ಪುತ್ತೂರು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಪುತ್ತೂರು
ಪಟ್ಟಣ
Country ಭಾರತ
StateKarnataka
RegionTulu Nadu
DistrictDakshina Kannada
ಸರ್ಕಾರ
 • MLASanjeeva Matandhur
Elevation
೮೭ m (೨೮೫ ft)
Languages
 • OfficialKannada , Tulu, Malame
ಸಮಯ ವಲಯಯುಟಿಸಿ+5:30 (IST)
PIN
574201-574299
Telephone code8251 registration_plate = KA 21

ಪುತ್ತೂರು ನಗರ(ಉಚ್ಚಾರಣೆːlisten ) ಭಾರತದ ಕರ್ನಾಟಕ ರಾಜ್ಯದ ದಕ್ಷಿಣ ಕನ್ನಡ ಜಿಲ್ಲೆಯ ಪ್ರಮುಖ ಪಟ್ಟಣ. ಇದು ಪುತ್ತೂರು ತಾಲೂಕಿನ ಪ್ರಧಾನ ಕೇಂದ್ರ. ಈ ನಗರ ಮಂಗಳೂರಿನಿಂದ ೫೨ ಕಿ.ಮೀ. ದೂರದಲ್ಲಿದೆ. ಮೈಸೂರು-ಮಂಗಳೂರು ಹೆದ್ದಾರಿಯ ನಡುವಿನ ಕರಾವಳಿ ಮತ್ತು ಪಶ್ಚಿಮ ಘಟ್ಟದ ಗುಡ್ಡಬೆಟ್ಟಗಳ ನಡುವಿದೆ. ೨೦೧೧ರಲ್ಲಿ ಇಲ್ಲಿನ ಜನಸಂಖ್ಯೆ ೫೩,೦೬೧ ಇತ್ತು. ಇಲ್ಲಿನ ನಿವಾಸಿಗಳ ಪ್ರಮುಖ ಉದ್ಯೋಗ ಕೃಷಿಯಾಗಿದೆ. ಇದು ದಕ್ಷಿಣ ಕನ್ನಡದ ಎರಡನೆ ದೊಡ್ಡ ಪಟ್ಟಣ ಹಾಗೂ ಪ್ರಮುಖ ವ್ಯಾಪಾರೀ ಕೇಂದ್ರ.

ಸಾಂಪ್ರದಾಯಿಕ ಹಂಚಿನ ಮನೆ

ಇತಿಹಾಸ[ಬದಲಾಯಿಸಿ]

