ಮಣಿಪುರ

ವಿಕಿಪೀಡಿಯ ಇಂದ
Jump to navigation Jump to search

ಲುಅ ದೋಷ: bad argument #1 to 'gsub' (string is not UTF-8).

ದೇಶದ ಈಶಾನ್ಯ ಭಾಗದ ಪ್ರವಾಸ ತಾಣಗಳಲ್ಲಿ ಮಣಿಪುರ ರಾಜ್ಯ ನಾನಾ ಕಾರಣಗಳಿಂದ ಪ್ರವಾಸಿಗರನ್ನು ಸೂಜಿಗಲ್ಲಿನಂತೆ ಎದುರುಗೊಳ್ಳುತ್ತದೆ. ಒಂದು ಪ್ರವಾಸಿ ತಾಣಗಳಿಂದ ಮುದ ನೀಡಿದರೆ ಮತ್ತೊಂದೆಡೆ ತನ್ನೂರಿನ ಹಬ್ಬಗಳಿಂದ ಸದಾ ಕಾಲ ಯಾರಿಗೂ ಗೊತ್ತಿಲ್ಲದೇ ಸುದ್ದಿಯಾಗುತ್ತದೆ. ಪ್ರಶಾಂತ ಭೂ ದೃಶ್ಯಗಳು, ವಿಲಕ್ಷಣ ವನ್ಯ ಜೀವಿಗಳು, ಅಲ್ಲಿನ ಜನರ ಆತಿಥ್ಯ ನೋಡಿದರೆ ಆ ಜಗದ ಪ್ರೀತಿ ಹುಟ್ಟುವುದರಲ್ಲಿ ಸಂಶಯವಿಲ್ಲ. ಇದೇ ಕಾರಣದಿಂದ ಲಕ್ಷ ಗಟ್ಟಲೆ ಹಣ ಸುರಿದು ಸ್ವಿಜರ್‌ಲ್ಯಾಂಡ್‌ಗೆ ಕಣ್ಣ ಹಾಕುವ ಪ್ರವಾಸಿಗರು ಸ್ವಿಟ್ಜರ್ಲ್ಯಾಂಡ್ ಆಫ್ ಇಂಡಿಯಾ ಎಂದು ಕರೆಯಲಾಗುವ ಮಣಿಪುರಕ್ಕಂತೂ ಗ್ಯಾರಂಟಿಯಾಗಿ ಬಂದು ಬಿಡಬಹುದು. ಇದರ ಜತೆಗೆ ಮತ್ತೂ ಪ್ರವಾಸಿಕ್ಕಾಗಿ ಸಮಯ, ಹಣದ ಉಳಿತಾಯವಾದರಂತೂ ಉತ್ತರಕ್ಕೆ ನಾಗಾಲ್ಯಾಂಡ್, ದಕ್ಷಿಣಕ್ಕೆ ಮಿಜೋರಾಂ ಹಾಗೂ ಪಶ್ಚಿಮಕ್ಕೆ ಅಸ್ಸಾಂ ಹಾಗೂ ಪೂರ್ವಕ್ಕೆ ಬರ್ಮಾದ ಅಂತಾರಾಷ್ಟ್ರೀಯ ಗಡಿರೇಖೆ ಇರುವುದರಿಂದ ಅಲ್ಲೂ ಪ್ರವಾಸ ಕೈಗೊಳ್ಳುವ ಅವಕಾಶ ಸಿಗುತ್ತದೆ.

ಮಣಿಪುರದಲ್ಲಿ ಸಿಗುವ ಪ್ರವಾಸಿ ತಾಣಗಳು[ಬದಲಾಯಿಸಿ]

ಇಂಫಾಲ[ಬದಲಾಯಿಸಿ]

ನಗರದಿಂದ ೧೦ಕಿಮೀ ದೂರದಲ್ಲಿದೆ. ಮಣಿಪುರದ ರಾಜಧಾನಿ ನಗರ. ಇದು ಏಳು ಪರ್ವತಶ್ರೇಣಿಗಳಿಂದ ಸುತ್ತುವರಿದಿದೆ. ಸಾಂಸ್ಕೃತಿಕ ಹಾಗೂ ಕಮರ್ಷಿಯಲ ಚಟುವಟಿಕೆಗಳ ಕೇಂದ್ರ ಬಿಂದು. ಪ್ರಕೃತಿಯ ಸೊಬಗು ಮತ್ತು ವನ್ಯಜೀವಿಗಳಿಗೆ ಹೆಸರುವಾಸಿ. ಪುರಾತನ ಇತಿಹಾಸವಿರುವ ಅನೇಕ ದೇವಾಲಯಗಳು, ಸ್ಮಾರಕಗಳನ್ನು ನೋಡಬಹುದು.

