ಲಕ್ಷದ್ವೀಪ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಲಕ್ಷದ್ವೀಪ
ಕೇಂದ್ರಾಡಳಿತ ಪ್ರದೇಶ
Location of {{{official_name}}} ನ ಸ್ಥಿತಿ
ಸರ್ಕಾರ
 • Administratorರಾಜೇಂದ್ರ ಕುಮಾರ್
Area rank7th
ಜನಸಂಖ್ಯೆ
೬೦,೫೯೫
 • Rank7th
ಜಾಲತಾಣlakshadweep.nic.in

ಲಕ್ಷದ್ವೀಪ (ಮಲಯಾಳಂನಲ್ಲಿ: : ലക്ഷദ്വീപ്) ಭಾರತದ ಕೇಂದ್ರಾಡಳಿತ ಪ್ರದೇಶಗಳಲ್ಲಿ ಅತ್ಯಂತ ಚಿಕ್ಕದಾದುದು. ಮುಖ್ಯವಾಗಿ ೧೨ ಹವಳ ದ್ವೀಪಗಳು, ೩ ಹವಳದ ರೀಫ್‌ಗಳು ಹಾಗು ೫ ಆಳವಿರದ ಸಾಗರತಳದ ಪ್ರದೇಶಗಳಿಂದ ನಿರ್ಮಿತವಾಗಿರುವ ಈ ದ್ವೀಪ ಸಮೂಹದ ಒಟ್ಟು ವಿಸ್ತೀರ್ಣ ೩೨ ಚದುರ ಕಿ.ಮಿ.ಗಳಷ್ಟು. ಇದಲ್ಲದೆ ಇನ್ನೂ ಹಲವಾರು ಪುಟ್ಟ ಜನನಿಬಿಡ ದ್ವೀಪಗಳಿವೆ. ಜನರಿರುವ ದ್ವೀಪಗಳು ಒಟ್ಟು ೧೧.

ದ್ವೀಪಗಳ ನಕ್ಷೆ

ಐತಿಹ್ಯ[ಬದಲಾಯಿಸಿ]

