ಮಳೆಗಾಲ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ಇತ್ತೀಚಿಗೆ ಮಳೆಗಾಲದಲ್ಲಿಯೇ ಪ್ರವಾಸಿಗರು ಮಲೆನಾಡಿಗೂ ಬರುತ್ತಿದ್ದಾರೆ. ಅವರಿಗೆ ಮಳೆಯ ಅಬ್ಬರದೊಂದಿಗೆ ತಾವೂ ಭಾಗವಹಿಸಲು ತುಂಬಾ ಆಸಕ್ತಿಯಿರುತ್ತದೆ.

ಭಾರತದ ವಿಂಧ್ಯ ಪರ್ವತಶ್ರೇಣಿಯಲ್ಲಿ ಮಳೆಗಾಲ

ಮಳೆಗಾಲ[ಬದಲಾಯಿಸಿ]

ಪಶ್ಚಿಮ ದೇಶಗಳಲ್ಲಿ ವರ್ಷವನ್ನು ಸ್ಪ್ರಿಂಗ್, ಸಮ್ಮರ್, ಆಟಮ್, ವಿಂಟರ್, ಎಂದು ನಾಲ್ಕು ವಿಭಾಗ ಮಾಡಿದ್ದಾರೆ. ಆದರೆ ಭಾರತದಲ್ಲಿ ಹವಾಮಾನಕ್ಕೆ ಅನುಗುಣವಾಗಿ ಮೂರೇ ಕಾಲವನ್ನು ಹೇಳುವುದು ಬ್ರಿಟೀಷರ ಕಾಲದಿಂದ ರೂಢಿ ಆಗಿದೆ. ಅವು - ಬೇಸಿಗೆ ಕಾಲ, ಮಳೆಗಾಲ, ಛಳಿಗಾಲ. ಆದರೆ ಪ್ರಾಚೀನರು ಭಾರತ ಕಾಲಗಣನೆಯಲ್ಲಿ, ವಸಂತ, ಗ್ರೀಷ್ಮ, ವರ್ಷ, ಶರತ್, ಹೇಮಂತ, ಶಿಶಿರ ಎಂದು ಆರು ಋತು ಅಥವಾ ಕಾಲವನ್ನು ವಿಭಾಗಿಸಿದ್ದಾರೆ. ಅದರಲ್ಲಿ ವರ್ಷ ಋತು ಮಳೆಯ ಋತು - ಅಂದರೆ ಶ್ರಾವಣ ಮತ್ತು ಭಾದ್ರಪದ ಮಾಸಗಳು. ಕರ್ನಾಟಕದ ಹಳ್ಳಿಗಳಲ್ಲಿ ಋತುಗಳು ಮತ್ತು ಮಳೆ ಮಹಾನಕ್ಷತ್ರಗಳು ಇನ್ನೂ ಪ್ರಚಲಿತದಲ್ಲಿವೆ. ಭರಣಿ ಮಳೆಗೆ ಬಿತ್ತನೆ, ಆರಿದ್ರ ಮಳೆಗೆ ಹಬ್ಬ, ಮೃಗಶಿರ (ಮಿರಗನ ಮಳೆ) ಇವು ವಿಶಿಷ್ಟವಾದವು .

ಮಳೆಗಾಲ ೨೦೧೩[ಬದಲಾಯಿಸಿ]

 • ಈ ವರ್ಷದ ಮಳೆಗಾಲದಲ್ಲಿ ಭಾರತದಲ್ಲಿ ಉತ್ತಮ ಮಳೆ ಆಗಿದ್ದರೂ ಅನೇಕ ಕಡೆ ಪ್ರಾಕೃತಿಕ ವಿಕೋಪ ಸಂಭವಿಸಿದೆ ; ಅದೂ ಉತ್ತರಾಖಂಡದಲ್ಲಿ ಭೀಕರ ರೌದ್ರ ನೃತ್ಯ ನಡೆಸಿದೆ. ಈ ೨೦೧೩, ಜೂನ್ ೧೪ರಿಂದ ೧೭ರ ವರೆಗೆ ಸುರಿದ ಕುಂಭದ್ರೋಣ ಮಳೆಯಲ್ಲಿ ೧೧೦೦೦೦ (೧,೨೫,೦೦೦) ಕ್ಕೂ ಹೆಚ್ಚು ಜನ ಕೇದಾರನಾಥ ಯಾತ್ರಿಕರು ಕೇದಾರದಲ್ಲಿ ಸಿಕ್ಕಿಹಾಕಿಕೊಂಡು ಪ್ರಕೃತಿಯ ವಿಕೋಪಲ್ಲಿ ಜೀವನ್ಮರಣ ಹೋರಾಟ ನಡೆಸಬೇಕಾಯಿತು. ನೂರಾರು ಮನೆಗಳು ಕೊಚ್ಚಿ ಹೋದವು, ಶ್ರೀಶಂಕರರ ದೇವಾಲಯ ಮೂರ್ತಿಯೊಡನೆ ಪ್ರವಾಹದಲ್ಲಿ ಕೊಚ್ಚಿ ಹೋಯಿತು. ಕೇದಾರನಾಥ ದೇವಾಲಯ ಉಳಿದರೂ ಶಿಥಿಲವಾಯಿತು.
 • ಭಾರತ ಸರ್ಕಾರದ ಅಂಕಿ ಅಂಶಗಳ ಪ್ರಕಾರ ಭಾರತದಲ್ಲಿ ಒಟ್ಟು ೨೦೧೩ ಏಪ್ರಿಲ್ ನಿಂದ ಜುಲೈ ಅಂತ್ಯದ ವರೆಗೆ ೧೧೦೦ ಕ್ಕೂಹೆಚ್ಚು ಜನ ಸತ್ತಿದ್ದು ೧,೦೦,೦೦೦ ಕ್ಕೂ ಹೆಚ್ಚು ಮನೆಗಳು ಹಾನಿಗೀಡಾಗಿವೆ. ಉತ್ತರಾಖಂಡ ಸರ್ಕಾರದ ಹೇಳಿಕೆ ಪ್ರಕಾರ ಆ ಪ್ರದೇಶದಲ್ಲಿ ೫೮೦ ಜನ ಸತ್ತಿದ್ದು ೫೪೭೪ ಜನ ನಾಪತ್ತೆಯಾಗಿದ್ದಾರೆ. ಸತ್ಯ ಸಂಗತಿ ಇದಕ್ಕೂ ಹೆಚ್ಚಿರಬಹುದೆಂದು ಊಹೆ.
 • ಭಾರತದ ಹವಾಮಾನ ಇಲಾಖೆಯ ಹೇಳಿಕೆ ಪ್ರಕಾರ (ಶ್ರೀ ಎಸ.ಬಿ. ಗಾಂವಕರ್ ಹಿರಿಯ ವಿಜ್ಞಾನಿ) ಭಾರತವು ಒಟ್ಟಾರೆ ೨೦೧೩ ಆಗಸ್ಟ್ ಅಂತ್ಯಕ್ಕೆ ಶೇ.೧೧ ರಷ್ಟು ಹೆಚ್ಚು ಮಳೆಯನ್ನು ಪಡೆದಿದೆ. ದಿನಾಂಕ ೧ ಜೂನ್ ೨೦೧೩ ರಿಂದ ಆಗಸ್ಟ್ ಅಂತ್ಯಕ್ಕೆ (೩೧-೮-೨೦೧೩) ೭೮೧.೩ ಮಿಮೀ. ಮಳೆ ದಾಖಲಾಗಿದೆ. ಅದು ವಾರ್ಷಿಕ ಸರಾಸರಿ ೭೦೬ ಮಿಮೀ.ಗಿಂತ ೭೪.೬ ಮಿ.ಮೀ. ಹೆಚ್ಚು. ಈಶಾನ್ಯ, ಮದ್ಯ ಮತ್ತು ದಕ್ಷಿಣ ಭಾರತವು ಕ್ರಮವಾಗಿ ೨೧%,೨೯%,೧೬% ರಷ್ಡು ಹೆಚ್ಚು ಮಳೆ ಪಡೆದಿದೆ.
 • ಸುಮಾರು, ದೇಶದ ೮೭% ಭಾಗದಷ್ಟು ಪ್ರದೇಶ ಹೆಚ್ಚು ಅಥವಾ ವಾರ್ಷಿಕ ಸರಾಸರಿಯಷ್ಟು ಮಳೆ ಪಡೆದಿದೆ. ಆದರೆ ೧೩% ಭಾಗದಷ್ಟು ಪ್ರದೇಶ ಕೊರತೆಯನ್ನು ಹೊಂದಿದೆ. ಇದೆರೀತಿ ಸಹಜ ಮಳೆ ಮುಂದಿನ ತಿಂಗಳುಗಳಲ್ಲಿ ಆಗುವ ಸಂಭವವಿದೆ ಎಂದು ಭಾರತದ ಹವಾಮಾನ ಇಲಾಖೆಯ ಹೇಳಿಕೆ.(೩೧-೩-೨೦೧೩) ಕರ್ನಾಟಕದಲ್ಲಿ ಅನೇಕ ವರ್ಷಗಳ ಈಚೆಗೆ ಉತ್ತಮ ಮಳೆ ಆಗಿದ್ದು ಜುಲೈ ತಿಂಗಳ ಅಂತ್ಯಕ್ಕೇ ಎಲ್ಲಾ ಅಣೆಕಟ್ಟುಗಳೂ ತುಂಬಿ ತುಳುಕುತ್ತಿವೆ.
 • ಇಷ್ಟಾದರೂ ಕರ್ನಾಟಕದಲ್ಲಿ ಇನ್ನೂ ೫೨ ತಾಲ್ಲೂಕುಗಳಿಗೆ ಸಾಕಷ್ಟು ಮಳೆ ಆಗದೆ ಬರಗಾಲದ ಸಂಕಷ್ಟ ಒದಗಿದೆ. ಉತ್ತರ ಪ್ರದೇಶದಲ್ಲಿ ೧೭ ಲಕ್ಷ ಜನ ಅತಿ ವೃಷ್ಟಿ ಯ ಪರಿಣಾಮ ಗಳನ್ನು ಎದುರಿಸುತ್ತಿದ್ದಾರೆ. ೨೮೦ ಜನ ಸಾವನ್ನಪ್ಪಿದ್ದಾರೆ

