ಸಿಂಧೂ ನೀರು ಹಂಚಿಕೆ ಒಪ್ಪಂದ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಭಾರತ ಮತ್ತು ಪಾಕಿಸ್ತಾನಗಳ ನಡುವೆ, ಹಿಮಾಲಯದಲ್ಲಿ ಹುಟ್ಟಿ ಭಾರತದ ಪ್ರದೇಶಗಳಲ್ಲಿ ಹರಿದು ಪಾಕಿಸ್ತಾನದ ಮೂಲಕ ಅರಬ್ಬಿ ಸಮುದ್ರ ಸೇರುವ ಸಿಂಧೂ ಮತ್ತು ಅದರ ಜಲಾನಯನದ ವ್ಯಾಪ್ತಿಗೆ ಸೇರಿದ ಝೇಲಂ, ಚೀನಾಬ್‌, ರಾವಿ, ಬಿಯಾಸ್‌, ಸಟ್ಲೇಜ್‌ ನದಿಗಳ ನೀರನ್ನು ಹಂಚಿಕೊಳ್ಳುವುದಕ್ಕೆ ಸಂಬಂಧಪಟ್ಟಂತೆ 1960 ರಲ್ಲಿ ಒಪ್ಪಂದವನ್ನು ಮಾಡಿಕೊಳ್ಳಲಾಗಿದೆ.

ಸಿಂಧೂ ನದಿ ಮತ್ತು ಉಪನದಿಗಳು - ಜಲಾನಯನ ಪ್ರದೇಶ: ಕೆಂಪುಗೆರೆ ಪಾಕಿಸ್ತಾನದ ಗಡಿ
 • ಸಿಂಧೂ ನದಿ ನೀರು ಒಪ್ಪಂದಕ್ಕೆ ವಿಶ್ವ ಬ್ಯಾಂಕ್ (ಆಗ ಪುನರ್ನಿರ್ಮಾಣ ಮತ್ತು ಅಭಿವೃದ್ಧಿಯ ಅಂತರರಾಷ್ಟ್ರೀಯ ಬ್ಯಾಂಕ್) ಮಧ್ಯವರ್ತಿಯಾಗಿ ಭಾರತ ಮತ್ತು ಪಾಕಿಸ್ತಾನ ನಡುವೆ ನೀರು ಹಂಚಿಕೆ ಒಪ್ಪಂದದ ಕರಾರು ಆಯಿತು. ಒಪ್ಪಂದದಲ್ಲಿ ಪಾಕಿಸ್ತಾನ ಅಧ್ಯಕ್ಷ ಆಯೂಬ್ ಖಾನ್ ಮತ್ತು ಭಾರತದ ಪ್ರಧಾನಿ ಜವಾಹರಲಾಲ್ ನೆಹರು ಅವರು, ಸೆಪ್ಟೆಂಬರ್ 19, 1960 ರಂದು ಕರಾಚಿಯಲ್ಲಿ ಸಹಿ ಮಾಡಿದರು.
 • ಒಪ್ಪಂದದ ಪ್ರಕಾರ ಪಾಕಿಸ್ತಾನದ ಪಶ್ಚಿಮದಲ್ಲಿ ಹರಿಯುವ ಸಿಂಧೂ, ಝೇಲಂ ಮತ್ತು ಚಿನಾಬ್‌ಗಳ ಮೇಲೆ ಆ ದೇಶಕ್ಕೆ ಹೆಚ್ಚಿನ ಹಕ್ಕು ನೀಡಲಾಗಿದೆ. ಆದರೆ ಈ ನದಿಗಳ ಮೂಲ ಇರುವುದು ಭಾರತ ದೇಶದಲ್ಲಿ. ಹಾಗಾಗಿ ಇವುಗಳ ನೀರಿನ ಶೇ 20 ರಷ್ಟನ್ನು ಭಾರತ ಬಳಸಬಹುದು. ಈ ನದಿಗಳಿಂದ 13.32 ಲಕ್ಷ ಎಕರೆಗೆ ನೀರಾವರಿ, 18,600 ಮೆಗಾವಾಟ್‌ ವಿದ್ಯುತ್‌ ಉತ್ಪಾದಿಸಲು ಭಾರತಕ್ಕೆ ಅವಕಾಶವಿದೆ. ಆದರೆ ಈಗ 8 ಲಕ್ಷ ಎಕರೆ ಮಾತ್ರ ನೀರಾವರಿಗೆ ಒಳಪಡಿಸಿದ್ದು 3,034 ಮೆಗಾವಾಟ್‌ ವಿದ್ಯುತ್‌ ಮಾತ್ರ ಉತ್ಪಾದನೆ ಮಾಡಲಾಗುತ್ತಿದೆ.

ವಿವರ[ಬದಲಾಯಿಸಿ]

