ಭಾರತೀಯ ಭಾಷೆಗಳು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಭಾರತದ ಅಧಿಕೃತ ಭಾಷೆಗಳು ಇಂದ ಪುನರ್ನಿರ್ದೇಶಿತ)

ಅಧಿಕೃತ ಭಾಷೆ[ಬದಲಾಯಿಸಿ]

  • ಸಂವಿಧಾನದ 343ನೇ ವಿಧಿಯು ದೇಶದ ಅಧಿಕೃತ ಭಾಷೆಯ ಕುರಿತು ವಿವರಿಸುತ್ತದೆ. (ಅಧಿಕೃತ ಭಾಷೆ ಎಂದರೆ ಸರ್ಕಾರದ ಹಾಗೂ ದಿನನಿತ್ಯದ ವ್ಯವಹಾರಗಳಲ್ಲಿ ಉಪಯೋಗಿಸುವ ಮತ್ತು ಕಾನೂನಾತ್ಮಕ ವಿಷಯಗಳಲ್ಲಿ ಬಳಸುವ ಭಾಷೆ). ಈ ವಿಧಿಯ ಪ್ರಕಾರ, ದೇವನಾಗರಿ ಲಿಪಿಯಲ್ಲಿರುವ ಹಿಂದಿಭಾಷೆಯು ಅಧಿಕೃತ ಭಾಷೆ. ಆದರೆ, ಈ ಭಾಷೆಯ ಜೊತೆಗೆ ಸರ್ಕಾರಿ ಉದ್ದೇಶಗಳಿಗಾಗಿ ಹಿಂದಿಯ ಜೊತೆ ಇಂಗ್ಲಿಷ್‌ ಭಾಷೆಯನ್ನು ಕೇಂದ್ರಾಡಳಿತ ಹಾಗೂ ಸಂಸತ್ತಿನಲ್ಲಿ ಅಧಿಕೃತ ಭಾಷೆಯನ್ನಾಗಿ ಸಂವಿಧಾನ ಆರಂಭದ (26ನೇ ಜನವರಿ 1965) 15 ವರ್ಷಗಳವರೆಗೆ ಮಾತ್ರ ಮುಂದುವರಿಸಿಕೊಂಡು ಹೋಗಬಹುದು (ಸಂವಿಧಾನ ನೀಡಿರುವ ಈ ಅವಧಿ 1980ಕ್ಕೆ ಮುಕ್ತಾಯಗೊಂಡಿದೆ). 15 ವರ್ಷ ಪೂರ್ಣಗೊಂಡ ಮೇಲೆ ಭಾಷೆಗೆ ಸಂಬಂಧಿಸಿದಂತೆ ಒಂದು ಆಯೋಗವನ್ನು ರಾಷ್ಟ್ರಪತಿಯವರು ರಚಿಸಬೇಕು.
  • ಅದರಲ್ಲಿ ಹಿಂದಿ ಸೇರಿದಂತೆ ಆಯಾ ರಾಜ್ಯಗಳಲ್ಲಿ ಬಳಸಬಹುದಾದ ಭಾಷೆಗಳ ಕುರಿತು ನಿರ್ಧಾರ ತೆಗೆದುಕೊಳ್ಳಬೇಕು. ಇಂಗ್ಲಿಷ್‌ ಬಿಟ್ಟು ಇತರ ಭಾಷೆಗಳಿಗೆ ಹೆಚ್ಚಿನ ಪ್ರೋತ್ಸಾಹ ಕೊಡುವುದು