ಪಿ.ವಿ. ಸಿಂಧು

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಪಿ.ವಿ.ಸಿಂಧು
— ಬ್ಯಾಡ್ಮಿಂಟನ್‌ ಆಟಗಾರ —
ವೈಯುಕ್ತಿಕ ಮಾಹಿತಿ
ಹುಟ್ಟು ಹೆಸರು ಪುಸರ್ಲಾ ವೆಂಕಟ ಸಿಂಧು
ಹುಟ್ಟು (1995-07-05) ೫ ಜುಲೈ ೧೯೯೫(ವಯಸ್ಸು ೨೧)
ವಾಸಸ್ಥಾನ ಹೈದರಾಬಾದ್,ಭಾರತ
ಎತ್ತರ 5 ft 9 in (1.75 m)
ದೇಶ ಭಾರತ
ಆಡುವ ಕೈ ಬಲಗೈ
ಮಹಿಳೆಯರ ಸಿಂಗಲ್ಸ್
ಅತಿಹೆಚ್ಚಿನ ಸ್ಥಾನ ೧೦ (೧೫ ಆಗಸ್ಟ್ ೨೦೧೩)
ಸದ್ಯದ ಸ್ಥಾನ ೧೦ (೧೫ ಆಗಸ್ಟ್ ೨೦೧೩)
BWF profile

ಪುಸರ್ಲಾ ವೆಂಕಟ(ವಂಶದ ಹೆಸರು) ಸಿಂಧು ( ತೆಲುಗು : సింధూ ) ಅಂತರರಾಷ್ಟ್ರೀಯ ಖ್ಯಾತಿಯ ಭಾರತದ ಬ್ಯಾಡ್ಮಿಂಟನ್ ಆಟಗಾರ್ತಿ. ಹೈದರಾಬಾದ್ಗೋಪಿಚಂದ್ ಬ್ಯಾಡ್ಮಿಂಟನ್ ಅಕಾಡೆಮಿಯಲ್ಲಿ ತರಬೇತಿ ಪಡೆಯುವ ಇವರು, ಭಾರತೀಯ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸುತ್ತಿರುವ ಸ್ವಸಹಾಯ ಸಂಸ್ಥೆಯಾದ ಒಲಿಂಪಿಕ್ ಗೋಲ್ಡ್ ಕ್ವೆಸ್ಟ್ ನ ಭಾಗವಾಗಿದ್ದಾರೆ. 10 ಆಗಸ್ಟ್ 2013 ರಂದು ಇವರು ಚೀನಾ ದಲ್ಲಿ ಜರುಗಿದ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ಷಿಪ್ ( ಪ್ರಕಾಶ್ ಪಡುಕೋಣೆ 1983 ರಲ್ಲಿ ಕಂಚು ಗೆದ್ದ ನಂತರ ಭಾರತದ ಮೊದಲ ಸಿಂಗಲ್ಸ್ ಪದಕ ) ನ ಸಿಂಗಲ್ಸ್ ನಲ್ಲಿ ಪದಕ ಗೆದ್ದ ಮೊದಲ ಭಾರತೀಯ ಮಹಿಳೆಯಾಗಿದ್ದಾರೆ. ಸೆಪ್ಟೆಂಬರ್ ೨೧, ೨೦೧೨ ರಂದು ಬಿಡುಗಡೆ ಮಾಡಲಾದ ಬ್ಯಾಡ್ಮಿಂಟನ್ ವರ್ಲ್ಡ್ ಫೆಡರೇಶನ್ ಶ್ರೇಯಾಂಕಗಳಲ್ಲಿ ಮೊದಲ 20 ರೊಳಗಿನ ಶ್ರೇಣಿಯಲ್ಲಿದ್ದರು[೧]. ಬಿಡಬ್ಲ್ಯೂಎಫ್ ಜೂನಿಯರ್ ಶ್ರೇಯಾಂಕಗಳಲ್ಲಿ 3 ನೇ ಸ್ಥಾನದಲ್ಲಿದ್ದಾರೆ[೨] .

ಬಾಲ್ಯ ಮತ್ತು ಆರಂಭಿಕ ತರಬೇತಿ[ಬದಲಾಯಿಸಿ]