 • ಬ್ರಿಟಿಷ್ ಭಾರತದ 1947 ರಲ್ಲಿ ಭಾರತ ವಿಭಜನೆಯಾದಾಗ ಭಾರತ ಮತ್ತು ಪಾಕಿಸ್ತಾನ ಮಧ್ಯೆ ಅಂತರರಾಷ್ಟ್ರೀಯ ಗಡಿಯು ಪಶ್ಚಿಮ ಪಾಕಿಸ್ತಾನದ ದೋಆಬ್ ಮತ್ತು ಸಟ್ಲೆಜ್ ವ್ಯಾಲಿ ಪ್ರಾಜೆಕ್ಟ್ ಎರಡು ಪ್ರತ್ಯೇಕ ಯೋಜನೆಗಳಾದವು. ಅವು ಮೂಲತಃ ಒಂದು ಯೋಜನೆ-ಒಳಗೆ ಇದ್ದವು ಈಗ ಎರಡು ಭಾಗಗಳು ಎಂದು ವಿನ್ಯಾಸಗೊಳಿಸಲಾಗಿದೆ ನೀರಾವರಿ ವ್ಯವಸ್ಥೆ ಕತ್ತರಿಸಿ ಆಗ. ಪ್ರಾರಂಬದ ಭಾಗ ಭಾರತಕ್ಕೆ ಸೇರಿತು; ಕಾಲುವೆಗಳು ಪಾಕಿಸ್ತಾನ ಮೂಲಕ ಸಾಗುತ್ತಿತ್ತು. ಇದರಿಂದ ಪಾಕಿಸ್ತಾನದ ಕೆಲವು ಭಾಗಗಳಲ್ಲಿ ನೀರು ಸರಬರಾಜಿಗೆ ಅಡ್ಡಿಗೆ ಕಾರಣವಾಯಿತು. ಹೀಗೆ ಇದ್ದು ಕೆಲವು ವರ್ಷಗಳ ಕಾಲ ವಿವಾದದೊಂದಿಗೆ ಮುಂದುವರಿಯಿತು. ವಿವಾದ ವಿಶ್ವ ಬ್ಯಾಂಕ್ ಸಂಧಾನದಲ್ಲಿ ಪಾಕಿಸ್ತಾನ ಮತ್ತು ಭಾರತಗಳು (1960) ಒಪ್ಪಂದವೊಂದಕ್ಕೆ ಬಂದು ಬಗೆಹರಿಸಲಾಯಿತು. ಅದು ‘ಸಿಂಧೂ ನದೀ ನೀರಿನ ಒಪ್ಪಂದ' ಎಂದು ಕರೆಯಲ್ಪಡುವುದು.
 • ಸಿಂಧೂ ನದಿಯ ವ್ಯವಸ್ಥೆಯು ಮೂರು ಪಶ್ಚಿಮ ನದಿಗಳು - ಸಿಂಧೂ, ಝೀಲಂ ಮತ್ತು ಚೆನಾಬ್ ಮತ್ತು ಮೂರು ಪೂರ್ವ ನದಿಗಳು - ಸಟ್ಲೇಜ್, ಬಿಯಾಸ್, ರಾವಿ ನದಿಗಳನ್ನು ಒಳಗೊಂಡಿದೆ. ಒಪ್ಪಂದವು ಲೇಖ 5.1 ರ ಅಡಿಯಲ್ಲಿ, ರಾವಿ, ಬಿಯಾಸ್, ಸಟ್ಲೇಜ್, ಝೀಲಂ ಮತ್ತು ಚೆನಾಬ್ ನದಿಗಳು ಸಿಂಧೂ ನದಿಯ ಎಡದಂಡೆಯ (ಪೂರ್ವದ ಬದಿ) ಬದಿಯಲ್ಲಿ ಪಾಕಿಸ್ತಾನದಲ್ಲಿ ಸೇರುವುದು. ನೀರಿನ ಹಂಚಿಕೆ ಒಪ್ಪಂದದ ನಿಯಮದ ಪ್ರಕಾರ ಪೂರ್ವ ನದಿಗಳಾದ ಈ ರಾವಿ, ಬಿಯಾಸ್, ಸಟ್ಲೇಜ್‍ಗಳು ಪಾಕಿಸ್ತಾನ ಸೇರುವ ಮೊದಲ ಭಾಗದ ನೀರು ಪೂರ್ಣವಾಗಿ ಭಾರತದ ಉಪಯೊಗಕ್ಕೆ ಮೀಸಲಿಡಲಾಗಿದೆ. ಆದಾಗ್ಯೂ, 10 ವರ್ಷಗಳ ಕಾಲದ ವಿಶೇಷ ಅನುಮತಿ ಅಡಿಯಲ್ಲಿ ಭಾರತಕ್ಕೆ ಮಂಜೂರು ಆದ ಈ ನದಿಗಳಿಂದ ನೀರನ್ನು ಪಾಕಿಸ್ತಾನಕ್ಕೆ 10 ವರ್ಷಗಳ ಕಾಲ ಸರಬರಾಜು ಮಾಡಬೇಕಾಗಿತ್ತು.
 • ಇದು ಪಾಕಿಸ್ತಾನ ಝೀಲಂ, ಚೆನಾಬ್ ಮತ್ತು ಸಿಂಧೂ ನೀರಿನ ಬಳಕೆಗೆ ನಾಲೆಮಾರ್ಗದ ವ್ಯವಸ್ಥೆಯನ್ನು ನಿರ್ಮಿಸಲು ಸಾಧ್ಯವಾಗುವ ವರೆಗೆ ಈ ಒಪ್ಪಂದ ಇರುವುದು (10 ವರ್ಷಗಳ ಮಿತಿ). ಹಾಗೆಯೇ, ಪಾಕಿಸ್ತಾನ ಪಶ್ಚಿಮ ನದಿಗಳಾದ ಝೀಲಂ, ಚೆನಾಬ್ ಮತ್ತು ಸಿಂಧೂ ನದೀ ನೀರಿನ ವಿಶೇಷ ಬಳಕೆಯ ಸವಲತ್ತು ಹೊಂದಿದೆ. ಪಾಕಿಸ್ತಾನ ಪೂರ್ವದ ನದಿಗಳ ನೀರಿನ ನಷ್ಟಕ್ಕೆ ಒಂದು ಬಾರಿ ಹಣಕಾಸಿನ ಪರಿಹಾರ ಪಡೆಯಿತು. ಭಾರತವು 10 ವರ್ಷಗಳ ತಾತ್ಕಾಲಿಕ ಪೂರ್ಣ ಪ್ರಮಾಣದ ನೀರು ಬಳಕೆಯ ನಿಷೇಧದ ನಂತರ ಮಾರ್ಚ್ 31 1970 ರಿಂದ, ಮೂರು ನದಿಗಳ ನೀರಿನ ಬಳಕೆಗೆ ಪೂರ್ಣ ಹಕ್ಕುಗಳನ್ನು ಪಡೆದಿದೆ. ಈ ಒಪ್ಪಂದ ನೀರಿನ ಹಂಚಿಕೆ ಬದಲಿಗೆ ನದಿಗಳ ಹಂಚಿಕೆಗೆ ಹೆಚ್ಚು ಪ್ರಾಮುಖ್ಯತೆ ನೀಡಿತು.
 • ಎರಡೂ ದೇಶಗಳು ನೀರಿನ ದತ್ತಾಂಶಗಳ ವಿನಿಮಯಕ್ಕೆ ಮತ್ತು ಒಪ್ಪಂದಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಸಹಕಾರ ನೀಡಲು ಒಪ್ಪಿದವು. ಈ ಉದ್ದೇಶಕ್ಕಾಗಿ, ಒಪ್ಪಂದವು ಖಾಯಂ ಸಿಂಧೂ ಆಯೋಗ (Permanent Indus Commission) ರಚಿಸಿದೆ. ಅದರಲ್ಲಿ ಪ್ರತಿ ದೇಶದ ನೇಮಕಗೊಂಡ ಆಯುಕ್ತರು ಇರುವರು.[೧]

ನದಿಯ ಅಗಾಧತೆ[ಬದಲಾಯಿಸಿ]

