ದ್ವೀಪಸಮೂಹ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ದ್ವೀಪಸಮೂಹವು ಭೂಪದರದ ಚಲನೆಗಳಿಂದ ರಚಿತವಾದ ದ್ವೀಪಗಳ ಒಂದು ಸಾಲು ಅಥವಾ ಗುಂಪು. ಈ ಪದವನ್ನು ಕೆಲವೊಮ್ಮೆ ಏಗಿಯನ್ ಸಮುದ್ರದಂತಹ ಹಲವಾರು ಚದರಿದ ದ್ವೀಪಗಳನ್ನು ಒಳಗೊಂಡ ಒಂದು ಸಮುದ್ರವನ್ನು ನಿರ್ದೇಶಿಸಲೂ ಬಳಸಲಾಗುತ್ತದೆ. ದ್ವೀಪಸಮೂಹಗಳು ಸಾಮಾನ್ಯವಾಗಿ ತೆರೆದ ಸಮುದ್ರಗಳಲ್ಲಿ ಕಂಡುಬರುತ್ತವೆ; ಕೆಲವೊಮ್ಮೆ, ಒಂದು ದೊಡ್ಡ ಭೂರಾಶಿಯು ಅವುಗಳ ಅಕ್ಕಪಕ್ಕದಲ್ಲಿರಬಹುದು. ಉದಾಹರಣೆಗೆ, ಸ್ಕಾಟ್‌ಲಂಡ್ ಅದರ ಭೂಪ್ರದೇಶದ ಸುತ್ತ ೭೦೦ಕ್ಕಿಂತ ಅಧಿಕ ದ್ವೀಪಗಳನ್ನು ಹೊಂದಿದೆ.