೨೦೧೪ರ ಕಾಶ್ಮೀರದ ಪ್ರವಾಹ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ನಾಸಾ ಪಡೆದ ಉತ್ತರ ಭಾರತದ ಉಪಖಂಡದ ಈ ಚಿತ್ರವು ಜಮ್ಮು ಮತ್ತು ಕಾಶ್ಮೀರದ ಮೇಲೆ ಮಾನ್ಸೂನ್ ಮೋಡಗಳನ್ನು ತೋರಿಸುತ್ತದೆ, & ಆಜಾದ್ ಕಾಶ್ಮೀರ, & ಗಿಲ್ಗಿಟ್-ಬಾಲ್ಟಿಸ್ತಾನ್ ಮತ್ತು ಪಾಕಿಸ್ತಾನಿ ಪಂಜಾಬ್. 4 September 2014

ಸೆಪ್ಟಂಬರ್ ೨- ೨೦೧೪ ರಿಂದ ಕಾಶ್ಮೀರದಲ್ಲಿ ಎಂದೂ ಕಾಣದ ಪ್ರವಾಹ[ಬದಲಾಯಿಸಿ]

ಸಿಂಧೂ, ಝೀಲಂ, ಚೆನಾಬ್ ನ ಪ್ರಮುಖ ನದಿಗಳು, ಚೆನಾಬ್ ನದಿ, ರಾವಿ, ಬಿಯಸ್ ಮತ್ತು ಸಟ್ಲೆಜ್

en:Flood in Kashmir 2014

ಕಾಶ್ಮೀರದಲ್ಲಿ ಶ್ರೀನಗರದ ರಸ್ತೆ, ಕೆಳ ಅಂತಸ್ತಿನಲ್ಲಿ ಪ್ರವಾಹದ ನೀರು ತುಂಬಿರುವುದು.
 • ದಿ.9-9-2014-ಶ್ರೀನಗರ/[[ಜಮ್ಮು]: ಮಳೆಗಾಲದ ಮಳೆಯಲ್ಲಿ ಭಯಾನಕ ಜಲಪ್ರಳಯಕ್ಕೆ ಸಾಕ್ಷಿಯಾಗಿರುವ ಕಣಿವೆ ರಾಜ್ಯ ಅಕ್ಷರಶಃ ನಲುಗಿ ಹೋಯಿತು. ಜಮ್ಮು ಮತ್ತು ಕಾಶ್ಮೀರದಲ್ಲಿ ೯-೯-೨೦೧೪ ಕ್ಕೆ ಮೃತರ ಸಂಖ್ಯೆ ೨೦೦ ದಾಟಿತು. ಇನ್ನೂ ಲಕ್ಷಾಂತರ ಮಂದಿ ಪ್ರವಾಹದಲ್ಲಿ ಸಿಲುಕಿಕೊಂಡಿದ್ದರು, ಶ್ರೀನಗರದ ಬಹುತೇಕ ಭಾಗಗಳು ಮುಳುಗಡೆಯಾಗಿತ್ತು. ಇದರ ಜತೆಗೆ ಸಂವಹನ ಸಮಸ್ಯೆ ಹಾಗೂ ಏರುತ್ತಿರುವ ನೀರಿನ ಮಟ್ಟವು ರಕ್ಷಣಾ ಕಾರ್ಯಾಚರಣೆಗೆ ದೊಡ್ಡ ಸವಾಲಾಗಿ ಪರಿಣಮಿಸಿತು. ಪರಿಸ್ಥಿತಿಯ ಭೀಕರತೆಯನ್ನು ಅರಿತ ನೌಕಾಪಡೆ ಮೊತ್ತಮೊದಲ ಬಾರಿಗೆ ಪ್ರವಾಹ ರಕ್ಷಣಾ ಕಾರ್ಯಾ ಚರಣೆಗಿಳಿಯಿತು.
 • ಜೀವನದಿಯ ರೌದ್ರಾವತಾರ-ಶತಮಾನದಿಂದ ಶಾಂತವಾಗಿ ಹರಿಯುತ್ತಿದ್ದ ಕಾಶ್ಮೀರ ಕಣಿವೆಯ ಜೀವನದಿ ಝೀಲಂನ ಮತ್ತೊಂದು ಕರಾಳ ಮುಖ ಕಾಶ್ಮೀರಿಗಳಿಗೆ ಈಗ ಪರಿಚಯವಾಯಿತು. ಜೀವಮಾನದಲ್ಲಿ ಝೇಲಂ ರೌದ್ರಾವತಾರ ಕಂಡರಿಯದ ಸ್ಥಳೀಯರು ೧೫ ದಿನಗಳಲ್ಲಿ ಅದರ ರುದ್ರ ನರ್ತನ ಕಂಡು ಬೆಚ್ಚಿ ಬಿದ್ದರು. ಕಣಿವೆಯಲ್ಲಿ ಸಣ್ಣ ತೊರೆಯಾಗಿ ಹುಟ್ಟುವ ಝೇಲಂ ಕಾಶ್ಮೀರಿಗಳ ಜೀವನಾಡಿ. ಈ ನದಿಯನ್ನು ಜನ್ಮಕೊಟ್ಟ ತಾಯಿಯಷ್ಟೇ ಪೂಜ್ಯ ಭಾವನೆಯಿಂದ ಕಾಣುತ್ತಿದ್ದ ಜನರ ಜೀವನವನ್ನು ರಕ್ಕಸ ಅಲೆಗಳು ಕೊಚ್ಚಿ ಒಯ್ದವು. ‘ಅನ್ನ ಕೊಡುತ್ತಿದ್ದ ತಾಯಿಯೇ ನಮ್ಮ ಮೇಲೆ ಮುನಿಸಿಕೊಂಡು ಅನ್ನ ಕಸಿದು ಕೊಂಡು ನಮ್ಮನ್ನು ಬೀದಿಗೆ ತಂದಿದ್ದಾಳೆ’ ಎನ್ನುತ್ತಿದ್ದರು ಸ್ಥಳೀಯರು.

