ಕುಕ್ಕೆ ಸುಬ್ರಹ್ಮಣ್ಯ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು


ಕುಕ್ಕೇ ಶ್ರೀ ಸುಬ್ರಹ್ಮಣ್ಯ ದೇವಾಲಯ
Subramanya temple.jpg
ದೇವಾಲಯದ ಗೋಪುರ
ಹೆಸರು: ಕುಕ್ಕೇ ಶ್ರೀ ಸುಬ್ರಹ್ಮಣ್ಯ ದೇವಾಲಯ
ಪ್ರಮುಖ ದೇವತೆ: ಸುಬ್ರಹ್ಮಣ್ಯ (ನಾಗನ ರೂಪದಲ್ಲಿ)

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನಲ್ಲಿರುವ ಸುಪ್ರಸಿದ್ಧ ದೇವಾಲಯ. ಇಲ್ಲಿ ಈಶ್ವರ ಪುತ್ರ ಷಣ್ಮುಖ ದೇವರನ್ನು ನಾಗ ರೂಪದಲ್ಲಿ ಸುಬ್ರಹ್ಮಣ್ಯ ಎಂಬ ಹೆಸರಿನಲ್ಲಿ ಆರಾಧಿಸಲಾಗುತ್ತದೆ.ನಾಗಾರಾಧನೆ ಇಲ್ಲಿ ಅತ್ಯಂತ ಮಹತ್ವವನ್ನು ಪಡೆದುಕೊಂಡಿದ್ದು ನಾಗಮಂಡಲವೆಂಬ ಸಾಂಪ್ರದಾಯಿಕ ನೃತ್ಯವನ್ನು ಕಾಣಬಹುದು.

ಸರ್ಪ ಸಂಸ್ಕಾರ ಬಹಳ ಮುಖ್ಯವಿಧಿ[ಬದಲಾಯಿಸಿ]

ಇಲ್ಲಿನ ಸರ್ಪ ಸ೦ಸ್ಕಾರ ಬಹಳ ಶ್ರೇಷ್ಟ ಮತ್ತು ಪ್ರಸಿದ್ಢ. ಸರ್ಪ ದೋಷ ಇರುವವರು ಇಲ್ಲಿಗೆ ಬ೦ದು, ಸರ್ಪ ಸ೦ಸ್ಕಾರ ಮತ್ತು ನಾಗ ಪ್ರತಿಷ್ಟೆ ನೆರವೇರಿಸಿ ದೋಷ ಮುಕ್ತರಾಗುತ್ತಾರೆ. ಇತ್ತೀಚೆಗೆ ಇಲ್ಲಿಗೆ ಭೇಟಿ ನೀಡಿ ಈ ಕಾರ್ಯಗಳನ್ನು ನೆರವೇರಿಸಿದ ವಿಖ್ಯಾತರಲ್ಲಿ ಸಚಿನ್ ತೆ೦ಡೂಲ್ಕರ್ ಮತ್ತು ಹೇಮಮಾಲಿನಿ ಸೇರಿದ್ದಾರೆ. ಇಲ್ಲಿಗೆ ಭೇಟಿ ಕೊಟ್ಟಲ್ಲಿ ಸಮೀಪದ "ಆದಿ ಸುಬ್ರಹ್ಮಣ್ಯ ಸ್ವಾಮಿ" ಯ ದೇವಾಲಯ ಮತ್ತು "ಕುಮಾರಧಾರ" ನದಿಯನ್ನು ಸ೦ದರ್ಶಿಸಲು ಮರೆಯ ಬೇಡಿ.

ಜಾತಕಗಳಲ್ಲಿನ ಹಲವಾರು ದೋಷ ಪರಿಹಾರ ಇಲ್ಲಿ ಮಾಡಿಸಿಕೊಳ್ಳಬಹುದು[ಬದಲಾಯಿಸಿ]

