ಝಾರ್ಖಂಡ್

ವಿಕಿಪೀಡಿಯದಿಂದ, ಇದು ಉಚಿತ ವಿಶ್ವಕೋಶ
Jump to navigation Jump to search
ಜಾರ್ಖಂಡ್/ ಝಾರ್ಖಂಡ್
Map of India with the location of ಜಾರ್ಖಂಡ್/ ಝಾರ್ಖಂಡ್ highlighted.
ರಾಜಧಾನಿ
 - ಸ್ಥಾನ
ರಾಂಚಿ
 - 23.42° N 85.33° E
ಅತಿ ದೊಡ್ಡ ನಗರ ಜಮಷೇಡ್ ಪುರ
ಜನಸಂಖ್ಯೆ (2001)
 - ಸಾಂದ್ರತೆ
26,909,428 (೧೩ನೆಯ)
 - 274/km²
ವಿಸ್ತೀರ್ಣ
 - ಜಿಲ್ಲೆಗಳು
79,700 km² (೧೫ನೆಯ)
 - ೨೨
ಸಮಯ ವಲಯ IST (UTC+5:30)
ಸ್ಥಾಪನೆ
 - [[ ಜಾರ್ಖಂಡ್/ ಝಾರ್ಖಂಡ್ ರಾಜ್ಯದ ರಾಜ್ಯಪಾಲರು|ರಾಜ್ಯಪಾಲ]]
 - [[ಜಾರ್ಖಂಡ್/ ಝಾರ್ಖಂಡ್ ರಾಜ್ಯದ ಮುಖ್ಯಮಂತ್ರಿಗಳು|ಮುಖ್ಯ ಮಂತ್ರಿ]]
 - ಶಾಸನಸಭೆ (ಸ್ಥಾನಗಳು)
2000-11-15
 - ಕಟೀಕಲ್ ಸಂಕರನಾರಾಯಣನ್
 - ರಾಷ್ಟ್ರಪತಿ ಆಡಳಿತ
 - Unicameral (81)
ಅಧಿಕೃತ ಭಾಷೆ(ಗಳು) ಹಿಂದಿ
Abbreviation (ISO) IN-JH
ಅಂತರ್ಜಾಲ ತಾಣ: www.jharkhand.gov.in
Jharkhand Logo.png

ಜಾರ್ಖಂಡ್/ ಝಾರ್ಖಂಡ್ ರಾಜ್ಯದ ಮುದ್ರೆ

ಝಾರ್ಖಂಡ್, Jharkhand (Jhārkhaṇḍ, pronounced [ˈdʒʱaːrkʰəɳɖ] ( listen); Hindi: झारखंड) lit. "Bushland"),ಎಂದು ಕರೆಯಲ್ಪಡುತ್ತದೆ. ಜಾರ್ಖಂಡ್ ಪೂರ್ವ ಭಾರತದ ರಾಜ್ಯಗಳಲ್ಲೊಂದು. ೧೫ನೇ ನವೆಂಬರ್, ೨೦೦೦ದಲ್ಲಿ ಬಿಹಾರ ರಾಜ್ಯದ ದಕ್ಷಿಣ ಪ್ರಾಂತ್ಯಗಳನ್ನು ಸೇರಿಸಿ ಇದನ್ನು ರಚಿಸಲಾಯಿತು. ಜೈನರ ಪವಿತ್ರ ಯಾತ್ರಾಸ್ಥಳ ಸಮ್ಮೇದ ಶಿಖರ್ಜಿಯು ಈ ರಾಜ್ಯದಲ್ಲಿದೆ.

