ಪೂರ್ವ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಪೂರ್ವವು ನಾಲ್ಕು ಪ್ರಧಾನ ದಿಕ್ಕುಗಳಲ್ಲಿ ಒಂದಾಗಿದೆ. ಇದು ಪಶ್ಚಿಮ ದಿಕ್ಕಿಗೆ ವಿರುದ್ಧದಲ್ಲಿರುವ ದಿಕ್ಕಾಗಿದೆ.

ವ್ಯುತ್ಪತ್ತಿ[ಬದಲಾಯಿಸಿ]

ಇತರ ಭಾಷೆಗಳಲ್ಲಿಯು ಪೂರ್ವವು ಸೂರ್ಯನು ಉದಯಿಸುವ ದಿಕ್ಕು ಎಂಬ ಅಂಶದಿಂದ ರೂಪುಗೊಂಡಿದೆ: ಇದನ್ನು ಇಂಗ್ಲೀಷ್‍ನಲ್ಲಿ ಇಸ್ಟ್ ಎಂದು ಕರಯುತ್ತಾರೆ. ಪ್ರೊಟೊ-ಜರ್ಮಾನಿಕ್‍ದಲ್ಲಿ *ಆಸ್-ಟು- ಅಥವಾ * ಆಸ್ಟ್ರಾ ಎಂದು ಕರೆಯುತ್ತಾರೆ. ಅಂದರೆ: - "ಪೂರ್ವ", "ಸೂರ್ಯೋದಯದ ಕಡೆಗೆ". ಪ್ರೋಟೋ-ಇಂಡೋ-ಯುರೋಪ್‍ದಲ್ಲಿ *ಆಸ್ ಅಂದರೆ - "ಶೈನ್," ಅಥವಾ "ಡಾನ್".[೧] ಹಳೆಯ ಹೈ ಜರ್ಮನ್‍ನಲ್ಲಿ *ಓಸ್ಟಾರ್ - "ಪೂರ್ವಕ್ಕೆ".[೨] ಲ್ಯಾಟಿನ್ ಓರಿಯನ್ಸ್ ಅಲ್ಲಿ 'ಪೂರ್ವ, ಸೂರ್ಯೋದಯ' ಎಂದು ಕರಯುತ್ತಾರೆ.

ಪೂರ್ವವನ್ನು ಕೆಲವೊಮ್ಮೆ ಎಂದು ಸಂಕ್ಷಿಪ್ತಗೊಳಿಸಲಾಗುತ್ತದೆ.

ನ್ಯಾವಿಗೇಷನ್[ಬದಲಾಯಿಸಿ]

ಸಂಪ್ರದಾಯದಂತೆ, ನಕ್ಷೆಯ ಬಲಭಾಗವು ಪೂರ್ವವಾಗಿದೆ. ದಿಕ್ಸೂಚಿಯ ಬಳಕೆಯಿಂದ ಸಮಾವೇಶವನ್ನು ಅಭಿವೃದ್ಧಿಪಡಿಸಲಾಗಿದೆ. ಹಿಮ್ಮುಖವಾಗಿ ತಿರುಗುವ ಶುಕ್ರ ಮತ್ತು ಯುರೇನಸ್‌ನಂತಹ ಗ್ರಹಗಳ ನಕ್ಷೆಗಳಲ್ಲಿ ಎಡಭಾಗವು ಪೂರ್ವದಲ್ಲಿದೆ.

ದಿಕ್ಸೂಚಿಯನ್ನು ಬಳಸಿಕೊಂಡು ಪೂರ್ವಕ್ಕೆ ಹೋಗಲು, ಒಬ್ಬರು ೯೦° ನ ಬೇರಿಂಗ್ ಅನ್ನು ಹೊಂದಿಸುತ್ತಾರೆ.

ಸಾಂಸ್ಕೃತಿಕ[ಬದಲಾಯಿಸಿ]

ಪೂರ್ವವು ಭೂಮಿಯು ತನ್ನ ಅಕ್ಷದ ಸುತ್ತ ತಿರುಗಿಸುವ ದಿಕ್ಕು ಹಾಗೂ ಪೂರ್ವವು ಸೂರ್ಯನು ಉದಯಿಸುವ ದಿಕ್ಕು. ಪೂರ್ವದ ಕಡೆಗೆ ಪ್ರಾರ್ಥನೆ ಮಾಡುವ ಅಭ್ಯಾಸವು ಕ್ರಿಶ್ಚಿಯನ್ ಧರ್ಮದಲ್ಲಿದೆ. ಕ್ರಿಶ್ಚಿಯನ್ ಚರ್ಚ್‌ಗಳು ಸಾಂಪ್ರದಾಯಿಕವಾಗಿ ಪೂರ್ವದ ಕಡೆಗೆ ಆಧಾರಿತವಾಗಿರುತ್ತದೆ.[೩][೪] ಧಾರ್ಮಿಕವಾಗಿ ಪೂರ್ವದಲ್ಲಿ ಬಲಿಪೀಠವನ್ನು ಹೊಂದಿರುವ ಈ ಸಂಪ್ರದಾಯವು ಚರ್ಚ್ ದೃಷ್ಟಿಕೋನದ ಪ್ರಾರ್ಥನೆ ಪೂರ್ವ ಮತ್ತು ಪಶ್ಚಿಮದ ಒಂದು ಭಾಗವಾಗಿದೆ.

ಏಷ್ಯಾದ ಖಂಡದಲ್ಲಿ ಇದನ್ನು ದೂರದ ಪೂರ್ವ, ಮಧ್ಯಪ್ರಾಚ್ಯ ಮತ್ತು ಸಮೀಪದ ಪೂರ್ವ ಎಂದು ವಿಂಗಡಿಸಲಾಗಿದೆ.[೫]

ಸಹ ನೋಡಿ[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]

  1. "east". Online Etymology Dictionary. Retrieved 3 December 2013.
  2. "east". Merriam-Webster. Retrieved 3 December 2013.
  3. "Orientation of Churches". Catholic Encyclopedia. Retrieved 3 December 2013.
  4. Peters, Bosco (30 April 2012). "Architectural Design Guidelines 1". Liturgy.co.nz. Retrieved 3 December 2013.
  5. Benedictus, Leo (12 May 2017). "Blowing in the wind: why do so many cities have poor east ends?". The Guardian. Retrieved 2 October 2019.
"https://kn.wikipedia.org/w/index.php?title=ಪೂರ್ವ&oldid=1227892" ಇಂದ ಪಡೆಯಲ್ಪಟ್ಟಿದೆ