ಭಾರತದಲ್ಲಿ ಬ್ಯಾಡ್ಮಿಂಟನ್

ವಿಕಿಪೀಡಿಯ ಇಂದ
Jump to navigation Jump to search

ಭಾರತದಲ್ಲಿ ಬ್ಯಾಡ್ಮಿಂಟನ್[ಬದಲಾಯಿಸಿ]

ಭಾರತದಲ್ಲಿ ಬ್ಯಾಡ್ಮಿಂಟನ್
.
Badminton India

.

ಪಿ.ವಿ. ಸಿಂಧು
 • ಬ್ಯಾಡ್ಮಿಂಟನ್ ಭಾರತದಲ್ಲಿರುವ ಪ್ರಸಿದ್ಧ ಕ್ರೀಡೆಯಾಗಿದೆ. ಇದು ಕ್ರಿಕೆಟ್ ನಂತರ ಭಾರತದಲ್ಲೇ ಎರಡನೆಯ ಹೆಚ್ಚು ಆಡುವ ಕ್ರೀಡೆಯಾಗಿದೆ. ಭಾರತದಲ್ಲಿ ಬ್ಯಾಡ್ಮಿಂಟನ್ ಕ್ರೀಡೆಯನ್ನು ಭಾರತ ಬ್ಯಾಡ್ಮಿಂಟನ್ ಸಂಸ್ಥೆಯ (Badminton Association of India.) ನಿರ್ವಹಿಸುತ್ತದೆ.[೧]
 • ಭಾರತೀಯ ಮಹಿಳೆಯರ ಸಿಂಗಲ್ಸ್ ಆಟಗಾರ್ತಿ ಸೈನಾ ನೆಹ್ವಾಲ್ 2015 ರಲ್ಲಿ ವಿಶ್ವದ ಪ್ರಥಮ ಸ್ಥಾನವನ್ನು ಗಳಿಸಿದರು. [2] ಪ್ರಕಾಶ್ ಪಡುಕೋಣೆ ಮತ್ತು ಪುಲ್ಲೇಲ ಗೋಪಿಚಂದ್, ಇಬ್ಬರೂ ಕ್ರಮವಾಗಿ 1980 ಮತ್ತು 2001 ರಲ್ಲಿ ಆಲ್ ಇಂಗ್ಲೆಂಡ್ ಓಪನ್ ಗೆಲವು ಸಾಧಿಸಿದರು. [3] ಸೈನಾ ಅವರು 2012 ಒಲಿಂಪಿಕ್ಸ್ನಲ್ಲಿ ಕಂಚಿನ ಪದಕ ಗೆಲ್ಲುವ ಮೂಲಕ ಒಲಂಪಿಕ್ ಪದಕ ಗೆದ್ದ ಮೊದಲ ಭಾರತೀಯ ಬ್ಯಾಡ್ಮಿಂಟನ್ ಆಟಗಾರಳು ಎನಿಸಿದಳು. 2016 ಬೇಸಿಗೆ ಒಲಿಂಪಿಕ್ಸ್, ನಲ್ಲಿ ಪಿ.ವಿ. ಸಿಂಧು ಬೆಳ್ಳಿ ಪದಕ ಗೆದ್ದ ಮೊದಲ ಭಾರತೀಯಳು ಎನಿಸಿಕೊಂಡರು.[೨][೩]

ಬಿಡಬ್ಲ್ಯೂಎಫ್ ಭಾರತೀಯ ಟಾಪ್ 10 ಪುರುಷರ ಸಿಂಗಲ್ಸ್ ರ್ಯಾಂಕಿಂಗ್[ಬದಲಾಯಿಸಿ]

ಶ್ರೇಣಿ ವ್ಯತ್ಯಾಸ ಹೆಸರು ರೇಟಿಂಗ್
10 1 ^ ಶ್ರೀಕಾಂತ್ ಕಿಡಂಬಿ 53,886
21 ಅಜಯ್ ಜಯರಾಮ್ 42,483
31 ಪ್ರಣಯ್ ಕುಮಾರ್ 37,201
36 ಬಿ ಸಾಯಿ ಪ್ರಣೀತ್ 34,332
38 ಸಮೀರ್ ವರ್ಮಾ 33,850
75 ಆನಂದ್ ಪವಾರ್ 22,020
84 2 ಹರ್ಶೀಲ್ ಡ್ಯಾನಿ 20,960
86 1 ಪರುಪಳ್ಳಿ ಕಶ್ಯಪ್ 20,090
117 N ಶುಭಂಕರ್ ಡೇ 15,600

[೪]

ಬಿಡಬ್ಲ್ಯೂಎಫ್ ಭಾರತೀಯ ಟಾಪ್ 10 ಮಹಿಳೆಯರ ಸಿಂಗಲ್ಸ್ ರ್ಯಾಂಕಿಂಗ್[ಬದಲಾಯಿಸಿ]

ಶ್ರೇಣಿ ವ್ಯತ್ಯಾಸ ಹೆಸರು ರೇಟಿಂಗ್
9 4 ಸೈನಾ ನೆಹ್ವಾಲ್ 70,209
10 N ಪಿ.ವಿ. ಸಿಂಧು 63,099
78 1♠ ತನ್ವಿ ಲಾಡ್ 21,370
83 1♠ ಗದ್ದೆ ರುತ್ವಿಕಾ ಶಿವಾನಿ 20,314
97 3 ಶೈಲಿ ರಾಣೆ 17,040
114 1♠ ಪಿ ಸಿ ತುಳಸಿ 15,052
168 N ರಿತುಪರ್ಣ ದಾಸ್ 8,150
190 1♠ ಲಲಿತಾ ದಹಿಯಾ 6,950

[೫]

ಬೇಸಿಗೆ ಒಲಿಂಪಿಕ್ಸ್[ಬದಲಾಯಿಸಿ]

ಸೈನಾ ನೆಹ್ವಾಲ್
2016
ಈವೆಂಟ್ ಆಟಗಾರ ಫಲಿತಾಂಶ
ಪುರುಷರ ಸಿಂಗಲ್ಸ್ ಶ್ರೀಕಾಂತ್ Kidambi ಕ್ವಾರ್ಟರ್ ಫೈನಲ್
ಮಹಿಳೆಯರ ಸಿಂಗಲ್ಸ್ ಪಿ.ವಿ. ಸಿಂಧು 2
ಮಹಿಳೆಯರ ಸಿಂಗಲ್ಸ್ ಸೈನಾ ನೆಹ್ವಾಲ್ ಗ್ರೂಪ್ ಹಂತ
ಪುರುಷರ ಡಬಲ್ಸ್ ಮನು ಅತ್ರಿ / ಬಿ ಸುಮೀತ್ ರೆಡ್ಡಿ ಗ್ರೂಪ್ ಹಂತ
ಮಹಿಳೆಯರ ಡಬಲ್ಸ್ ಜ್ವಾಲಾ ಗುಟ್ಟಾ / ಅಶ್ವಿನಿ ಪೊನ್ನಪ್ಪ ಗ್ರೂಪ್ ಹಂತ
2012
ಪುರುಷರ ಸಿಂಗಲ್ಸ್ ಪರುಪಳ್ಳಿ ಕಶ್ಯಪ್ ಕ್ವಾರ್ಟರ್ ಫೈನಲ್
ಮಹಿಳೆಯರ ಸಿಂಗಲ್ಸ್ ಸೈನಾ ನೆಹ್ವಾಲ್ 3
ಮಹಿಳೆಯರ ಡಬಲ್ಸ್ ಜ್ವಾಲಾ ಗುಟ್ಟಾ / ಅಶ್ವಿನಿ ಪೊನ್ನಪ್ಪ ಗ್ರೂಪ್ ಹಂತ
ಮಿಶ್ರ ಡಬಲ್ಸ್ ವಲಿಯವತಿಲ್ ಡಿಜು / ಜ್ವಾಲಾ ಗುಟ್ಟಾ ಗ್ರೂಪ್ ಹಂತ
2008
ಪುರುಷರ ಸಿಂಗಲ್ಸ್ ಅನೂಪ್ ಶ್ರೀಧರ್ ಎರಡನೇ ರೌಂಡ್
ಮಹಿಳೆಯರ ಸಿಂಗಲ್ಸ್ ಸೈನಾ ನೆಹ್ವಾಲ್ ಕ್ವಾರ್ಟರ್ ಫೈನಲ್

ರಷ್ಯಾ ಓಪನ್‌ ಗ್ರ್ಯಾಂಡ್‌ಪ್ರಿಕ್ಸ್‌ ಬ್ಯಾಡ್ಮಿಂಟನ್‌ 2016[ಬದಲಾಯಿಸಿ]

 • 10 Oct, 2016
 • ರಷ್ಯಾದ:ವ್ಲಾಡಿವೊಸ್ತೊಕ್‌‍ನಲ್ಲಿ ಭಾರತದ ಆಟಗಾರರು ಇಲ್ಲಿ ನಡೆದ ರಷ್ಯಾ ಓಪನ್‌ ಗ್ರ್ಯಾಂಡ್‌ಪ್ರಿಕ್ಸ್‌ ಬ್ಯಾಡ್ಮಿಂಟನ್‌ನಲ್ಲಿ ಮಹಿಳಾ ಸಿಂಗಲ್ಸ್‌ ಮತ್ತು ಮಿಶ್ರ ಡಬಲ್ಸ್‌ ಪ್ರಶಸ್ತಿಗಳನ್ನು ಗೆದ್ದುಕೊಂಡರು. ನಾಲ್ಕನೇ ಶ್ರೇಯಾಂಕದ ಆಟಗಾರ್ತಿ ರುತ್ವಿಕಾ ಶಿವಾನಿ ಗದ್ದೆ ಸಿಂಗಲ್ಸ್‌ ಫೈನಲ್‌ ಪಂದ್ಯದಲ್ಲಿ 21–10, 21–13ರಿಂದ ಸ್ಥಳೀಯ ಆಟಗಾರ್ತಿ ಎವ್‌ಗೆನಿ ಕೊಸೆತ್ಕಾಯ ಅವರನ್ನು ಸೋಲಿಸಿದರು.
 • ಮಿಶ್ರ ಡಬಲ್ಸ್‌ ಪೈನಲ್‌ನಲ್ಲಿ ಎನ್‌.ಸಿಕ್ಕಿ ರೆಡ್ಡಿ ಮತ್ತು ಪ್ರಣವ್‌ ಚೋಪ್ರಾ ಜೋಡಿ ರಷ್ಯಾದ ವ್ಲಾಡಿಮಿರ್‌ ಇವಾನೊವ್‌ ಮತ್ತು ವಲೆರಿಯ ಸೊರೊ ಕಿನಾ ಅವರನ್ನು 21–17, 21–19ರಿಂದ ಮಣಿಸಿತು. ಆದರೆ ಪುರುಷರ ಸಿಂಗಲ್ಸ್‌ ಫೈನಲ್‌ನಲ್ಲಿ ಭಾರತದ ಸಿರಿಲ್‌ ವರ್ಮ ನಿರಾಸೆ ಅನುಭವಿಸಿದರು. ಇವರು ಮಲೇಷ್ಯಾದ ಜುಲ್ಫಾದಿ ಜುಲ್ಕಿಫಿ ಅವರಿಗೆ ತೀವ್ರ ಪೈಪೋಟಿ ನೀಡಿದರಾದರೂ, ಕೊನೆಗೆ 16–21, 21–19, 21–10ರಿಂದ ಸೋಲನುಭವಿಸಿದರು.
 • ಗುವಾಹಟಿಯಲ್ಲಿ ಇದೇ ವರ್ಷ ನಡೆದಿದ್ದ ದಕ್ಷಿಣ ಏಷ್ಯಾ ಕ್ರೀಡಾಕೂಟದಲ್ಲಿ ಪ್ರಶಸ್ತಿ ಗೆದ್ದ ರುತ್ವಿಕಾ ಇಲ್ಲಿ ಇದೀಗ ಈ ವರ್ಷದ ಎರಡನೇ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದಾರೆ. ಗುವಾಹಟಿಯಲ್ಲಿ ಇವರು ಫೈನಲ್‌ನಲ್ಲಿ ಪಿ.ವಿ.ಸಿಂಧು ಅವರನ್ನು ಸೋಲಿಸಿ ಅಚ್ಚರಿ ಮೂಡಿಸಿದ್ದರು.[೬]