ಪಿ.ವಿ ಸಿಂಧು ಜನಿಸಿದ್ದು ಹೈದರಾಬಾದ್ನಲ್ಲಿ. ತಂದೆ ಪಿ.ವಿ. ರಮಣ ಮತ್ತು ತಾಯಿ ಪಿ. ವಿಜಯ. ಸಿಂಧುವಿನ ತಂದೆ-ತಾಯಿ ಇಬ್ಬರೂ ಸಹ ಮಾಜಿ ವಾಲಿಬಾಲ್ ಆಟಗಾರರಾಗಿರುವುದೊಂದು ವಿಶೇಷ. ಭಾರತ ಸರ್ಕಾರವು ಕೊಡಮಾಡುವ ಪ್ರತಿಷ್ಠಿತ ಅರ್ಜುನ ಪ್ರಶಸ್ತಿಗೆ ಪಿ.ರಮಣರು ೨೦೦೦ ನೆಯ ಇಸವಿಯಲ್ಲಿ ಭಾಜನರಾಗಿದ್ದಾರೆ. ತಂದೆ ವೃತ್ತಿಪರ ವಾಲಿಬಾಲ್ ಆಟಗಾರರಾಗಿದ್ದರೂ ಸಹ ಸಿಂಧು ಮಾತ್ರ ಬ್ಯಾಡ್ಮಿಂಟನ್ ನೆಡೆಗೆ ಆಕರ್ಷಿತರಾದರು[೩]. ಅದಕ್ಕೆ ಕಾರಣ, 2001 ರ ಆಲ್ ಇಂಗ್ಲೆಂಡ್ ಓಪನ್ ಬ್ಯಾಡ್ಮಿಂಟನ್ ಚಾಂಪಿಯನ್ ಆಗಿದ್ದ ಪುಲ್ಲೇಲ ಗೋಪಿಚಂದ್ ರ ಯಶಸ್ಸು ಮತ್ತು ಅವರಿಂದ ಪಡೆದ ಸ್ಫೂರ್ತಿ. ತನ್ನ ಎಂಟನೆಯ ವಯಸ್ಸಿನಲ್ಲೇ ಸಿಂಧು ಬ್ಯಾಡ್ಮಿಂಟನ್ ಆಡಲು ಪ್ರಾರಂಭಿಸಿದ್ದರು, ಇದೂ ಸಹ ಅವರನ್ನು ಬ್ಯಾಡ್ಮಿಂಟನ್ ಕಡೆಗೆ ಸೆಳೆಯಲು ಕಾರಣವಾಯಿತು[೪].
ಮೊದಲಿಗೆ ಸಿಂಧು ಅವರುಸಿಕಂದರಾಬಾದ್ನಲ್ಲಿನ ಭಾರತೀಯ ರೈಲ್ವೆ ಇನ್ಸ್ಟಿಟ್ಯೂಟ್ ಆಫ್ ಸಿಗ್ನಲ್ ಎಂಜಿನಿಯರಿಂಗ್ ಮತ್ತು ದೂರಸಂಪರ್ಕ ಸಂಸ್ಥೆಯ ಬ್ಯಾಡ್ಮಿಂಟನ್ ಕೋರ್ಟ್ಗಳಲ್ಲಿ ನಲ್ಲಿ ಮೆಹಬೂಬ್ ಅಲಿ ಅವರ ಮಾರ್ಗದರ್ಶನದೊಂದಿಗೆ ಕ್ರೀಡೆಯ ಮೂಲಭೂತ ಅಂಶಗಳನ್ನು ಕಲಿತರು. ನಂತರ ಅವರು ಪುಲ್ಲೇಲ ಗೋಪಿಚಂದ್ ಅವರ ಬ್ಯಾಡ್ಮಿಂಟನ್ ಅಕಾಡಮಿಗೆ ಸೇರಿದರು. ಸಿಂಧು ವೃತ್ತಿಜೀವನದ ಬಗೆಗೆ ದಿ ಹಿಂದು ಪತ್ರಿಕೆಯ ಸಂವಹನಕಾರರೊಬ್ಬರು ,
"ಸಿಂಧು ಅವರು ತನ್ನ ಮನೆಯಿಂದ 56 ಕಿಮೀ ದೂರ ಪ್ರಯಾಣ ಮಾಡಿ ದೈನಂದಿನ ತರಬೇತಿ ಶಿಬಿರಗಳಲ್ಲಿ ಸಮಯಕ್ಕೆ ಸರಿಯಾಗಿ ಹಾಜರಾಗಿ ಅಗತ್ಯವಿರುವಷ್ಟೂ ಕಾರ್ಯಕ್ಷಮತೆ ತೋರುವುದು ಮತ್ತು ಶಿಸ್ತುಬದ್ಧವಾದ ಅವರ ಜೀವನವು ಅವರೊಬ್ಬ ಉತ್ತಮ ಬ್ಯಾಡ್ಮಿಂಟನ್ ಆಟಗಾರ್ತಿ ಅನ್ನುವುದನ್ನು ಬಿಂಬಿಸುತ್ತದೆ " ಎಂದು ಹೇಳಿದ್ದರು[೪] . ಈ ಹೇಳಿಕೆಯನ್ನು ಗೋಪಿಚಂದ್ ಅವರು ಅನುಮೋದಿಸಿ ಬೆಂಬಲಿಸಿ " ಸಿಂಧು ಆಟದಲ್ಲಿನ ಅತ್ಯಂತ ಗಮನಾರ್ಹ ಲಕ್ಷಣವೆಂದರೆ, ಆಕೆಯ ಧನಾತ್ಮಕ ವರ್ತನೆ ಮತ್ತು ಕಡೆಯವರೆವಿಗೂ ಹೋರಾಡುವ ಮನೋಭಾವ " ಎಂದು ಪ್ರಶಂಸಿಸಿದರು[೫].
ಮುಂದೆ ಗೋಪಿಚಂದ್ ಅವರ ಬ್ಯಾಡ್ಮಿಂಟನ್ ಅಕಾಡೆಮಿ ಸೇರಿದ ನಂತರ , ಸಿಂಧು ಹಲವಾರು ಪ್ರಶಸ್ತಿಗಳನ್ನು ಗೆದ್ದರು. 10 ವರ್ಷಗಳ ಒಳಗಿನವರ ವಿಭಾಗದಲ್ಲಿ 5 ನೇ ಸರ್ವೋ ಅಖಿಲ ಭಾರತ ಶ್ರೇಣಿಯ ಚಾಂಪಿಯನ್ ಶಿಪ್ ನ ಡಬಲ್ಸ್ ವಿಭಾಗದಲ್ಲಿ ಮತ್ತು ಸಿಂಗಲ್ಸ್ ವಿಭಾಗದಲ್ಲಿ ಪ್ರಶಸ್ತಿಯನ್ನು ಗೆದ್ದರು . 13 ವರ್ಷಗಳ ಒಳಗಿನ ವಿಭಾಗದಲ್ಲಿ ಪಾಂಡಿಚೇರಿಯಲ್ಲ್ಲಿ ನೆಡೆದ ಕಿರಿಯರ ಸಿಂಗಲ್ಸ್ ಪ್ರಶಸ್ತಿಯನ್ನು ಗೆದ್ದರು ಮತ್ತು ಅಖಿಲ ಭಾರತ ಕೃಷ್ಣ ಖೇತಾನ್ ಟೂರ್ನಮೆಂಟ್ನಲ್ಲಿ ಡಬಲ್ಸ್ನಲ್ಲಿ ಗೆದ್ದರು. ೧೪ ವರುಷದೊಳಗಿನವರ 51ನೆಯ ನ್ಯಾಷನಲ್ ಸ್ಕೂಲ್ ಕ್ರೀಡಾಕೂಟದಲ್ಲಿ ಚಿನ್ನದ ಪದಕನ್ನೂ ಗೆದ್ದರು[೩].

