ವಿಷಯಕ್ಕೆ ಹೋಗು

ಈರುಳ್ಳಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಈರುಳ್ಳಿ
Scientific classification e
Unrecognized taxon (fix): Allium
ಪ್ರಜಾತಿ:
A. cepa
Binomial name
Allium cepa
Synonyms[]
Species synonymy
  • Allium angolense Baker
  • Allium aobanum Araki
  • Allium ascalonicum auct.
  • Allium ascalonicum var. condensum Millán
  • Allium ascalonicum var. fertile Millán
  • Allium ascalonicum f. rotterianum Voss ex J.Becker
  • Allium ascalonicum var. sterile Millán
  • Allium cepa var. aggregatum G.Don
  • Allium cepa var. anglicum Alef.
  • Allium cepa var. argenteum Alef.
  • Allium cepa var. bifolium Alef.
  • Allium cepa var. crinides Alef.
  • Allium cepa var. flandricum Alef.
  • Allium cepa var. globosum Alef.
  • Allium cepa var. hispanicum Alef.
  • Allium cepa var. jamesii Alef.
  • Allium cepa var. lisboanum Alef.
  • Allium cepa var. luteum Alef.
  • Allium cepa var. multiplicans L.H.Bailey
  • Allium cepa var. portanum Alef.
  • Allium cepa var. praecox Alef.
  • Allium cepa var. rosum Alef.
  • Allium cepa var. sanguineum Alef.
  • Allium cepa var. solaninum Alef.
  • Allium cepa var. tripolitanum Alef.
  • Allium cepa var. viviparum (Metzg.) Alef.
  • Allium cepaeum St.-Lag.
  • Allium commune Noronha
  • Allium cumaria Buch.-Ham. ex Wall.
  • Allium esculentum Salisb.
  • Allium napus Pall. ex Kunth
  • Allium nigritanum A.Chev.
  • Allium pauciflorum Willd. ex Ledeb.
  • Allium salota Dostál
  • Ascalonicum sativum P.Renault
  • Cepa alba P.Renault
  • Cepa esculenta Gray
  • Cepa pallens P.Renault
  • Cepa rubra P.Renault
  • Cepa vulgaris Garsault
  • Kepa esculenta Raf.
  • Porrum cepa (L.) Rchb.
ಈರುಳ್ಳಿ
ಬೇರು.,ಎಲೆಗಳು ಮತ್ತು ಬೆಳೆಯುತ್ತಿರುವ ಈರುಳ್ಳಿ
ಹೂವುಗಳು

ಈರುಳ್ಳಿಯು (ಆಲಿಯಮ್ ಕೆಪಾ ಜಾತಿ ಆಲಿಯಮ್) ಒಂದು ತರಕಾರಿಯಾಗಿ ಬಳಸಲಾಗುವ ಬೆಳೆ. ಅದು ಸಸ್ಯದ ನೆಲದಡಿಯಲ್ಲಿ ಆಹಾರ ಸಂಗ್ರಹಕ್ಕಾಗಿ ಬಳಕೆಯಾಗುವ ಒಂದು ಲಂಬವಾದ ಕುಡಿಯಾಗಿ ಬೆಳೆಯುತ್ತದೆ, ಹಾಗಾಗಿ ಇದನ್ನು ಒಂದು ಗೆಡ್ಡೆಯೆಂದು ತಪ್ಪಾಗಿ ತಿಳಿಯಬಹುದು, ಆದರೆ ಇದು ಗೆಡ್ಡೆಯಲ್ಲ. ಆಲಿಯಮ್ ಕೆಪಾ ಸಾಗುವಳಿಯಲ್ಲಿ ಮಾತ್ರ ಪರಿಚಿತವಾಗಿದೆ ಆದರೆ ಸಂಬಂಧಿತ ಕಾಡು ಜಾತಿಗಳು ಮಧ್ಯ ಏಷ್ಯಾದಲ್ಲಿ ಕಾಣುತ್ತವೆ. ಅತ್ಯಂತ ಹಳೆಯ ತರಕಾರಿಗಳ ಪೈಕಿ ಒಂದಾದ ಈರುಳ್ಳಿಗಳು, ಬಹುತೇಕ ವಿಶ್ವದ ಎಲ್ಲ ಸಂಸ್ಕೃತಿಗಳಿಗೆ ವ್ಯಾಪಿಸುವ ಹೆಚ್ಚಿನ ಸಂಖ್ಯೆಯ ಪಾಕಗಳು ಮತ್ತು ಅಡುಗೆಗಳಲ್ಲಿ ಕಾಣುತ್ತವೆ.ಇದರಲ್ಲಿ ೩೦೦ ಪ್ರಭೇದಗಳಿವೆ.ಕೆಲವು ಕೆಲವೇ ತಿಂಗಳಲ್ಲಿ ಬೆಳೆದು ಮುದುಡಿ ಹೋಗುವ ಗಿಡಗಳಾದರೆ ಮತ್ತೆ ಕೆಲವು ಬಹುವಾಷಿಕ ಸಸ್ಯಗಳು. ಈರುಳ್ಳಿಯ ಗೆಡ್ಡೆಯಲ್ಲಿ ಅನೇಕ ಸಾವಯವ ಗಂಧಕ ಸಂಯುಕ್ತ ವಸ್ತುಗಲಿವೆ. ಇವು ಸಂಕೀರ್ಣ ರೂಪದಿಂದ ಸರಳ ರೂಪಕ್ಕೆ ಬದಲಾಗುವಾಗ ಈರುಳ್ಳಿಯ ಪರಿಮಳವು ಹೊರಹೊಮೂಮ್ಮುತ್ತದೆ. ಈರುಳ್ಳಿಯನ್ನು ಶೀತಲೀಕರಿಸಿದಾಗ ಅಥವಾ ಹುರಿದಾಗ ಅದರ ರಾಸಾಯನಿಕ ರಚನೆ ಬದಲಾಗುತ್ತದೆ. ಅದು ಹಸಿ ಇದ್ದಗ ಕಿಣ್ವಗಳ ಪ್ರಕ್ರಿಯೆಯನ್ನು ಮಾಡುತ್ತಿದ್ದು ನಿಂತು ಹೋಗುತ್ತದೆ. ಈ ಕಾರಣದಿಂದಲೇ ಹುರಿದಾಗ ಅಥವಾ ಬೇಯಿಸಿದಾಗ ಈರುಳ್ಳಿಯ ರುಚಿ ಬೇರೆಯಾಹಿರುತ್ತೆ. ಈರುಳ್ಳಿಯಲ್ಲಿರುವ ಕ್ವೆಸ್ರೆಟಿನ್ ಎನ್ನುವ ರಾಸಾಯನಿಕವು ಒಂದು ಪ್ರಬಲ ಯ್ಯಂಟಿ ಆಕ್ಸಿಡೆಂಟ್ ಆಗಿದ್ದು, ನಮ್ಮ ಆರೋಗ್ಯ ರಕ್ಷಣೆಯನ್ನು ಮಡುತ್ತದೆ.

