ವಿಷಯಕ್ಕೆ ಹೋಗು

ಲಕ್ನೋ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಲಕ್ನೋ
लखनऊ
ಮೇಲಿನಿಂದ ಬಲಸುತ್ತು: ಬಡಾ ಇಮಾಂಬ್ರ, ಚಾರ್‍ಬಾಘ್ ರೈಲ್ವೆನಿಲ್ದಾಣ, ರುಮಿ ದರ್ವಾಜ, ಹಜ್ರತ್‍ಗಂಜ್, ಲಾ ಮಾರ್ಟಿನಿಯರ್ ಶಾಲೆ ಮತ್ತು ಅಂಬೇಡ್ಕರ್ ಉದ್ಯಾನವನ.
Nickname(s): 
ನವಾಬರ ನಗರ, ಭಾರತದ ಸ್ವರ್ಣ ನಗರ, ಪೂರ್ವದ ಕಾನ್ಸ್ಟೆಂಟಿನೋಪಲ್, ಶಿರಾಜ್-ಎ-ಹಿಂದ್
ದೇಶ ಭಾರತ
ರಾಜ್ಯಉತ್ತರ ಪ್ರದೇಶ
ಜಿಲ್ಲೆಲಕ್ನೋ
ಸರ್ಕಾರ
 • ಮಾದರಿಮೇಯರ್-ಕೌನ್ಸಿಲ್
 • ಪಾಲಿಕೆLucknow Municipal Corporation
 • Mayorದಿನೇಶ್ ಶರ್ಮ (ಭಾಜಪ)
 • Municipal Commissionerಆರ್.ಕೆ. ಸಿಂಗ್
 • MPHon. Home Minister of India Mr. ರಾಜನಾಥ್ ಸಿಂಗ್ (ಭಾಜಪ)
Area
 • Metropolitan೨,೫೨೮ km (೯೭೬ sq mi)
Elevation
೧೨೮ m (೪೨೦ ft)
Population
 (2011)
 • ಶ್ರೇಣಿ8th
 • Urban
೪೮,೧೫,೬೦೧
 • Metro
೪೯,೦೧,೪೭೪
Demonym(s)ಲಕ್ನವಿ
ಸಮಯದ ವಲಯ
ಸಮಯ ವಲಯಯುಟಿಸಿ+5:30 (IST)
PIN
2260xx / 2270xx
Telephone code+91-522
ವಾಹನ ನೋಂದಣಿUP 32
GDPIncrease $82 billion
Sex ratio915 /
ಜಾಲತಾಣlucknow.nic.in

ಲಕ್ನೋ, ಭಾರತದ ಉತ್ತರ ಪ್ರದೇಶ ರಾಜ್ಯದ ರಾಜಧಾನಿ, ಭಾರತದ ಪ್ರಮುಖ ಮೆಟ್ರೋಪಾಲಿಟನ್ ನಗರಗಳಲ್ಲಿ ಒ೦ದಾಗಿದೆ, ಲಕ್ನೋ ನಾಮಸೂಚಕ ರಾಜ್ಯದ ಆಡಳಿತ ಕೇಂದ್ರದ ಮುಖ್ಯ ಕಛೇರಿಯಾಗಿದೆ ಮತ್ತು ನಾಮಸೂಚಕ ಜಿಲ್ಲಾ ಮತ್ತು ವಿಭಾಗವಾಗಿದೆ. ಭಾರತದ ೮ನೇ ಅತಿ ಹೆಚ್ಚು ಜನಸಂಖ್ಯೆಯುಳ್ಳ ನಗರ ಮತ್ತು ಉತ್ತರ ಪ್ರದೇಶದ ದೊಡ್ಡ ನಗರವಾಗಿದೆ. ಲಕ್ನೋ ಯಾವಾಗಲೂ ೧೮ ಮತ್ತು ೧೯ ನೇ ಶತಮಾನಗಳಲ್ಲಿ ನವಾಬ್ ಅಧಿಕಾರದ ಸ್ಥಾನವಾಗಿ ಉತ್ತರ ಭಾರತದ ಸಾಂಸ್ಕೃತಿಕ ಮತ್ತು ಕಲಾತ್ಮಕ ಹಬ್ ಆಗಿ ಮತ್ತು ಬಹುಸಂಸ್ಕೃತಿಯ ನಗರವಾಗಿದೆ. ಇದು ಸರ್ಕಾರ, ಶಿಕ್ಷಣ, ವಾಣಿಜ್ಯ, ಅಂತರಿಕ್ಷಯಾನ, ಹಣಕಾಸು, ಔಷಧ, ತಂತ್ರಜ್ಞಾನ, ವಿನ್ಯಾಸ, ಸಂಸ್ಕೃತಿ, ಪ್ರವಾಸೋದ್ಯಮ, ಸಂಗೀತ ಮತ್ತು ಕವನಗಳ ಪ್ರಮುಖ ಕೇಂದ್ರವಾಗಿದೆ.