ಚೀನಾ ತೈಪೆ ಮಾಸ್ಟರ್ಸ್‌ ಗ್ರ್ಯಾನ್‌ ಪ್ರಿ ಬ್ಯಾಡ್ಮಿಂಟನ್‌ ಟೂರ್ನಿ[ಬದಲಾಯಿಸಿ]

 • 13 Oct, 2016
 • ಚೀನಾದ ತೈಪೆಯಲ್ಲಿ ಶ್ರೇಷ್ಠ ಸಾಮರ್ಥ್ಯ ತೋರಿದ ಭಾರತದ ಸೌರಭ್‌ ವರ್ಮಾ ಅವರು ಇಲ್ಲಿ ನಡೆಯುತ್ತಿರುವ ಚೀನಾ ತೈಪೆ ಮಾಸ್ಟರ್ಸ್‌ ಗ್ರ್ಯಾನ್‌ ಪ್ರಿ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಪ್ರಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ್ದಾರೆ. ಬುಧವಾರ ನಡೆದ ಪುರುಷರ ಸಿಂಗಲ್ಸ್‌ ವಿಭಾಗದ ಎರಡನೇ ಸುತ್ತಿನ ಹೋರಾಟದಲ್ಲಿ ಸೌರಭ್‌ 11–6, 8–11, 12–10, 11–3ರಲ್ಲಿ ಜಪಾನ್‌ನ ಹಾಶಿರು ಶಿಮೊನೊ ಅವರನ್ನು ಪರಾಭವಗೊಳಿಸಿದರು.[೭]

ಸೌರಭ್‌ ವರ್ಮಾಗೆ ಪ್ರಶಸ್ತಿ[ಬದಲಾಯಿಸಿ]

 • 16 Oct, 2016 ರಂದು ತೈಪೆ ಸಿಟಿಯಲ್ಲಿ ಅಪೂರ್ವ ಆಟ ಆಡಿದ ಭಾರತದ ಸೌರಭ್‌ ವರ್ಮಾ ಅವರು ಇಲ್ಲಿ ನಡೆದ ಚೀನಾ ತೈಪೆ ಮಾಸ್ಟರ್ಸ್‌ ಗ್ರ್ಯಾನ್‌ ಪ್ರಿ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಪ್ರಶಸ್ತಿಗೆ ಪಾತ್ರಾಗಿದ್ದಾರೆ. ಭಾನುವಾರ ನಡೆದ ಪುರುಷರ ಸಿಂಗಲ್ಸ್‌ ವಿಭಾಗದ ಫೈನಲ್‌ ಹಣಾಹಣಿ ಯಲ್ಲಿ ಸೌರಭ್‌ 12–10, 12–10, 3–3 ರಲ್ಲಿ ಮಲೇಷ್ಯಾದ ಡರೆನ್‌ ಲಿಯೆವ್‌ ಅವರನ್ನು ಪರಾಭವಗೊಳಿಸಿದರು.[೮]

ಡಚ್‌ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿ[ಬದಲಾಯಿಸಿ]

13Oct, 2016

 • 'ನೆದರ್ಲೆಂಡ್ಸ್‌ನ ಅಲ್‌ಮೆರೆಯಲ್ಲಿ ಹಾಲಿ ಚಾಂಪಿಯನ್‌ ಅಜಯ್‌ ಜಯ ರಾಮ್‌ ಅವರು ಡಚ್‌ ಓಪನ್‌ ಬ್ಯಾಡ್ಮಿಂ ಟನ್‌ ಟೂರ್ನಿಯಲ್ಲಿ ಗುರುವಾರ ನಡೆದ ಪ್ರಿ ಕ್ವಾರ್ಟರ್‌ ಫೈನಲ್‌ ಹಣಾಹಣಿಯಲ್ಲಿ ಜಯರಾಮ್‌ 21–6, 21–6ರಲ್ಲಿ ನಾರ್ವೆಯ ಮರಿಯಾಸ್‌ ಮೈಹ್ರೆ ಅವರನ್ನು ಸೋಲಿಸಿದರು.
 • ಎರಡನೇ ಸುತ್ತಿನ ಹಣಾಹಣಿಯಲ್ಲಿ ಜಯರಾಮ್‌ 21–7, 21–9ರ ನೇರ ಗೇಮ್‌ಗಳಿಂದ ಬಲ್ಗೇರಿಯಾದ ಫಿಲಿಪ್‌ ಶಿಸೊವ್‌ ಅವರನ್ನು ಪರಾಭವಗೊಳಿಸಿದ್ದರು.[೯]

ಡೆನ್ಮಾರ್ಕ್‌ ಓಪನ್‌ ಸೂಪರ್‌ ಸರಣಿ ಬ್ಯಾಡ್ಮಿಂಟನ್‌ ಟೂರ್ನಿ[ಬದಲಾಯಿಸಿ]

 • 20 Oct, 2016
 • ಗುರುವಾರ ನಡೆದ ಮಹಿಳೆಯರ ಸಿಂಗಲ್ಸ್‌ ವಿಭಾಗದ ಎರಡನೇ ಸುತ್ತಿನ ಹಣಾಹಣಿಯಲ್ಲಿ ಸಿಂಧು 13–21, 23–21, 18–21ರಲ್ಲಿ ಜಪಾನ್‌ನ ಆಟಗಾರ್ತಿ, ವಿಶ್ವ ಕ್ರಮಾಂಕ ಪಟ್ಟಿಯಲ್ಲಿ 12ನೇ ಸ್ಥಾನ ಹೊಂದಿರುವ ಸಯಾಕ ಸ್ಯಾಟೊ ವಿರುದ್ಧ ಸೋಲು ಅನುಭವಿಸಿದರು.[೧೦]

ಬಹರೇನ್ ಅಂತರರಾಷ್ಟ್ರೀಯ ಚಾಲೆಂಜ್ ಬ್ಯಾಡ್ಮಿಂಟನ್ ಪ್ರಶಸ್ತಿ[ಬದಲಾಯಿಸಿ]

 • 3 Nov, 2016
 • ಉದಯೋನ್ಮುಖ ಆಟಗಾರ ಪ್ರತುಲ್ ಜೋಶಿ ಅವರು ಬಹರೇನ್ ಅಂತರರಾಷ್ಟ್ರೀಯ ಚಾಲೆಂಜ್ ಬ್ಯಾಡ್ಮಿಂಟನ್ ಪ್ರಶಸ್ತಿಯನ್ನು ಗೆದ್ದು ಕೊಂಡರು. ಅಂತರರಾಷ್ಟ್ರೀಯ ಮಟ್ಟದಲ್ಲಿ ಇದು ಅವರ ಚೊಚ್ಚಲ ಪ್ರಶಸ್ತಿಯಾಗಿದೆ.
 • ಸೆಗಯ್ಯಾದಲ್ಲಿ ನಡೆದ ಫೈನಲ್‌ನಲ್ಲಿ 22 ವರ್ಷದ ಜೋಶಿ ಅವರು 21–17, 12–21, 21–15ರಿಂದ ಆದಿತ್ಯ ಅವರ ವಿರುದ್ಧ ಗೆದ್ದರು. ಮೊದಲ ಗೇಮ್‌ನಲ್ಲಿ ನಡೆದ ತುರುಸಿನ ಪೈಪೋಟಿಯಲ್ಲಿ ಅವರು ಮೇಲುಗೈ ಸಾಧಿಸಿದರು. ಆದರೆ ಎರಡನೇ ಗೇಮ್‌ನಲ್ಲಿ ಆದಿತ್ಯ ಅವರು ತಿರುಗೇಟು ನೀಡಿದರು. ಆದರೆ ಮೂರನೇ ಗೇಮ್‌ನಲ್ಲಿ ಜೋಶಿ ತಮ್ಮ ಚುರುಕಾದ ಆಟದ ಮೂಲಕ ಜಯಿಸಿದರು.[೧೧]

ಚೀನಾ ಓಪನ್‌ ಸೂಪರ್‌ ಸರಣಿ ಬ್ಯಾಡ್ಮಿಂಟನ್‌ ಟೂರ್ನಿ 2016[ಬದಲಾಯಿಸಿ]

 • 18 Nov, 2016: ಪ್ರೀ ಕ್ವಾರ್ಟರ್ ಫೈನಲ್‌
 • ಚೀನಾದ ಫುಜೌನಲ್ಲಿ ನಡೆಯುತ್ತಿರುವ, ಚೀನಾ ಓಪನ್‌ ಸೂಪರ್‌ ಸರಣಿ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಪಿ.ವಿ. ಸಿಂಧು ಅವರು ಕ್ವಾರ್ಟರ್ ಫೈನಲ್‌ ಪ್ರವೇಶಿಸಿದ್ದಾರೆ.ದಿ.೧೭,ಗುರುವಾರ ನಡೆದ ಮಹಿಳೆಯರ ಸಿಂಗಲ್ಸ್‌ ವಿಭಾಗದ ಪ್ರೀ ಕ್ವಾರ್ಟರ್ ಫೈನಲ್‌ ಹಣಾಹಣಿಯಲ್ಲಿ ಸಿಂಧು 18–21, 22–20, 21–17ರಲ್ಲಿ ಅಮೆರಿಕದ ಬೆಯಿವೆನ್‌ ಜಾಂಗ್‌ ಅವರನ್ನು ಪರಾಭವಗೊಳಿಸಿದರು.
 • ಪುರುಷರ ಸಿಂಗಲ್ಸ್‌ ವಿಭಾಗದ ಎರಡನೇ ಸುತ್ತಿನ ಹೋರಾಟದಲ್ಲಿ ಅಜಯ್‌ ಜಯರಾಮ್‌ 20–22, 21–19, 21–12ರಲ್ಲಿ ಹಾಂಕಾಂಗ್‌ನ ವೀ ನಾನ್‌ ಅವರನ್ನು ಪರಾಭವಗೊಳಿಸಿದರು. ಸ್ವಿಸ್‌ ಓಪನ್‌ನಲ್ಲಿ ಪ್ರಶಸ್ತಿ ಗೆದ್ದಿದ್ದ ಎಚ್‌. ಎಸ್‌. ಪ್ರಣಯ್‌ 17–21, 19–21ರಲ್ಲಿ ಚೀನಾದ ಕ್ವಿಯಾ ಬಿನ್‌ ವಿರುದ್ಧ ಸೋತರು.[೧೨]
 • ಕ್ವಾರ್ಟರ್ ಫೈನಲ್‌