 • ಸಿಂಧೂ ನದಿ, ಟಿಬೆಟನ ಮತ್ತು ಸಂಸ್ಕೃತದ ಸಿಂಧು ಸಿಂಧಿ ಸಿಂಧು ಅಥವಾ ಮೆಹರಾನ್ ದಕ್ಷಿಣ ಏಷ್ಯಾದಲ್ಲಿ ದೊಡ್ಡ ಹಿಮಾಲಯ-ಉಗಮ ನದಿ. ಇದು 2,000 ಮೈಲಿ (3,200 ಕಿಮೀ. ಉದ್ದದ ಜಗತ್ತಿನ ಅತೀ ಉದ್ದದ ನದಿಗಳಲ್ಲಿ ಒಂದಾಗಿದೆ. ಇದರ ಒಟ್ಟು ಜಲಾನಯನ ಪ್ರದೇಶ 450,000 ಚದರ ಮೈಲಿ (1,165,000 ಚದರ ಕಿ.ಮೀ.), ಇದರಲ್ಲಿ 175,000 ಚದರ ಮೈಲಿ (453,000 ಚದರ ಕಿ.ಮೀ) ಪ್ರದೇಶ ಹಿಮಾಲಯದ ಶ್ರೇಣಿಗಳು ಮತ್ತು ಹಿಂದೂ ಕುಶ್ ಮತ್ತು ಕಾರಕೋರಂ ಶ್ರೇಣಿಯ ಬೆಟ್ಟದ ತಪ್ಪಲಲ್ಲಿ ಇರುವುದು. ; ಉಳಿದ ಪ್ರದೇಶ ಪಾಕಿಸ್ತಾನದ ಕಡಿಮೆ ಮಳೆ ಬೀಳುವ ಬಯಲು ಪ್ರದೇಶದಲ್ಲಿದೆ. ನದಿಯ ವಾರ್ಷಿಕ ಹರಿವು 58 ಘನ ಮೈಲಿ (243 ಘನ ಕಿಮೀ); ನೈಲ್ ನದಿಯ ಎರಡರಷ್ಟು ಮತ್ತು ಟೈಗ್ರಿಸ್ ಮತ್ತು ಯೂಫ್ರೆಟಿಸ್ ನದಿಗಳ ಒಟ್ಟು ಹರಿವಿನ ಮೂರರಷ್ಟು. ಆರಂಭಿಕ ದಾಖಲೆಗಳು ಮತ್ತು ಪ್ರಾಚೀನ ಭಾರತದ, ಸುಮಾರು 1500 ಕ್ರಿ.ಪೂ.ದ ಋಗ್ವೇದದ ಆರ್ಯನ್ ಜನರು ಸಂಯೋಜನೆ ಮಾಡಿದ ಶ್ಲೋಕಗಳಲ್ಲಿ ಸಿಂಧೂ ನದಿಯನ್ನು ಉಲ್ಲೇಖಿಸುತ್ತವೆ.ಅದೇ ದೇಶದ ಹೆಸರಿನ ಮೂಲವಾಗಿದೆ,
ಒಂದು ಎಕರೆ ಘನಅಡಿ:Acre foot
 • ಐದು ಪ್ರಮುಖ ನದಿಗಳು ಪೂರ್ವ ಭಾಗದಲ್ಲಿ ಸಿಂಧೂ ನದಿ ಸೇರುತ್ತವೆ. ಅವು ಝೀಲಂ, ಚೆನಾಬ್ ರವಿ, ಬಿಯಾಸ್,ಮತ್ತು ಸಟ್ಲೆಜ್; ಪಕ್ಕದಲ್ಲಿ ಈ 3 ಸಣ್ಣ ನದಿಗಳು - ಸೋನ್, ಹ್ಯಾರೋ ಮತ್ತು ಸೋನ್ ಸಹ ಸಿಂಧೂಗೆ ಸೇರುವುದು. ಪಶ್ಚಿಮ ಬದಿಯಲ್ಲಿ ಹಲವಾರು ಸಣ್ಣ ನದಿಗಳು ಸಿಂಧೂಗೆ ಸೇರುವುವು. ಇವುಗಳಲ್ಲಿ ಕಾಬೂಲ್ ದೊಡ್ಡ ನದಿ. ಅದರ ಮುಖ್ಯ ಉಪನದಿಗಳು ಅದೆಂದರೆ ಸ್ವಾತ್, ಪಂಜಕೊರ ಮತ್ತು ಕುನಾರ್. ಅಲ್ಲದೆ ಅನೇಕ ಸಣ್ಣ ತೊರೆಗಳೂ ಬಲಭಾಗದಿಂದ ಸಿಂಧೂವನ್ನು ಸೇರುತ್ತವೆ
 • ಸಿಂಧೂ ನದಿಯ ಒಟ್ಟು ಹಿನ್ನೀರಿನ ಪ್ರದೇಶವು 374,700 ಚದರ ಮೈಲಿ. ಇದರಲ್ಲಿ ಸುಮಾರು 56% ಅಂದರೆ 204,300 ಚದರ ಮೈಲಿ ಪಾಕಿಸ್ತಾನದಲ್ಲಿದೆ. ಸಿಂಧೂ ನದಿ ಮತ್ತು ಅದರ ಉಪನದಿಗಳು ವಾರ್ಷಿಕವಾಗಿ ಸರಾಸರಿ ಸುಮಾರು 154 ಮಿಲಿಯನ್ ಎಕರೆ ಅಡಿ(ಘನಅಡಿ)ನೀರಿನ್ನು ತರುತ್ತವೆ@. ಇದರಲ್ಲಿ ಈ ಮೂರು ಪಶ್ಚಿಮ ನದಿಗಳಿಂದ 144,91 ಮಿಲಿಯನ್ ಎಕರೆ ಅಡಿ(ಘನಅಡಿ) ಮತ್ತು 9,14 ಎಂ.ಎ.ಎಫ್ ಪೂರ್ವ ನದಿಗಳಿಂದ ಬರುವುವು. ಈ ಹೆಚ್ಚಿನ ನೀರನ್ನು ಎಂದರೆ 104,73 ಎಂ.ಎ.ಎಫ್ ನೀರಾವರಿ ಬಗ್ಗೆ ತಿರುಗಿಸಲಾಗಿದೆ, 39,94 ಎಂ.ಎ.ಎಫ್ ಸಮುದ್ರಕ್ಕೆ ಹರಿಯುತ್ತದೆ ಮತ್ತು ಬಗ್ಗೆ 9,9 ಎಂ.ಎ.ಎಫ್ ಬಾಷ್ಪೀಕರಣ ಸೇರಿದಂತೆ ವ್ಯವಸ್ಥೆಯ ನಷ್ಟ ದಿಂದ ಹೋಗುವುದು.[೨]
 • @: MAF of water=ಎಂ.ಎ.ಎಫ್.ನೀರು.:154 ಮಿಲಿಯನ್ ಎಕರೆ ಅಡಿ(ಘನಅಡಿ)ನೀರು = 15 ಕೋಟಿ 4 ಲಕ್ಷ ಎಕರೆಯ ಮೇಲೆ 1 ಅಡಿ ಎತ್ತರ ನಿಲ್ಲುವಷ್ಟು ನೀರು.
 • 1 Acre-foot = an acre-foot is 43,560 cubic feet(ಘನಅಡಿ) (1,233 m3)1,233 ಘನಮೀಟರ್.