ಕಾಶ್ಮೀರ: ಸಂಕಷ್ಟದಲ್ಲಿ ಕನ್ನಡಿಗರು[ಬದಲಾಯಿಸಿ]

12-9-2014-ಶುಕ್ರವಾರ ಶ್ರೀನಗರ ಕಂಡಬಂದಿದ್ದು ಹೀಗೆ
 • ಕಾಶ್ಮೀರ ವೀಕ್ಷಣೆಗೆ ಹೋಗಿ ಸಂಕಷ್ಟಕ್ಕೆ ಸಿಕ್ಕಿರುವ ನೂರಾರು ಕನ್ನಡಿಗರು ಊರಿಗೆ ಹಿಂದಿರುಗಲು ಪರದಾಡಿದರು, ರಾಜಧಾನಿ ಶ್ರೀನಗರದ ರಾಜಭವನ ಸಮೀಪದ ಹೆಲಿಪ್ಯಾಡ್‌ನಲ್ಲಿ ನಾಲ್ಕೈದು ದಿನಗಳಿಂದ ಅಸಹಾಯಕರಾಗಿ ಕುಳಿತಿದ್ದರು. ಕರ್ನಾಟಕದ ಪ್ರವಾಸಿಗರನ್ನು ಸುರಕ್ಷಿತವಾಗಿ ವಾಪಸ್‌ ಕರೆತರಲು ರಾಜ್ಯ ಸರ್ಕಾರ ನಿಯೋಜಿಸಿರುವ ತಂಡದ ಮುಖ್ಯಸ್ಥ ಐಎಎಸ್‌ ಅಧಿಕಾರಿ ರಮಣದೀಪ್‌ ಚೌಧರಿ ಮತ್ತು ದೆಹಲಿ ಕರ್ನಾಟಕ ಭವನದ ಸಿಬ್ಬಂದಿ ಮೋಹನ ಕುಮಾರ್‌ ಶ್ರೀನಗರದಲ್ಲಿದ್ದು, ಸೇನಾ ವಿಮಾನ ನಿಲ್ದಾಣಕ್ಕೆ ಹೆಲಿಕಾಪ್ಟರ್‌ನಲ್ಲಿ ಬರುವ ಕನ್ನಡಿಗರ ಹೆಸರು, ವಿವರಗಳನ್ನು ಪಡೆದು ಹಿರಿಯ ಅಧಿಕಾರಿಗಳಿಗೆ ರವಾನಿಸುತ್ತಿದರು.
 • ಆಮೆ ಗತಿ: ನೆರೆಯ ಕೇರಳ, ಆಂಧ್ರಪ್ರದೇಶ, ತಮಿಳುನಾಡು ಮತ್ತು ಮಹಾರಾಷ್ಟ್ರಕ್ಕೆ ಹೋಲಿಸಿದರೆ ರಾಜ್ಯದ ಕಾರ್ಯಾಚರಣೆ ಆಮೆ ವೇಗದಲ್ಲಿ ಸಾಗುತ್ತಿತ್ತು ಎಂಬ ಆರೋಪ ಕೇಳಿಬಂತು. ೨೦೦ಕ್ಕೂ ಹೆಚ್ಚು ಜನ ವಾಪಸ್‌ ಬಂದರು. ಅಧಿಕೃತ ಅಂಕಿಸಂಖ್ಯೆ ಪ್ರಕಾರ ೬೬೦ಕ್ಕೂ ಹೆಚ್ಚು ಜನರು ಕಣಿವೆ ರಾಜ್ಯದಲ್ಲಿ ವಿಹಾರಕ್ಕೆ ಹೋಗಿದ್ದರು. ಇನ್ನೂ ೪೫೦ಕ್ಕೂ ಹೆಚ್ಚು ಜನರ ಸ್ಥಿತಿ ಅತಂತ್ರವಾಗಿತ್ತು. ದುಡ್ಡು ಕಾಸಿಲ್ಲದೆ ತೊಂದರೆಗೆ ಒಳಗಾಗಿರುವ ಜನರಿಗೆ ರಾಜ್ಯ ಸರ್ಕಾರ ಎಲ್ಲ ನೆರವು ನೀಡುತು. ಅನಾರೋಗ್ಯಕ್ಕೆ ಒಳಗಾಗಿರುವ ಜನರಿಗೂ ಅಗತ್ಯ ಔಷಧೋಪಚಾರ ಮಾಡುವಂತೆ ಮನವಿ ಮಾಡಿ ‘ರಾಷ್ಟ್ರೀಯ ವಿಪತ್ತು ಪರಿಹಾರ ಪಡೆ’ಯ ಅಧಿಕಾರಿಗಳಿಗೆ ಪತ್ರ ಬರೆಯಲಾಗಿತ್ತು. [೧]

ಕನ್ನಡಿಗರ ರಕ್ಷಣೆ[ಬದಲಾಯಿಸಿ]