ಲಕ್ಷಣಗಳು

[ಬದಲಾಯಿಸಿ]

ಈರುಳ್ಳಿ ಗಿಡ ೨-೩ ಅಡಿಯಷ್ಟು ಎತ್ತರಕ್ಕೆ ಬೆಳೆಯುತ್ತದೆ.ಎಲೆಗಳು ಉದ್ದಕ್ಕಿರುತ್ತವೆ. ಒಳಗಡೆ ಟೊಳ್ಳಾಗಿರುತ್ತವೆ. ಕೊಳವೆಯಾಕಾರದಲ್ಲಿರುತ್ತವೆ. ಹಸಿರು ಬಣ್ಣದಲ್ಲಿ ಎಲೆಯ ಬಿಳಿ ಬಣ್ಣದ ಹೂವು ಇರುತ್ತದೆ.ಹೂವು ಫಲಿತವಾಗಿ ಹಣ್ಣಾದಗ ಒಳಗೆ ಮೂರು ಕೋಶಗಳಲ್ಲಿ ತಲಾ ಒಂದರಂತೆ ಬೀಜಗಳಿರುತ್ತವೆ.ಗೆಡ್ಡೆಗಳು ಬಲಿತಂತೆ ಉದ್ದನೆಯ ಹೂ ತೆನೆ ಮೂಡುತ್ತದೆ. ಹೂಚೆಂಡು ಮತ್ತು ಹೂಗಳ ಬಣ್ಣ ಬಿಳಿಹಸಿರು. ಬೀಜಗಳು ಒರಟಾಗಿದ್ದು ಕಪ್ಪು ಬಣ್ಣದಲಿರುತ್ತದೆ. ಎಲೆಗಳು ಬಲಿತಂತೆ ಹಳದಿ ಬಣ್ಣ ತಾಳುತ್ತವೆ. ನಂತರ ಮುರಿದು ಬೀಳುತ್ತವೆ. ಆದರೆ ಒಣಗಿದ ನಂತರವೂ ಅವು ಗಿಡಗಳಿಗೆ ಅಂಟಿಕೊಂಡಿರುತ್ತವೆ.ಸಾಮಾನ್ಯವಾಗಿ ಕೆಂಪು ಬಣ್ಣದ ಈರುಳ್ಳಿಗಳು ಎಲ್ಲ ಕಡೆ ಕಾಣಸಿಗುತ್ತವೆ. ಬಿಳಿ ಬಣ್ಣದ ಈರುಳ್ಳಿಯೂ ಸಾಮಾನ್ಯವಾಗಿದೆ. ಸ್ವಲ್ಪ ಕಡಮೆ ಪ್ರಮಾಣದಲ್ಲಿ ಹಳದಿ ಬಣ್ಣದ ಈರುಳ್ಳಿಯೂ ಸಿಗುತ್ತದೆ.ಗೆಡ್ಡೆಗಳ ಗಾತ್ರದಲ್ಲೂ ವೈವಿಧ್ಯವಿದೆ. ಸಣ್ಣ ಗಾತ್ರದ, ಉದ್ದ ಗಾತ್ರದ,ಗುಂಡಗಿನ, ಗೋಲಾಕಾರದ, ದೊಡ್ಡಗಾತ್ರದ ಈರುಳ್ಳಿಗಳಿವೆ. ಗೊಂಚಲುಗೊಂಚಲಾಗಿ ಬಿಡುವ ಈರುಳ್ಳಿಗಳೂ ಇವೆ. ಬಿಡಿಬಿಡಿಯಾಗಿ ಬಿಡುವ ಈರುಳ್ಳಿಗಳು ಇವೆ. ಕೆಲವು ಈರುಳ್ಳಿ ರುಚಿಯಲ್ಲಿ ಬಹಳ ಖಾರವಾಗಿರುತ್ತವೆ. ಕೆಲವು ಈರುಳ್ಳಿಗಳ ರುಚಿ ಸಾಧಾರಣ ಮಟ್ಟದ ಖಾರ ಇರುತ್ತವೆ. ನಾವು ನೋಡುವ ಸಾಧಾರಣ ಬಗೆಯ ಈರುಳ್ಳಿಗಳಲ್ಲದೆ ಇನ್ನೂ ಅನೇಕ ಬಗೆಯ ಈರುಳ್ಳಿಗಳನ್ನು ಪ್ರಪಂಚದ ಬೇರೆ ಬೇರೆ ಭಾಗಗಳಲ್ಲಿ ಕೃಷಿ ಮಾಡುತ್ತಿದ್ದಾರೆ. ಈರುಳ್ಳಿಯ ಗೆಡ್ಡೆ, ಎಲೆ,ಹೂವು ಮತ್ತು ಬೀಜ -ಇವಿಷ್ಟನ್ನು ನಮ್ಮ ದೇಶದಲ್ಲಿ ಬೇರೆ ಬೇರೆ ಬಗೆಯ ಅಡುಗೆಗಳ ತಯಾರಿಕೆಯಲ್ಲಿ ಬಳಸುತ್ತಾರೆ. ಇವು ಕೇವಲ ಅಡುಗೆ ತಯಾರಿಕೆಯಲ್ಲಷ್ಟೆ ಅಲ್ಲದೇ ಹಲವು ಬಗೆಯ ದೈಹಿಕ ಸಮಸ್ಯೆಗಳ ಪರಿಹಾರಕ್ಕೂ ಬಳಕೆಯಾಗುತ್ತಿವೆ. ಈರುಳ್ಳಿಯ ಮೂಲಸ್ಥಳದ ಬಗ್ಗೆ ವಿಜ್ಞಾನಿಗಳಲ್ಲಿ ಒಮ್ಮತವಿಲ್ಲ. ಹೆಚ್ಚಿನವರು ಇದು ಏಷ್ಯಾದ ಒಂದು ಮೂಲಸಸ್ಯವೆಂದು ಹೇಳುತ್ತಾರೆ. ಮತ್ತೆ ಕೆಲವು ವಿಜ್ಞಾನಿಗಳ ಪ್ರಕಾರ ಅಫಘಾನಿಸ್ತಾನ, ರಷ್ಯಾದ ತಾಜಕೀಸ್ಥಾನ, ಉಜ್ಬೇಕಿಸ್ಥಾನ ಈರುಳ್ಳಿಯ ಮೂಲಸ್ಥಳಗಳಾಗಿವೆ.ಇದೊಂದು ಮೂಲಿಕಾ ಸಸ್ಯ. ಗೆಡ್ಡೆಗಳಿಗಾದರೆ ಏಕವಾರ್ಷಿಕ ಬೆಳೆ. ಬೀಜೋತ್ಪಾದನೆಗಾದರೆ ಎರಡು ವರ್ಷದ ಬೆಳೆ. ಇವೆಲ್ಲವೂ ಈರುಳ್ಳಿ ಕುಟುಂಬದ ಸದಸ್ಯರೇ

ಶಾಲಟ್ - Allium ascalonicum
ಬೆಳ್ಳುಳ್ಳಿ - Allium sativum
ಶೈವ್ - Allium schoenoprasum
ವೆಲ್ಷ್ ಈರುಳ್ಳಿ - Allium fistulosum
ಚೀನೀ ಈರುಳ್ಳಿ - Allium chinense
ಲೀಕ್ - Allium porrum

ಪೋಷಕಾಂಶಗಳು

[ಬದಲಾಯಿಸಿ]

