ಭಾಷಾ ಕುಟುಂಬಗಳ ಪಟ್ಟಿ
ಗೋಚರ
ಪ್ರಮುಖ ಭಾಷಾ ಕುಟುಂಬಗಳು
[ಬದಲಾಯಿಸಿ]ಸ್ಥಳೀಯ ಭಾಷೆಗಳನ್ನು ಮಾತನಾಡುವವರ ಸಂಖ್ಯೆಯ ಅನುಸಾರವಾಗಿ
[ಬದಲಾಯಿಸಿ]ಇದು, ಸ್ಥಳೀಯ ಭಾಷೆಗಳನ್ನು ಮಾತನಾಡುವವರ ಸಂಖ್ಯೆಯ ಅನುಸಾರವಾಗಿ, ಜನಾಂಗಗಳ ಉಗಮ ಸಂಬಂಧಿ ಘಟಕಗಳಾಗಿ, ಅವುಗಳ ಮುಖ್ಯ ಭೌಗೋಳಿಕ ಪ್ರದೇಶಗಳೊಂದಿಗೆ ಪಟ್ಟಿ ಮಾಡಲಾದ, ವ್ಯಾಪಕ ಮಾನ್ಯತೆಯುಳ್ಳ ಪ್ರಮುಖವಾದ ಹತ್ತು ಕುಟುಂಬಗಳ ಒಂದು ಪಟ್ಟಿ.
- ಇಂಡೋ-ಯುರೋಪಿಯನ್ ಭಾಷೆಗಳು (ಯೂರೋಪ್, ದಕ್ಷಿಣಪಶ್ಚಿಮದಿಂದ ದಕ್ಷಿಣ ಏಷ್ಯಾ, ಅಮೇರಿಕ, ಓಷ್ಯಾನಿಯಾ)
- ಚೀನಿ-ಟಿಬೆಟನ್ ಭಾಷೆಗಳು (ಪೂರ್ವ ಏಷ್ಯಾ)
- ನೈಜರ್-ಕಾಂಗೊ ಭಾಷೆಗಳು (ಸಹಾರಾದ ಕೆಳಗಿನ ಆಫ್ರಿಕಾ)
- ಆಫ್ರೋ-ಏಷ್ಯಾಟಿಕ್ ಭಾಷೆಗಳು (ಉತ್ತರ ಆಫ್ರಿಕಾದಿಂದ ಉತ್ತರಪೂರ್ವ ಆಫ್ರಿಕಾ, ದಕ್ಷಿಣಪಶ್ಚಿಮ ಏಷ್ಯಾ)
- ಆಸ್ಟ್ರೋನೇಸ್ಯದ ಭಾಷೆಗಳು (ಓಷ್ಯಾನಿಯಾ, ಮ್ಯಾಡಗ್ಯಾಸ್ಕರ್, ಮಲೇ ದ್ವೀಪ ಸಮೂಹ)
- ದ್ರಾವಿಡ ಭಾಷೆಗಳು (ದಕ್ಷಿಣ ಏಷ್ಯಾ)
- ಆಲ್ಟಾಯಿಕ್ ಭಾಷೆಗಳು (ಮಧ್ಯ ಏಷ್ಯಾ, ಉತ್ತರ ಏಷ್ಯಾ, ಅನಟೋಲಿಯ, ಸಾಯ್ಬೀರಿಯಾ)
- ಆಸ್ಟ್ರೋ-ಏಷ್ಯಾಟಿಕ್ ಭಾಷೆಗಳು (ದಕ್ಷಿಣ ಏಷ್ಯಾದ ಭೂಪ್ರದೇಶ)
- ತಾಯ್-ಕಡಾಯ್ ಭಾಷೆಗಳು (ದಕ್ಷಿಣಪೂರ್ವ ಏಷ್ಯಾ)
- ಜಪಾನಿಕ್ ಭಾಷೆಗಳು (ಜಪಾನ್)
ಐತಿಹಾಸಿಕವಾಗಿ ವ್ಯಾಪಕ ಭೌಗೋಳಿಕ ಹರಡುವಿಕೆಗಳನ್ನುಳ್ಳ ಆದರೆ ತುಲನಾತ್ಮಕವಾಗಿ ಕಡಿಮೆ ಸಮಕಾಲೀನ ಭಾಷಾ ಬಳಕೆದಾರರನ್ನುಳ್ಳ ಸಂಬಂಧಿತ ಭಾಷೆಗಳ ವರ್ಗಗಳು, ಎಸ್ಕಿಮೋ-ಅಲ್ಯೂಟ್, ನಾ-ದೆನೆ, ಆಲ್ಗಿಕ್, ಕೆಚ್ವನ್ ಮತ್ತು ನೈಲೋ-ಸಹಾರನ್‌ಗಳನ್ನು ಒಳಗೊಂಡಿವೆ.