ಪದ್ಮಭೂಷಣ ಪ್ರಶಸ್ತಿ ಪುರಸ್ಕೃತರು (2020–2029)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಪದ್ಮಭೂಷಣ ಇದು ಭಾರತದ ನಾಗರಿಕ ಪ್ರಶಸ್ತಿಗಳಲ್ಲೊಂದು. ಜನವರಿ ೨, ೧೯೫೪ರಲ್ಲಿ ಭಾರತದ ರಾಷ್ಟ್ರಪತಿಗಳು ಹೊರಡಿಸಿದ ಆದೇಶದ ಮೇರೆಗೆ ಈ ಪ್ರಶಸ್ತಿಯನ್ನು ಸ್ಥಾಪಿಸಲಾಯಿತು. ಭಾರತ ರತ್ನ, ಪದ್ಮ ವಿಭೂಷಣಗಳ ನಂತರ ಇದು ಭಾರತದ ಮೂರನೆಯ ದೊಡ್ಡ ನಾಗರಿಕ ಪ್ರಶಸ್ತಿ.[೧] ಯಾವುದೇ ಕ್ಷೇತ್ರದಲ್ಲಾದರೂ ದೇಶಕ್ಕೆ ಸಲ್ಲಿಸುವ ಉತ್ಕೃಷ್ಟ ಸೇವೆಗಾಗಿ ಈ ಪ್ರಶಸ್ತಿಯನ್ನು ಕೊಡಮಾಡಲಾಗುತ್ತದೆ. ಪದ್ಮ ಪ್ರಶಸ್ತಿಗಳನ್ನು ೧೯೫೪ ರಲ್ಲಿ ಸ್ಥಾಪಿಸಲಾಯಿತು. ೧೯೭೮, ೧೯೭೯, ೧೯೯೩ ಹಾಗೂ ೧೯೯೭ರಲ್ಲಿ ನೀಡಲಾಗಿಲ್ಲ. ಪ್ರಶಸ್ತಿಗಳನ್ನು ರಾಷ್ಟ್ರದ ನಾಗರಿಕರ ಸಾಧನೆಗಳಿಗಾಗಿ ಗಣರಾಜ್ಯೋತ್ಸವದಂದು ಘೋಷಿಸಿ ಮಾರ್ಚ್-ಏಪ್ರಿಲ್ ತಿಂಗಳಿನಲ್ಲಿ ರಾಷ್ಟ್ರಪತಿ ಭವನದಲ್ಲಿ ನಡೆಯುವ ವಿಶೇಷ ಸಮಾರಂಭದಲ್ಲಿ ಭಾರತದ ರಾಷ್ಟ್ರಪತಿಗಳು ಇವನ್ನು ಪ್ರದಾನ ಮಾಡುತ್ತಾರೆ. ಪದ್ಮಪ್ರಶಸ್ತಿಗಳ ಕ್ರಮ ಹೀಗಿದೆ.[೨]

  1. ಪದ್ಮ ವಿಭೂಷಣ, ಎರಡನೆಯ ಕ್ರಮದಲ್ಲಿದೆ.
  2. ಪದ್ಮಭೂಷಣ, ಮೂರನೆಯ ಕ್ರಮದಲ್ಲಿದೆ.
  3. ಪದ್ಮಶ್ರೀ, ನಾಲ್ಕನೆಯ ಕ್ರಮದಲ್ಲಿದೆ.