ಫಾಯಿಲಿನ್ ತೂಫಾನು -ಸುಂಟರಗಾಳಿ[ಬದಲಾಯಿಸಿ]

ಫಾಯಿಲಿನ್ ಚಂಡ ಮಾರುತ

ಒಡಿಶಾದಲ್ಲಿ ಅನಾಹುತ ಮಾಡಿದ ಚಂಡಮಾರತ 'ಫಯಲಿನ್' ಬಂಗಾಳಾ ಕೊಲ್ಲಿ 2/3-10-2013
 • ಬಂಗಾಳಾ ಕೊಲ್ಲಿಯಲ್ಲಿ ಆರಂಭವಾದ ತೂಫಾನು / ಸೈಕ್ಲೋನು ೧೨/೧೩-೧೦-೨೦೧೩ ರಲ್ಲಿ ಒಡಿಶಾ, ಆಂಧ್ರದ ತೀರ ಪ್ರದೇಶಗಳಿಗೆ ಅಪ್ಪಳಿಸುವ ಸೂಚನೆಯನ್ನು ಹವಾಮಾನ ಇಲಾಖೆಯವರು ಪದೇ ಪದೇ ಟಿ.ವಿ ಯಲ್ಲಿ ಹೇಳುತ್ತಿದ್ದರು. ಅದು ಸುಮಾರು ೨೩೦- ೨೦೦ಕಿ.ಮೀ. ವೇಗದಲ್ಲಿ ಒಡಿಶಾ, ಆಂಧ್ರದ ತೀರ ಪ್ರದೇಶಗಳನ್ನು ಸಮೀಪಿಸುತ್ತಿತ್ತು. ಸುಮಾರು ೨೦,೦೦೦ಸೈನ್ಯ ಪಡೆ ಸ್ಥಳೀಯ ಪೋಲೀಸ್ ಪಡೆ ಹಗಲು ರಾತ್ರಿ ಎನ್ನದೆ ಶ್ರಮಿಸಿ ೯.೧ ಲಕ್ಷ ಕರಾವಳಿ ಜನರನ್ನು ಸುರಕ್ಷಿತ ತಾಣಗಳಿಗೆ ಸ್ಥಳಾಂತರಿಸಿದರು. ಇದು ದಾಖಲೆ ಕಾರ್ಯ ಎನಿಸಿದೆ. ಅಲ್ಲಿಯ ಜಿಲ್ಲಾ ಧಿಕಾರಿಗಳು ೯೬ ಗಂಟೆಗಳ ಕಾಲ ಅವಿರತ ನಿದ್ದೆ ಬಿಟ್ಟು ಕೆಲಸ ಮಾಡಿದರೆಂದು ಮಾಧ್ಯಮಗಳು ಹೊಗಳಿವೆ (ಒಡಿಶಾದ ಗಂಜಾಮ್ ಜಿಲ್ಲೆಯ ಕ್ರಿಶನ್ ಕುಮಾರ್ ಅಲ್ಲಿಯ ಪೊಲೀಸ್ ಅಧಿಕರಿಗಳ ಜೊತೆ ಹಗಲುರಾತ್ರಿಯೆನ್ನದೆ ಹಳ್ಳಿ ಹಳ್ಳಿಗಳಿಗೆ ಭೇಟಿ ನೀಡಿ ಪರಿಹಾರ ಕೈ ಗೊಂಡರೆಂದುವರದಿ ).
 • ಆದರೆ ಸಾವಿನ ಸಂಖ್ಯೆ ಕೇವಲ ೩೭ ಆದರೂ, ತೂಫಾನು ಬಂದಾಗ ಸುರಿದ ಮಳೆ ಭೀಕರ ಪ್ರವಾಹ ಉಂಟುಮಾಡಿ ಆ ಕರಾವಳಿಯ ಮನೆ ಗುಡಿಸಲುಗಳನ್ನು ನಾಶ ಮಾಡಿತು. ತಮ್ಮ ಊರಿಗೆ ಹಿಂತಿರುಗಿದ ೨.೫ ಲಕ್ಷ ಜನ ಮನೆ-ಮಠ, ಆಹಾರವಿಲ್ಲದೆ, ಅತೀವ ತೊಂದರೆಗೆ ಒಳ ಗಾದರು. ಪ್ರವಾಹದಲ್ಲಿ ಮನೆ-ರಸ್ತೆಗಳಲ್ಲಿ ನೀರು ನಿಂತು ೧೫-೧೦-೨೦೧೩ ಆದರೂ ಇಳಿದಿರಲಿಲ್ಲ. (ಇದು ೧೫-೧೦-೨೦೧೩ ರ ಸುದ್ದಿ ಮಾಧ್ಯಮದಿಂದ) ಒಡಿಶಾ, ಆಂಧ್ರ, ಕೇಂದ್ರ ಸರ್ಕಾರ್ಗಳು ತಮ್ಮ ಪೂರ್ಣ ಶಕ್ತಿಯನ್ನು ಉಪಯೋಗಿಸಿ ಜನರ ಸಂಕಷ್ಟ ನಿವಾರಣೆಗೆ ಶ್ರಮಿಸು ತ್ತಿರುವುದಾಗಿ ಹೇಳುತ್ತಿವೆ- ಸುದ್ದಿ ಮಾಧ್ಯಮಗಳೂ ಹಾಗೆಯೇ ಹೇಳುತ್ತಿವೆ.
 • ಈ ಮಧ್ಯದಲ್ಲಿ (೧೩-೧೦-೨೦೧೩)ಮಧ್ಯಪ್ರದೇಶದಲ್ಲಿ ರತನ್ ಘರ್ ಮಾತಾ ಮಂದಿರದ ೫ ಲಕ್ಷ ದಸರಾ ಹಬ್ಬದ ಯಾತ್ರಿಗಳು ದೇವರ ದರ್ಶನಕ್ಕೆ ಹೋಗುವಾಗ ರಕ್ಷಣಾ ಸಿಬ್ಬಂದಿಯ ತಪ್ಪಿನಿಂದ ಕಾಲು ತುಳಿತಕ್ಕೆ ಸಿಕ್ಕಿ ೧೧೫ ಜನ ಮಕ್ಕಳು ಹೆಂಗಸರೂ ಸೇರಿ ಸತ್ತಿರುವುದಾಗಿ ಪತ್ರಿಕೆಗಳು ವರದಿ ಮಾಡಿವೆ (ಪಿಟಿಐ ೧೪-೧೦-೨೦೧೩).

ಆಂಧ್ರದಲ್ಲಿ[ಬದಲಾಯಿಸಿ]

ದಿ.27,ಅಕ್ಟೋಬರ್ 2013)
ಆಂಧ್ರ ಪ್ರದೇಶ, ಒಡಿಶಾ ಮತ್ತು ಪಶ್ಚಿಮ ಬಂಗಾಳದಲ್ಲಿ ಕಳೆದ ನಾಲ್ಕು ದಿನಗಳಿಂದ ಸುರಿಯುತ್ತಿರುವ ಮಳೆ ಹಾಗೂ ಪ್ರವಾಹಕ್ಕೆ ಬಲಿಯಾದವರ ಸಂಖ್ಯೆ 45ಕ್ಕೆ ಏರಿದೆ. ಸುಮಾರು 30 ಜಿಲ್ಲೆಗಳ ನೂರಾರು ಗ್ರಾಮಗಳು ಜಲಾವೃತಗೊಂಡಿವೆ. ಪ್ರವಾಹದಿಂದ ರಸ್ತೆಹಾಗೂ ರೈಲು ಮಾರ್ಗಗಳ ಸಂಚಾರದಲ್ಲಿ ತೀವ್ರ ವ್ಯತ್ಯಯ ಕಂಡುಬಂದಿದೆ. ಪಶ್ಚಿಮ ಬಂಗಾಳದಲ್ಲೂ ಮಳೆ ಸಂಬಂಧಿ ಅವಘಡಗಳಿಂದ ಮೂವರು ಮೃತಪಟ್ಟಿದ್ದಾರೆ. ಕೋಲ್ಕೊತಾ ಹಾಗೂ ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ.
ಆಂಧ್ರ ಪ್ರದೇಶದಲ್ಲಿ ಮಳೆಗೆ 29 ಮಂದಿ ಬಲಿಯಾಗಿದ್ದರೆ, ಒಡಿಶಾದಲ್ಲಿ 16 ಮತ್ತು ಪಶ್ಚಿಮ ಬಂಗಾಳದಲ್ಲಿ ಮೂವರು ಮೃತಪಟ್ಟಿದ್ದಾರೆ. ಸಾವಿರಾರು ಮಂದಿ ತೊಂದರೆಗೆ ಸಿಲುಕಿದ್ದಾರೆ. ಆಂಧ್ರದಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ, ತಗ್ಗು ಪ್ರದೇಶದ ಸುಮಾರು 72 ಸಾವಿರ ಮಂದಿಯನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದೆ. 3,230 ಗ್ರಾಮಗಳು ಜಲಾವೃತಗೊಂಡಿದ್ದು, ಮಳೆಯಿಂದ ಸುಮಾರು 6.77 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆದಿರುವ ಬೆಳೆ ಹಾಗೂ 6,597