ಖ್ವೈರಾಮಬಂದ್ ಬಜರ್[ಬದಲಾಯಿಸಿ]

ಇಲ್ಲಿ ಮಹಿಳೆಯರದ್ದೇ ವ್ಯವಹಾರ. ಮಹಿಳೆಯರೇ ನಡೆಸುವ ದೇಶದ ದೊಡ್ಡ ಮಾರ್ಕೆಟ ಇದು. ಇಲ್ಲಿ ನೀವು ಮಣಿಪುರದ ಸಾಂಪ್ರದಾಯಿಕ ಶೈಲಿಯ ಕರಕುಶಲ ವಸ್ತುಗಳನ್ನು ಖರೀದಿಸಬಹುದು. ಶಾಲ, ಬಾಸ್ಕೆಟ, ಬ್ಯಾಗ್, ಉಡುಗೆ, ಗೃಹಪಯೋಗಿ ವಸ್ತುಗಳು ಅಲ್ಲದೇ ಬೆತ್ತ ಹಾಗೂ ಬಿದಿರಿನಿಂದ ಮಾಡಿದ ವಸ್ತುಗಳನ್ನು ಹೆಚ್ಚಾಗಿ ಪ್ರವಾಸಿಗರು ಖರೀದಿಸುತ್ತಾರೆ.

ಶ್ರೀ ಗೋವಿಂದಾಜೀ ದೇವಸ್ಥಾನ[ಬದಲಾಯಿಸಿ]

ಮಣಿಪುರದ ಮಾಜಿ ದೊರೆಗಳ ಅರಮನೆಯ ಪಕ್ಕದಲ್ಲಿ ಈ ದೇವಾಲಯವಿದೆ. ಇದು ವೈಷ್ಣವರ ಪ್ರಮುಖ ಆರಾಧ್ಯ ದೇವಸ್ಥಾನ. ಸಾಮಾನ್ಯ ರಚನೆಯಿಂದ ಕೂಡಿದ್ದು, ಎರಡು ಗುಮ್ಮಟಗಳಿವೆ. ಅದರಲ್ಲೂ ಮುಖ್ಯವಾಗಿ ಈ ದೇವಸ್ಥಾನಕ್ಕೆ ದೇಶ- ವಿದೇಶದ ಪ್ರವಾಸಿಗರು ಬಂದು ಹೋಗುತ್ತಾರೆ. ಮಣಿಪುರದ ಪ್ರವಾಸ ತಾಣಗಳಲ್ಲಿ ಈ ದೇವಳ ಮೊದಲ ಸ್ಥಾನದಲ್ಲಿ ನಿಂತಿದೆ.

ಲೋಕ್ತಕ್ ಲೇಕ್ ಹಾಗೂ ಸೇಂದ್ರ ದ್ವೀಪ[ಬದಲಾಯಿಸಿ]

ಈ ಪ್ರವಾಸಿ ತಾಣವನ್ನು ಪ್ರವಾಸಿಗರು ನೋಡಲೇಬೇಕು. ಇಂಫಾಲ್‌ನಿಂದ ೪೮ ಕಿಮೀ ದೂರದದಲ್ಲಿ ಸೇಂದ್ರ ದ್ವೀಪವಿದೆ. ಇದು ಲೋಕ್ತಕ್ ಸರೋವರದ ಮಧ್ಯಭಾಗದಲ್ಲಿ ಎತ್ತರದ ಪರ್ವತದಂತೆ ಕಾಣುತ್ತದೆ.

car race

ಕೇಬುಲ ಲಮ್ಜಾವೋ ರಾಷ್ಟ್ರೀಯ ಉದ್ಯಾನ[ಬದಲಾಯಿಸಿ]

