ಸಿಂಧೂ ನದಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸಿಂಧೂ ನದಿ (ಸ್ಥಳೀಯವಾಗಿ ಸಿಂಧು ಎಂದು ಕರೆಯಲ್ಪಡುತ್ತದೆ) ಏಷ್ಯಾದಲ್ಲೇ ಅತ್ಯಂತ ಉದ್ದದ ನದಿಗಳಲ್ಲಿ ಒಂದಾಗಿದೆ. ಮಾನಸ ಸರೋವರದ ಸಮೀಪದ ಟಿಬೆಟಿಯನ್ ಪ್ರಸ್ಥಭೂಮಿಯ ಮೂಲದ, ನದಿ ಜಮ್ಮು ಮತ್ತು ಕಾಶ್ಮೀರದ ಲಡಾಖ್ಪ್ರದೇಶದ ಮೂಲಕ, ಗಿಲ್ಗಿಟ್-ಬಾಲ್ಟಿಸ್ತಾನ್ ಮತ್ತು ಹಿಂದುಕುಶ್ ವ್ಯಾಪ್ತಿಯ ಕಡೆಗೆ ಕೋರ್ಸ್ ಅನ್ನು ಹಾದು ಹೋಗುತ್ತದೆ ಮತ್ತು ನಂತರ ಪಾಕಿಸ್ತಾನದ ಉದ್ದಕ್ಕೂ ವಿಲೀನಗೊಳ್ಳಲು ದಕ್ಷಿಣದ ದಿಕ್ಕಿನಲ್ಲಿ ಹರಿಯುತ್ತದೆ. ಸಿಂಧ್ನಬಂದರು ನಗರ ಕರಾಚಿ ಬಳಿ ಅರೇಬಿಯನ್ ಸಮುದ್ರದಲ್ಲಿ.   ಇದು ಪಾಕಿಸ್ತಾನದ ಉದ್ದದ ನದಿ ಮತ್ತು ರಾಷ್ಟ್ರೀಯ ನದಿಯಾಗಿದೆ.

ಸಿಂಧೂ
ಸಿಂಧ್, ಹಿಂದೂ, ಅಬಾಸಿನ್, ಸೆಂಗ್‍ಗೆ ಚು, ಯಿಂದೂ ಹೆ
ನದಿ
[[Image:| 256px|none
]]
Kintra ಚೀನಾ, ಭಾರತ, ಪಾಕಿಸ್ತಾನ
States ಟಿಬೆಟ್, ಜಮ್ಮು ಮತ್ತು ಕಾಶ್ಮೀರ, ಉತ್ತರ ಪ್ರಾಂತ್ರ್ಯಗಳು, ಪಂಜಾಬ್(ಪಾಕಿಸ್ತಾನ), ಸಿಂಧ್
Soorce ಸೆಂಗ್‍ಗೆ ಮತ್ತು ಗಾರ್ ನದಿಗಳ ಸಂಗಮ ಸ್ಥಾನ
 - location ಟಿಬೆಟ್ ಪ್ರಸ್ಥಭೂಮಿ, ಟಿಬೆಟ್, ಚೀನಾ
Mooth ಸಪ್ತ ಸಿಂಧೂ
 - location ಸಿಂಧ್, ಪಾಕಿಸ್ತಾನ
 - elevation ೦ m (೦ ft)
Lenth ೩,೨೦೦ km (೨,೦೦೦ mi) ಅಂದಾಜು
Basin ೧೧,೬೫,೦೦೦ km² (೪,೫೦,೦೦೦ sq mi) ಅಂದಾಜು
Discharge for ಅರಬ್ಬೀ ಸಮುದ್ರ
 - average ೬,೬೦೦ /s (೨,೩೦,೦೦೦ cu ft/s) ಅಂದಾಜು

ಸಿಂಧೂ ನದಿಯ ಉಗಮ[ಬದಲಾಯಿಸಿ]

ಸಿಂಧೂ ನದಿ (ಆಂಗ್ಲ ಭಾಷೆ: ಇಂಡಸ್ ; ಟಿಬೆಟ್ ಭಾಷೆ: ಸೆಂಗೆ ಚೂ;) ಪಾಕಿಸ್ತಾನ ಮತ್ತು ಉತ್ತರ ಉತ್ತರ ಭಾರತದಲ್ಲಿ ಹರಿಯುವ ಒಂದು ಪ್ರಮುಖ ನದಿ. ಟಿಬೆಟ್ಟಿನ ಪ್ರಸ್ಥಭೂಮಿಯಲ್ಲಿರುವ ಮಾನಸಸರೋವರದ ಹತ್ತಿರ ಉಗಮಿಸುವ ಈ ನದಿ ಕಾಶ್ಮೀರದ ಮೂಲಕ ಉತ್ತರ ಪಾಕಿಸ್ತಾನಕ್ಕೆ ಹರಿದು, ನಂತರ ದಕ್ಷಿಣ ಮುಖಕ್ಕೆ ತಿರುಗಿ ಇಡಿ ಪಾಕಿಸ್ತಾನದ ಉದ್ದಕ್ಕೆ ಹರಿದು, ಕರಾಚಿ ನಗರದ ಬಳಿ ಅರಬ್ಬಿ ಸಮುದ್ರವನ್ನು ಸೇರುತ್ತದೆ.

ನದಿಯ ಅಗಾಧತೆ[ಬದಲಾಯಿಸಿ]

  • ಲೇಖನ:ಭಾರತದ ನದಿಗಳು
  • ಸಿಂಧೂ ನದಿ, ಟಿಬೆಟನ ಮತ್ತು ಸಂಸ್ಕೃತದ ಸಿಂಧು ಸಿಂಧಿ ಸಿಂಧು ಅಥವಾ ಮೆಹರಾನ್ ದಕ್ಷಿಣ ಏಷ್ಯಾದಲ್ಲಿ ದೊಡ್ಡ ಹಿಮಾಲಯ-ಉಗಮ ನದಿ. ಇದು 2,000 ಮೈಲಿ (3,200 ಕಿ.ಮೀ. ಉದ್ದದ ಜಗತ್ತಿನ ಅತೀ ಉದ್ದದ ನದಿಗಳಲ್ಲಿ ಒಂದಾಗಿದೆ. ಇದರ ಒಟ್ಟು ಜಲಾನಯನ ಪ್ರದೇಶ 4,50,000 ಚದರ ಮೈಲಿ (11,65,000 ಚದರ ಕಿ.ಮೀ.), ಇದರಲ್ಲಿ 1,75,000 ಚದರ ಮೈಲಿ (4,53,000 ಚದರ ಕಿ.ಮೀ) ಪ್ರದೇಶ ಹಿಮಾಲಯದ ಶ್ರೇಣಿಗಳು ಮತ್ತು ಹಿಂದೂ ಕುಶ್ ಮತ್ತು ಕಾರಕೋರಂ ಶ್ರೇಣಿಯ ಬೆಟ್ಟದ ತಪ್ಪಲಲ್ಲಿ ಇರುವುದು. ; ಉಳಿದ ಪ್ರದೇಶ ಪಾಕಿಸ್ತಾನದ ಕಡಿಮೆ ಮಳೆ ಬೀಳುವ ಬಯಲು ಪ್ರದೇಶದಲ್ಲಿದೆ. ನದಿಯ ವಾರ್ಷಿಕ ಹರಿವು 58 ಘನ ಮೈಲಿ (243 ಘನ ಕಿ.ಮೀ); ನೈಲ್ ನದಿಯ ಎರಡರಷ್ಟು ಮತ್ತು ಟೈಗ್ರಿಸ್ ಮತ್ತು ಯೂಫ್ರಟಿಸ್ ನದಿಗಳ ಒಟ್ಟು ಹರಿವಿನ ಮೂರರಷ್ಟು. ಆರಂಭಿಕ ದಾಖಲೆಗಳು ಮತ್ತು ಪ್ರಾಚೀನ ಭಾರತದ, ಸುಮಾರು 1500 ಕ್ರಿ.ಪೂ.ದ ಋಗ್ವೇದದ ಆರ್ಯನ್ ಜನರು ಸಂಯೋಜನೆ ಮಾಡಿದ ಶ್ಲೋಕಗಳಲ್ಲಿ ,ಸಿಂಧೂ ನದಿಯನ್ನು ಉಲ್ಲೇಖಿಸುತ್ತವೆ.ಅದೇ ದೇಶದ ಹೆಸರಿನ ಮೂಲವಾಗಿದೆ,
ಒಂದು ಎಕರೆ ಘನಅಡಿ:Acre foot
  • ಐದು ಪ್ರಮುಖ ನದಿಗಳು ಪೂರ್ವ ಭಾಗದಲ್ಲಿ ಸಿಂಧೂ ನದಿ ಸೇರುತ್ತವೆ. ಅವು ಝೀಲಂ, ಚೆನಾಬ್ ರವಿ, ಬಿಯಾಸ್,ಮತ್ತು ಸಟ್ಲೆಜ್; ಪಕ್ಕದಲ್ಲಿ ಈ 3 ಸಣ್ಣ ನದಿಗಳು - ಸೋನ್, ಹ್ಯಾರೋ ಮತ್ತು ಸೋನ್ ಸಹ ಸಿಂಧೂಗೆ ಸೇರುವುದು. ಪಶ್ಚಿಮ ಬದಿಯಲ್ಲಿ ಹಲವಾರು ಸಣ್ಣ ನದಿಗಳು ಸಿಂಧೂಗೆ ಸೇರುವುವು. ಇವುಗಳಲ್ಲಿ ಕಾಬೂಲ್ ದೊಡ್ಡ ನದಿ. ಅದರ ಮುಖ್ಯ ಉಪನದಿಗಳು ಅದೆಂದರೆ ಸ್ವಾತ್, ಪಂಜಕೊರ ಮತ್ತು ಕುನಾರ್. ಅಲ್ಲದೆ ಅನೇಕ ಸಣ್ಣ ತೊರೆಗಳೂ ಬಲಭಾಗದಿಂದ ಸಿಂಧೂವನ್ನು ಸೇರುತ್ತವೆ
  • ಸಿಂಧೂ ನದಿಯ ಒಟ್ಟು ಹಿನ್ನೀರಿನ ಪ್ರದೇಶವು 3,74,700 ಚದರ ಮೈಲಿ. ಇದರಲ್ಲಿ ಸುಮಾರು 56% ಅಂದರೆ 2,04,300 ಚದರ ಮೈಲಿ ಪಾಕಿಸ್ತಾನದಲ್ಲಿದೆ. ಸಿಂಧೂ ನದಿ ಮತ್ತು ಅದರ ಉಪನದಿಗಳು ವಾರ್ಷಿಕವಾಗಿ ಸರಾಸರಿ ಸುಮಾರು 154 ಮಿಲಿಯನ್ ಎಕರೆ ಅಡಿ(ಘನಅಡಿ) ನೀರಿನ್ನು ತರುತ್ತವೆ@. ಇದರಲ್ಲಿ ಈ ಮೂರು ಪಶ್ಚಿಮ ನದಿಗಳಿಂದ 144,91 ಮಿಲಿಯನ್ ಎಕರೆ ಅಡಿ(ಘನಅಡಿ) ಮತ್ತು 9,14 ಎಂ.ಎ.ಎಫ್ ಪೂರ್ವ ನದಿಗಳಿಂದ ಬರುವುವು. ಈ ಹೆಚ್ಚಿನ ನೀರನ್ನು ಎಂದರೆ 104,73 ಎಂ.ಎ.ಎಫ್ ನೀರಾವರಿ ಬಗ್ಗೆ ತಿರುಗಿಸಲಾಗಿದೆ, 39,94 ಎಂ.ಎ.ಎಫ್ ಸಮುದ್ರಕ್ಕೆ ಹರಿಯುತ್ತದೆ ಮತ್ತು ಬಗ್ಗೆ 9,9 ಎಂ.ಎ.ಎಫ್ ಬಾಷ್ಪೀಕರಣ ಸೇರಿದಂತೆ ವ್ಯವಸ್ಥೆಯ ನಷ್ಟದಿಂದ ಹೋಗುವುದು.[೧][೨]
  • @: MAF of water=ಎಂ.ಎ.ಎಫ್.ನೀರು.:154 ಮಿಲಿಯನ್ ಎಕರೆ ಅಡಿ(ಘನಅಡಿ)ನೀರು = 15 ಕೋಟಿ 4 ಲಕ್ಷ ಎಕರೆಯ ಮೇಲೆ 1 ಅಡಿ ಎತ್ತರ ನಿಲ್ಲುವಷ್ಟು ನೀರು.
  • 1 Acre-foot = an acre-foot is 43,560 cubic feet(ಘನಅಡಿ) (1,233 m3)1,233 ಘನಮೀಟರ್.