19 Nov, 2016:

 • ಶುಕ್ರವಾರ ನಡೆದ ಮಹಿಳೆಯರ ಸಿಂಗಲ್ಸ್‌ ವಿಭಾಗದ ಕ್ವಾರ್ಟರ್‌ ಫೈನಲ್‌ ನಲ್ಲಿ ಸಿಂಧು 22–20, 21–10ರ ನೇರ ಗೇಮ್‌ಗಳಿಂದ ಚೀನಾದ ಹಿ ಬಿಂಗ್‌ಜಿಯಾವೊ ಅವರನ್ನು ಪರಾಭವ ಗೊಳಿಸಿದರು.
 • ಪುರುಷರ ಸಿಂಗಲ್ಸ್‌ ವಿಭಾಗದಲ್ಲಿ ಇಲ್ಲಿ ಪ್ರಶಸ್ತಿ ಗೆಲ್ಲುವ ನೆಚ್ಚಿನ ಸ್ಪರ್ಧಿಗಳಲ್ಲಿ ಒಬ್ಬರೆನಿಸಿದ್ದ ಜಯರಾಮ್‌ ಕ್ವಾರ್ಟರ್‌ ಫೈನಲ್‌ನಲ್ಲಿ ಎಡವಿದರು. ಆಲ್‌ ಇಂಗ್ಲೆಂಡ್‌ ಮತ್ತು ವಿಶ್ವ ಚಾಂಪಿಯನ್‌ ಚೆನ್‌ ಲಾಂಗ್‌ 21–15, 21–14ರಲ್ಲಿ ಜಯರಾಮ್ ಅವರನ್ನು ಪರಾಭವಗೊಳಿಸಿದರು.[೧೩]
 • ಸಿಂಧು ಈಗ ದಕ್ಷಿಣ ಕೊರಿಯಾದ ಜಿ ಹ್ಯುನ್ ಸಂಗ್ ವಿರುದ್ಧ ಆಡಲಿದ್ದಾರೆ.
 • $ 700,000 ನ ಪಂದ್ಯಾವಳಿಯಲ್ಲಿ ಸಂಗ್ ಅವರು ಜಪಾನ್ನ ಅಕನೆ ಅವರನ್ನು ಯಮಗುಚಿ ಅವರನ್ನು 22-20; 10-21; 21-18 ರಲ್ಲಿ ಸೋಲಿಸಿದ್ದರು, ಶನಿವಾರ,ಸಿಂಧು ಆರನೇ ಶ್ರೇಯಾಂಕದ ಸಂಗ್ ಜಿ ಹ್ಯೂನ್ ಅವರನ್ನು 11-21 23-21 21-19 ಸೋಲಿಸಿ ಅಂತಿಮ ಸುತ್ತಿಗೆ ತಲುಪಿದರು; ಇದು ಅವರ ವಿರುದ್ಧ ಸಿಂಧುವಿನ ಆರನೇ ವಿಜಯ(೯ ರಲ್ಲಿ) , . [೧೪]

ಫೈನಲ್ಸ್[ಬದಲಾಯಿಸಿ]

 • ಸಿಂಧು ಭಾನುವಾರ ಫೈನಲ್ ಪಂದ್ಯದಲ್ಲಿ ಎಂಟನೇ ಶ್ರೇಯಾಂಕಿತ ಸ್ಥಳೀಯ ನೆಚ್ಚಿನ ಸನ್ ಯು ಜೊತೆ ಆಡಲಿದ್ದಾರೆ.
 • 20 Nov, 2016:ಭಾನುವಾರ:
 • ಒಲಿಂಪಿಕ್‌ನಲ್ಲಿ ಬೆಳ್ಳಿ ಗೆದ್ದು ಅಚ್ಚರಿ ಮೂಡಿಸಿದ್ದ ಭಾರತದ ಪಿ.ವಿ ಸಿಂಧು ಚೀನಾ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಫೈನಲ್‌ ಪಂದ್ಯದಲ್ಲಿ ಎಂಟನೇ ಶ್ರೇಯಾಂಕದ ಸ್ಥಳೀಯ ಆಟಗಾರ್ತಿ ಸನ್‌ ಯು ಅವರನ್ನು 21-11, 17-21, 21-11 ಸೆಟ್‌ಗಳ ಅಂತರದಲ್ಲಿ ಮಣಿಸಿ ಚೀನಾ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಚಾಂಪಿಯನ್‌ ಆಗಿದ್ದಾರೆ. $700,000ಬಹುಮಾನ ಗೆದ್ದಿದ್ದಾರೆ.
 • ಚೀನಾ ಓಪನ್ ಭಾರತಪಿ.ವಿ. ಸಿಂಧು X ಚೀನಾದ ಸನ್ ಯು ಫಲಿತಾಂಶ:ಅಂಕಗಳಿಕೆ :21-11, 17-21, 21-11

[೧೫]

ಹಾಂಕಾಂಗ್‌ ಓಪನ್‌ ಸೂಪರ್‌ ಸರಣಿ ಬ್ಯಾಡ್ಮಿಂಟನ್‌ ಟೂರ್ನಿ[ಬದಲಾಯಿಸಿ]

 • ಹಾಂಕಾಂಗ್‌ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿ
 • 24 Nov, 2016;
 • ಮಹಿಳೆಯರ ಸಿಂಗಲ್ಸ್‌ ವಿಭಾಗದ ಮೊದಲ ಸುತ್ತಿನಲ್ಲಿ ಭಾರತದ ಆಟ ಗಾರ್ತಿ ಸೈನಾ ನೆಹ್ವಾಲ್‌ ಅವರು 12–21, 21–19, 21–17ರಲ್ಲಿ ಥಾಯ್ಲೆಂಡ್‌ನ ಪೊರ್ನ್‌ಟಿಪ್‌ ಬುರಾನ ಪ್ರಸೆತ್ಸುಕ್‌ ಅವರನ್ನು ಪರಾಭವಗೊಳಿ ಸಿದರು.
 • ಮೊದಲ ಸುತ್ತಿನ ಹಣಾಹಣಿಯಲ್ಲಿ ಪ್ರಣಯ್‌ 21–16, 21–18ರ ನೇರ ಗೇಮ್‌ಗಳಿಂದ ಚೀನಾದ ಕ್ವಿಯಾವೊ ಬಿನ್‌ ಅವರನ್ನು ಸೋಲಿಸಿದರು.
 • ಇನ್ನೊಂದು ಪಂದ್ಯದಲ್ಲಿ ರಾಷ್ಟ್ರೀಯ ಚಾಂಪಿಯನ್‌ ಸಮೀರ್‌ ವರ್ಮಾ 22–20, 21–18ರ ನೇರ ಗೇಮ್‌ಗಳಿಂದ ಜಪಾನ್‌ನ ತಕುಮಾ ಉಯೆದಾ ವಿರುದ್ಧ ಜಯಪಡೆದರು.[೧೬]

ಸಿಂಧು ಮನ್ನೆಡೆ - ಸೈನಾಗೆ ಹಿನ್ನೆಡೆ[ಬದಲಾಯಿಸಿ]

 • ಹಾಂಗ್ ಕಾಂಗ್ ಓಪನ್ ಬಾಡ್ಮಿಂಟನ್ ಟೂರ್ನಮೆಂಟ್
 • 26 Nov, 2016:
 • ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಹಾಗೂ ಚೀನಾ ಓಪನ್‌ನಲ್ಲಿ ಚಿನ್ನ ಗೆದ್ದು ಅಮೋಘ ಫಾರ್ಮ್‌ ಉಳಿಸಿಕೊಂಡಿ ರುವ ಸಿಂಧು ಕ್ವಾರ್ಟರ್‌ಫೈನಲ್‌ನಲ್ಲಿ 21–17, 21–23, 21–18ರಲ್ಲಿ ಸಿಂಗಪುರದ ಕ್ಸಿಯಾವ್‌ ಲಿಯಾಂಗ್ ಎದುರು 1 ಗಂಟೆ 19 ನಿಮಿಷದ ಪೈಪೋಟಿ ಯಲ್ಲಿ ಗೆಲುವು ಪಡೆದರು.
 • ಐದನೇ ಶ್ರೇಯಾಂಕದ ಸೈನಾ ಕ್ವಾರ್ಟರ್‌ಫೈನಲ್‌ ಪಂದ್ಯದಲ್ಲಿ 8–21, 21–18, 19–21ರಲ್ಲಿ ಶ್ರೇಯಾಂಕ ರಹಿತ ಸ್ಥಳೀಯ ಆಟ ಗಾರ್ತಿ ಚೆವುಂಗ್‌ ನಗಾನ್‌ ಯಿ ಎದುರು ಆಘಾತ ಅನುಭವಿಸಿ ದರು.
 • ಸೆಮಿಗೆ ಸಮೀರ್‌: ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಸಮೀರ್ ವರ್ಮಾ 21–17, 23–21ರಲ್ಲಿ ಮಲೇಷ್ಯಾದ ಚೆಂಗ್‌ ವಿ ಫೆಂಗ್ ಎದುರು ಗೆದ್ದು ಸೆಮಿಗೆ ಲಗ್ಗೆಯಿಟ್ಟರು. ಆದರೆ ಕ್ವಾರ್ಟರ್‌ಫೈನಲ್‌ ಆಡಿದ ಅಜಯ್‌ ಜಯರಾಮ್‌ 15–21, 14–21ರಲ್ಲಿ ಹಾಂಕಾಂಗ್‌ನ ಲಾಂಗ್‌ ಆ್ಯಂಗಸ್ ಎದುರು 32 ನಿಮಿಷಗಳಲ್ಲಿ ಸೋಲು ಕಂಡರು.[೧೭]
 • 2016 ನವೆಂಬರ್ 27 ರಂದು ಹಾಂಗ್ ಕಾಂಗ್ ಓಪನ್ ಬಾಡ್ಮಿಂಟನ್ ಟೂರ್ನಮೆಂಟ್ ನ ಅಂತಿಮ ಹಣಾಹಣಿಯಲ್ಲಿ ಭಾರತ ಹೆಮ್ಮೆಯ ಆಟಗಾರ್ತಿ ಪಿವಿ ಸಿಂಧು ಅವರು ಸೋಲು ಕಂಡಿದ್ದಾರೆ. ಚೈನೀಸ್ ತೈಪೆಯ ಸ್ಪರ್ಧಿ ಗೆಲುವು ಸಾಧಿಸಿ ಪ್ರಶಸ್ತಿಗೆ ಮುತ್ತಿಟ್ಟಿದ್ದಾರೆ. ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತೆ ಪಿವಿ ಸಿಂಧು ಅವರು ನಾಲ್ಕನೇ ಸೀಡೆಡ್ ನ ಚೈನೀಸ್ ತೈಪೆಯ ತಾಯಿ ತ್ಸು ಯಿಂಗ್ ಅವರ ವಿರುದ್ಧ 15-21, 17-21 ಅಂತರದಲ್ಲಿ ಸೋಲು ಕಂಡು ಬೆಳ್ಳಿ ಪಡೆದರು.
 • ಇನ್ನೊಂದೆಡೆ ಭಾರತದ ಸಮೀರ್ ವರ್ಮ ಅವರು ಮೂರನೇ ಸೀಡೆಡ್ ನ ಜೋರ್ಗೆಂಗ್ಸೆನ್ ವಿರುದ್ಧ ಗೆದ್ದು ಫೈನಲ್ ಪ್ರವೇಶಿಸಿದ್ದಾರೆ.
 • ವರ್ಮಾ ಫೈನಲ್‍ನಲ್ಲಿ ಸ್ಥಳೀಯ ನೆಚ್ಚಿನ ಎನ್ಜಿ ಕಾ ಲಾಂಗ್ ಆಂಗಸ್ ಗೆ 14-21, 21-10, 11-21 ಕುಸಿದರು.[೧೮]

ಮಕಾವ್ ಓಪನ್ ಗ್ರ್ಯಾನ್‌ಪ್ರಿ ಗೋಲ್ಡ್ ಬ್ಯಾಡ್ಮಿಂಟನ್ ಟೂರ್ನಿ 2016[ಬದಲಾಯಿಸಿ]