ಅಪರೂಪದ ಸ್ಥಳೀಯ ಪ್ರಾಂತ್ಯದ ಜಿಂಕೆ ಎಂದು ಕರೆಯಲ್ಪಡುವ ಶಾಂಗೈ ಎಂಬ ವನ್ಯಮೃಗ ಕಾಣಿಸಿಕೊಳ್ಳುತ್ತದೆ. ಇಂಫಾಲ್‌ನಿಂದ ೫೩ ಕಿಮೀ ದೂರದಲ್ಲಿದೆ. ಇದು ನೀರಿನ ಮೇಲೆ ತೇಲುತ್ತಿದೆ. ಇದು ಈ ಪಾರ್ಕ್ ವಿಶಿಷ್ಟತೆಗಳಲ್ಲಿ ಒಂದಾಗಿ ಪ್ರವಾಸಿಗರನ್ನು ಸೂಜಿಗಲ್ಲಿನಂತೆ ಸೆಳೆದು ಬಿಡುತ್ತದೆ. ಇಲ್ಲಿ ಬೋಟಿಂಗ್ ವ್ಯವಸ್ಥೆಯನ್ನು ಕೂಡ ಕಲ್ಪಿಸಲಾಗಿದೆ.

ಮೋರೆಹ್[ಬದಲಾಯಿಸಿ]

ಇಂಡೋ-ಮಯನ್ಮಾರ್ ಗಡಿರೇಖೆಯನ್ನೇ ಮೋರೆಹ್ ಪಟ್ಟಣ ಎನ್ನುತ್ತಾರೆ. ಇಂಫಾಲ್‌ನಿಂದ ೧೧೦ಕಿಮೀ ದೂರದಲ್ಲಿದೆ. ಈಶಾನ್ಯ ಭಾಗದ ಪ್ರಮುಖ ವಾಣಿಜ್ಯ ನಗರಿ ಕೇಂದ್ರ. ಇಲ್ಲಿ ಕಡಿಮೆ ಬೆಲೆಗೆ ಥಾಯ, ಚೈನೀಸ್ ಹಾಗೂ ಬರ್ಮಾದ ಗ್ಯಾಜೆಟ್, ಉಡುಗೆ, ಕಾರ್ಪೆಟ ಹಾಗೂ ಗೃಹ ಅಲಂಕಾರ ವಸ್ತುಗಳನ್ನು ಖರೀದಿಸಲು ಸೂಕ್ತವಾದ ಪ್ರವಾಸಿ ತಾಣ.

ಕಂಗಲಾ[ಬದಲಾಯಿಸಿ]

ಇದು ಮಣಿಪುರದ ಸಾಂಸ್ಕೃತಿಕ ನಗರಿ ಎಂದೇ ಬಿಂಬಿತ. ೧೮೯೧ರಲ್ಲಿ ಇಲ್ಲಿ ಆಳ್ವಿಕೆ ನಡೆಸಿದ ಮಣಿಪುರಿ ರಾಜಮನತೆನಗಳಿಂದಾಗಿ ಈ ನಗರಿಯನ್ನು ಐತಿಹಾಸಿಕ ದೃಷ್ಟಿಯಿಂದ ಪ್ರವಾಸಿಗರು ನೋಡಬಹುದು. ಇದರ ಜತೆಯಲ್ಲಿ ಯುದ್ದದಲ್ಲಿ ಮಡಿದವರ ಸಮಾಧಿ ಕೂಡ ಕಾಣಬಹುದು. ಎರಡನೇ ವಿಶ್ವ ಯುದ್ಧದ ಸಮಯದಲ್ಲಿ ಮಡಿದ ಬ್ರಿಟಿಷ್ ಹಾಗೂ ಭಾರತೀಯ ಸೈನಿಕರ ಸಮಾಧಿ ಇಲ್ಲಿ ನಿರ್ಮಾಣ ಮಾಡಲಾಗಿದೆ.

