ಶೇಷನಾಗ
ಗೋಚರ
(ಆದಿಶೇಷ ಇಂದ ಪುನರ್ನಿರ್ದೇಶಿತ)
ಆದಿಶೇಷ ಸೃಷ್ಟಿಯ ಮೂಲಭೂತ ಜೀವಿಗಳಲ್ಲಿ ಒಬ್ಬನು.ಶೇಷನಾಗನನ್ನು ವಿಷ್ಣುವಿನ ಸೇವಕ ಮತ್ತು ಅಭಿವ್ಯಕ್ತಿಯೆಂದು ಪರಿಗಣಿಸಲಾಗುತ್ತದೆ.
ಇತಿವೃತ್ತ
[ಬದಲಾಯಿಸಿ]- ಹಿಂದೂ ಧರ್ಮದಲ್ಲಿ, ಶೇಷನಾಗ (ಆದಿಶೇಷ ಅಥವಾ ಶೇಷ) ನಾಗರಾಜ (ಎಲ್ಲ ನಾಗಗಳ ರಾಜ) ಮತ್ತು ಸೃಷ್ಟಿಯ ಮೂಲಭೂತ ಜೀವಿಗಳಲ್ಲಿ ಒಬ್ಬನು. ಪುರಾಣಗಳಲ್ಲಿ, ಶೇಷನಾಗನು ತನ್ನ ಹೆಡೆಗಳ ಮೇಲೆ ಬ್ರಹ್ಮಾಂಡದ ಎಲ್ಲ ಗ್ರಹಗಳನ್ನು ಹೊರುತ್ತಾನೆ ಮತ್ತು ತನ್ನ ಎಲ್ಲ ಬಾಯಿಗಳಿಂದ ವಿಷ್ಣುವಿನ ಕೀರ್ತಿಗಳನ್ನು ನಿರಂತರವಾಗಿ ಹಾಡುತ್ತಾನೆ ಎಂದು ಹೇಳಲಾಗಿದೆ.
- ಅವನನ್ನು ಕೆಲವೊಮ್ಮೆ ಅನಂತ ಶೇಷ ಎಂದು ಕರೆಯಲಾಗುತ್ತದೆ. ಆದಿಶೇಷನು ಸುರುಳಿ ಬಿಚ್ಚಿದಾಗ, ಕಾಲ ಮುಂದೆ ಸಾಗುತ್ತದೆ ಮತ್ತು ಸೃಷ್ಟಿ ನಡೆಯುತ್ತದೆ; ಅವನು ಮತ್ತೆ ಸುರುಳಿ ಸುತ್ತಿದಾಗ ಬ್ರಹ್ಮಾಂಡವು ಅಸ್ತಿತ್ವ ಕಳೆದುಕೊಳ್ಳುತ್ತದೆ ಎಂದು ಹೇಳಲಾಗುತ್ತದೆ. ಶೇಷನಾಗನ ಮೇಲೆ ಹಲವು ವೇಳೆ ವಿಷ್ಣು ವಿಶ್ರಮಿಸುತ್ತಿರುವಂತೆ ಚಿತ್ರಿಸಲಾಗುತ್ತದೆ.
- ಶೇಷನಾಗನನ್ನು ವಿಷ್ಣುವಿನ ಸೇವಕ ಮತ್ತು ಅಭಿವ್ಯಕ್ತಿಯೆಂದು ಪರಿಗಣಿಸಲಾಗುತ್ತದೆ. ಅವನು ಭೂಮಿಗೆ ಎರಡು ಅವತಾರಗಳಾಗಿ ಕೆಳಗಿಳಿದನು: ರಾಮನ ಸಹೋದರ ಲಕ್ಷ್ಮಣನಾಗಿ; ಕೃಷ್ಣನ ಸಹೋದರ ಬಲರಾಮನಾಗಿ ಎಂದು ಹೇಳಲಾಗುತ್ತದೆ. ಶೇಷನಾಗನನ್ನು ಅನೇಕ ತಲೆಗಳಿರುವಂತೆ (೫ ರಿಂದ ೭) ಚಿತ್ರಿಸಲಾಗುತ್ತದೆ.
ವಿಶೇಷತೆ
[ಬದಲಾಯಿಸಿ]- ಶೇಷನಾಗನನ್ನು ಸಾಮಾನ್ಯವಾಗಿ ಅಂತರಿಕ್ಷದಲ್ಲಿ ತೇಲುವ ಸುರುಳಿ ಸುತ್ತಿದ ಬೃಹತ್ ರೂಪವಾಗಿ, ಅಥವಾ ಕ್ಷೀರಸಾಗರದ ಮೇಲೆ ವಿಷ್ಣು ಮಲಗುವ ಹಾಸಿಗೆಯಾಗಿ ತೇಲುವಂತೆ ಚಿತ್ರಿಸಲಾಗುತ್ತದೆ. ಕೆಲವೊಮ್ಮೆ ಅವನನ್ನು ಐದು ತಲೆಗಳು ಅಥವಾ ಏಳು ತಲೆಗಳಿರುವಂತೆ ತೋರಿಸಲಾಗುತ್ತದೆ, ಆದರೆ ಹೆಚ್ಚು ಸಾಮಾನ್ಯವಾಗಿ ಸಹಸ್ರ ಶಿರದ ಸರ್ಪನಾಗಿ, ಕೆಲವೊಮ್ಮೆ ಪ್ರತಿ ತಲೆಯು ಅಲಂಕೃತ ಕಿರೀಟ ಧರಿಸಿರುವಂತೆ ತೋರಿಸಲಾಗುತ್ತದೆ.