ಕ್ರೀಡಾ ವೃತ್ತಿಜೀವನ[ಬದಲಾಯಿಸಿ]

ಅಂತರರಾಷ್ಟ್ರೀಯ ವಲಯದಲ್ಲಿ ಸಿಂಧು ಅವರು ೨೦೦೯ರಲ್ಲಿ ಕೊಲಂಬೊದಲ್ಲಿ ನಡೆದ ಸಬ್ ಜೂನಿಯರ್ ಏಷ್ಯನ್ ಬ್ಯಾಡ್ಮಿಂಟನ್ ಚಾಂಪಿಯನ್ಶಿಪ್ನಲ್ಲಿ ಕಂಚಿನ ಪದಕ ಗಳಿಸಿದರು[೬]. 2010 ರಲ್ಲಿ ನೆಡೆದ ಇರಾನ್ ಫಜ್ರ್ ಅಂತರಾಷ್ಟ್ರೀಯ ಬ್ಯಾಡ್ಮಿಂಟನ್ ಚಾಲೆಂಜ್ ಪಂದ್ಯಾವಳಿಯಲ್ಲಿ ಸಿಂಗಲ್ಸ್ ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದರು. 2010 ರಲ್ಲಿ ಮೆಕ್ಸಿಕೋ ದಲ್ಲಿ ನೆಡೆದ ಕಿರಿಯರ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ಶಿಪ್ನಲ್ಲಿ ಕ್ವಾರ್ಟರ್ ಫೈನಲ್ ತಲುಪಿದರು[೭] . ಇದೇ 2010ರ ಉಬರ್ ಕಪ್ ನಲ್ಲಿ ಭಾರತದ ರಾಷ್ಟ್ರೀಯ ತಂಡದಲ್ಲಿ ತಂಡದ ಸದಸ್ಯರಾಗಿದ್ದರು [೮].

೨೦೧೨[ಬದಲಾಯಿಸಿ]