ಉರಿಯಲ್ಲಿ ಭಯೋತ್ಪಾದಕರ ದಾಳಿ ೨೦೧೬ ಗೆ ಪ್ರತಿಕ್ರಿಯೆ[ಬದಲಾಯಿಸಿ]

ಲೆಹದ ಹತ್ತಿರ ಸಿಂಧೂ ನದಿ.
 • ಕಾಶ್ಮೀರದ ಉರಿಯಲ್ಲಿ ಸೇನಾ ಶಿಬಿರದ ಮೇಲೆ ಪಾಕಿಸ್ತಾನ ಬೆಂಬಲಿತ ಉಗ್ರರು ನಡೆಸಿದ ದಾಳಿ ಈಗ ಎರಡೂ ದೇಶಗಳ ನದಿ ನೀರು ಹಂಚಿಕೆ ಒಪ್ಪಂದದ ಮೇಲೂ ಪರಿಣಾಮ ಬೀರುವ ಹಂತಕ್ಕೆ ಬಂದಿದೆ. ಇಷ್ಟು ದಿನ ಗಡಿಯಾಚೆಯಿಂದ ಬಂದು ಭಾರತದೊಳಗೆ ಉಗ್ರರು ಮನಸ್ವೇಚ್ಛೆ ಹಾವಳಿ ಮಾಡಿದರೂ, ಅದು ರಾಜತಾಂತ್ರಿಕ ಮಟ್ಟದಲ್ಲಿ ಆರೋಪ– ಪ್ರತ್ಯಾರೋಪಗಳಿಗೆ, ಮಾತುಕತೆ ಸ್ಥಗಿತಕ್ಕೆ ಸೀಮಿತವಾಗಿರುತ್ತಿತ್ತು. ಇನ್ನೂ ಹೆಚ್ಚೆಂದರೆ ವಾಣಿಜ್ಯ– ವ್ಯವಹಾರಗಳ ಮೇಲೆ ಒಂದಿಷ್ಟು ಪರಿಣಾಮ ಬೀರುತ್ತಿತ್ತು. ಆದರೆ ಈಗ ನದಿ ನೀರನ್ನೇ ಪಾಕಿಸ್ತಾನವನ್ನು ಮಣಿಸುವ ಅಸ್ತ್ರವಾಗಿ ಬಳಸುವ ಮಾತುಗಳು ಕೇಳಿಬರುತ್ತಿವೆ. ಅದಕ್ಕೆ ಪೂರಕ ಎಂಬಂತೆ ಪ್ರಧಾನಿ ನರೇಂದ್ರ ಮೋದಿ ಅವರು, ‘ನೆತ್ತರು ಮತ್ತು ನೀರು ಜತೆಯಾಗಿ ಹರಿಯಲು ಸಾಧ್ಯವೇ ಇಲ್ಲ’ ಎಂದು ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡುವ ಧಾಟಿಯಲ್ಲಿ ಹೇಳಿದರು.
 • ಹಿಮಾಲಯದಲ್ಲಿ ಹುಟ್ಟಿ ಭಾರತದ ಪ್ರದೇಶಗಳಲ್ಲಿ ಹರಿದು ಪಾಕಿಸ್ತಾನದ ಮೂಲಕ ಅರಬ್ಬಿ ಸಮುದ್ರ ಸೇರುವ ಸಿಂಧೂ ಮತ್ತು ಅದರ ಜಲಾನಯನದ ವ್ಯಾಪ್ತಿಗೆ ಸೇರಿದ ಝೇಲಂ, ಚಿನಾಬ್‌, ರಾವಿ, ಬಿಯಾಸ್‌, ಸಟ್ಲೇಜ್‌ ನದಿಗಳ ನೀರನ್ನು ಹಂಚಿಕೊಳ್ಳುವುದಕ್ಕೆ ಸಂಬಂಧಪಟ್ಟಂತೆ 1960ರಲ್ಲಿ ಮಾಡಿಕೊಂಡ ಒಪ್ಪಂದವು ಮುರಿದು ಬೀಳಬಹುದು. ಇನ್ನೂ ಹೆಚ್ಚೆಂದರೆ ವಾಣಿಜ್ಯ– ವ್ಯವಹಾರಗಳ ಮೇಲೆ ಒಂದಿಷ್ಟು ಪರಿಣಾಮ ಬೀರುತ್ತಿತ್ತು. ಆದರೆ ಈಗ ನದಿ ನೀರನ್ನೇ ಪಾಕಿಸ್ತಾನವನ್ನು ಮಣಿಸುವ ಅಸ್ತ್ರವಾಗಿ ಬಳಸುವ ಮಾತುಗಳು ಕೇಳಿಬಂದವು. ಅದಕ್ಕೆ ಪೂರಕ ಎಂಬಂತೆ ಪ್ರಧಾನಿ ನರೇಂದ್ರ ಮೋದಿ ಅವರು, ‘ನೆತ್ತರು ಮತ್ತು ನೀರು ಜತೆಯಾಗಿ ಹರಿಯಲು ಸಾಧ್ಯವೇ ಇಲ್ಲ’ ಎಂದು ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡುವ ಧಾಟಿಯಲ್ಲಿ ಹೇಳಿದರು. ಅದರ ಅರ್ಥ ತುಂಬ ಸ್ಪಷ್ಟವಾಗಿಯೇ ಇದೆ. ಪಾಕ್‌ಗೆ ಹರಿಯುವ ನೀರನ್ನು ನಿಯಂತ್ರಿಸಿ ಒತ್ತಡ ಹೇರುವ ತಂತ್ರ ಹೊಸದಲ್ಲ; 2008ರಲ್ಲಿ ಆಗಿನ ಸರ್ಕಾರವೂ ಮಾಡಿತ್ತು.
 • ಒಪ್ಪಂದದಂತೆ ನಮ್ಮ ಪಾಲನ್ನು ಪೂರ್ಣವಾಗಿ ಬಳಸಿಕೊಂಡಲ್ಲಿ ಪಾಕ್‌ಗೆ ಹರಿದುಹೋಗುವ ನೀರು ಸಹಜವಾಗಿಯೇ ಕಡಿಮೆ ಆಗುತ್ತದೆ. ಆದರೆ ನಮ್ಮಲ್ಲಿ ಅದಕ್ಕೆ ಅಗತ್ಯವಾದ ಮೂಲಸೌಕರ್ಯ, ಜಲಾಶಯಗಳು, ಕಾಲುವೆಗಳು ಈಗ ಇಲ್ಲ (೨೦೧೬- ೨೦೧೮). ಪಾಕಿಸ್ತಾನ ಹೆಚ್ಚಿಗೆ ಬಳಸಿಕೊಲ್ಲುತ್ತಿರುವ ನೀರನ್ನು ಭಾರತವು ಅಣೆಕಟ್ಟೆ ಕಾಲುವೆಗಳ ಮೂಲಕ ಉಪಯೋಗಿಸಿಕೊಳ್ಳಬಹುದು.[೩]