ಪುತ್ತೂರು ತಾಲ್ಲೂಕಿನ ಕಡಬ ಗ್ರಾಮ ವಿಜಯನಗರ ಕಾಲದಲ್ಲಿ ಸುತ್ತಣ ಪ್ರದೇಶದ ಆಡಳಿತ ಕೇಂದ್ರವಾಗಿತ್ತು. ಇಲ್ಲಿ ಗಣೇಶ ಮತ್ತು ನೀಲಕಂಠ ದೇವಾಲಯಗಳಿವೆ. ಸವಣೂರು ಹಿಂದೆ ಜೈನರ ಒಂದು ಕೇಂದ್ರವಾಗಿತ್ತು. ಪುತ್ತೂರಿನ ಈಶಾನ್ಯಕ್ಕೆ 13 ಕಿ.ಮೀ. ದೂರದಲ್ಲಿರುವ ಇಲ್ಲಿ ಹಳೆಯ ಪುಡೊತ್ತು ಚಂದ್ರನಾಥ ಬಸದಿ ಇದೆ. ಉಪ್ಪಿನಂಗಡಿ ಹಿಂದೆ ತಾಲ್ಲೂಕಿನ ಮುಖ್ಯ ಸ್ಥಳವಾಗಿತ್ತು. ಆಗ ಈ ತಾಲ್ಲೂಕಿಗೆ ಈ ಊರಿನ ಹೆಸರೇ ಇತ್ತು. ಇಲ್ಲಿ ನೇತ್ರಾವತಿ ಮತ್ತು ಕುಮಾರಧಾರಾ ನದಿಗಳು ಸಂಗಮಿಸುತ್ತಿವೆ. ಉಪ್ಪಿನಂಗಡಿಯಲ್ಲಿರುವ ದೇವಾಲಯಗಳು ಲಕ್ಷ್ಮೀರಮಣ ಮತ್ತು ಸಹಸ್ರ ಲಿಂಗೇಶ್ವರ. ಕೊಯ್ಲ ಒಂದು ಪ್ರಮುಖ ಹೈನು ಕೇಂದ್ರ. ಮಂಗಳೂರಿನಿಂದ ಆಗ್ನೇಯಕ್ಕೆ 52 ಕಿ.ಮೀ. ದೂರದಲ್ಲಿದೆ. ವಿಸ್ತೀರ್ಣ 9.84 ಚ.ಕಿ.ಮೀ. ಜನಸಂಖ್ಯೆ 48,063 (2001). ಸಮುದ್ರ ಮಟ್ಟದಿಂದ ಸು. 111 ಮೀ. ಎತ್ತರದಲ್ಲಿರುವ ಈ ಸ್ಥಳದ ಸುತ್ತಲೂ ಏರುಗುಡ್ಡಗಳಿವೆ. ಇಲ್ಲಿಯ ಶ್ರೀ ಮಹಾಲಿಂಗೇಶ್ವರ ದೇವಾಲಯ ಈ ಪ್ರದೇಶದ ಪುರಾತನ ದೇವಾಲಯಗಳಲ್ಲೊಂದು. ಸುತ್ತಲೂ ದಿಬ್ಬದ ಪ್ರಾಕಾರ ಇರುವ ಈ ದೇವಾಲಯ ಗಜಪೃಷ್ಠಾಕಾರದ್ದಾಗಿ, ಹಿಂದೆ ಪುತ್ತೂರು ಬಲ್ಲಾಳರ ಹೆಗ್ಗಡೆ ಆಡಳಿತದಲ್ಲಿದ್ದ ಏಳ್ನಾಡು ಗುತ್ತಿನ ಸೀಮೆ ದೇವಾಲಯವೆಂದು ಇತಿಹಾಸ ಪ್ರಸಿದ್ಧವಾಗಿದೆ. ಹಿಂದೊಮ್ಮೆ ಕಾಶಿಯಿಂದ ಬರುತ್ತಿದ್ದ ವಿಪ್ರನೊಬ್ಬ ಇಲ್ಲಿ ಭಂಡಾರಿ ಹಿತ್ತಿಲು ಎಂದು ಆಗ ಕರೆಯುತ್ತಿದ್ದ ಸ್ಥಳದಲ್ಲಿ ತಾನು ಹೊತ್ತು ತಂದ ಶಿವಲಿಂಗವನ್ನಿಟ್ಟು ಪೂಜಿಸಿದನೆಂದೂ ಅವನು ಹಾಗೆಯೇ ನಿದ್ದೆ ಹೋಗಿ ಎಚ್ಚೆತ್ತು ಮುಂದಿನ ಪ್ರಯಾಣಕ್ಕೆ ಅಣಿಯಾಗಿ ಆ ಲಿಂಗವನ್ನು ಎತ್ತಲು ಪ್ರಯತ್ನಿಸಿದಾಗ ಕದಲಲಿಲ್ಲವೆಂದೂ ಪ್ರತೀತಿ. ಆಗ ಅವನು ಇಲ್ಲಿಯ ಬಂಗರಾಜನಿಗೆ ತನ್ನ ಕಷ್ಟವನ್ನು ಹೇಳಿಕೊಂಡ ಅವನ ಸೇವಕರಿಂದಾಗಲೀ, ಅವನು ಕಳುಹಿಸಿದ ಪಟ್ಟದ ಆನೆಯಿಂದಾಗಲೀ ಆ ಶಿವಲಿಂಗನ್ನು ಅಲುಗಾಡಿಸಲಾಗಲಿಲ್ಲ. ಆನೆಯೇ ಮೃತ ಹೊಂದಿ ಅದರ ಅಂಗಾಂಗಗಳು ಛಿದ್ರವಾಗಿ ಸೀಮೆಯಲ್ಲೆಲ್ಲ ಚೆಲ್ಲಿ ಬಿದ್ದುವು ಎಂದು ನಂಬಿಕೆ ಇದೆ. ಪುತ್ತೂರು ಪಟ್ಟಣದ ಸುತ್ತುಮುತ್ತಲಿರುವ ಕೊಂಬೆಟ್ಟು, ಕರಿಯಾಲ, ತಾರ್ಜಾಲು, ಕೈಪಳ, ಬೀದಿಮಜಲು, ತಾಳೆಪಾಡಿ, ಕಾರಿಯಲಕಾಡು, ಬೆರಿಪದವು ಮೊದಲಾದ ಸ್ಥಳಗಳ ಹೆಸರುಗಳು ಈ ಕಥೆಯ ಸಾಕ್ಷಿಗಳಂತಿವೆ. ಹೀಗೆ ಶಿವಲಿಂಗ ಹೂತ ಊರೆ ಹೂತೂರು, ಪುತ್ತೂರು ಆಗಿದ್ದಿರಬಹುದೆಂದು ಒಂದು ಊಹೆ. ಮಹಲಿಂಗೇಶ್ವರ ದೇವಾಲಯದ ಪೂರ್ವ ದಿಕ್ಕಿಗೆ ವಿಶಾಲವಾದ ತೇರುಗದ್ದೆ, ಪಶ್ಚಿಮಕ್ಕೆ ದೊಡ್ಡ ಕೆರೆ. ದೇವಾಲಯದ ಪ್ರದಕ್ಷಿಣ ಪಥದಲ್ಲಿ ಪರಿವಾರ ದೇವತೆಗಳ ಗುಡಿಗಳೂ ಕಾರ್ಯನಿರ್ವಾಹಕ ದೈವಗಳ ಗುಡಿಗಳೂ ಇವೆ. ಕೆರೆಯಲ್ಲಿ ಮುತ್ತು ಬೆಳೆಯುವುದೆಂದು ನಂಬಿಕೆ ಇದೆ. ಮೊದಲಲ್ಲಿ ಈ ಊರಿಗೆ ಮುತ್ತೂರು ಹೆಸರಿತ್ತೆಂದೂ ಅದೇ ಮಾರ್ಪಟ್ಟು ಪುತ್ತೂರು ಎಂದಾಯಿತೆಂದೂ ಹೇಳುವುದುಂಟು. ದೇವಾಲಯದ ಬಸವ ಕೆರೆಕಟ್ಟೆಯ ಅಶ್ವತ್ಥ ವೃಕ್ಷದಲ್ಲಿ ಗರುಡ-ಸರ್ಪಗಳ ವೈರವರ್ಜಿತವಾಸ, ಚಿನ್ನದ ತೆನೆ, ಪಚ್ಚೆ ಕಡಗ, ಮೊದಲಾದುವು ದೊರೆತ ಬಗೆ ಅಂಕದಗದ್ದೆಯ ಬಂಗಾರತಾಯ ಸ್ಥಳದ ವೈಶಿಷ್ಟ್ಯ. ಶ್ರೀದಂಡನಾಯಕ ಮತ್ತು ಉಳ್ಳಿ ಎಂಬ ದೈವಗಳು ನಿತ್ಯಾರ್ಚನೆ ಮತ್ತು ಉತ್ಸವ ಕಾಲದ ವಿಧಿವಿಧಾನಗಳು ಮುಂತಾದುವನ್ನು ಕುರಿತ ಅನೇಕ ಐತಿಹ್ಯಗಳಿವೆ. ಪ್ರತಿ ವರ್ಷ ಮೀನ ಮಾಸ 18 ರಂದು ಗೊನೆ ಕಡಿಯುವುದು, 27 ರಂದು ಧ್ವಜಾರೋಹಣ ಆಗಿ ಒಂಬತ್ತು ದಿನಗಳ ಕಾಲ ಇಲ್ಲಿ ಜಾತ್ರೆ ನಡೆಯುತ್ತದೆ. ದೇವಾಲಯದಲ್ಲಿ ಮೂರು ಶಿಲಾಶಾಸನಗಳಿವೆ. 13 ನೆಯ ಶತಮಾನದ್ದೆನ್ನಲಾದ ಒಂದು ಶಾಸನದಲ್ಲಿ ಮುತ್ತು ಬೆಳೆಯುವ ಕೆರೆಯಲ್ಲಿ ಮೀನು ಹಿಡಿಯುವುದು ನಿಷಿದ್ಧವೆನ್ನಲಾಗಿದೆ. ಹಿಂದೊಮ್ಮೆ ಕೊಡಗಿನ ಅರಸರ ಆಡಳಿತಕ್ಕೊಳಪಟ್ಟಿದ್ದ ಈ ಪ್ರದೇಶವನ್ನು ತಮಗೆ ಬಿಟ್ಟುಕೊಡುವುದಾದರೆ ಅದರ ಬದಲಿಗೆ ನಾಲ್ಕು ಪಾಲಿನಷ್ಟು ಪ್ರದೇಶವನ್ನು ಕೊಡುತ್ತೇವೆಂದು ಬ್ರಿಟಿಷರು ಹೇಳಿದರೆಂದೂ ಅರಸು ಹತ್ತೂರು ಕೊಟ್ಟರೂ ಪುತ್ತೂರನ್ನು ಕೊಡೆ ಎಂದು ನಿರಾಕರಿಸಿದನೆಂದೂ ಪ್ರತೀತಿ ಇದೆ. ಆದರೆ ಮುಂದೆ ಕೊಡಗು ಬ್ರಿಟಿಷರ ಅಧೀನವಾದಾಗ ಅವರು ಪುತ್ತೂರನ್ನು ಸರ್ಕಾರದ ನೆಲೆಯಾಗಿ ಮಾಡಿಕೊಂಡರು. ತರುವಾಯ ಕೋರ್ಟ್, ಕಚೇರಿ, ಪೇಟೆ, ಜನಸಮೂಹ ಮೊದಲಾದುವು ಹೆಚ್ಚಿ ಪುತ್ತೂರು ಮುನ್ನಡೆಯಿತು. ನಗರಸಭಾ ಆಡಳಿತವನ್ನು ಪಡೆದಿರುವ ಪುತ್ತೂರಿನಲ್ಲಿ ಈಗ ತಾಲ್ಲೂಕು ಮಟ್ಟದ ಎಲ್ಲ ಸರ್ಕಾರಿ ಕಚೇರಿಗಳು ಇರುವವಲ್ಲದೆ, ವಿವೇಕಾನಂದ ಮತ್ತು ಸೇಂಟ್ ಫಿಲೊಮಿನ ಕಾಲೇಜುಗಳಿವೆ. ಅಲ್ಲದೆ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಮಹಿಳೆಯರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಸಂಮ್ಮಿಶ್ರ ಕಿರಿಯ ಕಾಲೇಜ್ ಎರಡು ಪ್ರೌಢಶಾಲೆಗಳು ಮತ್ತು ಹಲವು ಹಿರಿಯ ಪ್ರಾಥಮಿಕ ಶಾಲೆಗಳು ಇವೆ. ಇಡೀ ಜಿಲ್ಲೆಯಲ್ಲೇ ಮೊದಲನೆಯದಾಗಿ ಸಹಕಾರ ಸಂಘ 1909 ರಲ್ಲಿ ಸ್ಥಾಪನೆಯಾದ್ದು ಪುತ್ತೂರಿನಲ್ಲಿ. ಸಹಕಾರ ರಂಗದಲ್ಲೂ ತಾಲ್ಲೂಕು ಬೋರ್ಡ್ ಅಧ್ಯಕ್ಷರಾಗಿ ಶಾಲೆಗಳ ಏಳಿಗೆಯಲ್ಲೂ ಸುದೀರ್ಘ ಕಾಲ ಪ್ರಶಂಸನೀಯ ಸೇವೆ ಸಲ್ಲಿಸಿದ ಮೊಳಹಳ್ಳಿ ಶಿವರಾಯರು ಪುತ್ತೂರಿನವರು.

