ಜಮ್ಮು ಮತ್ತು ಕಾಶ್ಮೀರ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಜಮ್ಮು ಮತ್ತು ಕಾಶ್ಮೀರ
Map of India with the location of ಜಮ್ಮು ಮತ್ತು ಕಾಶ್ಮೀರ highlighted.
ರಾಜಧಾನಿ
 - ಸ್ಥಾನ
ಜಮ್ಮು (ಚಳಿಗಾಲ); ಶ್ರೀನಗರ (ಬೇಸಿಗೆಕಾಲ)
 - 33.45° N 76.24° E
ಅತಿ ದೊಡ್ಡ ನಗರ ಜಮ್ಮು
ಜನಸಂಖ್ಯೆ (2004)
 - ಸಾಂದ್ರತೆ
10,069,917 (೧೮ನೇ)
 - 45.31/km²
ವಿಸ್ತೀರ್ಣ
 - ಜಿಲ್ಲೆಗಳು
222,236 km² (6ನೇ)
 - 22
ಸಮಯ ವಲಯ IST (UTC+5:30)
ಸ್ಥಾಪನೆ
 - ರಾಜ್ಯಪಾಲ
 - ಮುಖ್ಯ ಮಂತ್ರಿ
 - ಶಾಸನಸಭೆ (ಸ್ಥಾನಗಳು)
{{{established_date}}}
 - ಎಸ್. ಕೆ. ಸಿನ್ಹಾ
 - ಉಮರ್ ಅಬ್ದುಲ್ಲಾ
 - ಎರಡು ಮನೆಗಳು (೮೯ + ೩೬)
ಅಧಿಕೃತ ಭಾಷೆ(ಗಳು) ಉರ್ದು, ಡೋಗ್ರಿ, ಕಾಶ್ಮೀರಿ
Abbreviation (ISO) IN-JK
ಅಂತರ್ಜಾಲ ತಾಣ: www.jammukashmir.nic.in
Jammu and Kashmir Logo.jpg

ಜಮ್ಮು ಮತ್ತು ಕಾಶ್ಮೀರ ರಾಜ್ಯದ ಮುದ್ರೆ

ಜಮ್ಮು ಮತ್ತು ಕಾಶ್ಮೀರ[ಬದಲಾಯಿಸಿ]

ಜಮ್ಮು ಮತ್ತು ಕಾಶ್ಮೀರ - ಭಾರತದ ರಾಜ್ಯಗಳಲ್ಲೊಂದು. ಈ ರಾಜ್ಯದ ಹಲವಾರು ಪ್ರಾಂತ್ಯಗಳು "ಪಾಕಿಸ್ತಾನ ಆಕ್ರಮಿತ ಕಾಶ್ಮೀರ" ('Pakistan Occupied Kashmir') ಎಂದು ಗುರುತಿಸಲ್ಪಟ್ಟಿದೆ. ಭಾರತ ಮತ್ತು ಪಾಕಿಸ್ತಾನ ದೇಶಗಳ ನಡುವೆ ಈ ರಾಜ್ಯದ ಬಗೆಗಿನ ಗಡಿವಿವಾದ ಸಂಪೂರ್ಣವಾಗಿ ಇನ್ನೂ ಬಗೆಹರಿದಿಲ್ಲ.

ಚಳಿಗಾಲದಲ್ಲಿ ಜಮ್ಮು ಈ ರಾಜ್ಯದ ರಾಜಧಾನಿಯಾಗಿದ್ದು, ಬೇಸಿಗೆಕಾಲದಲ್ಲಿ ಶ್ರೀನಗರವು ಇಲ್ಲಿನ ರಾಜಧಾನಿಯಾಗಿ ಕಾರ್ಯನಿರ್ವಹಿಸುತ್ತದೆ.

ರಾಜಕೀಯ[ಬದಲಾಯಿಸಿ]

