ಉಪ್ಪಿನಂಗಡಿ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಉಪ್ಪಿನಂಗಡಿ
India-locator-map-blank.svg
Red pog.svg
ಉಪ್ಪಿನಂಗಡಿ
ರಾಜ್ಯ
 - ಜಿಲ್ಲೆ
ಕರ್ನಾಟಕ
 - ದಕ್ಷಿಣ ಕನ್ನಡ
ನಿರ್ದೇಶಾಂಕಗಳು 12.8333° N 75.2500° E
ವಿಸ್ತಾರ {{{area_total}}} km²
ಸಮಯ ವಲಯ IST (UTC+5:30)
ಜನಸಂಖ್ಯೆ
 - ಸಾಂದ್ರತೆ
{{{population_total}}}
 - {{{population_density}}}/ಚದರ ಕಿ.ಮಿ.
ಕೋಡ್‍ಗಳು
 - ಪಿನ್ ಕೋಡ್
 - ಎಸ್.ಟಿ.ಡಿ.
 - ವಾಹನ
 
 - 574 241
 - +0824
 - {{{vehicle_code_range}}}

ಉಪ್ಪಿನಂಗಡಿ: ಇದು ಪುತ್ತೂರು ತಾಲೂಕಿನಲ್ಲಿರುವ ಒಂದು ಸಣ್ಣ ಪಟ್ಟಣ. ನೇತ್ರಾವತಿ ಹಾಗೂ ಕುಮಾರಧಾರಾ ನದಿಗಳು ಇಲ್ಲಿ ಸೇರುವ ಸ್ಥಳವಾಗಿದೆ. ಈ ಸ್ಥಳದಲ್ಲಿ ಸಹಸ್ರಲಿಂಗೇಶ್ವರ ದೇವರ ದೇವಾಲಯವಿದೆ. ಈ ಎರಡೂ ನದಿಗಳು ಸೇರಿ ನೀರಿನ ಮಟ್ಟ ದೇವರ ಪಾದ ಮುಟ್ಟುವಾಗ ಇದನ್ನು "ಸಂಗಮ" ಎನ್ನುತ್ತಾರೆ. ಇದು ಒಂದು ವಿಶೇಷ ಸಂದರ್ಭವಾಗಿದ್ದು, ಸುತ್ತು ಮುತ್ತಲಿನ ಜನ ಇದನ್ನು ವೀಕ್ಷಿಸಲು ನೆರೆಯುತ್ತಾರೆ.

ಇತಿಹಾಸ[ಬದಲಾಯಿಸಿ]

ಇಲ್ಲಿಯ ಇತಿಹಾಸ ಪ್ರಕಾರ ೧೮೦೦ ರಲ್ಲಿ ಶ್ರೀರಂಗಪಟ್ಟಣದ ಪತನದ ನಂತರ ಸುಬ್ಬಾರಾವ್ ಮತ್ತು ವಿಟ್ಟಲ ಹೆಗ್ಗಡೆ ಎಂಬ ಇಬ್ಬರು ಶಸ್ತ್ರಸಜ್ಜಿತರಾಗಿ ಈ ಪಟ್ಟಣವನ್ನು ವಶಪಡಿಸಿಕೊಳ್ಳಲು ಪ್ರಯತ್ನಿಸಿದರು. ಆನಂತರದ ದಿನಗಳಲ್ಲಿ ಇದು ತಾಲೂಕು ಕೇಂದ್ರವಾಗಿತ್ತು.೧೮೮೨ರಲ್ಲಿ ತಾಲೂಕು ಕೇಂದ್ರವನ್ನು ಪುತ್ತೂರಿಗ ಸ್ಥಳಾಂತರಿಸಿದರು.ಮಂಗಳೂರು ಬಂದರು ಹಾಗೂ ಒಳನಾಡಿನ ಹಾಸನ, ಸಕಲೇಶಪುರಗಳಿಗೆ ಸರಕು ಸಾಗಣೆಯ ಪ್ರಮುಖ ತಾಣ ಇದಾಗಿತ್ತು.

ಸಾರಿಗೆ[ಬದಲಾಯಿಸಿ]

ಈ ಪಟ್ಟಣವು ಮಂಗಳೂರು ಮತ್ತು ಬೆಂಗಳೂರನ್ನು ಸಂಪರ್ಕಿಸುವ ರಾಷ್ಟೀಯ ಹೆದ್ದಾರಿ ೪೮ ರಲ್ಲಿದ್ದು ಉತ್ತಮ ರೀತಿಯ ಸಂಪರ್ಕ ಹೊಂದಿದೆ.ಕುಕ್ಕೆ ಸುಬ್ರಹ್ಮಣ್ಯ ಕ್ಕೆ ಇಲ್ಲಿಂದ ಸಂಪರ್ಕವಿದೆ.