ಜಾರ್ಖಂಡ್ ಮತ್ತು ಜಮ್ಮು ಮತ್ತು ಕಾಶ್ಮೀರ 2014ರ ಅಸೆಂಬ್ಲಿ ಚುನಾವಣೆ

ವಿಕಿಪೀಡಿಯ ಇಂದ
Jump to navigation Jump to search


ಝಾರ್ಖಂಡ್ ಮತ್ತು ಜಮ್ಮು ಮತ್ತು ಕಾಶ್ಮೀರ 2014 ಚುನಾವಣಾ ದಿನಾಂಕ[ಬದಲಾಯಿಸಿ]

ಚುನಾವಣೆ ದಿನಾಂಕ
ಹಂತ 1 25 ನೇ ನವೆಂಬರ್, 2014
2 ನೇ ಹಂತದ 2 ನೇ ಡಿಸೆಂಬರ್, 2014
ಹಂತ 3 9 ಡಿಸೆಂಬರ್, 2014
ಹಂತ 4 14 ನೇ ಡಿಸೆಂಬರ್, 2014
ಹಂತ 5 20 ಡಿಸೆಂಬರ್, 2014
ಎಣಿಕೆಯ ದಿನಾಂಕ 23 ಡಿಸೆಂಬರ್ 2014
ಪೂರ್ಣಗೊಂಡ ದಿನಾಂಕ 29 ಡಿಸೆಂಬರ್2014
 • ಜಮ್ಮು ಮತ್ತು ಕಾಶ್ಮೀರದ 15 ಕ್ಷೇತ್ರಗಳಿಗೆ 25 ನೇ ನವೆಂಬರ್, 2014 ರಂದು ನಡೆದ ಮೊದಲ ಹಂತದ ಚುನಾವಣೆಯಲ್ಲಿ ಶೇ.71.28ರಷ್ಟು ಮತದಾನವಾಗಿತ್ತು
 • ಜಮ್ಮು-ಕಾಶ್ಮೀರ ವಿಧಾನಸಭೆಗೆ 2 ನೇ ಡಿಸೆಂಬರ್, 2014ಮಂಗಳವಾರ ನಡೆದ ಎರಡನೇ ಹಂತದ ಚುನಾವಣೆಯಲ್ಲಿ ಶೇ.71ರಷ್ಟು ಮತದಾನವಾಗಿದೆ. ಇತ್ತ ಜಾರ್ಖಂಡ್‌ನಲ್ಲಿ ಶೇ.65.46ರಷ್ಟು ಮತದಾನವಾಗಿದೆ.
 • 11 ಹಾಲಿ ಶಾಸಕರು ಸೇರಿದಂತೆ 175 ಅಭ್ಯರ್ಥಿಗಳು ಕಣದಲ್ಲಿದ್ದು, ಉಧಮ್‌ಪುರ(ಶೇ.76), ಪೂಂಛ್(ಶೇ.75), ಕುಪ್ವಾರಾ(ಶೇ.68), ಕುಲ್ಗಾಮ್(ಶೇ.60) ಮತ್ತು ರಿಯಾಸಿ(ಶೇ.80) ಜಿಲ್ಲೆಗಳಲ್ಲಿ ಹೆಚ್ಚಿನ ಮತದಾನವಾಗಿದೆ.
 • ಜಮ್ಮು ಮತ್ತು ಕಾಶ್ಮೀರದಲ್ಲಿ 2014ರ ಲೋಕಸಭೆ ಚುನಾವಣೆಯಲ್ಲಿ ಶೇ.61.04 ಮತ್ತು 2008ರ ವಿಧಾನಸಭೆ ಚುನಾವಣೆಯಲ್ಲಿ ಶೇ.68.79ರಷ್ಟು ಮತದಾನವಾಗಿತ್ತು.
 • ನಕ್ಸಲ್ ಪೀಡಿತ 13 ಕ್ಷೇತ್ರಗಳಲ್ಲಿ 25 ನೇ ನವೆಂಬರ್, 2014 ರಂದು ಮೊದಲ ಹಂತದ ಚುನಾವಣೆ ನಡೆದಿದ್ದು, ಆಗ ಶೇ.61.92ರಷ್ಟು ಮತದಾನವಾಗಿತ್ತು.
 • ಜಾರ್ಖಂಡ್ ವಿಧಾನಸಭೆ ಚುನಾವಣೆಯ 2 ನೇ ಡಿಸೆಂಬರ್, 2014ರಂದು ಎರಡನೇ ಹಂತದಲ್ಲಿ ಶೇ.65.46ರಷ್ಟು ಮತದಾನವಾಗಿದೆ
 • ಜಾರ್ಖಂಡ್‌ನಲ್ಲಿ ಶೇ.61