 • ಜಮ್ಮು ಮತ್ತು ಕಾಶ್ಮೀರದ ಪ್ರವಾಹದಲ್ಲಿ ಸಿಲುಕಿರುವ 660 ಕನ್ನಡಿಗರ ಪೈಕಿ 560 ಜನರನ್ನು ರಕ್ಷಣೆ ಮಾಡಲಾಗಿದೆ. ಶ್ರೀನಗರ ತಲುಪಿದ ಎಲ್ಲಾ ಕನ್ನಡಿಗರಿಗೆ ಅಗತ್ಯ ಸೌಲಭ್ಯ ಒದಗಿಸಿಕೊಟ್ಟಿದ್ದು, ಅವರು ಕರ್ನಾಟಕಕ್ಕೆ ಮರಳಲು ಬೇಕಾದ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ಸರ್ಕಾರ ತಿಳಿಸಿದೆ.
 • ಹುಬ್ಬಳ್ಳಿ-ಧಾರವಾಡ ಪ್ರಾದೇಶಿಕ ಆಯುಕ್ತರಾದ ರಮಣದೀಪ್ ಮತ್ತು ದೆಹಲಿಯ ಕರ್ನಾಟಕ ಭವನದ ಮೋಹನ್ ಕುಮಾರ್ ಅವರು ಕಾಶ್ಮೀರದಲ್ಲಿ ಕನ್ನಡಿಗರನ್ನು ರಕ್ಷಿಸುವ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ರಮಣದೀಪ್ ಅವರು ಶ್ರೀನಗರದ ವಿಮಾನ ನಿಲ್ದಾಣದಿಂದ ಕನ್ನಡಿಗರನ್ನು ದೆಹಲಿಗೆ ಕಳುಹಿಸುವ ವ್ಯವಸ್ಥೆ ಮಾಡುತ್ತಿದ್ದಾರೆ.
 • ಕಾಶ್ಮೀರದಲ್ಲಿ ರಕ್ಷಿಸಲಾದ 80 ಕನ್ನಡಿಗರು ದೆಹಲಿಯ ಕರ್ನಾಟಕ ಭವನದಲ್ಲಿದ್ದು, ಅವರಿಗೆ ಅಲ್ಲಿ ಆಹಾರ, ನೀರು ಸೇರಿದಂತೆ ಅಗತ್ಯ ವ್ಯವಸ್ಥೆಗಳನ್ನು ಮಾಡಲಾಗಿದೆ. ಅವರು ಬೆಂಗಳೂರಿಗೆ ಮರಳಲು ವ್ಯವಸ್ಥೆ ಮಾಡಲಾಗಿದ್ದು, ಅವರು ಕರ್ನಾಟಕಕ್ಕೆ ಆಗಮಿಸಿದ್ದಾರೆ.

[೨]

ಸೇನೆಗೂ ಕಾಡಿದ ನೆರೆ: ರೈಫಲ್ಸ್, ಬಾಂಬ್‌ಗಳು ಹಾಳು[ಬದಲಾಯಿಸಿ]