 • 1 Dec, 2016
 • ಸೈನಾ ನೆಹ್ವಾಲ್ ಅವರು ಮಹಿಳೆಯರ ಸಿಂಗಲ್ಸ್‌ನಲ್ಲಿ 16ರ ಘಟ್ಟಕ್ಕೆ ಪ್ರವೇಶಿಸಿದ್ದಾರೆ. ಅರ್ಹತಾ ಸುತ್ತಿನ ಪಂದ್ಯದಲ್ಲಿ ಸೈನಾ 21–23, 21–14, 21–18 ರಿಂದ ರಾಮದಿನಿ ಅವರನ್ನು ಸೋಲಿಸಿದರು.
 • ಅರ್ಹತಾ ಸುತ್ತಿನ ಪಂದ್ಯದಲ್ಲಿ ಪಿ. ಕಶ್ಯಪ್ ಅವರು 21–19, 21–8ರಿಂದ ಚೈನಿಸ್ ತೈಪೆಯ ಚುನ್ ವೀ ಚೆನ್ ವಿರುದ್ಧ ಗೆದ್ದರು. ಕಶ್ಯಪ್ ಅವರು ಆರು ತಿಂಗಳ ಹಿಂದೆ ಮೊಣಕಾಲಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು.[೧೯]
 • 2 Dec, 2016
 • ಗುರುವಾರ ನಡೆದ 16ರ ಘಟ್ಟದ ಪಂದ್ಯದಲ್ಲಿ ಸೈನಾ ನೆಹ್ವಾಲ್ 17–21, 21–18, 21–12ರಿಂದ ಇಂಡೋ ನೆಷ್ಯಾದ ದಿನಾರ ದಿಯಾ ಆಯುಸ್ಟಿನ್ ವಿರುದ್ಧ ಜಯ ಗಳಿಸಿ ಎಂಟರ ಘಟ್ಟ ಪ್ರವೇಶಿಸಿದರು.
 • ಪುರುಷರ ಪ್ರಿ ಕ್ವಾರ್ಟರ್‌ಫೈನಲ್‌ನಲ್ಲಿ ಪರುಪಳ್ಳಿ ಕಶ್ಯಪ್ ಅವರು 13–21, 20–22ರಿಂದ ಚೈನಿಸ್ ತೈಪೆಯ ಲಿನ್ ಯು ಸೀನ್ ವಿರುದ್ಧ ಪರಾಭವಗೊಂಡರು.[೨೦]
 • ಮಹಿಳೆಯರ ಸಿಂಗಲ್ಸ್‌ ವಿಭಾಗದ ಹೋರಾಟದಲ್ಲಿ ಸೈನಾ 17–21, 17–21ರ ನೇರ ಗೇಮ್‌ಗಳಿಂದ ತ ಗಿಂತಲೂ ಕ್ರಮಾಂಕ ಪಟ್ಟಿಯಲ್ಲಿ ಕೆಳಗಿನ ಸ್ಥಾನ ಹೊಂದಿರುವ ಜಾಂಗ್‌ ಯಿಮಾನ್‌ ವಿರುದ್ಧ ಪರಾಭವಗೊಂಡರು.ಭಾರತದ ಸೈನಾ ನೆಹ್ವಾಲ್‌ ಶುಕ್ರವಾರ ಕ್ವಾರ್ಟರ್‌ ಫೈನಲ್‌ನಲ್ಲಿ ಸೋತು ಟೂರ್ನಿಯಿಂದ ಹೊರಬಿದ್ದಿದ್ದಾರೆ.
 • ಪುರುಷರ ಸಿಂಗಲ್ಸ್‌ನಲ್ಲಿ ಭಾರತದ ಭರವಸೆ ಎನಿಸಿದ್ದ ಬಿ. ಸಾಯಿ ಪ್ರಣೀತ್‌ ಕೂಡಾ ಎಂಟರ ಘಟ್ಟದ ಹೋರಾಟದಲ್ಲಿ ಸೋತು ಟೂರ್ನಿಯಿಂದ ಹೊರಬಿದ್ದಿದ್ದಾರೆ.
 • ಕ್ವಾರ್ಟರ್‌ಫೈನಲ್‌ನಲ್ಲಿ ಪ್ರಣೀತ್‌ 19–21, 9–21ರಿಂದ ಚೀನಾದ ಜುನ್‌ ಪೆಂಗ್‌ ಜಾವೊಗೆ ಶರಣಾದರು.[೨೧]

ಕೊರಿಯಾ ಓಪನ್ ಗ್ರ್ಯಾನ್ ಪ್ರಿ ಗೋಲ್ಡ್‌ ಬ್ಯಾಡ್ಮಿಂಟನ್ ಟೂರ್ನಿ ೨೦೧೬[ಬದಲಾಯಿಸಿ]

 • 10 Dec, 2016;
 • ಕೊರಿಯಾದ ಜೆಜುನಲ್ಲಿ, ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಪ್ರಶಸ್ತಿ ಗೆದ್ದುಕೊಂಡಿದ್ದ ಪಿ. ಕಶ್ಯಪ್ ಕೊರಿಯಾ ಓಪನ್ ಗ್ರ್ಯಾನ್ ಪ್ರಿ ಗೋಲ್ಡ್‌ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ೯-೧೨-೨೦೧೬ ಶುಕ್ರವಾರ ಸೆಮಿಫೈನಲ್‌ಗೆ ಲಗ್ಗೆಯಿಟ್ಟಿದ್ದಾರೆ.ಗಾಯದ ಸಮಸ್ಯೆಯಿಂದ ಚೇತರಿಸಿಕೊಂಡ ಬಳಿಕ ಮೊದಲ ಬಾರಿಗೆ ಫಾರ್ಮ್‌ ಕಂಡುಕೊಂಡು ಆಡುತ್ತಿರುವ ಕಶ್ಯಪ್‌ ಪುರುಷರ ಸಿಂಗಲ್ಸ್ ವಿಭಾಗದ ಕ್ವಾರ್ಟರ್‌ಫೈನಲ್‌ನಲ್ಲಿ 18–21, 21–8, 21–16ರಲ್ಲಿ ಕೊರಿಯಾದ ಜಾನ್‌ ಹೆಯಾಕ್‌ ಜಿನ್ ಎದುರು ಗೆದ್ದರು.[೨೨]
 • 18 Dec, 2016
 • ಭಾರತದ ಪಿ.ವಿ ಸಿಂಧು ಬಿಡ್ಲ್ಯುಎಫ್‌ ವಿಶ್ವ ಸೂಪರ್ ಸರಣಿ ಬ್ಯಾಡ್ಮಿಂಟನ್ ಟೂರ್ನಿಯ ಮಹಿಳೆಯರ ಸಿಂಗಲ್ಸ್‌ ವಿಭಾಗದ ಸೆಮಿಫೈನಲ್‌ ನಲ್ಲಿ ಶನಿವಾರ ಕೊರಿಯಾದ ಆಟಗಾರ್ತಿ ಸಂಗ್‌ ಜಿ ಹುಯಾನ್ ಎದುರು (ಭಾರತದ ಆಟಗಾರ್ತಿ) 15–21, 21–18, 16–21ರಲ್ಲಿ ಸೋಲು ಕಂಡಿದ್ದಾರೆ.[೨೩]

ಮಲೇಷ್ಯಾ ಮಾಸ್ಟರ್ಸ್‌ ಬ್ಯಾಡ್ಮಿಂಟನ್‌ ೨೦೧೭[ಬದಲಾಯಿಸಿ]

 • 21 Jan, 2017;ಸರವಾಕ್‌, ಮಲೇಷ್ಯಾ;ವಿಶ್ವದ ಅಗ್ರರ್‍ಯಾಂಕ್‌ನ ಆಟಗಾರ್ತಿ ಯಾಗಿದ್ದ ಸೈನಾ ಇಲ್ಲಿ ನಡೆಯುತ್ತಿರುವ ಮಲೇಷ್ಯಾ ಮಾಸ್ಟರ್ಸ್‌ ಗ್ರ್ಯಾಂಡ್‌ ಪ್ರಿ ಗೋಲ್ಡ್ ಬ್ಯಾಡ್ಮಿಂಟನ್ ಟೂರ್ನಿಯ ಸಿಂಗಲ್ಸ್‌ನಲ್ಲಿ ಸೆಮಿಫೈನಲ್‌ ಪ್ರವೇಶಿಸಿ ದ್ದಾರೆ. ಆದರೆ ಭಾರತದ ಇನ್ನೊಬ್ಬ ಆಟ ಗಾರ ಅಜಯ್‌ ಜಯರಾಮ್ ಸೋತು ಟೂರ್ನಿಯಿಂದ ನಿರ್ಗಮಿಸಿದರು. 20 ಜನ,ಶುಕ್ರವಾರ ನಡೆದ ಕ್ವಾರ್ಟರ್‌ ಫೈನಲ್‌ ಹಣಾಹಣಿಯಲ್ಲಿ ಸೈನಾ 21–15, 21–14ರಲ್ಲಿ ಇಂಡೊನೇಷ್ಯಾದ ಫಿಟ್ರಿಯಾನಿ ಎದುರು ಗೆಲುವು ಪಡೆದರು. ವಿಶ್ವ ರ್‍ಯಾಂಕ್‌ನಲ್ಲಿ 40ನೇ ಸ್ಥಾನ ಹೊಂದಿ ರುವ ಫಿಟ್ರಿಯಾನಿ ಎದುರು ಸೈನಾ ಗೆಲುವು ಪಡೆದಿದ್ದು ಮೂರನೇ ಬಾರಿ.
 • 22 Jan, 2017 ಭಾನುವಾರ:
ಫೈನಲ್‌ಗೆ ಸೈನಾ ನೆಹ್ವಾಲ್‌;?
 • ಭಾರತದ ಸೈನಾ ನೆಹ್ವಾಲ್‌ ಅವರು ಮಲೇಷ್ಯಾ ಮಾಸ್ಟರ್ಸ್‌ ಗ್ರ್ಯಾಂಡ್‌ ಪ್ರಿ ಗೋಲ್ಡ್‌ ಬ್ಯಾಡ್ಮಿಂಟನ್‌ ಟೂರ್ನಿಯ ಸಿಂಗಲ್ಸ್‌ನಲ್ಲಿ ಪ್ರಶಸ್ತಿ ಜಯಿಸಲು ಒಂದು ಹೆಜ್ಜೆಯಷ್ಟೇ ಬಾಕಿಯಿದೆ. ಮಂಡಿ ನೋವಿನ ಶಸ್ತ್ರಚಿಕಿತ್ಸೆಗೆ ಒಳಗಾದ ಬಳಿಕ ಮೊದಲ ಮಹತ್ವದ ಟೂರ್ನಿ ಆಡುತ್ತಿರುವ ಅವರು ಶನಿವಾರ ನಡೆದ ಸೆಮಿಫೈನಲ್‌ನಲ್ಲಿ 21–13, 21–10ರಲ್ಲಿ ಯಿಪ್‌ ಪುಯಿ ಯಿನ್ ಎದುರು ಸುಲಭ ಗೆಲುವು ಪಡೆದರು.[೨೪]
 • 23 Jan, 2017
 • ಭಾನುವಾರ ನಡೆದ ಮಹಿಳೆಯರ ಸಿಂಗಲ್ಸ್‌ ವಿಭಾಗದ ಫೈನಲ್‌ ಹಣಾಹಣಿ ಯಲ್ಲಿ ಸೈನಾ 22–20, 22–20 ರ ನೇರ ಗೇಮ್‌ಗಳಿಂದ ಥಾಯ್ಲೆಂಡ್‌ನ ಪೊರ್ನ್‌ಪಾವೀ ಚೊಚುವಾಂಗ್‌ ಅವರನ್ನು ಪರಾಭವಗೊಳಿಸಿದರು. ಈ ಮೂಲಕ ವೃತ್ತಿ ಬದುಕಿನ 23ನೇ ಪ್ರಶಸ್ತಿ ತಮ್ಮದಾಗಿಸಿಕೊಂಡರು. ಹೋದ ವರ್ಷ ನಡೆದಿದ್ದ ಆಸ್ಟ್ರೇಲಿಯಾ ಓಪನ್‌ ಬಳಿಕ ಸೈನಾ ಜಯಿಸಿದ ಮೊದಲ ಟ್ರೋಫಿ ಇದಾಗಿದೆ. [೨೫]

ಲಖನೌನ ಸೈಯದ್ ಮೋದಿ ಅಂತರರಾಷ್ಟ್ರೀಯ ಬ್ಯಾಡ್ಮಿಂಟನ್ ಟೂರ್ನಿ ೨೦೧೭[ಬದಲಾಯಿಸಿ]