ಸ್ಥಳ ನಾಮ ಹಿನ್ನೆಲೆ[ಬದಲಾಯಿಸಿ]

ಈ ಪಟ್ಟಣಕ್ಕೆ ಪುತ್ತೂರು ಎಂದು ಹೆಸರು ಬರುವುದಕ್ಕೆ ಐತಿಹಾಸಿಕ ಕಾರಣಗಳಿವೆ. ಇಲ್ಲಿರುವ ಪ್ರಮುಖ ದೇವಾಲಯ ಮಹತೋಭಾರ ಮಹಾಲಿಂಗೇಶ್ವರ ದೇವಸ್ಥಾನಕ್ಕೂ ಈ ಪಟ್ಟಣದ ಹೆಸರಿಗೂ ನಂಟಿದೆ. ಪುತ್ತೂರು ಹಿಂದೆ "ಬಂಗ" ವಂಶದ ಅರಸರ ರಾಜಧಾನಿಯಾಗಿತ್ತು. ಹಿಂದೆ ಈ ದೇವಾಲಯ ಹಿಂಭಾಗದಲ್ಲಿ ಭಾರೀ ದೊಡ್ಡ ಕೆರೆಯನ್ನು ಮಾಡಲಾಗಿತ್ತು. ಆದರೆ, ಅದರ ಆಳ ಎಷ್ಟೇ ಆದರೂ ನೀರು ದೊರಕಲೇ ಇಲ್ಲ. ಇದಕ್ಕಾಗಿ ದೇವಾಲಯದ ಆಡಳಿತ ವರ್ಗ ಸಾವಿರಾರು ಜನರಿಗೆ ಕೆರೆಯ ತಳದಲ್ಲಿ ಅನ್ನಸಂತರ್ಪಣೆ ವ್ಯವಸ್ಥೆ ಮಾಡಿದರು. ಜನರೆಲ್ಲರ ಹೊಟ್ಟೆ ತುಂಬುತ್ತಿದ್ದಂತೆ ಕೆರೆಯಲ್ಲಿ ನೀರು ತುಂಬತೊಡಗಿತಂತೆ. ಸೇರಿದ ಜನರೆಲ್ಲ ಎದ್ದು ಹೊರಗೆ ಓಡಿದರು. ಅವರ ಎಲೆಯಲ್ಲಿದ್ದ ಅನ್ನದ ಅಗಳುಗಳೇ ಮುತ್ತುಗಳಾಗಿ ಬೆಳೆದವಂತೆ. ಮುತ್ತುಗಳು ಬೆಳೆದ ಊರು -"ಮುತ್ತೂರು" ಎಂದಾಗಿ, ಕ್ರಮೇಣ ಜನರ ಬಾಯಲ್ಲಿ "ಪುತ್ತೂರು" ಎಂದಾಯಿತೆಂದು ಪ್ರತೀತಿ.

ಒಂದು ಸಿದ್ಧಾಂತದ ಪ್ರಕಾರ, ಪುತ್ತೂರು ಹೆಸರು ಕನ್ನಡ ಭಾಷೆಯ "ಮುತ್ತು" ಮುತ್ತೂರು ಎಂದಾಗಿತ್ತು ಮತ್ತು ನಂತರ ನಿಧಾನವಾಗಿ ಇದು ತಾನಾಗಿಯೇ ಪುತ್ತೂರು ಎಂಬ ಹೆಸರಾಗಿ ಪ್ರಚಲಿತಕ್ಕೆ ಬಂದಿದೆ.ಶತಮಾನಗಳ ಹಿಂದೆ ಬರದ ಸಮಯದಲ್ಲಿ ಆರ್ಚಕರಿಗೆ ಮಹಾಲಿಂಗೇಶ್ವರ ದೇಗುಲದ ಪವಿತ್ರ ಕೊಳದಲ್ಲಿ ಅಕ್ಕಿಯು ಪ್ರಸಾದ ರೂಪದಲ್ಲಿ ದೊರಕಿತ್ತು ಮತ್ತು ಇದಕ್ಕಿದ್ದಂತೆ ಎಲ್ಲಾ ಮೂಲೆಯಿಂದ ನೀರು ಬರಲು ಆರಂಭಿಸಿ ಈ ಅಕ್ಕಿ ಮುತ್ತಾಗಿ ಪರಿವರ್ತನೆಯಾಯಿತು ಎಂಬ ನಂಬಿಕೆ ಇಲ್ಲಿದೆ.

ಇತರ ಸಿದ್ಧಾಂತದ ಪ್ರಕಾರ ತುಳು ಭಾಷೆಯ ಪುತ್ತದಿಂದ ಪುತ್ತೂರು ಹೆಸರು ಬಂತು. ಪುತ್ತ ಎಂದರೆ ಕನ್ನಡದ ಹುತ್ತ, ಅಂದರೆ ಹಾವುಗಳು/ಇರುವೆಗಳು ಇರುವ ಮಣ್ಣಿನ ಗೂಡು.

ಭೌಗೋಳಿಕ ವಿವರಗಳು[ಬದಲಾಯಿಸಿ]

ಪುತ್ತೂರು ನಲ್ಲಿ ಇದೆ 12°46′N 75°13′E / 12.77°N 75.22°E / 12.77; 75.22 .[೧] ಇದು 87 ಮೀಟರ್ ಗಳು (285 ಅಡಿ) ಒಂದು ಸರಾಸರಿ ಉನ್ನತಿಯನ್ನು ಹೊಂದಿದೆ.

ಪಟ್ಟಣದ ಪುರಸಭಾ ಪ್ರದೇಶಗಳು- ಬಲ್ನಾಡು, ಪಡ್ನೂರು, ಕಬಕ ಬನ್ನೂರು, ಚಿಕ್ಕಮೂಡ್ನೂರು, ಕೆಮ್ಮಿಂಜೆ, ಆರ್ಯಾಪು ಗ್ರಾಮಗಳನ್ನು ಹೊಂದಿದೆ. ಇದರಲ್ಲಿ ಪುತ್ತೂರು ಕಸಬಾ ದಟ್ಟವಾದ ಜನಸಂಖ್ಯೆಯನ್ನು ಹೊಂದಿದೆ. ದಕ್ಷಿಣ ಕನ್ನಡ ಜಿಲ್ಲೆಯ ಶ್ರೀಮಂತ ನಗರವೆಂಬ ಖ್ಯಾತಿಯನ್ನೂ ಪುತ್ತೂರು ಪಡೆದಿದೆ.

ನಾಗರಿಕ ಆಡಳಿತ[ಬದಲಾಯಿಸಿ]

ಪಟ್ಟಣ ಪಂಚಾಯತ್ ಆಗಿದ್ದ ಪುತ್ತೂರು ನಗರಾಡಳಿತವನ್ನು 1973ರಲ್ಲಿ ಪುತ್ತೂರು ನಗರ ಮುನ್ಸಿಪಲ್ ಕೌನ್ಸಿಲ್ ಎಂದು ಮಾಡಲಾಯಿತು. ಆರಂಭದಲ್ಲಿ ಟಿಎಂಸಿ ಆವರಿಸಿರುವ ಕ್ಷೇತ್ರವು 11 ಕಿ.ಮೀ. ದೂರದ ಕಸಬದವರೆಗೆ ಮಾತ್ರವಿತ್ತು. ನಂತರ 1996 ಇಸವಿಯಲ್ಲಿ ನಗರದಿಂದ 34 ಕಿ.ಮೀ. ವ್ಯಾಪ್ತಿಯಲ್ಲಿ ಪಕ್ಕದ ಹಳ್ಳಿಗಳನ್ನು 27 ಕೌನ್ಸಿಲರ್ ವಾರ್ಡ್ ಮೂಲಕ ನಗರ ಮುನ್ಸಿಪಾಲಿಟಿ ಜೊತೆ ವಿಲೀನಗೊಳಿಸಲಾಯಿತು.