 • ಮೂರನೇ ಹಂತದ ಝಾರ್ಖಂಡ್ ಚುನಾವಣೆಯಲ್ಲಿ 9 ಡಿಸೆಂಬರ್, 2014 ಮಂಗಳವಾರ ಶೇ.60.89ರಷ್ಟು ಮತದಾನವಾಗಿದೆ. 17 ಕ್ಷೇತ್ರಗಳಿಗೆ ಚುನಾವಣೆ ನಡೆದಿದ್ದು, ಹೆಚ್ಚಿನ ಭದ್ರತಾ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು. ರಾಂಚಿಯಲ್ಲಿ ಅತಿ ಕಡಿಮೆ(ಶೇ.44), ಸಿಲ್ಲಿಯಲ್ಲಿ ಅತಿ ಹೆಚ್ಚು(ಶೇ.74.77) ಮತದಾನವಾಗಿದೆ.
 • ಜಮ್ಮು ಕಾಶ್ಮೀರದಲ್ಲಿ ಮೊದಲ ಹಾಗೂ ಎರಡನೇ ಹಂತದ ಚುನಾವಣೆಯಲ್ಲಿ ಶೇ.72ರಷ್ಟು ಮತದಾನವಾಗಿತ್ತು. ಮೂರನೇ ಹಂತದಲ್ಲಿ ಮತ ಪ್ರಮಾಣ ಶೇ.58ಕ್ಕೆ ಕುಸಿದಿದೆ. ಕಳೆದ ವಿಧಾನಸಭೆ ಚುನಾವಣೆ(49)ಗೆ ಹೋಲಿಸಿದರೆ ದಾಖಲೆ ಮತದಾನವಾಗಿದೆ.
 • ಹಂತ 4||14 ನೇ ಡಿಸೆಂಬರ್, 2014 :ಜಾರ್ಖಂಡ್ ವಿಧಾನಸಭಾ ಚುನಾವಣೆ- ಚುನಾವಣೆಯಲ್ಲಿ15 ಕ್ಷೇತ್ರಗಳಲ್ಲಿ 61 % ಮತದಾನ ವರದಿಯಾಗಿದೆ .
 • ಹಂತ 5||14 ನೇ ಡಿಸೆಂಬರ್, 2014 ಭಾನುವಾರ :ಜಮ್ಮು ಮತ್ತು ಕಾಶ್ಮೀರ ಪ್ರತ್ಯೇಕತಾವಾದಿಗಳು ನೀಡಿರುವ ಬಹಿಷ್ಕಾರ ಕರೆಯನ್ನು ಮತದಾರರು ಕಡೆಗಣಿಸಿ ವಿಧಾನಸಭಾ ಚುನಾವಣೆಯಲ್ಲಿ ಉಪಾಂತ ಹಂತದಲ್ಲಿ ಶೀತ ಹವಾಮಾನದಲ್ಲೂ ಶೇಕಡಾ 49 ಹಾಜರಾತಿ/ವೋಟು ಆಗಿದೆ .
 • ಹಂತ 4 : ದಿನಾಂಕ 20-12-2014 ಶನಿವಾರ ಜಾರ್ಖಂಡ್ ಶೇಕಡಾ ಶೇ.71ರಷ್ಟು ದಾಖಲೆ ಮತದಾನ ಕಂಡಿತು:ಜಮ್ಮು ಕಾಶ್ಮೀರ ವಿಧಾನಸಭಾ ಚುನಾವಣೆ ಶೇಕಡಾ 65 ಮತದಾನ ;ಇದು ಎರಡು ದಶಕಗಳಲ್ಲಿ ಅತಿ ಹೆಚ್ಚಿನ ಮತದಾನ.
 • ಎಲ್ಲ ಹಂತಗಳು ಸೇರಿ ಒಟ್ಟಾರೆ ಈ ಸರ್ತಿ ರಾಜ್ಯದಲ್ಲಿ ಶೇ.65ರಷ್ಟು ಮತದಾರರು ಹಕ್ಕು ಚಲಾಯಿಸಿದ್ದಾರೆ. ಕಣಿವೆಯಲ್ಲಿ ಕಳೆದ 2008ರ ಚುನಾವಣೆಯಲ್ಲಿ ಶೇ.61.42, 2002ರಲ್ಲಿ ಶೇ.43.09ರಷ್ಟು ಮತದಾನವಾಗಿತ್ತು. ಜಾರ್ಖಂಡ್‌ನಲ್ಲಿ ಈ ಬಾರಿ ಎಲ್ಲ ಹಂತಗಳ ಮತದಾನ ಸೇರಿ ಶೇ.66ರಷ್ಟು ಮತದಾನವಾಗಿದೆ. 2004ರ ವಿಧಾನಸಭೆ ಚುನಾವಣೆಯಲ್ಲಿ ಶೇ.54.2ರಷ್ಟು ಮತದಾನವಾಗಿದ್ದು, ಈ ದಾಖಲೆ ಈಗ ಪುಡಿಯಾಗಿದೆ.
 • ಡಿ.23ರಂದು ಉಭಯ ರಾಜ್ಯಗಳ ಮತ ಎಣಿಕೆ ನಡೆಯಲಿದೆ.