 • ಶ್ರೀನಗರದಲ್ಲಿ-ಝೀಲಂ-ಚೀನಾಬ್, ತನ್ನ ರುದ್ರಪ್ರತಾಪವನ್ನು ತೋರಿದಂತೆಯೇ ಜಮ್ಮು ಮತ್ತು ಕಾಶ್ಮೀರದ ಪ್ರವಾಹ ಪರಿಸ್ಥಿತಿಯೂ ಇತ್ತು! ನಾಗರಿಕರ ಮೇಲೆ ಮಾತ್ರವಲ್ಲ , ದೇಶದ ನಾನಾ ಕಡೆಯಿಂದ ಬಂದು ಈ ಭಾಗದಲ್ಲಿ ನಿಯೋಜನೆ ಗೊಂಡಿರುವ ಸೇನಾ ಸಿಬ್ಬಂದಿ ಮೇಲೂ ತನ್ನ ಮಳೆ ಪ್ರವಾಹ ಪ್ರತಾಪ ತೋರಿತು. ಕಾಶ್ಮೀರ ಕಣಿವೆಯಲ್ಲಿನ ಸೇನಾ ಕ್ಯಾಂಪ್‌ಗಳಿಗೆ ನೀರು ನುಗ್ಗಿ, ಅಲ್ಲಿ ಯೋಧರ ಅಸ್ತ್ರಗಳನ್ನು ಹಾಳು ಕೆಡವಿತು. ನೂರಾರು ಎಕೆ ರೈಫಲ್‌ಗಳು, ಇನ್ಸಾಸ್ ರೈಫಲ್‌ಗಳು, ಎಸ್‌ಎಲ್‌ಆರ್ ರೈಫಲ್‌ಗಳು ಮತ್ತು ಮದ್ದು ಗುಂಡುಗಳು, ಬಾಂಬ್‌ಗಳು, ಗ್ರೇನೇಡ್‌ಗಳೂ ಸೇರಿದಂತೆ ಅಸ್ತ್ರಗಳೆಲ್ಲವೂ ನೀರಲ್ಲಿ ಮುಳುಗಿದವು. ಭಾನುವಾರ ರಾತ್ರಿ ನುಗ್ಗಿದ ಪ್ರವಾಹದಿಂದಾಗಿ ಶ್ರೀನಗರದ ಸೇನಾ ಶಿಬಿರದಲ್ಲಿದ್ದ ಕೇಂದ್ರ ಅರೆಸೇನಾಪಡೆಯ 400 ಸಿಬ್ಬಂದಿ ಬೇರೆಡೆಗೆ ಸ್ಥಳಾಂತರಗೊಂಡಿದ್ದರು. ರೈಫಲ್‌ಗಳನ್ನು ಹೇಗೋ ಎಣ್ಣೆ ಬಿಟ್ಟು, ರಿಪೇರಿ ಮಾಡಿ ಮತ್ತೆ ಬಳಸಬಹುದು. ಆದರೆ ಬಾಂಬ್‌ಗಳು ಮತ್ತು ಗ್ರೇನೇಡ್‌ಗಳೆಲ್ಲವೂ ವ್ಯರ್ಥವಾಗಿವೆ, ಎಂದು ಸೇನಾ ಅಧಿಕಾರಿಯೊಬ್ಬರು ಹೇಳಿದ್ದರು.[೩]