28 Sep, 2016 ಸ್ಥಿತಿ[ಬದಲಾಯಿಸಿ]

 • 'ನೀರು ಮತ್ತು ರಕ್ತ ಜತೆಯಾಗಿ ಹರಿಯದು,' ಎಂದು ಹೇಳುವ ಮೂಲಕ ಪಾಕಿಸ್ತಾನ ಜತೆಗಿನ 1960ರ ಸಿಂಧೂ ನದಿ ನೀರು ಹಂಚಿಕೆ ಒಪ್ಪಂದದ ಪುನರ್‌ ಪರಿಶೀಲನೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಮುಂದಾದ ಕಾರಣ ಪಾಕಿಸ್ತಾನ ಇದೀಗ ಈ ಒಪ್ಪಂದ ಕುದುರಿಸಿದ್ದ ವಿಶ್ವ ಬ್ಯಾಂಕ್‍ನ್ನು ಸಂಪರ್ಕಿಸಿದೆ.ಬಲ್ಲಮೂಲಗಳ ಪ್ರಕಾರ ಇದೇ ವಿಚಾರಕ್ಕೆ ಸಂಬಂಧಿಸಿ ಪಾಕ್ ಅಂತಾರಾಷ್ಟ್ರೀಯ ನ್ಯಾಯಾಲಯದ ಮೆಟ್ಟಲೇರಿದೆ ಎನ್ನಲಾಗುತ್ತಿದೆ.
 • 56 ವರ್ಷಗಳ ಹಿಂದೆ ಸಹಿ ಹಾಕಲ್ಪಟ್ಟಿದ್ದ ಸಿಂಧೂ ನದಿ ನೀರು ಒಪ್ಪಂದ ಭಾರತ ಮತ್ತು ಪಾಕಿಸ್ತಾನದಲ್ಲಿ ಹರಿಯುವ ಆರು ನದಿಗಳ ನೀರು ಹಂಚಿಕೆಯನ್ನು ನಿಯಂತ್ರಿಸುತ್ತಿದೆ. ಸಿಂಧೂ ನದಿ ನೀರು ಒಪ್ಪಂದ ಪುನರ್‌ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಮೋದಿ ಉಗ್ರರ ವಿರುದ್ಧ ಕ್ರಮ ಕೈಗೊಳ್ಳಲು ಪಾಕಿಸ್ತಾನದ ಮೇಲೆ ಒತ್ತಡ ಹೇರುವ ಉದ್ದೇಶದಿಂದ ನೀರು ಹಂಚಿಕೆ ಒಪ್ಪಂದವನ್ನು ಪ್ರಧಾನಿ ಮರುಪರಿಶೀಲಿಸಲು ನಿರ್ಧರಿಸಿದ್ದರು.
 • ಜಿಯೋ ನ್ಯೂಸ್‌ ವರದಿಯ ಪ್ರಕಾರ ಪಾಕಿಸ್ತಾನದ ಉನ್ನತ ನ್ಯಾಯವಾದಿ, ಅಟಾರ್ನಿ ಜನರಲ್‌ ಅಷ್‌ತರ್‌ ಔಸಾಫ್ ಅಲಿ ಅವರು ವಾಷಿಂಗ್ಟನ್‌ನಲ್ಲಿನ ವಿಶ್ವ ಬ್ಯಾಂಕಿನ ಹಿರಿಯ ಅಧಿಕಾರಿಗಳು ಭೇಟಿಯಾಗಿದ್ದರು. ಪಾಕ್‌ ಪ್ರಧಾನಿ ನವಾಜ್‌ ಷರೀಫ್ ಅವರಿಗೆ ವಿದೇಶ ವ್ಯವಹಾರಗಳ ಸಲಹೆಗಾರರಾಗಿರುವ ಸರ್ತಾಜ್‌ ಅಜೀಜ್‌ ಅವರು "ಒಂದು ವೇಳೆ ಭಾರತ ಸಿಂಧೂ ನದಿ ನೀರು ಹಂಚಿಕೆ ಒಪ್ಪಂದ ರದ್ದು ಪಡಿಸಿದರೆ ಆ ಕೃತ್ಯವು ಪಾಕ್‌ ವಿರುದ್ಧ ಯುದ್ಧದ ಕೃತ್ಯ'ವಾಗುವುದೆಂದು ಎಚ್ಚರಿಸಿದರು.[೪]

ನೀರಿನ ಒಪ್ಪಂದ ಪುನರ್ಪರಿಶೀಲನೆ ಪರಿಣಾಮ[ಬದಲಾಯಿಸಿ]

