉದ್ಯೋಗ, ವೃತ್ತಿ ಅಥವಾ ಸ್ವಭಾವಕ್ಕೆ ಒಳಪಟ್ಟಿರುತ್ತದೆ. []

ಉಲ್ಲೇಖ

[ಬದಲಾಯಿಸಿ]
  1. k, Shreenidhi (28/12/2024). "ಎಂತಹಾ ಹೊಣೆ ಈ ಸಂಬಂಧಗಳ ನಿರ್ವಹಣೆ! About Managing Relationships in Kannada!". SharingShree ಕನ್ನಡ. Retrieved 28/12/2024. {{cite web}}: Check date values in: |access-date= and |date= (help); line feed character in |title= at position 31 (help)CS1 maint: url-status (link)


"https://kn.wikipedia.org/w/index.php?title=ಕುಟುಂಬ&oldid=1278651" ಇಂದ ಪಡೆಯಲ್ಪಟ್ಟಿದೆ