ಹಾಗೂ ಅಧಿಕೃತ ಬಳಕೆಗಾಗಿ ಇಂಗ್ಲಿಷ್‌ ಭಾಷೆಗೆ ಆದಷ್ಟು ಕಡಿವಾಣ ಹಾಕುವುದು ಈ ಆಯೋಗದ ಮುಖ್ಯ ಉದ್ದೇಶ ಆಗಿರಬೇಕು ಎಂದು 344ನೇ ವಿಧಿಯಲ್ಲಿ ಉಲ್ಲೇಖಿಸಲಾಗಿದೆ. ಇದರಲ್ಲಿ ಹಿಂದಿಯ ಜೊತೆಗೆ ಬೇರೆಬೇರೆ ರಾಜ್ಯಗಳ 22 ಭಾಷೆಗಳನ್ನು ಅಧಿಕೃತ ಭಾಷೆಗಳು ಎಂದು ವಿವರಿಸಲಾಗಿದೆ. ರಾಜ್ಯಗಳು ಪರಸ್ಪರ ವ್ಯವಹರಿಸುವಾಗ ಅಥವಾ ಕೇಂದ್ರದ ಜೊತೆ ವ್ಯವಹಾರ ಮಾಡುವ ಸಂದರ್ಭಗಳಲ್ಲಿ ಈ 22 ಭಾಷೆಗಳನ್ನು ಬಳಸಬಹುದು ಎಂದು 344(1)ರಲ್ಲಿ ಸ್ಪಷ್ಟಪಡಿಸಲಾಗಿದೆ.
  • ಅದರಲ್ಲಿ ಕನ್ನಡ, ತೆಲುಗು, ತಮಿಳು, ಮರಾಠಿ, ಮಲಯಾಳಂ, ಗುಜರಾತಿ ಇತ್ಯಾದಿ ಭಾಷೆಗಳಿವೆ. ಹೀಗೆ ವ್ಯವಹಾರಕ್ಕೆ ಸಂಬಂಧಿಸಿದಂತೆ ಒಂದು ರಾಜ್ಯಕ್ಕೆ ಅಧಿಕೃತ ಭಾಷೆ ಎಂದು ಘೋಷಿಸುವಾಗ ಹಿಂದಿ ಬಾರದ ವ್ಯಕ್ತಿಗಳನ್ನೂ ಗಮನದಲ್ಲಿ ಇಟ್ಟುಕೊಳ್ಳಬೇಕು ಎಂದು ಇದೇ ವಿಧಿಯ ‘ಇ‘ ಉಪವಿಧಿಯಲ್ಲಿ ಉಲ್ಲೇಖಿಸಲಾಗಿದೆ. ಆದ್ದರಿಂದ ಹಿಂದಿಯು ಅಧಿಕೃತ ಭಾಷೆ (official language) ಎಂದಿದೆಯೇ ಹೊರತು ರಾಷ್ಟ್ರೀಯ ಭಾಷೆ (national language) ಎಂದು ಸಂವಿಧಾನದಲ್ಲಿ ಉಲ್ಲೇಖವಾಗಿಲ್ಲ.
  • ಸಂವಿಧಾನದ ಎಂಟನೇ ಅನುಬಂಧದಲ್ಲಿ ಇಂಗ್ಲಿಷ್ ಬಿಟ್ಟು ೧೫ ಭಾರತೀಯ ಭಾಷೆಗಳನ್ನು ಮಾತ್ರಾ ಸೇರಿಸಲಾಗಿತ್ತು. (ನಂತರ ಇತರ ಕೆಲವು ಭಾಷೆಗಳನ್ನು ಸೇರಿಸಿದೆ).[೧]