ಜಮ್ಮು-ಕಾಶ್ಮೀರ ವಿಧಾನಸಭೆ ಚುನಾವಣೆ 2014
  • ಜಮ್ಮು-ಕಾಶ್ಮೀರ ಮತ್ತು ಜಾರ್ಖಂಡ್‌ನಲ್ಲಿ Nov 25, 2014 ಮಂಗಳವಾರ ನಡೆದ ಮೊದಲ ಹಂತದ ಚುನಾವಣೆಯಲ್ಲಿ ಉತ್ತಮ ಮತದಾನವಾಗಿದೆ.
  • ಜಮ್ಮು-ಕಾಶ್ಮೀರದ 15, ವಿಧಾನಸಭೆ ಕ್ಷೇತ್ರಗಳಿಗೆನಡೆದ ಚುನಾವಣೆಯಲ್ಲಿ ಶೇ.70 ಮತದಾನವಾಗಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ 2008ರ ವಿಧಾನಸಭೆ ಚುನಾವಣೆಯಲ್ಲಿ ಶೇ.52.63 ಮತದಾನವಾಗಿತ್ತು.
  • 7 ಸಚಿವರು ಸೇರಿ 12 ಶಾಸಕರನ್ನು ಒಳಗೊಂಡು ಒಟ್ಟು 123 ಅಭ್ಯರ್ಥಿಗಳು ಕಣದಲ್ಲಿದ್ದಾರೆ. 5,49,698 ಪುರುಷರು, 5,00539 ಮಹಿಳೆಯರು , 13 ಮಂಗಳಮುಖಿಯರು ಸೇರಿದಂತೆ 15 ಕ್ಷೇತ್ರಗಳಲ್ಲಿ 10,502,50 ಮತದಾರರಿದ್ದಾರೆ.
ಜಮ್ಮು ಮತ್ತು ಕಾಶ್ಮೀರ 23-12-2014 ಫಲಿತಾಂಶ
  • ಜಮ್ಮು ಮತ್ತು ಕಾಶ್ಮೀರದ ಒಟ್ಟು ಸ್ಥಾನಗಳು 87; ಅದರಲ್ಲಿ ಜಮ್ಮು ಭಾಗದಲ್ಲಿ 37, ಲಡಾಖ್ ಭಾಗದಲ್ಲಿ 4, ಮುಸ್ಲಿಮ್ ಬಹುಸಂಖ್ಯಾತ ಭಾಗದಲ್ಲಿ 46 ಸ್ಥಾನಗಳಿವೆ. ಬಿಜೆಪಿಗೆ ಜಮ್ಮು ಭಾಗದಲ್ಲಿಯೇ 25 ಸ್ಥಾನಗಳು ಬಂದಿವೆ. ಉಳಿದ ಕಡೆ ಅದರ ಗಳಿಕೆ ಶೂನ್ಯ.ಆಗನ ಜನಪ್ರತಿನಿಧಿ ಶೇಕ್ ಅಬ್ದುಲ್ಲಾ ಅವರು ಮುಂದಾಲೋಚನೆ ಮಾಡಿ ಕಾಶ್ಮೀರ ಭಾಗಕ್ಕೆ ಯಾವಾಗಲೂ ಬಹುಮತ ಬರುವಂತೆ ವಿಧಾನಸಭೆ ಸ್ಥಾನಗಳನ್ನು ನಿಗದಿಗೋಳಿಸಿದ್ದಾರೆ. ಇನ್ನೂ 11(?)ಕ್ಷೇತ್ರಗಳು ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿದೆ.
ಪಕ್ಷ ಗೆಲವು ಶೇ.ವೋಟು ವೋಟು ಗಳಿಕೆ ವ್ಯತ್ಯಾಸ
ಭಾರತೀಯ ಜನತಾ ಪಕ್ಷ 25 23.0%, 1107194 +14
ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್ವಾದಿ) (BSP ?) 1 1.4%, 67786
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 12 18.0%, 867883 -5
ಜಮ್ಮು ಮತ್ತು ಕಾಶ್ಮೀರ ನ್ಯಾಷನಲ್ ಕಾನ್ಫರೆನ್ಸ್ 15 20.8%, 1000693 -12
ಜಮ್ಮು ಮತ್ತು ಕಾಶ್ಮೀರ ಪೀಪಲ್ಸ್ ಡೆಮಾಕ್ರಟಿಕ್ ಪಕ್ಷ 28 22.7%, 1092203 +7
ಜಮ್ಮು ಮತ್ತು ಕಾಶ್ಮೀರ ಜನರ People ಕಾನ್ಫರೆನ್ಸ್ 2 1.9%, 93182
ಜಮ್ಮು ಮತ್ತು ಕಾಶ್ಮೀರ ಜನರು ಪ್ರಜಾಸತ್ತಾತ್ಮಕ ರಂಗ (ಸೆಕ್ಯುಲರ್) 1 0.7%, 34886
ಸ್ವತಂತ್ರ 3 6.8%, 329881
ಇತರೆ- JKDPN+ JKNPP . 2.50%, 95941+26221 -4
ಒಟ್ಟು 87 . .
  • ಜಮ್ಮು ಕಾಶ್ಮೀರದಲ್ಲಿ 2015ಜನವರಿ 08 ರಿಂದ ರಾಜ್ಯಪಾಲರ ಆಡಳಿತ ಜಾರಿಗೆ ಬಂದಿದೆ. (ಸರ್ಕಾರದ ಮೂಲಗಳು TOI-Bharti Jain,TNN|Jan 9, 2015.)


ಪೀಪಲ್ಸ್‌ ಡೆಮಾಕ್ರಟಿಕ್‌ ಪಕ್ಷದ(ಪಿಡಿಪಿ) ಮುಖ್ಯಸ್ಥ ಮುಫ್ತಿ ಮೊಹಮ್ಮದ್‌ ಸಯೀದ್‌ ಅವರು ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿಯಾಗಿ 01/03/2015ಭಾನುವಾರ ಪ್ರಮಾಣ ವಚನ ಸ್ವೀಕರಿಸಿದರು. ಈ ಮೂಲಕ 49 ದಿನಗಳ ರಾಜ್ಯಪಾಲರ ಆಡಳಿತ ತೆರೆ ಕಂಡಿತು.
ಸಯೀದ್ ಅವರ ಬಳಿಕ ಬಿಜೆಪಿಯ ನಿರ್ಮಲ್ ಸಿಂಗ್ ಅವರು ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಬಳಿಕ ಪಿಡಿಪಿಯ 12 ಹಾಗೂ ಬಿಜೆಪಿ 11 ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.(prajavani.[[೧]]

ನೋಡಿ[ಬದಲಾಯಿಸಿ]