ಬಂಟ್ವಾಳ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಬಂಟ್ವಾಳ
India-locator-map-blank.svg
Red pog.svg
ಬಂಟ್ವಾಳ
ರಾಜ್ಯ
 - ಜಿಲ್ಲೆ
ಕರ್ನಾಟಕ
 - ದಕ್ಷಿಣ ಕನ್ನಡ
ನಿರ್ದೇಶಾಂಕಗಳು 12.9° N 75.033° E
ವಿಸ್ತಾರ  km²
ಸಮಯ ವಲಯ IST (UTC+5:30)
ಜನಸಂಖ್ಯೆ (2001)
 - ಸಾಂದ್ರತೆ
36,830
 - /ಚದರ ಕಿ.ಮಿ.
ಕೋಡ್‍ಗಳು
 - ಪಿನ್ ಕೋಡ್
 - ಎಸ್.ಟಿ.ಡಿ.
 - ವಾಹನ
 
 - 574 211
 - +91-(0)8255
 - KA-19, KA-21

ಬಂಟ್ವಾಳ ದಕ್ಷಿಣ ಕನ್ನಡ ಜಿಲ್ಲೆಯ ಒಂದು ತಾಲೂಕು ಕೇಂದ್ರ. ನೇತ್ರಾವತಿ ನದಿಯ ತೀರದಲ್ಲಿ ಇರುವ ಈ ಊರು ಮಂಗಳೂರಿ‍ನಿಂದ ೨೩ ಕಿ.ಮಿ.ದೂರದಲ್ಲಿ ಇದೆ.ಬಂಟ್ವಾಳ ತಾಲೂಕಿನ ಹಾಗು ನಮ್ಮ ರಾಜ್ಯದ ಪ್ರಸಿದ್ಧ ಪುಣ್ಯ ಕ್ಷೇತ್ರ ಪೊಳಲಿ. ಇಲ್ಲಿನ ಶ್ರೀ ರಾಜರಾಜೇಶ್ವರೀ ದೇವಾಲಯ ಪ್ರಾಚೀನವಾದದ್ದು ಹಾಗೂ ಐತಿಹಾಸಿಕ ಪ್ರಾಮುಖ್ಯತೆಯನ್ನೂ ಪಡೆದಿರುವ ಸ್ದಳ.ಇದು ಎತ್ತರವಾದ ಗುಡ್ದ ಹಾಗೂ ವಿಶಾಲವಾದ ಗದ್ದೆಗಳಿಂದ ಸುತ್ತುವ್ರೆದಿದ್ದು ಪ್ರಕೃತಿ ಸೌಂದರ್ಯ ಕೂಡಿದೆ.ಇಲ್ಲಿಗೆ ಸ್ವಲ್ಪ ದೂರದಲ್ಲಿ ಫಲ್ಗುಣಿ ನದಿ ಹರಿಯುತ್ತದೆ.ದೇವಾಲಯದ ಮರದ ಛಾವಣಿಯು ಸುಂದರವಾದ ಕೆತ್ತನೆ ಗಳಿಂದ ಅಲಂಕೃತವಾಗಿದೆ.ಚಕ್ರವರ್ತಿ ಅಶೋಕನ ಶಾಸನಗಳಲ್ಲಿ ಈ ಗುಡಿಯ ಉಲ್ಲೇಖವಿದೆ.ಅಬ್ದು ಲ್ ರಜಾಕ್ ಎಂಬ ವಿದೇಶಿ ಯಾತ್ರಿಕ ೧೪೪೮ ರಲ್ಲಿ ಇಲ್ಲಿಗೆ ಭೇಟಿ ಕೊಟ್ಟಿದ್ದನೆಂದು ಅವನ ಬರಹಗಳಿಂದ ತಿಳಿದುಬರುತ್ತದೆ.ಈ ದೇವಾಲಯ ೮ ನೇ ನಿರ್ಮಾಣಗೊಂಡಿರಬಹುದೆಂಬುದರ ಬಗ್ಗೆ ಶಾಸನಧಾರಗಳಿವೆ.ಸುಮಾರು ೧ ತಿಂಗಳ ಕಾಲ ಜಾತ್ರೆ ನಡೆಯುತ್ತದೆ.ಈ ಸಂದರ್ಭದಲ್ಲಿ ಇಲ್ಲಿ ನಡೆಯುವ ಪೊಳಲಿ ಚೆಂಡು(ಪುಟ್ ಬಾಲ್) ಎಂದೇ ಪ್ರಸ್ದಿದವಾಗಿದೆ. ಬಂಟ್ವಾಳದಿಂದ ೬ ಕಿ.ಮೀ ದೂರದಲ್ಲಿರುವ ಪಾಣೆ ಮಂಗಳುರಿನ ವೆಂಕಟರಮಣ ದೇವಾಲಯದಲ್ಲಿ ವರ್ಷಕ್ಕೊಮ್ಮೆ ಲಕ್ಷದೀಪೋತ್ಸವ ನಡೆಯುತ್ತದೆ.

ಬಾಹ್ಯ ಸಂಪರ್ಕಗಳು[ಬದಲಾಯಿಸಿ]

"https://kn.wikipedia.org/w/index.php?title=ಬಂಟ್ವಾಳ&oldid=611675" ಇಂದ ಪಡೆಯಲ್ಪಟ್ಟಿದೆ