ಸಿಂಧೂನದಿಯ ಮುಖ್ಯ ಉಪನದಿಗಳ ವಿವರ[ಬದಲಾಯಿಸಿ]

ನದಿಗಳು ಉಗಮ ಉದ್ದ ಸೇರುವ ಸ್ಥಳ
ಸಿಂಧೂ ಮಾನಸ ಸರೋವರದ ಹತ್ತಿರ ಕೈಲಾಸ ಪರ್ವತ 3180 ಕಿ.ಮೀ.;1114 (710?) ಕಿಮೀ ಭಾರತದಲ್ಲಿ ಸಿಂಧ್ ಬಳಿ ಅರಬ್ಬೀ ಸಮುದ್ರದಲ್ಲಿ
ಜೀಲಮ್ ವೆರಿನಾಗ್ 725ಕಿ.ಮೀ. ಝಾಂಗ್‍ನಲ್ಲಿ ಚೆನಾಬ್‍ಗೆ ಸೇರುತ್ತದೆ (ಪಾಕಿಸ್ತಾನ)
ಚೀನಾಬ್ ಬಾರ ಲೇಚ ಪಾಸ್ 960 ಕಿ.ಮೀ. ಹಿಮಾಚಲ ಪ್ರದೇಶದಲ್ಲಿ ಸಿಂಧೂ ಜೊತೆ ಒಂದಾಗಿಸುತ್ತದೆ
ರಾವಿ ರೊಹತಾಂಗ್ ಪಾಸ್ ಹತ್ತಿರ 720 ಕಿ.ಮೀ. ಪಾಕಿಸ್ತಾನದಲ್ಲಿ ಚೆನಾಬ್‍ಗೆ ಸೇರ್ಪಡೆ
ಬಿಯಾಸ್ ರೊಹತಾಂಗ್ ಪಾಸ್ ಹತ್ತಿರ 470 ಕಿ.ಮೀ. ಪಂಜಾಬ್ನಲ್ಲಿ ಸಟ್ಲೆಜ್ ನದಿಯನ್ನು ಸೇರುತ್ತದೆ
ಸೆಟ್ಲೆಜ್ 1450 ಕಿ.ಮೀ. 1050 ಕಿ.ಮೀ. ಭಾರತದಲ್ಲಿ 1500 ಕಿ.ಮೀ -

[೩]

ಉಪನದಿಗಳು[ಬದಲಾಯಿಸಿ]

  • ಬಿಯಾಸ್ ನದಿ
  • ಚೆನಾಬ್ ನದಿ
  • ಗಾರ್ ನದಿ
  • ಗಿಲ್ಗಿಟ್ ನದಿ
  • ಗೋಮಾಲ್ ನದಿ
  • ಹುನ್ಜ ನದಿಯ
  • ಝೀಲಂ ನದಿ
  • ಕಾಬೂಲ್ ನದಿ
  • ಕುನಾರ್ ನದಿ
  • ಕುರ್ರಂ ನದಿ
  • ಪಂಚನದ್ ನದಿ
  • ರಾವಿ ನದಿ
  • ಶೈಯೊಕ್ ನದಿ
  • ಸೋನ್ ನದಿ
  • ಸುರು ನದಿಯ
  • ಸಟ್ಲೆಜ್ ನದಿ
  • ಸ್ವಾತ್ ನದಿ
  • ಜನಸ್ಕಾರ್ ನದಿ
  • ಜೋಅಬ್ ನದಿ

([೪]

ವಿವರ[ಬದಲಾಯಿಸಿ]

ಲೆಹದ ಹತ್ತಿರ ಸಿಂಧೂ ನದಿ
  • ಸಿಂಧೂ ನದಿ 18,000 ಅಡಿ (5,500 ಮೀಟರ್) ಎತ್ತರದಲ್ಲಿ ಲೇಕ್ ಮಾಪಮ್ ಬಳಿ ಚೀನಾದ ನೈಋತ್ಯ ಟಿಬೆಟ್ ನ ಸ್ವಾಯತ್ತ ಪ್ರದೇಶ ದಲ್ಲಿ ಹುಟ್ಟುತ್ತದೆ. ಸಿಂಧೂ ನದಿಯ ಸಾಂಪ್ರದಾಯಿಕ ಮೂಲ ಸೆಂಜ್ ಖಬಾಬ್ ಅಥವಾ "ಲಯನ್ ಮೌತ್", ಒಂದು ದೀರ್ಘಕಾಲಿಕ ಚಿಲುಮೆ, ಪವಿತ್ರ ಮೌಂಟ್ ಕೈಲಾಶ್ ಟಿಬೆಟಿಯನ್ ದೀರ್ಘ ಪರ್ವತ ಸ್ರೇಣಿಗಳ ಕಣಿವೆಯಲ್ಲಿದೆ. ಅಲ್ಲಿ ಸೆಂಜ್ ಖಬಾಬ್ ಒಂದು ಹರಿಯುವ ತೊರೆ. ಹತ್ತಿರದ ಹಲವಾರು ಉಪನದಿಗಳು, ದೊಡ್ಡವಾದರೂ ಭಿನ್ನವಾಗಿ ಎಲ್ಲವೂ ಹಿಮಕರಗುವಿಕೆಯನ್ನು ಅವಲಂಬಿಸಿವೆ. ಆದರೆ ಸೆಂಜ್ ಖಬಾಬ್ ನೀರಿನ ಹೊಳೆ. ಲಡಾಖ್‍ನಲ್ಲಿ ಸಿಂಧೂವಿಗೆ ಸೇರವ ಜನಸ್ಕಾರ್ ನದಿ, ಸ್ವತಃ ಆ ಸಿಂಧೂನದಿಗಿಂತ ಹೆಚ್ಚಿನ ನೀರಿನ ಹರಿವನ್ನು ಹೊಂದಿದೆ.
  • ಸುಮಾರು 200 ಮೈಲಿ (320 ಕಿ.ಮೀ.) ಇದು ಸುಮಾರು 15,000 ಅಡಿ (4,600 ಮೀಟರ್) ವಿವಾದಿತ ಕಾಶ್ಮೀರ ಪ್ರದೇಶದ ಅಗ್ನೇಯ ಗಡಿ ದಾಟಿ ವಾಯುವ್ಯದಿಕ್ಕಿಗೆ ಹರಿಯುತ್ತದೆ. ಲೆಹ್ ದಾಟಿ ಚಿಕ್ಕ ದಾಗಿ ಲಡಾಖ್ (ಜಮ್ಮು ಮತ್ತು ಕಾಶ್ಮೀರ ಭಾರತದ-ಆಡಳಿತವಿರುವ ಪ್ರದೇಶದಲ್ಲಿ), ತನ್ನ ಮೊದಲ ಪ್ರಮುಖ ಉಪನದಿ ಜನಸ್ಕಾರ್ ನದಿಯು ಎಡದಲ್ಲಿ ಸೇರಿಕೊಳ್ಳುತ್ತದೆ. ಕಾಶ್ಮೀರದಲ್ಲಿ ಪಾಕಿಸ್ತಾನದ-ಆಡಳಿತ ಪ್ರದೇಶಗಳಲ್ಲಿ ಅದೇ ದಿಕ್ಕಿನಲ್ಲಿ 150 ಮೈಲುಗಳ (240 ಕಿ.ಮೀ.) ಮುಂದುವರಿದು, ಸಿಂಧೂ ಅದರ ಗಮನಾರ್ಹ ಉಪನದಿ ಶೈಯೊಕ್ ನದಿಯು ಅದರ ಬಲದಂಡೆಯಲ್ಲಿ ಸೇರಿಕೊಳ್ಳುತ್ತದೆ. ಮುಂದೆ ಹರಿದು ಕೊಹಿಸ್ತಾನ್ ಪ್ರದೇಶದಲ್ಲಿ. ದೂರದ ಪಾಕಿಸ್ತಾನದ ಖೈಬರ್ ಪಖ್ತೂನ್ಖ್ವಾದ ಪ್ರಾಂತ್ಯದಲ್ಲಿ ಹರಿಯುವುದು. ಇದು ಕಾರಕೋರಮ್ ಪರ್ವತ ಸ್ರೇಣಿ, ನಂಗಾ ಪರ್ವತ ಶೃಂಗಶ್ರೇಣಿ, ಮತ್ತು ಕೊಹಿಸ್ತಾನ್ ಎತ್ತರದ ಇಳಿಜಾರುಗಳಲ್ಲಿ ಪ್ರಬಲವಾದ (ಅತಿದೊಡ್ಡ) ಹಿಮನದಿಗಳು ಅದಕ್ಕೆ ಬಂದು ಸೇರುತ್ತವೆ, ಶೈಯೊಕ್, ಶಿಗಾರ್, ಗಿಲ್ಗಿಟ್, ಮತ್ತು ಬೇರೆ ವಾಹಿನಿಗಳು ಹಿಮಪ್ರವಾಹದ (ಗ್ಲೇಶಿಯಲ್) ಕರಗುವಿಕೆಯ ನೀರೂ ಸಹ ಸಿಂಧೂ ನದಿಗೆ ಸೇರುತ್ತವೆ
  • ಶಿಗಾರ್ ನದಿ ಬಾಲ್ತಿಸ್ತಾನ್ ದ ಸ್ಕಾರ್ದು ಬಳಿ ಬಲದಂಡೆಯಲ್ಲಿ ಸಿಂಧೂ ನದಿಯನ್ನು ಸೇರುತ್ತದೆ. ದೂರದ ಪ್ರವಾಹದ ಗಿಲ್ಗಿಟ್ ನದಿಯ ಮತ್ತೊಂದು ಬಲ ದಂಡೆಯ ಉಪನದಿ. ಇದು ಭುಂಜಿಯಲ್ಲಿ ಸೇರುವುದು. ನಂತರ ಸ್ವಲ್ಪ ದೂರದಲ್ಲಿ ಆಸ್ಟರ್ ನದಿ, ನಂಗಾ ಪರ್ವತ ಪೂರ್ವ ಇಳಿಜಾರು ಪ್ರವಾಹದ ವೇಗವಾಗಿ ಹರಿದು ಈ ಉಪನದಿ ಎಡ ದಂಡೆಯಲ್ಲಿ ಸೇರಿಕೊಳ್ಳುವುದು. . ಸಿಂಧೂ ನಂತರ ಪಶ್ಚಿಮ ಹರಿದು ದಕ್ಷಿಣ ಕ್ಕೆ ತಿರುಗುವುದು. ದಕ್ಷಿಣದಿಂದ ಪಶ್ಚಿಮಕ್ಕೆ ಹರಿಯುವುದು. ಅಲ್ಲಿ ಖೈಬರ್ ಪಖ್ತೂನ್ಖ್ವಾದ ಪ್ರಾಂತ್ಯವನ್ನು ಪ್ರವೇಶಿಸುವುದು. (15,000 17,000 ಅಡಿ ಆಳ ತಲುಪಲು ನಂಗಾ ಪರ್ವತ ಶಿಖರಪಂಕ್ತಿಯ ಉತ್ತರ ಮತ್ತು ಪಶ್ಚಿಮ ಬದಿಗಳಲ್ಲಿ ಸುಮಾರು 26,660 ಅಡಿ [8.126 ಮೀಟರ್])ಆಳದ ಕಣಿವೆಗಳಲ್ಲಿ ನೈರುತ್ಯ ತಿರುಗುತ್ತದೆ. 4,600 - 5,200 ಮೀಟರ್ ಮತ್ತು 12 ರಿಂದ 16 ಮೈಲುಗಳು (19 - 26 ಕಿಮೀ) ಅಗಲ ಹರಿಯುವುದು. . ಮುಂದೆ 4,000 5,000 ಅಡಿ (1,200 1,500 ಮೀಟರ್) ಎತ್ತರದಿಂದ ನದಿ ವೇಗವಾಗಿ ಇಳಿಜಾರು ಪ್ರದೇಶದಲ್ಲಿ ರಭಸವಾಗಿ ಇಳಿಯುವುದು.
  • ಇದು ತರೆಬಲ ಅಣೆಕಟ್ಟು ಜಲಾಶಯ ತಲುಪುವವರೆಗೆ ಈ ಎತ್ತರದ ಪ್ರದೇಶದಿಂದ, ಸಿಂಧೂ ನದಿ ಖೈಬರ್‍ನ ಪಖ್ತೂನ್ಖ್ವಾದ ಪ್ರಾಂತ್ಯದ ಸ್ವಾತ್ ನದಿ ಮತ್ತು ಹಜಾರ ಪ್ರದೇಶಗಳ ನಡುವೆ ಕ್ಷಿಪ್ರವಾದ ಪರ್ವತ ಓಡುವ ನದಿಯಾಗಿ ಹರಿಯುತ್ತದೆ. ಸಿಂಧೂ ನದಿಯನ್ನು ಕಾಬೂಲ್ ನದಿ ಅಟ್ಟಾಕ್ ನ ಮೇಲಿನ ಭಾಗದಲ್ಲಿ ಸೇರುತ್ತದೆ. ಅಲ್ಲಿ ಸಿಂಧೂ 2,000 ಅಡಿ (600 ಮೀಟರ್) ಎತ್ತರದಲ್ಲಿ ಹರಿದು ಬರುವುದು. ಅಲ್ಲಿ ಮೊದಲ ಬಾರಿಗೆ ರೈಲು ಮತ್ತು ರಸ್ತೆ ಸೇತುವೆಯ ಮೂಲಕ ದಾಟಿ ಬರುವುದು. , ಅಂತಿಮವಾಗಿ, ಇದು ಸಾಲ್ಟ್ ಶ್ರೇಣಿಯ ವ್ಯಾಪ್ತಿಯಲ್ಲಿರುವ ಪಂಜಾಬ್ ನ ಮೈದಾನವನ್ನು ಸೀಳಿ ಕಾಲಾಭಾಗ್ ಬಳಿ ಪ್ರವೇಶಿಸುವುದು.
ಲಡಕ್ ಹತ್ತಿರ ಲೆಹದಲ್ಲಿ ಹರಿಯುವ ಸಿಂಧೂ [Ladakh), India
  • ಸಿಂಧೂ ನದಿ ತನ್ನ ಅತ್ಯಂತ ಗಮನಾರ್ಹವಾದ ಪೂರ್ವ ಪಂಜಾಬ್ ನ ಮೈದಾನದಲ್ಲಿ ಹರಿಯುವ ಉಪನದಿಗಳನ್ನು ಪಡೆಯುತ್ತದೆ. ಈ ಐದು ನದಿಗಳಾದ ಝೀಲಂ, ಚೆನಾಬ್, ರಆವಿ, ಬಿಯಾಸ್, ಮತ್ತು ಸಟ್ಲೆಜ್ ಗಳು ಈ ಪ್ರದೇಶಕ್ಕೆ ಪಂಜಾಬ್ ( "ಐದು ನದಿಗಳು") -ಹೆಸರನ್ನು ನೀಡಿವೆ. ಈ ಪಂಜಾಬ್ ಪ್ರಾಂತ್ಯವು ಭಾರತ ಮತ್ತು ಪಾಕಿಸ್ತಾನಗಳ ನಡುವೆ ಹಂಚಿ ಹೋಗಿದೆ.[೫]