 • ಜೂನ್ ೧೪, ೨೦೧೨ ರಂದು ಸಿಂಧು ಅವರು ಇಂಡೋನೇಷ್ಯಾ ಓಪನ್ ನಲ್ಲಿ ಜರ್ಮನಿಯ ಜೂಲಿಯನ್ ಶೆಂಕ್ ವಿರುಧ್ಧ 21-14 , 21-14 ರ ಅಂತರದಲ್ಲಿ ಸೋತರು[೯] .ಜುಲೈ ೭ ರಂದು ನೆಡೆದ 19 ವರ್ಷದೊಳಗಿನವರ ಏಷ್ಯಾ ಯೂತ್ ಚ್ಯಾಂಪಿಯನ್ಷಿಪ್ ನಲ್ಲಿ ಜಪಾನಿ ಆಟಗಾರ್ತಿಯಾದ Nozomi Okuhara ಅವರನ್ನು 18-21 21-17 22-20 ಸೋಲಿಸುವುದರೊಂದಿಗೆ ಒಂದು ಸಾಧನೆಯನ್ನೂ ಮಾಡಿದರು[೧೦]. ಮುಂದೆ ಲಿ ನಿಂಗ್ ಚೀನಾ ಮಾಸ್ಟರ್ಸ್ ಸೂಪರ್ ಸರಣಿ ಪಂದ್ಯಾವಳಿಯಲ್ಲಿ ಅವರು 21-19 , 9-21 , 21-16 ಅಂಕಗಳಿಂದ ಚೀನಾದ ಆಟಗಾರ್ತಿ ಮತ್ತು ಲಂಡನ್ ನಲ್ಲಿ ಜರುಗಿದ್ದ 2012ರ ಒಲಿಂಪಿಕ್ಸ್ ಚಿನ್ನದ ಪದಕ ವಿಜೇತ Lee Xueruiಅವರನ್ನು ಸೋಲಿಸಿ ಸೆಮಿಫೈನಲ್ಸ್ ಪ್ರವೇಶಿಸಿದರು[೧೧]. ಆದರೆ ಮುಂದಿನ ಪಂದ್ಯದಲ್ಲಿ 10-21 , 21-14 , 19-21ರ ಅಂತರದಲ್ಲಿ ಚೀನಾದ 4 ನೇ ಶ್ರೇಯಾಂಕದ ಜಿಯಾಂಗ್ ಯಾಮ್ಜಿಯೊ ವಿರುಧ್ಧ ಸೋತರು[೧೨].
 • ಇದಾದ ನಂತರ ಶ್ರೀನಗರದಲ್ಲಿ ನಡೆದ 77 ನೇ ಸೀನಿಯರ್ ನ್ಯಾಷನಲ್ ಬ್ಯಾಡ್ಮಿಂಟನ್ ಚಾಂಪಿಯನ್ಶಿಪ್ನಲ್ಲಿ ಭಾಗವಹಿಸಿದ ಅವರು 15-21 , 21-15 , 15-21 ಅಂತರದಲ್ಲಿ ಸಯಾಲಿ ಗೋಖಲೆ ಅವರ ವಿರುಧ್ಧ ಫೈನಲ್ ನಲ್ಲಿ ಸೋತರು. ಇದಾದ ನಂತರ ಚೀನಾ ಓಪನ್ನಲ್ಲಿ ಅವರು ಮೊಣಕಾಲಿಗೆ ಮಾಡಿಕೊಂಡಿದ್ದ ಗಾಯದ ವಿಚಾರವು ಬಹಿರಂಗವಾಯಿತು ಮತ್ತು ಹಾಗೆಯೇ ಅವರು ಜಪಾನ್ ಓಪನ್ ನಲ್ಲೂ ಭಾಗವಹಿಸಿದರು. ಗಾಯವು ಉಲ್ಬಣಗೊಂಡಿದ್ದನ್ನು ಕಂಡು ಅವರು ವಿಶ್ವ ಕಿರಿಯರ ಚಾಂಪಿಯನ್ ಶಿಪ್ನಲ್ಲಿ ಭಾಗವಹಿಸಿದೆ ಇರಲು ನಿರ್ಧರಿಸಿದರು . ಡಿಸೆಂಬರ್ 2012 ರಲ್ಲಿ ಲಕ್ನೋದಲ್ಲಿ ನಡೆದ ಸೈಯದ್ ಮೋದಿ ಅಖಿಲ ಭಾರತ ಗ್ರ್ಯಾಂಡ್ ಪ್ರಿಕ್ಸ್ ಚಿನ್ನದ ಪದಕದ ಪಂದ್ಯದಲ್ಲಿ ರನ್ನರ್ ಅಪ್ ಆದರು. ಆದರೆ, ಪೈನಲ್ ತಲುಪುವವರೆಗೂ ಯಾವುದೇ ಸೆಟ್ ಸೋಲದ ಸಿಂಧು ಇಂಡೋನೇಷಿಯಾದ ಲಿಂಡಾ Weni Fanetri ಎದುರು ಪೈನಲ್ ನಲ್ಲಿ 21-15, 18-21 , 21-18 ರ ಅಂತರದಲ್ಲಿ ಸೋಲುಂಡರು. ಈ ಪಂದ್ಯದ ನಂತರ ಅವರು ತನ್ನ ವೃತ್ತಿಜೀವನದ ಅತ್ಯುತ್ತಮ ೧೫ ನೆಯ ಶ್ರೇಯಾಂಕವನ್ನು ತಲುಪಿದರು .

೨೦೧೩[ಬದಲಾಯಿಸಿ]

೨೦೧೩ ರಲ್ಲಿ ಸಿಂಧು ಅವರು ಸಿಂಗಪುರ್ ನ ಜುವಾನ್ ಗು ಅವರನ್ನು ಸೋಲಿಸಿ ಮಲೇಷಿಯನ್ ಓಪನ್ ಪ್ರಶಸ್ತಿಯ ಸಾಧನೆ ಮಾಡಿದರು[೧೩]. ಇದು ಸಿಂಧು ಅವರ ಮೊದಲ ಗ್ರ್ಯಾಂಡ್ ಪ್ರಿಕ್ಸ್ ಗೋಲ್ಡ್ ಸಾಧನೆಯಾಗಿದೆ. ಆಗಸ್ಟ್ ೮ , ೨೦೧೩ ರಂದು ನೆಡೆದ ಬ್ಯಾಡ್ಮಿಂಟನ್ ವರ್ಲ್ಡ್ ಚಾಂಪಿಯನ್ಶಿಪ್ಸ್ನಲ್ಲಿ ಹಾಲಿ ಚಾಂಪಿಯನ್ ಚೀನಾದ ಎರಡನೇ ಶ್ರೇಯಾಂಕದ ವಾಂಗ್ ಯಿಹಾನ್ ವಿರುಧ್ಧ ಗೆದ್ದು ಮಹಿಳಾ ಕ್ವಾರ್ಟರ್ ಫೈನಲ್ ಪ್ರವೇಶಿಸಿದರು. 18 ವರ್ಷದ 10 ನೇ ಶ್ರೇಯಾಂಕದ ಸಿಂಧು ಏಳನೇ ಶ್ರೇಯಾಂಕಿತ ಚೀನೀ ಆಟಗಾರ್ತಿ ವಾಂಗ್ ಶಿಕ್ಸಿಯಾನ್ ಅವರನ್ನು 54 ನಿಮಿಷಗಳ ಕಾಲ ನೆಡೆದ ಪಂದ್ಯದಲ್ಲಿ ನೇರ ಸೆಟ್ಗಳಿಂದ ಸೋಲಿಸಿ ವಿಶ್ವ ಚಾಂಪಿಯನ್ಶಿಪ್ನಲ್ಲಿ ಮಹಿಳೆಯರ ಸಿಂಗಲ್ಸ್ ನಲ್ಲಿ ಭಾರತಕ್ಕೆ ಮೊದಲ ಕಂಚಿನ ಪದಕವನ್ನು ತಂದಿತ್ತರು[೧೪].

