ವಿಷಯಕ್ಕೆ ಹೋಗು

ಸುನೀತಿ ಕುಮಾರ್ ಚಟರ್ಜಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸುನೀತಿ ಕುಮಾರ್ ಚಟರ್ಜಿ
ಜನನನವಂಬರ್ ೨೬, ೧೯೮೦
ಹೊವ್ರಾದ ಶಿಬ್ ಪುರ್
ಮರಣಮೇ ೨೯, ೧೯೭೭
ಕಲ್ಕತ್ತಾ
ಪ್ರಶಸ್ತಿಗಳುಪದ್ಮಭೂಷಣ(೧೯೫೫)

ಸುನೀತಿ ಕುಮಾರ್ ಚಟರ್ಜಿ (ನವಂಬರ್ ೨೬, ೧೯೮೦ - ಮೇ ೨೯, ೧೯೭೭) ಒಬ್ಬ ಭಾರತೀಯ ಭಾಷಾಶಾಸ್ತ್ರಜ್ಞ, ಶೈಕ್ಷಣಿಕವಾದಿ ಮತ್ತು ಸಾಹಿತಿ. ಇವರು ಪದ್ಮಭೂಷಣ ಪ್ರಶಸ್ತಿಯಿಂದ ಗೌರವಿಸಲ್ಪಟ್ಟಿದ್ದಾರೆ.

ಬಾಲ್ಯ

[ಬದಲಾಯಿಸಿ]

ಸುನೀತಿ ಕುಮಾರ್ ಚಟರ್ಜಿ ಹುಟ್ಟಿದ್ದು ನವಂಬರ್ ೨೬, ೧೯೮೦ ರಲ್ಲಿ. ಇವರ ಹುಟ್ಟೂರು ಬಂಗಾಳದಲ್ಲಿ ಹೊವ್ರಾದ ಶಿಬ್ ಪುರ್. ಇವರು ಶ್ರೀಮಂತ ಕುಲಿನ್ ಬ್ರಾಹ್ಮಣ ಕುಟುಂಬದ ಹರಿದಾಸ್ ಚಟ್ಟೋಪಾದ್ಯಾಯರ ಮಗ.

ಶಿಕ್ಷಣ

[ಬದಲಾಯಿಸಿ]

ಸುನೀತಿ ಕುಮಾರ್ ಚಟರ್ಜಿ ಒಬ್ಬ ಪ್ರಶಂಸನೀಯ ವಿದ್ಯಾರ್ಥಿಯಾಗಿದ್ದರು ಮತ್ತು ೧೯೦೭ ರಲ್ಲಿ ಮುಟ್ಟಿಲಾಲ್ ಸೀಲ್ ನ ಶಾಲೆಯಲ್ಲಿ, ೮ ನೇ ಶ್ರೇಣಿ ಪಡೆದು ಅರ್ಹತಾ ಪರೀಕ್ಷೆಯೊಂದಿಗೆ ತೇರ್ಗಡೆ ಹೊಂದಿದ್ದರು. ಪದವಿಪೂರ್ವ ಶಿಕ್ಷಣವನ್ನು ಸ್ಕಾಟಿಶ್ ಚರ್ಚ್ ಕಾಲೇಜಿನಲ್ಲಿ ಮುಗಿಸುವಾಗ ೩ ನೇ ಶ್ರೇಣಿ ಪಡೆದಿದ್ದರು. ೧೯೧೧ ರಲ್ಲಿ ಇವರು ಪ್ರೆಸಿಡೆನ್ಸಿ ಕಾಲೇಜು, ಕೊಲ್ಕತ್ತಾದಲ್ಲಿ ಇಂಗ್ಲೀಷ್ ಸಾಹಿತ್ಯ ವಿಭಾಗವನ್ನು ಆಯ್ಕೆ ಮಾಡಿ ಪ್ರಥಮ ಶ್ರೇಣಿಯೊಂದಿಗೆ ಪದವಿ ಶಿಕ್ಷಣ ಮುಗಿಸಿದ್ದರು. ಅವರು ೧೯೧೩ ರಲ್ಲಿ ಇಂಗ್ಲೀಷ್ ಸಾಹಿತ್ಯದಲ್ಲಿ ಪ್ರಥಮ ಶ್ರೇಣಿಯೊಂದಿಗೆ ಸ್ನಾತಕೋತ್ತರ ಪದವಿ ಪಡೆದರು. ಅದೇ ವರ್ಷದಲ್ಲಿ ಅವರು ಕಲ್ಕತ್ತಾ ದ ವಿದ್ಯಾಸಾಗರ ಕಾಲೇಜಿನಲ್ಲಿ ಇಂಗ್ಲೀಷ್ ಉಪನ್ಯಾಸಕರಾಗಿ ನೇಮಕಗೊಂಡರು.

