ಹಿಮ ದಾಸ್
![]() Hima Das at the 2018 IAAF World U20 Championships | ||||||||||||||
ವೈಯುಕ್ತಿಕ ಮಾಹಿತಿ | ||||||||||||||
---|---|---|---|---|---|---|---|---|---|---|---|---|---|---|
ರಾಷ್ರೀಯತೆ | ಭಾರತದೇಶ | |||||||||||||
ಜನನ | ದಿಂಗ್,ನಾಗೋಣ್ , ಅಸೋಂ | ೯ ಜನವರಿ ೨೦೦೦|||||||||||||
ನಿವಾಸ | ದಿಂಗ್, ನಾಗೋಣ್ , ಅಸೋಂ | |||||||||||||
Sport | ||||||||||||||
ದೇಶ | ![]() | |||||||||||||
ಕ್ರೀಡೆ | Track and field | |||||||||||||
ಸ್ಪರ್ಧೆಗಳು(ಗಳು) | 400 metres | |||||||||||||
ತರಬೇತುದಾರರು | Nipon Das | |||||||||||||
Achievements and titles | ||||||||||||||
ವೈಯಕ್ತಿಕ ಪರಮಶ್ರೇಷ್ಠ | 400 m: 51.13 (Guwahati 2018) | |||||||||||||
Medal record
|
ಹಿಮ ದಾಸ್ ವಿಶ್ವ ಜೂನಿಯರ್ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಭಾರತದ ಪರ ಮೊದಲ ಚಿನ್ನದ ಪದಕ ಗೆದ್ದ ಮೊದಲ ಅಥ್ಲೀಟ್ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ.ಫಿನ್ ಲ್ಯಾಂಡ್ ನಲ್ಲಿ ನಡೆಯುತ್ತಿರುವ ವಿಶ್ವ ಜೂನಿಯರ್ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಭಾರತದ ಅಥ್ಲೀಟ್ ಹಿಮದಾಸ್ ದಾಖಲೆ ನಿರ್ಮಾಣ ಮಾಡಿದ್ದು.[೧]ಕ್ರೀಡಾಕೂಟದಲ್ಲಿ ಭಾರತದ ಪರ ಮೊದಲ ಚಿನ್ನದ ಪದಕ ಗೆದ್ದ ಮೊದಲ ಅಥ್ಲೀಟ್ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ. ಅಂಡರ್ 20 ಮಹಿಳೆಯರ 400 ಮೀಟರ್ ಓಟದ ಸ್ಪರ್ಧೆಯಲ್ಲಿ ಹಿಮದಾಸ್ ಚಿನ್ನದ ಪದಕ ಗೆಲ್ಲುವ ಮೂಲಕ ಈ ಸಾಧನೆ ಗೈದಿದ್ದಾರೆ. 18 ವರ್ಷದ ಹಿಮದಾಸ್ 400 ಮೀಟರ್ ಓಟವನ್ನು ಕೇವಲ 51.46 ಸೆಕೆಂಡ್ ಗಳಲ್ಲಿ ಪೂರ್ಣಗೊಳಿಸುವ ಮೂಲಕ ಅಗ್ರಸ್ಥಾನಗಳಿಸಿ ಚಿನ್ನದ ಪದಕಕ್ಕೆ ಮುತ್ತಿಟ್ಟಿದ್ದಾರೆ.