ರಾಜಕೀಯ[ಬದಲಾಯಿಸಿ]

ವಿಧಾನಸಭೆ ಚುನಾವಣೆ 2014
  • ಜಾರ್ಖಂಡ್‌ನ 13 ವಿಧಾನಸಭೆ ಕ್ಷೇತ್ರಗಳಿಗೆ Nov 25, 2014, ನಡೆದ ಮಂಗಳವಾರ ನಡೆದ ಮೊದಲ ಹಂತದ ಚುನಾವಣೆಯಲ್ಲಿ ಶೇ.62ರಷ್ಟು ಮತದಾನವಾಗಿದೆ.
  • ಒಬ್ಬ ಸಚಿವ 10 ಶಾಸಕರು ಸೇರಿದಂತೆ 199 ಅಭ್ಯರ್ಥಿಗಳು ಜಾರ್ಖಂಡ್ ವಿಧಾನಸಭೆ ಕಣದಲ್ಲಿದ್ದಾರೆ. ಈ ಕ್ಷೇತ್ರಗಳಲ್ಲಿ 15,77,090 ಮಹಿಳೆಯರು ಸೇರಿದಂತೆ 33,61,938 ಮತದಾರರಿದ್ದಾರೆ.
  • ಎಲ್ಲ ಹಂತಗಳು ಸೇರಿ ಒಟ್ಟಾರೆ ಈ ಸರ್ತಿ ರಾಜ್ಯದಲ್ಲಿ ಶೇ.65ರಷ್ಟು ಮತದಾರರು ಹಕ್ಕು ಚಲಾಯಿಸಿದ್ದಾರೆ. ಕಣಿವೆಯಲ್ಲಿ ಕಳೆದ 2008ರ ಚುನಾವಣೆಯಲ್ಲಿ ಶೇ.61.42, 2002ರಲ್ಲಿ ಶೇ.43.09ರಷ್ಟು ಮತದಾನವಾಗಿತ್ತು. ಜಾರ್ಖಂಡ್‌ನಲ್ಲಿ ಈ ಬಾರಿ ಎಲ್ಲ ಹಂತಗಳ ಮತದಾನ ಸೇರಿ ಶೇ.66ರಷ್ಟು ಮತದಾನವಾಗಿದೆ. 2004ರ ವಿಧಾನಸಭೆ ಚುನಾವಣೆಯಲ್ಲಿ ಶೇ.54.2ರಷ್ಟು ಮತದಾನವಾಗಿದ್ದು, ಈ ದಾಖಲೆ ಈಗ ಪುಡಿಯಾಗಿದೆ. ಡಿ.23ರಂದು ಉಭಯ ರಾಜ್ಯಗಳ ಮತ ಎಣಿಕೆ ನಡೆಯಲಿದೆ.
  • 81 ಸದಸ್ಯ ಬಲದ ವಿಧಾನಸಭೆಯಲ್ಲಿ ಪಕ್ಷ 37 ಸ್ಥಾನಗಳನ್ನು ಗಳಿಸಿದ ನಂತರ ಬಿಜೆಪಿಯ ಶಾಸಕಾಂಗ ಪಕ್ಷದ ನಾಯಕರನ್ನಾಗಿ ದಾಸ್ ಅವರನ್ನು ಶುಕ್ರವಾರ ಆಯ್ಕೆ ಮಾಡಲಾಯಿತು. 1980ರಲ್ಲಿ ಬಿಜೆಪಿಗೆ ಸೇರಿದ ದಾಸ್ ಎರಡು ಬಾರಿ ರಾಜ್ಯಾಧ್ಯಕ್ಷರಾಗಿದ್ದಾರೆ.

ದಿ.28-12-2014 ಭಾನುವಾರ , ಜಾರ್ಖಂಡ್‌ನ 10 ನೇ ಮುಖ್ಯಮಂತ್ರಿಯಾಗಿ ಬಿಜೆಪಿಯ ಹಿರಿಯ ನಾಯಕ ರಘುವರ ದಾಸ್ ಪ್ರಮಾಣ ವಚನ ಸ್ವೀಕರಿಸಿದರು.