ಸಣ್ಣ ಗಾತ್ರದ ಈರುಳ್ಳಿಯಲ್ಲಿ ಹೆಚ್ಚಿನ ಪ್ರಮಾಣದ ಪೋಷಕಾಂಶಗಳಿರುತ್ತವೆ. ಈರುಳ್ಳಿಯಲ್ಲಿರುವ ಖಾರದ ರುಚಿಗೆ ಈರುಳ್ಳಿಯಲ್ಲಿರುವ ಅಲೈಲ್ ಪ್ರೊಪೈಲ್ ಡೈಸಲ್ಫೈಡ್ ಎಂಬ ಚಂಚಲತೈಲವೇ ಕಾರಣವಾವಿದೆ. ಈರುಳ್ಳಿಯ ಪ್ರಬಲ ರಾಸಾಯನಿಕವು - ಅದನ್ನು ಹಸಿಯಗಿ ತಿಂದಾಗ ಹೆಚ್ಚಿನ ಪ್ರಮಾಣದಲ್ಲಿ ದೇಹದಲ್ಲಿ ಉಳಿದು ಕೊಳ್ಳುತ್ತದೆ. ಈ ರಾಸಾಯನಿಕಗಳ ಅಣುಗಾತ್ರ ಎಷ್ಟು ಚಿಕ್ಕದಾಗಿರುತ್ತದೆಂದರೆ ಹಸಿ ಈರುಳ್ಳಿಯನ್ನು ತಿಂದ ನಂತರ ಹಲ್ಲನ್ನು ತಿಕ್ಕಿದಾಗಲೂ ಈ ಅಣುಗಳು ಸಾಕಷ್ಟು ಪ್ರಮಾಣದಲ್ಲಿ ಬಾಯಲ್ಲಿ ಉಳಿದುಕೊಳ್ಳುವುದರಿಂದ ಈರುಳ್ಳಿಯ ವಾಸನೆ ಹಾಗೆಯೇ ಇರುತ್ತದೆ. ಈರುಳ್ಳಿಯ ಹಸಿವಾಸನೆ ತಿಂದವನಿಗೆ ತೃಪ್ತಿ ಕೊಟ್ಟರು ಹಸಿ ಈರುಳ್ಳಿ ತಿಂದವನ ಹತ್ತಿರ ಹೋಗುವವರಿಗೆ ದುರ್ವಾಸನೆ ಕಾಡುತ್ತದೆ. ಈರುಳ್ಳಿ ತಿಂದವನೇ ಮತ್ತೊಬ್ಬ ಈರುಳ್ಳಿ ತಿಂದವನ ವಾಸನೆಗೆ ಹೇಸಿಗೆ ಪಟ್ಟುಕೊಳ್ಳುವುದು ಸಾಮಾನ್ಯ! ಏನೇ ಆಗಲಿ ಹಸಿ ಈರುಳ್ಳಿ ಮಾತ್ರ ನಮ್ಮ ದೇಹದಲ್ಲಿ ಸರಿಯದ ರೀತಿಯಲ್ಲಿ ಜೀರ್ಣವಾಗುತ್ತದೆ. ಹುರಿದ ಅಥವಾ ಬೇಯಿಸಿದ ಈರುಳ್ಳಿ ಜೀರ್ಣವಾಗುವುದು ಕಷ್ಟ. ಈರುಳ್ಳಿಯ ರಸದಲ್ಲಿರುವ ರಾಸಾಯನಿಕಗಳು ರೋಗಾಣುಗಳಿಗೆ ಇಷ್ಟವಾಗುವುದಿಲ್ಲ. ಈರುಳ್ಳಿ ರಸ ಒಂದು ಸುಲಭ ಜೀವಿರೋಧಕವೆಂಬ ಅಭಿಪ್ರಾಯವು ಇದೆ. ನಮಗೆ ಬರುವ ಅನೇಕ ರೋಗಗಳ ರೋಗಾಣುಗಳು ನಮ್ಮ ದೇಹವನ್ನು ಪ್ರವೇಶಿಸುವುದು ಬಾಯಿ, ಮೂಗಿನಿಂದ. ರಷ್ಯಾದ ವೈದ್ಯ ಬಿ.ಪಿ ತೊಹ್ಕಿನ್ ಎಂಬಾತ ಹೇಳುತ್ತಾನೆ - 'ಈರುಳ್ಳಿಯ ಚೂರುಗಳನ್ನು ಬಾಯಲ್ಲಿಟ್ಟುಕೊಂಡು ೨-೩ ನಿಮಿಷಗಳವರೆಗೆ ಅಗಿಯುತ್ತಿದ್ದರೆ ಬಾಯಲ್ಲಿರುವ ರೋಗಾಣುಗಳೆಲ್ಲ ನಾಶವಾಗುತ್ತವೆ. ಬಾಯಿ ಮೂಗಿನ ಮೂಲಕ ರೋಗಾಣುಗಳು ಒಳಬರಲಾರವು'. ಇದು ಒಂದು ಪ್ರಬಲ ವಾಸನಾ ದ್ರವ್ಯವಾಗಿದೆ. ಇದರಿಂದ ಅನೇಕ ರೀತಿಯ ಪ್ರಯೋಜನಗಳು ಇವೆ. ಮೂರ್ಛೆ ಹೋದವರಿಗೆ ಈರುಳ್ಳಿಯನ್ನು ಮೂಸುವಂತೆ ಮಾಡಿದರೆ ಮೂರ್ಛೆ ತಿಳಿದು ಏಳುತ್ತಾರೆ. ಪ್ರಜ್ಞೆ ತಪ್ಪಿದವರಿಗೂ ಇದೇ ಚಿಕಿತ್ಸೆ ಫಲಕಾರಿಯಗುತ್ತದೆ. ತಲೆ ನೋವು ಇದ್ದಾಗ ಹಣೆಗೆ ಈರುಳ್ಳಿ ರಸ ಹಚ್ಚಿಕೊಂಡರೆ ನೋವು ನಿವಾರಣೆಯಾಗುತ್ತದೆ.