2014[ಬದಲಾಯಿಸಿ]

 • ಪಿ.ವಿ. ಸಿಂಧು ಅವರು ಮಹಿಳೆಯರ ಸಿಂಗಲ್ಸ್, ಗ್ಲ್ಯಾಸ್ಗೋ ಕಾಮನ್ವೆಲ್ತ್ ಗೇಮ್ಸ್ ಸೆಮಿಫೈನಲ್ ಹಂತ ತಲುಪಿದೆರು .ಆದರೆ ಅಂತಿಮವಾಗಿ ಸೋತಿದ್ದರು. ಪಿ.ವಿ. ಸಿಂಧು ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ಶಿಪ್ನಲ್ಲಿ ಮೊದಲ ಭಾರತೀಯರು-- ಪದಕಗಳನ್ನು ಗೆಲ್ಲಲುಎರಡು (ಬ್ಯಾಕ್ ಟು ಬ್ಯಾಕ್)ಎಂಬ ಇತಿಹಾಸವನ್ನು ನಿರ್ಮಿಸಿದರು.
 • ಪಿ.ವಿ. ಸಿಂಧು ಡೆನ್ಮಾರ್ಕ್ನ ವಿಶ್ವಕಪ್ ಸೆಮಿಫೈನಲ್ ತಲುಪಿದ್ದರು.
 • ಹೈದರಾಬಾದ್ ನಿಂದ ವಿಶ್ವದ 11 ಎರಡನೇ ರ್ರ್ಯಾಂಕಿನ ಪಿ.ವಿ. ಸಿಂಧು ಕೋಪನ್ ಹ್ಯಾಗನ್ ನಲ್ಲಿ ಒಂದು ಗಂಟೆ ಹೆಚ್ಚು ಕಾಲ ಪಂದ್ಯವು ಮೂರು ಶಕ್ತಿಗುಂದಿಸುವ ಸೆಟ್ 19-21, 21-19, 21-15 ರಲ್ಲಿ Shixian ವಾಂಗ್ ಸ್ಥಾನ ಸೋಲಿಸಲು ಅಸಾಧಾರಣ ಕೌಶಲ್ಯ ಮತ್ತು ಹೋರಾಟದ ಉತ್ಸಾಹ ತೋರಿಸಿದರು. ಅವರು ಹಿಂದಿನ ತಿಕ್ಕಾಟ 19-21, 22-20, 25-23 ಮತ್ತೊಂದು ಯುದ್ಧದಲ್ಲಿ ಪೂರ್ವ ಭಾಗಗಳಲ್ಲಿ ವಿಶ್ವ ಸಂಖ್ಯೆ 5 ದಕ್ಷಿಣ ಕೊರಿಯಾದ ಬಾಯೆ ಯಿಯಾನ್ ಜು ರನ್ನು ಸೋಲಿಸಿದರು.

17ನೇ ಏಷ್ಯನ್‌ ಕ್ರೀಡಾಕೂಟ 2014[ಬದಲಾಯಿಸಿ]

.ದಕ್ಷಿಣ ಕೊರಿಯಾದ ಇಂಚಿಯಾನ್‌ನಲ್ಲಿ ನಡದ 17 ಏಷ್ಯನ್ ಗೇಮ್ಸ್ 2014, ಕ್ರೀಡಾಕೂಟದಲ್ಲಿ ,ಪಿ.ವಿ.ಸಿಂಧು, ಸೈನಾ ನೆಹವಾಲ್ ,ಪಿ.ಸಿ.ತುಲಸಿ ,ಪ್ರಜ್ಞಾ ಗಾದ್ರೆ, ಇವರ ಬ್ಯಾದ್ಮಿಂಟನ್ ಮಹಿಳೆ ಟೀಮು. 21/9/2014 ರಂದು ಬೆಳ್ಳಿ ಪದಕ ಗಳಿಸಿದೆ.

ಮಾಕಾವ್ ಓಪನ್ ಬ್ಯಾಡ್ಮಿಂಟನ್ ಟೂರ್ನಿ 2014[ಬದಲಾಯಿಸಿ]