2009 ಮತ್ತು 2014ರ ಜಾರ್ಖಂಡ್ ಫಲಿತಾಂಶ[ಬದಲಾಯಿಸಿ]

 • ದಿ.28-12-2014 ಭಾನುವಾರ , ಜಾರ್ಖಂಡ್‌ನ 10 ನೇ ಮುಖ್ಯಮಂತ್ರಿಯಾಗಿ ಬಿಜೆಪಿಯ ಹಿರಿಯ ನಾಯಕ ರಘುವರ ದಾಸ್ ಭಾನುವಾರ ಪ್ರಮಾಣ ವಚನ ಸ್ವೀಕರಿಸಿದರು.

ಜಾರ್ಖಂಡ್‌ನ ಬುಡಕಟ್ಟಿಗೆ ಸೇರದ ಜಾರ್ಖಂಡ್‌ನ ಮೊದಲ ಮುಖ್ಯಮಂತ್ರಿ ರಘುವರ ದಾಸ್, ಎರಡು ಪಕ್ಷಗಳ ಸಮ್ಮಿಶ್ರ ಸರಕಾರದ ನೇತೃತ್ವ ವಹಿಸಲ್ಲಿದ್ದಾರೆ. ಪದಚ್ಯುತ ಮುಖ್ಯಮಂತ್ರಿ ಹೇಮಂತ್ ಸೋರೆನ್ ವಿರುದ್ಧ ಜಯಸಾಧಿಸಿರುವ ಲೂಯಿಸ್ ಮರಾಂಡಿ ಬಿಜೆಪಿಯ ಸಚಿವರು. ಚಂದ್ರ ಪ್ರಕಾಶ್ ಚೌಧರಿ ಸಂಪುಟದಲ್ಲಿ ಎಜೆಎಸ್‌ಯುವನ್ನು ಪ್ರತಿನಿಧಿಸಲ್ಲಿದ್ದಾರೆ.