ಪುರಸ್ಕೃತರ ಪಟ್ಟಿ[ಬದಲಾಯಿಸಿ]

ಪದ್ಮಭೂಷಣ ಪುರಸ್ಕೃತರು, ಪಡೆದ ವರ್ಷ, ಕ್ಷೇತ್ರ ಮತ್ತು ರಾಜ್ಯ/ರಾಷ್ಟ್ರ[೩]
ವರ್ಷ ಪುರಸ್ಕೃತರು ಕ್ಷೇತ್ರ ರಾಜ್ಯ
2020 ಶ್ರೀ ಎಂ ಇತರ ಕೇರಳ
2020 ಸೈಯದ್ ಮುವಾಝೆಮ್ ಅಲಿ ಸಾರ್ವಜನಿಕ ವ್ಯವಹಾರಗಳು ಬಾಂಗ್ಲಾದೇಶ
2020 ಮುಜಾಫರ್ ಹುಸೇನ್ ಬೇಗ್ ಸಾರ್ವಜನಿಕ ವ್ಯವಹಾರಗಳು ಜಮ್ಮು ಮತ್ತು ಕಾಶ್ಮೀರ
2020 ಅಜಯ್ ಚಕ್ರಬರ್ತಿ ಕಲೆಗಳು ಪಶ್ಚಿಮ ಬಂಗಾಳ
2020 ಮನೋಜ್ ದಾಸ್ ಸಾಹಿತ್ಯ ಮತ್ತು ಶಿಕ್ಷಣ ಪುದುಚೇರಿ
2020 ಬಿ.ವಿ.ದೋಶಿ ಇತರ ಗುಜರಾತ್
2020 ಕೃಷ್ಣಮ್ಮಳ್ ಜಗನ್ನಾಥನ್ ಸಮಾಜ ಕಾರ್ಯ ತಮಿಳುನಾಡು
2020 ಎಸ್ ಸಿ ಜಮೀರ್ ಸಾರ್ವಜನಿಕ ವ್ಯವಹಾರಗಳು ನಾಗಾಲ್ಯಾಂಡ್
2020 ಅನಿಲ್ ಪ್ರಕಾಶ್ ಜೋಶಿ ಸಮಾಜ ಕಾರ್ಯ ಉತ್ತರಾಖಂಡ
2020 ತ್ಸೆರಿಂಗ್ ಲ್ಯಾಂಡೋಲ್ ಔಷಧ ಲಡಾಖ್
2020 ಆನಂದ್ ಮಹೀಂದ್ರ ವ್ಯಾಪಾರ ಮತ್ತು ಕೈಗಾರಿಕೆ ಮಹಾರಾಷ್ಟ್ರ
2020 ಎನ್.ಆರ್. ಮಾಧವ ಮೆನನ್ ಸಾರ್ವಜನಿಕ ವ್ಯವಹಾರಗಳು ಕೇರಳ
2020 ಮನೋಹರ್ ಪರಿಕ್ಕರ್ ಸಾರ್ವಜನಿಕ ವ್ಯವಹಾರಗಳು ಗೋವಾ
2020 ಜಗದೀಶ್ ಶೇಠ್ ಸಾಹಿತ್ಯ ಮತ್ತು ಶಿಕ್ಷಣ ಯುಎಸ್ಎ
2020 ಪಿ ವಿ ಸಿಂಧು ಕ್ರೀಡೆ ತೆಲಂಗಾಣ
2020 ವೇಣು ಶ್ರೀನಿವಾಸನ್ ವ್ಯಾಪಾರ ಮತ್ತು ಕೈಗಾರಿಕೆ ತಮಿಳುನಾಡು
2021 ಕೆ ಎಸ್ ಚಿತ್ರಾ ಕಲೆಗಳು ಕೇರಳ
2021 ತರುಣ್ ಗೊಗೊಯ್ ಸಾರ್ವಜನಿಕ ವ್ಯವಹಾರಗಳು ಅಸ್ಸಾಂ
2021 ಚಂದ್ರಶೇಖರ ಕಂಬಾರ ಸಾಹಿತ್ಯ ಮತ್ತು ಶಿಕ್ಷಣ ಕರ್ನಾಟಕ
2021 ಸುಮಿತ್ರಾ ಮಹಾಜನ್ ಸಾರ್ವಜನಿಕ ವ್ಯವಹಾರಗಳು ಮಧ್ಯಪ್ರದೇಶ
2021 ನೃಪೇಂದ್ರ ಮಿಶ್ರಾ ನಾಗರಿಕ ಸೇವೆ ಉತ್ತರ ಪ್ರದೇಶ