ಮನೆಗಳಿಗೆ ಹಾನಿ ಉಂಟಾಗಿದೆ. ವಿಜಯವಾಡ-ಹೈದರಾಬಾದ್ ಹೆದ್ದಾರಿಯುದ್ದಕ್ಕೂ ನೀರು ನಿಂತಿದ್ದು ಸಂಚಾರ ಅಸ್ತವ್ಯಸ್ತಗೊಂಡಿದೆ.

ಮುಂದುವರಿದ ಪರಿಹಾರ
ರಾಷ್ಟ್ರೀಯ ವಿಪತ್ತು ಪರಿಹಾರ ಪಡೆ ಶ್ರೀಕಾಕುಳಂ, ಗುಂಟೂರು, ಪಶ್ಚಿಮ ಗೋದಾವರಿ, ನಲಗೊಂಡ, ಪ್ರಕಾಶಂ ಹಾಗೂ ಮಹಬೂಬ್‌ನಗರಗಳಲ್ಲಿ ಪರಿಹಾರ ಕಾರ್ಯಾಚರಣೆ ಕೈಗೊಂಡಿದೆ. ಶ್ರೀಕಾಕುಳಂನ 36 ಶಿಬಿರ ಸೇರಿದಂತೆ 9 ಜಿಲ್ಲೆಗಳಲ್ಲಿ 178 ಪರಿಹಾರ ಶಿಬಿರಗಳನ್ನು ತೆರೆಯಲಾಗಿದೆ.
ಸಂಕಷ್ಟದಲ್ಲಿ 5.32 ಲಕ್ಷ ಜನರು

ಒ:ಡಿಶಾದ 13 ಜಿಲ್ಲೆಗಳು ಪ್ರವಾಹ ಹಾಗೂ ಮಳೆಯಿಂದ ನಲುಗಿಹೋಗಿವೆ. ರುಸಿಕುಲ್ಯಾ, ವನ್ಸಧಾರಾ ಸೇರಿದಂತೆ ಪ್ರಮುಖ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. 2 ಸಾವಿರಕ್ಕೂ ಹೆಚ್ಚು ಗ್ರಾಮಗಳು ಜಲಾವೃತಗೊಂಡಿವೆ. 5.32 ಲಕ್ಷ ಜನರು ಸಂಕಷ್ಟದಲ್ಲಿ ಸಿಲುಕಿದ್ದಾರೆ. ಸರಕಾರ ಈವರೆಗೆ ತಗ್ಗು ಪ್ರದೇಶದಲ್ಲಿ ವಾಸಿಸುವ 1.74 ಲಕ್ಷ ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಿದೆ.

(ವಿಜಯಕರ್ನಾಟಕ ಸುದ್ದಿ/Oct 27, 2013)

ಹಿಂಗಾರು ಮಳೆ[ಬದಲಾಯಿಸಿ]

 • ಭಾರತಕ್ಕೆ ಮುಂಗಾರು ಮಳೆ ಎಂದರೆ ನೈರುತ್ಯ ದಿಕ್ಕಿನಿಂದ ಬರುವ ಮಳೆ. ನೈರುತ್ಯ ಮಾನ್ಸೂನ್ ಮಾರುತಗಳು (ಪಶ್ಚಿಮ ದಕ್ಷಿಣದ ಮಧ್ಯದ ದಿಕ್ಕು) ಜೂನ್ ತಿಂಗಳಿನಿಂದ ಆರಂಭವಾಗಿ ಅಕ್ಟೋಬರ್ ೧೫ರ ವರೆಗೆ ಇರುತ್ತದೆ. ಇದು ಭಾರತದ ಪಶ್ಚಿಮದ ದಿಕ್ಕಿನಿಂದ ಅರಬ್ಬಿ ಸಮುದ್ರದಲ್ಲಿ ಆರಂಭವಾಗಿ ಭಾರತದ ಪಶ್ಚಿಮದ ತೀರಗಳಿಗೆ ಹೆಚ್ಚಾಗಿಯೂ ಉಳಿದ ಭಾಗಗಳಿಗೆ ಸಾಧಾರಣವಾಗಿಯೂ ಮಳೆ ತರುವುದು. (ಮುಂಗಾರು=ತೆಂಕಣ(ದಕ್ಷಿಣ) ಮತ್ತು ಪಡುವಣ(ಪಶ್ಚಿಮ) ದಿಕ್ಕುಗಳ ನಡುವಿನ ದಿಕ್ಕು southwest mosoon)
 • ಹಿಂಗಾರು ಮಳೆ ಅಥವಾ ಈಶಾನ್ಯ ಮಾರುತಗಳಿಂದ (ಉತ್ತರ ಮತ್ತು ಪೂರ್ವದ ಮಧ್ಯದ ದಿಕ್ಕು) ಬರುವ ಮಳೆ ಉತ್ತರ ದಿಕ್ಕಿನಿಂದ ಮಾರುತಗಳು (ಗಾಳ) ಆರಂಭವಾಗಿ ವಾಯು ಭಾರ ಕುಸಿತವಿರುವ ಬಂಗಾಳ ಕೊಲ್ಲಿ ಪ್ರವೇಶಮಾಡಿ ಭಾರತದ ಪೂರ್ವ ತೀರದ ರಾಜ್ಯಗಳಿಗೆ ಮಳೆ ತರುವುದು. ಮಧ್ಯ ಭಾಗಕ್ಕೆ ಸಾಧಾರಣ ಮಳೆ ತರುವುದು.
 • ಭಾರತ ಭೂಮಿಗೆ ಮುಂಗಾರು ಪ್ರಧಾನ ಮಳೆ ಆಗಿದೆ. ಈ ಬಾರಿ (೨೦೧೩) ಅಕ್ಟೋಬರ್ ಮೂರನೇ ವಾರ ಆರಂಭವಾಗುವುದಕ್ಕೂ ಸ್ವಲ್ಪ ಮುಂಚೆಯೇ ಹಿಂಗಾರು ಮಳೆ ಆರಂಭವಾಗಿದೆ. ಇದು ಪೂರ್ವ ಕರಾವಳಿಯ ರಾಜ್ಯಗಳ ಭಾಗ್ಯವಿಧಾತ. :(ಬಡಗಣ(ಉತ್ತರ) ಮತ್ತು ಮೂಡಣ (ಪೂರ್ವ) ದಿಕ್ಕುಗಳ ನಡುವಿನ ದಿಕ್ಕು : northeast mosoon)

ಹೆಲೆನ್ ಚಂಡಮಾರುತ[ಬದಲಾಯಿಸಿ]

೧೧-೩-೨೦೧೪-ಸುದ್ದಿ[ಬದಲಾಯಿಸಿ]