 • ಪಾಕಿಸ್ತಾನ ಹೃದಯಕ್ಕೆ ಘಾತಮಾಡುವ ಆಕ್ರಮಣಕಾರಿ ನಿಲುವು ತಳೆದು ಭಾರತವು, ಪಾಕಿಸ್ತಾನಕ್ಕೆ ಹರಿಯುವ ನದಿಗಳ ತನ್ನ ಪಾಲನ್ನು ಬಳಸಲು ಸಾಧ್ಯವಿರುವ ಮಾರ್ಗಗಳನ್ನು ಪರಿಶೋಧಿಸಲು ಸಿಂಧೂ ನೀರಿನ ಒಪ್ಪಂದ ಪುನರ್ ಪರಿಶೀಲಿಸುತ್ತಿದೆ.
 • 1. 'ಸ್ಥಿರ ಸಿಂಧೂ ಆಯೋಗ' ಸಭೆಗಳನ್ನು ಅಮಾನತುಗೊಳಿಸಲಾಗಿದೆ; ಒಪ್ಪಂದವು ಮೂರು ಹಂತದ ಕುಂದುಕೊರತೆಗಳ ಪರಿಹಾರ ಒದಗಿಸುತ್ತದೆ. ಅದರಿಂದ ಪರಿಹಾರಕ್ಕೆ ತಡೆ ಬೀಳುವುದು.
 • 2 ಟುಲ್ಬುಲ್ ಯೋಜನೆಯ - ಮರುಪ್ರಾರಂಭ : ಭಾರತ ಝೀಲಂ ನೀರಿನ ನಿಯಂತ್ರಣ ಪಡೆಯುತ್ತದೆ, ಪರಿಣಾಮ ಪಾಕಿಸ್ತಾನದ ಕೃಷಿಗೆ ನೀರಿನ ಕೊರತೆ. ಪಾಕಿಸ್ತಾನದಲ್ಲಿ ಜಲಮಾರ್ಗ-ದೋಣಿ ಸಂಚಾರಕ್ಕೆ ತೊಂದರೆ.
 • 3. ಅಂತರ ಸಚಿವ ಕಾರ್ಯಪಡೆ ರಚನೆ : ಒಪ್ಪಂದದ ಪ್ರಕಾರ, ಭಾರತದ ಪೂರ್ವ ನದಿಗಳ ನೀರನ್ನು (ರವಿ, ಬಿಯಾಸ್, ಸಟ್ಲೇಜ್) ಅನಿಯಂತ್ರಿತ ಬಳಕೆ ಹಕ್ಕು ಹೊಂದಿದೆ, ಆದರೆ ಪಶ್ಚಿಮ ನದಿಗಳ ಕೇವಲ 20% ಬಳಕೆ ಹಕ್ಕು ಹೊಂದಿದೆ,. ಆದರೆ ಭಾರತ ಈ ನದಿಗಳ ನೀರನ್ನು ಬಳಸಲು ಜಲಶಕ್ತಿ ಹಾಗೂ ಕೃಷಿಗೆ ಮಾತ್ರಾ ಎಂಬ ಕೆಲವು ಮಿತಿಗಳಲ್ಲಿ ಬಳಸಲು ಅವಕಾಶ ಇದೆ. ಈಗ ಅದನ್ನು ಭಾರತ ಬಳಸದೆ, ಫಾಕಿಸ್ತಾನವೇ ಬಳಸಿ ಲಾಭ ಪಡೆಯುತ್ತಿದೆ. ಈಗ ಆ ಪುಕ್ಕಟೆ ನೀರಿನ ಲಾಭಕ್ಕೆ ಹೊಡೆತ ಬೀಳುವುದು.
 • ಆದರೆ ಭಾರತಕ್ಕೆ ತನ್ನ ಹಕ್ಕಿನ ಎಲ್ಲಾ ನೀರನ್ನು ಬಳಸಲು ಅನುಕೂಲ ಸೌಲಭ್ಯಗಳ ಕೊರತೆ ಇದೆ. [೫]

ಭಾರತದ ಹಕ್ಕು ಮತ್ತು ನೀರಿನ ಬಳಕೆ[ಬದಲಾಯಿಸಿ]