 • ಪಿ.ವಿ. ಸಿಂಧು ಅವರು ಮಂಗಳವಾರ ಇಲ್ಲಿ ಆರಂಭವಾಗಲಿರುವ ಸೈಯದ್ ಮೋದಿ ಅಂತರರಾಷ್ಟ್ರೀಯ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ;
 • ಅಗ್ರಶ್ರೇಯಾಂಕದ ಆಟಗಾರ್ತಿ ಸಿಂಧು ಅವರು ಮೊದಲ ಸುತ್ತಿನಲ್ಲಿ ಅನುರಾ ಪ್ರಭುದೇಸಾಯಿ ಅವರನ್ನು ಎದುರಿಸಲಿದ್ದಾರೆ. ಒಂದು ವೇಳೆ ಅವರು ಸೆಮಿಫೈನಲ್ ತಲುಪಿದರೆ ನಾಲ್ಕನೇ ಶ್ರೇಯಾಂಕದ ಫಿತ್ರಿಯಾನಿ ಫಿತ್ರಿಯಾನಿ ಅವರ ಸವಾಲು ಎದುರಿಸುವರು.
 • ಕಿದಂಬಿ ಶ್ರೀಕಾಂತ್ ಅವರು ಪುರುಷರ ವಿಭಾಗದ ಪ್ರಶಸ್ತಿ ಮೇಲೆ ಕಣ್ಣಿಟ್ಟಿದ್ದಾರೆ. ವಿಶ್ವ ಶ್ರೇಯಾಂಕದಲ್ಲಿ 15ನೇ ಸ್ಥಾನದಲ್ಲಿರುವ ಅವರ ಎದುರು ಕಠಿಣ ಸವಾಲು ಇದೆ. ಡೆನ್ಮಾರ್ಕ್‌ನ ಎಚ್‌.ಕೆ. ವಿಟ್ಟಿಂಗಸ್ ಮತ್ತು ಥಾಯ್ಲೆಂಡ್‌ನ ಅಗ್ರ ಶ್ರೇಯಾಂಕದ ಆಟಗಾರ ತಾಂಗಸಾಕ್ ಸೇನ್ಸೊಮಬೂನ್ಸಕ್, ಭಾರತದವರೇ ಆದ ಪ್ರಣಯ್ ಮತ್ತು ಅಜಯ್ ಜಯ ರಾಮ್ ಅವರನ್ನು ಎದುರಿಸುತ್ತಾರೆ. [೨೬]

ಮೂರು ವಿಜಯ[ಬದಲಾಯಿಸಿ]

 • 30 Jan, 2017
 • ಮಹಿಳಾ ಸಿಂಗಲ್ಸ್‌ ವಿಭಾಗದಲ್ಲಿ ಅಗ್ರ ಶ್ರೇಯಾಂಕದ ಸಿಂಧು 21–13, 21–14ರಲ್ಲಿ ಇಂಡೊನೇಷ್ಯಾದ ಗ್ರೆಗೊರಿಯಾ ಮರಿಸ್ಕಾ ಅವರನ್ನು ಮಣಿಸಿದರು. ಮೊದಲ ಬಾರಿಗೆ ಇಲ್ಲಿ ಪ್ರಶಸ್ತಿ ಜಯಿಸಿದ ಸಿಂಧು ಈ ಸಾಧನೆ ಮಾಡಲು 30 ನಿಮಿಷ ತೆಗೆದುಕೊಂಡರು.
 • ಪುರುಷರ ವಿಭಾಗದ ಸಿಂಗಲ್ಸ್‌ನಲ್ಲಿ ಸಮೀರ್‌ 21–19, 21–16ರಲ್ಲಿ ಭಾರತ ದವರೇ ಆದ ಸಾಯಿ ಪ್ರಣೀತ್ ಎದುರು ಗೆದ್ದು ಪ್ರಶಸ್ತಿ ಪಡೆದರು.
 • ಮಿಶ್ರ ಡಬಲ್ಸ್‌ನಲ್ಲಿ ಪ್ರಣವ್ ಚೋಪ್ರಾ ಮತ್ತು ಎನ್‌. ಸಿಕ್ಕಿ ರೆಡ್ಡಿ ಪ್ರಶಸ್ತಿ ಗೆದ್ದರು. ಫೈನಲ್‌ನಲ್ಲಿ ಈ ಜೋಡಿ 22–20, 21–10ರಲ್ಲಿ ಆತಿಥೇಯ ದೇಶದ ವರೇ ಆದ ಅಶ್ವಿನಿ ಪೊನ್ನಪ್ಪ ಹಾಗೂ ಬಿ. ಸುಮೀತ್ ರೆಡ್ಡಿ ಅವರನ್ನು ಮಣಿಸಿದರು.
 • ಮಹಿಳೆಯರ ಡಬಲ್ಸ್‌ನಲ್ಲಿ ಅಶ್ವಿನಿ ಪೊನ್ನಪ್ಪ ಹಾಗೂ ಎನ್‌.ಸಿಕ್ಕಿ ರೆಡ್ಡಿ 16–21, 18–21ರಲ್ಲಿ ಕಮಿಲಾ ಜುಹಲ್ ಮತ್ತು ಕ್ರಿಸ್ಟಿನಾ ಪೆಡರ್ಸನ್ ಎದುರು ಸೋಲು ಕಂಡರು.[೨೭]

ಇಂಡಿಯಾ ಓಪನ್‌ ಬ್ಯಾಡ್ಮಿಂಟನ್ ೨೦೧೭[ಬದಲಾಯಿಸಿ]

 • ನವದೆಹಲಿಯಲ್ಲಿ ಕುತೂಹಲ ಕೆರಳಿಸಿದ್ದ ಪಂದ್ಯದಲ್ಲಿ ಭಾರತದ ಪಿ.ವಿ. ಸಿಂಧು ಅವರು ಅನುಭವಿ ಆಟಗಾರ್ತಿ ಸೈನಾ ನೆಹ್ವಾಲ್ ಎದುರು ಗೆದ್ದು ನಾಲ್ಕರ ಹಂತಕ್ಕೆ ಪ್ರವೇಶಿಸಿದರು.ಇಂಡಿಯಾ ಓಪನ್ ಸೂಪರ್ ಸರಣಿಯಲ್ಲಿ ಶುಕ್ರವಾರ ನಡೆದ ಎಂಟರ ಘಟ್ಟದ ಪಂದ್ಯದಲ್ಲಿ ಸಿಂಧು 21–16, 22–20ರಿಂದ ಸೈನಾ ಅವರನ್ನು ಮಣಿಸಿದರು.[೨೮]
 • 1 Apr, 2017
 • ಚುರುಕಿನೊಂದಿಗೆ ಕುತೂಹಲದ ಆಟ ಪ್ರದರ್ಶಿಸಿದ ಭಾರತದ ಪಿ.ವಿ. ಸಿಂಧು ಅವರು ವಿಶ್ವದ ನಾಲ್ಕನೇ ಅಗ್ರ ಶ್ರೇಯಾಂಕಿತ ಆಟಗಾರ್ತಿ ಕೊರಿಯಾದ ಸಂಗ್‌ ಜಿ ಯುನ್‌ ಎದುರು ಗೆಲುವು ಸಾಧಿಸಿ ಫೈನಲ್‌ ಪ್ರವೇಶಿಸಿದರು. ಕಿಕ್ಕಿರಿದು ತುಂಬಿದ್ದ ಕ್ರಿಡಾಂಗಣದಲ್ಲಿ ನಡೆದ ಇಂಡಿಯಾ ಓಪನ್‌ ಸೂಪರ್‌ ಸರಣಿಯಲ್ಲಿ ಶನಿವಾರ ನಾಲ್ಕರ ಘಟ್ಟದ ಪಂದ್ಯದಲ್ಲಿ ಸಿಂಧು 21-18, 14-21, 21-14ರಿಂದ ಸಂಗ್‌ ಜಿ ಯುನ್‌ ಅವರನ್ನು ಮಣಿಸಿದರು. ಶುಕ್ರವಾರ ನಡೆದ ಎಂಟರ ಘಟ್ಟದ ಪಂದ್ಯದಲ್ಲಿ ಸಿಂಧು ಅವರು 21-16, 22-20ರಿಂದ ಅನುಭವಿ ಆಟಗಾರ್ತಿ ಸೈನಾ ನೆಹ್ವಾಲ್‌ ಅವರ ಎದುರು ಜಯ ಗಳಿಸಿದ್ದರು.
 • ರಿಯೊ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಜಯಿಸಿದ್ದ ಸಿಂಧು ಅವರು ಫೈನಲ್‌ನಲ್ಲಿ ಕ್ಯಾರೊಲಿನಾ ಮರಿನ್‌ ವಿರುದ್ಧ ಸೆಣಸಲಿದ್ದಾರೆ. [೨೯]
 • 2 Apr, 2017
 • ನವದೆಹಲಿಯಲ್ಲಿ ಭಾರತದ ಪಿ.ವಿ. ಸಿಂಧು ‘ಇಂಡಿಯಾ ಓಪನ್ ಬ್ಯಾಡ್ಮಿಂಟನ್ ಟ್ರೋಪಿ’ಯನ್ನು ಮುಡಿಗೇರಿಸಿಕೊಂಡಿದ್ದಾರೆ. ಇಲ್ಲಿನ ಸಿರಿಫೋರ್ಟ್ ಬ್ಯಾಡ್ಮಿಂಟನ್ ಕೋರ್ಟ್‌ನಲ್ಲಿ ಸೇರಿದ್ದ ಅಪಾರ ಸಂಖ್ಯೆಯ ಅಭಿಮಾನಿಗಳ ಎದುರು ಅವರು ಜಯಭೇರಿ ಬಾರಿಸಿದರು. ಇಂಡಿಯಾ ಓಪನ್ ಬ್ಯಾಡ್ಮಿಂಟನ್ ಸೂಪರ್ ಸರಣಿಯ ಫೈನಲ್‌ ಪಂದ್ಯದಲ್ಲಿ 21-19, 21-16 ಗೇಮ್‌ಗಳಿಂದ ಕ್ಯಾರೊಲಿನಾ ಮರಿನ್ ವಿರುದ್ಧ ಗೆಲುವು ಸಾಧಿಸಿದರು. [೩೦]

ಮಹಿಳೆಯರ ವಿಶ್ವ ಶ್ರೇಣಿಯಲ್ಲಿ ಪಿ.ವಿ.ಸಿಂಧುಗೆ 2 ನೇ ಸ್ತಾನ[ಬದಲಾಯಿಸಿ]

7 Apr, 2017;

 • ಮೊದಲ ಐದು ಸ್ಥಾನಗಳು:
ಮಹಿಳೆಯರ ವಿಶ್ವ ರ್ಯಾಂಕಿಂಗ್ ( 5 ರ್ಯಾಂಕಗಳ ವರೆಗೆ) ರ್ಯಾಂಕ್ ಆಂಕ
ತೈಜು ಇಂಗ್ (ಚೀನಾ ತೈಫೆ) 1 87,911
ಪಿ.ವಿ.ಸಿಂಧು (ಭಾರತ ) 2 75759
ಕೆರೊಲಿನಾ ಮರಿನ್ (ಸ್ಪೇನ್) 3 75664
ಅಕಾನೆ ಯಮಗುಚಿ (ಜಪಾನ್) 4 74349
ಸಂಗ್ ಜಿ (ದಕ್ಷಿಣ ಕೊರಿಯಾ) 5 73446

[೩೧]

ಸಿಂಗಪುರ ಓಪನ್ ಸೂಪರ್ ಸೀರಿಸ್ ಬ್ಯಾಡ್ಮಿಂಟನ್ ಟೂರ್ನಿ ೨೦೧೭[ಬದಲಾಯಿಸಿ]