ಉದ್ಯೋಗ

[ಬದಲಾಯಿಸಿ]

೧೯೧೪ ರಲ್ಲಿ ಅವರು ಕಲ್ಕತ್ತಾ ವಿಶ್ವವಿದ್ಯಾಲಯ ಸ್ನಾತಕೋತ್ತರದ ಇಂಗ್ಲೀಷ್ ವಿಭಾಗದಲ್ಲಿ ಸಹಾಯಕ ಪ್ರಾದ್ಯಾಪಕರಾಗಿ ೧೯೧೯ ರವರೆಗೆ ಕೆಲಸ ಮಾಡಿದ್ದರು. ನಂತರ ಹೆಚ್ಚಿನ ಶಿಕ್ಷಣಕ್ಕಗಿ ಅವರು ಲಂಡನ್ ವಿಶ್ವವಿದ್ಯಾಲಯಕ್ಕೆ ಹೋದರು. ಅಲ್ಲಿ ಧ್ವನಿವಿಜ್ಞಾನ, ಇಂಡೋ-ಯುರೋಪಿಯನ್ ಭಾಷಾಶಾಸ್ತ್ರ, ಪ್ರಕೃತ್, ಪರ್ಶಿಯನ್, ಹಳೆಯ ಐರಿಶ್, ಗೋತಿಕ್ ಮತ್ತು ಇತರೆ ಭಾಷೆಗಳನ್ನು ಅಧ್ಯಯನ ಮಾಡಿದರು. ಅವರು ಪ್ಯಾರಿಸ್ ಗೆ ಹೋಗಿ ಸೋರ್ ಬೊನ್ನೆಯಲ್ಲಿ ಇಂಡೋ-ಆರ್ಯನ್, ಸ್ಲಾವ್ ಮತ್ತು ಇಂಡೋ-ಯುರೋಪಿಯನ್ ಭಾಷಾಶಾಸ್ತ್ರ, ಗ್ರೀಕ್ ಮತ್ತು ಲ್ಯಾಟೀನ್ ಭಾಷೆಗಳಲ್ಲಿ ಸಂಶೋಧನೆ ನಡೆಸಿದರು. ಅಂತರಾಷ್ಟ್ರೀಯ ಮೆಚ್ಚುಗೆ ಪಡೆದ ಭಾಷಾಶಾಸ್ತ್ರಜ್ಞ, ಜೂಲೆಸ್ ಬ್ಲೋಚ್ ಅವರ ಗುರುಗಳಾಗಿದ್ದರು. ೧೯೨೨ ರಲ್ಲಿ ಭಾರತಕ್ಕೆ ಮರಳಿದ ಅವರು ಕಲ್ಕತ್ತಾ ವಿಶ್ವವಿದ್ಯಾಲಯದಲ್ಲಿ ಭಾರತೀಯ ಭಾಷಾಶಾಸ್ತ್ರ ಮತ್ತು ಧ್ವನಿವಿಜ್ಞಾನ ವಿಭಾಗದಲ್ಲಿ ಖೈರಾ ಪ್ರಾದ್ಯಾಪಕರಾಗಿ ಕೆಲಸ ಮಾಡಿದರು. ೧೯೫೨ ರಲ್ಲಿ ನಿವೃತ್ತಿ ಹೊಂದಿದ ನಂತರ ಎಮಿಟಸ್ ಪ್ರಾದ್ಯಾಪಕರಾಗಿ ಕೊನೆಗೆ ೧೯೬೫ ರಲ್ಲಿ ಮಾನವಿಕ ವಿಭಾಗಕ್ಕೆ ಭಾರತದ ರಾಷ್ಟ್ರೀಯ ಸಂಶೋಧನಾ ಪ್ರಾದ್ಯಾಪಕರಾಗಿ ಕೆಲಸ ಮಾಡಿದರು.

ಟಾಗೋರ್ ರೊಂದಿಗೆ ವಿದೇಶಯಾತ್ರೆ

[ಬದಲಾಯಿಸಿ]