ಅಕಾಲಿಕ ಮಳೆ - ಮಾರ್ಚಿ ೨೦೧೪ರಲ್ಲಿ ಆದ ಉತ್ತರ ಕರ್ನಾಟಕದ ವಿಜಾಪುರ ಜಿಲ್ಲೆಯೊಂರಲ್ಲಿಯೇ ಬಿದ್ದ ಅಕಾಲಿಕ ಆಲಿಕಲ್ಲಿನಿಂದ ಕೂಡಿದ ಉತ್ಪಾತ ಮಳೆಯಿಂದಾಗಿ ಸುಮಾರು ೧..೨೨ ಲPಕರೆ ಬೆಳೆ ನಷ್ಟವಾಗಿದೆ ಎಂದು ಅಂದಾಜು ಮಾಡಿದ್ದಾರೆ. ದ್ರಾಕ್ಷಿ, ದಾಳಿಂಬೆ, ನಿಂಬೆ, ಬಾಳೆ ನೀರುಳ್ಳಿ ಮತ್ತಿತರ ಬೆಳೆಗಳು ೧.೮೨ ಟನ್ ಗಳಷ್ಟು ಸುಮಾರು ರೂ.೩೩೭ಕೋಟಿ ಬೆಲೆಯದು. ತೋಟಗಾರಿಕೆ ಇಲಾಖೆಯ ಉಪನಿರ್ದೇಶಕರ ಹೇಳಿಕೆ.(ಪ್ರಜಾವಾಣಿ ೧೨-೩-೨೦೧೪) ಈ ಮಳೆಯಿಂದ, ಬೆಳಗಾವಿ ,ವಿಭಾಗದ ೯ ಜಿಲ್ಲೆಗಳಲ್ಲಿ ಹನ್ನೊಂದು ಜನ ಸತ್ತಿದ್ದಾರೆ. ೧೫೭ ಜಾನುವಾರುಗಳು ಸತ್ತಿವೆ. ೫೫೧ ಮನೆಗಳು ಹಾನಿಗೊಳಗಾಗಿವೆ. ಇನ್ನೂ ಹೆಚ್ಚಿನ ಹಾನಿಯಾಗಿದ್ದು ಪೂರ್ಣಮಹಿತಿ ಪಡೆಯಲು ಪ್ರಯತ್ನ ನಡೆದಿದೆ.
ಪರಿಹಾರ ನಿಯಮ : ದ್ರಾಕ್ಷಿ, ದಾಳಿಂಬೆ ಮಾವು, ಅಡಿಕೆ, ತೆಂಗು ಇತ್ಯಾದಿ ತೋಟದ ಬೆಳಿಗಳಿಗೆ ರೂ.೧೨೦೦೦/- ಕೊಡಲು ಅವಕಾಶವಿದೆ . ಮಳೆಮಿಶ್ರಿತ ಬೆಳೆಗಳಿಗೆ ೪೫೦೦/- ನೀರಾವರಿ ಬೆಳೆಗೆ ರೂ. ೮೦೦೦/- ಆದರೆ ಸಕಾರ ಮನಸ್ಸು ಮಾಡಬೇಕು. ಚುನಾವಣೆ ಇದ್ದರೂ ಪರಿಹಾರ ಕೊಡಲು ಅವಕಾಶವಿದೆಯರಂದು ಹೇಳಲಾಗಿದೆ.(೧೧-೩-೨೦೧೪ಪ್ರಜಾವಾಣಿ)
ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಇತ್ತೀಚೆಗೆ ಸುರಿದ ಆಲಿಕಲ್ಲು ಮಳೆಯಿಂದ ಹಾನಿಗೊಳ­ಗಾದ ರೈತರಿಗೆ ಮಹಾರಾಷ್ಟ್ರ ಮಾದರಿಯಲ್ಲಿ ಪರಿಹಾರ ನೀಡಲು ಸರ್ಕಾರ ತೀರ್ಮಾನಿಸಿದೆ. ಆಲಿಕಲ್ಲು ಮಳೆಯಿಂದ ಕೃಷಿ ಮತ್ತು ತೋಟಗಾರಿಕಾ ಬೆಳೆಗಳಿಗೆ ಹಾನಿಯಾಗಿರುವ ಕುರಿತು ಬುಧವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ನಡೆದಿದೆ. ಸಂತ್ರಸ್ತ ರೈತರಿಗೆ ಮಹಾರಾಷ್ಟ್ರ ರಾಜ್ಯ ಸರ್ಕಾರ ಅನುಸರಿಸಿದ ಮಾದರಿಯನ್ನು ರಾಜ್ಯದಲ್ಲೂ ಅಳವಡಿಸಿಕೊಳ್ಳಲು ಸಂಪುಟ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ.
ಬಾಗಲಕೋಟೆ, ಬೆಳಗಾವಿ, ಬೀದರ್‌, ವಿಜಾಪುರ, ಗುಲ್ಬರ್ಗಾ, ಕೊಪ್ಪಳ, ಯಾದಗಿರಿ ಮತ್ತು ರಾಯಚೂರು ಜಿಲ್ಲೆಗಳ ವ್ಯಾಪ್ತಿಯಲ್ಲಿ ಆಲಿಕಲ್ಲು ಮಳೆಯಿಂದ ಕೃಷಿ ಮತ್ತು ತೋಟಗಾರಿಕಾ ಬೆಳೆಗಳಿಗೆ ಹಾನಿಯಾಗಿತ್ತು. ಒಟ್ಟು 1.68 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆ ಹಾನಿ ಸಂಭವಿಸಿದೆ ಎಂದು ಅಂದಾಜು ಮಾಡಲಾಗಿದೆ. ಇದರಿಂದ ರೂ. 691 ಕೋಟಿಯಷ್ಟು ನಷ್ಟ ಆಗಿದೆ ಎಂದು ರಾಜ್ಯ ಸರ್ಕಾರ ಕೇಂದ್ರಕ್ಕೆ ವರದಿ ಮಾಡಿದೆ.

ಮುಂಗಾರು ಮಳೆ[ಬದಲಾಯಿಸಿ]

ಭಾರತಕ್ಕೆ ಮುಂಗಾರುಮಳೆ ಅತ್ಯಂತ ಪ್ರಮುಖವಾದುದು. ಭಾರತದ ಬಹಳಷ್ಟು ಬೆಳೆ, ನೀರಾವರಿ ವ್ಯವಸ್ಥೆ, ಕುಡಿಯುವರಿನ ಪೂರೈಕೆಗೆ ಅರಬ್ಬಿ ಸಂಮುದ್ರದಿಂದ ಹುಟ್ಟಿ ಬರುವ ನೈರುತ್ಯ ವಾಣಿಜ್ಯ ಮಾರುತಗಳು ತರುವ ಮುಂಗಾರು ಮಳೆ ಭಾರತದ ಜೀವ ಜಲಸಂಪನ್ಮೂಲ; ಜೀವನಾ ಧಾರ. ಅದು ಸಾಮಾನ್ಯವಾಗಿ ಜೂನ್ ಮೊದಲ ವಾರದಲ್ಲಿ ಆರಂಭವಾಗುತ್ತದೆ. ಹವಾಮಾನ ಇಲಾಖೆಯ ವರದಿಯಂತೆ ಈಚೆಗಿನ ೧೦ ವರ್ಷಗಳಲ್ಲಿ ಮುಂಗಾರಮಳೆ ಆರಂಭವಾಗಿ ಕೇರಳಕ್ಕೆ ಪ್ರವೇಶಸಿದ ದಿನಗಳು-(ಪ್ರಜಾವಾಣಿ ೭-೬-೨೦೧೪):

06-6-2014
01-6-2013
03-6-2012
29-5-2011
31-5-2010
23-5-2009
28-5-2008
26-5-2007
28-5-2006
07-6-2005
 • ೨೦೧೪(2014) ರಲ್ಲಿ ಜೂನ್ ೫ (5)ನೇ ತಾರೀಖು ಮುನ್ಸೂಚನೆ ನೀಡಿ 06-6-2014ಮಳೆಗಾಲ ಕೇರಳದಲ್ಲಿ ಆರಂಭವಾಗುವುದೆಂದು ಭಾರತದ ಹವಾಮಾನ ಇಲಾಖೆ ಹೇಳಿದೆ

೨೦೧೪ ರ ಮುಂಗಾರು[ಬದಲಾಯಿಸಿ]

