ಕಶ್ಯಪ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕಶ್ಯಪ
ಆಂಧ್ರಪ್ರದೇಶದಲ್ಲಿ ಕಾಶ್ಯಪ ಪ್ರತಿಮೆ
ದೇವನಾಗರಿकश्यप
ಸಂಸ್ಕೃತ ಲಿಪ್ಯಂತರಣkaśyapa
ಸಂಲಗ್ನತೆಋಷಿ

ಕಶ್ಯಪ ಸಪ್ತರ್ಷಿಗಳಲ್ಲಿ ಒಬ್ಬ[೧] . ಮರೀಚಿ ಮಹರ್ಷಿಯ ಮಗ. ಅತ್ಯಂತ ಪ್ರಾಚೀನನೆಂದು ಶ್ರುತಿಗಳು ಹೇಳುತ್ತವೆ. ವೇದಮಂತ್ರ ದ್ರಷ್ಟಾರನಾದ ಈತನ ವ್ಯಕ್ತಿತ್ವ ಬಹುಮುಖಶಕ್ತಿಯ ಪ್ರತೀಕವಾಗಿ ತೋರುತ್ತದೆ.ಪ್ರಜಾಪಿತ ಬ್ರಹ್ಮನ ಮಗನಾದ ಮರೀಚಿ ಮಹರ್ಷಿ ಕರ್ದಮ ಮುನಿಯ ಮಗಳಾದ ಕಲಾಳನ್ನು ಮದುವೆಯಾದರು. ಈ ದಂಪತಿಗಳಿಗೆ ಜನಿಸಿದ ಮಗನೇ ಕಶ್ಯಪ. ಈತನಿಗೆ ದಿತಿ, ಅದಿತಿ, ದನು, ಕಲಾ, ದನಾಯು, ಸಿಂಹಿಕಾ, ಕ್ರೋಧಾ, ಪ್ರಾಧಾ, ವಿಶ್ವಾ, ವಿನತಾ, ಕಪಿಲಾ, ಮುನಿ, ಕದ್ರು ಎಂಬ ಹದಿಮೂರು ಮಂದಿ ಹೆಂಡತಿಯರು. ಅದಿತಿಯ ಮಕ್ಕಳೇ ಆದಿತ್ಯರು. ದಿತಿಯ ಮಕ್ಕಳು ದೈತ್ಯರು. ಉಳಿದ ಪತ್ನಿಯರಲ್ಲಿ ನಾಗರು, ಉರಗರು ಮೊದಲಾದವರ ಉತ್ಪತ್ತಿಯಾಯಿತು. ದಿವಸ್ವಂತನಿಗೂ ಗರುಡನಿಗೂ ಕಶ್ಯಪನೇ ತಂದೆ[೨]. ಈತ ಒಬ್ಬ ಪ್ರಜಾಪತಿಯೂ ಆಗಿದ್ದ. ವಾಮನಾವತಾರದಲ್ಲಿ ವಿಷ್ಣುವಿಗೆ ಈತ ಪಿತ, ಪರಶುರಾಮನಿಗೂ ದಾಶರಥಿ ರಾಮನಿಗೂ ಪುರೋಹಿತ.

ಬ್ರಹ್ಮನ ಸೃಷ್ಟಿಕಾರ್ಯದಲ್ಲಿ ಇವರ ಪಾತ್ರ ಮಹತ್ತರವಾದುದು.

ಉಲ್ಲೇಖಗಳು[ಬದಲಾಯಿಸಿ]

[೩]

  1. "Know About Kashyap". arunachala-ramana.org. Archived from the original on 2016-03-09. Retrieved 2015-08-29.
  2. "Kashyapa - Father of the Devas and Asuras". apamnapat.com. Retrieved 2015-08-29.
  3. https://www.wisdomlib.org/definition/kashyapa
"https://kn.wikipedia.org/w/index.php?title=ಕಶ್ಯಪ&oldid=1151388" ಇಂದ ಪಡೆಯಲ್ಪಟ್ಟಿದೆ