 • ರಾಜ್ಯಪಾಲ ಸೈಯದ್‌ ಅಹಮ್ಮದ್‌ ಅವರು ಬಿರ್ಸಾ ಮುಂಡಾ ಫುಟ್‌ಬಾಲ್‌ ಕ್ರೀಡಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ 59 ವರ್ಷದ ದಾಸ್‌ ಅವರಿಗೆ ಪ್ರತಿಜ್ಞಾವಿಧಿ ಬೋಧಿಸಿದರು.
 • ಬಿಜೆಪಿಯ ನೀಲಕಾಂತ್ ಸಿಂಗ್ ಮುಂಡಾ, ಚಂದ್ರೇಶ್ವರ್ ಪ್ರಸಾದ್ ಸಿಂಗ್‌, ಲೂಯಿಸ್‌ ಮರಾಂಡಿ ಮತ್ತು ಎಜೆಎಸ್‌ಯು ಪಕ್ಷದ ಚಂದ್ರಪ್ರಕಾಶ್‌ ಚೌಧರಿ ಅವರು ಸಂಪುಟ ದರ್ಜೆ ಸಚಿವರಾಗಿ ಪ್ರಮಾಣ ವಚನ ತೆಗೆದುಕೊಂಡರು. ರಾಜ್ಯದಲ್ಲಿ ಮುಖ್ಯಮಂತ್ರಿ ಸೇರಿದಂತೆ ಗರಿಷ್ಠ 12 ಸಚಿವರು ಇರಲು ಅವಕಾಶವಿದೆ.
 • 81 ಸದಸ್ಯ ಬಲದ ವಿಧಾನಸಭೆಯಲ್ಲಿ ಪಕ್ಷ 37 ಸ್ಥಾನಗಳನ್ನು ಗಳಿಸಿದ ನಂತರ ಬಿಜೆಪಿಯ ಶಾಸಕಾಂಗ ಪಕ್ಷದ ನಾಯಕರನ್ನಾಗಿ ದಾಸ್ ಅವರನ್ನು ಶುಕ್ರವಾರ ಆಯ್ಕೆ ಮಾಡಲಾಯಿತು. 1980ರಲ್ಲಿ ಬಿಜೆಪಿಗೆ ಸೇರಿದ ದಾಸ್ ಎರಡು ಬಾರಿ ರಾಜ್ಯಾಧ್ಯಕ್ಷರಾಗಿದ್ದಾರೆ.
 • 1995ರಲ್ಲಿ ಮೊದಲ ಬಾರಿಗೆ ಅಂದು ಬಿಹಾರ ವಿಧಾನಸಭೆಗೆ ಸೇರಿದ್ದ ಪೂರ್ವ ಜೆಮ್ಷಡ್‌ಪುರ ಕ್ಷೇತ್ರದಿಂದ ಆಯ್ಕೆಯಾಗಿದ್ದರು. ಬಾಬುಲಾಲ್ ಮರಾಂಡಿ ಸರಕಾರದಲ್ಲಿ ಕಾರ್ಮಿಕ ಸಚಿವರಾಗಿದ್ದರು. 2009ರಲ್ಲಿ ಶಿಬು ಸೊರೇನ್ ಸರಕಾರದಲ್ಲಿ ಉಪ ಮುಖ್ಯಮಂತ್ರಿಯಾಗಿದ್ದರು.
2009-ಪಕ್ಷ ಸ್ಥಾನ 2014-ಪಕ್ಷ ಸ್ಥಾನ
BJP-ಬಿ.ಜೆ.ಪಿ. 18 ಭಾರತೀಯ ಜನತಾ ಪಕ್ಷ 37 (+5=42)
JMM/ಜೆ.ಎಮ್.ಎಮ್. 18 ಝಾರ್ಕಂಡ್ ಮುಕ್ತಿ ಮೋರ್ಚಾ 19
INC/ ಕಾಂಗ್ರೆಸ್ 14 ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 6
JVM 11 ಝಾರ್ಕಂಡ್ ವಿಕಾಸ ಮೋರ್ಚಾ(ಪ್ರಜಾತಾಂತ್ರಿಕ್) 8
AJSUP 5 ಎ.ಜೆ.ಎಸ್.ಯು.ಪಾರ್ಟಿ(ಬಿಜೆಪಿಗೆ ಬೆಂಬಲ) 5
Ind & Oth 10 ಬಹುಜನ ಸಮಾಜವಾದಿ ಪಾರ್ಟಿ 1
. . ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ ((M-L)(Lbrn 1
. . ಜಯಭಾರತ ಸಮತಾ ಪಾರ್ಟಿ 1
. . ಝಾರ್ಕಂಡ್ ಪಾರ್ಟಿ 1
. . ಮಾರ್ಕಿಸ್ಟ್ ಕೋ ಆರ್ಡಿನೇಶನ್ 1
. . ನವಜೀವನ ಸಂಘರ್ಷ ಮೋರ್ಚಾ 1
Total 8l - 8l

ಶೇಕಡಾ ಮತ್ತು ವೋಟು ಗಳಿಕೆ-2014[ಬದಲಾಯಿಸಿ]

2014ರ ಜಾರ್ಖಂಡ್ ಫಲಿತಾಂಶ
ಪಾರ್ಟಿ ಶೇಕಡಾ ಪಡೆದ ವೋಟು
BSP 1.8% 251971
BJP 31.3% 4333445}
INC 10.5% 1449386
AJSUP 3.7% 510277
JMM 20.4% 2831856}
JVM 10.0% 1385025
CPI(M) 1.5% 210444

2009 ರ ಜಮ್ಮು ಮತ್ತು ಕಾಶ್ಮೀರ ಫಲಿತಾಂಶ[ಬದಲಾಯಿಸಿ]

2009 ಫಲಿತಾಂಶ

Party/ಪಕ್ಷ Seats/ಸ್ಥಾನ

2009 ಫಲಿತಾಂಶ

JKN / ನ್ಯಾಶನಲ್ ಕಾನ್ಫರೆನ್ಸ್ 27
JKPDP/ಡೆಮೊಕ್ರಟಿಕ್ ಪಾರ್ಟಿ 21

(Mufti Mohammed Sayeed)