ಈಗ ಪ್ರಚಲಿತದಲ್ಲಿರುವ 'ಲಕ್ಷದ್ವೀಪ,' ಒಂದು ಕಾಲದಲ್ಲಿ 'ಲಖದೀವ್','ಮಿನಿಕೋಯ್' ಮತ್ತು 'ಅಮಿನ್ ದಿವಿ' ದ್ವೀಪಗಳು ಎಂದು ಕರೆಯಲಾಗುತ್ತಿದ್ದ, ಅರಬ್ಬೀ ಸಮುದ್ರದ ನಡುವೆ ಇರುವ ಒಂದು ದ್ವೀಪ ಸಮೂಹವಾಗಿತ್ತು. ಭಾರತದೇಶದ ಅತಿ ಚಿಕ್ಕ ಕೇಂದ್ರಾಡಳಿತ ಪ್ರದೇಶ. ಲಕ್ಷದ್ವೀಪದ ಒಟ್ಟು ಭೂ ವಿಸ್ತೀರ್ಣ ೩೨ ಚದರ ಕಿ.ಮೀ.ಗಳು. ಇವು ೪,೨೦೦ ಚ. ಕಿ; ಮೀ. ವಿಸ್ತೀರ್ಣದ ಜಲಭಾಗದ ಮಧ್ಯೆ ಇವೆ. ಭಾರತದ ಪಶ್ಚಿಮ ತೀರದಿಂದ ಈ ದ್ವೀಪಗಳು ೨೦೦ ರಿಂದ ೪೪೦ ಕಿ.ಮಿ ನಷ್ಟು ದೂರದಲ್ಲಿವೆ. ಈ ದ್ವೀಪ ಸಮುದಾಯವನ್ನು ಒಂದು ಜಿಲ್ಲೆಯಾಗಿ ಪರಿಗಣಿಸಲಾಗಿದ್ದು, ಇದನ್ನು ೧೦ ತಾಲೂಕುಗಳನ್ನಾಗಿ ವಿಂಗಡಿಸಲಾಗಿದೆ. ಲಕ್ಷದ್ವೀಪದ ರಾಜಧಾನಿ ಕವರಟ್ಟಿ. 'ಕೇರಳ ಹೈಕೋರ್ಟ್' ನ ಪರಿಧಿಯಲ್ಲಿ ಬರುತ್ತದೆ. ಸ್ವಾತಂತ್ರ್ಯಪೂರ್ವದ ಕಾಲದಲ್ಲಿ ಇದು 'ಮದ್ರಾಸ್ ಪ್ರೆಸಿಡೆನ್ಸಿ' ಅಂಗವಾಗಿತ್ತು. ೧೯೫೬ ರಲ್ಲಿ ಕೇಂದ್ರಾಡಳಿತ ಪ್ರದೇಶವಾಯಿತು. ಒಟ್ಟು ೩೯ ದ್ವೀಪಗಳಿವೆ; ೧೦ ರಲ್ಲಿ ಮಾತ್ರ ಜನವಸತಿ ಇದೆ. ೨೦೧೧ ರ ಜನಗಣತಿ ಪ್ರಕಾರ, ಇಲ್ಲಿನ ಜನಸಂಖೆ ೬೪,೪೨೯ ಹೆಚ್ಚು ಜನ ಮುಸಲ್ಮಾನರು.'ಸುನ್ನಿ ಪಂಥದ ಶಫಿ ಸಮುದಾಯ'ಕ್ಕೆ ಸೇರಿದ್ದಾರೆ. ಅವರೆಲ್ಲಾ ಮಲಯಾಳಂ ಭಾಷೆಯಲ್ಲಿ ವ್ಯವಹರಿಸುತ್ತಾರೆ ಮಿನಿಕೋಯ್ ದ್ವೀಪದಲ್ಲಿ ಮಾಹ್ಲ್ (ಮಾಹಿ) ಭಾಷೆ ಬಳಕೆಯಲ್ಲಿದೆ. ಆದಿವಾಸಿಗಳಿಲ್ಲದ ದ್ವೀಪ ಸಮುದಾಯ ಪ್ರದೇಶ. ಕ್ರಿ.ಪೂ.೧೫೦೦ ರಲ್ಲಿ, ಇಲ್ಲಿ ಜನ ವಾಸಿಸಲು ಆರಂಭಿಸಿದರು. ಪುರಾತನ ಕಾಲದ ನಾವಿಕರು ಹೇಳುವ ಕಥೆಗಳ ಪ್ರಕಾರ, ಕ್ರಿ.ಪೂ. ೬ ನೆಯ ಶತಮಾನದ ಜಾತಕ ಕಥೆಗಳಲ್ಲಿ ಈ ದ್ವೀಪಗಳ ಉಲ್ಲೇಖವಿದೆ. ಪುರಾತನ ಗ್ರೀಕ್ ನಾವಿಕರ 'ಸಮುದ್ರೀಯ ಭೂಪಟ' ಮತ್ತು ದಾಖಲೆಗಳಲ್ಲಿ ಈ ದ್ವೀಪಗಳ ಉಲ್ಲೇಖವಿದೆ. ಈ ದ್ವೀಪಕ್ಕೆ ಅವರು ಬಂದಿರಬಹುದು. 'ಪಾಥಿತ್ರಪ್ಪತ್ತು' ಎಂಬ ಸಂಗಮ ಸಾಹಿತ್ಯದಲ್ಲಿ ಈ ದ್ವೀಪಗಳು ಚೇರ ಸಾಮ್ರಾಜ್ಯಕ್ಕೆ ಸೇರಿದವು, ಎಂದು ಹೇಳಲಾಗಿದೆ. ೭ ನೆಯ ಶತಮಾನದ ಪಲ್ಲವ ಶಿಲಾಬರಹಗಳಲ್ಲಿ 'ದ್ವೀಪ ಲಕ್ಷಮ್' ಪಲ್ಲವರಿಗೆ ಸೇರಿದೆ ಎಂಬ ಉಲ್ಲೇಖವಿದೆ.

ಉಲ್ಲೇಖಗಳು[ಬದಲಾಯಿಸಿ]