 • ರಿಯೊ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಹಾಗೂ ಇತ್ತೀಚೆಗೆ ಇಂಡಿಯಾ ಓಪನ್ ಗೆದ್ದು ಕೊಳ್ಳುವ ಮೂಲಕ ಅಮೋಘ ಫಾರ್ಮ್‌ ನಲ್ಲಿರುವ ಸಿಂಧು ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ 19-21, 21–17, 21–8ರಲ್ಲಿ ನೇರ ಗೇಮ್‌ಗಳಿಂದ ಇಂಡೊನೇಷ್ಯಾದ ಫಿತ್ರಿಯಾನಿ ಅವರನ್ನು ಮಣಿಸಿದರು. ವಿಶ್ವ ರ್‍ಯಾಂಕಿಂಗ್‌ನಲ್ಲಿ 27ನೇ ಸ್ಥಾನದಲ್ಲಿರುವ ಇಂಡೊ ನೇಷ್ಯಾದ ಆಟಗಾರ್ತಿ ಎದುರು ಸಿಂಧು ಸುಲಭ ಗೆಲುವು ಪಡೆದುಕೊಂಡರು.
 • ವಿಶ್ವ ರ್‍ಯಾಂಕಿಂಗ್‌ನಲ್ಲಿ 30ನೇ ಸ್ಥಾನದ ಲ್ಲಿರುವ ಪ್ರಣೀತ್‌ ಕ್ವಾರ್ಟರ್‌ ಫೈನಲ್‌ನಲ್ಲಿ ಥಾಯ್ಲೆಂಡ್‌ನ ಎಂಟನೇ ಶ್ರೇಯಾಂಕದ ತೊಂಗ್ಸಕ್‌ ಸೆನ್ಸ್‌ಸೊಮ್‌ ಬೂನ್ಸಕ್ ವಿರುದ್ಧ ಆಡಲಿದ್ದಾರೆ. ಮಿಶ್ರ ಡಬಲ್ಸ್‌ನಲ್ಲಿ ಬಿ. ಸುಮೀತ್ ರೆಡ್ಡಿ ಮತ್ತು ಅಶ್ವಿನಿ ಪೊನ್ನಪ್ಪ ಜೋಡಿ 17–21, 21–17, 21–16ರಲ್ಲಿ ಕೊರಿಯಾದ ಜೀ ಹುವಾನ್ ಕಿಮ್‌ ಮತ್ತು ಲೀ ಸೊ ಹೀ ವಿರುದ್ಧ ಗೆಲುವು ದಾಖಲಿಸಿತು. ಭಾರತದ ಜೋಡಿ ಮುಂದಿನ ಸುತ್ತಿನಲ್ಲಿ ಚೀನಾದ ಲು ಕಿ ಮತ್ತು ಹುವಾಂಗ್‌ ಯಾಕ್ವಿಂಗ್ ವಿರುದ್ಧ ಆಡಲಿದೆ.
 • ಪಿ.ವಿ ಸಿಂಧು ನೂತನ ಪಟ್ಟಿಯಲ್ಲಿ ಗುರುವಾರ ಐದನೇ ಸ್ಥಾನಕ್ಕೆ ಇಳಿದಿದ್ದಾರೆ. 21 ವರ್ಷದ ಹೈದರಾಬಾದ್‌ ಆಟಗಾರ್ತಿ ಮೊದಲ ಬಾರಿಗೆ ಇಂಡಿಯಾ ಓಪನ್ ಗೆದ್ದಕೊಂಡು ಮೂರು ಸ್ಥಾನ ಮೇಲೇರಿದ್ದರು. [೩೨]

ಸಿಂಗಪುರ ಓಪನ್ ಸೂಪರ್ ಸೀರಿಸ್ ಬ್ಯಾಡ್ಮಿಂಟನ್‌ ಟೂರ್ನಿ ೨೦೧೭[ಬದಲಾಯಿಸಿ]

 • ಪುರುಷರು:
 • 17 Apr, 2017
 • ಬ್ಯಾಡ್ಮಿಂಟನ್ ಇತಿಹಾಸದಲ್ಲಿಯೇ ಭಾರತದ ಇಬ್ಬರು ಆಟಗಾರರು ಅಂತರರಾಷ್ಟ್ರೀಯ ಟೂರ್ನಿಯೊಂದರಲ್ಲಿ ಪುರುಷರ ಸಿಂಗಲ್ಸ್ ವಿಭಾಗದ ಪ್ರಶಸ್ತಿ ಸುತ್ತಿನಲ್ಲಿ ಮುಖಾಮುಖಿಯಾಗಿದ್ದು ಇದೇ ಮೊದಲು.ಈ ವಿಭಾಗದಲ್ಲಿ ಭಾರತ ಗೆದ್ದ ಮೊದಲ ಪ್ರಶಸ್ತಿ ಕೂಡ ಇದಾಗಿದೆ. ಸೈನಾ ನೆಹ್ವಾಲ್‌ 2010ರಲ್ಲಿ ಚಾಂಪಿಯನ್ ಆಗಿದ್ದರು.
 • ವಿಶ್ವ ರ್ಯಾಂಕಿಂಗ್ನಲ್ಲಿ 30ನೇ ಸ್ಥಾನದಲ್ಲಿರುವ ಪ್ರಣೀತ್‌ 17–21, 21–17, 21–12ರಲ್ಲಿ 29ನೇ ಸ್ಥಾನದಲ್ಲಿರುವ ಕೆ. ಶ್ರೀಕಾಂತ್‌‍ರನ್ನು ಸೋಲಿಸಿದರು. ಇತ್ತೀಚೆಗೆ ಕೆನಡಾ ಓಪನ್ ಗೆದ್ದುಕೊಂಡಿದ್ದ ಪ್ರಣೀತ್‌, ಸೈಯದ್ ಮೋದಿ ಗ್ರ್ಯಾನ್ ಪ್ರಿ ಗೋಲ್ಡ್‌ ಟೂರ್ನಿಯಲ್ಲಿ ಫೈನಲ್ ತಲುಪಿದ್ದರು.
 • ಟೂರ್ನಿಯ ಎಲ್ಲಾ ಪಂದ್ಯಗಳಲ್ಲೂ ತಮ್ಮ ಅಮೋಘ ಸಾಮರ್ಥ್ಯದ ಆಟ ಪ್ರದರ್ಶಿಸಿದ್ದ ಪ್ರಣೀತ್‌ ಕ್ವಾರ್ಟರ್‌ಫೈನಲ್‌ ನಲ್ಲಿ ಥಾಯ್ಲೆಂಡ್‌ನ ಎಂಟನೇ ಶ್ರೇಯಾಂಕದ ಆಟಗಾರ ತೊಂಗ್ಸಕ್‌ ಸೆನ್ಸೊಬೂನ್ಸಕ್‌ ಅವರನ್ನು ಮಣಿಸಿದ್ದರು. ಸೆಮಿಫೈನಲ್‌ನಲ್ಲಿ 21–6, 21–8ರಲ್ಲಿ ದಕ್ಷಿಣ ಕೊರಿಯಾದ ಲೀ ಡಾಂಗ್‌ ಕೊಯೆನ್‌‍ರನ್ನು ಸೋಲಿಸಿದರು.[೩೩]
 • ಸಾಧನೆಯ ಎತ್ತರದಲ್ಲಿ ಪ್ರಣೀತ್‌::24 Apr, 2017: [[೧]]

ಡಬಲ್ಸ್ ಪ್ರತಿಭೆ ಜಗದೀಶ್[ಬದಲಾಯಿಸಿ]

 • 10 Apr, 2017;
 • ಡಬಲ್ಸ್ ವಿಭಾಗದ ಪ್ರಸಕ್ತ ರ್ಯಾಂಕಿಂಗ್ ‌ ಪಟ್ಟಿಯಲ್ಲಿ ಅವರು 165ನೇ ಸ್ಥಾನದಲ್ಲಿದ್ದಾರೆ. 2015ರಲ್ಲಿ 94ನೇ ಸ್ಥಾನಕ್ಕೆ ಏರಿದ್ದು ಈವರೆಗಿನ ಅವರ ಉತ್ತಮ ಸಾಧನೆ. ಡಬಲ್ಸ್ ರ್ಯಾಂಕಿಂಗ್ ‌ನಲ್ಲಿ 50ರೊಳಗಿನ ಸ್ಥಾನಕ್ಕೆ ಏರಿದರೆ ಮಾತ್ರ ಪ್ರಾಯೋಜಕರು ಸಿಗುತ್ತಾರೆ.

ಜಗದೀಶ್ ಸಾಧನೆ[ಬದಲಾಯಿಸಿ]

 • 2012ರಲ್ಲಿ ಅಖಿಲ ಭಾರತ ಅಂತರ ರೈಲ್ವೆ ಚಾಂಪಿಯನ್‌ಷಿಪ್‌ನಲ್ಲಿ ಪ್ರಶಸ್ತಿ.
 • 2015ರಲ್ಲಿ ರಾಷ್ಟ್ರೀಯ ಚಾಂಪಿಯನ್‌ಷಿಪ್‌ನ ಸೀನಿಯರ್‌ ವಿಭಾಗದಲ್ಲಿ ಕಂಚು.
 • 2017ರ ಜಮೈಕಾ ಅಂತರರಾಷ್ಟ್ರೀಯ ಟೂರ್ನಿಯಲ್ಲಿ ಚಿನ್ನ.
 • 2017ರಲ್ಲಿ ದಾವಣಗೆರೆಯಲ್ಲಿ ನಡೆದ ಸೀನಿಯರ್ ರಾಷ್ಟ್ರೀಯ ರ‍್ಯಾಂಕಿಂಗ್ ಟೂರ್ನಿಯಲ್ಲಿ ಕಂಚು.
 • ದಕ್ಷಿಣ ಭಾರತ ಅಂತರ ವಿಶ್ವವಿದ್ಯಾಲಯ ಬ್ಯಾಡ್ಮಿಂಟನ್ ನಲ್ಲಿ ಮೂರನೇ ಸ್ಥಾನ.[೩೪]

ಆಸ್ಟ್ರೇಲಿಯಾ ಓಪನ್ ಸೂಪರ್ ಸರಣಿ ಬ್ಯಾಡ್ಮಿಂಟನ್‌ ೨೦೧೭[ಬದಲಾಯಿಸಿ]

 • 23 Jun, 2017 ಶುಕ್ರವಾರ:
 • ಭಾರತದ ಪಿ.ವಿ ಸಿಂಧು, ಸೈನಾ ನೆಹ್ವಾಲ್‌, ಕಿದಂಬಿ ಶ್ರೀಕಾಂತ್‌ ಹಾಗೂ ಬಿ.ಸಾಯಿ ಪ್ರಣೀತ್‌ ಇಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ಓಪನ್ ಸೂಪರ್ ಸರಣಿ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಗುರುವಾರ ಕ್ವಾರ್ಟರ್‌ಫೈನಲ್‌ಗೆ ತಲುಪಿದ್ದಾರೆ.
 • ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಶ್ರೀಕಾಂತ್‌ 15–21, 21–13, 21–13ರಲ್ಲಿ ವಿಶ್ವ ರ್‍ಯಾಂಕಿಂಗ್‌ನಲ್ಲಿ ಮೊದಲ ಸ್ಥಾನದಲ್ಲಿರುವ ಕೊರಿಯಾದ ಆಟಗಾರ ಸನ್‌ ವಾನ್‌ ಹೊ ಅವರನ್ನು ಸೋಲಿದರು.
 • ಸಾಯಿ ಪ್ರಣೀತ್‌ 21–18, 18–21, 21–13ರಲ್ಲಿ ಚೀನಾದ ಹುವಾಂಗ್ ಯುಕ್ಸಿಯಾಂಗ್ ಎದುರು ಗೆದ್ದರು.
 • ಮಹಿಳೆಯರ ಸಿಂಗಲ್ಸ್‌ ವಿಭಾಗದಲ್ಲಿ ಸಿಂಧು 21–13, 21–18ರಲ್ಲಿ ನೇರ ಗೇಮ್‌ಗಳಿಂದ ಚೀನಾದ ಚೆನ್ ಕ್ಸಿಯೊಕ್ಸಿನ್ ಎದುರು ಗೆದ್ದರು.
 • ವಿಶ್ವ ರ್‍ಯಾಂಕಿಂಗ್‌ನಲ್ಲಿ 16ನೇ ಸ್ಥಾನದಲ್ಲಿರುವ ಸೈನಾ 21–15, 20–22, 21–14ರಲ್ಲಿ ಅಮೆರಿಕದ ಸೋನಿಯಾ ಚೆಯಾ ವಿರುದ್ಧ ಗೆದ್ದರು.

