ಪದ್ಮಭೂಷಣ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಪದ್ಮಭೂಷಣ ಪ್ರಶಸ್ತಿ

ಪದ್ಮಭೂಷಣ ಇದು ಭಾರತದ ನಾಗರಿಕ ಸನ್ಮಾನಗಳಲ್ಲೊಂದು. ಜನವರಿ ೨, ೧೯೫೪ರಲ್ಲಿ ಭಾರತದ ರಾಷ್ಟ್ರಪತಿಗಳು ಹೊರಡಿಸಿದ ಆದೇಶದ ಮೇರೆಗೆ ಈ ಪ್ರಶಸ್ತಿಯನ್ನು ಸ್ಥಾಪಿಸಲಾಯಿತು. ಭಾರತ ರತ್ನ, ಪದ್ಮ ವಿಭೂಷಣಗಳ ನಂತರ ಇದು ಭಾರತದ ಮೂರನೇಯ ದೊಡ್ಡ ನಾಗರಿಕ ಸನ್ಮಾನ.[೧] ಯಾವುದೇ ಕ್ಷೇತ್ರದಲ್ಲಾದರೂ ದೇಶಕ್ಕೆ ಸಲ್ಲಿಸುವ ಉತ್ಕೃಷ್ಟ ಸೇವೆಗಾಗಿ ಈ ಪ್ರಶಸ್ತಿಯನ್ನು ಕೊಡಮಾಡಲಾಗುತ್ತದೆ. ಪದ್ಮ ಪ್ರಶಸ್ತಿಗಳೂ ೧೯೫೪ ರಲ್ಲಿಯೇ ಸ್ಥಾಪಿಸಲಾಯಿತು. ೧೯೭೮, ೧೯೭೯, ೧೯೯೩ ಹಾಗೂ ೧೯೯೭ ವರ್ಷಗಳನ್ನು ಬಿಟ್ಟು ಪ್ರಶಸ್ತಿಗಳು ಪ್ರತಿವರ್ಷದಲ್ಲೂ ರಾಷ್ಟ್ರದ ನಾಗರಿಕರ ಸಾಧನೆಗಳಿಗಾಗಿ ಗಣತಂತ್ರದಿನದ ಶುಭೋತ್ಸವದ ದಿನದಂದು ರಾಷ್ಟ್ರಪತಿಗಳ ಹಸ್ತದಿಂದ ಸನ್ಮಾನಮಾಡಲಾಗುತ್ತಿದೆ. Padma vibhushanಪದ್ಮಪ್ರಶಸ್ತಿಗಳ ಕ್ರಮ ಹೀಗಿದೆ :'

  1. ಪದ್ಮ ವಿಭೂಷಣ್, ಎರಡನೆಯ ಕ್ರಮದಲ್ಲಿದೆ.
  2. ಪದ್ಮ ಭೂಷಣ್, ಮೂರನೆಯ ಕ್ರಮದಲ್ಲಿದೆ.
  3. ಪದ್ಮ ಶ್ರೀ, ನಾಲ್ಕನೆಯ ಕ್ರಮದಲ್ಲಿದೆ.

[೨]

ಪ್ರಶಸ್ತಿ ವಿಜೇತರು[ಬದಲಾಯಿಸಿ]

ಜುನ ೧, ೨೦೦೮ರವರೆಗೆ ೧೦೦೩ ಜನರಿಗೆ ಈ ಪ್ರಶಸ್ತಿಯನ್ನು ಕೊಡಲಾಗಿದೆ. ಅಧಿಕೃತ ವಿವರಗಳನ್ನು ಈ ಕೊಂಡಿಯಲ್ಲಿ ಕಾಣಬಹುದು:[೩]

೨೦೦೬ನೇ ಸಾಲಿನ ವಿಜೇತರು[ಬದಲಾಯಿಸಿ]