ಮಕಾವ್ ಓಪನ್ ಗ್ರ್ಯಾನ್ ಪ್ರಿ ಗೋಲ್ಡ್ ಟೂರ್ನಿ 2014
ಬ್ಯಾಡ್ಮಿಂಟನ್ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಎರಡು ಬಾರಿ ಕಂಚಿನ ಪದಕ ಗೆದ್ದಿರುವ ಭಾರತದ ಉದಯೋನ್ಮುಖ ಪ್ರತಿಭೆ ಪಿ.ವಿ ಸಿಂಧು,ಚೀನಾದ ಮಕಾವ್,ನಲ್ಲಿ ಅಂತ್ಯಗೊಂಡ 74.6 ಲಕ್ಷರೂ ಬಹುಮಾನ ಮೊತ್ತದ ಮಕಾವ್ ಓಪನ್ ಗ್ರ್ಯಾನ್ ಪ್ರಿ ಗೋಲ್ಡ್ ಟೂರ್ನಿಯಲ್ಲಿ ಪ್ರಶಸ್ತಿ ಗಳಿಸಿದರು.
ಇಲ್ಲಿನ ಟ್ಯಾಪ್ ಸೀಕ್ ಮಲ್ಟಿಸ್ಪೋರ್ಟ್ಸ್ ಅಂಗಳದಲ್ಲಿ ಭಾನುವಾರ ನಡೆದ ಮಹಿಳೆಯ ಸಿಂಗಲ್ಸ್ ವಿಭಾಗದ ಫೈನಲ್ ಪಂದ್ಯದಲ್ಲಿ ಮಿಂಚಿದ ವಿಶ್ವದ 11ನೇ ರ‌್ಯಾಂಕಿನ ಆಟಗಾರ್ತಿ ಪಿ.ವಿ ಸಿಂಧೂ, ತಮಗಿಂತಲೂ ರ‌್ಯಾಂಕಿಂಗ್‌ನಲ್ಲಿ ಸಾಕಷ್ಟು ಹಿಂದುಳಿದಿರುವ ಕೊರಿಯಾದ ಕಿಮ್ ಹ್ಯೊ ಮಿನ್ (91ನೇ ರ‌್ಯಂಕ್) ವಿರುದ್ಧ 21-12, 21-17 ಅಂತರದಲ್ಲಿ ನೇರ ಗೇಮ್‌ಗಳಿಂದ ಗೆದ್ದು, ಸತತ ಎರಡನೇ ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿದರು.
ಗ್ಲಾಸ್ಗೋ ಕಾಮನ್‌ವೆಲ್ತ್ ಕೂಟದಲ್ಲಿ ಕಂಚಿನ ಪದಕ ಗೆದ್ದಸಿಂಧುಗೆ 2014ರ ಸಾಲಿನಲ್ಲಿ ಲಭ್ಯವಾದ ಮೊದಲ ಪ್ರಶಸ್ತಿ ಇದಾಗಿದೆ.
ಸೆಮಿಫೈನಲ್ ಪಂದ್ಯದಲ್ಲಿ ಏಳನೇ ಶ್ರೇಯಾಂಕಿತ ಚೀನಾದ ಆಟಗಾರ್ತಿ ಯೂ ಸನ್‌ಗೆ ಆಘಾತ ನೀಡಿದ್ದ ಕಿಮ್, ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಸಿಂಧುಗೆ ಕಠಿಣ ಸವಾಲೊಡ್ಡುವಲ್ಲಿ ವಿಫಲರಾದರು. ಫೈನಲ್ ಪಂದ್ಯದ ಒತ್ತಡ ಮೆಟ್ಟಿನಿಂತ ಸಿಂಧು, ಕೊರಿಯಾ ಆಟಗಾರ್ತಿಯ ವಿರುದ್ಧ ಸುಲಭವಾಗಿಯೇ ಮೇಲುಗೈ ಸಾಧಿಸಿದರು.
ಆರಂಭದಲ್ಲಷ್ಟೇ ಕಿಮ್ ಹೋರಾಟ ಪಂದ್ಯದ ಮೊದಲ ಗೇಮ್‌ನ ಆರಂಭದಲ್ಲಿ ಆಕ್ರಮಣಕಾರಿ ಆಟವಾಡಿದ ಕೊರಿಯಾದ ಆಟಗಾರ್ತಿ ಕಿಮ್, ಸತತ 3 ಅಂಕ ಗಳಿಸುವುದರೊಂದಿಗೆ ಭರ್ಜರಿ ಆರಂಭ ಪಡೆದರು. ಆನಂತರ ಚೇತರಿಕೆ ತಂದುಕೊಂಡ ಸಿಂಧು 6-6 ಅಂತರದಲ್ಲಿ ಸಮಬಲ ತಂದುಕೊಂಡರಲ್ಲದೆ, ಚಾಣಕ್ಷತೆ ಮೆರೆದು ನಿಧಾನವಾಗಿ ಪಂದ್ಯದ ಮೇಲಿನ ಹಿಡಿತ ಕಂಡರು. ಆನಂತರ ಸತತ ಮುನ್ನಡೆ ಕಾಯ್ದುಕೊಳ್ಳುವ ಮೂಲಕ 21-12 ಅಂತರದಲ್ಲಿ ಮೊದಲ ಗೇಮ್ ತಮ್ಮದಾಗಿಸಿಕೊಂಡರು.
ಬಳಿಕ ನಡೆದ ಎರಡನೇ ಗೇಮ್‌ನಲ್ಲಿ ಎಲ್ಲಿಯೂ ತಪ್ಪಿಗೆ ಅವಕಾಶ ನೀಡದ ಸಿಂಧು, ಪಂದ್ಯದ ಮೇಲಿನ ಹಿಡಿತವನ್ನು ಬಿಗಿಗೊಳಿಸಿ ಕೊರಿಯಾದ ಆಟಗಾರ್ತಿಯ ಮೇಲೆ ಒತ್ತಡ ಹೇರಿದರು. ಆದರೂ 13-13 ಅಂಕಗಳನ್ನು ಕಂಡ ಎರಡನೇ ಗೇಮ್ ಸಮಬಲದ ಹೋರಾಟಕ್ಕೆ ಸಾಕ್ಷಿಯಾಯಿತು. ಈ ಹಂತದಲ್ಲಿ ಕಿಮ್ ಮಾಡಿದ ಸಣ್ಣ ತಪ್ಪುಗಳ ಲಾಭ ಪಡೆದ ಸಿಂಧು ಅಂಕ ಗಳಿಕೆಯಲ್ಲಿ ಮುನ್ನಡೆ ಸಾಧಿಸಿ 21-17 ಅಂತರದ ಮೇಲುಗೈ ಸಾಧಿಸಿ ಪ್ರಶಸ್ತಿ ಗೆದ್ದುಕೊಂಡರು. (ಸುದ್ದಿ:ವಿಜಯ ಕರ್ನಾಟಕ:೧-೧೨-೨೦೧೪)