2021 ರಾಮ್ ವಿಲಾಸ್ ಪಾಸ್ವಾನ್ ಸಾರ್ವಜನಿಕ ವ್ಯವಹಾರಗಳು ಬಿಹಾರ
2021 ಕೇಶುಭಾಯಿ ಪಟೇಲ್ ಸಾರ್ವಜನಿಕ ವ್ಯವಹಾರಗಳು ಗುಜರಾತ್
2021 ಕಲ್ಬೆ ಸಾದಿಕ್ ಇತರ ಉತ್ತರ ಪ್ರದೇಶ
2021 ರಜನಿಕಾಂತ್ ದೇವಿದಾಸ್ ಶ್ರಾಫ್ ವ್ಯಾಪಾರ ಮತ್ತು ಕೈಗಾರಿಕೆ ಮಹಾರಾಷ್ಟ್ರ
2021 ತರ್ಲೋಚನ್ ಸಿಂಗ್ ಸಾರ್ವಜನಿಕ ವ್ಯವಹಾರಗಳು ಹರಿಯಾಣ
2022 ಸತ್ಯ ನಾಡೆಲ್ಲಾ ವ್ಯಾಪಾರ ಮತ್ತು ಕೈಗಾರಿಕೆ ಅಮೆರಿಕ ರಾಜ್ಯಗಳ ಒಕ್ಕೂಟ
2022 ಸುಂದರ್ ಪಿಚೈ ವ್ಯಾಪಾರ ಮತ್ತು ಕೈಗಾರಿಕೆ ಅಮೆರಿಕ ರಾಜ್ಯಗಳ ಒಕ್ಕೂಟ
2022 ನಟರಾಜನ್ ಚಂದ್ರಶೇಖರನ್ ವ್ಯಾಪಾರ ಮತ್ತು ಕೈಗಾರಿಕೆ ಮಹಾರಾಷ್ಟ್ರ
2022 ಸೈರಸ್ ಎಸ್.ಪೂನಾವಾಲಾ ವ್ಯಾಪಾರ ಮತ್ತು ಕೈಗಾರಿಕೆ ಮಹಾರಾಷ್ಟ್ರ
2022 ಕೃಷ್ಣ ಎಲಾ ವ್ಯಾಪಾರ ಮತ್ತು ಕೈಗಾರಿಕೆ ತೆಲಂಗಾಣ
2022 ಗುಲಾಂ ನಬಿ ಆಜಾದ್ ಸಾರ್ವಜನಿಕ ವ್ಯವಹಾರಗಳು ಜಮ್ಮು ಮತ್ತು ಕಾಶ್ಮೀರ
2022 ವಿಕ್ಟರ್ ಬ್ಯಾನರ್ಜಿ ಕಲೆ ಪಶ್ಚಿಮ ಬಂಗಾಳ
2022 ದೇವೇಂದ್ರ ಝಝಾರಿಯಾ ಕ್ರೀಡೆ ರಾಜಸ್ಥಾನ
2022 ರಶೀದ್ ಖಾನ್ ಕಲೆ ಉತ್ತರ ಪ್ರದೇಶ
2022 ರಾಜೀವ್ ಮೆಹ್ರಿಷಿ ನಾಗರಿಕ ಸೇವೆ ರಾಜಸ್ಥಾನ
2022 ಸಂಜಯ ರಾಜಾರಾಂ ವಿಜ್ಞಾನ ಮತ್ತು ಇಂಜಿನಿಯರಿಂಗ್ ಮೆಕ್ಸಿಕೋ
  1. "'Scheme-PadmaAwards-050514.pdf'" (PDF). Archived from the original (PDF) on 2016-11-15. Retrieved 2019-08-31.
  2. English, ಇಂಗ್ಲೀಷ್ ವಿಕಿಪೀಡಿಯದಲ್ಲಿ ಭಾರತ ಸರಕಾರದ ನಾಗರಿಕ ಪ್ರಶಸ್ತಿಗಳ ಸ್ಥರಗಳನ್ನು ಕ್ರಮವಾಗಿ ಈ ರೀತಿ ವಿಭಜಿಸಲಾಗಿದೆ
  3. ಉಲ್ಲೇಖ ದೋಷ: Invalid <ref> tag; no text was provided for refs named award10-19