ಸಂವಿಧಾನದ ಎಂಟನೇ ಪರಿಚ್ಛೇದದಲ್ಲಿ ಗುರುತಿಸಿದ ಅಧಿಕೃತ ಭಾರತೀಯ ಭಾಷೆಗಳ ಪಟ್ಟಿ:[ಬದಲಾಯಿಸಿ]

ಭಾಷೆಗಳು ಕುಟುಂಬ ಮಾತನಾಡುವವರ ಜನಸಂಖ್ಯೆ
(ಮಿಲಿಯನ್‌ಗಳಲ್ಲಿ, 2011ರ ಜನಗಣತಿ ಪ್ರಕಾರ)[೨]
ಅಧಿಕೃತ ಭಾಷೆಯನ್ನು ಹೊಂದಿದ ರಾಜ್ಯ(ಗಳು)
ಅಸ್ಸಾಮಿ ಇಂಡೋ-ಆರ್ಯನ್ 15.3 ಅಸ್ಸಾಂ, ಅರುಣಾಚಲ ಪ್ರದೇಶ
ಬೆಂಗಾಲಿ ಇಂಡೋ-ಆರ್ಯನ್ 97.2 ಪಶ್ಚಿಮ ಬಂಗಾಳ, ತ್ರಿಪುರ, ಅಸ್ಸಾಂ, ಅಂಡಮಾನ್ ಮತ್ತು ನಿಕೋಬಾರ್, ಝಾರ್ಖಂಡ್[೩]
ಬೋಡೊ ಟಿಬೇಟೋ-ಬರ್ಮನ್ 1.48 ಅಸ್ಸಾಂ
ಡೋಗ್ರಿ ಇಂಡೋ-ಆರ್ಯನ್ 2.6 ಜಮ್ಮು ಮತ್ತು ಕಾಶ್ಮೀರ, ಹಿಮಾಚಲ ಪ್ರದೇಶ
ಗುಜರಾತಿ ಇಂಡೋ-ಆರ್ಯನ್ 55.5 ದಾದ್ರಾ ಮತ್ತು ನಗರ್ ಹವೇಲಿ, ದಮನ್ ಮತ್ತು ದಿಯು, ಗುಜರಾತ್
ಹಿಂದಿ ಇಂಡೋ-ಆರ್ಯನ್ 528 ಅಂಡಮಾನ್ ಮತ್ತು ನಿಕೋಬಾರ್, ಬಿಹಾರ, ದಾದ್ರಾ ಮತ್ತು ನಗರ್ ಹವೇಲಿ, ಛತ್ತೀಸ್‌ಘಡ್, ದೆಹಲಿ, ಗುಜರಾತ್, ಹರಿಯಾಣ, ಹಿಮಾಚಲ ಪ್ರದೇಶ, ಝಾರ್ಖಂಡ್, ಮಧ್ಯಪ್ರದೇಶ, ಜಮ್ಮು ಮತ್ತು ಕಾಶ್ಮೀರ, ಮಿಜೋರಂ, ರಾಜಸ್ಥಾನ, ಉತ್ತರ ಪ್ರದೇಶ, ಉತ್ತರಾಖಂಡ ಮತ್ತು ಪಶ್ಚಿಮ ಬಂಗಾಳ[೪][೫]
ಕನ್ನಡ ಭಾಷೆ ದ್ರಾವಿಡ 43.7 ಕರ್ನಾಟಕ
ಕಾಶ್ಮೀರಿ ಇಂಡೋ-ಆರ್ಯನ್ 6.8 ಜಮ್ಮು ಮತ್ತು ಕಾಶ್ಮೀರ
ಕೊಂಕಣಿ ಇಂಡೋ-ಆರ್ಯನ್ 2.25 ಮಹಾರಾಷ್ಟ್ರ, ಗೋವಾ, ಕರ್ನಾಟಕ ಮತ್ತು ಕೇರಳ (ಕೊಂಕಣ ತೀರ)[೬][೭]
ಮೈಥಿಲಿ ಇಂಡೋ-ಆರ್ಯನ್ 13.6 ಬಿಹಾರ, ಝಾರ್ಖಂಡ್[೮]