ರಕ್ಷಕರತ್ತ ಕಲ್ಲು ತೂರಾಟ:[ಬದಲಾಯಿಸಿ]

ಪರಿಹಾರ ಸಂಗ್ರಹ-+ ಕಲ್ಲು ತೂರಾಟ.
 • ದಿ.೧೪-೯-೨೦೧೪-ಶ್ರೀನಗರದಲ್ಲಿ ೮೦ಕ್ಕೂ ಹೆಚ್ಚು ಐಎಎಫ್ ವಿಮಾನಗಳು ಪರಿಹಾರ ಕಾರ್ಯಾಚರಣೆಯಲ್ಲಿ ನಿರತವಾಗಿದ್ದವು. ಭೂಮಿಗೆ ಸಮೀಪದಲ್ಲಿ ಸಾಗುವ ಹೆಲಿಕಾಪ್ಟರ್‌ಗಳನ್ನು ಗುರಿಯಾಗಿಸಿಕೊಂಡು ಕೆಲವರು ಕಲ್ಲು ತೂರುತ್ತಿದ್ದರು. "ತಮ್ಮ ಒಂದು ಕಾಪ್ಟರ್‌ಗೆ ಇದರಿಂದ ದೊಡ್ಡ ಹಾನಿಯೇ ಆಗಿದೆ. ನಮ್ಮ ದೋಣಿಗಳಿಗೂ ಕಲ್ಲು ತೂರಾಟದಿಂದ ಹಾನಿಯಾಗಿದೆ. ತಮ್ಮನ್ನು ರಕ್ಷಿಸಲು ಮುಂದಾದ ಸೇನಾ ಸಿಬ್ಬಂದಿ ವಿರುದ್ಧ ಜನರು ಕಲ್ಲು ತೂರುತ್ತಿರುವುದು ದುರದೃಷ್ಟಕರ. ಆದಾಗ್ಯೂ, ಕಟ್ಟ ಕಡೆಯ ನೆರೆಪೀಡಿತ ವ್ಯಕ್ತಿಯನ್ನೂ ರಕ್ಷಿಸುವ ತನಕ ನಮ್ಮ ಕಾರ್ಯಾಚರಣೆ ನಿಲ್ಲದು. ನಮ್ಮ ಕೆಲಸ ನಾವು ಮಾಡುತ್ತೇವೆ, ಎಂದು ಏರ್‌ಮಾರ್ಷಲ್ ಎಸ್.ಬಿ.ದೇವೋ ಹೇಳಿದ್ದರು. ಪ್ರತಿದಿನ ಬೆಳಗ್ಗೆ ೪ ಗಂಟೆಗೆ ರಕ್ಷಣಾ ಕಾರ್ಯಾಚರಣೆಗೆ ಇಳಿದರೆ, ಮಧ್ಯರಾತ್ರಿ ತನಕ ಅದು ಮುಂದುವರಿಯುತ್ತಿತ್ತು. ಮಧ್ಯರಾತ್ರಿಯಿಂದ ಬೆಳಗಿನ ಜಾವ 4ರ ತನಕ ದೋಣಿಗಳ ರಿಪೇರಿ ಕೆಲಸ ಮಾಡಲಾಗುತ್ತಿತ್ತು. (ಲೆಫ್ಟಿನೆಂಟ್ ಎಸ್.ಪಿ.ಸಿಂಗ್)