ಡಜೂಕ್ ಕಣಿವೆ[ಬದಲಾಯಿಸಿ]

ಮಣಿಪುರ ಹಾಗೂ ನಾಗಾಲ್ಯಾಂಡ್ ಬಾರ್ಡರ್‌ನಲ್ಲಿರುವ ಸೇನಾಪಟ್ಟಿ ಜಿಲ್ಲೆಯಲ್ಲಿರುವ ಡಜೂಕ್ ಕಣಿವೆ ಹುಲ್ಲುಗಾವಲುಗಳಿಂದ ಆವೃತ್ತವಾಗಿದೆ. ಮುಖ್ಯವಾಗಿ ಲಿಲ್ಲಿ ಹೂಗಳಿಗೆ ಇದು ಸಾಕಷ್ಟು ಖ್ಯಾತಿಯನ್ನು ಪಡೆದುಕೊಂಡಿದೆ. ಸಾಹಸ ಕ್ರೀಡಾ ಪ್ರೇಮಿಗಳಿಗಂತೂ ಇದು ಮೆಚ್ಚಿನ ತಾಣ. ಮಣಿಪುರ ಮೌಂಟರೇನಿಂಗ್ ಆಂಡ್ ಟ್ರಕ್ಕಿಂಗ್ ಅಸೋಸಿಯೇಶನ್ ವಿಶೇಷ ರೀತಿಯ ಟ್ರಕ್ಕಿಂಗ್‌ಗಳನ್ನು ಆಯೋಜಿಸುತ್ತದೆ. ಇದರ ಜತೆಗೆ ನವೆಂಬರ್ ತಿಂಗಳಲ್ಲಿ ವಿಶೇಷ ಮಣಿಪುರ ಶಾಂಘೈ ಫೆಸ್ಟಿವಲ್‌ವನ್ನು ಕೂಡ ಆಯೋಜನೆ ಮಾಡುತ್ತದೆ. ಈ ಫೆಸ್ಟಿವಲ್ ಸಮಯದಲ್ಲಂತೂ ಸಾವಿರಾರು ಪ್ರವಾಸಿಗರು ಬಂದು ಸೇರುತ್ತಾರೆ.

ಐಎನ್‌ಎ ವಾರ್ ಮ್ಯೂಸಿಯಂ[ಬದಲಾಯಿಸಿ]

ಇಂಫಾಲ್‌ನಿಂದ ೪೫ಕಿಮೀ ದೂರದಲ್ಲಿ ಈ ಮ್ಯೂಸಿಂಯ ನೆಲೆನಿಂತಿದೆ. ಇಂಡಿಯನ್ ನ್ಯಾಷನಲ್ ಆರ್ಮಿಯ ಭಾವುಟ ಸೇರಿದಂತೆ ನೇತಾಜಿ ಸುಭಾಷ್‌ಚಂದ್ರ ಭೋಸ್‌ಗೆ ಸಂಬಂಧ ಪಟ್ಟ ಸಾಕಷ್ಟು ಸಾಮಗ್ರಿಗಳು ಇಲ್ಲಿವೆ.

ಮಣಿಪುರಿ ನೃತ್ಯ ಶೈಲಿ

ಹಬ್ಬಗಳೇ ಮಣಿಪುರದ ಖಜಾನೆ[ಬದಲಾಯಿಸಿ]

ಮಣಿಪುರದಲ್ಲಿ ವರ್ಷಪೂರ್ತಿ ಹತ್ತಾರು ಹಬ್ಬಗಳು ಇಲ್ಲಿಯ ಜನರನ್ನು ಸಾಂಸ್ಕೃತಿಕವಾಗಿ, ಧಾರ್ಮಿಕವಾಗಿ ಜತೆಗೆ ಸಾಮಾಜಿಕವಾಗಿ ಗಟ್ಟಿಮಾಡಿದೆ. ಇಲ್ಲಿನ ಜನರ ಭಾವನಾತ್ಮಕ, ಧಾರ್ಮಿಕ ಬದುಕಿಗೆ ಈ ಹಬ್ಬಗಳು ಪ್ರೇರಣೆಯನ್ನು ನೀಡುತ್ತದೆ. ಇದು ತಮ್ಮ ಸೋಲಿನಿಂದ ಎದ್ದು ಬರಲು ಧೈರ್ಯ ತುಂಬುತ್ತದೆ ಎನ್ನುವ ನಂಬಿಕೆ ಮಣಿಪುರಿಗರದ್ದು.