ಜಾತಕಗಳಲ್ಲಿನ ಸರ್ಪದೋಷ ಅಥವಾ ನಾಗದೋಷ, ಕಾಳಸರ್ಪದೋಷ ಇತ್ಯಾದಿ ದೋಷಗಳ ಕಾರಣದಿಂದ ಅನಾರೋಗ್ಯ, ತಡವಿವಾಹ, ವೈವಾಹಿಕ ಸುಖಭಂಗ, ಪುತ್ರಹೀನತೆ (ಗಂಡು ಸಂತಾನ ಇಲ್ಲದಿರುವುದು),ಸಂತಾನಹೀನತೆ (ಮಕ್ಕಳೇ ಆಗದಿರುವುದು,ಉದ್ಯೋಗದಲ್ಲಿ ಅಸಮಾಧಾನ,ಇತ್ಯಾದಿ ತೊಂದರೆಗಳನ್ನು ಅನುಭವಿಸುತ್ತಿರುವವರ ಈ ಮೇಲೆ ಹೇಳಲಾದ ದೋಷಗಳಿಗೆ ಪರಿಹಾರ ಮಾಡಿಸಲು ಕರ್ನಾಟಕದಲ್ಲಿರುವ ಅತ್ಯಂತ ಪವಿತ್ರವಾದ ನಾಗರೂಪದಲ್ಲಿರುವ ಸುಬ್ರಹ್ಮಣ್ಯಸ್ವಾಮಿಯ ದೇವಸ್ಥಾನವಿರುವ ಕ್ಷೇತ್ರ ಎಂದರೆ ಈ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರ. ಈ ಕ್ಷೇತ್ರಕ್ಕೆ ಪ್ರಪಂಚದ ನಾನಾ ಮೂಲೆಗಳಿಂದ ಭಕ್ತರು ಬಂದು ಸರ್ಪಸಂಸ್ಕಾರ, ನಾಗಪ್ರತಿಷ್ಠೆ, ಆಶ್ಲೇಷಬಲಿ, ಇತ್ಯಾದಿ ಸೇವೆ ಸಲ್ಲಿಸಿ ದೋಷಮುಕ್ತರಾಗಿ ಸುಖಜೀವನ ನಡೆಸುತ್ತಿದ್ದಾರೆ. ಕುಜದೋಷವಿರುವವರೂ ಸಹಾ ಇಲ್ಲಿ ಪರಿಹಾರ ಕಾಣುತ್ತಾರೆ. ಕಾರ್ತಿಕೇಯ, ಸುಬ್ರಹ್ಮಣ್ಯ ಎಂದೆಲ್ಲಾ ಕರೆಸಿಕೊಳ್ಳುವ ಈ ದೇವನು ಕ್ಷೀರಪ್ರಿಯನು. ಭಕ್ತರ ದೋಷಗಳನ್ನು ಪರಿಹಾರ ಮಾಡುವ ಸಲುವಾಗಿಯೇ ಈ ಕ್ಷೇತ್ರದಲ್ಲಿ ನೆಲೆಸಿದ್ದಾನೆ ಎಂದರೆ ತಪ್ಪಾಗಲಾರದು.

ಕುಕ್ಕೆ ಸುಬ್ರಮಣ್ಯ ದೇವಸ್ಠಾನ

ಶ್ರೀ ಸುಬ್ರಮಣ್ಯಾಷ್ಟೋತ್ತರ ಶತನಾಮಾವಳೀಃ[ಬದಲಾಯಿಸಿ]