ಪುತ್ತೂರು ನಗರವು ದಕ್ಷಿಣ ಕನ್ನಡ ಜಿಲ್ಲೆಯ ಎರಡನೇ ದೊಡ್ಡ ಪಟ್ಟಣ ಆಗಿದೆ. ಮಂಗಳೂರು - ಮೈಸೂರು ಹೆದ್ದಾರಿ (ಬಂಟ್ವಾಳ -ಮೈಸೂರು ರಾಜ್ಯ ಹೆದ್ದಾರಿ 88)ಯಲ್ಲಿರುವ ಇದು ಮಂಗಳೂರು, ಜಿಲ್ಲಾ ಹೆಡ್ ಕ್ವಾರ್ಟರ್ ನಿಂದ 52 ಕಿಮೀ ದೂರದಲ್ಲಿದೆ. ಈಗಿನ ಸುಳ್ಯ ತಾಲ್ಲೂಕು, ಬೆಳ್ತಂಗಡಿ ತಾಲ್ಲೂಕು ಮತ್ತು ಬಂಟ್ವಾಳl ತಾಲ್ಲೂಕು, ಬಂಟ್ವಾಳ ತಾಲೂಕಿನ ವಿಟ್ಲಕ್ಕೆ ಪ್ರಧಾನ ತಾಲೂಕು ಕೇಂದ್ರವಾಗಿತ್ತು. ತಾಲೂಕಿನ ಪುನರ್ ಸಂಘಟನೆ ನಂತರ 68 ಹಳ್ಳಿಗಳನ್ನು ಒಳಗೊಂಡ 37 ಗ್ರಾಮ ಪಂಚಾಯತುಗಳಿಗೆಪುತ್ತೂರು ಪ್ರಧಾನ ಕಾರ್ಯಸ್ಥಾನವಾಗಿದೆ. ತಾಲೂಕುಗಳ ಪುನರ್ ಸಂಘಟನೆಯ ನಂತರ ಸುತ್ತಮುತ್ತಲಿನ ತಾಲೂಕುಗಳಿಗೆ ಪುತ್ತೂರು ನಗರವು ಆರ್ಥಿಕ, ಶೈಕ್ಷಣಿಕ ಮತ್ತು ವೈದ್ಯಕೀಯ ಸೇವೆಗಳ ಮುಖ್ಯ ಕೇಂದ್ರವಾಗಿ ಮುಂದುವರಿದಿದೆ. ಈ ತಾಲೂಕಿನ ದಕ್ಷಿಣ ಭಾಗಗಳನ್ನು ಕೇರಳ ರಾಜ್ಯದ ಹಳ್ಳಿಗಳು ಸುತ್ತುವರೆದಿವೆ.

ಆರ್ಥಿಕತೆ[ಬದಲಾಯಿಸಿ]

ಕೃಷಿ[ಬದಲಾಯಿಸಿ]

ಭಾರಿ ಮಳೆ ಸುರಿಯುವ ಪಶ್ಚಿಮ ಘಟ್ಟದ ಸಮೃದ್ಧ ಹಸಿರು ಕಾಡುಗಳಿಂದ ಆವೃತ್ತವಾದ ಪುತ್ತೂರು ಕರಾವಳಿ ಪ್ರದೇಶದ ಒಂದು ಕೃಷಿ ಆಧಾರಿತ ಪಟ್ಟಣವಾಗಿದೆ. ಇಲ್ಲಿನ ಜನರ ಪ್ರಮುಖ ಉದ್ಯೋಗ ಕೃಷಿಯಾಗಿದೆ. ಇಲ್ಲಿ ಪ್ರಮುಖವಾಗಿ ಬೆಳೆಯುವ ಬೆಳೆಗಳು: ಬತ್ತ, ಅಡಿಕೆ, ತೆಂಗು, ಗೋಡಂಬಿ, ರಬ್ಬರ್, ಕೋಕೋ ಬೀಜ, ಮೆಣಸಿನಕಾಯಿ, ವೆನಿಲಾ, ಮೆಣಸು ಮತ್ತು ಬಾಳೆ. ಜೊತೆಗೆ ಹೈನುಗಾರಿಕೆ, ರೇಷ್ಮೆ ವ್ಯವಸಾಯ ಮತ್ತು ತೋಟಗಾರಿಕೆ ಚಟುವಟಿಕೆಗಳು ಕೆಲವು ಜನರ ಗಳಿಕೆಗೆ ನೆರವಾಗಿದೆ.

ಕ್ಯಾಂಪ್ಕೊ ಚಾಕೊಲೇಟ್ ಫ್ಯಾಕ್ಟರಿ[ಬದಲಾಯಿಸಿ]

ಕ್ಯಾಂಪ್ಕೊ ಚಾಕೊಲೇಟ್ ಫ್ಯಾಕ್ಟರಿ

ಇದು ಕೇರಳ ಸರಕಾರ ಮತ್ತು ಕರ್ನಾಟಕ ಜಂಟಿ ಉದ್ಯಮವಾಗಿದೆ. ಎರಡೂ ರಾಜ್ಯಗಳ ಕೊಕೊ ಬೀಜ ಬೆಳೆಗಾರರ ಕಲ್ಯಾಣ ಪ್ರೋತ್ಸಾಹಿಸುವ ಉದ್ಯಮ ಇದಾಗಿದೆ. ಹಾಲೆಂಡ್ ಆಮದು ಯಂತ್ರೋಪಕರಣ ಹೊಂದಿರುವ ಇದು ಏಷ್ಯಾ ಖಂಡದಲ್ಲೇ ಅತಿದೊಡ್ಡ ಕ್ಯಾಂಪ್ಕೊ ಚಾಕೊಲೇಟ್ ಕಾರ್ಖಾನೆ. ಈ ಕಾರ್ಖಾನೆಯಲ್ಲಿ ಉತ್ಪಾದಿಸುವ ಕೋಕಾ ಬಟರ್ ಹೆಚ್ಚಿನ ಭಾಗವು ರಫ್ತಾಗುತ್ತಿದೆ. ಇಲ್ಲಿ ತಯಾರಿಸುವ ವಿಭಿನ್ನ, ಬಗೆಬಗೆಯ ಚಾಕೊಲೇಟ್ಗೆ ಸ್ಥಳೀಯ ಮಾರುಕಟ್ಟೆಯಲ್ಲಿ ಬೇಡಿಕೆ ಪಡೆದುಕೊಂಡಿದೆ ಮತ್ತು ಕೆಲವು ಚಾಕೊಲೇಟ್ ಗಳು ರಫ್ತಾಗುತ್ತಿವೆ. ನೆಸ್ಲೆ ಕಂಪನಿಯು ಕ್ಯಾಂಪ್ಕೊ ಜೊತೆಗೆ ಒಪ್ಪಂದ ಮಾಡಿಕೊಂಡಿದೆ ಅದರ ಬ್ರಾಂಡ್ ಹೆಸರಿನಲ್ಲಿ ಚಾಕೊಲೇಟ್ ಉತ್ಪಾದಿಸುತ್ತದೆ. ಈ ಚಾಕೊಲೇಟ್ ಕೊಕೊ ಬೆಳೆಗಾರರಿಗೆ ಹೊಸ ಜೀವನ ನೀಡಿದೆ. ಇದರ ಕಾರ್ಯಾರಂಭ ಆರಂಭವಾದ ಸಮಯದಲ್ಲಿ ದೇಶದ ದೊಡ್ಡ ಚಾಕೊಲೇಟ್ ಫ್ಯಾಕ್ಟರಿ ಇದಾಗಿತ್ತು.

ಜನಸಂಖ್ಯಾ ವಿವರ[ಬದಲಾಯಿಸಿ]

As of 2011 ಭಾರತದ ಜನಗಣತಿ, ಪ್ರಕಾರ [೨] ಪುತ್ತೂರು 52000 ಜನಸಂಖ್ಯೆಯನ್ನು ಹೊಂದಿತ್ತು. ಜನಸಂಖ್ಯೆಯಲ್ಲಿ ಪುರುಷರು ಮತ್ತು ಮಹಿಳೆಯರು 50:50 ಇದ್ದಾರೆ. ಸರಾಸರಿ ಸಾಕ್ಷರತೆಯ ಪ್ರಮಾಣವು 86.02% ಇದೆ. ಇದು ರಾಷ್ಟ್ರೀಯ ಸಾಕ್ಷರತೆ ಸರಾಸರಿ 74.4%ಕ್ಕಿಂತ ಅಧಿಕ. ಇಲ್ಲಿ ಪುರುಷರ ಸಾಕ್ಷರತೆ 83% ಮತ್ತು ಮಹಿಳೆಯರ ಸಾಕ್ಷರತೆ 75% ಇದೆ. ಒಟ್ಟು ಜನಸಂಖ್ಯೆಯ 11% ರಷ್ಟು 6 ವರ್ಷ ವಯೋಮಿತಿಗಿಂತ ಕೆಳಗಿನವರು.ತುಳು, ಕನ್ನಡ, ಮಲಾಮೆ, ಬ್ಯಾರಿ, ಕೊಂಕಣಿ ಮತ್ತು ಮಲಯಾಳಂ ಇಲ್ಲಿನ ಜನರು ಮಾತನಾಡುವ ಭಾಷೆಗಳು.

ಸಾರಿಗೆ[ಬದಲಾಯಿಸಿ]

ರೈಲು ಸಾರಿಗೆ ಕಬಕ ಪುತ್ತೂರು ರೈಲ್ವೆ ನಿಲ್ದಾಣವು ಮಂಗಳೂರು ಮತ್ತು ಬೆಂಗಳೂರು ಸಂಪರ್ಕಿಸುವ ರೈಲುಮಾರ್ಗದಲ್ಲಿದೆ. ಇದು ಪುತ್ತೂರು ನಗರ ಕೇಂದ್ರದಿಂದ ಸುಮಾರು 1 ಕಿಮಿ ದೂರದಲ್ಲಿ ಸಾಲ್ಮರ ಎ.ಪಿ.ಎಂ.ಸಿ ಮಾರುಕಟ್ಟೆಯ ಬಳಿಯಾಗಿ ಇದೆ.

ವಾಯುಸಾರಿಗೆ ಪುತ್ತೂರಿಗೆ ಹತ್ತಿರದ ವಿಮಾನ ನಿಲ್ದಾಣವು ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣವಾಗಿದ್ದು, ಪುತ್ತೂರುನಿಂದ 55 ಕಿ.ಮೀ. ದೂರದಲ್ಲಿದೆ.

ರಸ್ತೆ: ಮಂಗಳೂರು - ಮೈಸೂರು ರಾಜ್ಯ ಹೆದ್ದಾರಿಯಲ್ಲಿ ಪುತ್ತೂರು ಇದೆ ಮತ್ತು ಮಂಗಳೂರಿನಿಂದ ಪುತ್ತೂರಿಗೆ 52 ಕಿಮೀ ದೂರವಿದೆ. ಉಪ್ಪಿನಂಗಡಿಯ ರಾಷ್ಟ್ರೀಯ ಹೆದ್ದಾರಿ ರಾಷ್ಟ್ರೀಯ ಹೆದ್ದಾರಿ ಎನ್ಎಚ್-48 (ಮಂಗಳೂರು-ಬೆಂಗಳೂರು) ಪುತ್ತೂರು ನಗರದಿಂದ 12 ಕಿಮೀ ದೂರದಲ್ಲಿದೆ.

ಪ್ರವಾಸೋದ್ಯಮ[ಬದಲಾಯಿಸಿ]

ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ವನ್ನು ೧೧-೧೨ ನೇ ಶತಮಾನದಲ್ಲಿ ನಿರ್ಮಿಸಲಾಗಿದೆ ಎಂದು ಹೇಳಲಾಗುತ್ತದೆ ಪುರಾತನ ದೇವಸ್ಥಾನ, ಶಿವ (ಪುತ್ತೂರು ಮಹಾಲಿಂಗೇಶ್ವರ ಎಂದೆ ಜನಪ್ರಿಯ) ಈ ದೇವಸ್ಥಾನದ ಮುಖ್ಯ ದೇವರು. ನೀವು ಈ ದೇವರ ಫೋಟೋ ಇಲ್ಲವೇ ವಿಗ್ರಹವನ್ನು ಇಡಿ ತಾಲೂಕಿನಾದ್ಯಂತ ಹೆಚ್ಚಿನ ಮನೆ ಅಂಗಡಿಗಳಲ್ಲಿ ಕಾಣಬಹುದು. ಈ ದೇವರನ್ನು ಪುತ್ತೂರು ತಾಲ್ಲೂಕಿನ ರಕ್ಷಕನೆಂದೇ ನಂಬಲಾಗಿದೆ. ಈ ದೇವಸ್ಥಾನದ ಆವರಣದ ಪಶ್ಚಿಮ ಬದಿಯಲ್ಲಿ ನೀರಿನ ಕೊಳವೊಂದನ್ನು ನೋಡಬಹುದು. ಇದೇ ಕೊಳದಲ್ಲಿ ಪುರಾತನ ಕಾಲದಲ್ಲಿ ಮುತ್ತುಗಳು ಸಿಕ್ಕಿದ್ದವು ಎಂದು ಹೇಳಲಾಗುತ್ತದೆ. ಸ್ಥಳೀಯ ಉಪಭಾಷೆಯಲ್ಲಿ ಕನ್ನಡದ ಮುತ್ತು ಕ್ರಮೇಣ ಮುತ್ತೂರು ಆಗಿ ನಂತರ ಪುತ್ತೂರು ಎಂಬ ಹೆಸರು ಬಂತು. ಏಪ್ರಿಲ್ ತಿಂಗಳಲ್ಲಿ ಇಲ್ಲಿ ಮಹಾಲಿಂಗೇಶ್ವರ ದೇವರ ರಥೋತ್ಸವವನ್ನು10 ದಿನಗಳ ಕಾಲ ಅತ್ಯುತ್ಸಾಹ ಮತ್ತು ಸಂಭ್ರಮದಿಂದ ಆಚರಿಸಲಾಗುತ್ತದೆ. ಈ ಸಮಯದಲ್ಲಿ ಪುತ್ತೂರಿನಲ್ಲಿ ಪ್ರಶಿದ್ಧ ಬೆಡಿ(ಪಟಾಕಿ)ಯ ವರ್ಣರಂಜಿತ, ಅದ್ಭುತ ಪ್ರದರ್ಶನವಿರುತ್ತದೆ. ಪುತ್ತೂರಿನ ಬೆಡಿ ಹತ್ತೂರಿನಲ್ಲಿ ಜನಪ್ರಿಯವಾಗಿದೆ. ಜಾತ್ರೆಯ ಸಮಯದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಜನರು ಪುತ್ತೂರಿಗೆ ಭೇಟಿ ನೀಡುತ್ತಾರೆ.'[೧][ಶಾಶ್ವತವಾಗಿ ಮಡಿದ ಕೊಂಡಿ]??

ಪುತ್ತೂರು ಕಂಬುಲ

ಪುತ್ತೂರು ಮಹಾಲಿಂಗೇಶ್ವರ ದೇಗುಲದ ಮತ್ತೊಂದು ವಿಶೇಷತೆಯೆಂದರೆ ಆನೆಗಳು ದೇವಾಲಯದ ಆವರಣಕ್ಕೆ ಎಂದಿಗೂ ಪ್ರವೇಶ ಪಡೆಯಲು ಅವಕಾಶವಿಲ್ಲ.. ಇದರ ಹಿಂದೆಯೂ ಸ್ವಾರಸ್ಯಕರ ಕಥೆಯೊಂದಿದೆ. ಒಮ್ಮೆ ಕಳ್ಳನೊಬ್ಬ ದೇವಾಲಯ ಪ್ರವೇಶಿಸಿ ಪ್ರಮುಖ ವಿಗ್ರಹವನ್ನು ಕದ್ದು ಪಾರಾಗಲೂ ಸಾಧ್ಯವಾಗದೇ ಕೊಳದೊಳಗೆ ಈ ವಿಗ್ರಹವನ್ನು ಎಸೆದಿದ್ದ. ಕೊಳದ ಆಳಕ್ಕೆ ಬಿದ್ದಿದ್ದ ಆ ವಿಗ್ರಹವನ್ನು ಮೇಲೆತ್ತಲು ಆನೆಯೊಂದನ್ನು ತರಲಾಯಿತು. ಹಗ್ಗವೊಂದನ್ನು ವಿಗ್ರಹಕ್ಕೆ ಕಟ್ಟಿ ಎಳೆಯಲಾಯಿತು. ಆದರೆ ಆನೆಯು ಮಹಾಲಿಂಗೇಶ್ವರ ವಿಗ್ರಹವನ್ನು ಗಟ್ಟಿಯಾಗಿ ಎಳೆದದ್ದು ಮಹಾಲಿಂಗೇಶ್ವರನಿಗೆ ಕೋಪ ತರಿಸಿತು. ನಂತರ ಆನೆಯು ಈ ದೇವಾಲಯಕ್ಕೆ ಶಾಪಗ್ರಸ್ತವಾಗಿದ್ದು, ಯಾವುದೇ ಆನೆ ದೇಗುಲದ ಆವರಣಕ್ಕೆ ಪ್ರವೇಶಿಸಬಾರದು ಮತ್ತು ಪ್ರವೇಶಿಸಿದರೆ ಆನೆ ಸಾವನ್ನಪುತ್ತದೆ ಎನ್ನುವುದು ಇಲ್ಲಿನ ನಂಬಿಕೆ.