ಮಾಕಾವ್ ಓಪನ್ ಬ್ಯಾಡ್ಮಿಂಟನ್ ಟೂರ್ನಿ 2015[ಬದಲಾಯಿಸಿ]

 • ಭಾರತದ ಪಿ.ವಿ ಸಿಂಧು 2015 ರ ಮಕಾವ್‌ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಹ್ಯಾಟ್ರಿಕ್‌ ಸಾಧನೆ ಮಾಡಿದ್ದಾರೆ. ಭಾನುವಾರ 29-1-2015 ನಡೆದ ಮಹಿಳೆಯರ ಸಿಂಗಲ್ಸ್‌ ವಿಭಾಗದ ಫೈನಲ್‌ ಪಂದ್ಯದಲ್ಲಿ ಸಿಂಧು 21–9, 21–23, 21–14ರಲ್ಲಿ ಆರನೇ ಶ್ರೇಯಾಂಕದ ಜಪಾನ್‌ನ ಮಿನಾತ್ಸು ಮಿತಾನಿ ಅವರನ್ನು ಸೋಲಿಸಿದರು.
 • ಆರಂಭದಿಂದಲೇ ಆಕ್ರಮಣಕಾರಿಯಾಗಿ ಆಡಿದ ಸಿಂಧು ಮೂರು ಗೇಮ್`ಗಳನ್ನು ಜಯಿಸಿದರು.ಮೂರನೇ ಗೇಮ್‌ನಲ್ಲಿ ಎಚ್ಚರಿಕೆಯಿಂದ ಆಡಿದ ಸಿಂಧು 5–3ರ ಮುನ್ನಡೆ ಪಡೆದರು. ಮಿತಾನಿ ಮತ್ತೆ ಅನಗತ್ಯ ತಪ್ಪುಗಳಿಂದ ಭಾರತದ ಆಟಗಾರ್ತಿಗೆ 9–4ರ ಮುನ್ನಡೆ ಬಿಟ್ಟುಕೊಟ್ಟರು. ಈ ಅವಕಾಶ ಬಳಸಿಕೊಂಡ ಸಿಂಧು ನಂತರ ಎಲ್ಲಿಯೂ ತಪ್ಪು ಮಾಡದೆ ಸುಲಭವಾಗಿ ನಿರ್ಣಾಯಕ ಗೇಮ್‌ ಗೆದ್ದುಕೊಳ್ಳುವ ಮೂಲಕ ಹ್ಯಾಟ್ರಿಕ್‌ ಸಾಧನೆಗೆ ಪಡೆದರು.
 • ಭಾರತ ಬ್ಯಾಡ್ಮಿಂಟನ್‌ ಸಂಸ್ಥೆ ಅಧ್ಯಕ್ಷ ಅಖಿಲೇಶ್‌ ದಾಸ್‌ ಗುಪ್ತಾ ಅವರು ಪಿ.ವಿ ಸುಂಧು ಅವರಿಗೆ ₹10 ಲಕ್ಷ ನಗದು ಬಹುಮಾನ ಘೋಷಿಸಿದರು.[೧೫]
ಫೋಟೋ :[[೧]]

ಮಲೇಷ್ಯಾ ಬ್ಯಾಡ್ಮಿಂಟನ್‌ 2016ರಲ್ಲಿ ಚಿನ್ನ[ಬದಲಾಯಿಸಿ]

 • ದಿ.24-1-2016 ಭಾನುವಾರ ಮಲೇಷ್ಯಾ-ಪೆನಾಂಗ್‌`ನಲ್ಲಿ ನಡೆದ ಮಹಿಳೆಯರ ಸಿಂಗಲ್ಸ್‌ ವಿಭಾಗದ ಫೈನಲ್‌ನಲ್ಲಿ ಮೂರನೇ ಶ್ರೇಯಾಂಕಿತ ಆಟಗಾರ್ತಿ ಸಿಂಧು 21–15, 21–9ರ ನೇರ ಗೇಮ್‌ಗಳಿಂದ ಸ್ಕಾಟ್ಲೆಂಡ್‌ನ ಕ್ರಿಸ್ಟಿ ಗಿಲ್‌ಮೌರ್‌ ಅವರನ್ನು ಸೋಲಿಸಿ ಚಿನ್ನ ಗಳಿಸಿದರು. ಇದು ಸಿಂಧು ಅವರ ವೃತ್ತಿ ಜೀವನದ ಐದನೇ ಹಾಗೂ ಮಲೇಷ್ಯಾ ಮಾಸ್ಟರ್ಸ್‌ ಟೂರ್ನಿಯಲ್ಲಿ ಎರಡನೇ ಪ್ರಶಸ್ತಿಯಾಗಿದೆ.
 • ಭಾರತದ ಪಿ.ವಿ ಸಿಂಧು 2013ರಲ್ಲಿ ಮಲೇಷ್ಯಾ ಮಾಸ್ಟರ್ಸ್‌ ಗ್ರ್ಯಾಂಡ್‌ ಪ್ರೀ ಗೋಲ್ಡ್‌ ಬ್ಯಾಡ್ಮಿಂಟನ್‌ ಟೂರ್ನಿ ಜಯಿಸಿದ್ದರು. [೧೬]
 • ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಎರಡು ಸಲ ಕಂಚು ಜಯಿಸಿದ್ದ ಪಿ.ವಿ. ಸಿಂಧು ಹತ್ತನೇ ರ್‍ಯಾಂಕಿಂಗ್‌ ಸ್ಥಾನದಲ್ಲಿ' [೧೭]