INC/ ಕಾಂಗ್ರೆಸ್ 17
BJPಬಿಜೆಪಿ 11
Ind 4
JKNPP 3
OTHERS 4
Total/ಒಟ್ಟು 87

ಜಮ್ಮು ಮತ್ತು ಕಾಶ್ಮೀರ 23-12-2014 ಫಲಿತಾಂಶ[ಬದಲಾಯಿಸಿ]

 • ಜಮ್ಮು ಮತ್ತು ಕಾಶ್ಮೀರದ ಒಟ್ಟು ಸ್ಥಾನಗಳು 87; ಅದರಲ್ಲಿ ಜಮ್ಮು ಭಾಗದಲ್ಲಿ 37, ಲಡಾಖ್ ಭಾಗದಲ್ಲಿ 4, ಮುಸ್ಲಿಮ್ ಬಹುಸಂಖ್ಯಾತ ಭಾಗದಲ್ಲಿ 46 ಸ್ಥಾನಗಳಿವೆ. ಬಿಜೆಪಿಗೆ ಜಮ್ಮು ಭಾಗದಲ್ಲಿಯೇ 25 ಸ್ಥಾನಗಳು ಬಂದಿವೆ. ಉಳಿದ ಕಡೆ ಅದರ ಗಳಿಕೆ ಶೂನ್ಯ.ಆಗನ ಜನಪ್ರತಿನಿಧಿ ಶೇಕ್ ಅಬ್ದುಲ್ಲಾ ಅವರು ಮುಂದಾಲೋಚನೆ ಮಾಡಿ ಕಾಶ್ಮೀರ ಭಾಗಕ್ಕೆ ಯಾವಾಗಲೂ ಬಹುಮತ ಬರುವಂತೆ ವಿಧಾನಸಭೆ ಸ್ಥಾನಗಳನ್ನು ನಿಗದಿಗೋಳಿಸಿದ್ದಾರೆ. ಇನ್ನೂ 11(?)ಕ್ಷೇತ್ರಗಳು ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿದೆ.
ಪಕ್ಷ ಗೆಲವು ಶೇ.ವೋಟು ವೋಟು ಗಳಿಕೆ ವ್ಯತ್ಯಾಸ
ಭಾರತೀಯ ಜನತಾ ಪಕ್ಷ 25 23.0%, 1107194 +14
ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್ವಾದಿ) (BSP ?) 1 1.4%, 67786
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 12 18.0%, 867883 -5
ಜಮ್ಮು ಮತ್ತು ಕಾಶ್ಮೀರ ನ್ಯಾಷನಲ್ ಕಾನ್ಫರೆನ್ಸ್ 15 20.8%, 1000693 -12
ಜಮ್ಮು ಮತ್ತು ಕಾಶ್ಮೀರ ಪೀಪಲ್ಸ್ ಡೆಮಾಕ್ರಟಿಕ್ ಪಕ್ಷ 28 22.7%, 1092203 +7
ಜಮ್ಮು ಮತ್ತು ಕಾಶ್ಮೀರ ಜನರ People ಕಾನ್ಫರೆನ್ಸ್ 2 1.9%, 93182
ಜಮ್ಮು ಮತ್ತು ಕಾಶ್ಮೀರ ಜನರು ಪ್ರಜಾಸತ್ತಾತ್ಮಕ ರಂಗ (ಸೆಕ್ಯುಲರ್) 1 0.7%, 34886
ಸ್ವತಂತ್ರ 3 6.8%, 329881
ಇತರೆ- JKDPN+ JKNPP . 2.50%, 95941+26221 -4
ಒಟ್ಟು 87 . .
 • ಜಮ್ಮು ಕಾಶ್ಮೀರದಲ್ಲಿ 2015ಜನವರಿ 08 ರಿಂದ ರಾಜ್ಯಪಾಲರ ಆಡಳಿತ ಜಾರಿಗೆ ಬಂದಿದೆ. (ಸರ್ಕಾರದ ಮೂಲಗಳು TOI-Bharti Jain,TNN|Jan 9, 2015.)