ಇತಿಹಾಸದ ಪುಟಗಳಲ್ಲಿ ಈರುಳ್ಳಿ

[ಬದಲಾಯಿಸಿ]

ಸಂಸ್ಕ್ರತದಲ್ಲಿ, ಈರುಳ್ಳಿಗೆ ಪಲಾಂಡು ಎನ್ನುತ್ತಾರೆ. ಗರುಡ ಪುರಾಣದಲ್ಲೂ ಇದರ ಉಲ್ಲೇಖವಿದೆ. ಮನುಷ್ಯ ತೀರ ಪ್ರಾಚೀನ ಕಾಲದಿಂದಲೂ ಬೆಟ್ಟ ಗುಡ್ಡ ಕಾಡುಗಳಿಂದ ಹಲವು ಬಗೆಯ ಗಿಡಮೂಲಿಕೆಗಳನ್ನು ಸಂಗ್ರಹಿಸಿ ಬಳಸುತ್ತಿದ್ದ. ಆದರೆ ಸ್ವತಃ ಬೆಳೆಸಿ, ಬಳಸತೊಡಗಿದ ಮೊದಮೊದಲ ಗಿಡಮೂಲಿಕೆಗಳ ಪೈಕೆ ಈರುಳ್ಳಿಯೂ ಒಂದು. ಐದು ಸಾವಿರ ವರ್ಷಗಳಿಗೂ ಹಿಂದಿನ ಮಾನವ ಸಂಸ್ಕ್ರತಿಯ ಪಳೆಯುಳಿಕೆಗಳಲ್ಲಿ ಈರುಳ್ಳಿಯ ಕುರುಹು ಸಿಕ್ಕಿದೆ. ಕ್ರಿ.ಪೂ.೪೩೦ರ ಕಾಲದಲ್ಲಿದ್ದ ಹಿಪೋಕ್ರೇಟಸ್ ಈರುಳ್ಳಿಯ ಬಗಗೆ ಉಲ್ಲೇಖಿಸಿದ್ದಾನೆ.ಪ್ರಾಚೀನ ಈಜಿಪ್ಷಿಯ್ನ್ನರು ಪ್ರಾಯಶಃ ಆಹಾರವಗಿ ಮತ್ತು ಔಷಧವಾಗಿ ಮೊದಲ ಬಾರಿಗೆ ಬಳಸಿದ ವಸ್ತುವೆಂದರೆ ಈರುಳ್ಳಿ. . ಈಜಿಪ್ತಿನ ಅನೇಕ ಸ್ಮಾರಕಗಳಲ್ಲಿ ಇರುವ ಚೆತ್ರಗಳ ಆಧಾರದಿಂದ ಅಲ್ಲಿ ೪,೮೦೦ ವಾರ್ಷಗಳಷ್ಟು ಹಿಂದೇ ಈರುಳ್ಳಿಯನ್ನು ಬೆಳೆಸುತ್ತಿದ್ದರು ಎಂದು ಸಸ್ಯವಿಜ್ಞಾನಿಗಳು ಹೇಳುತ್ತಾರೆ.ದೈತ್ಯಗಾತ್ರದ ಪಿರಮಿಡ್‍ಗಳನ್ನು ಕಟ್ಟಲು ನೂರಾರು ಜನ ಕಾರ್ಮಿಕರು ದುಡಿಯಬೇಕಿತ್ತು.ಅವರಿಗೆ ರೋಗ ನಿರೋಧಕ ಶಕ್ತಿಯನ್ನು ಒದಗಿಸಿ ದೇಹದ ಬಲವನ್ನು ಹೆಚ್ಚಿಸಲು ಈರುಳ್ಳಿ ಮತ್ತು ಬೆಳ್ಳುಳ್ಳಿಯನ್ನು ನಿಯಮಿತವಾಗಿ ಕೊಡುತ್ತಿದ್ದರು.ಪ್ರಾಚೀನ ಈಜಿಪ್ತಿನ ಅನೇಕ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಶವಸಂಸ್ಕಾರ ಕಾರ್ಯದಲ್ಲಿ ಈರುಳ್ಳಿಯನ್ನು ಬಳಸುತ್ತಿದ್ದರು. ಅನೇಕ ಮಮ್ಮಿಗಳಲ್ಲೂ ಈರುಳ್ಳಿ ಇರುವುದು ಪತ್ತೆಯಾಗಿದೆ.ಈರುಳ್ಳಿಯನ್ನು ಪ್ರಾಚೀನ ಈಜಿಪ್ಷಿಯ್ನ್ನರು ಆರಾಧಿಸುತ್ತಿದ್ದರು.