ಮುಂದಿನ ಪಂದ್ಯದಲ್ಲಿ ಅವರು ಆರನೇ ಶ್ರೇಯಾಂಕದ ಚೀನಾದ ಆಟಗಾರ್ತಿ ಸನ್ ಯುಗೆ ಸವಾಲು ಒಡ್ಡಲಿದ್ದಾರೆ.

 • ಮಹಿಳೆಯರ ಡಬಲ್ಸ್ ವಿಭಾಗದಲ್ಲಿ ಅಶ್ವಿನಿ ಪೊನ್ನಪ್ಪ ಮತ್ತು ಎನ್‌.ಸಿಕ್ಕಿ ರೆಡ್ಡಿ ಜೋಡಿ 21–18, 18–21, 13–21ರಲ್ಲಿ ಏಳನೇ ಶ್ರೇಯಾಂಕದ ಜಪಾನ್‌ನ ಶಿಹೊ ತನಕಾ ಮತ್ತು ಕೊಹರು ಯೊನೆಮೊಟೊ ಎದುರು ಸೋಲು ಅನುಭವಿಸಿತು.
 • ಪುರುಷರ ಡಬಲ್ಸ್ ವಿಭಾಗದಲ್ಲಿ ಸಾತ್ವಿಕ್‌ಸೈರಾಜ್‌ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಜೋಡಿ 16–21, 18–21ರಲ್ಲಿ ಎಂಟನೇ ಶ್ರೇಯಾಂಕದ ಚೀನಾ ತೈಪೆಯ ಚೆನ್‌ ಲಿಂಗ್‌ ಮತ್ತು ವಾಂಗ್‌ ಚಿಲಿನ್ ಎದುರು ಸೋಲು ಕಂಡಿತು.[೩೫]

ಆಸ್ಟ್ರೇಲಿಯಾ ಓಪನ್ ಸೂಪರ್ ಸರಣಿ ಬ್ಯಾಡ್ಮಿಂಟನ್‌ ೨೦೧೭[ಬದಲಾಯಿಸಿ]

 • 23 Jun, 2017 ಶುಕ್ರವಾರ:
 • ಭಾರತದ ಪಿ.ವಿ ಸಿಂಧು, ಸೈನಾ ನೆಹ್ವಾಲ್‌, ಕಿದಂಬಿ ಶ್ರೀಕಾಂತ್‌ ಹಾಗೂ ಬಿ.ಸಾಯಿ ಪ್ರಣೀತ್‌ ಇಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ಓಪನ್ ಸೂಪರ್ ಸರಣಿ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಗುರುವಾರ ಕ್ವಾರ್ಟರ್‌ಫೈನಲ್‌ಗೆ ತಲುಪಿದ್ದಾರೆ.
 • ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಶ್ರೀಕಾಂತ್‌ 15–21, 21–13, 21–13ರಲ್ಲಿ ವಿಶ್ವ ರ್‍ಯಾಂಕಿಂಗ್‌ನಲ್ಲಿ ಮೊದಲ ಸ್ಥಾನದಲ್ಲಿರುವ ಕೊರಿಯಾದ ಆಟಗಾರ ಸನ್‌ ವಾನ್‌ ಹೊ ಅವರನ್ನು ಸೋಲಿದರು.
 • ಸಾಯಿ ಪ್ರಣೀತ್‌ 21–18, 18–21, 21–13ರಲ್ಲಿ ಚೀನಾದ ಹುವಾಂಗ್ ಯುಕ್ಸಿಯಾಂಗ್ ಎದುರು ಗೆದ್ದರು.
 • ಮಹಿಳೆಯರ ಸಿಂಗಲ್ಸ್‌ ವಿಭಾಗದಲ್ಲಿ ಸಿಂಧು 21–13, 21–18ರಲ್ಲಿ ನೇರ ಗೇಮ್‌ಗಳಿಂದ ಚೀನಾದ ಚೆನ್ ಕ್ಸಿಯೊಕ್ಸಿನ್ ಎದುರು ಗೆದ್ದರು.
 • ವಿಶ್ವ ರ್‍ಯಾಂಕಿಂಗ್‌ನಲ್ಲಿ 16ನೇ ಸ್ಥಾನದಲ್ಲಿರುವ ಸೈನಾ 21–15, 20–22, 21–14ರಲ್ಲಿ ಅಮೆರಿಕದ ಸೋನಿಯಾ ಚೆಯಾ ವಿರುದ್ಧ ಗೆದ್ದರು. ಮುಂದಿನ ಪಂದ್ಯದಲ್ಲಿ ಅವರು ಆರನೇ ಶ್ರೇಯಾಂಕದ ಚೀನಾದ ಆಟಗಾರ್ತಿ ಸನ್ ಯುಗೆ ಸವಾಲು ಒಡ್ಡಲಿದ್ದಾರೆ.
 • ಮಹಿಳೆಯರ ಡಬಲ್ಸ್ ವಿಭಾಗದಲ್ಲಿ ಅಶ್ವಿನಿ ಪೊನ್ನಪ್ಪ ಮತ್ತು ಎನ್‌.ಸಿಕ್ಕಿ ರೆಡ್ಡಿ ಜೋಡಿ 21–18, 18–21, 13–21ರಲ್ಲಿ ಏಳನೇ ಶ್ರೇಯಾಂಕದ ಜಪಾನ್‌ನ ಶಿಹೊ ತನಕಾ ಮತ್ತು ಕೊಹರು ಯೊನೆಮೊಟೊ ಎದುರು ಸೋಲು ಅನುಭವಿಸಿತು.
 • ಪುರುಷರ ಡಬಲ್ಸ್ ವಿಭಾಗದಲ್ಲಿ ಸಾತ್ವಿಕ್‌ಸೈರಾಜ್‌ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಜೋಡಿ 16–21, 18–21ರಲ್ಲಿ ಎಂಟನೇ ಶ್ರೇಯಾಂಕದ ಚೀನಾ ತೈಪೆಯ ಚೆನ್‌ ಲಿಂಗ್‌ ಮತ್ತು ವಾಂಗ್‌ ಚಿಲಿನ್ ಎದುರು ಸೋಲು ಕಂಡಿತು.ಆಸ್ಟ್ರೇಲಿಯಾ ಓಪನ್ ಸೂಪರ್ ಸರಣಿ ಬ್ಯಾಡ್ಮಿಂಟನ್‌ ಕ್ವಾರ್ಟರ್‌ಗೆ ಸೈನಾ, ಸಿಂಧು ಲಗ್ಗೆ;ಪಿಟಿಐ;23 Jun, 2017

ಸಿಂಧು ಟೂರ್ನಿಯಿಂದ ಹೊರಕ್ಕೆ[ಬದಲಾಯಿಸಿ]

 • ಸಿಡ್ನಿ: ಭಾರತದ ಪಿ.ವಿ ಸಿಂಧು ಇಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ಓಪನ್ ಸೂಪರ್ ಸರಣಿ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಸೋಲು ಅನುಭವಿಸಿದ್ದು, ಟೂರ್ನಿಯಿಂದ ಹೊರ ಬಂದಿದ್ದಾರೆ. 23 Jun, 2017 ಶುಕ್ರವಾರ ನಡೆದ ಮಹಿಳೆಯರ ಸಿಂಗಲ್ಸ್‌ ವಿಭಾಗದ ಕ್ವಾರ್ಟರ್‌ಫೈನಲ್‌ನಲ್ಲಿ ಭಾರತದ ಆಟಗಾರ್ತಿ ವಿಶ್ವ ರ‍್ಯಾಂಕಿಂಗ್‌ನಲ್ಲಿ ಅಗ್ರಸ್ಥಾನದಲ್ಲಿರುವ ಚೀನಾ ತೈಪೆಯ ತೈ ಜು ಯಿಂಗ್ ವಿರುದ್ಧ 21–10, 20–22, 16–21ರಲ್ಲಿ ಪರಾಜಿತರಾದರು.[೩೬]

ಶ್ರೀಕಾಂತ್‌ ಫೈನಲ್‌ಗೆ ಮತ್ತು ಛಾಂಪಿಯನ್[ಬದಲಾಯಿಸಿ]

 • ಆಸ್ಟ್ರೇಲಿಯಾ ಓಪನ್ ಸೂಪರ್ ಸರಣಿ ಬ್ಯಾಡ್ಮಿಂಟನ್‌ ೨೦೧೭;
 • ದಿ.25 Jun, 2017;ಭಾರತದ ಕೆ.ಶ್ರೀಕಾಂತ್‌ ಅವರು ಆಸ್ಟ್ರೇಲಿಯಾ ಓಪನ್‌ ಸೂಪರ್‌ ಸರಣಿ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಫೈನಲ್‌ಗೆ ತಲುಪಿದ್ದಾರೆ. ಶನಿವಾರ ನಡೆದ ಪುರುಷರ ಸಿಂಗಲ್ಸ್‌ ವಿಭಾಗದ ಸೆಮಿಫೈನಲ್‌ ಹಣಾಹಣಿಯಲ್ಲಿ ಶ್ರೀಕಾಂತ್‌ 21–10, 21–14ರ ಗೇಮ್‌ಗಳಿಂದ ಚೀನಾದ ಶಿ ಯೂಕಿ ಅವರನ್ನು ಪರಾಭವಗೊಳಿಸಿದರು.[೩೭]
 • 25 Jun, 2017;ಭಾನುವಾರ ನಡೆದ ಪುರುಷರ ಸಿಂಗಲ್ಸ್‌ನ ಫೈನಲ್‌ ಪಂದ್ಯದಲ್ಲಿ ಶ್ರೀಕಾಂತ್ ಅವರು ಚೀನಾದ ಚೆನ್‌ ಲಾಂಗ್ ಅವರನ್ನು ಮಣಿಸುವ ಮೂಲಕ ಆಸ್ಟ್ರೇಲಿಯಾ ಓಪನ್‌ ಸೂಪರ್‌ ಸರಣಿ ಬ್ಯಾಡ್ಮಿಂಟನ್‌ ವಿಜಯ ಪಡೆದರು. ಪ್ರಬಲ ಪೈಪೋಟಿ ನೀಡಿದ ಚೆನ್‌ ಲಾಂಗ್ ಅವರನ್ನು 22-20 ಮತ್ತು 21-16 ನೇರಸಟ್‌ನಲ್ಲಿ ಸೋಲಿಸಿ ಐತಿಹಾಸಿಕ ಸಾಧನೆ ಮಾಡಿದರು.
 • 5 ಲಕ್ಷ ಬಹುಮಾನ: ಆಸ್ಟ್ರೇಲಿಯಾ ಓಪನ್‌ ಸೂಪರ್‌ ಸರಣಿ  ಗೆದ್ದ ಶ್ರೀಕಾಂತ್ ಅವರಿಗೆ ಬ್ಯಾಡ್ಮಿಂಟನ್ ಅಸೋಷಿಯೇಷನ್ ಆಫ್ ಇಂಡಿಯಾ ಸಂಸ್ಥೆ 5 ಲಕ್ಷ ನಗದು ಬಹುಮಾನ ಘೋಷಣೆ ಮಾಡಿದೆ.[೩೮]