ಮಲಯಾಳಂ ದ್ರಾವಿಡ 34.8 ಕೇರಳ, ಲಕ್ಷದ್ವೀಪ, ಪಾಂಡಿಚೆರಿ
ಮಣಿಪುರಿ ಟಿಬೇಟೋ-ಬರ್ಮನ್ 1.8 ಮಣಿಪುರ
ಮರಾಠಿ ಇಂಡೋ-ಆರ್ಯನ್ 83 ಮಹಾರಾಷ್ಟ್ರ, ಗೋವಾ, ದಾದ್ರಾ ಮತ್ತು ನಗರ್ ಹವೇಲಿ, ದಮನ್ ಮತ್ತು ದಿಯು
ನೇಪಾಳಿ ಇಂಡೋ-ಆರ್ಯನ್ 2.9 ಸಿಕ್ಕಿಂ ಮತ್ತು ಪಶ್ಚಿಮ ಬಂಗಾಳ
ಒಡಿಯಾ ಇಂಡೋ-ಆರ್ಯನ್ 37.5 ಒಡಿಶಾ, ಝಾರ್ಖಂಡ್,[೯][೧೦][೧೧] ಪಶ್ಚಿಮ ಬಂಗಾಳ[೪][೫]
ಪಂಜಾಬಿ ಇಂಡೋ-ಆರ್ಯನ್ 33.1 ಚಂಡೀಗಡ, ದೆಹಲಿ, ಹರಿಯಾಣ, ಪಂಜಾಬ್, ಪಶ್ಚಿಮ ಬಂಗಾಳ[೪][೫]
ಸಂಸ್ಕೃತ ಇಂಡೋ-ಆರ್ಯನ್ 0.02 ಉತ್ತರಾಖಂಡ
ಸಂತಾಲಿ ಮುಂಡಾ 7.3 ಝಾರ್ಖಂಡ್‌ನ ಸಂತಾಲ ಬುಡಕಟ್ಟು ಜನಾಂಗದ ಜನರ ಈ ಭಾಷೆಯನ್ನು ಅಸ್ಸಾಂ, ಬಿಹಾರ, ಛತ್ತೀಸ್‌ಘಡ್, ಮಿಜೋರಂ, ಒಡಿಶಾ, ತ್ರಿಪುರ, ಪಶ್ಚಿಮ ಬಂಗಾಳ[೧೨] ರಾಜ್ಯಗಳಲ್ಲೂ ಮಾತನಾಡುತ್ತಾರೆ.
ಸಿಂಧಿ ಇಂಡೋ-ಆರ್ಯನ್ 2.7 ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ ಮತ್ತು ಭಾರತದ ಉಲ್ಹಾಸ್‌ನಗರ್‌ನಲ್ಲೂ ಮಾತನಾಡುತ್ತಾರೆ.
ತಮಿಳು ದ್ರಾವಿಡ 69 ತಮಿಳುನಾಡು, ಪಾಂಡಿಚೆರಿ, ಅಂಡಮಾನ್ ಮತ್ತು ನಿಕೊಬಾರ್
ತೆಲುಗು ದ್ರಾವಿಡ 81.1 ಆಂಧ್ರಪ್ರದೇಶ, ತೆಲಂಗಾಣ ಮತ್ತು ಪಾಂಡಿಚೆರಿ
ಉರ್ದು ಇಂಡೋ-ಆರ್ಯನ್ 50.7 ಜಮ್ಮು ಮತ್ತು ಕಾಶ್ಮೀರ, ತೆಲಂಗಾಣ, ಝಾರ್ಖಂಡ್, ದೆಹಲಿ, ಬಿಹಾರ, ಉತ್ತರ ಪ್ರದೇಶ ಮತ್ತು ಪಶ್ಚಿಮ ಬಂಗಾಳ[೪][೫]