ಜಲಪೂರಣ ಪ್ರದೇಶ[ಬದಲಾಯಿಸಿ]

ಪಂಜಾಬ ಮತ್ತು ಹಿಮಾಚಲ ಪ್ರದೇಶ ರಾಜ್ಯದ ಗಡಿಯ ಭಾಕ್ರಾದಲ್ಲಿ ಸಟ್ಲೇಜ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದೆ.ಅಣೆಕಟ್ಟಿನ ಏಷ್ಯಾದ ಎರಡನೇ ಅತಿ ಎತ್ತರ 225.55 ಮೀ (740 ಅಡಿ) 261m ಮತ್ತು ಉದ್ದ 518.25 ಮೀ ಇದ್ದು "ಗೋವಿಂದ ಸಾಗರ್" ಎಂದು ಕರೆಯಲ್ಪಡುವ ಜಲಾಶಯ,9.34 ಶತಕೋಟಿ ಘನ ಮೀಟರ್ ವರೆಗೆ ನೀರನ್ನು ಸಂಗ್ರಹಿಸುತ್ತದೆ.(Bhakra Dam Aug 15 2008)

Drainage area (sq. km)

ರಾಜ್ಯ ಜಲಪೂರಣ ಪ್ರದೇಶ (ಚದರ. ಕಿಮೀ)
ಜಮ್ಮು ಮತ್ತು ಕಾಶ್ಮೀರ 193,762
ಹಿಮಾಚಲ ಪ್ರದೇಶ 51,356
ಪಂಜಾಬ್ 50,304
ರಾಜಸ್ಥಾನ 15,814
ಹರಿಯಾಣ 9,939
ಚಂಡೀಘಢ 114
ಒಟ್ಟು 321,289

[೬]

ಸಿಂಧೂ ಜಲಾನಯನ ಪ್ರದೇಶದ ಮುಖ್ಯ ಲಕ್ಷಣಗಳು (ಗಡಿ ವರೆಗೆ)[ಬದಲಾಯಿಸಿ]

ವಿವರ ಅಂಕೆ-ಅಂಶ
ಸಿಂಧೂ ನದಿಯ ಉದ್ದ ( (3,200 ಕಿಮೀ) 1114 (ಭಾರತದಲ್ಲಿ) (ಕಿಮಿ)
ಸಂಗ್ರಹಣಾ ಪ್ರದೇಶ 321289(Sq.km.)
ಸರಾಸರಿ ಜಲ ಸಂಪನ್ಮೂಲ ಸಂಭಾವ್ಯ (ಎಂಸಿಎಂ) 73310 (MCM)
ಉಪಯೋಗಿಸಿಕೊಳ್ಳಬಲ್ಲ ಮೇಲ್ಮೈ ಜಲ ಸಂಪನ್ಮೂಲ (ಎಂಸಿಎಂ) 46000(MCM)
ಪೂರ್ಣಗೊಂಡ ಯೋಜನೆಗಳು ಉಪಯುಕ್ತ ಶೇಖರಣಾ ಸಾಮರ್ಥ್ಯ (ಎಂಸಿಎಂ) 16222.0(MCM)
ನಿರ್ಮಾಣ ಅಡಿಯಲ್ಲಿ ಯೋಜನೆಗಳು ಉಪಯುಕ್ತ ಶೇಖರಣಾ ಸಾಮರ್ಥ್ಯ (ಎಂಸಿಎಂ) 100.00(MCM)
ಯೋಜನೆಗಳು ಒಟ್ಟು ಉಪಯುಕ್ತ ಶೇಖರಣಾ ಸಾಮರ್ಥ್ಯ (ಎಂಸಿಎಂ) 16322.00(MCM)
ಜಲವಿಜ್ಞಾನದ ವೀಕ್ಷಣೆ ಕೇಂದ್ರಗಳು CWC ಯವು, ಸಂಖ್ಯೆ 26
ಪ್ರವಾಹ ಮುನ್ಸೂಚನಾ ಕೇಂದ್ರಗಳು ಸಂಖ್ಯೆ 0
MCM = ಮಿಲಿಯನ್ ಕುಬಿಕ್ ಮೀಟರ್ -ದಶಲಕ್ಷ ಘನಮೀಟರು.

[೭]

ಹೆಸರು[ಬದಲಾಯಿಸಿ]

  • ಈ ನದಿಯನ್ನು ಸಂಸ್ಕೃತದಲ್ಲಿ ಸಿಂಧು ಎಂದು ಕರೆಯಲಾಗುತ್ತಿತ್ತು, ಅದನ್ನು ಪ್ರಾಚೀನ ಇರಾನಿಯನ್ನರು 'ಹಿಂದೂ' ಎಂದೂ, ಅಸಿರಿಯಾದ ( 7 ನೇ ಶತಮಾನದ ಆರಂಭದ ಮಾಹಿತಿ) ಸಿಂದ ಎಂದು, ಅಬ್-ಇ-ಸಿಂಧ್ ಎಂದೂ, ಪರ್ಷಿಯನ್, ಗ್ರೀಕರು ಗೆ ಇಂಡಸ್ ಎಂದೂ, ಸಿಂಧೂ, ಪಸ್ತೂನರು ಅಲ್ ಸಿಂಧ್ ಎಂದೂ, ಅರಬ್ಬರು ಅ ಸಿಂಧೂ ಎಂದು ಚೀನೀ ಯರು ಸಿಂಟೊವ್ , ರೋಮನ್ನರು ಇಂಡಸ್ ಎಂದೂಕರಯುತ್ತಿದ್ದರು. ಸಿಂಧು ಅರ್ಥ "ನದಿ, ಹಳ್ಳ " ಆದರೆ ಅದು ನಿರ್ದಿಷ್ಟವಾಗಿ ಸಿಂಧೂ ನದಿಯನ್ನೇ ಸೂಚಿಸುತ್ತದೆ.
  • ಸಂಸ್ಕೃತ ಪದ "ಸಿಂಧೂ" ಹಳೆಯ ಪರ್ಷಿಯನ್ ಪದ "ಹಿಂದೂ", ಎರವಲು ಪದದ ಪ್ರತಿಯಾಗಿ ಪ್ರಾಚೀನ ಗ್ರೀಕ್ ಪದ ಇಂಡೊಸ್ ರೋಮನೀಕರಣಗೊಂಡ ರೂಪ. ಪರ್ಶಿಯನ್ನರ ಹಿಂದೂ ಪದ ಆ ನದಿಯ ಆಚೆ ಇರುವವರೆಲ್ಲಾ ಹಿಂದೂಗಳೆಂದು ಕರೆಯಲು ಕಾರಣವಾಯಿತು. ಗ್ರೀಕರು ಆ ನದಿಗೆ ಇಂಡಸ್ ಎಂದುದು ಆ ನದಿಯ ಆಚೆ ಇರುವವರನ್ನು ಇಂಡಿಯನರು ಎಂದರು. ಹೀಗೆ ಭಾರತಕ್ಕೆ ಹಿಂದೂ ದೇಶ ಮತ್ತು ಇಂಡಿಯಾ ದೇಶ ಎಂದು ಹೆಸರು ಬಂದಿತು.[೮]

ಇತಿಹಾಸ[ಬದಲಾಯಿಸಿ]