 • ಸಿಂಧು, ಚಿನಾಬ್ ಮತ್ತು ಝೇಲಂ ನದಿಗಳು ಜಮ್ಮು ಮತ್ತು ಕಾಶ್ಮೀರ ರಾಜ್ಯದಲ್ಲಿ ಹುಟ್ಟಿ ಪಾಕಿಸ್ತಾನಕ್ಕೆ ಸೇರುತ್ತವೆ. ಇವು ಪಶ್ಚಿಮದ ನದಿಗಳು. ಸಿಂಧು ನದಿ ನೀರಿನ ಹಂಚಿಕೆಯ ಒಪ್ಪಂದದ ಪ್ರಕಾರ – ನದಿಯ ಒಡೆತನ ಪಾಕಿಸ್ತಾನಕ್ಕೆ ಸೇರಿದ್ದರೂ ಅದರ ಮೇಲೆ ಭಾರತಕ್ಕೆ ಸಿಂಹಪಾಲಿದೆ. ಹಾಗಿದ್ದರೂ ತನ್ನ ಹಕ್ಕಿನ ನೀರನ್ನು ಭಾರತ ಇದುವರೆಗೂ ಸಂಪೂರ್ಣ ಬಳಕೆ ಮಾಡಿಕೊಂಡಿರಲಿಲ್ಲ. ಅದು ಯಾವುದೇ ನಿಯಂತ್ರಣವಿಲ್ಲದೆ ಪಾಕ್‌ನೆಡೆಗೆ ಹರಿದು ಹೋಗುತ್ತಿತ್ತು. ಬದಲಾದ ಸನ್ನಿವೇಶದಲ್ಲಿ ಭಾರತವೀಗ ತನ್ನ ಹಕ್ಕಿನ ನೀರನ್ನು ಬಳಸಿಕೊಳ್ಳಲು ಮುಂದಾಗಿದೆ. ಅದು ಈಗ ಚರ್ಚೆಯಲ್ಲಿರುವ ಸಂಗತಿ.
 • 1960ರಲ್ಲಿ ಜವಾಹರಲಾಲ್ ನೆಹರು ಮತ್ತು ಪಾಕಿಸ್ತಾನದ ಅಯೂಬ್ ಖಾನ್, ವಿಶ್ವಸಂಸ್ಥೆಯ ನೇತೃತ್ವದಲ್ಲಿ ‘ಸಿಂಧು ನದಿ ನೀರಿನ ಹಂಚಿಕೆಯ ಒಪ್ಪಂದ’ಕ್ಕೆ ಸಹಿ ಮಾಡಿದ್ದರು.ಪ್ರಮುಖ ನದಿಗಳಿಲ್ಲದ ಪಾಕಿಸ್ತಾನಕ್ಕೆ ಭವಿಷ್ಯದಲ್ಲಿ ನೀರಿನ ಕೊರತೆಯಾಗಬಾರದೆಂಬ ದೂರದರ್ಶಿತ್ವದಲ್ಲಿ ಮಾಡಿಕೊಂಡ ಒಪ್ಪಂದ ಆಗಿತ್ತದು. ಇದರ ಪ್ರಕಾರ ಭಾರತಕ್ಕೆ 9.12 ಲಕ್ಷ ಎಕರೆ ಪ್ರದೇಶವನ್ನು ನೀರಾವರಿಗೆ ಒಳಪಡಿಸುವ ಹಕ್ಕಿದೆ. ಆ ಹಕ್ಕನ್ನು ಮತ್ತೆ 4.2 ಲಕ್ಷಕ್ಕೆ ವಿಸ್ತರಿಸಲೂಬಹುದು. ಆದರೆ ಭಾರತ ಕೇವಲ 8 ಲಕ್ಷ ಎಕರೆಗೆ ಮಾತ್ರ ನೀರಾವರಿ ಸೌಕರ್ಯವನ್ನು ಮಾಡಿಕೊಂಡಿದೆ. ಹಾಗೆಯೇ ಈ ಮೂರು ನದಿ ನೀರನ್ನು ಬಳಸಿಕೊಂಡು 18,600 ಮೆಗಾವಾಟ್ ವಿದ್ಯುತ್ ಉತ್ಪಾದಿಸಿಕೊಳ್ಳಬಹುದು. ಆದರೆ ಈಗ ಕೇವಲ 3,034 ಮೆಗಾವಾಟ್ ವಿದ್ಯುತ್ ಮಾತ್ರ ಉತ್ಪಾದಿಸಲಾಗುತ್ತಿದೆ.
 • ಈಗ ಸಿಂಧು ನದಿ ನೀರಿನ ಹಂಚಿಕೆಯ ಒಪ್ಪಂದದ ಸದ್ವಿನಿಯೋಗ ಮಾಡಿಕೊಂಡರೆ, ಬಹುಶಃ ಜಮ್ಮು–ಕಾಶ್ಮೀರ ಸೇರಿದಂತೆ ಈಶಾನ್ಯ ರಾಜ್ಯಗಳು ಭಾರತದ ಮುಖ್ಯಧಾರೆಯೊಳಗೆ ತಮ್ಮನ್ನು ತಾವು ಗುರುತಿಸಿಕೊಳ್ಳಲು ಒಂದು ಪ್ರೇರಣೆ ಆಗಬಹುದೇನೊ? ಆದರೆ ಹಿಮಾಲಯ ವಲಯದಲ್ಲಿ ಅಭಿವೃದ್ಧಿ ಯೋಜನೆಗಳನ್ನು ಕೈಗೆತ್ತಿಕೊಳ್ಳುವಾಗ ಒಂದು ಎಚ್ಚರಿಕೆಯನ್ನು ಸದಾ ಗಮನದಲ್ಲಿಟ್ಟುಕೊಳ್ಳಬೇಕು. ಭಾರತದ ಇತರೆಡೆಗಳಲ್ಲಿನ ಪರ್ವತಗಳಿಗೆ, ಅದರಲ್ಲೂ ಪಶ್ಚಿಮಘಟ್ಟಗಳಿಗೆ ಹೋಲಿಸಿದರೆ ಹಿಮಾಲಯವಿನ್ನೂ ಎಳಸು. ಅದರ ಧಾರಣಾಶಕ್ತಿ ಅತ್ಯಂತ ದುರ್ಬಲವಾದುದು. 2013ರಲ್ಲಿ ಉತ್ತರಾಖಂಡದಲ್ಲಾದ ಮೇಘಸ್ಪೋಟ ಮತ್ತು ಭೂಕುಸಿತಕ್ಕೆ ಅಲ್ಲಿ ಎಗ್ಗಿಲ್ಲದೆ ಕಟ್ಟಿದ ಅಣೆಕಟ್ಟುಗಳು ಮತ್ತು ಜಲವಿದ್ಯುತ್ ಯೋಜನೆಗಳೇ ಕಾರಣ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.[೬]

ವಿಶ್ವ ಬ್ಯಾಂಕ್ ಮೊರೆ ಹೋದ ಪಾಕ್[ಬದಲಾಯಿಸಿ]