ಈರುಳ್ಳಿಯ ಒಂದು ಪದರವನ್ನು ಬಿಡಿಸಿದರೆ ಮತ್ತೊಂದು ಪದರ ಕಂಡುಬರುತ್ತದೆ. ಹೀಗೆ ಪದರ ಪದರಗಳಾಚೆ ಹುದುಗಿರುವ ಸರ್ವಶಕ್ತನ ಸಂಕೇತವಾಗಿ ಈರುಳ್ಳಿಯನ್ನು ಭಾವಿಸುತ್ತಿದ್ದರು. ಅದು ಜೀವದ ನಿರಂತರತೆಯ ಸಂಕೇತವೂ ಆಗಿತ್ತು. ಪ್ರಾಚೀನ ಈಜಿಪ್ತ್ ನಲ್ಲಿ ಅಧಿಕಾರ ಗ್ರಹಣ ಮಾಡುವವರು ಈರುಳ್ಳಿ ಮತ್ತು ಬೆಳ್ಳುಳ್ಳಿಯನ್ನು ಸಾಕ್ಷಿಯಾಗಿ ಇಟ್ಟುಕೊಳ್ಳುತ್ತಿದ್ದರಂತೆ. ಇಸ್ರೇಲಿಯರು ಈಜಿಪ್ತಿನಿಂದ ಕೈಗೊಂಡ ಮಹಾಯಾನದ ಸಂದರ್ಭದಲ್ಲಿ ಈರುಳ್ಳಿಯನ್ನು ಸೇವಿಸಿದ್ದ ಬಗ್ಗೆ ಬೈಬಲ್ ನಲ್ಲಿ ಉಲ್ಲೇಖವಿದೆ. ಇಸ್ರೇಲಿಯರು ತಾವು ಈರುಳ್ಳಿ ಇಲ್ಲದೆ ಅನೇಕ ಕಷ್ಟಗಳನ್ನು ಎದುರಿಸಬೇಕಾಯಿತೆಂದು ಹೇಳಿದ ಬಗ್ಗೆ ದಾಖಲೆ ಇದೆ.ಯಹೂದಿಯರು ಈರುಳ್ಳಿಯನ್ನು ಬಹಳ ಇಷ್ತಪಡುತ್ತಿದ್ದರು.ಸೂಯಝ್ ಕೊಲ್ಲಿಯ ಹತ್ತಿರ ಕ್ರಿ.ಪೂ.೧೭೩ ರಲ್ಲಿ ಆನಿಯನ್ ಎಂಬ ಹೆಸರಿನ ಎಂದು ನಗರವನ್ನೇ ಅವರು ಕಟ್ಟಿದರು, ಈ ಕಟ್ಟಡವನ್ನು ಕಟ್ಟಿಸಿದವನ ಹೆಸರು ಆನಿಯನ್ ಎಂದು! ಈ ನಗರವು ೩೪೩ ವರ್ಷಗಳವರೆಗೆ ಇದ್ದಿತು.ಪ್ರಾಚೇನ ಗ್ರೀಸ್ ನಲ್ಲೂ ಈರುಳ್ಳಿಯನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಸುತ್ತಿದ್ದರು. ಗ್ರೀಸ್ ನ ಕ್ರೀಡಾಪಟುಗಳು ಬಲವರ್ಧನೆಗಾಗಿ ಮತ್ತು ರಕ್ತದ ಆರೋಗ್ಯಕ್ಕಾಗಿ ಈರುಳ್ಳಿಯನ್ನು ಸೇವಿಸುತ್ತಿದ್ದರು. ಮಧ್ಯಯುಗದಲ್ಲಿ ಈರುಳ್ಳಿಯ ಪ್ರಾಮುಖ್ಯ ಮತ್ತಷ್ಟು ಹೆಚ್ಚಿಸಿತು.ಮಧ್ಯಯುಗದಲ್ಲಿ ಬಾಡಿಗೆಯನ್ನು ಈರುಳ್ಳಿಯ ರೂಪದಲ್ಲಿ ಪಾವತಿಸುತ್ತಿದ್ದರು.ಎಷ್ಟೋ ಬಾರಿ ಉಡುಗೊರೆಯಾಗಿ ಕೊಡಲು ಈರುಳ್ಳಿಯನ್ನು ಬಳಸುತ್ತಿದ್ದರು.