  • ಪ್ರಾಚೀನ ಶಿಲಾಯುಗದ ನಿವೇಶನಗಳು ,ಆ ಸೋಅನ ಸಂಸ್ಕೃತಿಯ ಕಲ್ಲಿನ ಉಪಕರಣಗಳು, ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್ ಬಳಿ ಪೊತೋಹಾರ್ ನಲ್ಲಿ ಪತ್ತೆಯಾಗಿವೆ. ಇಸ್ಲಾಮಾಬಾದ್ ಹತ್ತಿರ ಪುರಾತನ ಗಾಂಧಾರದ ಸಮೀಪದಲ್ಲಿ 15,000 ವರ್ಷಗಳ ಹಿಂದೆ ಗುಹೆಯ ನಿವಾಸಿಗಳು ಇದ್ದ ಸಾಕ್ಷಿ ಮರ್ದನ್ ನಲ್ಲಿ ಕಂಡುಬಂದಿದೆ..
ಸಿಂಧೂತಟದ ನಾಗರೀಕತೆIVC Map
  • ಸಿಂಧೂ ಕಣಿವೆ ನಾಗರೀಕತೆಯ, ದೊಡ್ಡ ಪ್ರಮುಖ ನಗರಗಳಾದ ಹರಪ್ಪ ಮತ್ತು ಮೊಹೆಂಜೊ-ದಾರೋ, ಸುಮಾರು 3300 ಕ್ರಿ.ಪೂ. ಕಾಲದ ಮತ್ತು ಪ್ರಾಚೀನ ಪ್ರಪಂಚದ ದೊಡ್ಡ ಮಾನವ ನಿವಾಸಗಳನ್ನು ಪ್ರತಿನಿಧಿಸುತ್ತವೆ. ಸಿಂಧೂ ಕಣಿವೆ ನಾಗರೀಕತೆಯು ಪಾಕಿಸ್ತಾನ್ ದ ಮತ್ತು ವಾಯವ್ಯ ಭಾರತದಾದ್ಯಂತ ಝೀಲಂ ನದಿಯ ಪೂರ್ವ ರೋಪರ್ ಸಟ್ಲೆಜ್ ನ ಮೇಲಿನ ಪ್ರದೇಶದ ವರೆಗೆ, ವ್ಯಾಪಿಸಿತ್ತು. ಕರಾವಳಿ ನೆಲೆಗಳು ಸುತಕಾಗನ್ ದೋರ್ ನಿಂದ, ಪಾಕಿಸ್ತಾನ ಗಡಿಗಳಲ್ಲಿ ಇರಾನ್ ಆಧುನಿಕ ಭಾರತದ ಗುಜರಾತ್ ಕಚ್ ವರೆಗೆ, ವಿಸ್ತರಿಸಿತ್ತು. ಅನೇಕ ವಿದ್ವಾಂಸರು ಪ್ರಾಚೀನ ಹಿಂದೂ-ಆರ್ಯನ್ನರ ಗಾಂಧಾರ ಸಮಾಧಿ ಸಂಸ್ಕೃತಿಯ ನೆಲೆಗಳು 1700 ಕ್ರಿ.ಪೂ. 600 ಕ್ರಿ.ಪೂ. ಅಭಿವೃದ್ಧಿಹೊಂದಿತ್ತೆಂದೂ, ಯಾವಾಗ ಗಾಂಧಾರ ಏಳಿಗೆ ಹೊಂದಿತೋ, ಮೊಹೆಂಜೊ-ದಾರೋ ಮತ್ತು ಹರಪ್ಪ ವಸತಿಗಳನ್ನು ಅಷ್ಟು ಸಮಯಕ್ಕಾಗಲೇ ಕೈಬಿಡಲಾಗಿತ್ತೆಂದು ನಂಬುತ್ತಾರೆ.
  • ಸಿಂಧೂ ನದಿಯ ಕೆಳಗಿನ ಜಲಾನಯನ ಪ್ರದೇಶ ಇರಾನಿನ ಪ್ರಸ್ಥಭೂಮಿ ಮತ್ತು ಭಾರತೀಯ ಉಪಖಂಡದ ನಡುವೆ ನೈಸರ್ಗಿಕ ಗಡಿರೇಖೆಯನ್ನು ಉಂಟು ಮಾಡುತ್ತದೆ. ಈ ಪ್ರದೇಶದವು ಪಾಕಿಸ್ತಾನದ ಪ್ರಾಂತ್ಯಗಳು ಬಲೂಚಿಸ್ಥಾನ, ಖೈಬರ್ ಪಖ್ತೂನ್ ಖ್ವಾ, ಪಂಜಾಬ್ ಮತ್ತು ಸಿಂಧ್ ಪ್ರಾಂತ್ಯ ಮತ್ತು ಆಫ್ಘಾನಿಸ್ಥಾನ ದೇಶಗಳ ಮತ್ತು ಭಾರತದ ಕೆಲವು ಭಾಗಗಳನ್ನು ಒಳಗೊಂಡಿದೆ. ಅಲೆಕ್ಸಾಂಡರ್ ಸೈನಿಕರು ಈ ಭಾಗವನ್ನು ದಾಟಿ ಆಕ್ರಮಣ ಮಾಡಿದ್ದರು. ಆದರೆ ಅದನ್ನು ವಶಪಡಿಸಿಕೊಂಡ ನಂತರ ಮೆಸಿಡೋನಿಯನ್ನರು ಪಶ್ಚಿಮ ಭಾಗವನ್ನು ಹೆಲ್ಲೆನಿಕ್ ಸಾಮ್ರಾಜ್ಯಕ್ಕೆ ಸೇರಿಸಿಕೊಂಡರು. ಅವರು ಅಲೆಕ್ಸಾಂಡರ್ ಏಷ್ಯನ್ ಅಭಿಯಾನವನ್ನು ಮುಗಿಸಿ ನದಿಯ ದಕ್ಷಿಣ ಮಾರ್ಗ ಹಿಡಿದು, ಹಿಂತಿರುಗಿದರು. ಸಿಂಧೂ ಬಯಲು ಪರ್ಷಿಯನ್ ಸಾಮ್ರಾಜ್ಯದ ನಂತರ ಕುಶನ್ ಸಾಮ್ರಾಜ್ಯದ ಪ್ರಭಾವಕ್ಕೆ ಒಳಗಾಯಿತು. ನಂತರ ಹಲವಾರು ಶತಮಾನಗಳವರೆಗೆ ಮುಹಮ್ಮದ್ ಬಿನ್ ಕಾಸಿಮ್, ಘಜ್ನಿ ಮಹಮೂದ್, ಮೊಹಮ್ಮದ್ ಘೋರಿ, ತೈಮರಲೇನ (ತೈಮೂರ ಲಂಗ್?) ಮತ್ತು ಬಾಬರ ಮೊದಲಾದ ಮುಸ್ಲಿಮರು ಇವರ ಸೇನೆಗಳು ಪಂಜಾಬ್ ಮತ್ತು ದೂರದ ದಕ್ಷಿಣ ಮತ್ತು ಪೂರ್ವ ಒಳಪ್ರದೇಶಗಳಿಗೆ ನದಿ ದಾಟಿ ಆಕ್ರಮಣ ಮಾಡಿದರು.[೯]

ಸಿಂಧೂ ನದಿಯ ಹರಿವು[ಬದಲಾಯಿಸಿ]

ಸಿಂಧೂ ನದಿ
  • ಸಿಂಧೂ ನದಿ ಎರಡನೇ ಅತಿದೊಡ್ಡ ಕೆಸರು ಕಾಯಗಳನ್ನು, ಅಂದರೆ -ಪ್ರತಿವರ್ಷ ಪರ್ವತಗಳ ಕೊರೆತದ ವಸ್ತುಗಳನ್ನು, ಸುಮಾರು 5 ದಶಲಕ್ಷ ಘನ ಕಿಲೋಮೀಟರ್ಗಳಷ್ಟು ಮರಳು ಮಣ್ಣು ಕಲ್ಲು ಇತ್ಯಾದಿ ವಸ್ತುಗಳನ್ನುನ್ನು ಪರ್ವತಗಳಿಂದ ತನ್ನ ಜಲಾವೃತ ಪ್ರದೇಶಕ್ಕೆ ತುಂಬುತ್ತದೆ. ಅವು ಹಿಮಾಲಯದಿಂದ ಹೆಚ್ಚಾಗಿ ಪಂಜಾಬ್’ನ (ಝೀಲಂ, ರವಿ, ಚೆನಾಬ್, ಬಿಯಾಸ್ ಹಾಗು ಸಟ್ಲೆಜ್) ದೊಡ್ಡ ನದಿಗಳು ಈ ವಸ್ತುಗಳ, ದೊಡ್ಡ ಕೊಡುಗೆಗೆ ಮುಖ್ಯ ಮೂಲ.
  • ಐದು ಮಿಲಿಯನ್ ವರ್ಷಗಳ ಹಿಂದೆ ಸಿಂಧೂ ಈ ಪಂಜಾಬ್ ನದಿಗಳಿಗೆ ಸಂಪರ್ಕ ಹೊಂದಿರಲಿಲ್ಲ, ಅರಬ್ಬೀ ಸಮುದ್ರದ ಬದಲಿಗೆ ಪೂರ್ವಕ್ಕೆ ಹರಿದು ಗಂಗಾಕ್ಕೆ ಸೇರುತ್ತಿತ್ತು. ಆದರೆ 45 ಮಿಲಿಯನ್ ವರ್ಷಗಳ ಹಿಂದೆ, ಪಶ್ಚಿಮ ಟಿಬೆಟ್ ಮರಳು ಮತ್ತು ಹೂಳು ಅರಬ್ಬೀ ಸಮುದ್ರ ಸೇರುತ್ತಿತ್ತು. ಆ ಸಮಯದಲ್ಲಿ ಪುರಾತನ ಸಿಂಧೂ ನದಿಯ ಹಿಂದಿನ ಹರಿವಿನ ಅಸ್ತಿತ್ವವನ್ನು ಸೂಚಿಸುವ ಕುರುಹು ಕಾಣುವುದು. ಈ ಮೂಲ-ಸಿಂಧು ನದಿಯ ಮುಖಜ ಭೂಮಿ ತರುವಾಯ ಅಫಘಾನ್-ಪಾಕಿಸ್ತಾನ ಗಡಿಯಲ್ಲಿ ಕತವಾಜ ಮುಖಜ ಭೂಮಿಯಲ್ಲಿ (ಜಲಾನಯನ ಪ್ರದೇಶ) ಕಂಡುಬಂದಿದೆ.
  • ನವೆಂಬರ್ 2011 ರಲ್ಲಿ, ಉಪಗ್ರಹ ಚಿತ್ರಗಳು ಸಿಂಧು ನದಿಯು ಭಾರತವನ್ನು ವಿಶಾಲ ಕಚ್ ನ ರಣ್ ನಲ್ಲಿ, ಮತ್ತು ಕಿರಿಯ ಕಛ್ ನ ರಣ್ ನಲ್ಲಿ ಮತ್ತು ಅಹಮದಾಬಾದ್ ಬಳಿ ಇರುವ ನಾಲ್ ಸರೋವರಕ್ಕೆ , ಮರು ಪ್ರವೇಶಿಸಿತ್ತು ಎಂದು ತೋರಿಸಿತು. ಭಾರಿ ಮಳೆ ಮಂಚಾರ್, ಹೇಮಲ್ ಮತ್ತು ಕಾಲರಿ ಸರೋವರಗಳನ್ನು (ಎಲ್ಲಾ ಆಧುನಿಕ ಪಾಕಿಸ್ತಾನದಲ್ಲಿದೆ) ಮುಳುಗಿಸಿದೆ. ಈ ಘಟನೆ ಸಿಂಧು ನದಿಯ ದಿಕ್ಕನ್ನು ಬದಲಾಯಿಸಿದ ಎರಡು ಶತಮಾನಗಳ ನಂತರ ಮತ್ತು ಜೊತೆಗೆ 1819 ಕಚ್ ನ ರಣ್ ಭೂಕಂಪದಿಂದ ನದಿಯು ಪಶ್ಚಿಮಾಭಿಮುಖವಾಗಿ ಹರಿವು ಪಡೆದ ನಂತರ ಸಂಭವಿಸಿದೆ.[೧೦]

ನದೀ ಹರಿವು[ಬದಲಾಯಿಸಿ]

  • ಸಿಂಧೂ ನದಿ ವ್ಯವಸ್ಥೆಯ ಪ್ರಮುಖ ನದಿಗಳು ಹಿಮದಿಂದ ಪೂರಣವಾಗುತ್ತದೆ. ಅವರ ಹರಿವು ವರ್ಷದ ವಿವಿಧ ಸಮಯಗಳಲ್ಲಿ ಬದಲಾಗುತ್ತದೆ: ನದೀ ಹರಿವು ಚಳಿಗಾಲದ ತಿಂಗಳುಗಳಲ್ಲಿ (ಫೆಬ್ರವರಿ ಡಿಸೆಂಬರ್) ಅವಧಿಯಲ್ಲಿ ಕನಿಷ್ಠ ಆಗಿರುತ್ತದೆ; ವಸಂತಕಾಲದಲ್ಲಿ ಮತ್ತು ಬೇಸಿಗೆಯ ಆರಂಭದಲ್ಲಿ (ಜೂನ್ ಮಾರ್ಚ್) ನೀರಿನ ಹರಿವಿನಲ್ಲಿ ಏರಿಕೆ ಇರುತ್ತದೆ; ಪ್ರವಾಹಗಳು ಮಳೆಗಾಲದಲ್ಲಿ (ಜುಲೈನಿಂದ ಸೆಪ್ಟೆಂಬರ್) ಸಂಭವಿಸಬಹುದು. ಕೆಲವೊಮ್ಮೆ ವಿನಾಶಕಾರಿ ತತ್ಕ್ಷಣದ ಪ್ರವಾಹ ಇರುತ್ತದೆ. ಸಿಂಧೂ ಹಾಗೂ ಅದರ ಉಪನದಿಗಳು ತಮ್ಮ ಸಂಗ್ರಹಾಗಾರಗಳ ಬೆಟ್ಟದ ಮೇಲಿನ ಭಾಗಗಳಿಂದ ತಮ್ಮ ನೀರನ್ನು ಪಡೆಯುತ್ತವೆ. ಆದ್ದರಿಂದ, ಅವುಗಳ ಭರಪೂರ ಹರಿವು ತಪ್ಪಲಿನಲ್ಲಿ ಗರಿಷ್ಠ; ಬಯಲು ಪ್ರದೇಶದಲ್ಲಿ ಜಲಪೂರಣ ಮತ್ತು ಬಾಷ್ಪೀಕರಣ ಮತ್ತು ಸೋರುವಿಕೆಯಿಂದ ಗಣನೀಯವಾಗಿ ಮೇಲ್ಮೈ ಹರಿವಿನ ಪ್ರಮಾಣವು ಕಡಿಮೆ. ನೀರಿನ ಮುಂಗಾರು ತಿಂಗಳ ನಂತರದ ಸೆಪ್ಟಂಬರ್ ನವೆಂಬರ್`ಅವಧಿಯಲ್ಲಿ ಮಳೆ ಮೂಲಕ ಹರಿವು ಹೆಚ್ಚಾಗುತ್ತದೆ. ಸಿಂಧೂವಿನ ನೀರಿನ ಮಟ್ಟವು ಡಿಸೆಂಬರ್ ಮಧ್ಯ ದಿಂದ ಫೆಬ್ರವರಿ ಮಧ್ಯದವರೆಗೆ ಹರಿವು ಕಡಿಮೆ ಆಗುವುದು. ಈ ನಂತರ ನದಿ, ಮಾರ್ಚ್ ಕೊನೆಯಲ್ಲಿ ಪ್ರವಾಹ ನಿಧಾನವಾಗಿ ಜಾಸ್ತಿಯಾಗುತ್ತದೆ. ತದನಂತರ ನೀರಿನ ಮಟ್ಟವು ಸಾಮಾನ್ಯವಾಗಿ ಮಧ್ಯ ಜುಲೈನಲ್ಲಿ ಮತ್ತು ಆಗಸ್ಟ್`ನಲ್ಲಿ ನೀರಿನ ಮಟ್ಟ ಏರಲು ಆರಂಭವಾಗುತ್ತದೆ. ನದಿ ನಂತರ ಕ್ರಮೇಣ ಅಕ್ಟೋಬರ್ ಆರಂಭದವರೆಗೆ ವೇಗವಾಗಿ ನೀರಿನ ಮಟ್ಟ ಕಡಿಮೆಯಾಗುತ್ತದೆ . ಝೀಲಂ, ಚೆನಾಬ್ ರವಿ, ಬಿಯಾಸ್, ಸಟ್ಲಜ್ ಸಿಂಧೂ ನದಿಯ ಇತರ ಪ್ರಮುಖ ಉಪನದಿಗಳು.