 • ಜೂನ್ ೨೦೧೪ ಭಾರತದ ಅತ್ಯಂತ ಪ್ರಾಮುಖ್ಯವಾದ ಮುಂಗಾರು ಮಳೆ ಈ ಬಾರಿ ಸಮಯಕ್ಕೆ ಸರಿಯಾಗಿ ಕೇರಳಕ್ಕೆ ಕಾಲಿರಿಸಿ ಅಲ್ಲಿ ಸಾಕಷ್ಟು ಮಳೆಯಾಗಿದೆ ; ಆದರೆ ಜೂನ್ ತಿಂಗಳಲ್ಲಿ /ಅದರ ಅಂತ್ಯಕ್ಕೆ ಶೇಕಡಾ ೫೪/ 54 ರಷ್ಟು ಮಳೆಯಾಗಿ ಶೇ. ೪೭/ 47 ರಷ್ಟು ಕೊರತೆಯಾಗಿದೆ. ರಾಷ್ಟೀಯ ಹವಾಮಾನ ಮುನ್ನೊಟ ಕೇಂದ್ರದ, ಈ ವರದಿ ನಿರಾಶಾದಾಯಕವಾಗಿದೆ. ಇದೇ ಪರಿಸ್ಥಿತಿ ಮುಂದುವರಿಯಬಹುದೆಂದು ಹೇಳಿದೆ.
 • ಹೆಚ್ಚು ಧಾನ್ಯ ಬೆಳೆಯವ ಪಂಜಾಬ್, ಹರಿಯಾಣ ಇತ್ಯಾದಿ- ವಾಯವ್ಯ ಭಾಗದಲ್ಲಿ ಮಳೆ ಬಹಳ ಕೊರತೆಯಾಗಿ ಬಿತ್ತನೆ ತಡವಾಗುತ್ತಿದೆ. ಹವಾಮಾನ ಅಧಿಕಾರಿ ಮದ್ಯಭಾರತದಿಂದ ಪ್ರತಿರೋಧ ಗಾಳಿ ಬೀಸುತ್ತಿರುವುದರಿಂದ ಮಳೆ ಮಾರತಗಳು ವಾಯವ್ಯ ಭಾಗಕ್ಕೆ ಹೋಗುತ್ತಿಲ್ಲ ವೆಂದಿದ್ದಾರೆ. ದೇಶದ ಬಹು ಭಾಗದಲ್ಲಿ ಹತ್ತಿ, ದ್ವಿದಳ ಧಾನ್ಯ, ಬಿತ್ತನೆ ತಡವಾಗಿದೆ. ಇನ್ನೂ ಅಣೆಕಟ್ಟೆಗಳಿಗೆ ನೀರು ಬಂದಿಲ್ಲ. ಪರಿಸ್ಥತಿ ಸುಧಾರಿಸಬಹುದೆಂದು ಹವಾಮಾನ ಇಲಾಖೆ ತಜ್ಞರು ಹೇಳುತ್ತಿದ್ದಾರೆ. ಆದರೆ ಸರ್ಕಾರಕ್ಕೂ ಜನತೆಗೂ ಚಿಂತೆಯಾಗಿದೆ .
 • ಹಿಂದಿನ ವರ್ಷ ಈರುಳ್ಳಿ ಟೊಮೇಟೋ, ತರಕಾರಿಗಳ ಬೆಲೆ ಕೆ.ಜಿ.ಗೆ ೧೦೦ ರೂಪಾಯಿಗೆ ಹೋಗಿದ್ದು ಈ ಬಾರಿ ರೂಪಾಯಿ ೨೦೦/- (200/-)ಕ್ಕೆ ಹೋಗಬಹುದೆಂದು ಟಿ.ವಿ. ಮಾದ್ಯಮಗಳು ಪ್ರಕಟಿಸುತ್ತಿವೆ. ಎಷ್ಟೇ ನೀರಾವರಿ ವ್ಯವಸ್ಥೆ ಇದ್ದರೂ ಮುಂಗಾರು ವಿಫಲವಾದರೆ ಭಾರತದ ಅರ್ಥ ವ್ಯವಸ್ಥೆ ಏರುಪೇರಾಗುವುದು.
 • ಮಹಾರಾಷ್ರ , ಉತ್ತರ ಕರ್ನಾಟಕ, ಮಧ್ಯಪ್ರದೇಶ, ರಾಜಸ್ಥಾನ, ತೆಲಂಗಾಣಾ, ಒಡಿಶಾ, ಹೊಸ ಆಂಧ್ರ, ಉತ್ತರ ಭಾಗದ ಎಲ್ಲಾ ರಾಜ್ಯಗಳು, ಈಶಾನ್ಯ ರಾಜ್ಯಗಳು, ಶೇ. ೬೦/60 ಕ್ಕಿಂತ ಕಡಿಮೆ ಮಳೆ ಆಗಿದೆ. ಜುಲೈನಲ್ಲಿ ಮಳೆಯಾದರೂ ಬಿತ್ತನೆಗೆ ತೊಂದರೆಯಾಗದೆಂದು ಹವಾಮಾನ ಇಲಾಖೆಯ ಅಭಿಪ್ರಾಯ. (ಪತ್ರಿಕಾ ಹೇಳಿಕೆ -ಬಸು -ಹವಾಮಾನ ಇಲಾಖೆ -We can expect monsoon to enter fresh areas by first week of July," said B P Yadav, head of the National Weather Forecasting Centre at IMD Delhi.)[೧]

೨೦೧೪ ಜುಲೈ-ಕರ್ನಾಟಕದಲ್ಲಿ ಮಳೆಗಾಲ[ಬದಲಾಯಿಸಿ]

 • ೨೦೧೪ ಜೂನ್‌ ತಿಂಗಳಲ್ಲಿ ವಾಡಿಕೆಯಂತೆ ೧೯೪ ಮಿ.ಮೀ. ಮಳೆ ಆಗಬೇಕಿತ್ತು. ಆದರೆ, 78 ಮಿ.ಮೀ. ಮಾತ್ರ ಮಳೆ ಸುರಿದಿದೆ. ಕಳೆದ 52 ವರ್ಷಗಳಲ್ಲಿ ಜೂನ್‌ ತಿಂಗಳಲ್ಲಿ ರಾಜ್ಯ ಇಷ್ಟೊಂದು ಕಡಿಮೆ ಮಳೆಯನ್ನು ಕಂಡಿರಲಿಲ್ಲ.
 • ದಕ್ಷಿಣ ಒಳನಾಡು ಹೊರತುಪಡಿಸಿದರೆ ರಾಜ್ಯದ ಇತರ ಭಾಗಗಳಲ್ಲಿ ಶೇ 45ರಷ್ಟು ಮಳೆ ಕೊರತೆ ಉಂಟಾಗಿದ್ದು, ಕೃಷಿ ಚಟುವಟಿಕೆಗಳಿಗೆ ಹಿನ್ನಡೆ­ಯಾಗಿದೆ. ಮುಂಗಾರು ಹಂಗಾಮಿನಲ್ಲಿ 74 ಲಕ್ಷ ಹೆಕ್ಟೇರ್‌ ಬಿತ್ತನೆ ಗುರಿಯಿದ್ದು, ಇದುವರೆಗೆ 18.92 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಮಾತ್ರ ಬಿತ್ತನೆ­ಯಾಗಿದೆ.
 • ರಾಜ್ಯದಲ್ಲಿ 1.39 ಕೋಟಿ ಜಾನುವಾರುಗಳಿದ್ದು, 72.75 ಲಕ್ಷ ಟನ್‌ ಮೇವಿನ ಸಂಗ್ರಹ ಇದೆ. ಇದು 15 ವಾರ­ಗಳಿಗೆ ಸಾಕಾಗುತ್ತದೆ.(-೧೨-೭-೨೦೧೪ ರಿಂದ). ಪ್ರಮುಖ ಜಲಾಶಯಗಳ ನೀರಿನ ಒಟ್ಟು ಗರಿಷ್ಠ ಸಂಗ್ರಹ ಸಾಮರ್ಥ್ಯ 864 ಟಿಎಂಸಿ ಅಡಿ ಇದ್ದು, ಸದ್ಯ 166 ಟಿಎಂಸಿ ಅಡಿ ಮಾತ್ರ ನೀರು ಲಭ್ಯವಿದೆ.
 • ಕಳೆದ ವರ್ಷ ಇದೇ ದಿನ ೨೫೪ ಟಿಎಂಸಿ ಅಡಿ ನೀರಿನ ಸಂಗ್ರಹ ಇತ್ತು. ೩,೫೫೪ ನೀರಾವರಿ ಕೆರೆಗಳಿದ್ದು, ಎಂಟು ಮಾತ್ರ ತುಂಬಿವೆ. ೧೫೯ ಕೆರೆಗಳು ಶೇ ೫೦ರಷ್ಟು ಮತ್ತು ೧,೦೬೨ ಕೆರೆಗಳು ಶೇ ೩೦ರಷ್ಟು ತುಂಬಿದ್ದರೆ, ಉಳಿದ ಉಳಿದ ೨,೩೨೮ ಕೆರೆಗಳು ಖಾಲಿಯಾ­ಗಿವೆ. ಕಾವೇರಿ ಜಲಾನಯನ ಪ್ರದೇಶದ ಜಲಾಶಯಗಳ ಗರಿಷ್ಠ ನೀರಿನ ಸಾಮರ್ಥ್ಯ ೧೧೫ ಟಿಎಂಸಿ ಇದ್ದು, ಪ್ರಸ್ತುತ ೩೪ ಟಿಎಂಸಿ ಮಾತ್ರ ಲಭ್ಯವಿದೆ.
 • ಕೃಷ್ಣಾ ಜಲಾನಯನ ಪ್ರದೇಶಗಳ ಜಲಾಶಯಗಳ ಗರಿಷ್ಠ ಸಾಮರ್ಥ್ಯ ೪೨೧ ಟಿಎಂಸಿ ಇದ್ದು, ಕೇವಲ ೮೩ ಟಿಎಂಸಿ ನೀರು ಲಭ್ಯವಿದೆ. ರಾಜ್ಯದ ಎಲ್ಲಾ ಜಲಾಶಯಗಳ ಗರಿಷ್ಠ ಸಾಮರ್ಥ್ಯ ೮೬೪ ಟಿಎಂಸಿ ಇದ್ದು, ಕಳೆದ ವರ್ಷ ಜೂ.೧೦ ರಂದು ೨೫೪ ಟಿಎಂಸಿ ಇತ್ತು. ಈ ವರ್ಷ ೧೬೬ ಟಿಎಂಸಿ ಇದೆ. ಅಲ್ಲಿಗೆ ೮೮ ಟಿಎಂಸಿ ನೀರಿನ ಕೊರತೆಯಿದೆ.
 • (ವಿಧಾನಸಸಭೆಯಲ್ಲಿ ಕಂದಾಯ ಸಚಿವ ವಿ. ಶ್ರೀನಿವಾಸಪ್ರಸಾದ್ ಹೇಳಿಕೆ: ವರದಿ ವಿಜಯ ಕರ್ನಾಟಕ ಮತ್ತು ಪ್ರಜಾವಾಣಿ -೧೨-೭-೨೦೧೪)

ಸೆಪ್ಟಂಬರ್ ೨- ೨೦೧೪ ರಿಂದ ಕಾಶ್ಮೀರದಲ್ಲಿ ಎಂದೂ ಕಾಣದ ಪ್ರವಾಹ[ಬದಲಾಯಿಸಿ]