ವೈದ್ಯರೂ ಸಹ ಈರುಳ್ಳಿಯನ್ನು ಒಂದು ಔಷಧ ವಸ್ತುವಾಗಿ ಭಾವಿಸಿದ್ದರು. ಆಹಾರವು ಸರಿಯಾಗಿ ಜೇರ್ಣವಾಗಲು, ಲೈಂಗಿಕ ದೌರ್ಬಲ್ಯವನ್ನು ನಿವಾರಿಸಲು, ತಲೆನೋವು, ಕೆಮ್ಮು, ಹಾವಿನ ಕಡಿತ, ಕೂದಲು ಉದುರುವ ಸಮಸ್ಯ ಮುಂತಾದ ಸಂದರ್ಭಗಳಲ್ಲಿ ಈರುಳ್ಳಿಯನ್ನು ಮದ್ದಾಗಿ ಬಳಸುತ್ತಿದ್ದರು. ಈಗಿನ ಅಮೇರಿಕ ಖಂಡದಲ್ಲಿ ವಾಸವಾಗಿದ್ದ ಆದಿವಾಸಿ ಇಂಡಿಯನ್ನರಿಗೆ ಈರುಳ್ಳಿಯ ಪರಿಚಯವಿರಲಿಲ್ಲ. ಸ್ಪ್ಯಾನಿಷ್ ಜನರು ಆ ಭೂಖಂಡದ ಮೇಲೆ ಕಾಲಿಟ್ಟ ನಂತರ ಈರುಳ್ಳಿಯನ್ನು ಪರಿಚಯಿಸಲಾಯಿತು. ಕ್ರಿ.ಶ. ಒಂದನೇ ಶತಮಾನದಲ್ಲಿ ಡಯಾಸ್ಕೋರಿಡಿಸ್ ಈರುಳ್ಳಿಯಿಂದ ಗುಣಪಡಿಸಬಹುದಾದ ಕಾಯಿಲೆಗಳ ಮಾಹಿತಿಯನ್ನು ನೀಡಿದ್ದನು. ೧೯೧೨ ರಲ್ಲಿ ಡಾ .ದಲಾಚಿ ಎಂಬುವವರು ಎಷ್ಟೆಲ್ಲ ಕಾಯಿಲೆಗಲಿಗೆ ಈರುಳ್ಳಿಯನ್ನು ಬಳಸಿ ಚಿಕಿತ್ಸೆ ನೀಡಬಹುದೆಂದು ವಿವರಿಸಿ 'ಈರುಳ್ಳಿ ಚಿಕಿತ್ಸೆ' ಎಂಬ ಹೊಸ ಚಿಕಿತ್ಸಾಕ್ತಮವನ್ನೇ ಹುಟ್ಟುಹಾಕಿದರು.ಈರುಳ್ಳಿಯ ರೋಗಾಣು ನಿರೋಧಕ ಗುಣ ಬಹಳ ಹಿಂದೆಯೇ ದೃಢಪಟ್ಟಿದೆ. ಲಂಡನ್ನಿನ ಮಹಾಪ್ಲೇಗ್ ಸಂದರ್ಭದಲ್ಲಿ ಊರಿಗೆ ಊರೇ ಸ್ಮಶಾನ ಸದೃಶವಾಗಿದ್ದಾಗಿ ಅಲ್ಲಲ್ಲಿ ಒಂದೆರಡು ಕಡೆಗಳಲ್ಲಿ ಪ್ಲೇಗಿನ ಸೋಂಕು ಇರಲಿಲ್ಲ. ಏಕೆಂದರೆ ಈ ಜಾಗಗಳು ಈರುಳ್ಳಿ ಮಾರಾಟದ ಅಂಗಡಿಗಳಾಗಿದ್ದವು! ಪೋಲ್ಯಾಂಡಿನಲ್ಲಿ ಈರುಳ್ಳಿಯ ಬಗೆಗೆ ಒಂದು ವಿಚಿತ್ರವಾದ ನಂಬಿಕೆ ಇದೆ. ಶಿಶುವನ್ನು ಹೆರಲಿರುವ ತುಂಬು ಗರ್ಭಿಣಿಯನ್ನು ಬಿಸಿ ಈರುಳ್ಳಿ ತುಂಬಿಸಿರುವ ಕಡಾಯಿಯ ಮೇಲೆ ಕೂರಿಸೊದರೆ ಮಗು ಹೆರುವುದು ಬಹಳ ಸುಲಭವಾಗುತ್ತದಂತೆ! ಇಬಾಲ್ ಜಮೀಲ್ ಎಂಬ ವೈದ್ಯರು ಈರುಳ್ಳಿರಸವು ಗರ್ಭ್ ನಿರೋಧಕವಾಗಿ ಬಳಸಲು ಅರ್ಹವೆಂದೂ ಹೇಳಿ ವಿಸ್ಮಯ ಮೂಡಿಸಿದ್ದಾರೆ.