ಜೀವ ಜಾಲ[ಬದಲಾಯಿಸಿ]

  • ಅಲೆಗ್ಜಾಂಡರನು ಬಂದ ಕಾಲದಲ್ಲಿ ಸಿಂಧೂನದಿಯ ಬಯಲಲ್ಲಿ ಕಾಡು ಇತ್ತು ಎಂದಿದ್ದಾನೆ. ಬಾಬರ ಅವನ 'ಬಾಬರ್ ನಾಮಾ'ದಲ್ಲಿಯೂ ಸಹ ಅಲ್ಲಿ ಕಾಡು ಮತ್ತು ಘೇಂಡಾಮೃಗಗಳಿದ್ದವು ಎಂದಿದ್ದಾನೆ. ಆದರೆ ಈಗ ಏನೂ ಉಳಿದಿಲ್ಲ. ನೀರಾವರಿಯಿಂದ ಮಾತ್ರಾ ಕೃಷಿ ಕಾರ್ಯ ನಡೆಯುವುದು. ಕೃಷಿಗಾಗಿ ಎಲ್ಲಾ ಕಾಡೂ ನಾಶವಾಗಿದೆ. ಅಲ್ಲಿ ಮಳೆಯೂ ಬಹಳ ಕಡಿಮೆ. ಆದರೆ ನದಿಯಲ್ಲಿ ಮಾತ್ರಾ ವಿಶೇಷ ಜೀವ ಜಾಲವಿದೆ. ಸಿಂಧೂ ನದಿ ಮತ್ತು ಅದರ ಜಲಾನಯನ ಶ್ರೀಮಂತ ಜೀವವೈವಿಧ್ಯ ಹೊಂದಿದೆ. ಇಂದು ಸಿಂಧೂ ನದಿಯಲ್ಲಿ 25 ಉಭಯಚರಗಳ ಜಾತಿಗಳು ಮತ್ತು 147 ವಿವಿಧ ಜಾತಿಗಳ ನೆಲೆಯಾಗಿದೆ, ಅದರಲ್ಲಿ 22 ಜಾತಿಗಳು ಸಿಂಧೂ ನದಿಯಲ್ಲಿ ಮಾತ್ರ ಕಂಡುಬರುವುವು.
  • 'ಕುರುಡು ಸಿಂಧೂ ನದಿಯ ಡಾಲ್ಫಿನ್' (Platanista ಚಿಕ್ಕ ಇಂಡಿಕಸ್) ಡಾಲ್ಫಿನ್ ಒಂದು ಉಪ ಜಾತಿಯು ಕೇವಲ ಸಿಂಧೂ ನದಿಯಲ್ಲಿ ಕಂಡುಬರುತ್ತದೆ. ಈ ಹಿಂದೆ ಸಿಂಧೂ ನದಿಯ ಉಪನದಿಗಳಲ್ಲಿ ಇತ್ತು. ವಿಶ್ವ ವನ್ಯಜೀವ ನಿಧಿ ಪ್ರಕಾರ ಕೇವಲ 1,000 ಡಾಲ್ಫಿನ್ ಇದ್ದು, ಇದು ಇನ್ನೂ ಅಸ್ತಿತ್ವದಲ್ಲಿರುವ ಅತ್ಯಂತ ಬೆದರಿಕೆಗೆ ಒಳಗಾದ ಸಿಟಾಸಿಯಾನ್‍ (ದೊಡ್ಡಜಲಚರ)ಗಳಲ್ಲಿ ಒಂದಾಗಿದೆ.
  • ಎಲ್ಲಾ ಕೆಳ ಸಿಂಧ್ ಹಾಡಿಯಲ್ಲಿ -ನದಿಯಲ್ಲಿ ಮೀನುಗಳು ಅವುಗಳ ಸಂಖ್ಯೆಯು ಹೆಚ್ಚು. ಸಕ್ಕೂರು, ಥತ್ತಾ ಮತ್ತು ಕೊತ್ರಿಗಳಲ್ಲಿ ಪ್ರಮುಖ ಮೀನುಗಾರಿಕೆ ಕೇಂದ್ರಗಳು ಇವೆ. ಕರಾಚಿಯ, ದೊಡ್ಡ ಡೆಲ್ಟಾ ವಿಶ್ವದ ಸಂರಕ್ಷಣಕಾರರಿಂದ ಪ್ರಮುಖ ಪರಿಸರ ಪ್ರದೇಶಗಳಲ್ಲಿ ಒಂದಾಗಿದೆ ಎಂದು ಗುರುತಿಸಲ್ಪಟ್ಟಿದೆ.[೧೧]

ಸಿಂಧೂನದಿ ಮತ್ತು ಆರ್ಥಿಕ ಸಂಪತ್ತು[ಬದಲಾಯಿಸಿ]

  • ಭಾರತದಲ್ಲಿ ಹಲವಾರು ಅಣೆಕಟ್ಟುಗಳು, ಬ್ಯಾರೇಜುಗಳು ಮತ್ತು ಲಿಂಕ್ ಕಾಲುವೆಗಳನ್ನು ಪಂಜಾಬ್ ಮತ್ತು ನೆರೆಯ ರಾಜ್ಯಗಳಿಗೆ ಪೂರ್ವ-ಸಿಂಧೂ ಉಪನದಿಗಳ ನೀರನ್ನು ವಿತರಿಸಲು ನಿರ್ಮಿಸಲಾಗಿದೆ. ಬಿಯಾಸ್ ಮತ್ತು ಸಟ್ಲೇಜ್ ಒಂದುಗೂಡುವಲ್ಲಿರುವ ಹರಕೆ ಬ್ಯಾರೇಜು (ಆಣೆಕಟ್ಟು) ಇಂದಿರಾ ಗಾಂಧಿ ಕಾಲುವೆಗೆ ನೀರು ಹರಿಸುವುದು, ಅದು 400 ಮೈಲುಗಳ (640 ಕಿಮೀ) ದೂರದಲ್ಲಿರುವ ನೈಋತ್ಯ ಪಶ್ಚಿಮ ರಾಜಸ್ಥಾನದ ಮರುಭೂಮಿಯ ಸುಮಾರು 1.5 ದಶಲಕ್ಷ ಎಕರೆಗಳಷ್ಟು ಪ್ರದೇಶಕ್ಕೆ (607,000 ಹೆಕ್ಟೇರ್) ನೀರಾವರಿ ಒದಗಿಸುತ್ತದೆ. ಈ ಮುಖ್ಯ ಕಾಲುವೆ 1987 ರಲ್ಲಿ ಪೂರ್ಣಗೊಂಡಿತು.
  • ಪಾಕಿಸ್ತಾನದಲ್ಲಿಸಿಂಧೂ ನದಿ ಪಂಜಾಬ್ ಮತ್ತು ಸಿಂಧ್ ಬಯಲು ಪ್ರದೇಶಗಳಿಗೆ ಪ್ರಮುಖ ‘ಜಲ ಸಂಪನ್ಮೂಲ’ ಪೂರೈಕೆದಾರ. ಇದು ಪಾಕೀಸ್ತಾನದಲ್ಲಿ ಕೃಷಿ ಮತ್ತು ಆಹಾರ ಉತ್ಪಾದನೆಯ ಬೆನ್ನೆಲುಬು ಎನ್ನಬಹುದು. ನದಿ ಸಿಂಧೂ ಕಣಿವೆಯಲ್ಲಿ ವಿಶೇಷವಾಗಿ ಜೀವನಾಧಾರ; ಏಕೆಂದರೆ ಅಲ್ಲಿ ಕೆಳ ಬಯಲಿನಲ್ಲಿ ಮಳೆ ಕಡಿಮೆ - ಅತ್ಯಲ್ಪ. ಸಿಂಧೂ ಕಣಿವೆ ನಾಗರೀಕತೆಯ ಜನರು ನೀರಾವರಿ ಕಾಲುವೆಗಳನ್ನು ಮೊದಲು ಮಾಡಿದರು. ನಂತರ ಕುಶಾನ್ ಸಾಮ್ರಾಜ್ಯದ ಮತ್ತು ಮೊಘಲ್ ಸಾಮ್ರಾಜ್ಯದ ಎಂಜಿನಿಯರ್ಗಳು ಕಾಲುವೆಗಳನ್ನು ನಿರ್ಮಿಸಿದರು.. ಆಧುನಿಕ ನೀರಾವರಿಯು 1850 ರಲ್ಲಿ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯಿಂದ ರಚಿಯಿಸಲಾಯಿತು. ಹಳೆಯ ಕಾಲುವೆಗಳ ಮರುಸ್ಥಾಪನೆ ಜೊತೆ ಜೊತೆಗೆ, ಆಧುನಿಕ ಕಾಲುವೆಗಳ ನಿರ್ಮಾಣ ಮಾಡಲಾಯಿತು.. ಬ್ರಿಟಿಷ್ ರು ವಿಶ್ವದ ಅತ್ಯಂತ ಸಂಕೀರ್ಣವಾದ ನೀರಾವರಿ ಜಾಲಗಳ ನಿರ್ಮಾಣದ ಮೇಲ್ವಿಚಾರಣೆಯನ್ನು ನೋಡಿಕೊಂಡರು. ಸಕ್ಕೂರು, ಜಕೊಬಾಬಾದ್ ಲರ್ಖಾನಾ ಮತ್ತು ಕಾಲತ್ ನೀರಾವರಿ - ಗುಡ್ಡು ಅಣೆಕಟ್ಟೆ (ನೀರಾವರಿ ಕಾಲುವೆ ವ್ಯವಸೆ)್ಥ 1.350 ಮೀ (4,430 ಅಡಿ) ಉದ್ದವಾಗಿದೆ. ಸಕ್ಕೂರು ಆಣೆಕಟ್ಟು 20,000 ಚದರ ಕಿ.ಮಿ.(7,700 ಚ ಮೈಲಿ) ಗೂ ಹೆಚ್ಚು ನೀರಾವರಿಯ ಕಾರ್ಯನಿರ್ವಹಿಸುತ್ತದೆ.
ಪಾಕಿಸ್ತಾನ ರಾವಲ್ಪಿಂಡಿಯ ಸಮೀಪ ತರಬೆಲಾ ಅಣೆಕಟ್ಟು 2010 ರ ಅತಿವೃಷ್ಟಿ ಸಮಯದಲ್ಲಿ
  • ಪಾಕಿಸ್ತಾನ ಅಸ್ತಿತ್ವಕ್ಕೆ ಬಂದ ನಂತರ, 1960 ರಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವೆ ನೀರಿನ ನಿಯಂತ್ರಣ ಒಪ್ಪಂದಕ್ಕೆ ಸಹಿ ಹಾಕಿದವು. ಪಾಕಿಸ್ತಾನ ಸಿಂಧೂ ನದಿ ಮತ್ತು ಅದರ ಎರಡು ಉಪನದಿಗಳು ಝೀಲಂ ಮತ್ತು ಜೆನಾಬ್, ಈ ನದಿಗಳ ಭಾರತದ ಮೇಲುಭಾಗದ ನದಿಯ ಪೂರ್ಣ ನೀರನ್ನು ಪಡೆಯುತ್ತದೆ. ಒಪ್ಪಂದದ ಪ್ರಕಾರ ಪಾಕಿಸ್ತಾನದ ಪಶ್ಚಿಮದಲ್ಲಿ ಹರಿಯುವ ಸಿಂಧೂ, ಝೇಲಂ ಮತ್ತು ಚಿನಾಬ್‌ಗಳ ಮೇಲೆ ಆ ದೇಶಕ್ಕೆ ಹೆಚ್ಚಿನ ಹಕ್ಕು ನೀಡಲಾಗಿದೆ. ಆದರೆ ಈ ನದಿಗಳ ಮೂಲ ಇರುವುದು ಭಾರತ ದೇಶದಲ್ಲಿ. ಹಾಗಾಗಿ ಇವುಗಳ ನೀರಿನ ಶೇ 20ರಷ್ಟನ್ನು ಭಾರತ ಬಳಸಬಹುದು. ಈ ನದಿಗಳಿಂದ 13.32 ಲಕ್ಷ ಎಕರೆಗೆ ನೀರಾವರಿ, 18,600 ಮೆಗಾವಾಟ್‌ ವಿದ್ಯುತ್‌ ಉತ್ಪಾದಿಸಲು ಭಾರತಕ್ಕೆ ಅವಕಾಶವಿದೆ. ಆದರೆ ಈಗ ಭಾರತ 8 ಲಕ್ಷ ಎಕರೆ ಮಾತ್ರ ನೀರಾವರಿಗೆ ಒಳಪಡಿಸಿದ್ದು 3,034 ಮೆಗಾವಾಟ್‌ ವಿದ್ಯುತ್‌ ಮಾತ್ರಾ ಉತ್ಪಾದನೆ ಮಾಡುತ್ತದೆ.