ಕಾಶ್ಮೀರದಲ್ಲಿ ಶ್ರೀನಗರದ ರಸ್ತೆ, ಕೆಳ ಅಂತಸ್ತಿನಲ್ಲಿ ಪ್ರವಾಹದ ನೀರು ತುಂಬಿರುವುದು.
ದಿ.೨-೯-೨೦೧೪ ರಿಂದ ೧೪-೯-೨೦೧೪(ಪ್ರಜಾವಾಣಿ /Sun, 14/09/2014)
 • ದಿ.9-9-2014-ಶ್ರೀನಗರ/ಜಮ್ಮು: ಭಯಾನಕ ಜಲಪ್ರಳಯಕ್ಕೆ ಸಾಕ್ಷಿಯಾಗಿರುವ ಕಣಿವೆ ರಾಜ್ಯ ಅಕ್ಷರಶಃ ನಲುಗಿ ಹೋಗಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಸೋಮವಾರ ಮೃತರ ಸಂಖ್ಯೆ ೨೦೦ ದಾಟಿದೆ. ಇನ್ನೂ ಲಕ್ಷಾಂತರ ಮಂದಿ ಪ್ರವಾಹದಲ್ಲಿ ಸಿಲುಕಿಕೊಂಡಿದ್ದು, ಶ್ರೀನಗರದ ಬಹುತೇಕ ಭಾಗಗಳು ಮುಳುಗಡೆಯಾಗಿವೆ. ಇದರ ಜತೆಗೆ ಸಂವಹನ ಸಮಸ್ಯೆ ಹಾಗೂ ಏರುತ್ತಿರುವ ನೀರಿನ ಮಟ್ಟವು ರಕ್ಷಣಾ ಕಾರ್ಯಾಚರಣೆಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಪರಿಸ್ಥಿತಿಯ ಭೀಕರತೆಯನ್ನು ಅರಿತ ನೌಕಾಪಡೆ ಮೊತ್ತಮೊದಲ ಬಾರಿಗೆ ಪ್ರವಾಹ ರಕ್ಷಣಾ ಕಾರ್ಯಾ ಚರಣೆಗಿಳಿದಿದೆ.
ಜೀವನದಿಯ ರೌದ್ರಾವತಾರ-ಶತಮಾನದಿಂದ ಶಾಂತವಾಗಿ ಹರಿಯುತ್ತಿದ್ದ ಕಾಶ್ಮೀರ ಕಣಿವೆಯ ಜೀವನದಿ ಝೇಲಂನ ಮತ್ತೊಂದು ಕರಾಳ ಮುಖ ಕಾಶ್ಮೀರಿಗಳಿಗೆ ಈಗ ಪರಿಚಯವಾಗಿದೆ. ಜೀವಮಾನದಲ್ಲಿ ಝೇಲಂ ರೌದ್ರಾವತಾರ ಕಂಡರಿಯದ ಸ್ಥಳೀಯರು ೧೫ ದಿನಗಳಲ್ಲಿ ಅದರ ರುದ್ರ ನರ್ತನ ಕಂಡು ಬೆಚ್ಚಿ ಬಿದ್ದಿದ್ದಾರೆ. ಕಣಿವೆಯಲ್ಲಿ ಸಣ್ಣ ತೊರೆಯಾಗಿ ಹುಟ್ಟುವ ಝೇಲಂ ಕಾಶ್ಮೀರಿಗಳ ಜೀವನಾಡಿ. ಈ ನದಿಯನ್ನು ಜನ್ಮಕೊಟ್ಟ ತಾಯಿಯಷ್ಟೇ ಪೂಜ್ಯ ಭಾವನೆಯಿಂದ ಕಾಣುತ್ತಿದ್ದ ಜನರ ಜೀವನವನ್ನು ರಕ್ಕಸ ಅಲೆಗಳು ಕೊಚ್ಚಿ ಒಯ್ದಿವೆ. ‘ಅನ್ನ ಕೊಡುತ್ತಿದ್ದ ತಾಯಿಯೇ ನಮ್ಮ ಮೇಲೆ ಮುನಿಸಿಕೊಂಡು ಅನ್ನ ಕಸಿದು ಕೊಂಡು ನಮ್ಮನ್ನು ಬೀದಿಗೆ ತಂದಿದ್ದಾಳೆ’ ಎನ್ನುತ್ತಾರೆ ಸ್ಥಳೀಯರು.

ಕಾಶ್ಮೀರ: ಸಂಕಷ್ಟದಲ್ಲಿ ಕನ್ನಡಿಗರು[ಬದಲಾಯಿಸಿ]

12-9-2014-ಶುಕ್ರವಾರ ಶ್ರೀನಗರ ಕಂಡಬಂದಿದ್ದು ಹೀಗೆ
 • ಕಾಶ್ಮೀರ ವೀಕ್ಷಣೆಗೆ ಹೋಗಿ ಸಂಕಷ್ಟಕ್ಕೆ ಸಿಕ್ಕಿರುವ ನೂರಾರು ಕನ್ನಡಿಗರು ಊರಿಗೆ ಹಿಂದಿರುಗಲು ಪರದಾಡುತ್ತಿದ್ದು, ರಾಜಧಾನಿ ಶ್ರೀನಗರದ ರಾಜಭವನ ಸಮೀಪದ ಹೆಲಿಪ್ಯಾಡ್‌ನಲ್ಲಿ ನಾಲ್ಕೈದು ದಿನಗಳಿಂದ ಅಸಹಾಯಕರಾಗಿ ಕುಳಿತಿದ್ದಾರೆ. ಕರ್ನಾಟಕದ ಪ್ರವಾಸಿಗರನ್ನು ಸುರಕ್ಷಿತವಾಗಿ ವಾಪಸ್‌ ಕರೆತರಲು ರಾಜ್ಯ ಸರ್ಕಾರ ನಿಯೋಜಿಸಿರುವ ತಂಡದ ಮುಖ್ಯಸ್ಥ ಐಎಎಸ್‌ ಅಧಿಕಾರಿ ರಮಣದೀಪ್‌ ಚೌಧರಿ ಮತ್ತು ದೆಹಲಿ ಕರ್ನಾಟಕ ಭವನದ ಸಿಬ್ಬಂದಿ ಮೋಹನ ಕುಮಾರ್‌ ಶ್ರೀನಗರದಲ್ಲಿದ್ದು, ಸೇನಾ ವಿಮಾನ ನಿಲ್ದಾಣಕ್ಕೆ ಹೆಲಿಕಾಪ್ಟರ್‌ನಲ್ಲಿ ಬರುವ ಕನ್ನಡಿಗರ ಹೆಸರು, ವಿವರಗಳನ್ನು ಪಡೆದು ಹಿರಿಯ ಅಧಿಕಾರಿಗಳಿಗೆ ರವಾನಿಸುತ್ತಿದ್ದಾರೆ.
 • ಆಮೆ ಗತಿ: ನೆರೆಯ ಕೇರಳ, ಆಂಧ್ರ, ತಮಿಳುನಾಡು ಮತ್ತು ಮಹಾರಾಷ್ಟ್ರಕ್ಕೆ ಹೋಲಿಸಿದರೆ ರಾಜ್ಯದ ಕಾರ್ಯಾಚರಣೆ ಆಮೆ ವೇಗದಲ್ಲಿ ಸಾಗುತ್ತಿದೆ ಎಂಬ ಆರೋಪ ಕೇಳಿಬರುತ್ತಿದೆ. ೨೦೦ಕ್ಕೂ ಹೆಚ್ಚು ಜನ ವಾಪಸ್‌: ರಾಜ್ಯದ ೨೦೦ಕ್ಕೂ ಹೆಚ್ಚು ಜನ ಕಾಶ್ಮೀರದಿಂದ ಹಿಂತಿರುಗಿದ್ದಾರೆ. ಅಧಿಕೃತ ಅಂಕಿಸಂಖ್ಯೆ ಪ್ರಕಾರ ೬೬೦ಕ್ಕೂ ಹೆಚ್ಚು ಜನರು ಕಣಿವೆ ರಾಜ್ಯದಲ್ಲಿ ವಿಹಾರಕ್ಕೆ ಹೋಗಿದ್ದಾರೆ. ಇನ್ನೂ ೪೫೦ಕ್ಕೂ ಹೆಚ್ಚು ಜನರ ಸ್ಥಿತಿ ಅತಂತ್ರವಾಗಿದೆ. ದುಡ್ಡು ಕಾಸಿಲ್ಲದೆ ತೊಂದರೆಗೆ ಒಳಗಾಗಿರುವ ಜನರಿಗೆ ರಾಜ್ಯ ಸರ್ಕಾರ ಎಲ್ಲ ನೆರವು ನೀಡುತ್ತಿದೆ. ಅನಾರೋಗ್ಯಕ್ಕೆ ಒಳಗಾಗಿ ರುವ ಜನರಿಗೂ ಅಗತ್ಯ ಔಷಧೋಪಚಾರ ಮಾಡುವಂತೆ ಮನವಿ ಮಾಡಿ ‘ರಾಷ್ಟ್ರೀಯ ವಿಪತ್ತು ಪರಿಹಾರ ಪಡೆ’ಯ ಅಧಿಕಾರಿಗಳಿಗೆ ಪತ್ರ ಬರೆಯಲಾಗಿದೆ ಎಂದು ರಾಜ್ಯ ಸರ್ಕಾರದ ಮೂಲಗಳು ತಿಳಿಸಿವೆ.
ಸೇನೆಗೂ ಕಾಡಿದ ನೆರೆ
ರೈಫಲ್ಸ್, ಬಾಂಬ್‌ಗಳು ಹಾಳು