 • 28 Sep, 2016
 • 'ನೀರು ಮತ್ತು ರಕ್ತ ಜತೆಯಾಗಿ ಹರಿಯದು,' ಎಂದು ಹೇಳುವ ಮೂಲಕ ಪಾಕಿಸ್ತಾನ ಜತೆಗಿನ 1960 ರ ಸಿಂಧೂ ನದಿ ನೀರು ಹಂಚಿಕೆ ಒಪ್ಪಂದದ ಪುನರ್‌ ಪರಿಶೀಲನೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಮುಂದಾದ ಕಾರಣ ಪಾಕಿಸ್ತಾನ ಇದೀಗ ಈ ಒಪ್ಪಂದ ಕುದುರಿಸಿದ್ದ ವಿಶ್ವ ಬ್ಯಾಂಕ್‍ನ್ನು ಸಂಪರ್ಕಿಸಿದೆ. ಬಲ್ಲಮೂಲಗಳ ಪ್ರಕಾರ ಇದೇ ವಿಚಾರಕ್ಕೆ ಸಂಬಂಧಿಸಿ ಪಾಕ್ ಅಂತಾರಾಷ್ಟ್ರೀಯ ನ್ಯಾಯಾಲಯದ ಮೆಟ್ಟಲೇರಿದೆ ಎನ್ನಲಾಗುತ್ತಿದೆ.
 • 56 ವರ್ಷಗಳ ಹಿಂದೆ ಸಹಿ ಹಾಕಲ್ಪಟ್ಟಿದ್ದ ಸಿಂಧೂ ನದಿ ನೀರು ಒಪ್ಪಂದ ಭಾರತ ಮತ್ತು ಪಾಕಿಸ್ತಾನದಲ್ಲಿ ಹರಿಯುವ ಆರು ನದಿಗಳ ನೀರು ಹಂಚಿಕೆಯನ್ನು ನಿಯಂತ್ರಿಸುತ್ತಿದೆ. ಸಿಂಧೂ ನದಿ ನೀರು ಒಪ್ಪಂದ ಪುನರ್‌ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಮೋದಿ ಉಗ್ರರ ವಿರುದ್ಧ ಕ್ರಮ ಕೈಗೊಳ್ಳಲು ಪಾಕಿಸ್ತಾನದ ಮೇಲೆ ಒತ್ತಡ ಹೇರುವ ಉದ್ದೇಶದಿಂದ ನೀರು ಹಂಚಿಕೆ ಒಪ್ಪಂದವನ್ನು ಪ್ರಧಾನಿ ಮರುಪರಿಶೀಲಿಸಲು ನಿರ್ಧರಿಸಿದ್ದರು.
 • ಜಿಯೋ ನ್ಯೂಸ್‌ ವರದಿಯ ಪ್ರಕಾರ ಪಾಕಿಸ್ತಾನದ ಉನ್ನತ ನ್ಯಾಯವಾದಿ, ಅಟಾರ್ನಿ ಜನರಲ್‌ ಅಷ್‌ತರ್‌ ಔಸಾಫ್ ಅಲಿ ಅವರು ವಾಷಿಂಗ್ಟನ್‌ನಲ್ಲಿನ ವಿಶ್ವ ಬ್ಯಾಂಕಿನ ಹಿರಿಯ ಅಧಿಕಾರಿಗಳು ಭೇಟಿಯಾಗಿದ್ದಾರೆ. ಪಾಕ್‌ ಪ್ರಧಾನಿ ನವಾಜ್‌ ಷರೀಫ್ ಅವರಿಗೆ ವಿದೇಶ ವ್ಯವಹಾರಗಳ ಸಲಹೆಗಾರರಾಗಿರುವ ಸರ್ತಾಜ್‌ ಅಜೀಜ್‌ ಅವರು "ಒಂದು ವೇಳೆ ಭಾರತ ಸಿಂಧೂ ನದಿ ನೀರು ಹಂಚಿಕೆ ಒಪ್ಪಂದ ರದ್ದು ಪಡಿಸಿದರೆ ಆ ಕೃತ್ಯವು ಪಾಕ್‌ ವಿರುದ್ಧ ಯುದ್ಧದ ಕೃತ್ಯ'ವಾಗುವುದೆಂದು ಎಚ್ಚರಿಸಿದ್ದಾರೆ.[೭]

ಕಿಶನ್‌ಗಂಗಾ ಮತ್ತು ರಾಟ್ಲೆಯಲ್ಲಿ ಜಲ ವಿದ್ಯುತ್‌ ಘಟಕಕ್ಕೆ ವಿಶ್ವಬ್ಯಾಂಕ್‌ ಒಪ್ಪಿಗೆ[ಬದಲಾಯಿಸಿ]

 • ಭಾರತವು ಝೇಲಂ ಮತ್ತು ಚೆನಬ್‌ ನದಿ ವ್ಯಾಪ್ತಿಯ ಕಿಶನ್‌ಗಂಗಾದಲ್ಲಿ 330 ಮೆಗಾವಾಟ್‌ ಮತ್ತು ರಾಟ್ಲೆಯಲ್ಲಿ 850 ಮೆಗಾವಾಟ್‌ ಸಾಮರ್ಥ್ಯದ ಜಲ ವಿದ್ಯುತ್‌ ಘಟಕಗಳನ್ನು ನಿರ್ಮಿಸಲು ಉದ್ದೇಶಿಸಿದ್ದು, ಪಾಕಿಸ್ತಾನವು ಈ ಯೋಜನೆಗಳ ಅನುಷ್ಠಾನಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿತ್ತು. ಈ ಯೋಜನೆಯ ವಿನ್ಯಾಸದ ಬಗ್ಗೆ ಆತಂಕ ವ್ಯಕ್ತಪಡಿಸಿ ೨೦೧೬ರಲ್ಲಿ ಪಾಕಿಸ್ತಾನ ವಿಶ್ವ ಬ್ಯಾಂಕ್‌ ಮೊರೆ ಹೋಗಿತ್ತು. ಆದರೆ ವಿಶ್ವಬ್ಯಾಂಕ್‌, ಜಮ್ಮು ಮತ್ತು ಕಾಶ್ಮೀರದ ಕಿಶನ್‌ಗಂಗಾ ಮತ್ತು ರಾಟ್ಲೆಯಲ್ಲಿ ಜಲ ವಿದ್ಯುತ್‌ ಘಟಕಗಳನ್ನು ನಿರ್ಮಿಸಲು ಭಾರತಕ್ಕೆ ಅನುಮತಿನೀಡಿ, ಒಪ್ಪಿಗೆ ಸೂಚಿಸಿದೆ. ವಿಶ್ವಬ್ಯಾಂಕ್‌ನ ಈ ನಿರ್ಧಾರ ಭಾರತಕ್ಕೆ ಮಹತ್ವದ್ದಾಗಿದೆ.[೮]

ನೋಡಿ[ಬದಲಾಯಿಸಿ]

ಹೊರ ಸಂಪರ್ಕ[ಬದಲಾಯಿಸಿ]

ಉಲ್ಲೇಖ[ಬದಲಾಯಿಸಿ]

 1. "Indus Waters Treaty 1960"
 2. Irrigation; Indus Waters Treaty
 3. "ಪಾಕ್‌ ಜತೆ ನದಿ ನೀರು ಹಂಚಿಕೆ ಒಪ್ಪಂದ". Archived from the original on 2016-09-28. Retrieved 2016-09-29.
 4. ಸಿಂಧೂ ನದಿ ನೀರು ಹಂಚಿಕೆ ಒಪ್ಪಂದ
 5. to use its share of water of rivers flowing into Pakistan:
 6. "ಭಾರತ–ಪಾಕ್‌ ನಡುವಣ ಸ್ನೇಹ'ಸಿಂಧು';ಉಷಾ ಕಟ್ಟೆಮನೆ;2 Oct, 2016". Archived from the original on 2016-10-02. Retrieved 2016-10-02.
 7. ಸಿಂಧೂ ನದಿ ನೀರು ಹಂಚಿಕೆ ಒಪ್ಪಂದ
 8. http://www.prajavani.net/news/article/2017/08/03/510729.html Archived 2017-08-03 ವೇಬ್ಯಾಕ್ ಮೆಷಿನ್ ನಲ್ಲಿ. ಕಿಶನ್‌ಗಂಗಾ ಯೋಜನೆಗೆ ಒಪ್ಪಿಗೆ;ಪಿಟಿಐ;3 Aug, 2017