ಭಾಷೆಗಳ ಸಮೀಕ್ಷೆ[ಬದಲಾಯಿಸಿ]

  • ಪೀಪಲ್ಸ್ ಲಿಂಗ್ವಿಸ್ಟಿಕ್ ಸರ್ವೆ ಆಫ್ ಇಂಡಿಯಾವನ್ನು ಜಗತ್ತಿನಲ್ಲಿ ಈವರೆಗೆ ನಡೆದಿರುವ ಭಾಷಾ ಸಮೀಕ್ಷೆಗಳಲ್ಲೇ ಅತ್ಯಂತ ದೊಡ್ಡ ಸಮೀಕ್ಷೆ ನಡೆಸಿದೆ. ಇದೇ ಸಂದರ್ಭದಲ್ಲಿ ಭಾರತದ ಒಳನಾಡಿನಲ್ಲಿರುವ ಕೆಲವು ಬುಡಕಟ್ಟು ಭಾಷೆಗಳು ಬೆಳವಣಿಗೆಯನ್ನು ದಾಖಲಿಸಿದೆ. ಭಾರತದಲ್ಲಿ 780 ಭಾಷೆಗಳನ್ನು ಗುರುತಿಸಲಾಗಿದೆ. ಅವಲ್ಲದೆ 100 ಪ್ರತ್ಯೇಕ ಅಸ್ತಿತ್ವ ಪತ್ತೆಯಾಗದೇ ಉಳಿದಿರಬಹುದಾದ ಭಾರತದ ಭಾಷೆಗಳು ಇವೆ ಎಂದು ಅಂದಾಜಿಸಿದೆ. 780 ಭಾಷೆಗಳಲ್ಲಿ 400 ಭಾರತದ ಭಾಷೆಗಳು ಅಳಿವಿನಂಚಿನಲ್ಲಿವೆ. ಇವು ಮುಂದಿನ 50 ವರ್ಷಗಳಲ್ಲಿ ನಶಿಸಿ ಹೋಗುವ ಅಪಾಯ ಎದುರಿಸುತ್ತಿವೆ’ ಎಂದು ಭಾಷಾಶಾಸ್ತ್ರಜ್ಞ ಗಣೇಶ್ ಎನ್‌. ದೇವಿ ಅವರ ಅಭಿಪ್ರಾಯ.
  • ಕನ್ನಡಕ್ಕೆ ಅಳಿವಿಲ್ಲವೆಂದು ಹೇಳಲಾಗಿದೆ. ಕನ್ನಡ, ಹಿಂದಿ, ಮರಾಠಿ, ಬಂಗಾಳಿ, ತೆಲುಗು, ತಮಿಳು, ಪಂಜಾಬಿ ಮತ್ತು ಮಲಯಾಳದಂತಹ ಭಾಷೆಗಳಿಗೆ ಇಂಗ್ಲಿಷ್‌ನಿಂದ ಅಪಾಯವಿಲ್ಲ. ಇವುಗಳನ್ನು ಜಗತ್ತಿನ ಅತ್ಯಂತ ದೊಡ್ಡ, ಪ್ರಬಲ ಮತ್ತು ಪ್ರಮುಖ 30 ಭಾಷೆಗಳೆಂದು ಪರಿಗಣಿಸಲಾಗಿದೆ. ಇವುಗಳಿಗೆ 1,000 ವರ್ಷಗಳಿಗಿಂತಲೂ ದೀರ್ಘಾವಧಿಯ ಇತಿಹಾಸವಿದೆ.[೧೩]

ಭಾಷಾವಾರು ಜನಸಂಖ್ಯೆ[ಬದಲಾಯಿಸಿ]

ಭಾರತದಲ್ಲಿ ಇತ್ತೀಚೆಗೆ ನಡೆದ ಸಮೀಕ್ಷೆಯಲ್ಲಿ ದೇಶದಲ್ಲಿ ಕನ್ನಡ 1ನೇ ಸ್ಥಾನದಲ್ಲಿದೆ. 2001ರಿಂದ 2011ರವರೆಗೆ ಕನ್ನಡ ಭಾಷೆ ಮಾತನಾಡುವವರ ಸಂಖ್ಯೆ 4,37,06,512. ಭಾರತದ ಜನಸಂಖ್ಯೆಯ ಶೇ. 3.37 ರಷ್ಟು. ಆದರೆ ಮತ್ತೊಂದು ಸಮೀಕ್ಷೆ 3.69 % (37,924,011) (ಕನ್ನಡ:4,37,06,512 - 3.73% ಇಂ.ವಿಕಿ ಸೆನ್ಸಸ್ - 2011-)ಎನ್ನುತ್ತದೆ. ಇತರ ಪ್ರಮುಖ ಭಾಷೆಗಳನ್ನು ಮಾತನಾಡವವರ ಪ್ರಮಾಣ ಹೀಗಿದೆ:- [೧೪]

2011ರ ಜನಗಣತಿ ವರದಿ - ಭಾಷೆಗಳು ಒಟ್ಟು ಪ್ರಮಾಣ ಶೇ.
ದೇಶದಲ್ಲಿ ಒಟ್ಟು ಭಾಷೆಗಳು 19,569
ಸಾವಿರಕ್ಕಿಂತ ಹೆಚ್ಚು ಜನರು ಮಾತನಾಡುವ ಭಾಷೆಗಳ ಸಂಖ್ಯೆ 121.
ಸಂವಿಧಾನದ 8ನೇ ಪರಿಚ್ಛೇದದಲ್ಲಿ ಸೇರ್ಪಡೆಯಾಗಿರುವ ಭಾಷೆಗಳು 22 96.71
ಗುರುತಿಸಬಲ್ಲ ಮಾತೃಭಾಷೆಗಳು 1,369
ಇತರ ಭಾಷೆಗಳು 1,474
10 ಸಾವಿರಕ್ಕಿಂತ ಹೆಚ್ಚು ಜನರು ಮಾತನಾಡುವ ಗುರುತಿಸಬಹುದಾದ ಮಾತೃಭಾಷೆಗಳು 270
8ನೇ ಪರಿಚ್ಛೇದದಲ್ಲಿ ಸೇರಿದ ಭಾಷೆಗಳ ಗುಂಪಿಗೆ ಸೇರಿದೆ 123
ಪರಿಚ್ಛೇದದಲ್ಲಿ ಸೇರದ ಮಾತೃಭಾಷೆ ಗುಂಪಿನಲ್ಲಿ 147
[೧೫]