ಗ್ಲಾಸ್ಗೊದ ಮಹಿಳೆಯರ ವಿಶ್ವ ಬ್ಯಾಡ್ಮಿಂಟನ್ ಟೂರ್ನಿ ೨೦೧೭[ಬದಲಾಯಿಸಿ]

 • ವಿಶ್ವ ಬ್ಯಾಡ್ಮಿಂಟನ್ ಟೂರ್ನಿಯ ಮಹಿಳೆಯರ ಸಿಂಗಲ್ಸ್‌ ಫೈನಲ್ನಲ್ಲಿ, ಪಿ.ವಿ. ಸಿಂಧು X ಜಪಾನ್ ದೇಶದ ನಕುಹರಾ ಅವರ ವಿರುದ್ಧ 19-21 22-20 20-22ಕ್ಕೆ ಸ ಚಿನ್ನದ ಪದಕ ಒಲಿಯಲಿಲ್ಲ. ಆದರೆ *ಜಪಾನ್ ಹುಡುಗಿ ನೊಜೊಮಿ ಒಕುಹರಾ =ಚಿನ್ನ;ಭಾರತದ -ಪಿ.ವಿ. ಸಿಂಧು ಗೆ ಬೆಳ್ಳಿ
 • ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಎರಡು ಬಾರಿ ಕಂಚು ಗೆದ್ದಿದ್ದ ಸಿಂಧು;; ೨೦೧೭ರ ಈ ವರ್ಷದ ಟೂರ್ನಿಯಲ್ಲಿ ಎರಡು ಪದಕ ಗೆದ್ದ ಭಾರತದ ಆಟಗಾರ್ತಿ; ವಿಶ್ವ ಟೂರ್ನಿಯಲ್ಲಿ ಬೆಳ್ಳಿಪದಕ ಜಯಿಸಿದ ಭಾರತದ ಎರಡನೇ ಆಟಗಾರ್ತಿ ಸಿಂಧು.[೩೯]

ಭಾರತದ ಆಟಗಾರರ ರ್ಯಾಂಕಿಂಗ್ ಆಗಸ್ಟ್ ೨೦೧೭[ಬದಲಾಯಿಸಿ]

 • ಮಹಿಳೆಯರ ಸಿಂಗಲ್ಸ್:ಐದನೇ ಸ್ಥಾನದಲ್ಲಿ ಇದ್ದ ಸಿಂಧು ಒಂದು ಸ್ಥಾನದಲ್ಲಿ ಏರಿಕೆ;೩೧-೮-೨೦೧೭ ಗುರುವಾರ ಬಿಡಬ್ಲ್ಯುಎಫ್‌ ವಿಶ್ವ ರ್ಯಾಂಕಿಂಗ್‌ನಲ್ಲಿ ನಾಲ್ಕನೇ ಸ್ಥಾನಕ್ಕೆ ಬಡ್ತಿ ಗಳಿಸಿದ್ದಾರೆ.
 • ಪುರುಷರ ಸಿಂಗಲ್ಸ್‌: ಕಿದಂಬಿ ಶ್ರೀಕಾಂತ್ ಎರಡು ಸ್ಥಾನ ಕಳೆದುಕೊಂಡು ೮ ರಿಂದ ಶ್ರೀಕಾಂತ್‌ 10ನೇ ಸ್ಥಾನದಲ್ಲಿ ಇದ್ದಾರೆ.
 • ಮಹಿಳೆಯರ ಡಬಲ್ಸ್ ವಿಭಾಗದ ಜೋಡಿ ಅಶ್ವಿನಿ ಪೊನ್ನಪ್ಪ ಮತ್ತು ಎನ್‌.ಸಿಕ್ಕಿ ರೆಡ್ಡಿ ಜೋಡಿ ೨೫ ರಿಂದ ಒಂದು ಸ್ಥಾನಕ್ಕೆ ಮೇಲೇರಿ 24ನೇ ಸ್ಥಾನದಲ್ಲಿದೆ.
 • ಪ್ರಣವ್ ಜೆರಿ ಚೋಪ್ರಾ ಮತ್ತು ಎನ್‌. ಸಿಕ್ಕಿ ರೆಡ್ಡಿ ಜೋಡಿ 20ನೇ ಸ್ಥಾನದಲ್ಲಿ ಮುಂದುವರಿದಿದೆ.
 • ಸೈನಾ ನೆಹ್ವಾಲ್‌ 16ನೇ ಸ್ಥಾನಕ್ಕೆ ಕುಸಿದಿದ್ದಾರೆ,
 • ಬಿ ಸಾಯಿಪ್ರಣೀತ್‌ 19 ನೇ ಸ್ಥಾನ;
 • ಎಚ್‌.ಎಸ್‌. ಪ್ರಣಯ್‌ 15ನೇ ಸ್ಥಾನ;
 • ಅಜಯ್‌ ಜಯರಾಮ್‌ 17ನೇ ಸ್ಥಾನದಲ್ಲಿ ಮುಂದುವರಿದಿದ್ದಾರೆ.[೪೦]

ನೋಡಿ[ಬದಲಾಯಿಸಿ]

ಉಲ್ಲೇಖ[ಬದಲಾಯಿಸಿ]

 1. Badminton emerges as second-most played sport in India
 2. BWF World Rankings
 3. ಸಿಂಧು ಹೋರಾಟಕ್ಕೆ ಬೆಳ್ಳಿಯ ಬೆಡಗು;ಪ್ರಜಾವಾಣಿ ;20 Aug, 2016
 4. BWF WORLD RANKINGS
 5. BWF WORLD RANKINGS
 6. ಭಾರತಕ್ಕೆ ಪ್ರಶಸ್ತಿ ಡಬಲ್
 7. ಪ್ರಿ ಕ್ವಾರ್ಟರ್‌ಗೆ ಸೌರಭ್‌ ವರ್ಮಾ
 8. ಸೌರಭ್‌ ವರ್ಮಾಗೆ ಪ್ರಶಸ್ತಿ; 17 Oct, 2016
 9. ಕ್ವಾರ್ಟರ್‌ಫೈನಲ್‌ಗೆ ಅಜಯ್‌
 10. ಡೆನ್ಮಾರ್ಕ್‌ ಓಪನ್‌ ಬ್ಯಾಡ್ಮಿಂಟನ್‌: ಸಿಂಧುಗೆ ನಿರಾಸೆ
 11. ಬ್ಯಾಡ್ಮಿಂಟನ್; ಜೋಶಿಗೆ ಬಹರೇನ್ ಚಾಲೆಂಜ್ ಪ್ರಶಸ್ತಿ
 12. ಕ್ವಾರ್ಟರ್‌ ಫೈನಲ್‌ಗೆ ಸಿಂಧು
 13. ಸೆಮಿಗೆ ಲಗ್ಗೆ ಇಟ್ಟ ಸಿಂಧು;19 Nov, 2016
 14. 19 Nov, 2016
 15. PV Sindhu wins maiden China Open Super Series title;Nov 20, 2016
 16. ಮೊದಲ ಆಟದಲ್ಲಿ ಜಯ
 17. ಸೆಮಿಫೈನಲ್‌ಗೆ ಸಿಂಧು ಲಗ್ಗೆ
 18. ಪಿವಿ ಸಿಂಧುಗೆ ಬೆಳ್ಳಿ
 19. 16ರ ಘಟ್ಟಕ್ಕೆ ಸೈನಾ ನೆಹ್ವಾಲ್,ಕಶ್ಯಪ್
 20. ಎಂಟರ ಘಟ್ಟಕ್ಕೆ ಲಗ್ಗೆಯಿಟ್ಟ ಸೈನಾ ; 2 Dec, 2016
 21. ಸೈನಾ, ಪ್ರಣೀತ್ ಸವಾಲು ಅಂತ್ಯ;3 Dec, 2016
 22. ಬ್ಯಾಡ್ಮಿಂಟನ್: ಸೆಮಿಫೈನಲ್‌ಗೆ ಕಶ್ಯಪ್‌;ಪಿಟಿಐ;10 Dec, 2016
 23. ಅಂತ್ಯಕಂಡ ಸಿಂಧು ಹೋರಾಟ
 24. ಮೊದಲ ಪ್ರಶಸ್ತಿಗೆ ಒಂದೇ ಹೆಜ್ಜೆ;22 Jan, 2017
 25. ಸೈನಾ ಮುಡಿಗೆ ಸಿಂಗಲ್ಸ್‌ ಕಿರೀಟ;ಪಿಟಿಐ;23 Jan, 2017
 26. ಪ್ರಶಸ್ತಿ ಮೇಲೆ ಸಿಂಧು ಕಣ್ಣು;ಪ್ರಜಾವಾಣಿ ವಾರ್ತೆ;24 Jan, 2017
 27. ಸಿಂಧು, ಸಮೀರ್‌ ಮುಡಿಗೆ ಪ್ರಶಸ್ತಿ;ಪಿಟಿಐ;30 Jan, 2017
 28. ಸಿಂಧುಗೆ ಸಿಹಿ, ಸೈನಾಗೆ ಕಹಿ;ಪಿಟಿಐ;1 Apr, 2017
 29. ಇಂಡಿಯಾ ಓಪನ್‌ ಬ್ಯಾಡ್ಮಿಂಟನ್: ಫೈನಲ್‌ಗೆ ಸಿಂಧು;ಪಿಟಿಐ;1 Apr, 2017
 30. ಸಿಂಧು ಮುಡಿಗೆ ‘ಇಂಡಿಯಾ ಓಪನ್ ಬ್ಯಾಡ್ಮಿಂಟನ್’ ಪ್ರಶಸ್ತಿ;2 Apr, 2017
 31. ಬಿಡಬ್ಲ್ಯುಎಫ್ ರ್ಯಾಂಕಿಂಗ್‌;ಮೊದಲ ಐದು ಸ್ಥಾನ;7 Apr, 2017;
 32. ಬ್ಯಾಡ್ಮಿಂಟನ್: ಕ್ವಾರ್ಟರ್‌ ಫೈನಲ್‌ಗೆ ಸಿಂಧು;14 Apr, 2017
 33. ಸಾಯಿಪ್ರಣೀತ್ ಚಾರಿತ್ರಿಕ ಗೆಲುವು;ಪಿಟಿಐ;17 Apr, 2017
 34. ಡಬಲ್ಸ್ ಪ್ರತಿಭೆ ಜಗದೀಶ್ಮಾ;ಮಾನಸ ಬಿ.ಆರ್.;10 Apr, 2017
 35. ಆಸ್ಟ್ರೇಲಿಯಾ ಓಪನ್ ಸೂಪರ್ ಸರಣಿ ಬ್ಯಾಡ್ಮಿಂಟನ್‌ ಕ್ವಾರ್ಟರ್‌ಗೆ ಸೈನಾ, ಸಿಂಧು ಲಗ್ಗೆ;ಪಿಟಿಐ;23 Jun, 2017
 36. ಆಸ್ಟ್ರೇಲಿಯಾ ಓಪನ್ ಸೂಪರ್ ಸರಣಿ ಬ್ಯಾಡ್ಮಿಂಟನ್: ಸಿಂಧುಗೆ ಸೋಲು;ಪಿಟಿಐ;23 Jun, 2017
 37. http://www.prajavani.net/news/article/2017/06/25/501386.html
 38. ಆಸ್ಟ್ರೇಲಿಯಾ ಓಪನ್‌ ಸೂಪರ್‌ ಸರಣಿ ಬ್ಯಾಡ್ಮಿಂಟನ್‌ ಟೂರ್ನಿ: ಕೆ.ಶ್ರೀಕಾಂತ್ ಚಾಂಪಿಯನ್‌;ಪಿಟಿಐ;25 Jun, 2017
 39. http://www.prajavani.net/news/article/2017/08/28/516216.html
 40. http://www.prajavani.net/news/article/2017/08/25/515874.html