ರವೀಂದ್ರನಾಥ ಟಾಗೋರ್ ರೊಂದಿಗೆ ಮಲಾಯ, ಸಿಯಾಮ್, ಸುಮಾತ್ರ, ಜಾವಾ ಮತ್ತು ಬಾಲಿ ಹೊರದೇಶಗಳಿಗೆ ಸುನೀತಿ ಕುಮಾರ್ ಚಟರ್ಜಿಯವರು ಜೊತೆಗಿದ್ದಿದ್ದು ಮಾತ್ರವಲ್ಲದೆ, ಭಾರತೀಯ ಕಲೆ ಮತ್ತು ಸಂಸ್ಕೃತಿಯ ಬಗ್ಗೆ ಉಪನ್ಯಾಸ ನೀಡಿದ್ದರು. ೧೯೫೨ ರಿಂದ ೧೯೬೯ ರವರೆಗೆ ಅವರು ಪಶ್ಚಿಮ ಬಂಗಾಳದ ಶಾಸನ ಮಂಡಳಿಯ ಅಧ್ಯಕ್ಷರಾಗಿದ್ದರು ಮತ್ತು ೧೯೬೯ ರಲ್ಲಿ ಸಾಹಿತ್ಯ ಅಕಾದೆಮಿಯ ಅಧ್ಯಕ್ಷರಾಗಿದ್ದರು. ಬಂಗಾಳಿ ಭಾಷಾಶಾಸ್ತ್ರಜ್ಞ ಸುಕುಮಾರ್ ಸೇನ್ ಇವರ ಶಿಷ್ಯರಾಗಿದ್ದರು.

ಬರಹಗಳು

[ಬದಲಾಯಿಸಿ]

ಭಾಷೆ ಮತ್ತು ಸಾಹಿತ್ಯ ಎರಡೂ ಪ್ರಾಕಾರಗಳಲ್ಲಿ ಅವರು ಕೃತಿಗಳನ್ನು ಪ್ರಕಟಿಸಿದ್ದು, ಮುಖ್ಯವಾದುವು ಇಲ್ಲಿವೆ:

  • ದಿ ಒರಿಜಿನ್ ಆಂಡ್ ಡೆವೆಲೆಪ್ ಮೆಂಟ್ ಆಫ಼್ ದಿ ಬಂಗಾಳಿ ಲ್ಯಾಂಗ್ವೇಜ್
  • ಬಂಗಾಳಿ ಫ಼ೋನೆಟಿಕ್ ರೀಡರ್[]
  • ಇಂಡೋ ಆರ್ಯನ್ ಆಂಡ್ ಹಿಂದಿ[]

ದ್ವೀಪಮಯ ಭಾರತ್ (೧೯೪೦) ಭಾರತ್ ಸಂಸ್ಕೃತಿ (೧೯೫೭)

  • ರಾಮಾಯಣ : ಇಟ್ಸ್ ಕ್ಯಾರೆಕ್ಟರ್, ಜೆನಿಸಿಸ್, ಹಿಸ್ಟರಿ ಆಂಡ್ ಎಕ್ಸೊಡಸ್ : ಎ ರೆಸ್ಯೂಮ್. ಕಲ್ಕತ್ತಾ:ಪ್ರಜ್ಞಾ
  • ಲ್ಯಾಂಗ್ವೇಜ್ ಆಂಡ್ ಲಿಟರೇಚರ್ ಆಫ಼್ ಮಾಡರ್ನ್ ಇಂಡಿಯಾ (೧೯೬೩)
  • ವರ್ಲ್ಡ್ ಲಿಟರೇಚರ್ ಆಂಡ್ ಟಾಗೋರ್ (೧೯೭೧).[]

ಪ್ರಶಸ್ತಿ

[ಬದಲಾಯಿಸಿ]

೧೯೫೫ ರಲ್ಲಿ ಸುನೀತಿ ಕುಮಾರ್ ಚಟರ್ಜಿಯವರಿಗೆ ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು.

೧೯೭೭ ರ ಮೇ ೨೯ ರಂದು ತಮ್ಮ ೮೬ ನೇ ವಯಸ್ಸಿನಲ್ಲಿ ಸುನೀತಿ ಕುಮಾರ್ ಚಟರ್ಜಿಯವರು ಕಲ್ಕತ್ತಾದಲ್ಲಿ ನಿಧನರಾದರು. ಅವರ ಮನೆ ಸುಧಾಮ ದ ಒಂದು ಭಾಗವನ್ನು ದಕ್ಷಿಣ ಕಲ್ಕತ್ತಾದ ವಾಸ್ತುಶಿಲ್ಪ ಅದ್ಭುತ ವಾಗಿ ಮಾಡಲಾಗಿತ್ತು ಮತ್ತು ಇತ್ತೀಚೆಗೆ ಅದನ್ನು ಫ಼್ಯಾಬ್ ಇಂಡಿಯಾ ಸ್ಟೋರ್ ಆಗಿ ರೂಪಾಂತರಗೊಳಿಸಲಾಗಿದೆ.

ಉಲ್ಲೇಖಗಳು

[ಬದಲಾಯಿಸಿ]
  1. https://books.google.co.in/books/about/A_Bengali_phonetic_reader.html?id=XixFAQAAIAAJ&redir_esc=y
  2. https://archive.org/details/in.gov.ignca.2478
  3. https://books.google.co.in/books/about/World_literature_and_Tagore_Vi%C5%9Bva_Bh%C4%81r.html?id=neg3AAAAIAAJ