ಜುಮಾ ಮಸೀದಿ ಕಲ್ಲೇಗ: 300 ವರ್ಷಗಳ ಹಿಂದೆ ಬ್ರಿಟಿಷರ ವಿರುದ್ಧ ಹೋರಾಡುತ್ತಿದ್ದ ಮೈಸೂರು ಆಡಳಿತಗಾರರಾದ ಟಿಪ್ಪು ಸುಲ್ತಾನ್ ಇದನ್ನು ಪುತ್ತೂರಿನಲ್ಲಿ ಕಟ್ಟಿಸಿದ್ದರು. ಈ ಮಸೀದಿಯನ್ನು ಪುತ್ತೂರು ಬಳಿಯ ಕಲ್ಲೇ ಎಂಬಲ್ಲಿ ನಿರ್ಮಿಸಲಾಯಿತು. ನಂತರ ಕಲ್ಲೆ {/} ಎನ್ನುವುದನ್ನು ಸ್ಥಳೀಯ ಜನರ ಬಾಯಲ್ಲಿ ಕಲ್ಲೇಗಾ ಎಂದು ಕರೆಯಲ್ಪಟ್ಟಿತ್ತು. ಇದು ಪಟ್ಟಣದ ಹಳೆಯ ಮಸೀದಿಯಾಗಿದೆ.

ಬೆಂದ್ರ್ ತೀರ್ಥ (ಬಿಸಿನೀರ ಬುಗ್ಗೆ ):

ಬೆಂದ್ರ್ ತೀರ್ಥ (ಬಿಸಿನೀರ ಬುಗ್ಗೆ )

ಪುತ್ತೂರಿಗೆ ೧೫ ಕಿ. ಮಿ ದೂರದಲ್ಲಿ ಒಂದು ನೈಸರ್ಗಿಕ ಬಿಸಿನೀರಿನ ಬುಗ್ಗೆಯಿದೆ. ( ತುಳು ಭಾಷೆಯಲ್ಲಿ ಬೆಂದ್ರು ತೀರ್ಥ) ಈ ನೀರಿನಲ್ಲಿ ಮಿಂದರೆ ಮಂಗಳಕರ ಅಷ್ಟೇ ಅಲ್ಲ ಎಸ್ಜಿಮಾ, ಅಲರ್ಜಿ ರೋಗಗಳಿಗು ರಾಮಬಾಣವೆಂದು ಸ್ಥಳಿಯರು ನಂಬುತ್ತಾರೆ. ನಯನ ಮನೋಹರವಾದ ಪ್ರದೇಶದಲ್ಲಿರುವ ಈ ಬುಗ್ಗೆಯು ದಕ್ಷಿಣ ಮುಖವಾಗಿ ಹರಿದು ಅರಬ್ಬೀ ಸಮುದ್ರ ಸೇರುವ ಸೀರೆ ಹೊಳೆಯ ದಡದಲ್ಲಿದೆ. ಈ ರೀತಿಯ ಪ್ರಕೃತಿ ವೈಚಿತ್ರ ಭಾರತದೇಶದಲ್ಲಿ ಒಟ್ಟು ೩ ಕಡೆ ಇದ್ದು, ದಕ್ಷಿಣ ಭಾರತದಲ್ಲಿ ಇದೊಂದೇ ಎನ್ನಲಾಗಿದೆ..

ಬೀರಮಲೆಬೆಟ್ಟ ಬೀರಮಲೆ ಪುತ್ತೂರಿನ ಒಂದು ಆಕರ್ಷಕ ಪ್ರವಾಸೀ ತಾಣವಾಗಿದೆ. ಈ ಬೆಟ್ಟವು ಸಮುದ್ರ ಮಟ್ಟದಿಂದ ಸುಮಾರು 1000 ಅಡಿ ಎತ್ತರದಲ್ಲಿದೆ. ದೂರದರ್ಶನದ ಟಿವಿ ಪ್ರಸಾರ ಕೇಂದ್ರವನ್ನು ಈ ಬೆಟ್ಟದ ಮೇಲೆ ಸ್ಥಾಪಿಸಲಾಗಿದೆ. ಇಲ್ಲಿ ಒಂದು ಸಭಾಂಗಣ, ಗ್ರಂಥಾಲಯಗಳಿದ್ದು ಸಾರ್ವಜನಿಕರಿಗೆ ಮುಕ್ತವಾಗಿವೆ. ಬೆಟ್ಟದ ಒಂದು ಬದಿಯಲ್ಲಿ ಶ್ರೀ ವಿಶ್ವಕರ್ಮ ದೇವಸ್ಥಾನವಿದೆ.

ಡಾ ಶಿವರಾಮ ಕಾರಂತರ ಬಾಲವನ: ಜ್ಞಾನಪೀಠ ಪ್ರಶಸ್ತಿ ವಿಜೇತರಾದ ಡಾ.ಕೆ ಶಿವರಾಮ ಕಾರಂತರು, ಸುಮಾರು 40 ವರ್ಷಗಳ ಕಾಲ ಇಲ್ಲಿ ವಾಸವಿದ್ದರು. ಶಿವರಾಮ ಕಾರಂತರು ಹೆಚ್ಚಿನ ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಕೊಡುಗೆಗಳು ಇಲ್ಲಿವೆ. ಅವರೊಬ್ಬರು ಸಾಹಿತ್ಯದ ಕ್ಷೇತ್ರದ ದೈತ್ಯ ಪ್ರತಿಭೆ. ಅವರ ಬಹುತೇಕ ಕೊಡುಗೆಗಳು ಇಲ್ಲೇ ಪ್ರಕಟಣೆಗೊಂಡಿರುವುದು. ಅವರ ಪುಸ್ತಕಗಳು ಗಳಿಸಿದ ಖ್ಯಾತಿಯಿಂದ ಕಾರಂತರಿಗೆ ಮತ್ತು ಪುತ್ತೂರಿಗೆ ಹೆಸರು ಬಂದಿತು. ಈಗ ಬಾಲವನವು ಕರ್ನಾಟಕ ಸರ್ಕಾರದ ಅಧೀನದಲ್ಲಿದೆ ಮತ್ತು ಈ ಕೆಂದ್ರವನ್ನು ನಿರ್ವಹಿಸಲು ಸರ್ಕಾರವು ಒಂದು ಸಮಿತಿಯನ್ನು ರಚಿಸಿದೆ. ಬಾಲವನವು ಪುತ್ತೂರಿನಿಂದ 2 ಕಿಮೀ ದೂರದಲ್ಲಿರುವ ಪರ್ಲಡ್ಕದಲ್ಲಿದೆ.

ಕಾರಂತರ ಸಾಹಿತ್ಯಿಕ ಚಟುವಟಿಕೆಗಳನ್ನು ಸಾರ್ವಜನಿಕರಿಗೆ ಪರಿಚಯಿಸುವ ಒಂದು ಆಕರ್ಷಕ ಮ್ಯೂಸಿಯಂ ಸ್ಥಾಪಿಸಿಲಾಗಿದೆ. ಇಲ್ಲಿ ಮಕ್ಕಳಿಗೆ ಈಜು ಕಲಿಸಲು ಈಜು ಕೊಳ ನಿರ್ಮಿಸಲಾಗಿದೆ. ಬೇಸಿಗೆ ಶಿಬಿರಗಳು ಪಟ್ಟಣ ಮತ್ತು ಕಲೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಕ್ಷೇತ್ರದಲ್ಲಿ ಪಟ್ಟಣ ಮತ್ತು ಸುತ್ತಮುತ್ತಲ ಪ್ರದೇಶಗಳ ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಹೊರತರುವ ಸಲುವಾಗಿ ಬೇಸಿಗೆ ಶಿಬಿರಗಳನ್ನು ಏರ್ಪಡಿಸಲಾಗುತ್ತದೆ. ಆ ಮೂಲಕ ಅವರಲ್ಲಿರುವ ಕಲೆ ಮತ್ತು ಸಾಂಸ್ಕೃತಿಕ ಸುಪ್ತ ಪ್ರತಿಭೆಯನ್ನು ಹೊರತರಲಾಗುತ್ತದೆ.