ಓಂ ಸ್ಕಂದಾಯ ನಮಃ | ಓಂ ಗುಹಾಯ ನಮಃ | ಓಂ ಷಣ್ಮುಖಾಯ ನಮಃ | ಓಂ ಫಾಲನೇತ್ರಾಸುತಾಯ ನಮಃ | ಓಂ ಪ್ರಭವೇ ನಮಃ | ಓಂ ಪಿಂಗಲಾಯ ನಮಃ | ಓಂ ಕೃತ್ತಿಕಾಸುನವೇ ನಮಃ | ಓಂ ಶಿಖಿವಾಹನಾಯ ನಮಃ | ಓಂ ದ್ವಿಷಡ್ಬುಜಾಯ ನಮಃ | ಓಂ ದ್ವಿಷಣ್ಣೇತ್ರಾಯ ನಮಃ | ಓಂ ಶಕ್ತಿಧರಾಯ ನಮಃ | ಓಂ ಪಿಶಿತಾಶಪ್ರಭಂಜನಾಯ ನಮಃ | ಓಂ ತಾರಕಾಸುರಸಂಹಾರಿಣೇ ನಮಃ | ಓಂ ರಕ್ಷೋಬಲವಿಮರ್ದನಾಯ ನಮಃ | ಓಂ ಮತ್ತಾಯ ನಮಃ | ಓಂ ಪ್ರಮತ್ತಾಯ ನಮಃ | ಓಂ ಉನ್ಮತ್ತಾಯ ನಮಃ | ಓಂ ಸುರಸೈನ್ಯಸುರಕ್ಷಕಾಯ ನಮಃ | ಓಂ ದೇವಸೇನಾಪತಯೇ ನಮಃ | ಓಂ ಪ್ರಙ್ಞಾಯ ನಮಃ | ಓಂ ಕೃಪಾಲವೇ ನಮಃ | ಓಂ ಭಕ್ತವತ್ಸಲಾಯ ನಮಃ | ಓಂ ಉಮಾಸುತಾಯ ನಮಃ | ಓಂ ಶಕ್ತಿಧರಾಯ ನಮಃ | ಓಂ ಕುಮಾರಾಯ ನಮಃ | ಓಂ ಕ್ರಾಂಚಧಾರಣಾಯ ನಮಃ | ಓಂ ಸೇನಾನ್ಯೇ ನಮಃ | ಓಂ ಅಗ್ನಿಜನ್ಮನೇ ನಮಃ | ಓಂ ವಿಶಾಖಾಯ ನಮಃ | ಓಂ ಶಂಕರಾತ್ಮಜಾಯ ನಮಃ | ಓಂ ಶೈವಾಯ ನಮಃ | ಓಂ ಸ್ವಾಮಿನೇ ನಮಃ | ಓಂ ಗಣಸ್ವಾಮಿನೇ ನಮಃ | ಓಂ ಸರ್ವಸ್ವಾಮಿನೇ ನಮಃ | ಓಂ ಸನಾತನಾಯ ನಮಃ | ಓಂ ಅನಂತಶಕ್ತಯೇ ನಮಃ | ಓಂ ಅಕ್ಷೋಬ್ಯಾಯ ನಮಃ | ಓಂ ಪಾರ್ವತೀಪ್ರಿಯನಂದನಾಯ ನಮಃ | ಓಂ ಗಂಗಾಸುತಾಯ ನಮಃ | ಓಂ ಶರೋಧ್ಭೂತಾಯ ನಮಃ | ಓಂ ಅಹುತಾಯ ನಮಃ | ಓಂ ಪಾವಕಾತ್ಮಜಾಯ ನಮಃ | ಓಂ ಜೃಂಭಾಯ ನಮಃ | ಓಂ ಪ್ರಜೃಂಭಾಯ ನಮಃ | ಓಂ ಉಜೃಂಭಾಯ ನಮಃ | ಓಂ ಕಮಲಾಸನಸಂಸ್ತುತಾಯ ನಮಃ | ಓಂ ಏಕವರ್ಣಾಯ ನಮಃ | ಓಂ ದ್ವಿವರ್ಣಾಯ ನಮಃ | ಓಂ ತ್ರಿವರ್ಣಾಯ ನಮಃ | ಓಂ ಸುಮನೋಹರಾಯ ನಮಃ | ಓಂ ಚತುರ್ವರ್ಣಾಯ ನಮಃ | ಓಂ ಪ್ರಜಾಪತಯೇ ನಮಃ | ಓಂ ಅಹರ್ಪತಯೇ ನಮಃ | ಓಂ ಅಗ್ನಿಗರ್ಭಾಯ ನಮಃ | ಓಂ ಶಮಿಗರ್ಭಾಯ ನಮಃ | ಓಂ ವಿಶ್ವರೇತಸೇ ನಮಃ | ಓಂ ಸುರಾರಿಘ್ನೇ ನಮಃ | ಓಂ ಹರಿದ್ವರ್ಣಾಯ ನಮಃ | ಓಂ ಶುಭಕರಾಯ ನಮಃ | ಓಂ ವಟವೇ ನಮಃ | ಓಂ ವಟವೇಷಧೃತೇ ನಮಃ | ಓಂ ಗಭಸ್ತಯೇ ನಮಃ | ಓಂ ಗಹನಾಯ ನಮಃ | ಓಂ ಚಂದ್ರವರ್ಣಾಯ ನಮಃ | ಓಂ ಕಲಾಧರಾಯ ನಮಃ | ಓಂ ಮಾಯಾಧರಾಯ ನಮಃ | ಓಂ ಮಹಮಾಯಿನೇ ನಮಃ | ಓಂ ಕೈವಲ್ಯಾಯ ನಮಃ | ಓಂ ಶಂಕರಾತ್ಮಭುವೇ ನಮಃ | ಓಂ ವಿಶ್ವಯೋನಯೇ ನಮಃ | ಓಂ ಆಮೇಯಾತ್ಮನೇ ನಮಃ | ಓಂ ತೇಜೋನಿಧಯೇ ನಮಃ | ಓಂ ಅನಾಮಯಾಯ ನಮಃ | ಓಂ ಪರಮೇಷ್ಠಿನೇ ನಮಃ | ಓಂ ಪರಬ್ರಹ್ಮಣೇ ನಮಃ | ಓಂ ವೆದಗರ್ಭಾಯ ನಮಃ | ಓಂ ವಿರಾಟ್ಸುತಾಯ ನಮಃ | ಓಂ ಪುಲ್ಲಿಂದಕನ್ಯಾಭರ್ತೆ ನಮಃ | ಓಂ ಮಹನಾರಸ್ವತಾವೃತಾಯ ನಮಃ | ಓಂ ಅಶ್ರಿತಾಖಿಲದಾತ್ರೇ ನಮಃ | ಓಂ ಚೋರಘ್ನಾಯ ನಮಃ | ಓಂ ರೋಗನಾಶನಾಯ ನಮಃ | ಓಂ ಅನಂತಮೂರ್ತಯೇ ನಮಃ | ಓಂ ಆನಂದಾಯ ನಮಃ | ಓಂ ಶಿಖಂಡಿಕೃತಕೇತನಾಯ ನಮಃ | ಓಂ ಡಂಭಾಯ ನಮಃ | ಓಂ ಪರಮಡಂಭಾಯ ನಮಃ | ಓಂ ವೃಷಾಕಪಯೇ ನಮಃ | ಓಂ ಕಾರಣೋತ್ಪತ್ತಿದೇಹಾಯ ನಮಃ | ಓಂ ಕಾರಣಾತೀತವಿಗ್ರಹಾಯ ನಮಃ | ಓಂ ಅನೀಶ್ವರಾಯ ನಮಃ | ಓಂ ಅಮೃತಾಯ ನಮಃ | ಓಂ ಪ್ರಾಣಾಯ ನಮಃ | ಓಂ ಪ್ರಾಣಾಯಾಮಪರಾಣಾಯ ನಮಃ | ಓಂ ವಿರುದ್ದಹಂತ್ರೇ ನಮಃ | ಓಂ ವೀರಘ್ನಾಯ ನಮಃ | ಓಂ ರಕ್ತಶ್ಯಾಮಂಗಳಾಯ ನಮಃ | ಓಂ ಕುಷ್ಟಹಾರಿಣೇ ನಮಃ | ಓಂ ಭುಜಂಗೇಶಾಯ ನಮಃ | ಓಂ ಶ್ರುತಿಪ್ರಿತಾಯ ನಮಃ | ಓಂ ಸುಬ್ರಹ್ಮಣ್ಯಾಯ ನಮಃ | ಓಂ ಗುಹಾಪ್ರೀತಾಯ ನಮಃ | ಓಂ ಬ್ರಹ್ಮಣ್ಯಾಯ ನಮಃ | ಓಂ ಬ್ರಾಹ್ಮಣಪ್ರಿಯಾಯ ನಮಃ | -ಇತಿ ಶ್ರೀ ಸುಬ್ರಹ್ಮಣ್ಯಾಷ್ಟೋತ್ತರ ಶತನಾಮಾವಳಿಃ ಸಂಪೂರ್ಣಂ

ಬಾಹ್ಯ ಸಂಪರ್ಕಗಳು[ಬದಲಾಯಿಸಿ]

<1-- inter wiki linka-->