ಆಣೆಕಟ್ಟೆಗಳು ಮತ್ತು ನೀರಾವರಿ[ಬದಲಾಯಿಸಿ]

  • ಪಾಕಿಸ್ತಾನ ಸಿಂಧೂ ಜಲಾನಯನ ಪ್ರದೇಶ ಯೋಜನೆಗೆ ಪ್ರಾಥಮಿಕವಾಗಿ ಮುಖ್ಯ ಎರಡು ಅಣೆಕಟ್ಟುಗಳ ನಿರ್ಮಾಣ ಮಾಡಿತು. ಝೀಲಂ ನದಿಗೆ ಮಂಗಳಾ ಅಣೆಕಟ್ಟು ಮತ್ತು ಸಿಂಧೂ ನದಿಗೆ ತರಬೇಲಾ ಅಣೆಕಟ್ಟು ನಿರ್ಮಿಸಿತು. ಜೊತೆಗೆ ಅದರ ಉಪ ಅಣೆಕಟ್ಟುಗಳನ್ನು ಕಟ್ಟಲಾಗಿದೆ. [16] ಪಾಕಿಸ್ತಾನ ವಾಟರ್ ಎಂಡ್ ಪವರ್ ಡೆವಲಪ್ಮೆಂಟ್ ಅಥೋರಿಟಿಯು ಸಿಂಧೂ ನೀರಿನ ಉಪಯೋಗಕ್ಕಾಗಿ ಚಸ್ಮಾ -ಝೀಲಂ ಲಿಂಕ್ ಕಾಲುವೆಯ ನಿರ್ಮಾಣ ಕೈಗೊಂಡರು. ಚಸ್ಮಾ ಮತ್ತು ಝೀಲಂ ನದಿಗಳ ಲಿಂಕ್ ಕಾಲುವೆಗಳು - ಬಹವಾಲ್ಪುರ್ ಮತ್ತು ಮುಲ್ತಾನ್ನ ಪ್ರದೇಶಗಳಿಗೆ ನೀರು ಸರಬರಾಜು ವಿಸ್ತರಿಸುವುದು. ಪಾಕಿಸ್ತಾನ ರಾವಲ್ಪಿಂಡಿಯ ಸಮೀಪ ತರಬಲಾ ಅಣೆಕಟ್ಟು ನಿರ್ಮಿಸಿದೆ; ಅದು - 2,743 ಮೀಟರ್ (9,000 ಅಡಿ) ಉದ್ದ ಮತ್ತು 143 ಮೀಟರ್ (470 ಅಡಿ) ಎತ್ತರವಿದ್ದು 80 ಕಿಲೋಮೀಟರ್ (50 ಮೈಲಿ) ಉದ್ದದ ಜಲಾಶಯ ಹೊಂದಿದೆ.[೧೨]

ನೀರಾವರಿ ಮತ್ತು ವಿದ್ಯುತ್[ಬದಲಾಯಿಸಿ]

  • ಭಾರತ ದೇಶಕ್ಕೆ ಸಂಬಂಧಪಟ್ಟಮತೆ, ಜಮ್ಮು ಮತ್ತು ಕಾಶ್ಮೀರ, ಹಿಮಾಚಲ ಪ್ರದೇಶ, ಹರ್ಯಾಣ, ಪಂಜಾಬ್, ರಾಜಸ್ಥಾನ, ಈ ಎಲ್ಲಾ ರಾಜ್ಯಗಳಲ್ಲಿ ಒಟ್ಟು 69 ನೀರಾವರಿ ಯೋಜನೆಗಳಿವೆ. ಇವಲ್ಲದೆ 39 ಅಣೆಕಟ್ಟೆಗಳಿವೆ; 18 ಜಲವಿದ್ಯುತ್ ಯೋಜನೆಯದು; 6 ಜಲವಿದ್ಯುತ್ ಮತ್ತು ನೀರಾವರಿಯದು, 15 ಪ್ರವಾಹ ನಿಯಂತ್ರಣ ಮತ್ತು ನೀರಾವರಿ / ಜಲವಿದ್ಯುತ್ ವಿವಿದೋದ್ದೇಶ ಯೋಜನೆಯದು. [೧೩]

ನೀರಾವರಿ ಪ್ರದೇಶ[ಬದಲಾಯಿಸಿ]

  • ಭಾರತದಲ್ಲಿ ಸಿಂಧೂನದಿಯ ಪ್ರದೇಶದಲ್ಲಿ ನೀರಾವರಿಗೆ ಅನೇಕ ಬಗೆಯ ಯೋಜನೆಗಳಿವೆ; ಸಿಂಧೂ ಜಲಾನಯನ ಪ್ರಮುಖ ಮಧ್ಯಮ ನೀರಾವರಿ ಯೋಜನೆಗಳು, ಸಿಂಧೂ ಬೇಸಿನ್, ಬಾಂದು ಅಥವಾ ಬ್ಯರೇಜು ಯೋಜನೆಗಳು, ಸಿಂಧೂ ಜಲಾನಯನ ಸಣ್ನ ಅಣೆಕಟ್ಟುಗಳು, ಇಂಡಸ್ ಜಲಾನಯನ ಏತ (ಲಿಫ್ಟ್) ಯೊಜನೆಕೇಂದ್ರಗಳು.
  • ಸಿಂಧ್ ಪ್ರಮುಖ ಹಂತ -Iರ ನೀರಾವರಿ ಯೋಜನೆ (CCA) (ಹ ನೇ) 25.9 ಸಾವಿರ ಹೆಕ್ಟೇರು ನೀರಾವರಿ ಯೋಜನೆ. ಸಿಂಧ್ ಹಂತ - II ನೇ ಪ್ರಮುಖ ನೀರಾವರಿ ಯೋಜನೆಯಲ್ಲಿ 98.251 ಸಾವಿರ ಹೆಕ್ಟೇರು ನೀರಾವರಿ ಯೋಜನೆಗಳು ಕಾರ್ಯರೂಪಕ್ಕೆ ಬಂದಿವೆ. ಇನ್ನೂ ಲಕ್ಷ ಹೆಕ್ಟೇರಿಗೂ ಹೆಚ್ಚು ನೀರಾವರಿ ಒದಗಿಸುವ ಸಾಧ್ಯತೆಗಳಿವೆ.[೧೪]

ನದಿನೀರಿನ ಒಪ್ಪಂದ ಮತ್ತು ನೀರಾವರಿ ಪ್ರದೇಶ[ಬದಲಾಯಿಸಿ]

  • ಭಾರತ ಮತ್ತು ಪಾಕಸ್ತಾನಗಳ ನಡುವೆ, ಹಿಮಾಲಯದಲ್ಲಿ ಹುಟ್ಟಿ ಭಾರತದ ಪ್ರದೇಶಗಳಲ್ಲಿ ಹರಿದು ಪಾಕಿಸ್ತಾನದ ಮೂಲಕ ಅರಬ್ಬಿ ಸಮುದ್ರ ಸೇರುವ ಸಿಂಧೂ ಮತ್ತು ಅದರ ಜಲಾನಯನದ ವ್ಯಾಪ್ತಿಗೆ ಸೇರಿದ ಝೇಲಂ, ಚೀನಾಬ್‌, ರಾವಿ, ಬಿಯಾಸ್‌, ಸಟ್ಲೇಜ್‌ ನದಿಗಳ ನೀರನ್ನು ಹಂಚಿಕೊಳ್ಳುವುದಕ್ಕೆ ಸಂಬಂಧಪಟ್ಟಂತೆ 1960 ರಲ್ಲಿ ಒಪ್ಪಂದವನ್ನು ಮಾಡಿಕೊಳ್ಳಲಾಗಿದೆ. ಒಪ್ಪಂದದ ಪ್ರಕಾರ ಪಾಕಿಸ್ತಾನದ ಪಶ್ಚಿಮದಲ್ಲಿ ಹರಿಯುವ ಸಿಂಧೂ, ಝೇಲಂ ಮತ್ತು ಚಿನಾಬ್‌ಗಳ ಮೇಲೆ ಆ ದೇಶಕ್ಕೆ ಹೆಚ್ಚಿನ ಹಕ್ಕು ನೀಡಲಾಗಿದೆ. ಆದರೆ ಈ ನದಿಗಳ ಮೂಲ ಇರುವುದು ಭಾರತ ದೇಶದಲ್ಲಿ. ಹಾಗಾಗಿ ಇವುಗಳ ನೀರಿನ ಶೇ 20ರಷ್ಟನ್ನು ಭಾರತ ಬಳಸಬಹುದು. ಈ ನದಿಗಳಿಂದ 13.32 ಲಕ್ಷ ಎಕರೆಗೆ ನೀರಾವರಿ, 18,600 ಮೆಗಾವಾಟ್‌ ವಿದ್ಯುತ್‌ ಉತ್ಪಾದಿಸಲು ಭಾರತಕ್ಕೆ ಅವಕಾಶವಿದೆ. ಆದರೆ ಈಗ 8 ಲಕ್ಷ ಎಕರೆ ಮಾತ್ರ ನೀರಾವರಿಗೆ ಒಳಪಡಿಸಿದ್ದು 3,034 ಮೆಗಾವಾಟ್‌ ವಿದ್ಯುತ್‌ ಮಾತ್ರಾ ಉತ್ಪಾದನೆ ಮಾಡಲಾಗುತ್ತಿದೆ.
  • ಭಾರತದಲ್ಲಿ ಅಣೆಕಟ್ಟುಗಳು, ಬ್ಯರೇಜುಗಳು, ಮತ್ತು ಹಲವಾರು ಲಿಂಕ್ ಕಾಲುವೆಗಳ ಮೂಲಕ ಪಂಜಾಬ್ ಮತ್ತು ನೆರೆಯ ರಾಜ್ಯಗಳಿಗೆ ಪೂರ್ವ ಸಿಂಧೂ ಉಪನದಿಗಳ ನೀರನ್ನು ವಿತರಿಸಲು ನಿರ್ಮಿಸಲಾಗಿದೆ. ಇದು ಬಿಯಾಸ್ ಮತ್ತು ಸಟ್ಲೇಜ್ ನದಿಗಳು ಸೇರುವಲ್ಲಿರುವ ಹರಿಕೆ ದಂಡೆ-ಆಣೆಕಟ್ಟು, 400 ಮೈಲುಗಳ (640 ಕಿಮೀ) ಉದ್ದದ, ಇಂದಿರಾ ಗಾಂಧಿ ಕಾಲುವೆ ವಾಹಿನಿಗಳ ಮೂಲಕ ನೀರಾವರಿ ಒದಗಿಸಲು ಸಾಗುತ್ತದೆ. ಇದು ನೈಋತ್ಯ ಪಶ್ಚಿಮ ರಾಜಸ್ಥಾನದ ಮರುಭೂಮಿಯ ಕೆಲವು 1.5 ದಶಲಕ್ಷ ಎಕರೆಗಳಷ್ಟು (607,000 ಹೆಕ್ಟೇರ್)ಪ್ರದೇಶಕ್ಕೆ ನೀರನ್ನು ಒದಗಿಸುವುದು. ಈ ಮುಖ್ಯ ಕಾಲುವೆ 1987 ರಲ್ಲಿ ಪೂರ್ಣಗೊಂಡಿತು.[೪]

ಒಪ್ಪಂದ[ಬದಲಾಯಿಸಿ]