ನಗರವು ಸಮುದ್ರ ಮಟ್ಟದಿಂದ ಸುಮಾರು ೧೨೩ ಮೀಟರ್ ( ೪೦೪ ಅಡಿ) ಎತ್ತರದಲ್ಲಿ ನಿಂತಿದೆ ಮತ್ತು ೨,೫೨೮ಚದರ ಕಿಲೋಮೀಟರ್ ( ೯೭೬ಚ ಮೈಲಿ ) ನಷ್ಟು ಪ್ರದೇಶವನ್ನು ಒಳಗೊಂಡಿದೆ. ಇದು ಪಶ್ಚಿಮಕ್ಕೆ ಬಾರಾಬಂಕಿ ಜಿಲ್ಲೆ, ಪೂರ್ವಕ್ಕೆ ಉನ್ನಾವೋ ಜಿಲ್ಲ, ಉತ್ತರ ದಕ್ಷಿಣದಲ್ಲಿ ರಾಯ್‍ಬರೇಲಿ ಮತ್ತು ಸೀತಪುರ ಮತ್ತು ಹಾರ್ಡೋಯ್ ಜಿಲ್ಲೆಗಳಿ೦ದ ಸುತ್ತುವರಿದಿದೆ, ಲಕ್ನೋ ಗೋಮತಿ ನದಿಯ ವಾಯವ್ಯ ತೀರದಲ್ಲಿ ಕೂರುತ್ತದೆ. ಹಿಂದಿ ನಗರದ ಪ್ರಮುಖ ಭಾಷೆಯಾಗಿದೆ ಮತ್ತು ಉರ್ದು ಸಹ ವ್ಯಾಪಕವಾಗಿ ಮಾತನಾಡುವ ಭಾಷೆಯಾಗಿದೆ. ಇದನ್ನು ರೈಲು ಮತ್ತು ರಸ್ತೆಯ ಮೂಲಕ ಭಾರತದ ಪ್ರತಿಯೊಂದು ಭಾಗದಿ೦ದ ಪ್ರವೇಶಿಸಬಹುದು.

ಐತಿಹಾಸಿಕವಾಗಿ ಅವಧ್ ರಾಜಧಾನಿಯಾಗಿ ಮತ್ತು ದೆಹಲಿ ಸುಲ್ತಾನರಿ೦ದ ನಿಯಂತ್ರಿಸಲ್ಪಟ್ಟ, ಇದು ನಂತರ ಅವಧ್ ನವಾಬರಿಗೆ ವರ್ಗಾಯಿಸಲಾಯಿತು. ಬಂಗಾಳ, ಅವಧ್ ಮತ್ತು ಮೊಘಲ್ ನವಾಬರ ಲಾರ್ಡ್ ಕ್ಲೈವ್ನ ಸೋಲಿನ ನಂತರ ಈಸ್ಟ್ ಇಂಡಿಯಾ ಕಂಪನಿಯ ಆಳ್ವಿಕೆಗೆ ಒಳಪಟ್ಟಿತು ಮತ್ತು ೧೮೫೭ ರಲ್ಲಿ ಬ್ರಿಟಿಷ್ ರಾಜ್ ಗೆ ವರ್ಗಾಯಿಸಲಾಯಿತು. ಇದು ಉಳಿದ ಭಾರತದ ಜೊತೆಗೆ, ಲಕ್ನೋ ೧೫ ಆಗಸ್ಟ್ ೧೯೪೭ ರಂದು ಬ್ರಿಟನ್ನಿಂದ ಸ್ವತಂತ್ರವಾಯಿತು. ಇದು ವಿಶ್ವದ ೭೪ ನೇ ವೇಗವಾಗಿ ಬೆಳೆಯುತ್ತಿರುವ ನಗರವಾಗಿದೆ.

ಲಕ್ನೋ ನಗರದ ಎಲ್ಲಾ ಕಡೆ ೪೦೦೦ ಸಿಸಿಟಿವಿ ಕ್ಯಾಮರಾಗಳನ್ನು ಇನ್ಸ್ಟಾಲ್ ಮಾಡುವ ಮುಲಖ ಭಾರತದ ಮೊದಲ ಸಿಸಿಟಿವಿ ನಗರವಾಗಿದೆ. ಈ ಸಂಖ್ಯೆ ಏಪ್ರಿಲ್ ೨೦೧೫ ನೊಳಗೆ ೯೦೦೦ಕ್ಕೆ ಹೆಚ್ಚಳ ಮಾಡಲಾಗುತ್ತದೆ. ಲಕ್ನೋ ಪೊಲೀಸ್ ಈ ಕ್ಯಾಮೆರಾಗಳನ್ನು ಬಳಸಿ ಅಪರಾಧಗಳ ಮೇಲೆ ಕಣ್ಣೀಟ್ಟಿರುತ್ತರೆ. ಇದಲ್ಲದೆ, ಆಧುನಿಕ ಪೊಲೀಸ್ ಕಂಟ್ರೋಲ್ ರೂಂ ಡ್ರೋನ್ಸ್ ಗಳನ್ನು ಬಳಸಿ ಪ್ರಮುಖ ಪ್ರದೇಶಗಳಲ್ಲಿ ಮತ್ತು ವಿಶೇಷ ಸಂದರ್ಭಗಳಲ್ಲಿ, ಉತ್ಸವಗಳು ಮತ್ತು ಮೆರವಣಿಗೆಗಳಲ್ಲಿ ಮೇಲ್ವಿಚಾರಣೆಗಾಗಿ ಬಳಸಿಕೊಳ್ಳುತ್ತರೆ.

ಬಾಹ್ಯ ಸಂಪರ್ಕಗಳು

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]
  1. "Lucknow Pin Code list, Population density,literacy rate and total Area with census 2011 details".


"https://kn.wikipedia.org/w/index.php?title=ಲಕ್ನೋ&oldid=1286025" ಇಂದ ಪಡೆಯಲ್ಪಟ್ಟಿದೆ