  • ಜಾರ್ಖಂಡ್‌ನ ಬುಡಕಟ್ಟಿಗೆ ಸೇರದ ಜಾರ್ಖಂಡ್‌ನ ಮೊದಲ ಮುಖ್ಯಮಂತ್ರಿ ರಘುವರ ದಾಸ್, ಎರಡು ಪಕ್ಷಗಳ ಸಮ್ಮಿಶ್ರ ಸರಕಾರದ ನೇತೃತ್ವ ವಹಿಸಲ್ಲಿದ್ದಾರೆ. ಪದಚ್ಯುತ ಮುಖ್ಯಮಂತ್ರಿ ಹೇಮಂತ್ ಸೋರೆನ್ ವಿರುದ್ಧ ಜಯಸಾಧಿಸಿರುವ ಲೂಯಿಸ್ ಮರಾಂಡಿ ಬಿಜೆಪಿಯ ಸಚಿವರು. ಚಂದ್ರ ಪ್ರಕಾಶ್ ಚೌಧರಿ ಸಂಪುಟದಲ್ಲಿ ಎಜೆಎಸ್‌ಯುವನ್ನು ಪ್ರತಿನಿಧಿಸಲ್ಲಿದ್ದಾರೆ.
  • ರಾಜ್ಯಪಾಲ ಸೈಯದ್‌ ಅಹಮ್ಮದ್‌ ಅವರು ಬಿರ್ಸಾ ಮುಂಡಾ ಫುಟ್‌ಬಾಲ್‌ ಕ್ರೀಡಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ 59 ವರ್ಷದ ದಾಸ್‌ ಅವರಿಗೆ ಪ್ರತಿಜ್ಞಾವಿಧಿ ಬೋಧಿಸಿದರು.
  • ಬಿಜೆಪಿಯ ನೀಲಕಾಂತ್ ಸಿಂಗ್ ಮುಂಡಾ, ಚಂದ್ರೇಶ್ವರ್ ಪ್ರಸಾದ್ ಸಿಂಗ್‌, ಲೂಯಿಸ್‌ ಮರಾಂಡಿ ಮತ್ತು ಎ.ಜೆ.ಎಸ್‌.ಯು ಪಕ್ಷದ ಚಂದ್ರಪ್ರಕಾಶ್‌ ಚೌಧರಿ ಅವರು ಸಂಪುಟ ದರ್ಜೆ ಸಚಿವರಾಗಿ ಪ್ರಮಾಣ ವಚನ ತೆಗೆದುಕೊಂಡರು. ರಾಜ್ಯದಲ್ಲಿ ಮುಖ್ಯಮಂತ್ರಿ ಸೇರಿದಂತೆ ಗರಿಷ್ಠ 12 ಸಚಿವರು ಇರಲು ಅವಕಾಶವಿದೆ.

2014ರ ಜಾರ್ಖಂಡ್ ಫಲಿತಾಂಶ[ಬದಲಾಯಿಸಿ]

ಪಕ್ಷ ಗೆಲವು. ಬದಲಾವಣೆ ವೋಟು,ಶೇ.
ಬಿಜೆಪಿ + 42 +19 32%
ಕಾಂಗ್ರೆಸ್+ 6 -15 10%
ಜೆ.ಎಮ್.ಎಮ್. 19 +1 21%
ಜೆವಿಎಮ್`ಪಿJVM(P) 8 -3 10%
ಇತರೆ 6 -2 27%
ಒಟ್ಟು 81 - 1೦೦%
ಇತರೆ ಪಕ್ಷ ಗೆಲವು - -
ಎ.ಜೆ.ಎಸ್.ಯು.ಪಾರ್ಟಿ(ಬಿಜೆಪಿಗೆ ಬೆಂಬಲ) 5 - -
ಬಹುಜನ ಸಮಾಜವಾದಿ ಪಾರ್ಟಿ 1 - -
ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ ((M-L)(Lbrn) 1 - -
ಜಯಭಾರತ ಸಮತಾ ಪಾರ್ಟಿ 1 -
ಜಾರ್ಕಂಡ್ ಪಾರ್ಟಿ 1 - -