  • ಸಿಂಧೂ ನದಿ ನೀರು ಅನಾದಿಕಾಲದಿಂದ ನೀರಾವರಿ ಕೃಷಿಯ ಯಶಸ್ವಿ ಆಧಾರವಾಗಿದೆ. ಆಧುನಿಕ ನೀರಾವರಿ ಇಂಜಿನಿಯರಿಂಗ್ ಕೆಲಸ ಬ್ರಿಟಿಷ್ ಆಡಳಿತದ ಅವಧಿಯಲ್ಲಿ 1850 ಆರಂಭವಾಯಿತು, ಮತ್ತು, ಆಗ ದೊಡ್ಡ ಕಾಲುವೆ ವ್ಯವಸ್ಥೆಗಳ ನಿರ್ಮಿಸಲ್ಪಟ್ಟವು. ಅನೇಕ ಸಂದರ್ಭಗಳಲ್ಲಿ, ಹಳೆಯ ಕಾಲುವೆಗಳು ಮತ್ತು ಸಿಂಧ್ ಮತ್ತು ಪಂಜಾಬ್ ಪ್ರದೇಶಗಳಲ್ಲಿ ನಗರದ ವಾಹಿನಿಗಳು ಪುನಶ್ಚೇತನ ಮತ್ತು ಆಧುನಿಕೀಕರಣಗೊಂಡವು. ಹೀಗಾಗಿ, ಸಿಂಧೂ ಕಾಲುವೆ ವಿಶ್ವದ ನೀರಾವರಿಯ ಮಹಾನ್ ವ್ಯವಸ್ಥೆಯಾಗಿ ಸ್ಥಾಪಿತವಾಯಿತು. ಬ್ರಿಟಿಷ್ ಭಾರತದ ವಿಭಾಗವನ್ನು 1947 ರಲ್ಲಿ ಭಾರತ ಮತ್ತು ಪಾಕಿಸ್ತಾನದ ಮಧ್ಯೆ, ಅಂತರರಾಷ್ಟ್ರೀಯ ಗಡಿಯ ಮಧ್ಯೆ ಪಶ್ಚಿಮ ದೋಆಬ್ ಮತ್ತು ಸಟ್ಲೆಜ್ ವ್ಯಾಲಿ ಪ್ರಾಜೆಕ್ಟ್ ಎಂದು ಎರಡು ಭಾಗಗಳು ಎಂದು (ಮೂಲತಃ ಒಂದು ಯೋಜನೆ-ಒಳಗೆ) ವಿನ್ಯಾಸಗೊಳಿಸಲಾಗಿದೆ. ನೀರಾವರಿ ವ್ಯವಸ್ಥೆ ಕತ್ತರಿಸಿ ಆಗ. ಪ್ರಧಾನ ಕೆಲಸ ಭಾರತಕ್ಕೆ ಬಿದ್ದು, ಕಾಲುವೆಗಳು ಪಾಕಿಸ್ತಾನ ಮೂಲಕ ಸಾಗುವಂತೆ ಆಯಿತು. ಇದರಿಂದ ಪಾಕಿಸ್ತಾನದ ಕೆಲವು ಭಾಗಗಳಲ್ಲಿ ನೀರು ಸರಬರಾಜಿಗೆ ಅಡ್ಡಿಯಾಗಲು ಕಾರಣವಾಯಿತು. ಹೀಗೆ ಹುಟ್ಟಿಕೊಂಡ ವಿವಾದ ಕೆಲವು ವರ್ಷಗಳ ಮುಂದುವರಿದು ಕೊನೆಗೆ ವಿಶ್ವಬ್ಯಾಂಕ್ ಮಧ್ಯಸ್ಥಿಕೆಯಲ್ಲಿ ಪಾಕಿಸ್ತಾನ ಮತ್ತು ಭಾರತಗಳ (1960) ನಡುವೆ ಒಪ್ಪಂದವೊಂದಕ್ಕೆ ಬಂದವು .ಇದು ‘ಸಿಂಧೂ ನದಿ ನೀರಿನ ಒಪ್ಪಂದ 'ಎಂದು ಕರೆಯಲ್ಪಡುವ ಮೂಲಕ ಬಗೆಹರಿಸಲಾಯಿತು.
  • ಆ ಒಪ್ಪಂದದಂತೆ, ಸಿಂಧೂ ಜಲಾನಯನದ -ಸಿಂಧೂ, ಝೀಲಂ, ಮತ್ತು ಚೆನಾಬ್ ನದಿ- ಈ ಮೂರು ಪಶ್ಚಿಮ ನದಿಗಳ ಹರಿವನ್ನು ಪಾಕಿಸ್ತಾನ ನಿಗದಿಪಡಿಸಲಾಗಿದೆ. ಸಮಗ್ರವಾಗಿ (ಜಮ್ಮು ಮತ್ತು ಕಾಶ್ಮೀರ ರಾಜ್ಯವು ಬಳಸುವ ಸಣ್ಣ ಪ್ರಮಾಣದ ನೀರನ್ನು ಹೊರತುಪಡಿಸಿ), ಮೂರು ಪೂರ್ವ ನದಿಗಳ ಹರಿವನ್ನು ಅಂದರೆ, ಅದರ ಪ್ರಕಾರ ರಾವಿ, ಬಿಯಾಸ್ ಮತ್ತು ಸಟ್ಲೆಜ್‍ಗಳ ನೀರನ್ನು ಭಾರತಕ್ಕೆ ಕಾಯ್ದಿರಿಸಲಾಗಿದೆ.[೪]

ಪಾಕಿಸ್ತಾನದ ಸಿಂಧೂ ನೀರಿನ ಬಳಕೆ[ಬದಲಾಯಿಸಿ]

  • 1960 ಒಪ್ಪಂದದ ಘೋಷಣೆ ನಂತರ, ಪಾಕಿಸ್ತಾನದ ವಾಟರ್ ಎಂಡ್ ಪವರ್ ಡೆವಲಪ್ಮೆಂಟ್ ಅಥೋರಿಟಿ ಪೂರ್ವದ ನೀರಿನ ಕೊರತೆ ಪ್ರದೇಶಗಳಿಗೆ ತನ್ನ ಪಶ್ಚಿಮದ ನದಿಗಳ ನೀರನ್ನು ತಿರುಗಿಸುವ ಹಲವಾರು ಲಿಂಕ್ ಕಾಲುವೆಗಳು ಮತ್ತು ಬ್ಯಾರೇಜುಗಳನ್ನು ನಿರ್ಮಿಸಿತು. ಸಿಂಧೂ ನದಿಯ ಸೇರುವ ಚಾಸ್ಮಾ-ಝೀಲಂ ಲಿಂಕ್ ಕಾಲುವೆ, ಆ ಕಾಲುವೆಗಳಲ್ಲೆಲ್ಲಾ ದೊಡ್ಡದು ಅದು ಒಂದು ಸೆಕೆಂಡಿಗೆ ಕೆಲವು 21,700 ಘನ ಅಡಿಯಷ್ಟು (615 ಘನ ಮೀಟರ್) ವಿಸರ್ಜನೆಯ ಸಾಮರ್ಥ್ಯದ ಝೀಲಂ ನದಿಯ ಕಾಲುವೆ ಆಗಿದೆ. ಆ ಕಾಲುವೆ ನೀರನ್ನು ದಕ್ಷಿಣ ಪಂಜಾಬ್ ಪ್ರಾಂತ್ಯದ ಪ್ರದೇಶಗಳಿಗೆ ನೀರಾವರಿ ಒದಗಿಸುವ ಹವೇಲಿ ಕಾಲುವೆ ಮತ್ತು ಸಿದ್ದನಾಯ್ – ಮೈಲಸಿ - ಬಹವಾಲ್ ಲಿಂಕ್ ಕಾಲುವೆ ವ್ಯವಸ್ಥೆಗಳಿಗೆ ನೀರು ಪೂರೈಸುವುದು.
ಮಂಗಳಾ ಅಣೆಕಟ್ಟಿನ ವಿದ್ಯತ್ ಆಗಾರದ ಟರ್ಬೈನ್
  • ಸಿಂಧೂ ನೀರಿನ ಒಪ್ಪಂದವು ಪಾಕಿಸ್ತಾನಕ್ಕೆ ಎರಡು ಪ್ರಮುಖ ಅಣೆಕಟ್ಟುಗಳ ನಿರ್ಮಾಣದ ಸೌಲಭ್ಯ ಒದಗಿಸಿತು. ಝೀಲಂ ಪಟ್ಟಣದ ಸಮೀಪವಿರುವ ಝೀಲಂ ನದಿಯ ಮಂಗಳಾ ಅಣೆಕಟ್ಟು - ವಿಶ್ವದ ದೊಡ್ಡ ಮಣ್ಣು ದಂಡೆಯ ಅಣೆಕಟ್ಟುಗಳಲ್ಲಿ ಒಂದಾಗಿದೆ. ಇದು 10.300 ಅಡಿ (3,140 ಮೀಟರ್) ಉದ್ದ ಮತ್ತು 480 ಅಡಿ (146 ಮೀಟರ್) ಎತ್ತರ ಇದೆ. ಈ ಅಣೆಕಟ್ಟಿ 2009 ರಲ್ಲಿ ಮಂಗ್ಲಾ ಜಲಾಶಯವನ್ನು 30 ಅಡಿ (9 ಮೀಟರ್) ಎತ್ತರಿಸಿ -ಪೂರ್ಣಗೊಂಡಿದೆ. ಒಂದು ಮಂಗ್ಲಾ ಜಲಾಶಯದ ಗರಿಷ್ಠ ಎತ್ತರದಿಂದ ಅದು, 40 ಮೈಲಿ (64 ಕಿ.ಮೀ.) ಉದ್ದ ಮತ್ತು 100 ಚದರ ಮೈಲಿ (260 ಚದರ ಕಿ.ಮೀ.) ಮೇಲ್ಮೈ ವಿಸ್ತೀರ್ಣವನ್ನು ಹೊಂದಿರುತ್ತದೆ. ಈ ಅಣೆಕಟ್ಟು ಯೋಜನೆಯಲ್ಲಿ ಕೆಲವು 1,000 ಮೆಗಾವ್ಯಾಟ್ಗಳಷ್ಟು ಜಲವಿದ್ಯುತ್ ನ್ನು ಉತ್ಪಾದಿಸುತ್ತದೆ. ಜೊತೆಗೆ, ಜಲಾಶಯ ಮೀನುಗಾರಿಕೆಯ ಕೇಂದ್ರವೂ ಮತ್ತು ಪ್ರವಾಸಿ ಆಕರ್ಷಣೆಯೂ ಮತ್ತು ಆರೋಗ್ಯ ಧಾಮವೂ ಆಗಿರುವಂತೆ ಅಭಿವೃದ್ಧಿಪಡಿಸಲಾಗಿದೆ.
ಜನರೇಟರ್ ತರ್ಬಾಲ ಅಣೆಕಟ್ಟಿನಲ್ಲಿ.
  • ಎರಡನೇ ದೈತ್ಯಾಕಾರದ ಯೋಜನೆಯು ಸಿಂಧೂ ನದಿಗೆ ಕಟ್ಟಿದ, ತರಬೇಲಾ ಅಣೆಕಟ್ಟು. ಇದು ರಾವಲ್ಪಿಂಡಿ ವಾಯವ್ಯದ 50 ಮೈಲಿ (80 ಕಿಮೀ) ದೂರದಲ್ಲಿರುವ ಅಣೆಕಟ್ಟು. ಈ ಅಣೆಕಟ್ಟು, ಮಣ್ಣು ಮತ್ತು ಕಲ್ಲು ಸೇರಿ ಕಟ್ಟಿದ ರೀತಿಯ, 9,000 ಅಡಿ (2,700 ಮೀಟರ್) ಉದ್ದ ಮತ್ತು 470 ಅಡಿ (143 ಮೀಟರ್) ಎತ್ತರ, ಉಳ್ಳದ್ದು. ಅದರ ಜಲಾಶಯ 50 ಮೈಲಿ (80 ಕಿಮೀ) ಉದ್ದವಾಗಿದೆ. ಅಣೆಕಟ್ಟುನ ವಿದ್ಯುತ್ ಉತ್ಪಾದನೆ ಸಾಮರ್ಥ್ಯದಲ್ಲಿ ಮಂಗ್ಲಾ ಅಣೆಕಟ್ಟಿನ ಮೂರು ಪಟ್ಟು 3000 (ಮೆಗಾವ್ಯಾಟ್ಗ್) ಹಾಗೂ ಒಟ್ಟಾರೆ ಸಾಮರ್ಥ್ಯದಲ್ಲಿ ಸಂಭಾವ್ಯ ಗಣನೀಯವಾಗಿ ಇನ್ನೂ ಹೆಚ್ಚು.
  • ಮೂರನೇಯ ಪ್ರಮುಖ ರಚನೆ 2004 ರಲ್ಲಿ ಪೂರ್ಣಗೊಂಡಿತು, ಅದು ಘಾಜಿ ಬರೋತಾ ಜಲವಿದ್ಯುತ್ ಯೋಜನೆ. ಸಿಂಧೂ ನದಿಯನ್ನು ಭಾಗಶಃ ತಿರುಗಿಸಲಾಗಿದೆ. ಅದರಿಂದ 1,450 ಮೆಗಾವ್ಯಾಟ್ಗಳಷ್ಟು ವಿದ್ಯುತ್ ಅತ್ಪಾದನೆ ಆಗುವುದು.[೪]

ಇತರ ಯೊಜನೆಗಳು[ಬದಲಾಯಿಸಿ]