(Sep 14, 2014,vijaykarnataka) ಶ್ರೀನಗರದಲ್ಲಿ-ಝೀಲಂ-ಚೀನಾಬ್, ತನ್ನ ರುದ್ರಪ್ರತಾಪವನ್ನು ತೋರುವಲ್ಲಿ ಜಮ್ಮು ಮತ್ತು ಕಾಶ್ಮೀರದ ಪ್ರವಾಹ ತಾರತಮ್ಯ ಮಾಡಿಲ್ಲ! ನಾಗರಿಕರ ಮೇಲೆ ಮಾತ್ರವಲ್ಲ , ದೇಶದ ನಾನಾ ಕಡೆಯಿಂದ ಬಂದು ಈ ಭಾಗದಲ್ಲಿ ನಿಯೋಜನೆ ಗೊಂಡಿರುವ ಸೇನಾ ಸಿಬ್ಬಂದಿ ಮೇಲೂ ತನ್ನ ಪ್ರತಾಪ ತೋರಿದೆ. ಕಾಶ್ಮೀರ ಕಣಿವೆಯಲ್ಲಿನ ಸೇನಾ ಕ್ಯಾಂಪ್‌ಗಳಿಗೆ ನೀರು ನುಗ್ಗಿದ್ದು, ಅಲ್ಲಿ ಯೋಧರ ಅಸ್ತ್ರಗಳನ್ನು ಹಾಳು ಕೆಡವಿದೆ. ನೂರಾರು ಎಕೆ ರೈಫಲ್‌ಗಳು, ಇನ್ಸಾಸ್ ರೈಫಲ್‌ಗಳು, ಎಸ್‌ಎಲ್‌ಆರ್ ರೈಫಲ್‌ಗಳು ಮತ್ತು ಮದ್ದು ಗುಂಡುಗಳು, ಬಾಂಬ್‌ಗಳು, ಗ್ರೇನೇಡ್‌ಗಳೂ ಸೇರಿದಂತೆ ಅಸ್ತ್ರಗಳೆಲ್ಲವೂ ನೀರಲ್ಲಿ ಮುಳುಗಿವೆ. ಭಾನುವಾರ ರಾತ್ರಿ ನುಗ್ಗಿದ ಪ್ರವಾಹದಿಂದಾಗಿ ಶ್ರೀನಗರದ ಸೇನಾ ಶಿಬಿರದಲ್ಲಿದ್ದ ಕೇಂದ್ರ ಅರೆಸೇನಾಪಡೆಯ 400 ಸಿಬ್ಬಂದಿ ಬೇರೆಡೆಗೆ ಸ್ಥಳಾಂತರಗೊಂಡಿದ್ದರು. ರೈಫಲ್‌ಗಳನ್ನು ಹೇಗೋ ಎಣ್ಣೆ ಬಿಟ್ಟು, ರಿಪೇರಿ ಮಾಡಿ ಮತ್ತೆ ಬಳಸಬಹುದು. ಆದರೆ ಬಾಂಬ್‌ಗಳು ಮತ್ತು ಗ್ರೇನೇಡ್‌ಗಳೆಲ್ಲವೂ ವ್ಯರ್ಥವಾಗಿವೆ, ಎಂದು ಸೇನಾ ಅಧಿಕಾರಿಯೊಬ್ಬರು ಹೇಳಿದ್ದಾರೆ.

ರಕ್ಷಕರತ್ತ ಕಲ್ಲು ತೂರಾಟ:[ಬದಲಾಯಿಸಿ]

ಪರಿಹಾರ ಸಂಗ್ರಹ-+ ಕಲ್ಲು ತೂರಾಟ.

೧೪-೯-೨೦೧೪-ಶ್ರೀನಗರದಲ್ಲಿ ೮೦ಕ್ಕೂ ಹೆಚ್ಚು ಐಎಎಫ್ ವಿಮಾನಗಳು ಪರಿಹಾರ ಕಾರ್ಯಾಚರಣೆಯಲ್ಲಿ ನಿರತವಾಗಿವೆ. ಭೂಮಿಗೆ ಸಮೀಪದಲ್ಲಿ ಸಾಗುವ ಕಾಪ್ಟರ್‌ಗಳನ್ನು ಗುರಿಯಾಗಿಸಿಕೊಂಡು ಕೆಲವರು ಕಲ್ಲು ತೂರುತ್ತಿದ್ದಾರೆ. ನಮ್ಮ ಒಂದು ಕಾಪ್ಟರ್‌ಗೆ ಇದರಿಂದ ದೊಡ್ಡ ಹಾನಿಯೇ ಆಗಿದೆ. ನಮ್ಮ ದೋಣಿಗಳಿಗೂ ಕಲ್ಲು ತೂರಾಟದಿಂದ ಹಾನಿಯಾಗಿದೆ. ತಮ್ಮನ್ನು ರಕ್ಷಿಸಲು ಮುಂದಾದ ಸೇನಾ ಸಿಬ್ಬಂದಿ ವಿರುದ್ಧ ಜನರು ಕಲ್ಲು ತೂರುತ್ತಿರುವುದು ದುರದೃಷ್ಟಕರ. ಆದಾಗ್ಯೂ, ಕಟ್ಟ ಕಡೆಯ ನೆರೆಪೀಡಿತ ವ್ಯಕ್ತಿಯನ್ನೂ ರಕ್ಷಿಸುವ ತನಕ ನಮ್ಮ ಕಾರ್ಯಾಚರಣೆ ನಿಲ್ಲದು. ನಮ್ಮ ಕೆಲಸ ನಾವು ಮಾಡುತ್ತೇವೆ, ಎಂದು ಏರ್‌ಮಾರ್ಷಲ್ ಎಸ್.ಬಿ.ದೇವೋ ಹೇಳಿದ್ದಾರೆ. ಬೆಳಗ್ಗೆ ೪ ಗಂಟೆಗೆ ರಕ್ಷಣಾ ಕಾರ್ಯಾಚರಣೆಗೆ ಇಳಿದರೆ, ಮಧ್ಯರಾತ್ರಿ ತನಕ ಅದು ಮುಂದುವರಿಯುತ್ತದೆ. ಮಧ್ಯರಾತ್ರಿಯಿಂದ ಬೆಳಗಿನ ಜಾವ 4ರ ತನಕ ದೋಣಿಗಳ ರಿಪೇರಿ ಕೆಲಸ ಇರುತ್ತದೆ- ಲೆಫ್ಟಿನೆಂಟ್ ಎಸ್.ಪಿ.ಸಿಂಗ್

ಈಗಲೂ ಮುಳುಗಿವೆ[ಬದಲಾಯಿಸಿ]

 • ೧೪ ಮಕ್ಕಳೂ ಸೇರಿ ೪೩ ಸಾವು- ಶ್ರೀನಗರದ ಜಿ.ಬಿ.ಪಂಥ್ ಆಸ್ಪತ್ರೆಯಲ್ಲಿದ್ದ ೧೪ ಮಕ್ಕಳು ಜಲ ಸಮಾಧಿಯಾಗಿದ್ದಾರೆ. ಈ ಆಸ್ಪತ್ರೆ ಮತ್ತು ನಗರದಲ್ಲಿನ ಶ್ರೀ ಮಹಾರಾಜ ಹರಿ ಸಿಂಗ್ ಮತ್ತು ಸರಕಾರಿ ಮೆಡಿಕಲ್ ಕಾಲೇಜು ಆಸ್ಪತ್ರೆಗಳು ಪ್ರವಾಹದಿಂದ ಜಲಾವೃತವಾಗಿದ್ದು, ಇಲ್ಲಿನ ಜನರೂ ಸೇರಿದಂತೆ ೪೩ಮಂದಿ ಬಲಿಯಾಗಿದ್ದಾರೆ. ೨೯ ಶವಗಳು ಪತ್ತೆಯಾಗಿವೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.
 • ಶ್ರೀನಗರದ ಶಿವಪುರ, ರಾಜ್‌ಭಾಗ್, ಜವಾಹರ ನಗರ್, ವಜಿರಾಬಾಗ್, ಗೋಗ್ಜಿಬಾಗ್, ಕರಣ್ ನಗರ್ ಸೇರಿದಂತೆ ನಾನಾ ಪ್ರದೇಶಗಳು ನಾಲ್ಕರಿಂದ ಹತ್ತು ಅಡಿ ನೀರಿನಲ್ಲಿ ಮುಳುಗಿದ್ದವು. ನಗರದ ವ್ಯವಹಾರದ ಪ್ರಮುಖ ಪ್ರದೇಶಗಳಾದ ಲಾಲ್ ಚೌಕ್, ರೆಸಿಡೆನ್ಸಿ ರೋಡ್, ಹರಿ ಸಿಂಗ್ ಹೈ ಸ್ಟ್ರೀಟ್, ಕರಣ್ ನಗರಗಳು ಈಗಲೂ ಮುಳುಗಿವೆ. ಇದರಿಂದಾಗಿ ಕೋಟ್ಯಂಟರ ರೂಪಾಯಿ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.