ಡಿ ಡೀಯುಸ್ ಚರ್ಚ್: ಇದು ಗೋಥಿಕ್ ಶೈಲಿಯಲ್ಲಿ ಗೋವಾದ ರೋಮನ್ ಕ್ಯಾಥೊಲಿಕ್ ಪಾದ್ರಿಗಳಿಂದ 1830 ರಲ್ಲಿ ನಿರ್ಮಿಸಿದ ಪ್ರಾಚೀನ ಚರ್ಚ್ ಗಳಲ್ಲಿ ಒಂದಾಗಿದೆ. ಸೊಗಸಾದ ವಾಸ್ತುಶಿಲ್ಪ ವಿನ್ಯಾಸಕ್ಕೆ ಈ ಪವಿತ್ರ ಚರ್ಚನ್ನು ನವೀಕರಿಸಲಾಗಿದೆ.

ಮರೀಲ್ ಚರ್ಚ್: 1999 ರಲ್ಲಿ ನಿರ್ಮಾಣ

ಪೀರ್ ಮೊಹಲ್ಲಾಜುಮಾ ಮಸೀದಿ, ಕೂರ್ನಡ್ಕ: ಟಿಪ್ಪು ಸುಲ್ತಾನ್ ಆಳ್ವಿಕೆಯಿಂದ ಕೂರ್ನಡ್ಕವು ಐತಿಹಾಸಿಕ ಸ್ಥಳವಾಗಿ ಮಹತ್ವ ಪಡೆದಿದೆ.ಕೆಲವು ಸೈನಿಕ ಕುಟುಂಬಗಳು ಈ ಸ್ಥಳದಲ್ಲಿ ನೆಲೆಸಿದ್ದರು ಮತ್ತು ಅವರು ಈ ಸ್ಥಳಕ್ಕೆ ಕೂರ್ ಎಂದು ಹೆಸರಿಟ್ಟಿದ್ದರು. ಕೂರ್ ಎನ್ನುವುದು ಅಫ್ಘಾನಿಸ್ತಾನ ಮೂಲದ ಹೆಸರು(ಅಬು ಖಾನ್, ಸಯ್ಯದ್, ಶೇಕ್ ಸಾಹೇಬ್, ಪತ್ನಿ ವಾಲಾ, ಮೊಯ್ದಿನ್ ಪಠಾನ್, ಮತ್ತು ಕೂರ್ಗ್ ಸಾಹೇಬ್ ಕುಟುಂಬಗಳು ಅಫ್ಗಾನಿಸ್ತಾನ ಮೂಲದವರು). ಇವರೆಲ್ಲರು ಸೂಫಿ ಸಂತರು ಮತ್ತು ಇಮಾಮ್ ಅಬು ಹನೀಫಾ ಅನುಯಾಯಿಗಳು. 1899ರಲ್ಲಿ "ಪೀರ್ ಝದೆ ಮುಸ್ತಾದ್ ಹಬಿದುಲ್ಲಾ ಶಾ ಮುಸ್ತಾನ್' ಒಂದು ಮಹಾನ್ ಶಕ್ತಿಶಾಲಿ ಸೂಫಿ ಸಂತರಾಗಿದ್ದರು. ಅವರು ಕೂರ್ನಡ್ಕಕ್ಕೆ ಬಂದು ಇಸ್ಲಾಂ ಧರ್ಮ ಬೋಧಿಸಿದ್ದರು. ಅವರ ಸಾವಿನ ನಂತರ ಅನುಯಾಯಿಯೊಬ್ಬರುಕೂರ್ ನಲ್ಲಿ ಮಸೀದಿ ನಿರ್ಮಾಣಕ್ಕೆ ಸ್ಥಳ ನೀಡಿದ್ದರು. ಈಗ ಈ ಸ್ಥಳವು ಕೂರ್ನಡ್ಕ [clarification needed]ವಾಗಿ ಪ್ರಶಿದ್ಧಿ ಪಡೆದಿದೆ.

ಮಾಡನ್ನೂರು ದರ್ಗಾ ಪುತ್ತೂರಿನಿಂದ 17 ಕಿ.ಮಿ ದೂರದಲ್ಲಿ ಸುಳ್ಯ ರಸ್ತೆಮೂಲಕ ಸಂಚರಿಸಿ ಅಲ್ಲಿಂದ ಈಶ್ವರಮಂಗಳ ರಸ್ತೆಮೂಲಕ 1 ಕಿ.ಮಿ ಮುಂದೆ ಹೋಗುವಾಗ ಭವ್ಯವಾದ ಮಸೀದಿ ಹಾಗು ಅದರ ಪಕ್ಕದಲ್ಲೇ ಕಾಣುವ ದರ್ಗಾವಾಗಿರುತ್ತದೆ ಮಾಡನ್ನೂರು ದರ್ಗಾ, ಇಲ್ಲಿಗೆ ಹಲವಾರು ಭಾಗಗಳಿಂದ ಜರು ಭೇಟಿಕೊಡುತ್ತಾರೆ.

ಗೋಡಂಬಿಯ ರಾಷ್ಟ್ರೀಯ ಸಂಶೋಧನಾ ಕೇಂದ್ರ ಮೊಟ್ಟೆತ್ತಡ್ಕ ಎಂಬಲ್ಲಿ ಇದೆ

ಪಂಚಮುಖಿ ಆಂಜನೇಯ ದೇವಸ್ಥಾನ ಈಶ್ವರಮಂಗಲದಲ್ಲಿದೆ

ಪಡುಮಲೆ ತುಳು ಜಾನಪದ ವೀರರಾದ ಕೋಟಿ-ಚೆನ್ನಯರ ಹುಟ್ಟಿದ ಸ್ಥಳ ಪಡುಮಲೆ ಪುತ್ತೂರಿನ ಸಮೀಪದಲ್ಲಿದೆ.

ಕರವಡ್ತ ವಲಿಯುಲ್ಲಾಹಿ ಮಖಾಂ ಶರೀಫ್: ಪುತ್ತೂರು ನಗರ ಮದ್ಧ್ಯದಲ್ಲಿರುವ ಪ್ರಮುಖ ಸೂಫಿ ಶ್ರೇಷ್ಟರ ದರ್ಗಾ ಶರೀಫ್.

ಸಯ್ಯಿದ್ ಮಲೆ ದರ್ಗಾ ಶರೀಫ್: ಪುತ್ತೂರಿನ ಸಾಲ್ಮರದಲ್ಲಿರುವ ಸಯ್ಯಿದ್ ಅಬ್ದುಸ್ಸಲಾಂ ರವರ ದರ್ಗಾ ಶರೀಫ್.

ಪುತ್ತೂರು ತಾಲೂಕಿನ ಧಾರ್ಮಿಕ ಕೇಂದ್ರಗಳ ಸಂಪೂರ್ಣ ವಿವರ Archived 2019-06-18 ವೇಬ್ಯಾಕ್ ಮೆಷಿನ್ ನಲ್ಲಿ.