ಕಾಬೂಲ್ ನದಿ ಜಾದಲ್ಲಿ (jaa)
  • ಸಿಂಧೂ ಕೆಳ ಬಯಲಿನ ಪ್ರದೇಶಕ್ಕೆ ಬಂದ ನಂತರ ಮುಖ್ಯವಾದ ಹಲವು ಬ್ಯಾರೇಜುಗಳು ಅಥವಾ ಅಣೆಕಟ್ಟೆಗಳು ಇವೆ. ಪರ್ವತ ಪ್ರದೇಶದಲ್ಲಿ ಸಿಂಧೂ ನದಿಗೆ ಪಶ್ಚಿಮ ಪ್ರಧಾನ ಜಲಮಾರ್ಗ ಒದಗಿಸುವುದು ಸ್ವಾತ್ ನದಿ, ಕಾಬುಲ್ ನದಿಯ ಉಪನದಿಯಾದ ಇದರ ಹರಿವು ಸ್ವಾತ್ ಕಾಲುವೆಗಳಲ್ಲಿ ಹರಿಯುವುದು. ಆ ಕಾಲುವೆಗಳು ಆ ಪ್ರದೇಶದಲ್ಲಿ, ಕಬ್ಬು ಮತ್ತು ಗೋಧಿ ಎರಡು ಪ್ರಮುಖ ಬೆಳೆಗಳಿಗೆ ನೀರಾವರಿ ಒದಗಿಸುವುದು.) ಪೆಷಾವರ್‍ನ ವಾಯವ್ಯದಲ್ಲಿ ಸುಮಾರು 12 ಮೈಲುಗಳು (19 ಕಿಮೀ) ದೂರದ ಕಾಬೂಲ್ ನದಿಯ, ವಾರ್ ಸೆಕ್ ವಿವಿಧೋದ್ದೇಶ ಯೋಜನೆಯು ಪೇಶಾವರ ಕಣಿವೆಯಲ್ಲಿ ಆಹಾರ ಬೆಳೆಗಳು ಮತ್ತು ಹಣ್ಣಿನ ತೋಟಗಳಿಗೆ ನೀರಾವರಿ ಒದಗಿಸುತ್ತದೆ ಮತ್ತು 240,000 ಕಿಲೋವ್ಯಾಟ್ಗಳ ವಿದ್ಯುತ್ ಉತ್ಪಾದಿಸುವುದು. ಬಯಲು ಪ್ರದೇಶದಲ್ಲಿರುವ 1949 ರ ಕಾಲಾಬಾಗ್ ಅಥವಾ ಜಿನ್ನಾ ಆಣೆಕಟ್ಟು ತಾಲ್ ಪ್ರಾಜೆಕ್ಟ್ ನ ಕಾಲುವೆಗಳ ವ್ಯವಸ್ಥೆಯ ಹತೋಟಿ ಮಾಡುವುದು. ಹಿಂದೆ ಮರುಭೂಮಿಯಾಗಿದ್ದ ಆ ಪ್ರದೇಶದ ಅಭಿವೃದ್ಧಿ iಯೊಜನೆಯನ್ನು ಆಯೋಜಿಸಲಾಗಿದೆ. ಅದು ಕೃಷಿ ವಿಸ್ತರಣೆ, ಗ್ರಾಮೀಣ ಉದ್ಯಮ ಅಭಿವೃದ್ಧಿ, ಮತ್ತು ಹಳ್ಳಿಗಳು ಮತ್ತು ಪಟ್ಟಣಗಳ ವಸಾಹತು ಪ್ರಚಾರ ಗುರಿ ಹೊಂದಿದೆ. ಮುಂದೆ ದೂರದ ಚಾಸ್ಮಾ ಆಣೆಕಟ್ಟು ಇದೆ. ಇನ್ನೂ ದೂರದಲ್ಲಿ ತವುನ್ಸಾ ಆಣೆಕಟ್ಟು ದೇರಾ ಘಾಜಿ ಖಾನ್ ಮತ್ತು ಮುಜಾಫರಗರ್ ಜಿಲ್ಲೆಗಳ ಭೂಮಿಗೆ ನೀರಾವರಿ ಒದಗಿಸಲು ವಿನ್ಯಾಸಗೊಳಿಸಲಾಗಿದೆ, ಅದು ಸುಮಾರು 100,000 ಕಿಲೋವ್ಯಾಟ್ಗಳ ವಿದ್ಯುತ್ ಸಹ ಉತ್ಪಾದಿಸುತ್ತದೆ. ಸಿಂಧ್ ಒಳಗೆ ಸಿಂಧೂ-ಗುಡ್ಡು, ಸಕ್ಕೂರು ಮತ್ತು ಕೊತ್ರಿ, ಅಥವಾ ಗುಲಾಮ್ ಮೊಹಮ್ಮದ್ ಈ ಮೂರು ಪ್ರಮುಖ ಬ್ಯಾರೇಜುಗಳಿವೆ. ಗುಡ್ಡು ಆಣೆಕಟ್ಟು ಕೇವಲ ಸಿಂಧ್ ಗಡಿಯ ಒಳಗಡೆ ಇದೆ ಮತ್ತು ದೀರ್ಘ 4,450 ಅಡಿಗಳಷ್ಟು (1,356 ಮೀಟರ್) ಉದ್ದ ಇದೆ. ಇದು ಸಕ್ಕೂರು, ಜಕಬಾಬದ್ ಪ್ರದೇಶದಲ್ಲಿ ಕೃಷಿ ಭೂಮಿ ಗೆ ವೀರು ಒದಗಿಸುವುದು. ಲಾರ್ಕಾನಾ ಮತ್ತು ಕಾಲತ್ ಜಿಲ್ಲೆಗಳ ಭಾಗಗಳಿಗತ್ನೀರ ಕೊಡುವುದು. . ಯೋಜನೆಯಲ್ಲಿ ಅಕ್ಕಿ ಕೃಷಿ ಹೆಚ್ಚಾಗಿದೆ, ಆದರೆ ಹತ್ತಿ ನದಿಯ ಎಡದಂಡೆಯ ಮೇಲೆ ಪ್ರಮುಖ ಬೆಳೆಯಾಗಿ ಮಾರ್ಪಟ್ಟಿದೆ ಮತ್ತು ನಗದು ಬೆಳೆಯಾಗಿ ಅಕ್ಕಿಬೆಳೆಯನ್ನು ಬದಲಿಸಿದೆ. ಈ ಸಕ್ಕೂರು ಆಣೆಕಟ್ಟನ್ನು 1932 ರಲ್ಲಿ ನಿರ್ಮಿಸಲಾಯಿತು ಮತ್ತು ಅದು 1 ಮೈಲಿ ಉದ್ದವಿದೆ (1.6 ಕಿ.ಮೀ). ಇದರ ಮೂಲದ ಕಾಲುವೆಗಳು ಆಹಾರ ಮತ್ತು ಹಣದ ಬೆಳೆಗಳಿಗೆ ಎರಡೂ ಉತ್ಪಾದಿಸುವ ಸುಮಾರು 5 ದಶಲಕ್ಷ ಎಕರೆಗಳಷ್ಟು (2 ಮಿಲಿಯನ್ ಹೆಕ್ಟೇರ್) ಭೂಮಿಗೆ ನೀರು ಒದಗಿಸುವುದು. ಕೃಷಿ ಪ್ರದೇಶದ ವಿಸ್ತರಣೆಗಾಗಿ ಗುಲಾಮ್ ಮೆಹಮ್ಮದ್ ಆಣೆಕಟ್ಟು ಎಂದು ಕರೆಯಲ್ಪಡುವ. ಕೊತ್ರಿ ಆಣೆಕಟ್ಟು 1955 ರಲ್ಲಿ ಕಟ್ಟಲ್ಪಟ್ಟಿತು. ಇದು ಹೈದರಾಬಾದ್ ಸಮೀಪದಲ್ಲಿದೆ ಮತ್ತು ಸುಮಾರು 3,000 ಅಡಿ (900 ಮೀಟರ್) ಉದ್ದವಾಗಿದೆ. ಬಲ ಬ್ಯಾಂಕ್ ಕಾಲುವೆ ಕರಾಚಿ ನಗರಕ್ಕೆ ಹೆಚ್ಚುವರಿ ನೀರನ್ನು ಒದಗಿಸುತ್ತದೆ. ಕಬ್ಬು ಕೃಷಿ ಬೆಳೆಗೆ ನೀರಾವರಿ ವಿಸ್ತರಿಸಲಾಗಿದೆ, ಇದು ಅಕ್ಕಿ ಮತ್ತು ಗೋಧಿ ಇಳುವರಿಗಳನ್ನು ಗಣನೀಯವಾಗಿ ಹೆಚ್ಚಿಸಿವೆ.

ಅತಿ ಜಲಪೂರಣ ಸಮಸ್ಯೆ[ಬದಲಾಯಿಸಿ]

  • ಭಾರತೀಯ ಉಪಖಂಡದಲ್ಲಿ ಮತ್ತು ಬೇರೆಡೆಯ ಅನುಭವವು ತಿಳಿಸುವುದು ಏನೆಂದರೆ ಎಚ್ಚರಿಕೆಯಿಂದ ನಿಯಂತ್ರಿತವಾಗದ ಹೊರತು ಅಣೆಕಟ್ಟು ಕಾಲುವೆ ನೀರಾವರಿ ಗಂಭೀರವಾಗಿ ಕೃಷಿ ಭೂಮಿಗೆ ಹಾನಿ ಮಾಡಬಹುದು, ಎಂದು ತೋರಿಸಿದೆ. ನೇರವಲ್ಲದ ಕಾಲುವೆಗಳು ನೀರಿನ ಮಣ್ಣಿನ ಮೂಲಕ ಹರಿದುಹೋಗುತ್ತದೆ ಆಗ ನೀರು ಹೀರಲ್ಪಟ್ಟು ಮತ್ತು ನೀರಿನ ಅಂತರ ಜಲಮಟ್ಟ ಹೆಚ್ಚಿ ಜವಳು ಹುಟ್ಟುಹಾಕುತ್ತದೆ, ಆದ್ದರಿಂದ ಮಣ್ಣಿನ ಕೃಷಿ ನೀರು ಕುಡಿದು ನಿಷ್ಪ್ರಯೋಜಕವಾಗುವುದು ಮತ್ತು ಅನುಪಯುಕ್ತ ಆಗುತ್ತದೆ. ಸಿಂಧೂ ಹಾಗೂ ಅದರ ಉಪನದಿಗಳ ಕಾಲುವೆಗಳ ಮೂಲಕ ನೀರಾವರಿ ಉದ್ದಕ್ಕೂ ವಿಸ್ತರಿಸಿದೆ, ಕೆಲವು ಪ್ರದೇಶಗಳಲ್ಲಿ ಅಂತರ್ಜಲ ಹೆಚ್ಚಿ ಆಳವಿಲ್ಲದ ಸರೋವರಗಳಾಗಿ ರೂಪಗೊಂಡಿದೆ. ಬೇರೆಡೆ ಮೇಲ್ಮೈ ತೀವ್ರ ಬೇಸಿಗೆ ಬಿಸಿಲಿನಿಂದ ಆವಿಯಾದ ನೀರು ಮೇಲೆ ಉಪ್ಪಿನ ಪದರಗಳನ್ನು ಉಂಟುಮಾಡಿ ಬೆಳೆಯನ್ನು ಬೆಳೆಯಲು ಅಸಾಧ್ಯ ಮಾಡಿದೆ, ಅದಕ್ಕಾಗಿ ನೀರು ಮತ್ತು ಉಪ್ಪು ಸಂಗ್ರಹವಾಗುವುದನ್ನು ತಪ್ಪಿಸಲು ಸಾಕಷ್ಟು ಒಳಚರಂಡಿ ವ್ಯವಸ್ಥೆಯನ್ನು ಒದಗಿಸಲಾಯಿತು.[೪]

ನೋಡಿ[ಬದಲಾಯಿಸಿ]

ಹೊರ ಸಂಪರ್ಕ[ಬದಲಾಯಿಸಿ]


ಉಲ್ಲೇಖ[ಬದಲಾಯಿಸಿ]

  1. Irrigation; Indus Waters Treaty
  2. indus-river-system
  3. The Indus River System
  4. https://www.britannica.com/place/Indus-River
  5. Indus River PHYSICAL FEATURES
  6. "Drainage area (sq. km)". Archived from the original on 2016-12-10. Retrieved 2016-10-16.
  7. "Salient Features of Indus Basin". Archived from the original on 2016-12-10. Retrieved 2016-10-16.
  8. G.P. Malalasekera 2003, p. 1137.
  9. ಭಾರತದ ಇತಿಹಾಸ ಭಾಗ೧ -ಲೇಖಕ ಫಾಲಾಕ್ಷ.
  10. Indus re-enters India after two centuries, feeds Little Rann, Nal Sarovar
  11. ""Indus River" (PDF)" (PDF). Archived from the original (PDF) on 2013-05-25. Retrieved 2016-10-14.
  12. Mangla Dam
  13. "india-wris.nrsc.gov.in Dams in Indus Basin". Archived from the original on 2016-12-10. Retrieved 2016-10-16.
  14. "Sindh Phase - II Major Irrigation Project". Archived from the original on 2018-08-03. Retrieved 2017-01-08.