  • ಸ್ಥಳೀಯ ಬರಹಗಳ ಪ್ರಕಾರ 'ಚೇರ ಸಾಮ್ರಾಜ್ಯದ ಕೊನೆಯ ಅರಸು ಚೇರಮನ್ ಪೆರುಮಾಳ್' ಕಾಲದಲ್ಲಿ ಇಲ್ಲಿ ಜನವಸತಿ ಆರಂಭವಾಗಿತ್ತು.ಮೊದಲು ಅಮಿನಿ, ಕಾಲ್ ಪೇನಿ,ಆಂಡ್ರೋಟ್, ಕವರಟ್ಟಿ, ಮತ್ತು ಅಗಾಟ್ಟಿ, ದ್ವೀಪಗಳಲ್ಲಿ ಕೇರಳದಿಂದ ಬಂದು ನೆಲೆಸಿದ ಜನರಿದ್ದರು.
  • ಪುರಾತತ್ವ ಇಲಾಖೆಯ ದಾಖಲೆಗಳ ಪ್ರಕಾರ ಇಲ್ಲಿ ಕ್ರಿ.ಶಕ ೫-೬ ನೆಯ ಶತಮಾನದಲ್ಲಿ ಬೌದ್ಧಧರ್ಮ ಪ್ರಚಲಿತದಲ್ಲಿತ್ತು.
  • ಕ್ರಿ.ಶ. ೬೬೧ ರಲ್ಲಿ, 'ಉಬೇದುಲ್ಲ' ಎಂಬ ಅರಬ್ ಇಲ್ಲಿಗೆ ಇಸ್ಲಾಂ ಧರ್ಮವನ್ನು ತಂದನು.
  • ೧೧ ಶತಮಾನದಲ್ಲಿ ಚೋಳರು ಆಧಿಪತ್ಯ ನಡೆಸಿದರು. ಅವರ ನಂತರ ದ್ವೀಪಗಳು, 'ಕಣ್ಣಾನೂರಿನ ಅರಸರ ಆಡಳಿತ'ಕ್ಕೆ ಒಳಗಾಯಿತು. ೧೩೪೩ ರಲ್ಲಿ ಅರಬ್ ಯಾತ್ರಿ,ಇಬ್ನ್ ಬಟೂಟಾ ಎಂಬುವನು ಎಂಬುವನು ಇಲ್ಲಿಗೆ ಬಂದಿದ್ದ ಎಂದು ಸ್ಥಳೀಯರು ಹೇಳುತ್ತಾರೆ.
  • ಪೋರ್ಚುಗೀಸರು ಇಲ್ಲಿ ೧೪೯೮ ರಲ್ಲೇ ಆಗಮಿಸಿದ್ದರು. ಅವರು ಇಲ್ಲಿ ತೆಂಗಿನನಾರಿನ ಉತ್ಪಾದನೆ ಪ್ರಾರಂಭಿಸಿದರು. ಆದರೆ ಸ್ಥಳೀಯರು ೧೫೪೫ ರಲ್ಲಿ ಅವರನ್ನು ಓಡಿಸಿದ್ದರು.
  • ೧೭ ನೆಯ ಶತಮಾನದಲ್ಲಿ ಕಣ್ಣೂರಿನ 'ಆಲಿ ರಜಾ ಅರಕ್ಕಲ್ ಭೀವಿ'ಗೆ ಈ ದ್ವೀಪಗಳು ಕೊಳತ್ತಿರಿ ರಾಜರಿಂದ ಕಾಣಿಕೆಯಾಗಿ ಸಿಕ್ಕಿತು. ಅಮಿನ್ ದೀವಿ ದ್ವೀಪಗಳು, ೧೭೮೭ ರಲ್ಲಿ ಟಿಪ್ಪುಸುಲ್ತಾನ ವಶಕ್ಕೆ ಬಂದವು. ಅವರ ಬಳಿಕ ಬ್ರಿಟಿಷರ ಸಮಯದಲ್ಲಿ ಅವು, ದಕ್ಷಿಣ ಕೆನರಾ ಭಾಗವಾಯಿತು.ಉಳಿದ ದ್ವೀಪಗಳನ್ನು ಕಣ್ಣಾನೂರಿನ ಅರಕ್ಕಲ್ ಮನೆತನ ಆಳುತ್ತಿತ್ತು. ಅರಕ್ಕಲ್ ರಾಜರು, ಕಪ್ಪ ಕೊಡದ ಕಾರಣ, ಬ್ರಿಟಿಷರು ಈ ದ್ವೀಪಗಳನ್ನು ವಶಪಡಿಸಿಕೊಂಡು ಮದ್ರಾಸ್ ಪ್ರೆಸಿಡೆನ್ಸಿಯ ಮಲಬಾರ್ ಜಿಲ್ಲೆಗೆ ಸೇರಿಸಿದರು.'ಬಂಗಾರಂ ಎನ್ನುವ ಚಿಕ್ಕ ದ್ವೀಪದಲ್ಲಿ ಜನರೇ ಇರಲಿಲ್ಲ. ಆದರೆ ಈಗ ಪ್ರರ್ಯಟಕರು ಈಗ ಹೆಚ್ಚಾಗಿ ಬರುತ್ತಿದ್ದಾರೆ'