ನೋಡಿ[ಬದಲಾಯಿಸಿ]

ಭಾಷೆ  ; ಭಾಷೆಯ ರಚನೆ  ; ಭಾಷಾ ವಂಶವೃಕ್ಷ  ; ಭಾಷಾ ವಿಜ್ಞಾನ  ; ಭಾಷಾವೈಶಿಷ್ಟ್ಯ  ; ಭಾಷಾಶಾಸ್ತ್ರ ಚಿಂತನೆಯ ಇತಿಹಾಸ ; ಭಾಷಾ ಪ್ರಯೋಗಾಲಯ ; ಭಾಷಿಕ ಸಾಪೇಕ್ಷತೆ  ; ಭಾಷಾಂತರ;ಭಾಷಾ ಕುಟುಂಬಗಳ ಪಟ್ಟಿ

ಹೆಚ್ಚಿನ ಓದಿಗೆ[ಬದಲಾಯಿಸಿ]

ಉಲ್ಲೇಖ[ಬದಲಾಯಿಸಿ]

  1. Cmnstitution of India with short notes;Eastern Book Company Law publishers and Book sellers;34Lalbagh, Lucknow226001;1979.
  2. "Statement 1 – Abstract of Speakers' Strength of Languages and Mother Tongues – 2011" (PDF). Ministry of Home Affairs, Government of India.
  3. "ಆರ್ಕೈವ್ ನಕಲು". Archived from the original on 2014-01-06. Retrieved 2019-10-19.
  4. ೪.೦ ೪.೧ ೪.೨ ೪.೩ ಉಲ್ಲೇಖ ದೋಷ: Invalid <ref> tag; no text was provided for refs named Telegraph:1
  5. ೫.೦ ೫.೧ ೫.೨ ೫.೩ ಉಲ್ಲೇಖ ದೋಷ: Invalid <ref> tag; no text was provided for refs named Indiatoday:1
  6. "The Origins of the Konkani Language". www.kamat.com. 15 August 1997 – 15 January 2016.
  7. "Indian Languages: Konkani Language". iloveindia.com.
  8. "ಆರ್ಕೈವ್ ನಕಲು". Archived from the original on 2018-03-21. Retrieved 2019-10-19.
  9. "Oriya gets its due in neighbouring state- Orissa- IBNLive". Ibnlive.in.com. 4 September 2011. Archived from the original on 15 ಆಗಸ್ಟ್ 2012. Retrieved 29 November 2012.
  10. Naresh Chandra Pattanayak (1 September 2011). "Oriya second language in Jharkhand". Times Of India. Archived from the original on 7 ನವೆಂಬರ್ 2011. Retrieved 29 November 2012.
  11. "Bengali, Oriya among 12 dialects as 2nd language in Jharkhand". daily.bhaskar.com. 31 August 2011. Retrieved 29 November 2012.
  12. "Santhali". Ethnologue.com. Retrieved 3 May 2018.
  13. ಭಾರತದ ನಾನೂರು ಭಾಷೆಗಳು ಅಳಿವಿನತ್ತಪ್ರಜಾವಾಣಿ ವಾರ್ತೆ;6 Aug, 2017
  14. ದೇಶದಲ್ಲಿ ಕನ್ನಡ ಅತಿ ಹೆಚ್ಚು ಜನರು ಮಾತನಾಡುವ 8ನೇ ಭಾಷೆ: ಸಮೀಕ್ಷೆPublished: 29 Jun 2018
  15. ಭಾರತದಲ್ಲಿರುವ ಭಾಷೆಗಳು 19,5690;;1 ಜುಲೈ 2018