ವೃತ್ತಿಜೀವನದ ದಾಖಲೆಗಳು[ಬದಲಾಯಿಸಿ]

Event 2010 2011 2012 2013
ದಕ್ಷಿಣ ಕೊರಿಯಾ ಕೊರಿಯಾ ಓಪನ್ ಸೂಪರ್ ಸೀರೀಸ್[೧೮] Round 2
BWF ವಿಶ್ವ ಕಿರಿಯರ ಚಾಂಪಿಯನ್ ಶಿಪ್[೧೮] Round 3
China ಚೈನಾ ಓಪನ್ ಸೂಪರ್ ಸೀರೀಸ್[೧೮] Qualification Semifinals
Indonesia ಇಂಡೋನೇಷ್ಯಾ ಓಪನ್ ಸೂಪರ್ ಸೀರೀಸ್[೧೮] Round 2
ಭಾರತ ಭಾರತ ಓಪನ್ ಸಿರೀಸ್[೧೮] Semifinals Round 1 Quarterfinals Semifinals
Japan ಜಪಾನ್ ಓಪನ್ ಸೂಪರ್ ಸೀರೀಸ್[೧೮] Round 2
Netherlands ಡಚ್ ಓಪನ್[೧೮] 22 ಬೆಳ್ಳಿ
ಭಾರತ ಭಾರತ ಓಪನ್ ಗ್ರಾಂಡ್ ಪ್ರಿಕ್ಸ್ ಗೋಲ್ಡ್[೧೮] Round 2 Round 2 22 ಬೆಳ್ಳಿ
Malaysia ಮಲೇಷ್ಯಾ ಓಪನ್ ಗ್ರಾಂಡ್ ಪ್ರಿಕ್ಸ್ ಗೋಲ್ಡ್[೧೮] 11 ಬಂಗಾರ
BWF ವಿಶ್ವ ಚಾಂಪಿಯನ್ ಶಿಪ್[೧೮] 33 ಕಂಚು

ನೋಡಿ[ಬದಲಾಯಿಸಿ]

ಉಲ್ಲೇಖನಗಳು[ಬದಲಾಯಿಸಿ]

 1. "Sindhu breaks into world top 20 ranking". The Hindu. 21 September 2012. Retrieved 21 September 2012. 
 2. "BWF Girl's Singles Ranking of Sindhu". tournamentsoftware.com. 2012-09-21. 
 3. ೩.೦ ೩.೧ "Boys and girls with golden dreams". Deccan Chronicle. 30 December 2009. Retrieved 20 October 2010. 
 4. ೪.೦ ೪.೧ V. V., Subrahmanyam (10 April 2008). "Aiming for the stars". The Hindu. Retrieved 20 October 2010. 
 5. V. V., Subrahmanyam (3 October 2010). "Shuttler Sindhu is the star to watch out for". The Hindu. Retrieved 20 October 2010. 
 6. N, Jagannath Das (3 September 2009). "Sindhu, a smash hit at 14". The New Indian Express. Retrieved 20 October 2010. 
 7. "SAI badminton coach returns with glory". The Tribune. 13 February 2010. Retrieved 20 October 2010. 
 8. "Sindhu, emerging star on badminton horizon". Deccan Chronicle. 27 July 2010. Retrieved 20 October 2010. 
 9. "PV Sindhu". Retrieved 2012-06-15. 
 10. ಟೆಂಪ್ಲೇಟು:Cite *web
 11. "PV Sindhu stuns Olympic gold medallist Xuerui in China *Masters". ZeeNews. Retrieved 14 September 2012. 
 12. "Fighter PV Sindhu bows out of China Masters". 
 13. ಮಲೇಶ್ಯಾ ಓಪನ್ ನಲ್ಲಿ ಸಿಂಧು ಗೆ ಚಿನ್ನದ ಪದಕ
 14. ಸಿಂಧುಗೆ ಕಂಚಿನ ಪದಕ
 15. http://www.thehindu.com/sport/other-sports/sindhu-wins-macau-open-title-for-third-time/article7929793.ece
 16. http://www.prajavani.net/article/ಸಿಂಧು-ಮುಡಿಗೆ-ಮಲೇಷ್ಯಾ-ಬ್ಯಾಡ್ಮಿಂಟನ್‌-ಗರಿ
 17. prajavani:07/01/2016
 18. ೧೮.೦ ೧೮.೧ ೧೮.೨ ೧೮.೩ ೧೮.೪ ೧೮.೫ ೧೮.೬ ೧೮.೭ ೧೮.೮ ೧೮.೯ "Tournaments of P.V.Sindhu". tournamentsoftware.com. 

ಬಾಹ್ಯ ಸಂಪರ್ಕಗಳು[ಬದಲಾಯಿಸಿ]