ಯೋಶಾಂಗ್(ಹೋಳಿ)[ಬದಲಾಯಿಸಿ]

ಮಣಿಪುರದಲ್ಲಿರುವ ಹಿಂದೂಗಳು ಆಚರಣೆ ಮಾಡುವ ಹಬ್ಬ ಯೋಶಾಂಗ್ ಇದನ್ನು ಬೇರೆ ರಾಜ್ಯಗಳಲ್ಲಿ ಹೋಳಿಯಾಗಿ ಆಚರಣೆ ಮಾಡುತ್ತಾರೆ. ಫೆಬ್ರವರಿ/ ಮಾರ್ಚ್ ತಿಂಗಳ ಹುಣ್ಣಿಮೆಯ ದಿನದಿಂದ ಆರಂಭವಾಗಿ ಐದು ದಿನಗಳ ಕಾಲ ಹಬ್ಬದ ಆಚರಣೆ ನಡೆಯುತ್ತದೆ. ಇದು ಮಣಿಪುರದ ಆರಂಭದ ಹಬ್ಬ. ಇದರಲ್ಲಿ ಮಣಿಪುರಿ ಹುಡುಗಿಯರು ಹಾಗೂ ಹುಡುಗರು ಕೋಲು ತೆಗೆದುಕೊಂಡು ಕುಣಿಯುತ್ತಾ, ಹಾಡುಗಳನ್ನು ಹಾಡುತ್ತಾ ಮನರಂಜನೆ ನೀಡುತ್ತಾರೆ.

ಕುಕೀ ಚಿನ್ ಮಿಜೋ[ಬದಲಾಯಿಸಿ]

ಮಣಿಪುರದಲ್ಲಿ ನಾನಾ ಬುಡಕಟ್ಟು ಜನಾಂಗದವರು ಭಿನ್ನ ಭಿನ್ನ ರೀತಿಯಲ್ಲಿ ಈ ಹಬ್ಬವನ್ನು ಆಚರಣೆ ಮಾಡುತ್ತಾರೆ. ಇಡೀ ವರ್ಷ ಕಷ್ಟಪಟ್ಟು ದುಡಿದು ಸಂಗ್ರಹ ಮಾಡಿದ ದವಸ ಧಾನ್ಯಗಳಿಂದ ಕೆಲವನ್ನು ಬಳಸಿಕೊಂಡು ಊಟ ಮಾಡುವ ಪರಂಪರೆ ಇದೆ. ಹೆಚ್ಚಾಗಿ ನವೆಂಬರ್ ತಿಂಗಳಲ್ಲಿ ನಡೆಸಲಾಗುತ್ತದೆ.

ಕೂಬೀ ನಾಗಾಗಳ ಗಂಗಾ ನಾಗೀ ಹಬ್ಬ[ಬದಲಾಯಿಸಿ]

ಡಿಸೆಂಬರ್/ಜನವರಿ ತಿಂಗಳಲಿ ಹೆಚ್ಚಾಗಿ ಆಚರಣೆ ಮಾಡಲಾಗುತ್ತದೆ. ಇದು ಐದು ದಿನಗಳ ಕಾಲ ನಡೆಯುತ್ತದೆ. ಕುಣಿತ, ಆಟ, ಉಡುಗೆ-ತೊಡುಗೆ ಬದಲಾವಣೆ ಮೊದಲಾದವುಗಳನ್ನು ಇಲ್ಲಿ ಕಾಣಬಹುದು.

ಚೆರ್ರಿಬೋ[ಬದಲಾಯಿಸಿ]