ವ್ಯಕ್ತಿಗತ ಜೀವನ[ಬದಲಾಯಿಸಿ]
ಹಿಮಾ ದಾಸ್ ಮೂಲತಃ ಅಸ್ಸಾಂನ ನಾಗೋನ್ ಜಿಲ್ಲೆಯವರಾಗಿದ್ದು, ಕೃಷಿ ಹಿನ್ನೆಲೆ ಹೊಂದಿರುವ ಕುಟುಂಬದಲ್ಲಿ ಜನಿಸಿದ್ದರು.18 ನೇ ವರ್ಷದ ಹಿಮಾ ದಾಸ್ 400 ಮೀಟರ್ ಓಟವನ್ನು 51.46 ಸೆಕೆಂಡ್ ಗಳಲ್ಲಿ ಸ್ಪರ್ಧೆಯನ್ನು ಪೂರ್ಣಗೊಳಿಸಿ ಚಿನ್ನದ ಪದಕಕ್ಕೆ ಮುತ್ತಿಟ್ಟಿದ್ದರು. [೨].ಜನನ ೯ ಜನವರಿ ೨೦೦೦.ಹಿಮ ದಾಸ್ ತಂದೆ ರೊನ್ ಜಿತ್ ದಾಸ್ ಮತ್ತು ತಾಯಿ ಜೊನಾಲಿ ದಾಸ್.ಅವರು ನಾಲ್ಕು ಮಕ್ಕಳಲ್ಲಿ ಕಿರಿಯರಾಗಿದ್ದಾರೆ
ಕ್ರೀಡಾಕೂಟದಲ್ಲಿ[ಬದಲಾಯಿಸಿ]
- ಹಿಮಾ ಬಾಲ್ಯದಲ್ಲಿ ಫುಟ್ಬಾಲ್ ಆಡಲಾರಂಭಿಸಿದರು.ಆಕೆ ತನ್ನ ಶಾಲೆಯಲ್ಲಿ ಹುಡುಗರೊಂದಿಗೆ ಆಟವಾಡುತ್ತಾ ಫುಟ್ಬಾಲ್ನಲ್ಲಿ ವೃತ್ತಿಜೀವನವನ್ನು ಮುಂದುವರಿಸಲು ಬಯಸಿದಳು. ನಂತರ, ಜವಾಹರ್ ನವೋದಯ ವಿದ್ಯಾಲಯದಿಂದ ಶಾರೀಲ್ ಶಿಕ್ಷಣ ತರಬೇತುದಾರ ಶಮ್ಸುಲ್ ಹೋಕ್ ಅವರ ಸಲಹೆಯ ಮೇರೆಗೆ, ದಾಸ್ ಅಥ್ಲೆಟಿಕ್ಸ್ಗೆ ಬದಲಿಸಿದನು ಮತ್ತು ಸ್ವಲ್ಪ ದೂರ ಓಟದಲ್ಲಿ ಭಾಗವಹಿಸುವುದನ್ನು ಪ್ರಾರಂಭಿಸಿದರು.
- ಅಂತರ-ಜಿಲ್ಲೆಯ ಕ್ರೀಡಾ ಮತ್ತು ಯುವಜನ ಕಲ್ಯಾಣ ನಿರ್ದೇಶನಾಲಯದ ಕ್ರೀಡಾಪಟುವಿನ ನಿಪಾನ್ ದಾಸ್ ಹಿಮದಾಸ್ ಪ್ರತಿಭಯನ್ನು ಕಂಡುಹಿಡಿದನು.ಅವರು ಆಕೆಯನ್ನು ತರಬೇತಿಗಾಗಿ ರಾಜ್ಯ ರಾಜಧಾನಿ ಗೌಹಾತಿಗೆ ಸ್ಥಳಾಂತರಿಸಲು ಕೇಳಿಕೊಂಡರು.ಹಿಮಾ ದಾಸ್ ಅವರ ಪೋಷಕರು ತಮ್ಮ ಮೀಸಲಾತಿಯ ಹೊರತಾಗಿಯೂ ಪ್ರಸ್ತಾಪಕ್ಕೆ ಒಪ್ಪಿದರು.
- ಹಿಮಾದಾಸ್ ಸರಸ್ಜಾಯ್ ಸ್ಪೋರ್ಟ್ಸ್ ಕಾಂಪ್ಲೆಕ್ಸ್ನ ಬಳಿ ಬಾಡಿಗೆ ಮನೆಗೆ ತೆರಳಿದರು ಮತ್ತು ರಾಜ್ಯ ಅಕಾಡೆಮಿಯಲ್ಲಿ ಸೇರಿಕೊಂಡಳು. ಇದು ಬಾಕ್ಸಿಂಗ್ ಮತ್ತು ಫುಟ್ಬಾಲ್ನಲ್ಲಿ ಪರಿಣತಿಯನ್ನು ಪಡೆದಿದೆ. ನಂತರ, ಅಥ್ಲೆಟಿಕ್ಸ್ಗಾಗಿ ಪ್ರತ್ಯೇಕ ವಿಭಾಗವನ್ನು ಪ್ರಾರಂಭಿಸಲಾಯಿತು.
- 400 ಮೀಟರ್ ಮತ್ತು 4x400 ಮೀಟರ್ ರಿಲೇನಲ್ಲಿ 2018 ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ದಾಸ್ ಸ್ಪರ್ಧಿಸಿದ್ದರು.400 ಮೀಟರುಗಳಲ್ಲಿ, ದಾಸ್ ಫೈನಲ್ಗೆ ಅರ್ಹತೆ ಪಡೆದರು, ಅಲ್ಲಿ ಅವರು 51.32 ಸೆಕೆಂಡುಗಳ ಅವಧಿಯಲ್ಲಿ ಆರನೇ ಸ್ಥಾನ ಗಳಿಸಿದರು,ಅವರು 4x400 ಮೀಟರ್ ರಿಲೇನಲ್ಲಿಫೈನಲ್ನಲ್ಲಿ ಸ್ಪರ್ಧಿಸಿದ ಭಾರತೀಯ ತಂಡದ ಭಾಗವಾಗಿತ್ತು.