ದಿ.೨೦- ೯ -೨೦೧೪ ರಲ್ಲೂ ಮುಳುಗಿತ್ತು[ಬದಲಾಯಿಸಿ]

 • ೧೪ ಮಕ್ಕಳೂ ಸೇರಿ ೪೩ ಸಾವು- ಶ್ರೀನಗರದ ಜಿ.ಬಿ.ಪಂಥ್ ಆಸ್ಪತ್ರೆಯಲ್ಲಿದ್ದ ೧೪ ಮಕ್ಕಳು ಜಲ ಸಮಾಧಿಯಾಗಿದ್ದಾರೆ. ಈ ಆಸ್ಪತ್ರೆ ಮತ್ತು ನಗರದಲ್ಲಿನ ಶ್ರೀ ಮಹಾರಾಜ ಹರಿ ಸಿಂಗ್ ಮತ್ತು ಸರಕಾರಿ ಮೆಡಿಕಲ್ ಕಾಲೇಜು ಆಸ್ಪತ್ರೆಗಳು ಪ್ರವಾಹದಿಂದ ಜಲಾವೃತವಾಗಿದ್ದು, ಇಲ್ಲಿನ ಜನರೂ ಸೇರಿದಂತೆ ೪೩ಮಂದಿ ಬಲಿಯಾಗಿದ್ದಾರೆ. ೨೯ ಶವಗಳು ಪತ್ತೆಯಾಗಿವೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.
 • ಶ್ರೀನಗರದ ಶಿವಪುರ, ರಾಜ್‌ಭಾಗ್, ಜವಾಹರ ನಗರ್, ವಜಿರಾಬಾಗ್, ಗೋಗ್ಜಿಬಾಗ್, ಕರಣ್ ನಗರ್ ಸೇರಿದಂತೆ ನಾನಾ ಪ್ರದೇಶಗಳು ನಾಲ್ಕರಿಂದ ಹತ್ತು ಅಡಿ ನೀರಿನಲ್ಲಿ ಮುಳುಗಿದ್ದವು. ನಗರದ ವ್ಯವಹಾರದ ಪ್ರಮುಖ ಪ್ರದೇಶಗಳಾದ ಲಾಲ್ ಚೌಕ್, ರೆಸಿಡೆನ್ಸಿ ರೋಡ್, ಹರಿ ಸಿಂಗ್ ಹೈ ಸ್ಟ್ರೀಟ್, ಕರಣ್ ನಗರಗಳು ಈಗಲೂ ಮುಳುಗಿವೆ. ಇದರಿಂದಾಗಿ ಕೋಟ್ಯಂಟರ ರೂಪಾಯಿ ನಷ್ಟವಾಯಗಿತ್ತು ಎಂದು ಅಂದಾಜುಮಾಡಿದ್ದರು. [೪][೫]

ಪರಿಹಾರ ಕಾರ್ಯ[ಬದಲಾಯಿಸಿ]