ಉಪಯೋಗಗಳು

[ಬದಲಾಯಿಸಿ]
  • ಈರುಳ್ಳಿಯನ್ನು ಪ್ರತೀನಿತ್ಯ ಸೇವಿಸುವುದರಿಂದ ಬಾಯಿಯ ಆರೋಗ್ಯ ಉತ್ತಮವಾಗಿರುತ್ತದೆ. ಈರುಳ್ಳಿಯನ್ನು ಜಗಿದು ತಿನ್ನುವುದರಿಂದ ಇದು ಹಲ್ಲಿನ ಆರೋಗ್ಯವನ್ನು ಹೆಚ್ಚಿಸುತ್ತದೆ. ಪ್ರತೀ ನಿತ್ಯ 3 ನಿಮಿಷಕ್ಕಿಂತ ಹೆಚ್ಚಾಗಿ ಈರುಳ್ಳಿಯನ್ನು ಜಗಿಯುವುದರಿಂದ ಇದು ಹಲ್ಲಲ್ಲಿರುವ ಬ್ಯಾಕ್ಟೀರಿಯಾವನ್ನು ಕೊಲ್ಲುತ್ತದೆ.
  • ಈರುಳ್ಳಿಯನ್ನು ಹೇರಳವಾಗಿ ತಿನ್ನುವುದರಿಂದ ಇದು ದೇಹದಲ್ಲಿ ಉತ್ಪತ್ತಿಯಾಗುವ ಗ್ಲೂಕೋಸ್ ನ್ನು ಕಡಿಮೆ ಮಾಡಿ,ಇನ್ಸುಲಿನ್ ನ್ನು ಹೆಚ್ಚಾಗುವಂತೆ ಮಾಡುತ್ತದೆ.ಇದರಿಂದ ನಾವು ಸಕ್ಕರೆ ಖಾಯಿಲೆಯಿಂದ ದೂರವಿರಬಹುದು.
  • ಈರುಳ್ಳಿಯಲ್ಲಿ ವಿಟಮಿನ್ ಸಿ ಅಂಶ ಇರುವುದರಿಂದ ಕ್ಯಾನ್ಸರ್ ನಂತಹ ರೋಗಗಳನ್ನು ತಡೆಗಟ್ಟಲು ಸಹಕಾರಿಯಾಗಿದೆ.ಸಕ್ಕರೆ ಖಾಯಿಲೆಯಿಂದ ದೂರವಿರಬಹುದು.
  • ನಿದ್ರಾಹೀನತೆಯಿಂದ ಬಳಲುತ್ತಿರುವವರಿಗೆ ಈರುಳ್ಳಿ ಒಳ್ಳೆಯ ಔಷಧಿ.ರಾತ್ರಿ ಊಟಕ್ಕೂ ಮುನ್ನ ಈರುಳ್ಳಿ ಸೂಪ್ ಸೇವಿಸಿದರೆ ಚೆನ್ನಾಗಿ ನಿದ್ರೆ ಬರುತ್ತದೆ.
  • ಈರುಳ್ಳಿರಸಕ್ಕೆ ಜೇನುತುಪ್ಪ ಸೇರಿಸಿ ಸಮಪ್ರಮಾಣದಲ್ಲಿ ಸೇವಿಸುವುದರಿಂದ ಅಸ್ತಮಾದಿಂದ ದೂರವಿರಬಹುದು.[]
  • ಈರುಳ್ಳಿಯ ಔಷಧೀಯ ಗುಣಗಳು ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸುವ ಸಾಮರ್ಥ್ಯವನ್ನು ಹೊಂದಿವೆ. ಈರುಳ್ಳಿಯಲ್ಲಿ ನಾರಿನಂಶ ಹೆಚ್ಚಿರುವುದರಿಂದ ಮಲಬದ್ಧತೆ ಮತ್ತು ಗ್ಯಾಸ್ ನಂತಹ ಸಮಸ್ಯೆಗಳನ್ನು ನಿವಾರಿಸುತ್ತದೆ. ಮಲಬದ್ಧತೆಯ ಸಮಸ್ಯೆ ಇಲ್ಲದಿದ್ದರೆ, ಜೀರ್ಣಾಂಗ ವ್ಯವಸ್ಥೆಯು ಸರಿಯಾಗಿ ಕೆಲಸ ಮಾಡುತ್ತದೆ. []

ಕೆಂಪು ಈರುಳ್ಳಿ

[ಬದಲಾಯಿಸಿ]

ಕೆಂಪು ಈರುಳ್ಳಿಯ ಸೇವನೆಯು ಕ್ಯಾನ್ಸರ್‌ ತಡೆಗಟ್ಟಲು ನೆರವಾಗಲಿದೆ ಎಂಬುದು ಹೊಸ ಸಂಶೋಧನೆಯಿಂದ ಬೆಳಕಿಗೆ ಬಂದಿದೆ.

ಉಲ್ಲೇಖಗಳು

[ಬದಲಾಯಿಸಿ]
  1. "Allium cepa L. — The Plant List". theplantlist.org. Archived from the original on 2017-07-22. Retrieved 2015-08-07.
  2. "ಆರ್ಕೈವ್ ನಕಲು". Archived from the original on 2018-03-31. Retrieved 2018-03-16.
  3. "ಈರುಳ್ಳಿ ಉಪಯೋಗಗಳು". kannadanews.today. October 19, 2021.

ಬಾಹ್ಯ ಸಂಪರ್ಕಗಳು

[ಬದಲಾಯಿಸಿ]
"https://kn.wikipedia.org/w/index.php?title=ಈರುಳ್ಳಿ&oldid=1195280" ಇಂದ ಪಡೆಯಲ್ಪಟ್ಟಿದೆ