- ಅವನ ಹೆಸರು ಶೇಷದ ಅರ್ಥ ಉಳಿದದ್ದು, ಅಂದರೆ ಕಲ್ಪದ ಕೊನೆಗೆ ಪ್ರಪಂಚ ನಾಶವಾದಾಗ, ಶೇಷನು ಇದ್ದಂತೆಯೇ ಇರುತ್ತಾನೆ. ಭಗವದ್ಗೀತೆಯ ಅಧ್ಯಾಯ ೧೦, ಶ್ಲೋಕ ೨೯ ರಲ್ಲಿ, ಕೃಷ್ಣನು ತನ್ನ ೭೫ ಸಾಮಾನ್ಯ ಅಭಿವ್ಯಕ್ತಿಗಳನ್ನು ವಿವರಿಸುವಾಗ, ನಾಗರಲ್ಲಿ, ನಾನು ಅನಂತ ಎಂದು ಹೇಳುತ್ತಾನೆ.
ಪುರಾಣ ಮೂಲ
[ಬದಲಾಯಿಸಿ]- ಮಹಾಭಾರತದ ಪ್ರಕಾರ, ಶೇಷನು ಋಷಿ ಕಶ್ಯಪ ಮತ್ತು ಅವನ ಪತ್ನಿ ಕದ್ರುವಿಗೆ ಹುಟ್ಟಿದನು. ಕದ್ರು ಸಾವಿರ ಸರ್ಪಗಳಿಗೆ ಜನ್ಮ ನೀಡಿದಳು ಮತ್ತು ಅವುಗಳಲ್ಲಿ ಶೇಷನು ಅತ್ಯಂತ ಹಿರಿಯನು. ಶೇಷನ ನಂತರ, ಕ್ರಮವಾಗಿ ವಾಸುಕಿ, ಐರಾವತ ಮತ್ತು ತಕ್ಷಕರು ಜನಿಸಿದರು.
- ಶೇಷನ ಸಹೋದರರಲ್ಲಿ ಅನೇಕರು ಕ್ರೂರಿಗಳಾಗಿದ್ದರು ಮತ್ತು ಇತರರಿಗೆ ಹಾನಿ ಉಂಟು ಮಾಡಬೇಕೆಂದು ಹಠ ತೊಟ್ಟಿದ್ದರು. ಅವರು ಕದ್ರುಳ ಸಹೋದರಿ ವಿನತಳ ಮೂಲಕ ಕಶ್ಯಪನ ಮಗನಾದ ಗರುಡನಿಗೂ ನಿರ್ದಯ ತೋರಿಸುತ್ತಿದ್ದರು (ಕದ್ರು ಮತ್ತು ವಿನತಾ ದಕ್ಷನ ಪುತ್ರಿಯರು).
ಶೇಷ -ನಾಗರು
[ಬದಲಾಯಿಸಿ]- ಗೀತೆ ಅದ್ಯಾಯ ೧೦- ಶ್ಲೋ.೨೮): ಆಯುಧಾನಾಮಹಂ ವಜ್ರಂ| ಧೇನೂನಾಮಸ್ಮಿ ಕಾಮಧುಕ್| ಪ್ರಜನಶ್ಚಾಸ್ಮಿ ಕಂದರ್ಪಃ| ಸರ್ಪಾಣಾಮಸ್ಮಿ ವಾಸುಕಿ|| ([ವಿಷದ ಹಾವುಗಳಾದ] ಸರ್ಪಗಳಲ್ಲಿ ನಾನು ವಾಸುಕಿ - ಗೀತೆ:ಅದ್ಯಾಯ ೧೦- ೨೮) ;ಅದೇ ಅಧ್ಯಾಯ ೧೦, ಶ್ಲೋಕ ೩೯ ರಲ್ಲಿ "ಅನಂತಾಸ್ಮಿ ನಾಗಾನಾಂ", ವಿಷವಿಲ್ಲದ ಹಾವುಗಳಲ್ಲಿ ನಾನು 'ನಾಗನು' ಎಂದು ಶ್ರೀ ಕೃಷ್ಣ ಹೇಳಿದ್ದಾನೆ. ಆದ್ದರಿಂದ ಅನಂತನೇ ಬೇರೆ, ನಾಗನೇ ಬೇರೆ. ಪುರಾಣದ ಪ್ರಕಾರ ವಿಷ್ಣು ಶೇಷಶಾಹಿ -ಶೇಷನ ಮೇಲೆ ಮಲಗಿದವನು; ನಾಗನ ಮೇಲಲ್ಲ.[೧]
- ↑ ಭಗವದ್ಗೀತೆ ಗೀತಾ ಪ್ರೆಸ್ ಗೋರಕಪುರ.