 • ನೀರು ಶುದ್ಧೀಕರಿಸುವ ೧೩ ಟನ್ ಗುಳಿಗೆಗಳು ಮತ್ತು ೬ ನೀರು ಶುದ್ಧೀಕರಣ ಘಟಕಗಳು(ದಿನಕ್ಕೆ ೧.೨ ಲಕ್ಷ ಬಾಟಲ್ ಶುದ್ಧೀಕರಣ) ಶ್ರೀನಗರ ತಲುಪಿಸಲಾಯಿತು.
 • ೧೨ನೇ ದಿನಕ್ಕೆ ರಕ್ಷಣಾ ಕಾರ್ಯಾಚರಣೆ ಕಾಲಿಟ್ಟಿಟ್ಟು ೧,೪೨,೦೦ ಜನರನ್ನು ರಕ್ಷಿಸಲಾಯಿತು.
 • ಪರಿಹಾರ ಕಾರ್ಯಾಚರಣೆ ಮುಂದುವರಿದಿದ್ದರೂ, ಇನ್ನೂ ೧.೫ ಲಕ್ಷ ಜನ ದಿ. ೨೫ ರಲ್ಲೂ ನೆರೆಯಲ್ಲಿ ಸಿಲುಕಿದ್ದರು.
 • ಭೂಕುಸಿತದಿಂದ ಆ ೧೦ ದಿನದಿಂದ ಬಂದ್ ಆಗಿದ್ದ ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿ ಸಂಚಾರ ದಿ ೧೫ ರಲ್ಲೂ ಮುಕ್ತಗೊಂಡಿರಲಿಲ್ಲ
 • ಛತ್ತೀಸ್‌ಗಢ ಸರಕಾರದಿಂದ ೧೦ ಸಾವಿರ ಸೌರ ದೀಪಗಳು ಶ್ರೀನಗರಕ್ಕೆ ರವಾನೆಯಾಯಿತು.
 • ಜಮ್ಮು ಮತ್ತು ಕಾಶ್ಮೀರ ಪುನರ್ನಿರ್ಮಾಣಕ್ಕೆ ಸರ್ವ ಪಕ್ಷಗಳಿಂದ ನಿರ್ಣಯ ಅಂಗೀಕಾರಮಾಡಿದರು.
 • ಜಮ್ಮು ಮತ್ತು ಕಾಶ್ಮೀರ್ ಬ್ಯಾಂಕ್ ಲಿಮಿಟೆಡ್ ಸುರಕ್ಷಿತವಾಗಿದ್ದು, ಅಲ್ಲಿ ಠೇವಣಿಯಿಟ್ಟವರು ಆತಂಕ ಪಡುವ ಭಯಬೇಡ ಎಂದು ಮುಖ್ಯಮಂತ್ರಿ ಉಮರ್ ಅಬ್ದುಲ್ಲಾ ಹೇಳಿಕೆನೀಡಿದ್ದರು.
 • ಸ್ಥಳೀಯ ರೇಡಿಯೋ ಕೇಂದ್ರ ಮತ್ತು ದೂರದರ್ಶನಕ್ಕೆ ಸೇವೆ ಆರಂಭಿಸಲು ಇನ್ನೂ ದಿ.೨೫ ರವರೆಗೂ ಸಾಧ್ಯವಾಗಿಲಿಲ್ಲ. ದಿ.೨೫ ಶುಕ್ರವಾರದಿಂದ ಪ್ರಸಾರ ಭಾರತಿ ನಿಯಂತ್ರಣದ ಎಫ್‌ಎಂ ಸ್ಟೇಷನ್‌ಗಳಿಂದ ಪ್ರವಾಹ ಸಂಬಂಧಿ ಸಂದೇಶಗಳು ಬಿತ್ತರವಾದವು.[೬]

ಫೋಟೋ ಗ್ಯಾಲರಿ[ಬದಲಾಯಿಸಿ]

ಕಾಶ್ನೀರ ಪ್ರವಾಹದ ನೋಟ
ಮಕ್ಕಳ ರಕ್ಷಣೆ
ಝೀಲಂ ಪ್ರವಾಹ
ಮುಳುಗಿದ ನಗರ

ನೋಡಿ[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]

 1. ರಾಜ್ಯ ಸರ್ಕಾರದ ಮೂಲಗಳಿಂದ. ವಿಜಯ ಕರ್ನಾಟಕದ ವರದಿ
 2. (ಒನ್ ಇಂಡಿಯಾ ಸುದ್ದಿ-
 3. [Sep 14, 2014,vijaykarnataka]
 4. [೨೧-೯-೨೧೪ ವಿಜಯಕರ್ನಾಟಕ]
 5. Lakhs still stranded in flood-hit J&K
 6. Jammu & Kashmir floods: Thousands still stranded in Srinagar, rescue operations intensify

ಉಲ್ಲೇಖ[ಬದಲಾಯಿಸಿ]