ಏಪ್ರಿಲ್ ತಿಂಗಳಲ್ಲಿ ಮಣಿಪುರಿ ರಾಜ್ಯ ಹೊಸ ವರ್ಷವನ್ನು ಆಚರಣೆ ಮಾಡುತ್ತದೆ. ಇದನ್ನು ಚೆರ್ರಿಬೋ ಎಂದು ಕರೆಯಲಾಗುತ್ತದೆ. ಮುಖ್ಯವಾಗಿ ವಿಶೇಷ ರೀತಿಯ ಅಡುಗೆ, ಪರ್ವತರೋಹಣ ಮೊದಲಾದವುಗಳನ್ನು ಈ ಹಬ್ಬದ ಸಮಯದಲ್ಲಿ ಮಾಡಲಾಗುತ್ತದೆ. ಇವುಗಳ ಜತೆಗೆ ಕಾಂಗ್ ಮಣಿಪುರಿಗಳ ರಥಯಾತ್ರೆ,ಹೇಕ್ರೂಒಂಟಿಗೋಬಾ, ನಿಂಗೋಳ್ ಚಾಕ್ ಕೋಬಾ, ಲೂಯೀ ನಾಗೀ ನೀ, ಚೂಫಾಸ್ ಹಬ್ಬ ಹೀಗೆ ಹತ್ತಾರು ಹಬ್ಬಗಳಿಂದ ಮಣಿಪುರಿ ರಾಜ್ಯದ ಮಂದಿ ಖುಷಿಯಿಂದ ಬದುಕು ಕಟ್ಟುತ್ತಾರೆ. ಇಲ್ಲಿಗೆ ಭೇಟಿ ಕೊಡುವ ಪ್ರವಾಸಿಗರು ಕೂಡ ಈ ಹಬ್ಬಗಳ ಮೂಲಕ ಅವರಿಗೆ ಹತ್ತಿರವಾಗುತ್ತಾರೆ.

ಹೋಗುವುದು ಹೇಗೆ?[ಬದಲಾಯಿಸಿ]

ಮಣಿಪುರಕ್ಕೆ ಎ ಪ್ರಮುಖ ನಗರಗಳಿಂದ ವಿಮಾನಯಾನ ಸೌಲಭ್ಯವಿದೆ. ಮಣಿಪುರದಲ್ಲಿ ರೈಲು ನಿಲ್ದಾಣವಿಲ್ಲ. ಆದರೆ ಹತ್ತಿರದ ರೈಲು ನಿಲ್ದಾಣ ೨೧೫ಕಿಮೀ. ದೂರದಲ್ಲಿರುವ ಡಿಮಾಪುರದಲ್ಲಿದೆ. ಸ್ಥಳೀಯವಾಗಿ ಸುತ್ತಾಡಲು ಇಂಫಾಲ್‌ನಲ್ಲಿರುವ ಹೋಟೆಲ್‌ಗಳು ಟ್ಯಾಕ್ಸಿ, ಖಾಸಗಿ ವಾಹನಗಳ ವ್ಯವಸ್ಥೆ ಮಾಡುತ್ತದೆ. ಇಂಫಾಲ್‌ದಲ್ಲಿ ಉಳಿದುಕೊಳ್ಳುವುದಕ್ಕೇನೂ ಸಮಸ್ಯೆಯಿಲ್ಲ. ಬಜೆಟ್‌ಗೆ ಅನುಗುಣವಾಗಿ ಊಟ-ವಸತಿ ವ್ಯವಸ್ಥೆ ಲಭ್ಯ. ಇಲ್ಲಿಗೆ ಭೇಟಿ ನೀಡಲು ಸೂಕ್ತ ಕಾಲ ನವೆಂಬರ್‌ನಿಂದ ಏಪ್ರಿಲ ತಿಂಗಳು ಬಹಳ ಸೂಕ್ತ.

ರಾಜಕೀಯ ಮತ್ತು ಆಡಳಿತ[ಬದಲಾಯಿಸಿ]

ಬಾಹ್ಯ ಸಂಪರ್ಕಗಳು[ಬದಲಾಯಿಸಿ]

Understanding the tourism barriers and Manipur

ಉಲ್ಲೇಖಗಳು[ಬದಲಾಯಿಸಿ]

  1. Iboyaima Laithangbam (30 September 2015). "Shanmuganathan sworn in as Manipur Governor". The Hindu.
  2. ೨.೦ ೨.೧ "Manipur Population Sex Ratio in Manipur Literacy rate data". census2011.co.in. Retrieved 1 September 2015.

https://www.culturalindia.net/indian-dance/classical/manipuri.html

https://en.wikiquote.org/wiki/Manipuri_dance

https://www.britannica.com/art/manipuri

"https://kn.wikipedia.org/w/index.php?title=ಮಣಿಪುರ&oldid=867250" ಇಂದ ಪಡೆಯಲ್ಪಟ್ಟಿದೆ