ಜಮ್ಮು ಕಾಶ್ಮೀರದಲ್ಲಿ ಸರ್ಕಾರ ರಚನೆ[ಬದಲಾಯಿಸಿ]

ಪೀಪಲ್ಸ್‌ ಡೆಮಾಕ್ರಟಿಕ್‌ ಪಕ್ಷದ(ಪಿಡಿಪಿ) ಮುಖ್ಯಸ್ಥ ಮುಫ್ತಿ ಮೊಹಮ್ಮದ್‌ ಸಯೀದ್‌ ಅವರು ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿಯಾಗಿ 01/03/2015ಭಾನುವಾರ ಪ್ರಮಾಣ ವಚನ ಸ್ವೀಕರಿಸಿದರು. ಈ ಮೂಲಕ 49 ದಿನಗಳ ರಾಜ್ಯಪಾಲರ ಆಡಳಿತ ತೆರೆ ಕಂಡಿತು.
ರಾಜ್ಯಪಾಲರಾದ ಎನ್. ಎನ್. ವೊಹ್ರಾ ಅವರು ಸಯೀದ್ ಅವರಿಗೆ ಅಧಿಕಾರ ಗೌಪ್ಯತೆ ಹಾಗೂ ಪ್ರಮಾಣ ವಚನ ಬೋಧಿಸಿದರು. ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಹಿರಿಯ ಮುಖಂಡರಾದ ಎಲ್.ಕೆ. ಅಡ್ವಾಣಿ, ಮುರಳಿ ಮನೋಹರ್ ಜೋಶಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಹಾಗೂ ಪಕ್ಷದ ಪ್ರಧಾನ ಕಾರ್ಯದರ್ಶಿ ರಾಮ್ ಮಾಧವ್ ಅವರು ಉಪಸ್ಥಿತರಿದ್ದರು.
ಸಯೀದ್ ಅವರ ಬಳಿಕ ಬಿಜೆಪಿಯ ನಿರ್ಮಲ್ ಸಿಂಗ್ ಅವರು ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಬಳಿಕ ಪಿಡಿಪಿಯ 12 ಹಾಗೂ ಬಿಜೆಪಿ 11 ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.
ಸಮಾರಂಭಕ್ಕೆ ನ್ಯಾಷನಲ್ ಕಾನ್ಫೆರೆನ್ಸ್ ಹಾಗೂ ಹಲವು ಕಾಂಗ್ರೆಸ್ ಮುಖಂಡರು ಹಾಗೂ ಶಾಸಕರು ಗೈರು ಹಾಜರಾಗಿದ್ದರು.
ಪ್ರಮಾಣ ವಚನ ಸ್ವೀಕಾರದ ಬಳಿಕ ಜಂಟಿ ಸುದ್ದಿಗೋಷ್ಠಿ ನಡೆಸಿದ ಸಯೀದ್ ಹಾಗೂ ಸಿಂಗ್, 16 ಪುಟಗಳ 'ಮೈತ್ರಿ ಕಾರ್ಯಸೂಚಿ'ಯನ್ನು ಬಿಡುಗಡೆಗೊಳಿಸಿದರು. ಸಂವಿಧಾನದ 370ನೇ ಕಲಂ ಬಗ್ಗೆ ಯಥಾಸ್ಥಿತಿ ಕಾಯ್ದುಕೊಳ್ಳುವುದೂ ಮೈತ್ರಿ ಕಾರ್ಯಸೂಚಿಯಲ್ಲಿ ಸೇರಿದೆ.

ಆಧಾರ[ಬದಲಾಯಿಸಿ]

 • timesofindia

[[೧]]

 • ಚುನಾವಣಾ ಕಮಿಶನ್ ಭಾರತ --ಸುದ್ದಿ ಮಾಧ್ಯಮ- ವಿಜಯ ಕರ್ನಾಟಕ/೨-೧೨=೨೦೧೪
 • (೨೩-೧೨-೨೦೧೪)--http://eciresults.nic.in/

ನೋಡಿ[ಬದಲಾಯಿಸಿ]

 1. ಜಾರ್ಖಂಡ್
 2. ಜಮ್ಮು ಮತ್ತು ಕಾಶ್ಮೀರ
 3. ಝಾರ್ಖಂಡ್
 4. 2014ರ ಅಕ್ಟೋಬರ್ ಹರಿಯಾನ ಮಹಾರಾಷ್ಟ್ರ ಅಸೆಂಬ್ಲಿ ಚುನಾವಣೆ
 5. 2014ರ ಅಕ್ಟೋಬರ್ ಹರಿಯಾನ ಮತ್ತು ಮಹಾರಾಷ್ಟ್ರ ಅಸೆಂಬ್ಲಿ ಚುನಾವಣೆ ;

[ವರ್ಗ:ರಾಜಕಾರಣಿಗಳು]]