ಜಾಂಬ್ರಿ ಗುಹೆ[ಬದಲಾಯಿಸಿ]

  • ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲ್ಲೂಕಿನ ಪಾಣಾಜೆ ಕಾಡಿನಲ್ಲಿರುವ ಗುಹೆ. ಶ್ವೇತವಸ್ತ್ರ ತೊಟ್ಟು ಅಲ್ಲಿನ ಸ್ವಯಂಭೂ ಜಾಂಬ್ರಿ ಗುಹಾ ಪ್ರವೇಶ ಪ್ರತಿ ಹನ್ನೆರಡು ವರ್ಷಗಳಿಗೊಮ್ಮೆ ನಡೆಯುವ ಪ್ರವೇಶೋತ್ಸವ ಇದು. ಕಾಸರಗೋಡು ಜಿಲ್ಲೆಯ ನೆಟ್ಟಣಿಗೆ ಮಹಾಲಿಂಗೇಶ್ವರ ಕ್ಷೇತ್ರದ ಮೂಲಸ್ಥಾನ ಈ ಗುಹೆಯಲ್ಲಿದೆ ಎಂಬುದು ಜನರ ನಂಬಿಕೆ. ನೆಟ್ಟಣಿಗೆ ಕ್ಷೇತ್ರದಿಂದ ವಾಯುವ್ಯ ದಿಕ್ಕಿನ ದಟ್ಟಾರಣ್ಯದಲ್ಲಿ ಸುಮಾರು ಆರು ಕಿಲೋಮೀಟರ್‍ನಲ್ಲಿ ಪಾಣಾಜೆಯ ಚೆಂಡೆತ್ತಡ್ಕದ ಹುಲ್ಲುಗಾವಲು ಪ್ರದೇಶ ಸಿಗುತ್ತದೆ. ಅಲ್ಲಿಂದ ತುಸು ಮುಂದೆ ಸಾಗಿದಾಗ ಈ ಗುಹೆ ಕಾಣಸಿಗುತ್ತದೆ. ಕರ್ನಾಟಕ ಹಾಗೂ ಕೇರಳದ ಸಾವಿರಾರು ಭಕ್ತರ ಸಮಾಗಮದ ತಾಣವದು.[೩]

ಶಿಕ್ಷಣ[ಬದಲಾಯಿಸಿ]

ಇಂಜಿನಿಯರಿಂಗ್ ಕಾಲೇಜ್‌ಗಳು

** ಜನರಲ್ ಕೋರ್ಸ್ ಕಾಲೇಜುಗಳು

    • ಸೇಂಟ್ ಪಿಲೊಮಿನಾ ಕಾಲೇಜ್, ದರ್ಬೆ, ಪುತ್ತೂರು.
ಸೇಂಟ್ ಪಿಲೊಮಿನಾ ಕಾಲೇಜ್, ದರ್ಬೆ
    • ಸೇಂಟ್ ಪಿಲೊಮಿನಾ ಪದವಿಪೂರ್ವ ಕಾಲೇಜು, ದರ್ಬೆ, ಪುತ್ತೂರು
    • ಸೇಂಟ್ ಪಿಲೊಮಿನಾ ಬಾಲಕರ ಪ್ರೌಢಶಾಲೆ, ದರ್ಬೆ, ಪುತ್ತೂರು
    • ಶ್ರೀ ವಿವೇಕಾನಂದ ಕಾಲೇಜ್,ಕಲಾ ವಿಭಾಗ, ವಿಜ್ಞಾನ ಮತ್ತು ವಾಣಿಜ್ಯ, ಪುತ್ತೂರು.
    • ವಿವೇಕಾನಂದ ಪಾಲಿಟೆಕ್ನಿಕ್, ಪುತ್ತೂರು
    • ವಿವೇಕಾನಂದ ಕಾಲೇಜ್ ಆಫ್ ಎಜ್ಯುಕೇಷನ್, ಪುತ್ತೂರು.
    • ಸರ್ಕಾರಿ ಜೂನಿಯರ್ ಕಾಲೇಜು, ಪುತ್ತೂರು.
    • ಮಾರ್ ಇವೊನಿಯೊಸ್ ಕಾಲೇಜ್ ಆಫ್ ಎಜ್ಯುಕೇಷನ್, ಪೆರಬೆ, ಪುತ್ತೂರು
    • ಸಾಂದೀಪಿನಿ, ಹೈಯರ್ ಪ್ರೈಮರಿ ಸ್ಕೂಲ್
    • ವಿವೇಕಾನಂದ ಕಾನೂನು ಕಾಲೇಜು, ಪುತ್ತೂರು.
    • ಇಂಡಸ್ ಕಾಲೇಜು ಪುತ್ತೂರು
    • ಇಂಡಸ್ ನ್ಯಾಷನಲ್ ಕಾಲೇಜು ಪುತ್ತೂರು
    • ಶ್ರೀ ಮಹಾಲಿಂಗೇಶ್ವರ ಐಟಿಐ, ಕೊಂಬೆಟ್ಟು, ಪುತ್ತೂರು
    • ಅಂಬಿಕಾ ಪದವಿ ಪೂರ್ವ ವಿದ್ಯಾಲಯ, ನೆಲ್ಲಿಕಟ್ಟೆ ಪುತ್ತೂರು.

ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ಪಟ್ಟಿ

    • ಸೇಂಟ್ ವಿಕ್ಟರ್ಸ್ ಬಾಲಕಿಯರ ಪ್ರೌಢಶಾಲೆ, ಪುತ್ತೂರು.
    • ಸೇಂಟ್ ವಿಕ್ಟರ್ಸ ಇಂಗ್ಲೀಷ್ ಹೈಯರ್ ಪ್ರೈಮರಿ ಸ್ಕೂಲ್,ಪುತ್ತೂರು.
    • ಮೈ ಡಿ ಡೀಯುಸ್ ಉನ್ನತ ಪ್ರಾಥಮಿಕ ಶಾಲೆ, ಪುತ್ತೂರು.
    • ಲಿಟಲ್ ಫ್ಲವರ್ ಉನ್ನತ ಪ್ರಾಥಮಿಕ ಶಾಲೆ, ಪುತ್ತೂರು.
    • ಬೆಥಾನಿ. ಇಂಗ್ಲಿಷ್ ಮಾಧ್ಯಮ ಶಾಲೆ
    • ವಿವೇಕಾನಂದ ಇಂಗ್ಲೀಷ್ ಮಾಧ್ಯಮ ಶಾಲೆ
    • ಮೌಂಟೇನ್ ವ್ಯೂ ಆಂಗ್ಲ ಮಾಧ್ಯಮ ಶಾಲೆ ಸಾಲ್ಮರ, ಪುತ್ತೂರು
    • ಮೌಂಟೇನ್ ವ್ಯೂ ಪ್ರೌಡ ಶಾಲೆ ಸಾಲ್ಮರ, ಪುತ್ತೂರು
    • ಬುಶ್ರಾ ಇಂಗ್ಲಿಷ್ ಮಾಧ್ಯಮ ಶಾಲೆ, ಕಾವು
    • ಸುದಾನ ವಸತಿ ಶಾಲೆ, ನೆಹರು ನಗರ.
    • ಸರ್ಕಾರಿ ಜೂನಿಯರ್ ಕಾಲೇಜ್ ಹೈ ಸ್ಕೂಲ್, ಪುತ್ತೂರು
    • ಶ್ರೀ ರಾಮಕೃಷ್ಣ ಪ್ರೌಢಶಾಲೆ, ಪುತ್ತೂರು
    • ಸರಕಾರಿ ಪ್ರಾಥಮಿಕ ಶಾಲೆ, ಮಹಾಲಿಂಗೇಶ್ವರ ದೇವಸ್ಥಾನ ಸಮೀಪ
    • ಸರಕಾರಿ ಪ್ರಾಥಮಿಕ ಶಾಲೆ, ಮುಕ್ವೆ
    • ಸರಕಾರಿ ಪ್ರಾಥಮಿಕ ಶಾಲೆ ಕೃಷ್ಣನಗರ, ಕೆಮ್ಮಾಯಿ
    • ಸರಕಾರಿ ಪ್ರಾಥಮಿಕ ಶಾಲೆ, ಸಾಲ್ಮರ

ಆಸ್ಪತ್ರೆಗಳು[ಬದಲಾಯಿಸಿ]

ಪುತ್ತೂರು ತಾಲೂಕಿನ ಆಸ್ಪತ್ರೆಗಳ ಮತ್ತು ಕ್ಲಿನಿಕ್ ಗಳ ದೂರವಾಣಿ ಸಹಿತ ವಿಳಾಸಗಳು

ಹತ್ತಿರದ ಸ್ಥಳಗಳು / ನಗರಗಳು / ಪಟ್ಟಣಗಳು[ಬದಲಾಯಿಸಿ]

ಉಲ್ಲೇಖಗಳು‌‌[ಬದಲಾಯಿಸಿ]

  1. ಫಾಲಿಂಗ್ ರೇನ್ ಜಿನೋಮಿಕ್ಸ್, ಇಂಕ್ - ಪುತ್ತೂರು
  2. GRIndia
  3. "ಗುಹೆಯೊಳಗೆ ಕಂಡದ್ದೇನು?;ಪ್ರಶಾಂತ ರಾಜ ಅಡೂರು;23 May, 2017". Archived from the original on 2017-05-25. Retrieved 2017-05-23.

ಬಾಹ್ಯ ಕೊಂಡಿಗಳು‌‌[ಬದಲಾಯಿಸಿ]