- ಅಂದ ಹಾಗೇ ಹಿಮಾದಾಸ್ ಅವರು ವಿಶ್ವ ಜೂನಿಯರ್ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ 51.46 ಸೆಕೆಂಡ್ ಗಳಲ್ಲಿ ಓಟವನ್ನು ಪೂರ್ಣಗೊಳಿಸಿದ್ದು, ಆದರೆ ಕಳೆದ ತಿಂಗಳು ಗುವಾಹತಿಯಲ್ಲಿ ನಡೆದ ನ್ಯಾಷನಲ್ ಚಾಂಪಿಯನ್ ಶಿಪ್ ನಲ್ಲಿ ಕೇವಲ 51.13 ಸೆಕೆಂಡ್ ಗಳಲ್ಲಿ 400 ಮೀಟರ್ ದೂರವನ್ನು ಕ್ರಮಿಸಿದ್ದರು.[೩]
- ಟ್ರೈನಿಂಗ್ ಕೊಟ್ಟಿದ್ದ ಕೋಛ್ ನಿರುಪದಾಸ್ಈ ಹಿಂದೆ ಏಪ್ರಿಲ್ನಲ್ಲಿ ಗೋಲ್ಡ್ ಕೋಸ್ಟ್ನಲ್ಲಿ ನಡೆದಿದ್ದ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದ ಹಿಮಾ, 51.32 ಸೆಕೆಂಡ್‍ಗಳಲ್ಲಿ ಆರನೇ ಸ್ಥಾನವನ್ನು ಪಡೆಯುವ ಮೂಲಕ ಹಿನ್ನೆಡೆ ಅನುಭವಿಸಿದ್ದರು.
ಅಭಿನಂದನೆಗಳು[ಬದಲಾಯಿಸಿ]
ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ರಾಮನಾಥ್ ಕೋವಿಂದ್ ಸೇರಿದಂತೆ ಹಲವು ಗಣ್ಯರು ಶುಭ ಕೋರಿ ಟ್ವೀಟ್ ಮಾಡಿದ್ದಾರೆ.ಹೇಮಾ ದಾಸ್ ಚಿರತೆಯಂತೆ ಓಡಿದ ವಿಡಿಯೋವನ್ನು ಭಾರತದ ಅಥ್ಲೆಟಿಕ್ಸ್ ಫೆಡರೇಶನ್ ಆಫ್ ಇಂಡಿಯಾ ಫೇಸ್ ಬುಕ್ ಖಾತೆಯಲ್ಲಿ ಪೋಸ್ಟ್ ಮಾಡಿದೆ.ಸದ್ಯ ಹಿಮಾ ದಾಸ್ ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ಅಭಿನಂದನೆಗಳ ಮಹಾಪೂರವೇ ಹರಿದು ಬಂದಿದೆ.
ಬಾಹ್ಯ ವೀಡಿಯೋ ಕೊಂಡಿಗಳು[ಬದಲಾಯಿಸಿ]
ಉಲ್ಲೇಖ[ಬದಲಾಯಿಸಿ]
- ↑ kannadaprabha.com/ topic/ %E0%B2%B9% E0%B2%BF%E0%B2%AE%E0%B2%A6%E0%B2%BE%E0%B2%B8%E0%B3%8D "ವಿಶ್ವ ಜೂನಿಯರ್ ಅಥ್ಲೆಟಿಕ್ಸ್: ಚಿನ್ನ ಗೆದ್ದು ದಾಖಲೆ ಬರೆದ ಭಾರತದ ಅಥ್ಲೀಟ್ ಹಿಮ ದಾಸ್". kannadaprabha.com. Retrieved 2018-07-15.
{{cite web}}
: Check|url=
value (help) - ↑ "ಭಾರತ ಮಾತೆಯ ಹೆಮ್ಮೆಯ ಪುತ್ರಿ ದೇಶಕ್ಕೆ ಚಿನ್ನ ತಂದುಕೊಟ್ಟ ಹಿಮದಾಸ್". colourfullkarnataka.com. Archived from the original on 2019-07-08. Retrieved 2018-07-15.
- ↑ "ವಿಶ್ವ ಅಥ್ಲೆಟಿಕ್ಸ್ ನಲ್ಲಿ ಚಿನ್ನ ಪದಕ ತಂದುಕೊಟ್ಟ ಹಿಮಾ ದಾಸ್". publictv.in. Retrieved 2018-07-15.