ಹೆಸರು ಕ್ಷೇತ್ರ ರಾಜ್ಯ ದೇಶ
ಎ ಕೆ ಹಾನಗಲ್ ಕಲೆ ಮಹಾರಾಷ್ಟ್ರ ಭಾರತ
ಉಸ್ತಾದ್ ಅಬ್ದುಲ್ ಹಲೀಮ್ ಜಾಫರ ಖಾನ್ ಕಲೆ (ಹಿಂದುಸ್ತಾನಿ ಸಂಗೀತ) ಮಹಾರಾಷ್ಟ್ರ ಭಾರತ
ಉಸ್ತಾದ್ ಗುಲಾಮ್ ಮುಸ್ತಫಾ ಖಾನ್ ಕಲೆ (ಹಿಂದುಸ್ತಾನಿ ಸಂಗೀತ) ಮಹಾರಾಷ್ಟ್ರ ಭಾರತ
ಕೆ ಜಿ ಸುಬ್ರಮಣ್ಯಮ್ ಕಲೆ ಗುಜರಾತ್ ಭಾರತ
ಉಸ್ತಾದ್ ಸಾಬ್ರಿ ಖಾನ್ ಕಲೆ (ಹಿಂದುಸ್ತಾನಿ ಸಂಗೀತ) ದೆಹಲಿ ಭಾರತ
ಸಾಯಿ ಪರಾಂಜಪೆ ಕಲೆ(ಚಲನಚಿತ್ರ) ಮಹಾರಾಷ್ಟ್ರ ಭಾರತ
ಶನ್ನೋ ಖುರಾನಾ ಕಲೆ ದೆಹಲಿ ಭಾರತ
ದೀಪಕ ಪಾರೇಖ್ ವಾಣಿಜ್ಯ ಮತ್ತು ಕೈಗಾರಿಕೆ ಮಹಾರಾಷ್ಟ್ರ ಭಾರತ
ಡಾ. ಜೈವೀರ್ ಅಗರ್ವಾಲ್ ವೈದ್ಯಕೀಯ ತಮಿಳು ನಾಡು ಭಾರತ
ಕೊನಿಡೆಲಾ ಶಿವಶಂಕರ ವರಪ್ರಸಾದ(ಚಿರಂಜೀವಿ) ಕಲೆ(ಚಲನಚಿತ್ರ) ಮತ್ತು ಸಮಾಜ ಸೇವೆ ಆಂಧ್ರಪ್ರದೇಶ ಭಾರತ
ಡಾ ಲೊಕೇಶ ಚಂದ್ರಾ ಸಾಹಿತ್ಯ ಮತ್ತು ಶಿಕ್ಷಣ ದೆಹಲಿ ಭಾರತ
ಗ್ರೆಗರಿ ಮ್ಯಾಕ್ಸಿಮೊವಿಚ್ ಬೊಂಗಾರ್ಡ್-ಲೆವಿನ್ ಸಾಹಿತ್ಯ ಮತ್ತು ಶಿಕ್ಷಣ ರಶ್ಯಾ
ದೇವಕಿ ಜೈನ್ ಸಮಾಜ ಸೇವೆ ಕರ್ನಾಟಕ ಭಾರತ
ಕಮಲೇಶ್ವರ ಪ್ರಸಾದ ಸಕ್ಸೇನಾ ಸಾಹಿತ್ಯ ಮತ್ತು ಶಿಕ್ಷಣ ಹರ್ಯಾಣ ಭಾರತ
ತರುಣ್ ದಾಸ ವಾಣಿಜ್ಯ ಮತ್ತು ಕೈಗಾರಿಕೆ ಹರ್ಯಾಣ ಭಾರತ
ಎಸ್. ರಾಮಾದೊರೈ ವಾಣಿಜ್ಯ ಮತ್ತು ಕೈಗಾರಿಕೆ ಮಹಾರಾಷ್ಟ್ರ ಭಾರತ
ದುಸಾನ್ ಬಾವಿಟೆಲ್ ಸಾಹಿತ್ಯ ಮತ್ತು ಶಿಕ್ಷಣ ಝೆಕ್ ಗಣರಾಜ್ಯ
ದಿನೇಶನಂದಿನಿ ದಾಲ್ಮಿಯಾ ಸಾಹಿತ್ಯ ಮತ್ತು ಶಿಕ್ಷಣ ದೆಹಲಿ ಭಾರತ