ಪರಿಹಾರ ಕಾರ್ಯ[ಬದಲಾಯಿಸಿ]

 • ನೀರು ಶುದ್ಧೀಕರಿಸುವ ೧೩ ಟನ್ ಗುಳಿಗೆಗಳು ಮತ್ತು ೬ ನೀರು ಶುದ್ಧೀಕರಣ ಘಟಕಗಳು(ದಿನಕ್ಕೆ ೧.೨ ಲಕ್ಷ ಬಾಟಲ್ ಶುದ್ಧೀಕರಣ) ಶ್ರೀನಗರ ತಲುಪಿವೆ
 • ೧೨ನೇ ದಿನಕ್ಕೆ ರಕ್ಷಣಾ ಕಾರ್ಯಾಚರಣೆ ಕಾಲಿಟ್ಟಿಟ್ಟು ೧,೪೨,೦೦ ಜನರನ್ನು ರಕ್ಷಿಸಲಾಗಿದೆ
 • ಪರಿಹಾರ ಕಾರ್ಯಾಚರಣೆ ಮುಂದುವರಿದಿದ್ದರೂ, ಇನ್ನೂ ೧.೫ ಲಕ್ಷ ಜನ ನೆರೆಯಲ್ಲಿ ಸಿಲುಕಿದ್ದಾರೆ.
 • ಭೂಕುಸಿತದಿಂದ ಕಳೆದ ೧೦ ದಿನದಿಂದ ಬಂದ್ ಆಗಿರುವ ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿ ಇನ್ನೂ ಸಂಚಾರ ಮುಕ್ತಗೊಂಡಿಲ್ಲ
 • ಛತ್ತೀಸ್‌ಗಢ ಸರಕಾರದಿಂದ ೧೦ ಸಾವಿರ ಸೌರ ದೀಪಗಳು ಶ್ರೀನಗರಕ್ಕೆ ರವಾನೆ
 • ಜಮ್ಮು ಮತ್ತು ಕಾಶ್ಮೀರ ಪುನರ್ನಿರ್ಮಾಣಕ್ಕೆ ಸರ್ವ ಪಕ್ಷಗಳಿಂದ ನಿರ್ಣಯ ಅಂಗೀಕಾರ
 • ಜಮ್ಮು ಮತ್ತು ಕಾಶ್ಮೀರ್ ಬ್ಯಾಂಕ್ ಲಿಮಿಟೆಡ್ ಸುರಕ್ಷಿತವಾಗಿದ್ದು, ಅಲ್ಲಿ ಠೇವಣಿಯಿಟ್ಟವರು ಆತಂಕ ಪಡುವ ಭಯಬೇಡ ಎಂದು ಮುಖ್ಯಮಂತ್ರಿ ಉಮರ್ ಅಬ್ದುಲ್ಲಾ ಹೇಳಿಕೆ
 • ಸ್ಥಳೀಯ ರೇಡಿಯೋ ಕೇಂದ್ರ ಮತ್ತು ದೂರದರ್ಶನಕ್ಕೆ ಸೇವೆ ಆರಂಭಿಸಲು ಇನ್ನೂ ಸಾಧ್ಯವಾಗಿಲ್ಲ. ಶುಕ್ರವಾರದಿಂದ ಪ್ರಸಾರ ಭಾರತಿ ನಿಯಂತ್ರಣದ ಎಫ್‌ಎಂ ಸ್ಟೇಷನ್‌ಗಳಿಂದ ಪ್ರವಾಹ ಸಂಬಂಧಿ ಸಂದೇಶಗಳು ಬಿತ್ತರ.

ಫೋಟೋ ಗ್ಯಾಲರಿ[ಬದಲಾಯಿಸಿ]

ಮುಳುಗಿದ ನಗರ
ಮಕ್ಕಳ ರಕ್ಷಣೆ
ಝೀಲಂ ಪ್ರವಾಹ
ಕಾಶ್ನೀರ ಪ್ರವಾಹದ ನೋಟ

ಕನ್ನಡಿಗರ ರಕ್ಷಣೆ[ಬದಲಾಯಿಸಿ]

 • ಜಮ್ಮು ಮತ್ತು ಕಾಶ್ಮೀರದ ಪ್ರವಾಹದಲ್ಲಿ ಸಿಲುಕಿರುವ 660 ಕನ್ನಡಿಗರ ಪೈಕಿ 560 ಜನರನ್ನು ರಕ್ಷಣೆ ಮಾಡಲಾಗಿದೆ. ಶ್ರೀನಗರ ತಲುಪಿದ ಎಲ್ಲಾ ಕನ್ನಡಿಗರಿಗೆ ಅಗತ್ಯ ಸೌಲಭ್ಯ ಒದಗಿಸಿಕೊಟ್ಟಿದ್ದು, ಅವರು ಕರ್ನಾಟಕಕ್ಕೆ ಮರಳಲು ಬೇಕಾದ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ಸರ್ಕಾರ ತಿಳಿಸಿದೆ.
 • ಹುಬ್ಬಳ್ಳಿ-ಧಾರವಾಡ ಪ್ರಾದೇಶಿಕ ಆಯುಕ್ತರಾದ ರಮಣದೀಪ್ ಮತ್ತು ದೆಹಲಿಯ ಕರ್ನಾಟಕ ಭವನದ ಮೋಹನ್ ಕುಮಾರ್ ಅವರು ಕಾಶ್ಮೀರದಲ್ಲಿ ಕನ್ನಡಿಗರನ್ನು ರಕ್ಷಿಸುವ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ರಮಣದೀಪ್ ಅವರು ಶ್ರೀನಗರದ ವಿಮಾನ ನಿಲ್ದಾಣದಿಂದ ಕನ್ನಡಿಗರನ್ನು ದೆಹಲಿಗೆ ಕಳುಹಿಸುವ ವ್ಯವಸ್ಥೆ ಮಾಡುತ್ತಿದ್ದಾರೆ.
 • ಕಾಶ್ಮೀರದಲ್ಲಿ ರಕ್ಷಿಸಲಾದ 80 ಕನ್ನಡಿಗರು ದೆಹಲಿಯ ಕರ್ನಾಟಕ ಭವನದಲ್ಲಿದ್ದು, ಅವರಿಗೆ ಅಲ್ಲಿ ಆಹಾರ, ನೀರು ಸೇರಿದಂತೆ ಅಗತ್ಯ ವ್ಯವಸ್ಥೆಗಳನ್ನು ಮಾಡಲಾಗಿದೆ. ಅವರು ಬೆಂಗಳೂರಿಗೆ ಮರಳಲು ವ್ಯವಸ್ಥೆ ಮಾಡಲಾಗಿದ್ದು, ಅವರು ಕರ್ನಾಟಕಕ್ಕೆ ಆಗಮಿಸಿದ್ದಾರೆ.

(ಒನ್ ಇಂಡಿಯಾ ಸುದ್ದಿ-[೨]

೨೦೧೭ ರಲ್ಲಿ ಈಶಾನ್ಯ (ಪೂರ್ಓತ್ತರ) ರಾಜ್ಯಗಳಲ್ಲಿ ಅತಿವೃಷ್ಠಿ[ಬದಲಾಯಿಸಿ]

 • ೨೦೧೭ ಅತಿವೃಷ್ಠಿ
 • ತುಂಬಲಿಕ್ಕಿದೆ-

ಬಿಹಾರದಲ್ಲಿಯೂ ಅತಿವೃಷ್ಟಿ[ಬದಲಾಯಿಸಿ]

೨೦೧೭ ಆಗಸ್ಟ್‍ ತಿಂಗಳಲ್ಲಿ ಈಶಾನ್ಯ ರಾಜ್ಯಗಳ ಜೊತೆ ಬಿಹಾರವೂ ಅತಿವೃಷ್ಟಿಯ ವಿಕೋಪಕ್ಕೆ ಸಿಲುಕಿತು. ಬಿಹಾರದಲ್ಲಿ ಆಗಸ್ಟ್ ೨೨ ರ ಹೊತ್ತಿಗೆ ಪ್ರವಾಹಕ್ಕೆ ಸಿಲುಕಿ ಮೃತಪಟ್ಟವರ ಸಂಖ್ಯೆ 314ಕ್ಕೆ ತಲುಪಿತ್ತು ಮತ್ತು ಬಿಹಾರದ 18 ಜಿಲ್ಲೆಗಳಲ್ಲಿ ಪ್ರವಾಹದಿಂದ ಒಂದು ಕೋಟಿಗೂ ಹೆಚ್ಚು ಜನರು ಸಂಕಷ್ಟಕ್ಕೆ ಸಿಲುಕಿದ್ದರು. 1,085 ನಿರಾಶ್ರಿತರ ಕೇಂದ್ರಗಳಲ್ಲಿ 2.29 ಲಕ್ಷ ಜನ ಆಶ್ರಯ ಪಡೆದಿದ್ದರು.[೧]

 • ಸೇತುವೆ ಪ್ರವಾಹದಲ್ಲಿ ಕೊಚ್ಚಿಹೋಗುತ್ತಿರುವ ದೃಶ್ಯ- ವಿಡಿಯೊ:[೩]

ನೋಡಿ[ಬದಲಾಯಿಸಿ]

ಆಧಾರ[ಬದಲಾಯಿಸಿ]

"https://kn.wikipedia.org/w/index.php?title=ಮಳೆಗಾಲ&oldid=815001" ಇಂದ ಪಡೆಯಲ್ಪಟ್ಟಿದೆ