ಗಂಗಾ ಪ್ರಸಾದ ಬಿರ್ಲಾ ಸಮಾಜ ಸೇವೆ ಪಶ್ಚಿಮ ಬಂಗಾಳ ಭಾರತ
ಗುಂಟರ್ ಕ್ರೂಗರ್(ಮರಣೋತ್ತರ) ವಾಣಿಜ್ಯ ಮತ್ತು ಕೈಗಾರಿಕೆ ಮಹಾರಾಷ್ಟ್ರ ಭಾರತ
ಪಿ ಲೀಲಾ(ಮರಣೋತ್ತರ) ಕಲೆ ತಮಿಳು ನಾಡು ಭಾರತ
ಮೂಲಮಟ್ಟಂ ವಾರ್ಕಿ ಪೈಲೀ ಸಾಹಿತ್ಯ ಮತ್ತು ಶಿಕ್ಷಣ ಕೇರಳ ಭಾರತ
ಪುಥೆನ್ವೀತಿಲ್ ಶಂಕರ್ ನಾಯರ್ (ಅಪ್ಪು) ಸರ್ಕಾರೀ ಸರಕಾರ ಸೇವೆ ಕರ್ನಾಟಕ ಭಾರತ
ಶಶಿ ಭೂಷಣ್ ಸಾರ್ವಜನಿಕ ವ್ಯವಹಾರ ದೆಹಲಿ ಭಾರತ
ಮಾಧವ್ ಗಾಡ್ಗೀಳ್ ವಿಜ್ಞಾನ ಮತ್ತು ತಂತ್ರಜ್ಞಾನ ಮಹಾರಾಷ್ಟ್ರ ಭಾರತ
ಕುನ್ನತ್ ಪುಥಿಯವೀಟಿಲ್ ಪದ್ಮನಾಭನ್ ನಂಬಿಯಾರ್ ವಿಜ್ಞಾನ ಮತ್ತು ತಂತ್ರಜ್ಞಾನ ಕರ್ನಾಟಕ ಭಾರತ
ನಂದನ್ ಮೋಹನ್ ನೀಲಕೇಣಿ ವಿಜ್ಞಾನ ಮತ್ತು ತಂತ್ರಜ್ಞಾನ ಕರ್ನಾಟಕ ಭಾರತ
ನತುವಿಲ್ಮತೋಂ ಶ್ರೀನಿವಾಸನ್ ರಾಮಸ್ವಾಮಿ ಸಮಾಜ ಸೇವೆ ಕರ್ನಾಟಕ ಭಾರತ
ಪಾವನಿ ಪರಮೇಶ್ವರ ರಾವ್ ಸಾರ್ವಜನಿಕ ವ್ಯವಹಾರ ಉತ್ತರ ಪ್ರದೇಶ ಭಾರತ
ರಮಾಕಾಂತ ರಥ್ ಸಾಹಿತ್ಯ ಮತ್ತು ಶಿಕ್ಷಣ ಒಡಿಶಾ ಭಾರತ

2007ನೇ ಸಾಲಿನ ವಿಜೇತರು[ಬದಲಾಯಿಸಿ]

ಹೆಸರು ಕ್ಷೇತ್ರ ರಾಜ್ಯ ದೇಶ
ಪ್ರಫುಲ್ಲ ಚಂದ್ರ ಭಗವತಿ ಸಾರ್ವಜನಿಕ ವ್ಯವಹಾರ ದೆಹಲಿ ಭಾರತ
ನರೇಶ್ ಚಂದ್ರ ಸರ್ಕಾರೀ ಸೇವೆ ದೆಹಲಿ ಭಾರತ
ರಾಜಾ ಜೇಸುದಾಸ್ ಚೆಲ್ಲಯ್ಯ ಸಾರ್ವಜನಿಕ ವ್ಯವಹಾರ ತಮಿಳು ನಾಡು ಭಾರತ

ಅಧಾರಗಳು[ಬದಲಾಯಿಸಿ]

"https://kn.wikipedia.org/w/index.php?title=ಪದ್ಮಭೂಷಣ&oldid=695527" ಇಂದ ಪಡೆಯಲ್ಪಟ್ಟಿದೆ